Bible Language
Kannadam Old BSI Version

:
-

1. ಕರ್ತನಲ್ಲಿ ಭರವಸವಿಡುವವರು ಚೀಯೋನ್ ಪರ್ವತದ ಹಾಗಿ ದ್ದಾರೆ; ಅದು ಕದಲದೆ ಯುಗಯುಗಕ್ಕೂ ಇರುವದು.
2. ಯೆರೂಸಲೇಮಿನ ಸುತ್ತಲೂ ಬೆಟ್ಟಗಳಿರುವಂತೆ ಕರ್ತನು ಈಗಿನಿಂದ ಯುಗಯುಗಕ್ಕೂ ತನ್ನ ಜನರ ಸುತ್ತಲೂ ಇದ್ದಾನೆ.
3. ನೀತಿವಂತರು ತಮ್ಮ ಕೈಗಳನ್ನು ಅನ್ಯಾಯಕ್ಕೆ ಚಾಚದ ಹಾಗೆ, ದುಷ್ಟನ ಕೋಲು ನೀತಿವಂತರ ಸ್ವಾಸ್ತ್ಯದ ಮೇಲೆ ನೆಲೆಯಾಗಿರುವದಿಲ್ಲ.
4. ಕರ್ತನೇ, ಒಳ್ಳೆಯವರಿಗೂ ಯಥಾರ್ಥ ಹೃದಯವುಳ್ಳವರಿಗೂ ಒಳ್ಳೇದನ್ನು ಮಾಡು.
5. ಆದರೆ ತಮ್ಮ ಡೊಂಕು ಮಾರ್ಗಗಳಲ್ಲಿ ತಿರುಗುವವರನ್ನು ದುಷ್ಟತನ ಮಾಡುವವರ ಸಂಗಡ ಕರ್ತನು ಹೋಗ ಮಾಡುವನು. ಇಸ್ರಾಯೇಲಿನ ಮೇಲೆ ಸಮಾಧಾನ ವಿರುವದು.