Bible Versions
Bible Books

Jeremiah 42 (KNV) Kannadam Old BSI Version

1 ಆಗ ಸೈನ್ಯಾಧಿಪತಿಗಳೆಲ್ಲರೂ ಕಾರೇಹನ ಮಗನಾದ ಯೋಹಾನಾನನೂ ಹೋಷಾ ಯನ ಮಗನಾದ ಯೆಜನ್ಯನೂ ಕಿರಿಯರು ಮೊದಲು ಗೊಂಡು ಹಿರಿಯರ ವರೆಗೆ ಜನರೆಲ್ಲರೂ ಹತ್ತಿರ ಬಂದು
2 ಪ್ರವಾದಿಯಾದ ಯೆರೆವಿಾಯನಿಗೆ ಹೇಳಿದ್ದೇನಂ ದರೆ--ನಮ್ಮ ವಿಜ್ಞಾಪನೆ ನಿನ್ನ ಮುಂದೆ ಬರಲಿ; ನಿನ್ನ ಕಣ್ಣುಗಳು ನಮ್ಮನ್ನು ನೋಡುವ ಪ್ರಕಾರ ನಾವು ಅನೇಕರೊಳಗಿಂದ ಕೆಲವರೇ ಉಳಿದಿದ್ದೇವಲ್ಲಾ ನಮ ಗೋಸ್ಕರವೂ ಅಂದರೆ ಸಮಸ್ತಶೇಷಕ್ಕೋಸ್ಕರವೂ
3 ನಾವು ನಡೆಯತಕ್ಕ ಮಾರ್ಗವನ್ನು ನಾವು ಮಾಡತಕ್ಕ ಕಾರ್ಯವನ್ನು ನಿನ್ನ ದೇವರಾದ ಕರ್ತನು ನಮಗೆ ತಿಳಿಸುವ ಹಾಗೆ ದೇವರಾದ ಕರ್ತನಿಗೆ ಪ್ರಾರ್ಥನೆ ಮಾಡು ಅಂದರು.
4 ಆಗ ಪ್ರವಾದಿಯಾದ ಯೆರೆವಿಾ ಯನು ಅವರಿಗೆ--ನಾನು ಕೇಳಿದ್ದೇನೆ; ಇಗೋ, ನಿಮ್ಮ ಮಾತುಗಳ ಪ್ರಕಾರ ನಿಮ್ಮ ದೇವರಾದ ಕರ್ತನಿಗೆ ಪ್ರಾರ್ಥನೆ ಮಾಡುತ್ತೇನೆ; ಕರ್ತನು ನಿಮಗೆ ಯಾವ ಉತ್ತರವನ್ನು ಕೊಡುವನೋ ಅದನ್ನು ನಿಮಗೆ ತಿಳಿಸು ವೆನು; ಒಂದು ಮಾತನ್ನಾದರೂ ನಿಮ್ಮಿಂದ ಹಿಂತೆಗೆ ಯುವದಿಲ್ಲವೆಂದು ಹೇಳಿದನು.
5 ಆಗ ಅವರು ಯೆರೆ ವಿಾಯನಿಗೆ ಹೇಳಿದ್ದೇನಂದರೆ--ನಿನ್ನ ದೇವರಾದ ಕರ್ತನು ನಿನ್ನನ್ನು ಯಾವ ವಿಷಯದಲ್ಲಿ ನಮ್ಮ ಬಳಿಗೆ ಕಳುಹಿಸುತ್ತಾನೋ ಎಲ್ಲಾ ಮಾತುಗಳ ಪ್ರಕಾರ ನಾವು ಮಾಡದೆ ಹೋದರೆ ಕರ್ತನು ನಮಗೆ ಸತ್ಯವಾದ ನಂಬಿಕೆಯುಳ್ಳ ಸಾಕ್ಷಿಯಾಗಿರಲಿ. ನಾವು ನಮ್ಮ ದೇವರಾದ ಕರ್ತನ ಸ್ವರವನ್ನು ಕೇಳುವಾಗ ನಮಗೆ ಒಳ್ಳೇದಾ ಗುವ ಹಾಗೆ
6 ನಾವು ಯಾವಾತನ ಬಳಿಗೆ ನಿನ್ನನ್ನು ಕಳುಹಿಸುತ್ತೇವೋ ನಮ್ಮ ದೇವರಾದ ಕರ್ತನ ಸ್ವರವನ್ನು ಅದು ಒಳ್ಳೇದ್ದಾದರೂ ಸರಿಯೇ ಕೆಟ್ಟದ್ದಾದರೂ ಸರಿಯೇ ಕೇಳುವೆವು ಅಂದರು.
7 ಹತ್ತು ದಿವಸಗಳಾದ ಮೇಲೆ ಕರ್ತನ ವಾಕ್ಯವು ಯೆರೆವಿಾಯನಿಗೆ ಬಂತು.
8 ಆಗ ಅವನು ಕಾರೇಹನ ಮಗನಾದ ಯೋಹಾನಾನನ್ನೂ ಅವನ ಸಂಗಡ ಇದ್ದ ಸೈನ್ಯಾಧಿಪತಿಗಳೆಲ್ಲರನ್ನೂ ಕಿರಿಯರು ಮೊದಲುಗೊಂಡು ಹಿರಿಯರ ವರೆಗೆ ಜನರೆಲ್ಲರನ್ನೂ
9 ಕರೆದು ಅವರಿಗೆ ಹೇಳಿದ್ದೇನಂದರೆ--ಯಾವಾತನ ಮುಂದೆ ನಿಮ್ಮ ವಿಜ್ಞಾ ಪನೆಯನ್ನು ತರುವದಕ್ಕೆ ನನ್ನನ್ನು ಕಳುಹಿಸಿದ್ದಿರೋ ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--
10 ನೀವು ಇನ್ನು ದೇಶದಲ್ಲಿ ವಾಸ ಮಾಡಿದರೆ ನಾನು ನಿಮ್ಮನ್ನು ಕೆಡವದೆ ಕಟ್ಟುವೆನು; ಕಿತ್ತುಹಾಕದೆ ನೆಡುವೆನು. ನಾನು ನಿಮಗೆ ಮಾಡಿರುವ ಕೇಡಿನ ವಿಷಯ ಪಶ್ಚಾತ್ತಾಪ ಪಡುತ್ತೇನೆ.
11 ನೀವು ಭಯ ಪಡುವ ಬಾಬೆಲಿನ ಅರಸನಿಗೆ ಹೆದರಬೇಡಿರಿ; ಅವನಿಗೆ ಭಯಪಡಬೇಡಿರೆಂದು ಕರ್ತನು ಅನ್ನುತ್ತಾನೆ; ನಿಮ್ಮನ್ನು ರಕ್ಷಿಸುವದಕ್ಕೂ ಅವನ ಕೈಗೆ ನಿಮ್ಮನ್ನು ತಪ್ಪಿಸುವದಕ್ಕೂ ನಾನು ನಿಮ್ಮ ಸಂಗಡ ಇದ್ದೇನೆ.
12 ಇದಲ್ಲದೆ ನಾನು ನಿಮಗೆ ಕರುಣೆಯನ್ನು ತೋರಿಸುವೆನು; ಆಗ ಅವನು ಕರುಣಿಸಿ ನಿಮ್ಮನ್ನು ತಿರುಗಿ ನಿಮ್ಮ ಸ್ವದೇಶಕ್ಕೆ ಬರಮಾಡು ವನು.
13 ಆದರೆ ನೀವು ನಿಮ್ಮ ದೇವರಾದ ಕರ್ತನ ಶಬ್ದವನ್ನು ಕೇಳದೆ--ನಾವು ದೇಶದಲ್ಲಿ ವಾಸಮಾಡು ವದಿಲ್ಲವೆಂದು ಹೇಳಿದರೆ
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×