|
|
1. {ಬಿಳಾಮನ ಮೂರನೆಯ ಸಂದೇಶ} PS ಇಸ್ರೇಲರನ್ನು ಆಶೀರ್ವದಿಸುವುದೇ ಯೆಹೋವನ ಆಸೆಯೆಂದು ಬಿಳಾಮನು ತಿಳಿದುಕೊಂಡನು. ಆದ್ದರಿಂದ ಬಿಳಾಮನು ಮೊದಲಿನಂತೆ ಶಕುನ ನೋಡುವುದಕ್ಕೆ ಹೋಗದೆ ಮರುಭೂಮಿಯ ಕಡೆಗೆ ಮುಖವನ್ನು ತಿರುಗಿಸಿಕೊಂಡನು.
|
1. And when Balaam H1109 saw H7200 that H3588 it pleased H2895 H5869 the LORD H3068 to bless H1288 H853 Israel H3478 , he went H1980 not H3808 , as at other times H6471 H6471 , to seek H7125 for enchantments H5173 , but he set H7896 his face H6440 toward H413 the wilderness H4057 .
|
2. ಬಿಳಾಮನು ಕಣ್ಣೆತ್ತಿ ನೋಡಿದಾಗ ಇಸ್ರೇಲರೆಲ್ಲರನ್ನು ಕಂಡನು. ಅವರು ತಮ್ಮ ಕುಲಗಳ ಪ್ರಕಾರ ಡೇರೆಗಳನ್ನು ಹಾಕಿಕೊಂಡಿದ್ದರು.
|
2. And Balaam H1109 lifted up H5375 H853 his eyes H5869 , and he saw H7200 H853 Israel H3478 abiding H7931 in his tents according to their tribes H7626 ; and the spirit H7307 of God H430 came H1961 upon H5921 him.
|
3. ಆಗ ಅವನು ದೇವರಾತ್ಮ ಪ್ರೇರಿತನಾಗಿ ಹೀಗೆಂದನು: “ಬೆಯೋರನ ಮಗನಾದ ಬಿಳಾಮನ ಸಂದೇಶವಿದು. ನನ್ನ ಕಣ್ಣುಗಳು ತೆರೆಯಲ್ಪಟ್ಟಿವೆ. ನಾನು ನೋಡುವುದನ್ನೇ ಹೇಳುತ್ತೇನೆ.
|
3. And he took up H5375 his parable H4912 , and said H559 , Balaam H1109 the son H1121 of Beor H1160 hath said H5002 , and the man H1397 whose eyes H5869 are open H8365 hath said H5002 :
|
4. ನಾನು ಈ ಸಂದೇಶವನ್ನು ದೇವರಿಂದ ಕೇಳಿದೆನು. ಸರ್ವಶಕ್ತನಾದ ದೇವರು ತೋರಿಸಿದವುಗಳನ್ನು ನೋಡಿದೆನು. ನಾನು ಸ್ಪಷ್ಟವಾಗಿ ನೋಡುವುದನ್ನು ದೀನತೆಯಿಂದ ತಿಳಿಸುತ್ತೇನೆ.
|
4. He hath said H5002 , which heard H8085 the words H561 of God H410 , which H834 saw H2372 the vision H4236 of the Almighty H7706 , falling H5307 into a trance , but having his eyes H5869 open H1540 :
|
5. “ಯಾಕೋಬ್ಯರೇ, ನಿಮ್ಮ ಡೇರೆಗಳು ಬಹಳ ಸುಂದರವಾಗಿವೆ! ಇಸ್ರೇಲರೇ, ನೀವು ವಾಸಿಸುವ ಸ್ಥಳಗಳು ಬಹಳ ರಮ್ಯವಾಗಿವೆ!
|
5. How H4100 goodly H2895 are thy tents H168 , O Jacob H3290 , and thy tabernacles H4908 , O Israel H3478 !
|
6. ನಿಮ್ಮ ಗುಡಾರಗಳು ಕಣಿವೆಗಳಂತೆ ಹರಡಿಕೊಂಡಿವೆ. ನಿಮ್ಮ ಗುಡಾರಗಳು ನದಿಯ ಬಳಿಯಿರುವ ತೋಟಗಳಂತಿವೆ. ನಿಮ್ಮ ಗುಡಾರಗಳು ಯೆಹೋವನು ನೆಟ್ಟ ಸುವಾಸನೆಯ ಪೊದೆಗಳಂತೆಯೂ ನೀರಿನ ಬಳಿಯಿರುವ ದೇವದಾರಿನ ಮರಗಳಂತೆಯೂ ಇವೆ.
|
6. As the valleys H5158 are they spread forth H5186 , as gardens H1593 by H5921 the river H5104 's side , as the trees of lign aloes H174 which the LORD H3068 hath planted H5193 , and as cedar trees H730 beside H5921 the waters H4325 .
|
7. ನಿಮಗೆ ಯಾವಾಗಲೂ ಬೇಕಾದಷ್ಟು ನೀರು ಇರುವುದು; ನೀವು ಬಿತ್ತಿದ ಬೀಜಗಳು ಬೆಳೆಯಲು ಸಾಕಷ್ಟು ನೀರು ಇರುವುದು. ನಿಮ್ಮ ಅರಸನು ಆಗಾಗ್ ಎಂಬವನಿಗಿಂತಲೂ ದೊಡ್ಡವನಾಗಿದ್ದಾನೆ. ನಿಮ್ಮ ರಾಜ್ಯವು ಬಹಳ ಬಲಿಷ್ಠವಾಗಿರುವುದು.
|
7. He shall pour H5140 the water H4325 out of his buckets H4480 H1805 , and his seed H2233 shall be in many H7227 waters H4325 , and his king H4428 shall be higher H7311 than Agag H4480 H90 , and his kingdom H4438 shall be exalted H5375 .
|
8. “ದೇವರು ಆ ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. ಅವರು ಕಾಡುಕೋಣದಂತೆ ಬಲಿಷ್ಠರಾಗಿದ್ದಾರೆ. ಅವರು ತಮ್ಮೆಲ್ಲಾ ಶತ್ರುಗಳನ್ನು ಸೋಲಿಸುವರು. ಅವರು ತಮ್ಮ ವೈರಿಗಳ ಮೂಳೆಗಳನ್ನು ಮುರಿದುಹಾಕುವರು. ಅವರ ಬಾಣಗಳು ಅವರ ವೈರಿಗಳನ್ನು ಕೊಲ್ಲುವವು.
|
8. God H410 brought him forth H3318 out of Egypt H4480 H4714 ; he hath as it were the strength H8443 of a unicorn H7214 : he shall eat up H398 the nations H1471 his enemies H6862 , and shall break H1633 their bones H6106 , and pierce them through H4272 with his arrows H2671 .
|
9. ಅವರು ಅಡಗಿಕೊಂಡಿರುವರು; ಇಸ್ರೇಲರು ಸಿಂಹದಂತೆಯೂ ಹೆಣ್ಣು ಸಿಂಹದಂತೆಯೂ ವಿಶ್ರಮಿಸುವರು. ಅದನ್ನು ಎಬ್ಬಿಸಲು ಯಾರಿಗೆ ಧೈರ್ಯವಿದೆ? ನಿಮ್ಮನ್ನು ಆಶೀರ್ವದಿಸುವವನು ಆಶೀರ್ವದಿಸಲ್ಪಡುವನು. ನಿಮ್ಮನ್ನು ಶಪಿಸುವವನು ಶಪಿಸಲ್ಪಡುವನು.” PS
|
9. He couched H3766 , he lay down H7901 as a lion H738 , and as a great lion H3833 : who H4310 shall stir him up H6965 ? Blessed H1288 is he that blesseth H1288 thee , and cursed H779 is he that curseth H779 thee.
|
10. ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು, ಚಪ್ಪಾಳೆ ಹೊಡೆದು, “ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆಸಿದೆನು. ಆದರೆ ನೀನು ಅವರನ್ನು ಮೂರು ಸಾರಿಯೂ ಆಶೀರ್ವದಿಸಿದೆ.
|
10. And Balak H1111 's anger H639 was kindled H2734 against H413 Balaam H1109 , and he smote his hands together H5606 H853 H3709 : and Balak H1111 said H559 unto H413 Balaam H1109 , I called H7121 thee to curse H6895 mine enemies H341 , and, behold H2009 , thou hast altogether blessed H1288 H1288 them these H2088 three H7969 times H6471 .
|
11. ಆದ್ದರಿಂದ ನೀನೀಗ ನೇರವಾಗಿ ಮನೆಗೆ ಹೋಗಿಬಿಡು. ನಿನಗೆ ಹೆಚ್ಚು ಹಣ ಕೊಡುವುದಾಗಿ ಆಲೋಚಿಸಿದ್ದೆನು. ಆದರೆ ನೀನು ನಿನ್ನ ಬಹುಮಾನವನ್ನು ಕಳೆದುಕೊಳ್ಳುವಂತೆ ಯೆಹೋವನು ಮಾಡಿದನು” ಎಂದು ಹೇಳಿದನು. PEPS
|
11. Therefore now H6258 flee H1272 thou to H413 thy place H4725 : I thought H559 to promote thee unto great honor H3513 H3513 ; but, lo H2009 , the LORD H3068 hath kept thee back H4513 from honor H4480 H3519 .
|
12. (12-13) ಅದಕ್ಕೆ ಬಿಳಾಮನು ಬಾಲಾಕನಿಗೆ, “ಬಾಲಾಕನು, ಬೆಳ್ಳಿಬಂಗಾರಗಳಿಂದ ತುಂಬಿದ ತನ್ನ ಅರಮನೆಯನ್ನು ಕೊಟ್ಟರೂ ನಾನು ಯೆಹೋವನ ಆಜ್ಞೆಯನ್ನು ಮೀರಿ ನನಗೆ ಇಷ್ಟಬಂದಂತೆ ಕೆಟ್ಟದ್ದನ್ನಾಗಲಿ ಒಳ್ಳೆಯದನ್ನಾಗಲಿ ನಾನು ಮಾಡಲಾರೆನು; ಆದರೆ ಯೆಹೋವನು ಆಜ್ಞಾಪಿಸುವುದನ್ನೇ ಮಾತಾಡುವೆನೆಂದು ನೀನು ನನ್ನ ಬಳಿಗೆ ಕಳುಹಿಸಿದ ದೂತರಿಗೆ ಹೇಳಲಿಲ್ಲವೇ?
|
12. And Balaam H1109 said H559 unto H413 Balak H1111 , Spoke H1696 I not H3808 also H1571 to H413 thy messengers H4397 which H834 thou sentest H7971 unto H413 me, saying H559 ,
|
13.
|
|
14. ಆಗಲಿ, ನಾನು ನನ್ನ ಸ್ವಜನರ ಬಳಿಗೆ ಹೋಗುತ್ತೇನೆ. ಆದರೆ ಮುಂದೆ ಆ ಜನರು ನಿನ್ನ ಜನರಿಗೆ ಏನು ಮಾಡುವರೋ ಅದನ್ನು ನಿನಗೆ ತಿಳಿಸುತ್ತೇನೆ, ಕೇಳು” ಎಂದು ಹೇಳಿದನು. PS
|
14. And now H6258 , behold H2009 , I go H1980 unto my people H5971 : come H1980 therefore, and I will advertise H3289 thee what H834 this H2088 people H5971 shall do H6213 to thy people H5971 in the latter H319 days H3117 .
|
15. {ಬಿಳಾಮನ ಕೊನೆಯ ಸಂದೇಶ} PS ಆಗ ಬಿಳಾಮನು ಹೀಗೆಂದನು: “ಬೆಯೋರನ ಮಗನಾದ ಬಿಳಾಮನ ಸಂದೇಶವಿದು: ನಾನು ಸ್ಪಷ್ಟವಾಗಿ ನೋಡುತ್ತಿರುವ ಸಂಗತಿಗಳ ಬಗ್ಗೆ ಮಾತಾಡುತ್ತಿದ್ದೇನೆ.
|
15. And he took up H5375 his parable H4912 , and said H559 , Balaam H1109 the son H1121 of Beor H1160 hath said H5002 , and the man H1397 whose eyes H5869 are open H8365 hath said H5002 :
|
16. ನಾನು ದೇವರ ಮುಂದೆ ಅಡ್ಡಬೀಳುತ್ತೇನೆ, ಆದರೆ ನನ್ನ ಕಣ್ಣುಗಳು ಮುಚ್ಚಲ್ಪಟ್ಟಿಲ್ಲ. ನಾನು ದೇವರ ವಾಕ್ಯಗಳನ್ನು ಕೇಳುತ್ತಿದ್ದೇನೆ. ನಾನು ಮಹೋನ್ನತನಾದ ದೇವರಿಂದ ಜ್ಞಾನವನ್ನು ಹೊಂದಿಕೊಳ್ಳುತ್ತಿದ್ದೇನೆ. ಸರ್ವಶಕ್ತನಾದ ದೇವರು ತೋರಿಸುವ ಸಂಗತಿಗಳನ್ನು ನಾನು ನೋಡುತ್ತಿದ್ದೇನೆ.
|
16. He hath said H5002 , which heard H8085 the words H561 of God H410 , and knew H3045 the knowledge H1847 of the most High H5945 , which saw H2372 the vision H4236 of the Almighty H7706 , falling H5307 into a trance , but having his eyes H5869 open H1540 :
|
17. “ಬರುತ್ತಿರುವ ಒಬ್ಬನನ್ನು ನೋಡುತ್ತಿದ್ದೇನೆ. ಆದರೆ ಈಗಲ್ಲ. ಬರುತ್ತಿರುವ ಒಬ್ಬನನ್ನು ನೋಡುತ್ತಿದ್ದೇನೆ, ಆದರೆ ಬೇಗನೆ ಅಲ್ಲ. ಯಾಕೋಬನ ವಂಶದಿಂದ ನಕ್ಷತ್ರವೊಂದು ಬರುವುದು. ಇಸ್ರೇಲರಿಂದ ಅರಸನೊಬ್ಬನು ಬರುವನು. ಅವನು ಮೋವಾಬ್ಯರ ತಲೆಯನ್ನು ಜಜ್ಜುವನು. ಆ ಅರಸನು ಶೇತನ ಪುತ್ರರೆಲ್ಲರ ತಲೆಗಳನ್ನು ಜಜ್ಜುವನು.
|
17. I shall see H7200 him , but not H3808 now H6258 : I shall behold H7789 him , but not H3808 nigh H7138 : there shall come H1869 a Star H3556 out of Jacob H4480 H3290 , and a Scepter H7626 shall rise H6965 out of Israel H4480 H3478 , and shall smite H4272 the corners H6285 of Moab H4124 , and destroy H4272 all H3605 the children H1121 of Sheth H8352 .
|
18. ಇಸ್ರೇಲರು ಬಲಿಷ್ಠರಾಗುವರು. ಅವರು ಎದೋಮ್ ದೇಶವನ್ನು ಪಡೆಯುವರು. ಅವರು ತಮ್ಮ ವೈರಿಯಾದ ಸೇಯೀರನ ದೇಶವನ್ನು ಪಡೆಯುವರು.
|
18. And Edom H123 shall be H1961 a possession H3424 , Seir H8165 also shall be H1961 a possession H3424 for his enemies H341 ; and Israel H3478 shall do H6213 valiantly H2428 .
|
19. “ಯಾಕೋಬನ ವಂಶದಿಂದ ಹೊಸ ಅರಸನೊಬ್ಬನು ಬರುವನು. ಆ ಅರಸನು ಆ ಪಟ್ಟಣದಲ್ಲಿ ಉಳಿದವರನ್ನು ನಾಶಮಾಡುವನು.” PS
|
19. Out of Jacob H4480 H3290 shall come he that shall have dominion H7287 , and shall destroy H6 him that remaineth H8300 of the city H4480 H5892 .
|
20. “ತರುವಾಯ ಬಿಳಾಮನು ಅಮಾಲೇಕ್ಯರನ್ನು ನೋಡಿ ಹೀಗೆಂದನು: “ಅಮಾಲೇಕ್ಯರು ಎಲ್ಲಾ ಜನಾಂಗಗಳಲ್ಲಿ ಬಲಿಷ್ಠರು; ಅಮಾಲೇಕ್ಯರು ಎಲ್ಲಾ ಜನಾಂಗಗಳಲ್ಲಿ ಮೊದಲನೆಯವರು; ಆದರೆ ಕೊನೆಯಲ್ಲಿ ಅವರು ನಾಶವಾಗುವರು.” PS
|
20. And when he looked on H7200 H853 Amalek H6002 , he took up H5375 his parable H4912 , and said H559 , Amalek H6002 was the first H7225 of the nations H1471 ; but his latter end H319 shall be that he perish H8 forever H5703 .
|
21. ಆಗ ಬಿಳಾಮನು ಕೇನ್ಯರನ್ನು ನೋಡಿ ಹೀಗೆಂದನು: “ನಿಮ್ಮ ಮನೆಯು ಬೆಟ್ಟದ ತುದಿಯಲ್ಲಿರುವ ಪಕ್ಷಿಯ ಗೂಡಿನಂತೆ *ಗೂಡು ಹೀಬ್ರೂ ಭಾಷೆಯಲ್ಲಿ ಈ ಪದವು “ಕೇನ್ಯರು” ಎಂಬ ಉಚ್ಛಾರಣೆಯನ್ನು ಹೊಂದಿದೆ. ಸುರಕ್ಷಿತವಾಗಿದೆಯೆಂದು ನೀವು ನಂಬುತ್ತೀರಿ.
|
21. And he looked on H7200 H853 the Kenites H7017 , and took up H5375 his parable H4912 , and said H559 , Strong H386 is thy dwelling place H4186 , and thou puttest H7760 thy nest H7064 in a rock H5553 .
|
22. ಆದರೆ ಕೇನ್ಯರೇ, ಅಶ್ಶೂರ್ಯವು ನಿಮ್ಮನ್ನು ಸೆರೆ ಒಯ್ಯುವಾಗ ಅದು ನಾಶವಾಗುವುದು.” PS
|
22. Nevertheless H3588 H518 the Kenite H7014 shall be H1961 wasted H1197 , until H5704 H4100 Asshur H804 shall carry thee away captive H7617 .
|
23. ಆಗ ಬಿಳಾಮನು ಹೀಗೆಂದನು: “ದೇವರು ಇದನ್ನು ಮಾಡುವಾಗ ಯಾರೂ ಉಳಿಯರು.
|
23. And he took up H5375 his parable H4912 , and said H559 , Alas H188 , who H4310 shall live H2421 when God H410 doeth H4480 H7760 this!
|
24. ಸೈಪ್ರಸ್‌ನ ತೀರಗಳಿಂದ ಹಡಗುಗಳು ಬರುವವು. ಅವರು ಅಶ್ಶೂರ್ಯವನ್ನೂ ಏಬೆರವನ್ನೂ ಸೋಲಿಸುವರು; ಆದರೆ ಅವರು ಸಹ ನಾಶವಾಗುವರು.” PS
|
24. And ships H6716 shall come from the coast H4480 H3027 of Chittim H3794 , and shall afflict H6031 Asshur H804 , and shall afflict H6031 Eber H5677 , and he H1931 also H1571 shall perish H8 forever H5703 .
|
25. ಆಗ ಬಿಳಾಮನು ಎದ್ದು ತನ್ನ ಸ್ಥಳಕ್ಕೆ ಹಿಂತಿರುಗಿ ಹೋದನು. ಬಾಲಾಕನೂ ಸಹ ಹೊರಟುಹೋದನು. PE
|
25. And Balaam H1109 rose up H6965 , and went H1980 and returned H7725 to his place H4725 : and Balak H1111 also H1571 went H1980 his way H1870 .
|