Bible Language

Psalms 46:9 (ERVKN) Easy to Read Version - Kannadam

1 ದೇವರು ನಮಗೆ ಆಶ್ರಯವೂ ಬಲವೂ ಆಗಿದ್ದಾನೆ. ಆತನು ಆಪತ್ತಿನಲ್ಲಿ ನಮಗೆ ಸಹಾಯಮಾಡಲು ಸದಾ ಸಿದ್ಧನಾಗಿರುವನು.
2 ಆದ್ದರಿಂದ ಭೂಮಿಯು ನಡುಗಿದರೂ ಬೆಟ್ಟಗಳು ಸಮುದ್ರದೊಳಗೆ ಮುಳುಗಿಹೋದರೂ ನಮಗೇನೂ ಭಯವಿಲ್ಲ.
3 ಸಮುದ್ರಗಳು ಭೋರ್ಗರೆಯುತ್ತಾ ನೊರೆಕಾರಿದರೂ ಅವುಗಳ ಅಲ್ಲೋಲಕಲ್ಲೋಲಗಳಿಂದ ಬೆಟ್ಟಗಳು ನಡುಗಿದರೂ ನಮಗೇನೂ ಭಯವಿಲ್ಲ.
4 ಒಂದು ನದಿ ಅದೆ; ಅದರ ಕಾಲುವೆಗಳು ಮಹೋನ್ನತನಾದ ದೇವರ ಪವಿತ್ರ ಪಟ್ಟಣವಾಗಿರುವ ದೇವನಗರವನ್ನು ಸಂತೋಷಪಡಿಸುತ್ತದೆ.
5 ದೇವರು ಪಟ್ಟಣದಲ್ಲಿದ್ದಾನೆ, ಆದ್ದರಿಂದ ಅದೆಂದಿಗೂ ನಾಶವಾಗುವುದಿಲ್ಲ. ಸೂರ್ಯೋದಯಕ್ಕಿಂತ ಮೊದಲೇ ದೇವರು ಅದರ ಸಹಾಯಕ್ಕಾಗಿ ಬರುವನು.
6 ಆತನು ಗರ್ಜಿಸಲು, ಜನಾಂಗಗಳು ಭಯದಿಂದ ನಡುಗುತ್ತವೆ, ರಾಷ್ಟ್ರಗಳು ಬಿದ್ದುಹೋಗುತ್ತವೆ; ಭೂಮಿಯು ಕರಗಿಹೋಗುವುದು.
7 ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ. ಯಾಕೋಬನ ದೇವರು ನಮ್ಮ ಆಶ್ರಯದುರ್ಗವಾಗಿದ್ದಾನೆ.
8 ಬನ್ನಿರಿ, ಯೆಹೋವನ ಕಾರ್ಯಗಳನ್ನು ನೋಡಿರಿ; ಭೂಮಿಯ ಮೇಲೆ ಆತನು ಮಾಡುತ್ತಿರುವ ಭಯಂಕರವಾದ ಕಾರ್ಯಗಳನ್ನು ನೋಡಿರಿ.
9 ಇಡೀ ಪ್ರಪಂಚದಲ್ಲಿ ಆತನು ಯುದ್ಧವನ್ನು ನಿಲ್ಲಿಸುವನು; ಬಿಲ್ಲುಗಳನ್ನೂ ಗುರಾಣಿಗಳನ್ನೂ ಮುರಿದು ಹಾಕುವನು; ಗುರಾಣಿಗಳನ್ನು ಬೆಂಕಿಯಿಂದ ಸುಟ್ಟುಹಾಕುವನು.
10 ದೇವರು ಇಂತೆನ್ನುವನು: “ಹೋರಾಡುವುದನ್ನು ನಿಲ್ಲಿಸಿ, ನಾನೇ ದೇವರೆಂಬುದನ್ನು ಕಲಿತುಕೊಳ್ಳಿ! ನಾನು ಜನಾಂಗಗಳನ್ನು ಸೋಲಿಸುವೆನು! ಇಡೀ ಲೋಕವನ್ನು ಹತೋಟಿಗೆ ತೆಗೆದುಕೊಳ್ಳುವೆನು!”
11 ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ. ಯಾಕೋಬನ ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ.
1 To the chief Musician H5329 for the sons H1121 L-CMP of Korah H7141 , A Song H7892 upon H5921 PREP Alamoth H5961 . God H430 EDP is our refuge H4268 and strength H5797 , a very H3966 ADV present H4672 VNQ3MS help H5833 in trouble H6869 .
2 Therefore H5921 PREP will not H3808 NADV we fear H3372 , though the earth H776 NFS be removed H4171 , and though the mountains H2022 NMP be carried H4131 into the midst H3820 of the sea H3220 ;
3 Though the waters H4325 thereof roar H1993 and be troubled H2560 , though the mountains H2022 NMP shake H7493 with the swelling H1346 thereof . Selah H5542 .
4 There is a river H5104 NMS , the streams H6388 whereof shall make glad H8055 the city H5892 GFS of God H430 EDP , the holy H6918 place of the tabernacles H4908 of the most High H5945 AMS .
5 God H430 EDP is in the midst H7130 of her ; she shall not H1077 ADV be moved H4131 : God H430 EDP shall help H5826 her , and that right H6437 early H1242 .
6 The heathen H1471 NMP raged H1993 , the kingdoms H4467 were moved H4131 : he uttered H5414 VQQ3MS his voice H6963 B-CMS-3MS , the earth H776 GFS melted H4127 .
7 The LORD H3068 EDS of hosts H6635 is with H5973 PREP-1MP us ; the God H430 CDP of Jacob H3290 is our refuge H4869 . Selah H5542 .
8 Come H1980 , behold H2372 the works H4659 of the LORD H3068 EDS , what H834 RPRO desolations H8047 he hath made H7760 VQQ3MS in the earth H776 B-GFS .
9 He maketh wars H4421 to cease H7673 unto H5704 PREP the end H7097 of the earth H776 D-GFS ; he breaketh H7665 the bow H7198 CFS , and cutteth H7112 the spear H2595 NFS in sunder ; he burneth H8313 the chariot H5699 in the fire H784 .
10 Be still H7503 , and know H3045 that H3588 CONJ I H595 PPRO-1MS am God H430 EDP : I will be exalted H7311 among the heathen H1471 , I will be exalted H7311 in the earth H776 B-GFS .
11 The LORD H3068 EDS of hosts H6635 is with H5973 PREP-1MP us ; the God H430 NAME-4MP of Jacob H3290 is our refuge H4869 . Selah H5542 .