Bible Versions
Bible Books

Jeremiah 38 (KNV) Kannadam Old BSI Version

1 ಮತ್ತಾನನ ಮಗನಾದ ಶೆಫತ್ಯನೂ ಷಷ್ಹೂರನ ಮಗನಾದ ಗೆದಲ್ಯನೂ ಸೆಲ್ಯೆಮನ ಮಗನಾದ ಯೂಕಲನೂ ಮಲ್ಕೀಯನ ಮಗನಾದ ಪಷ್ಹೂರನೂ ಯೆರೆವಿಾಯನು ಜನರೆಲ್ಲರಿಗೆ ಹೇಳಿದ ಮಾತುಗಳನ್ನು ಕೇಳಿದರು; ಅವು ಯಾವವೆಂದರೆ--
2 ಕರ್ತನು ಹೀಗೆ ಹೇಳುತ್ತಾನೆ--ಈ ಪಟ್ಟಣದಲ್ಲಿ ನಿಲ್ಲುವವನು ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯ ದಿಂದಲೂ ಸಾಯುವನು; ಆದರೆ ಕಸ್ದೀಯರ ಬಳಿಗೆ ಹೊರಗೆ ಹೋಗುವವನು ಬದುಕುವನು; ಅವನ ಪ್ರಾಣವು ಅವನಿಗೆ ಕೊಳ್ಳೆಯಾಗಿರುವದು;
3 ಅವನು ಬದುಕುವನು. ಕರ್ತನು ಹೇಳುವದೇನಂದರೆ--ಈ ಪಟ್ಟಣವು ನಿಶ್ಚಯವಾಗಿ ಬಾಬೆಲ್‌ ಅರಸನ ಸೈನ್ಯದ ಕೈಯಲ್ಲಿ ಒಪ್ಪಿಸಲ್ಪಡುವದು; ಅದು ಅದನ್ನು ವಶಮಾಡಿ ಕೊಳ್ಳುವದು.
4 ಆದದರಿಂದ ಪ್ರಧಾನರು ಅರಸನಿಗೆ --ಈ ಮನುಷ್ಯನು ಸಾಯಲಿ; ಯಾಕಂದರೆ ಇವನು ಇಂಥಾ ಮಾತುಗಳನ್ನು ಅವರ ಸಂಗಡ ಆಡಿ ಪಟ್ಟಣದಲ್ಲಿ ಉಳಿದ ಎಲ್ಲಾ ಯುದ್ಧಸ್ಥರ ಕೈಗಳನ್ನೂ ಎಲ್ಲಾ ಜನರ ಕೈಗಳನ್ನೂ ಬಲಹೀನ ಮಾಡುತ್ತಾನೆ; ಮನುಷ್ಯನು ಜನರ ಕ್ಷೇಮವನ್ನಲ್ಲ ಅವರ ಕೇಡನ್ನು ಹುಡುಕುತ್ತಾನೆಂದು ಹೇಳಿದನು.
5 ಆಗ ಅರಸನಾದ ಚಿದ್ಕೀಯನು ಇಗೋ, ಅವನು ನಿಮ್ಮ ಕೈಯಲ್ಲಿ ಇದ್ದಾನೆ; ನಿಮಗೆ ವಿರೋಧವಾಗಿ ಅರಸನು ಏನು ಮಾಡಬಲ್ಲವ ನಲ್ಲ ಅಂದನು.
6 ಆಗ ಅವರು ಯೆರೆವಿಾಯನನ್ನು ತಕ್ಕೊಂಡು ಸೆರೆಮನೆಯ ಅಂಗಳದಲ್ಲಿದ್ದ ಹಮ್ಮೇಲೆಕನ ಮಗನಾದ ಮಲ್ಕೀಯನ ಕುಣಿಯಲ್ಲಿ ಹಾಕಿದರು; ಅವರು ಯೆರೆವಿಾಯನನ್ನು ಹಗ್ಗಗಳಿಂದ ಇಳಿಸಿದರು; ಕುಣಿಯಲ್ಲಿ ನೀರು ಇರಲಿಲ್ಲ; ಕೆಸರು ಮಾತ್ರ ಇತ್ತು; ಯೆರೆವಿಾಯನು ಕೆಸರಿನಲ್ಲಿ ಮುಣುಗಿದನು.
7 ಆಗ ಅರಸನ ಮನೆಯಲ್ಲಿರುವ ಕಂಚುಕಿಯಾದ ಎಬೆದೆಲ್ಮೆಕನೆಂಬ ಕೂಷ್ಯನು ಯೆರೆವಿಾಯನನ್ನು ಅವರು ಕುಣಿಯಲ್ಲಿ ಹಾಕಿದರೆಂದು ಕೇಳಿದಾಗ ಅರಸನು ಬೆನ್ಯಾವಿಾನನ ಬಾಗಲಲ್ಲಿ ಕೂತಿರಲಾಗಿ,
8 ಎಬೆದ್ಮೆಲೆ ಕನು ಅರಸನ ಮನೆಯಿಂದ ಹೊರಟು ಅರಸನ ಸಂಗಡ ಮಾತ ನಾಡಿ ಹೇಳಿದ್ದೇನಂದರೆ--
9 ಅರಸನಾದ ನನ್ನೊ ಡೆಯನೇ, ಮನುಷ್ಯರು ಕುಣಿಯಲ್ಲಿ ಹಾಕಿದ ಪ್ರವಾ ದಿಯಾದ ಯೆರೆವಿಾಯನಿಗೆ ಮಾಡಿದ್ದೆಲ್ಲಾ ಕೇಡಿಗಾಗಿ ಮಾಡಿದ್ದಾರೆ; ಅವನು ಇರುವಲ್ಲಿ ಹಸಿವೆಯಿಂದ ಸಾಯುವವನಾಗಿದ್ದಾನೆ;
10 ಪಟ್ಟಣದಲ್ಲಿ ಇನ್ನು ಮೇಲೆ ರೊಟ್ಟಿ ಇಲ್ಲ ಅಂದನು. ಆಗ ಅರಸನು ಕೂಷ್ಯನಾದ ಎಬೆದ್ಮೆಲೆಕನಿಗೆ ನೀನು ಇಲ್ಲಿಂದ ಮೂವತ್ತು ಮಂದಿ ಮನುಷ್ಯರನ್ನು ಕರಕೊಂಡು ಹೋಗಿ ಪ್ರವಾದಿಯಾದ ಯೆರೆವಿಾಯನನ್ನು ಅವನು ಸಾಯುವದಕ್ಕಿಂತ ಮುಂಚೆ ಕುಣಿಯೊಳಗಿಂದ ಎತ್ತೆಂದು ಆಜ್ಞಾಪಿಸಿದನು.
11 ಆಗ ಎಬೆದ್ಮೆಲೆಕನು ಮನುಷ್ಯರನ್ನು ಕರಕೊಂಡು ಖಜಾನೆ ಕೆಳಗಿರುವ ಅರಮನೆಗೆ ಹೋಗಿ ಅಲ್ಲಿಂದ ಹರಿದು ಹೋದ ಹಳೇ ಬಟ್ಟೆಗಳನ್ನೂ ಸವೆದು ಹೋದ ಹಳೇ ವಸ್ತ್ರಗಳನ್ನೂ ತಕ್ಕೊಂಡು ಅವುಗಳನ್ನು ಹಗ್ಗಗಳಿಂದ ಯೆರೆವಿಾಯನ ಬಳಿಗೆ ಕುಣಿಯೊಳಗೆ ಇಳಿಸಿದನು.
12 ಕೂಷ್ಯನಾದ ಎಬೆದ್ಮೆಲೆಕನು ಯೆರೆವಿಾಯನಿಗೆ-- ಹರಿದು ಸವೆದು ಹೋದ ಹಳೇಬಟ್ಟೆಗಳನ್ನು ಹಗ್ಗಗಳ ಕೆಳಗೆ ನಿನ್ನ ಕಂಕಳುಗಳಲ್ಲಿ ಇಟ್ಟುಕೋ ಅಂದನು; ಯೆರೆ ವಿಾಯನು ಹಾಗೆ ಮಾಡಿದನು.
13 ಹೀಗೆ ಹಗ್ಗಗಳಿಂದ ಯೆರೆವಿಾಯನನ್ನು ಎಳೆದು ಅವನನ್ನು ಕುಣಿಯೊಳಗಿಂದ ಎತ್ತಿದರು; ಆಮೇಲೆ ಯೆರೆವಿಾಯನು ಸೆರೆಮನೆಯ ಅಂಗಳದಲ್ಲಿ ಉಳಿದನು.
14 ಆಗ ಅರಸನಾದ ಚಿದ್ಕೀಯನು ಪ್ರವಾದಿಯಾದ ಯೆರೆವಿಾಯನನ್ನು ತನ್ನ ಬಳಿಗೆ ಕರೆಯಿಸಿ ಕರ್ತನ ಆಲಯದಲ್ಲಿರುವ ಮೂರನೇ ಪ್ರವೇಶಕ್ಕೆ ಕರಕೊಂಡು ಹೋದನು. ಆಗ ಅರಸನು ಯೆರೆವಿಾಯನಿಗೆ--ನಾನು ನಿನ್ನಿಂದ ಒಂದು ಕೇಳುತ್ತೇನೆ, ನನಗೆ ಯಾವದನ್ನಾದರೂ ಬಚ್ಚಿಡಬೇಡ ಅಂದನು.
15 ಆಗ ಯೆರೆವಿಾಯನು ಚಿದ್ಕೀಯನಿಗೆ--ನಾನು ನಿನಗೆ ತಿಳಿಸಿದರೆ ನೀನು ನನ್ನನ್ನು ನಿಶ್ಚಯವಾಗಿ ಕೊಂದು ಹಾಕುವದಿಲ್ಲವೋ? ನಾನು ನಿನಗೆ ಆಲೋಚನೆ ಹೇಳಿದರೆ ನೀನು ಕೇಳುವದಿಲ್ಲ ಅಂದನು.
16 ಹೀಗೆ ಅರಸನಾದ ಚಿದ್ಕೀಯನು ಯೆರೆ ವಿಾಯನಿಗೆ ಅಂತರಂಗದಲ್ಲಿ ಪ್ರಮಾಣ ಮಾಡಿ --ನಮಗೆ ಪ್ರಾಣವನ್ನುಂಟು ಮಾಡಿದ ಕರ್ತನ ಜೀವದಾಣೆ; ನಾನು ನಿನ್ನನ್ನು ಕೊಂದು ಹಾಕುವದಿಲ್ಲ; ನಿನ್ನ ಪ್ರಾಣವನ್ನು ಹುಡುಕುವ ಮನುಷ್ಯರ ಕೈಯಲ್ಲಿ ಒಪ್ಪಿಸುವದಿಲ್ಲ ಅಂದನು.
17 ಆಗ ಯೆರೆವಿಾಯನು ಚಿದ್ಕೀಯನಿಗೆ ಹೇಳಿದ್ದೇನಂದರೆ--ಇಸ್ರಾಯೇಲಿನ ದೇವರಾಗಿರುವ ಸೈನ್ಯಗಳ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ನಿಶ್ಚಯ ವಾಗಿ ಬಾಬೆಲಿನ ಅರಸನ ಪ್ರಧಾನರ ಬಳಿಗೆ ಹೊರಗೆ ಹೋದರೆ ನಿನ್ನ ಪ್ರಾಣವು ಬದುಕುವದು. ಪಟ್ಟಣವು ಬೆಂಕಿಯಿಂದ ಸುಡ ಲ್ಪಡುವದಿಲ್ಲ; ಮತ್ತು ನೀನೂ ನಿನ್ನ ಮನೆಯವರೂ ಬದುಕುವಿರಿ.
18 ನೀನು ಬಾಬೆಲಿನ ಅರಸನ ಪ್ರಧಾನರ ಬಳಿಗೆ ಹೊರಗೆ ಹೋಗದಿದ್ದರೆ ಪಟ್ಟಣವು ಕಸ್ದೀಯರ ಕೈಯಲ್ಲಿ ಒಪ್ಪಿಸಲ್ಪಡುವದು; ಅವರು ಅದನ್ನು ಬೆಂಕಿಯಿಂದ ಸುಡುವರು; ನೀನು ಅವರ ಕೈಯಿಂದ ತಪ್ಪಿಸಿಕೊಳ್ಳುವದಿಲ್ಲ ಅಂದನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×