Bible Versions
Bible Books

Revelation 1 (KNV) Kannadam Old BSI Version

1 ಯೇಸು ಕ್ರಿಸ್ತನ ಪ್ರಕಟನೆಯು ಆತನು ಬೇಗನೆ ಸಂಭವಿಸತಕ್ಕವುಗಳನ್ನು ತನ್ನ ಸೇವಕರಿಗೆ ತೋರಿಸುವದಕ್ಕಾಗಿ ದೇವರು ಪ್ರಕಟನೆ ಯನ್ನು ಆತನಿಗೆ ಕೊಟ್ಟನು; ಇದಲ್ಲದೆ ಆತನು ತನ್ನ ದೂತನನ್ನು ಕಳುಹಿಸಿ ಅವನ ಮೂಲಕ ಅದನ್ನು ತನ್ನ ಸೇವಕನಾದ ಯೋಹಾನನಿಗೆ ಸೂಚಿಸಿದ
2 ಯೋಹಾನನು ದೇವರ ವಾಕ್ಯದ ವಿಷಯವಾಗಿಯೂ ಯೇಸು ಕ್ರಿಸ್ತನ ವಿಷಯವಾಗಿಯೂ ತಾನು ಕಂಡದ್ದನ್ನೆಲ್ಲ ತಿಳಿಸುವವನಾಗಿ ಸಾಕ್ಷಿಕೊಟ್ಟನು.
3 ಇದನ್ನು ಓದುವಂಥ ವನೂ ಪ್ರವಾದನಾ ವಾಕ್ಯಗಳನ್ನು ಕೇಳುವಂಥವರೂ ಅದರಲ್ಲಿ ಬರೆದಿರುವಂಥವುಗಳನ್ನು ಕಾಪಾಡುವಂಥ ವರೂ ಧನ್ಯರು. ಯಾಕಂದರೆ ಕಾಲವು ಸವಿಾಪವಾಗಿದೆ.
4 ಯೋಹಾನನು ಆಸ್ಯದಲ್ಲಿರುವ ಏಳು ಸಭೆಗ ಳಿಗೆ--ಇರುವಾತನೂ ಇದ್ದಾತನೂ ಬರುವಾತನೂ ಆಗಿರುವಾತನಿಂದಲೂ ಆತನ ಸಿಂಹಾಸನದ ಮುಂದಿ ರುವ ಏಳು ಆತ್ಮಗಳಿಂದಲೂ ನಂಬತಕ್ಕ ಸಾಕ್ಷಿಯೂ ಸತ್ತವರೊಳಗಿಂದ ಮೊದಲು ಎದ್ದು ಬಂದಾತನೂ ಭೂರಾಜರ ಪ್ರಭುವೂ ಆಗಿರುವ ಯೇಸು ಕ್ರಿಸ್ತ ನಿಂದ
5 ಆತನು ನಮ್ಮನ್ನು ಪ್ರೀತಿಸಿ ತನ್ನ ಸ್ವಂತ ರಕ್ತದಿಂದ ನಮ್ಮನ್ನು ನಮ್ಮ ಪಾಪಗಳಿಂದ ತೊಳೆದು
6 ತನ್ನ ತಂದೆ ಯಾದ ದೇವರಿಗೆ ನಮ್ಮನ್ನು ರಾಜರನ್ನಾಗಿಯೂ ಯಾಜಕ ರನ್ನಾಗಿಯೂ ಮಾಡಿದನು. ಆತನಿಗೆ ಯುಗ ಯುಗಾಂತರಗಳಲ್ಲಿ ಮಹಿಮೆಯೂ ಅಧಿಪತ್ಯವೂ ಇರಲಿ. ಆಮೆನ್‌.
7 ಇಗೋ ಆತನು ಮೇಘಗ ಳೊಂದಿಗೆ ಬರುತ್ತಾನೆ; ಎಲ್ಲರ ಕಣ್ಣುಗಳು ಆತನನ್ನು ಕಾಣುವವು; ಆತನನ್ನು ಇರಿದವರು ಸಹ ಕಾಣುವರು; ಭೂಮಿಯಲ್ಲಿರುವ ಎಲ್ಲಾ ಕುಲದವರು ಆತನ ನಿಮಿತ್ತ ಗೋಳಾಡುವರು. ಹೌದು, ಹಾಗೆಯೇ ಆಗುವದು. ಆಮೆನ್‌.
8 ನಾನೇ ಅಲ್ಫಾವೂ ಓಮೆಗವೂ ಆದಿಯೂ ಅಂತ್ಯವೂ ಇರುವಾತನೂ ಇದ್ದಾತನೂ ಮತ್ತು ಬರು ವಾತನೂ ಸರ್ವಶಕ್ತನೂ ಆಗಿದ್ದೇನೆ ಎಂದು ಕರ್ತನು ಹೇಳುತ್ತಾನೆ.
9 ನಿಮ್ಮ ಸಹೋದರನೂ ಯೇಸು ಕ್ರಿಸ್ತನ ನಿಮಿತ್ತ ಸಂಕಟದಲ್ಲಿ ರಾಜ್ಯದಲ್ಲಿ ಮತ್ತು ತಾಳ್ಮೆಯಲ್ಲಿ ಜೊತೆ ಗಾರನೂ ಆಗಿರುವ ಯೋಹಾನನೆಂಬ ನಾನು ದೇವರ ವಾಕ್ಯಕ್ಕೋಸ್ಕರವೂ ಯೇಸು ಕ್ರಿಸ್ತನ ವಿಷಯವಾದ ಸಾಕ್ಷೀಗೋಸ್ಕರವೂ ಪತ್ಮೊಸ್‌ ಎಂದು ಕರೆಯಲ್ಪಟ್ಟ ದ್ವೀಪದಲ್ಲಿದ್ದೆನು.
10 ನಾನು ಕರ್ತನ ದಿನದಲ್ಲಿ ಆತ್ಮನ ವಶದಲ್ಲಿದ್ದಾಗ ನನ್ನ ಹಿಂದುಗಡೆ ತುತೂರಿಯ ಶಬ್ದದಂತಿ ರುವ ಮಹಾಶಬ್ದವನ್ನು ಕೇಳಿದೆನು.
11 ಅದು--ನಾನೇ ಅಲ್ಫಾವೂ ಓಮೆಗವೂ ಮೊದಲನೆಯವನೂ ಕಡೆ ಯವನೂ ಆಗಿದ್ದೇನೆ; ನೀನು ನೋಡುವದನ್ನೂ ಪುಸ್ತಕದಲ್ಲಿ ಬರೆದು ಆಸ್ಯದಲ್ಲಿನ ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್‌, ಫಿಲದೆಲ್ಫಿಯ, ಲವೊದಿಕೀಯ ಎಂಬ ಏಳು ಸಭೆಗಳಿಗೆ ಅದನ್ನು ಕಳುಹಿಸಬೇಕೆಂದು ಹೇಳಿತು.
12 ನನ್ನ ಸಂಗಡ ಮಾತ ನಾಡುತ್ತಿದ್ದ ಶಬ್ದವನ್ನು ನೋಡುವದಕ್ಕಾಗಿ ಹಿಂದಕ್ಕೆ ತಿರುಗಿದೆನು. ತಿರುಗಿದಾಗ ಚಿನ್ನದ ಏಳು ದೀಪಸ್ತಂಭ ಗಳನ್ನು ನಾನು ನೋಡಿದೆನು.
13 ಏಳು ದೀಪಸ್ತಂಭಗಳ ಮಧ್ಯದಲ್ಲಿ ಮನುಷ್ಯಕುಮಾರನಂತಿದ್ದಾತನನ್ನು ಕಂಡೆನು. ಆತನು ಪಾದದವರೆಗೆ ಇರುವ ನಿಲುವಂಗಿಯನ್ನು ತೊಟ್ಟು ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು.
14 ಆತನ ತಲೆ ಮತ್ತು ಕೂದಲು ಬಿಳೀ ಉಣ್ಣೆಯಂತೆಯೂ ಹಿಮದಂತೆಯೂ ಬೆಳ್ಳಗಿತ್ತು. ಆತನ ಕಣ್ಣುಗಳು ಬೆಂಕಿಯ ಉರಿಯಂತೆ ಇದ್ದವು.
15 ಆತನ ಪಾದಗಳು ಕುಲುಮೆ ಯಲ್ಲಿ ಕಾಯಿಸಿದ ಶುದ್ಧವಾದ ತಾಮ್ರದಂತೆಯೂ ಆತನ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು.
16 ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು; ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಟಿತು. ಆತನ ಮುಖವು ಸೂರ್ಯನು ತನ್ನ ಬಲದಲ್ಲಿ ಪ್ರಕಾಶಿಸುವಂತಿತ್ತು.
17 ನಾನು ಆತನನ್ನು ಕಂಡಾಗ ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ದೆನು. ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು--ಹೆದರಬೇಡ, ನಾನು ಮೊದಲನೆಯ ವನೂ ಕಡೆಯವನೂ ಆಗಿದ್ದೇನೆ.
18 ಸತ್ತವನಾದೆನು,ಈಗ ಬದುಕುವವನಾಗಿದ್ದೇನೆ. ಇಗೋ, ನಾನು ಎಂದೆಂ ದಿಗೂ ಬದುಕುವವನಾಗಿದ್ದೇನೆ. ಆಮೆನ್‌. ನರಕದ ಮತ್ತು ಮರಣದ ಬೀಗದ ಕೈಗಳೂ ನನ್ನಲ್ಲಿ ಅವೆ.
19 ನೀನು ಕಂಡವುಗಳನ್ನೂ ಈಗ ನಡೆಯುತ್ತಿರುವವು ಗಳನ್ನೂ ಇನ್ನು ಮುಂದೆ ಆಗಬೇಕಾದವುಗಳನ್ನೂ ಬರೆ.ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ಮರ್ಮವನ್ನು ಬರೆ. ಏಳು ನಕ್ಷತ್ರಗಳು ಏಳು ಸಭೆಗಳ ದೂತರು; ನೀನು ಕಂಡ ಏಳು ದೀಪಸ್ತಂಭಗಳು ಏಳು ಸಭೆಗಳು ಎಂದು ಹೇಳಿದನು.
20 ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ಮರ್ಮವನ್ನು ಬರೆ. ಏಳು ನಕ್ಷತ್ರಗಳು ಏಳು ಸಭೆಗಳ ದೂತರು; ನೀನು ಕಂಡ ಏಳು ದೀಪಸ್ತಂಭಗಳು ಏಳು ಸಭೆಗಳು ಎಂದು ಹೇಳಿದನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×