1. ಭೂಮಿಯ ಮೇಲೆ ಮನುಷ್ಯನಿಗೆ ನೇಮಿಸಲ್ಪಟ್ಟ ಕಾಲ ಉಂಟಲ್ಲವೋ? ಅವನ ದಿವಸಗಳು ಕೂಲಿಯವನ ದಿವಸಗಳ ಹಾಗಲ್ಲವೋ?
2. ಸೇವಕನು ನೆರಳನ್ನು ಅಪೇಕ್ಷಿಸುವ ಪ್ರಕಾರವೂ ಕೂಲಿಯವನು ತನ್ನ ಕೂಲಿಯನ್ನು ಕೋರುವ ಪ್ರಕಾ ರವೂ
3. ನಾನು ಸಹ ವ್ಯರ್ಥವಾದ ತಿಂಗಳುಗಳನ್ನು ಬಾಧ್ಯವಾಗಿ ತಕ್ಕೊಳ್ಳಬೇಕಾಯಿತು; ಬೇಸರಿಕೆಯ ರಾತ್ರಿ ಗಳು ನನಗೆ ನೇಮಿಸಲ್ಪಟ್ಟವು.
4. ಮಲಗುವ ವೇಳೆಯಲ್ಲಿ ಯಾವಾಗ ಏಳುವೆನೆಂದೂ ರಾತ್ರಿ ಬೆಳೆಯುತ್ತಾ ಹೋಗು ತ್ತದೆಂದೂ ಅಂದೆನು. ಉದಯದ ವರೆಗೆ ಹೊರಳಾ ಡುವದು ನನಗೆ ಸಾಕಾಗುತ್ತದೆ
5. ನನ್ನ ಮಾಂಸವು ಹುಳಗಳನ್ನೂ ಮಣ್ಣಿನ ಹೆಂಟೆಯನ್ನೂ ಧರಿಸಿಕೊಂಡಿದೆ. ನನ್ನ ಚರ್ಮವು ಒಡೆದು ಅಸಹ್ಯವಾಗಿದೆ.
6. ನನ್ನ ದಿನಗಳು ಮಗ್ಗದ ಲಾಳಿಗಿಂತ ತ್ವರೆಯಾಗಿವೆ; ನಿರೀಕ್ಷೆ ಇಲ್ಲದೆ ಅವು ಮುಗಿಯುತ್ತವೆ.
7. ನನ್ನ ಜೀವವು ಗಾಳಿ ಯಂತಿದೆ ಎಂದು ಜ್ಞಾಪಕಮಾಡಿಕೋ, ನನ್ನ ಕಣ್ಣು ತಿರುಗಿ ಒಳ್ಳೆಯದನ್ನು ನೋಡದು.
8. ನನ್ನನ್ನು ನೋಡು ವವನ ಕಣ್ಣು ನನ್ನನ್ನು ಇನ್ನು ಮೇಲೆ ನೋಡದು; ನಿನ್ನ ಕಣ್ಣುಗಳು ನನ್ನ ಮೇಲಿವೆ ನಾನು ಮಾತ್ರ ಇರು ವದಿಲ್ಲ.
9. ಮೋಡವು ಕರಗಿಹೋಗುವ ಹಾಗೆಯೇ, ಪಾತಾಳಕ್ಕೆ ಇಳಿದವನು ಹಿಂತಿರುಗಿ ಬರಲಾರನು.
10. ಇನ್ನು ಅವನು ತನ್ನ ಮನೆಗೆ ತಿರುಗಿಕೊಳ್ಳುವದಿಲ್ಲ; ಅವನ ಸ್ಥಳವು ಇನ್ನು ಅವನ ಗುರುತನ್ನು ಅರಿಯದು.
11. ಆದದರಿಂದ ನಾನು ನನ್ನ ಬಾಯಿಯನ್ನು ಮುಚ್ಚು ವದಿಲ್ಲ; ನಾನು ಆತ್ಮ ವೇದನೆಯಿಂದ ಮಾತನಾಡು ವೆನು; ನನ್ನ ಮನೋವ್ಯಥೆಯಲ್ಲಿ ನಾನು ಗುಣುಗುಟ್ಟು ವೆನು.
12. ನೀನು ನನಗೆ ಕಾವಲಿಡುವದಕ್ಕೆ ನಾನೇನು ಸಮುದ್ರವೋ? ಇಲ್ಲವೆ ತಿಮಿಂಗಲವೋ?
13. ನನ್ನ ಮಂಚವು ನನ್ನನ್ನು ಆದರಿಸಲಿ, ನನ್ನ ಹಾಸಿಗೆಯು ನನ್ನ ಚಿಂತೆಯನ್ನು ಶಮನಮಾಡಲಿ ಅನ್ನಲಾಗಿ
14. ಸ್ವಪ್ನ ಗಳಿಂದ ನನ್ನನ್ನು ಹೆದರಿಸುತ್ತೀ; ದರ್ಶನಗಳಿಂದ ನನ್ನನ್ನು ನಡುಗಿಸುತ್ತೀ.
15. ಆದದರಿಂದ ನನ್ನ ಪ್ರಾಣವು ಕೊರಳು ಹಿಸುಕುವದನ್ನೂ ನನ್ನ ಜೀವವು ಮರಣವನ್ನೂ ಆದು ಕೊಳ್ಳುತ್ತದೆ.
16. ನಾನು ಬೇಸರಗೊಂಡಿದ್ದೇನೆ; ನಿತ್ಯವಾಗಿ ನಾನು ಬದುಕಲೊಲ್ಲೆನು; ನನ್ನನ್ನು ಬಿಟ್ಟು ಬಿಡು; ಯಾಕಂದರೆ ನನ್ನ ದಿವಸಗಳು ವ್ಯರ್ಥವಾಗಿವೆ.
17. ನೀನು ಅವನನ್ನು ಹೆಚ್ಚಿಸುವ ಹಾಗೆಯೂ ಅವನ ಮೇಲೆ ನಿನ್ನ ಹೃದಯ ಇಡುವ ಹಾಗೆಯೂ
18. ಅವನನ್ನು ಪ್ರತಿ ಉದಯದಲ್ಲಿ ದರ್ಶಿಸುವ ಹಾಗೆಯೂ ಕ್ಷಣ ಕ್ಷಣಕ್ಕೆ ಅವನನ್ನು ಪರೀಕ್ಷಿಸುವ ಹಾಗೆಯೂ ಮನುಷ್ಯನು ಎಷ್ಟರವನು?
19. ಎಷ್ಟರ ವರೆಗೆ ನನ್ನ ಕಡೆಯಿಂದ ದೃಷ್ಟಿ ತೊಲಗಿಸುವದಿಲ್ಲ? ನಾನು ಉಗುಳು ನುಂಗುವ ದಕ್ಕೂ ನನ್ನನ್ನು ಬಿಡುವದಿಲ್ಲವೋ?
20. ನಾನು ಪಾಪ ಮಾಡಿದ್ದೇನೆ; ಓ ಮನುಷ್ಯರನ್ನು ಕಾಯುವವನೇ, ನಾನು ನಿನಗೆ ಏನು ಮಾಡಲಿ? ನನಗೆ ನಾನೇ ಭಾರವಾಗುವ ಹಾಗೆ ನನ್ನನ್ನು ನಿನಗೆ ಗುರಿಯಾಗಿ ಇಟ್ಟು ಕೊಳ್ಳುವದು ಯಾಕೆ?
21. ಯಾಕೆ ನನ್ನ ದ್ರೋಹವನ್ನು ಮನ್ನಿಸುವದಿಲ್ಲ? ನನ್ನ ಅಕ್ರಮವನ್ನು ಪರಿಹರಿಸುವ ದಿಲ್ಲವೇಕೆ? ಈಗ ಧೂಳಿನಲ್ಲಿ ಮಲಗಿಕೊಳ್ಳುವೆನು; ನೀನು ಮುಂಜಾವಿನಲ್ಲಿ ನನ್ನನ್ನು ಹುಡುಕಿದರೆ ನಾನು ಇರುವದಿಲ್ಲ.