Bible Versions
Bible Books

Joshua 15 (KNV) Kannadam Old BSI Version

1 ಇದಲ್ಲದೆ ಯೂದನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ವಿಭಾಗಿಸಿದ ಮೇರೆ ಯಾವದಂದರೆ, ಕಟ್ಟ ಕಡೆಗಿರುವ ದಕ್ಷಿಣ ಕಡೆಗೆ ಎದೋಮಿನ ಮೇರೆಯಾದ ಜಿನ್‌ ಅರಣ್ಯದ ದಕ್ಷಿಣ ಭಾಗವಾಗಿದೆ.
2 ಉಪ್ಪು ಸಮುದ್ರದ ಕಡೆಯಲ್ಲಿ ದಕ್ಷಿಣ ಕಡೆಗಿರುವ ಕೊನೆಯಿಂದ ದಕ್ಷಿಣ ಪಾರ್ಶ್ವದ ಲ್ಲಿರುವ ಮಾಲೆಅಕ್ರಬ್ಬೀಮೆಂಬ ಕೊಲ್ಲಿಗಳಿಗೂ ಅಲ್ಲಿಂದ ಜೀನಿಗೂ
3 ಅಲ್ಲಿಂದ ದಕ್ಷಿಣದಲ್ಲಿರುವ ಕಾದೇಶ್‌ ಬರ್ನೇಯಕ್ಕೂ ಅಲ್ಲಿಂದ ಹೆಬ್ರೋನ್‌ ಮಾರ್ಗವಾಗಿ ಕರ್ಕವನ್ನು ಸುತ್ತಿ ಅಚ್ಮೊನಿಗೂ
4 ಅಲ್ಲಿಂದ ಐಗುಪ್ತದ ನದಿ ಹಿಡಿದು ಸಮುದ್ರದ ಪರಿಯಂತರ ಹೋಗಿ ಸೇರುವದು; ಇದೇ ನಿಮ್ಮ ದಕ್ಷಿಣ ಮೇರೆ.
5 ಅದರ ಮೂಡಣ ಮೇರೆ ಯಾವದಂದರೆ: ಯೊರ್ದನಿನ ಕೊನೇಗಿರುವ ಉಪ್ಪು ಸಮುದ್ರವು. ಉತ್ತರ ಕಡೆಗೆ ಯೊರ್ದನಿನ ಹತ್ತಿರದಲ್ಲಿದ್ದ ಸಮುದ್ರದ ಕೊನೆಯ ವರೆಗೆ ಇತ್ತು;
6 ಅಲ್ಲಿಂದ ಬೇತ್‌ಹೊಗ್ಲಾಕ್ಕೂ ಅಲ್ಲಿಂದ ಉತ್ತರಕ್ಕಿರುವ ಬೇತ್‌ಅರಾಬನ್ನು ದಾಟಿರೂಬೇನನ ಮಗನಾದ ಬೋಹನನ ಕಲ್ಲಿಗೂ
7 ಅಲ್ಲಿಂದ ಆಕೋರ್‌ ತಗ್ಗನ್ನು ಬಿಟ್ಟು ದೆಬೀರಿಗೂ ಉತ್ತರಕ್ಕೆ ನದಿಯ ದಕ್ಷಿಣ ಪಾರ್ಶ್ವವಾದ ಅದುವಿಾಮಿನ ಹೊಳೆಗೆ ಎದುರಾಗಿರುವ ಗಿಲ್ಗಾಲಿಗೂ ಅಲ್ಲಿಂದ ಏನ್‌ಷೆಮೆಷಿನ ನೀರಿಗೂ ಅಲ್ಲಿಂದ ಏನ್‌ರೋಗೆಲಿಗೂ
8 ಅಲ್ಲಿಂದ ಯೆಬೂಸಿ ಯರು ವಾಸವಾಗಿರುವ ಯೆರೂಸಲೇಮಿಗೆ ದಕ್ಷಿಣ ಪಾರ್ಶ್ವವಾಗಿ ಹಿನ್ನೋಮನ ತಗ್ಗನ್ನು ದಾಟಿ ಉತ್ತರಕ್ಕಿರುವ ಯೆಬೂಸಿಯರ ತಗ್ಗಿನ ಕಡೆಯಲ್ಲಿ ಪಶ್ಚಿಮಕ್ಕಾಗಿ ಹಿನ್ನೋಮ್‌ ತಗ್ಗಿನ ಮುಂದಿರುವ ಬೆಟ್ಟದ ತುದಿ ವರೆಗೂ
9 ಬೆಟ್ಟದ ತುದಿಯಿಂದ ನೆಪ್ತೋಹದ ನೀರಿನ ಬುಗ್ಗೆಗೂ ಅಲ್ಲಿಂದ ಎಫ್ರೋನನ ಬೆಟ್ಟದ ಪಟ್ಟಣ ಗಳಿಗೂ ಅಲ್ಲಿಂದ ಕಿರ್ಯತ್ಯಾರೀಮ್‌ ಆದ ಬಾಲಾಕ್ಕೂ
10 ಬಾಲಾದಿಂದ ಪಶ್ಚಿಮಕ್ಕಿರುವ ಸೇಯಾರ್‌ ಬೆಟ್ಟ ವನ್ನು ಸುತ್ತಿ ಅಲ್ಲಿಂದ ಉತ್ತರಕ್ಕಿರುವ ಕೆಸಾಲೋನಿನ ಯಾರೀಮ್‌ ಬೆಟ್ಟದ ಪಾರ್ಶ್ವಕ್ಕೂ ಅಲ್ಲಿಂದ ಬೇತ್‌ಷೆ ಮೆಷಿಗೆ ಇಳಿದು ತಿಮ್ನಾಗೆ
11 ಅಲ್ಲಿಂದ ಉತ್ತರಕ್ಕಿರುವ ಎಕ್ರೋನಿನ ಪಾರ್ಶ್ವವನ್ನು ಹಿಡಿದು ಶಿಕ್ಕೆರೋನಿಗೂ ಅಲ್ಲಿಂದ ಬಾಲಾ ಬೆಟ್ಟವನ್ನು ದಾಟಿ ಯೆಬ್ನೇಲಿಗೆ ಹೊರಟು ಸಮುದ್ರಕ್ಕೆ ಕಡೆಯಾಗುವದು.
12 ಅದು ಪಶ್ಚಿಮದ ಮೇರೆಯ ದೊಡ್ಡ ಸಮುದ್ರವಾಗಿದೆ. ಇದೇ ಯೂದನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಉಂಟಾದ ಸುತ್ತಲಿರುವ ಮೇರೆ.
13 ಇದಲ್ಲದೆ ಕರ್ತನು ತನಗೆ ಆಜ್ಞಾಪಿಸಿದ ಪ್ರಕಾರ ಯೆಹೋಶುವನು ಯೆಫುನ್ನೆಯ ಮಗನಾದ ಕಾಲೇಬ ನಿಗೆ ಅನಾಕನ ತಂದೆಯ ಕಿರ್ಯಾತ್‌ಅರ್ಬ ಎಂಬ ಹೆಬ್ರೋನನ್ನು ಯೂದನ ಮಕ್ಕಳ ನಡುವೆ ಪಾಲಾಗಿ ಕೊಟ್ಟನು.
14 ಆಗ ಕಾಲೇಬನು ಅಲ್ಲಿಂದ ಅನಾಕನ ಮೂವರು ಮಕ್ಕಳಾದ ಶೇಷೈ ಅಹೀಮನ್‌ ತಲ್ಮೈಯ ರನ್ನು ಹೊರಡಿಸಿಬಿಟ್ಟನು.
15 ಕಾಲೇಬನು ಅಲ್ಲಿಂದ ಹೊರಟು--ಯಾವನು ಪೂರ್ವದಲ್ಲಿ ಕಿರ್ಯತ್‌ ಸೇಫರ್‌ ಎಂಬ ಹೆಸರು ಉಂಟಾಗಿದ್ದ ದೆಬೀರಿನ ವಾಸಿಗಳ ಬಳಿಗೆ ಹೋಗಿ
16 ಅವನು ಕಿರ್ಯತ್‌ ಸೇಫೆರನ್ನು ಹೊಡೆದು ಹಿಡಿಯುವನೋ ಅವನಿಗೆ ನನ್ನ ಮಗಳಾದ ಅಕ್ಷಾಳನ್ನು ಮದುವೆಮಾಡಿ ಕೊಡು ವೆನು ಎಂದು ಹೇಳಿದ್ದನು.
17 ಆಗ ಕೆನಜನ ಮಗನೂ ಕಾಲೇಬನ ಸಹೋದರನೂ ಆದ ಒತ್ನೀಯೇಲನು ಅದನ್ನು ಹಿಡಿದನು. ಅವನು ತನ್ನ ಮಗಳಾದ ಅಕ್ಷಾಳನ್ನು ಅವನಿಗೆ ಮದುವೆಮಾಡಿ ಕೊಟ್ಟನು.
18 ಅವಳು ಬಂದಾಗ ತನ್ನ ತಂದೆಯಿಂದ ಒಂದು ಹೊಲವನ್ನು ಕೇಳುವದಕ್ಕೆ ಅವನನ್ನು ಪ್ರೇರೇಪಿಸಿ ತಾನು ಕತ್ತೆಯ ಮೇಲಿನಿಂದ ಇಳಿದಳು. ಆಗ ಕಾಲೇಬನು ಅವಳನ್ನು ನೋಡಿ--ನಿನಗೆ ಏನು ಬೇಕು ಅಂದನು.
19 ಅದಕ್ಕೆ ಅವಳು--ನನಗೆ ಒಂದು ಆಶೀರ್ವಾದ ಕೊಡು; ಯಾಕಂದರೆ ನನಗೆ ಮೊದಲು ದಕ್ಷಿಣ ಭೂಮಿಯನ್ನು ಕೊಟ್ಟಿ; ನೀರು ಬುಗ್ಗೆಗಳನ್ನು ಸಹ ನನಗೆ ಕೊಡು ಅಂದಳು. ಆಗ ಅವನು ಅವಳಿಗೆ ಮೇಲ್ಭಾಗದಲ್ಲಿಯೂ ಕೆಳಭಾಗದಲ್ಲಿಯೂ ನೀರು ಬುಗ್ಗೆಗಳನ್ನು ಕೊಟ್ಟನು.
20 ಯೂದನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬ ಗಳ ಪ್ರಕಾರ ಉಂಟಾದ ಸ್ವಾಸ್ತ್ಯವೇನಂದರೆ--
21 ದಕ್ಷಿಣ ಕಡೆಗಿರುವ ಕಟ್ಟ ಕಡೆಯ ಎದೋಮಿನ ಮೇರೆಗೆ ಸರಿಯಾಗಿ ಯೂದನ ಮಕ್ಕಳ ಗೋತ್ರಕ್ಕೆ ಇರುವ ಪಟ್ಟಣಗಳು ಯಾವವಂದರೆ--ಕಬ್ಜೇಲ್‌, ಏದೆರ್‌, ಯಾಗೂರ್‌,
22 ಕೀನಾ, ದೀಮೋನಾ, ಅದಾದಾ,
23 ಕೇದೆಷ್‌, ಹಾಚೋರ್‌, ಇತ್ನಾನ್‌,
24 ಜೀಫ್‌, ಟೆಲೆಮ್‌, ಬೆಯಾಲೋತ್‌,
25 ಹಾಚೋರ್‌, ಹದತ್ತಾ, ಕಿರ್ಯೋತ್‌, ಹೆಜ್ರೋನ್‌ ಎಂಬ ಹಾಚೋರ್‌
26 ಅಮಾಮ್‌, ಶೆಮ, ಮೋಲಾದ
27 ಹಚರ್ಗದ್ದಾ, ಹೆಷ್ಮೋನ್‌, ಬೇತ್ಪೆಲೆಟ್‌,
28 ಹಚರ್‌ಷೊವಾಲ್‌, ಬೇರ್ಷೆಬ, ಬಿಜ್ಯೋತ್ಯಾ
29 ಬಾಲಾ, ಇಯ್ಯಾಮ್‌, ಎಚೆಮ್‌,
30 ಎಲ್ಟೋಲದ್‌, ಕೆಸೀಲ್‌, ಹೊರ್ಮಾ,
31 ಚಿಕ್ಲಗ್‌ ಮದ್ಮನ್ನಾ, ಸನ್ಸನ್ನಾ,
32 ಲೆಬಾವೋತ್‌, ಶಿಲ್ಹೀಮ್‌, ಅಯಿನ್‌, ರಿಮ್ಮೋನ್‌ ಎಂಬವುಗಳೇ; ಅವುಗಳ ಗ್ರಾಮಗಳು ಪಟ್ಟಣಗಳೆಲ್ಲಾ ಇಪ್ಪತ್ತೊಂಭತ್ತು.
33 ತಗ್ಗಿನ ದೇಶ ಎಷ್ಟಾವೋಲ್‌, ಚೊರ್ಗಾ, ಅಶ್ನಾ,
34 ಜನೋಹ, ಏಂಗನ್ನೀಮ್‌,
35 ತಪ್ವೂಹ, ಏನಾಮ್‌ ಯರ್ಮೂತ್‌,
36 ಅದುಲ್ಲಾಮ್‌, ಸೋಕೋ, ಅಜೇಕಾ, ಶಾರಯಿಮ್‌, ಅದೀತಯಿಮ್‌, ಗೆದೇರಾ, ಗೆದೆರೋತಯಿಮ್‌ ಎಂಬ ಅವುಗಳ ಗ್ರಾಮಗಳು ಅದರ ಹದಿನಾಲ್ಕು ಪಟ್ಟಣಗಳು;
37 ಚೆನಾನ್‌, ಹದಾಷಾ, ಮಿಗ್ದಲ್ಗಾದ್‌,
38 ದಿಲಾನ್‌, ಮಿಚ್ವೆ, ಯೊಕ್ತೇಲ್‌,
39 ಲಾಕೀಷ್‌, ಬೊಚ್ಕತ್‌, ಎಗ್ಲೋನ್‌
40 ಕಬ್ಬೋನ್‌, ಲಹ್ಮಾಸ್‌, ಕಿತ್ಲೀಷ್‌, ಗೆದೇರೋತ್‌, ಬೇತ್‌ದಾಗೋನ್‌, ನಾಮಾ,
41 ಮಕ್ಕೇದಾ ಎಂಬ ಹದಿನಾರು ಪಟ್ಟಣಗಳೂ ಅವುಗಳ ಗ್ರಾಮಗಳೂ;
42 ಇದಲ್ಲದೆ ಲಿಬ್ನಾ, ಎತೆರ್‌, ಆಷಾನ್‌,
43 ಇಪ್ತಾಹ,
44 ಅಶ್ನಾ, ನೆಚೀಬ್‌, ಕೆಯಾಲಾ, ಅಕ್ಜೀಬ್‌, ಮಾರೇಷಾಎಂಬ ಅವುಗಳ ಗ್ರಾಮಗಳು ಒಂಭತ್ತು ಪಟ್ಟಣಗಳು;
45 ಎಕ್ರೋನ್‌ ಅದರ ಪಟ್ಟಣಗಳು, ಗ್ರಾಮಗಳು ಸಹ.
46 ಎಕ್ರೋನಿನಿಂದ ಸಮುದ್ರದ ವರೆಗೆ ಅಷ್ಡೋದಿನ ಬಳಿಯಲ್ಲಿರುವ ಸಮಸ್ತ ಗ್ರಾಮಗಳೂ
47 ಅಷ್ಡೋದ್‌ ಅದರ ಪಟ್ಟಣಗಳೂ ಗ್ರಾಮಗಳೂ ಗಾಜಾ, ಅದರ ಪಟ್ಟಣಗಳೂ ಗ್ರಾಮಗಳೂ ಐಗುಪ್ತದ ನದಿ, ದೊಡ್ಡ ಸಮುದ್ರ, ಅದರ ಮೇರೆ, ಇವುಗಳ ವರೆಗೂ
48 ಬೆಟ್ಟಗಳಲ್ಲಿರುವ ಶಾವಿಾರ್‌, ಯತ್ತೀರ್‌, ಸೋಕೋ,
49 ದನ್ನಾ, ದೆಬೀರ್‌ ಎಂಬ ಕಿರ್ಯತ್‌ಸನ್ನಾ,
50 ಅನಾಬ್‌, ಎಷ್ಟೆಮೋ, ಆನೀಮ್‌,
51 ಗೋಷೆನ್‌, ಹೋಲೋನ್‌ಗಿಲೋ ಎಂಬ ಹನ್ನೊಂದು ಪಟ್ಟಣ ಗಳು ಅವುಗಳ ಗ್ರಾಮಗಳು.
52 ಅರಬ್‌, ದೂಮಾ, ಎಷಾನ್‌,
53 ಯಾನೂಮ್‌, ಬೇತ್‌ತಪ್ಪೂಹ, ಅಫೇಕಾ.
54 ಹುಮ್ಟಾ, ಹೆಬ್ರೋನೆಂಬ ಕಿರ್ಯತ್‌ಅರ್ಬ, ಚೀಯೋರ್‌ ಎಂಬ ಒಂಭತ್ತು ಪಟ್ಟಣಗಳೂ ಮತ್ತು ಅವುಗಳ ಗ್ರಾಮಗಳೂ.
55 ಮಾವೋನ್‌, ಕರ್ಮೆಲ್‌, ಜೀಫ್‌, ಯುಟ್ಟಾ,
56 ಇಜ್ರೇಲ್‌, ಯೊಗ್ದೆಯಾಮ್‌, ಜನೋಹ,
57 ಕಯಿನ್‌, ಗಿಬೆಯಾ, ತಿಮ್ನಾ ಎಂಬ ಹತ್ತು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.
58 ಹಲ್ಹೂಲ್‌, ಬೇತ್‌ಚೂರ್‌, ಗೆದೋರ್‌,
59 ಮಾರಾತ್‌, ಬೇತನೋತ್‌, ಎಲ್ಟೆಕೋನ್‌ ಎಂಬ ಆರು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.
60 ಕಿರ್ಯತ್ಯಾರೀಮ್‌ ಎಂಬ ಕಿರ್ಯತ್‌ಬಾಳ್‌, ರಬ್ಬಾ ಎಂಬ ಎರಡು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.
61 ಅರಣ್ಯದಲ್ಲಿರುವ ಬೇತ್‌ಅರಾಬಾ, ಮಿದ್ದೀನ್‌, ಸೆಕಾಕಾ,
62 ನಿಬ್ಷಾನ್‌, ಉಪ್ಪಿನಪಟ್ಟಣವು, ಏಂಗೆದೀ ಎಂಬ ಆರು ಪಟ್ಟಣಗಳು; ಮತ್ತು ಅವು ಗಳ ಗ್ರಾಮಗಳು.ಆದರೆ ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಯೂದನ ಮಕ್ಕಳು ಹೊರಡಿಸಿ ಬಿಡುವದಕ್ಕಾಗಲಿಲ್ಲ. ಆದದರಿಂದ ದಿವಸದ ವರೆಗೂ ಯೆಬೂಸಿಯರು ಯೂದನ ಮಕ್ಕಳ ಸಂಗಡ ಯೆರೂಸಲೇಮಿನಲ್ಲಿ ವಾಸವಾಗಿದ್ದಾರೆ.
63 ಆದರೆ ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಯೂದನ ಮಕ್ಕಳು ಹೊರಡಿಸಿ ಬಿಡುವದಕ್ಕಾಗಲಿಲ್ಲ. ಆದದರಿಂದ ದಿವಸದ ವರೆಗೂ ಯೆಬೂಸಿಯರು ಯೂದನ ಮಕ್ಕಳ ಸಂಗಡ ಯೆರೂಸಲೇಮಿನಲ್ಲಿ ವಾಸವಾಗಿದ್ದಾರೆ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×