Bible Language
Kannadam Old BSI Version

:

KNV
1. ಇಸ್ರಾಯೇಲೆಂಬ ಹೆಸರಿನವರೂ ಯೆಹೂದವೆಂಬ ಒರತೆಯಿಂದ ಬಂದವರೂ ಆದ ಯಾಕೋಬನ ಮನೆತನದವರೇ, ಇದನ್ನು ಕೇಳಿರಿ; ಕರ್ತನ ಹೆಸರಿನ ಮೇಲೆ ಆಣೆಯಿಟ್ಟು, ಇಸ್ರಾಯೇಲಿನ ದೇವರನ್ನು ಸ್ಮರಿಸುತ್ತೀರಿ. ಆದರೆ ಸತ್ಯದಿಂದಲೂ ಅಥವಾ ನೀತಿಯಿಂದಲೂ ಅಲ್ಲ.
1. Hear H8085 ye this H2063 , O house H1004 of Jacob H3290 , which are called H7121 by the name H8034 of Israel H3478 , and are come forth H3318 out of the waters H4480 H4325 of Judah H3063 , which swear H7650 by the name H8034 of the LORD H3068 , and make mention H2142 of the God H430 of Israel H3478 , but not H3808 in truth H571 , nor H3808 in righteousness H6666 .
2. ಅವರು ತಾವು ಪರಿಶುದ್ಧ ಪಟ್ಟಣದವರು ಎಂದು ಇಸ್ರಾಯೇಲಿನ ದೇವರ ಮೇಲೆ ಆತುಕೊಳ್ಳುತ್ತಾರೆ. ಸೈನ್ಯಗಳ ಕರ್ತನು ಎಂಬದು ಆತನ ಹೆಸರು.
2. For H3588 they call themselves H7121 of the holy H6944 city H4480 H5892 , and stay themselves H5564 upon H5921 the God H430 of Israel H3478 ; The LORD H3068 of hosts H6635 is his name H8034 .
3. ಆರಂಭದಲ್ಲೇ ಹಳೇ ಸಂಗತಿಗಳನ್ನು ನಾನು ಪ್ರಕಟಿಸಿದ್ದೇನೆ. ಅವು ನನ್ನ ಬಾಯಿಂದ ಹೊರಟವು ಮತ್ತು ನಾನು ಅವುಗಳನ್ನು ತೋರಿಸಿದ್ದೇನೆ. ನಾನು ತಟ್ಟನೆ ನಡೆಸಲು ಅವು ನೆರವೇರಿದವು.
3. I have declared H5046 the former things H7223 from the beginning H4480 H227 ; and they went forth H3318 out of my mouth H4480 H6310 , and I showed H8085 them ; I did H6213 them suddenly H6597 , and they came to pass H935 .
4. ನೀನು ಹಟಗಾರ, ನಿನ್ನ ಕತ್ತಿನ ನರವು ಕಬ್ಬಿಣ, ನಿನ್ನ ಹಣೆ ಹಿತ್ತಾಳೆ ಎಂದು ನಾನು ತಿಳಿದುಕೊಂಡಿದ್ದೇನೆ.
4. Because I knew H4480 H3045 that H3588 thou H859 art obstinate H7186 , and thy neck H6203 is an iron H1270 sinew H1517 , and thy brow H4696 brass H5154 ;
5. ಆದದರಿಂದಲೇ ಕಾರ್ಯ ಗಳನ್ನು ನನ್ನ ವಿಗ್ರಹವು ನಡಿಸಿದೆ, ನನ್ನ ಕೆತ್ತಿದ ವಿಗ್ರಹ ಮತ್ತು ಎರಕದ ವಿಗ್ರಹ ಇವುಗಳನ್ನು ವಿಧಿಸಿದೆ ಎಂದು ನೀನು ಹೇಳಿಕೊಳ್ಳದಂತೆ ನಾನು ಪುರಾತನ ಕಾಲದಲ್ಲಿಯೇ ತಿಳಿಸಿದೆನು.
5. I have even from the beginning H4480 H227 declared H5046 it to thee; before H2962 it came to pass H935 I showed H8085 it thee: lest H6435 thou shouldest say H559 , Mine idol H6090 hath done H6213 them , and my graven image H6459 , and my molten image H5262 , hath commanded H6680 them.
6. ನೀನು ಕೇಳಿದ್ದೀ; ಇವೆಲ್ಲ ವುಗಳನ್ನು ದೃಷ್ಟಿಸು; ನೀವು ಅದನ್ನು ತಿಳಿಸದೇ ಇದ್ದಿರೋ? ಇಂದಿನಿಂದ ಹೊಸ ಸಂಗತಿಗಳನ್ನು ನೀನು ತಿಳಿಯದಿದ್ದ ಗುಪ್ತವಾದ ವಿಷಯಗಳನ್ನು ನಿನಗೆ ಅರು ಹುತ್ತೇನೆ.
6. Thou hast heard H8085 , see H2372 all H3605 this ; and will not H3808 ye H859 declare H5046 it ? I have showed H8085 thee new things H2319 from this time H4480 H6258 , even hidden things H5341 , and thou didst not H3808 know H3045 them.
7. ಆರಂಭದಲ್ಲಿ ಆಗದಿದ್ದವುಗಳು ಈಗ ಉಂಟಾಗಿವೆ; ಇಗೋ, ಅವು ನನಗೆ ತಿಳಿದಿದ್ದವೆಂದು ನೀನು ಹೇಳದಂತೆ ದಿನಕ್ಕೆ ಮುಂಚೆಯೇ ಅವು ಗಳನ್ನು ಕುರಿತು ನಿನಗೆ ಕೇಳಗೊಡಿಸಲಿಲ್ಲ.
7. They are created H1254 now H6258 , and not H3808 from the beginning H4480 H227 ; even before H6440 the day H3117 when thou heardest H8085 them not H3808 ; lest H6435 thou shouldest say H559 , Behold H2009 , I knew H3045 them.
8. ಹೌದು, ನೀನು ಕೇಳಿಲ್ಲ, ತಿಳಿದೂ ಇಲ್ಲ; ಪುರಾತನ ಕಾಲದಿಂದ ನಿನ್ನ ಕಿವಿಯು ತೆರೆದೇ ಇಲ್ಲ; ಯಾಕಂದರೆ ನೀನು ದೊಡ್ಡ ವಂಚಕನು ಎಂದೂ ಗರ್ಭದಿಂದಲೇ ನೀನು ದ್ರೋಹಿಯೆಂದೂ ನಾನು ತಿಳಿದುಕೊಂಡಿದ್ದೇನೆ.
8. Yea H1571 , thou heardest H8085 not H3808 ; yea H1571 , thou knewest H3045 not H3808 ; yea H1571 , from that time H4480 H227 that thine ear H241 was not H3808 opened H6605 : for H3588 I knew H3045 that thou wouldest deal very treacherously H898 H898 , and wast called H7121 a transgressor H6586 from the womb H4480 H990 .
9. ನನ್ನ ಹೆಸರು ಕೆಡದಂತೆ ನನ್ನ ಕೋಪವನ್ನು ತಡೆ ಮಾಡಿದೆ. ನನ್ನ ಸ್ತುತಿಗೆ ಕಳಂಕಬಾರದಂತೆ ನಿನ್ನನ್ನು ನಿರ್ಮೂಲಮಾಡದೆ ತಾಳಿಕೊಳ್ಳುವೆನು.
9. For my name's sake H4616 H8034 will I defer H748 mine anger H639 , and for my praise H8416 will I refrain H2413 for thee , that I cut thee not off H3772 H1115 .
10. ಇಗೋ, ನಾನು ನಿನ್ನನ್ನು ಶೋಧಿಸಿದ್ದೇನೆ; ಆದರೆ ಬೆಳ್ಳಿಯಂತೆ ಅಲ್ಲ; ಸಂಕಟದ ಕುಲುಮೆಯಿಂದ ನಿನ್ನನ್ನು ಆದು ಕೊಂಡಿದ್ದೇನೆ.
10. Behold H2009 , I have refined H6884 thee , but not H3808 with silver H3701 ; I have chosen H977 thee in the furnace H3564 of affliction H6040 .
11. ನನಗಾಗಿಯೇ, ನನಗೋಸ್ಕರವೇ, ಇದನ್ನು ಮಾಡುವೆನು; ನನ್ನ ಹೆಸರು ಯಾಕೆ ಅಪವಿತ್ರ ವಾಗುವದು? ನನ್ನ ಮಹಿಮೆಯನ್ನು ನಾನು ಮತ್ತೊ ಬ್ಬನಿಗೆ ಸಲ್ಲಗೊಡಿಸೆನು.
11. For mine own sake H4616 , even for mine own sake H4616 , will I do H6213 it : for H3588 how H349 should my name be polluted H2490 ? and I will not H3808 give H5414 my glory H3519 unto another H312 .
12. ಯಾಕೋಬೇ, ನಾನು ಕರೆದ ಇಸ್ರಾಯೇಲೇ, ನನ್ನ ಕಡೆಗೆ ಕಿವಿಗೊಡು; ಆತನು--ನಾನೇ; ನಾನೇ ಮೊದಲನೆಯವನು, ನಾನೇ ಕಡೆಯವನು.
12. Hearken H8085 unto H413 me , O Jacob H3290 and Israel H3478 , my called H7121 ; I H589 am he H1931 ; I H589 am the first H7223 , I H589 also H637 am the last H314 .
13. ನನ್ನ ಕೈ ಭೂಮಿಗೆ ಅಸ್ತಿವಾರವನ್ನು ಹಾಕಿತು; ನನ್ನ ಬಲಗೈ ಆಕಾಶವನ್ನು ಹರಡಿತು; ನಾನು ಅವುಗಳನ್ನು ಕರೆಯಲು ಅವು ಒಟ್ಟಾಗಿ ನಿಂತುಕೊಂಡವು.
13. Mine hand H3027 also H637 hath laid the foundation H3245 of the earth H776 , and my right hand H3225 hath spanned H2946 the heavens H8064 : when I H589 call H7121 unto H413 them , they stand up H5975 together H3162 .
14. ನೀವೆಲ್ಲರೂ ಕೂಡಿಕೊಂಡು ಕೇಳಿರಿ. ಅವುಗಳ ಮಧ್ಯದಲ್ಲಿ ಸಂಗತಿಗಳನ್ನು ಪ್ರಕಟಿಸಿದವರು ಯಾರು? ಕರ್ತನು ಅವನನ್ನು ಪ್ರೀತಿಮಾಡಿದ್ದಾನೆ. ಆತನು ಬಾಬೆಲಿನಲ್ಲಿ ಅವನ ಇಷ್ಟವನ್ನು ನೆರವೇರಿಸುವನು; ಆತನ ಹಸ್ತವು ಕಸ್ದೀಯರ ಮೇಲಿರುವದು.
14. All H3605 ye , assemble yourselves H6908 , and hear H8085 ; which H4310 among them hath declared H5046 H853 these H428 things ? The LORD H3068 hath loved H157 him : he will do H6213 his pleasure H2656 on Babylon H894 , and his arm H2220 shall be on the Chaldeans H3778 .
15. ನಾನೇ ನಾನಾಗಿಯೇ ಮಾತಾಡಿದ್ದೇನೆ; ಹೌದು, ನಾನು ಅವನನ್ನು ಕರೆದು ಬರಮಾಡಿದ್ದೇನೆ; ಅವನು ಅವನ ಮಾರ್ಗವನ್ನು ಏಳಿಗೆ ಪಡಿಸುವನು.
15. I H589 , even I H589 , have spoken H1696 ; yea H637 , I have called H7121 him : I have brought H935 him , and he shall make his way H1870 prosperous H6743 .
16. ನನ್ನ ಸವಿಾಪಕ್ಕೆ ಬಂದು ಇದನ್ನು ಕೇಳಿರಿ; ಆದಿಯಿಂದಲೂ ನಾನು ಗುಟ್ಟಾಗಿ ಮಾತಾಡಲಿಲ್ಲ, ಅಂದಿನಿಂದಲೂ ಅಲ್ಲಿ ನಾನು ಇದ್ದೇನೆ; ಈಗ ದೇವರಾದ ಕರ್ತನು ಆತನ ಆತ್ಮ ದೊಡನೆ ನನ್ನನ್ನು ಕಳುಹಿಸಿದ್ದಾನೆ.
16. Come ye near H7126 unto H413 me, hear H8085 ye this H2063 ; I have not H3808 spoken H1696 in secret H5643 from the beginning H4480 H7218 ; from the time H4480 H6256 that it was H1961 , there H8033 am I H589 : and now H6258 the Lord H136 GOD H3069 , and his Spirit H7307 , hath sent H7971 me.
17. ನಿನ್ನ ವಿಮೋಚ ಕನೂ ಇಸ್ರಾಯೇಲಿನ ಪರಿಶುದ್ಧನೂ ಆಗಿರುವ ಕರ್ತನು ಹೀಗೆನ್ನುತ್ತಾನೆ--ನಿನ್ನ ಉಪಯೋಗಕ್ಕಾಗಿ ನಿನಗೆ ಬೋಧಿಸುವವನೂ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡಿಸುವವನೂ ಆದ ನಾನೇ ನಿನ್ನ ಕರ್ತನೂ ನಿನ್ನ ದೇವರೂ ಆಗಿದ್ದೇನೆ.
17. Thus H3541 saith H559 the LORD H3068 , thy Redeemer H1350 , the Holy One H6918 of Israel H3478 ; I H589 am the Lord H3068 thy God H430 which teacheth H3925 thee to profit H3276 , which leadeth H1869 thee by the way H1870 that thou shouldest go H1980 .
18. ಓ, ನೀನು ನನ್ನ ಆಜ್ಞೆಗಳಿಗೆ ಕಿವಿಗೊಟ್ಟಿದ್ದರೆ ಚೆನ್ನಾಗಿತ್ತು! ಆಗ ನಿನ್ನ ಸಮಾಧಾನವು ನದಿಯಂತೆಯೂ ನಿನ್ನ ನೀತಿಯು ಸಮುದ್ರದ ಅಲೆಗಳಂತೆಯೂ ಇರುತ್ತಿದ್ದವು;
18. O that H3863 thou hadst hearkened H7181 to my commandments H4687 ! then had thy peace H7965 been H1961 as a river H5104 , and thy righteousness H6666 as the waves H1530 of the sea H3220 :
19. ನಿನ್ನ ಸಂತಾನವು ಸಹ ಹರಳಿನಂತೆಯೂ ನಿನ್ನ ಹೊಟ್ಟೆಯಲ್ಲಿ ಹುಟ್ಟುವವರು ದಪ್ಪ ಮರಳಿನಂತೆಯೂ ಇರುವರು; ಅವರ ಹೆಸರು ತೆಗೆದುಹಾಕಲ್ಪಡದೆ ನನ್ನ ಸಮ್ಮುಖದಿಂದ ನಾಶವಾಗದೆ ಇರುತ್ತಿತ್ತು.
19. Thy seed H2233 also had been H1961 as the sand H2344 , and the offspring H6631 of thy bowels H4578 like the gravel H4579 thereof ; his name H8034 should not H3808 have been cut off H3772 nor H3808 destroyed H8045 from before H4480 H6440 me.
20. ಬಾಬೆಲಿನಿಂದ ಹೊರಡಿರಿ, ಕಸ್ದೀಯರ ಕಡೆ ಯಿಂದ ಓಡಿಹೋಗಿರಿ; ಹರ್ಷ ಧ್ವನಿಯಿಂದ ಇದನ್ನು ಹೇಳಿ ಪ್ರಕಟಿಸಿರಿ, ಭೂಮಿಯ ಕಟ್ಟಕಡೆಯವರೆಗೂ ಪ್ರಚಾರಪಡಿಸಿರಿ; ಕರ್ತನು ತನ್ನ ಸೇವಕನಾದ ಯಾಕೋಬನನ್ನು ವಿಮೋಚಿಸಿದ್ದಾನೆಂದು ನೀವು ಹೇಳಿರಿ.
20. Go ye forth H3318 of Babylon H4480 H894 , flee H1272 ye from the Chaldeans H4480 H3778 , with a voice H6963 of singing H7440 declare H5046 ye, tell H8085 this H2063 , utter H3318 it even to H5704 the end H7097 of the earth H776 ; say H559 ye , The LORD H3068 hath redeemed H1350 his servant H5650 Jacob H3290 .
21. ಆತನು ಅವರನ್ನು ಮರುಭೂಮಿಯಲ್ಲಿ ನಡೆಸಿದಾಗ ಅವರು ದಾಹಗೊಳ್ಳಲಿಲ್ಲ; ಅವರಿಗಾಗಿ ನೀರನ್ನು ಬಂಡೆಯೊಳಗಿಂದ ಹರಿಸಿದನು; ಆತನು ಬಂಡೆಯನ್ನು ಸೀಳಲು ನೀರು ರಭಸದಿಂದ ಹೊರಗೆ ಬಂತು;
21. And they thirsted H6770 not H3808 when he led H1980 them through the deserts H2723 : he caused the waters H4325 to flow H5140 out of the rock H4480 H6697 for them : he cleaved H1234 the rock H6697 also , and the waters H4325 gushed out H2100 .
22. ದುಷ್ಟರಿಗೆ ಸಮಾಧಾನವೇ ಇಲ್ಲ ಎಂದು ಕರ್ತನು ನುಡಿಯುತ್ತಾನೆ.
22. There is no H369 peace H7965 , saith H559 the LORD H3068 , unto the wicked H7563 .