Bible Versions
Bible Books

Psalms 56 (KNV) Kannadam Old BSI Version

1 ದೇವರೇ, ನನ್ನನ್ನು ಕರುಣಿಸು; ಮನುಷ್ಯನು ನನ್ನನ್ನು ನುಂಗಬೇಕೆಂದಿದ್ದಾನೆ; ದಿನವೆಲ್ಲಾ ಯುದ್ಧಮಾಡುತ್ತಾ ನನ್ನನ್ನು ಬಾಧಿಸುತ್ತಾನೆ.
2 ಅತ್ಯುನ್ನತನೇ, ನನ್ನ ವಿರೋಧಿಗಳು ದಿನವೆಲ್ಲಾ ನನ್ನನ್ನು ನುಂಗಬೇಕೆಂದಿದ್ದಾರೆ; ನನಗೆ ವಿರೋಧವಾಗಿ ಗರ್ವದಿಂದ ಯುದ್ಧಮಾಡುವವರು ಅನೇಕರಾಗಿದ್ದಾರೆ.
3 ನನಗೆ ಹೆದರಿಕೆ ಉಂಟಾದಾಗ ನಿನ್ನಲ್ಲಿ ಭರವಸವಿ ಡುವೆನು.
4 ದೇವರಲ್ಲಿ ಆತನ ವಾಕ್ಯವನ್ನು ನಾನು ಸ್ತುತಿಸುವೆನು; ದೇವರಲ್ಲಿ ನಾನು ಭರವಸವಿಟ್ಟಿದ್ದೇನೆ; ನಾನು ಭಯಪಡೆನು, ಮನುಷ್ಯನು ನನಗೆ ಏನು ಮಾಡಬಲ್ಲನು?
5 ಪ್ರತಿದಿನ ಅವರು ನನ್ನ ಮಾತುಗಳನ್ನು ಅಪಾರ್ಥ ಮಾಡುತ್ತಾರೆ. ನನಗೆ ವಿರೋಧವಾಗಿರುವ ಅವರ ಆಲೋಚನೆಗಳೆಲ್ಲಾ ನನ್ನ ಕೇಡಿಗಾಗಿವೆ.
6 ಅವರು ಕೂಡಿಕೊಂಡು ಹೊಂಚುಹಾಕುತ್ತಾರೆ; ನನ್ನ ಪ್ರಾಣಕ್ಕೆ ಕಾಯುವವರಾಗಿ ನನ್ನ ಹೆಜ್ಜೆಗಳನ್ನು ಗುರುತಿಸುತ್ತಾರೆ.
7 ಅಪರಾಧದಿಂದ ಅವರು ತಪ್ಪಿಸಿಕೊಂಡಾರೋ? ದೇವರೇ, ಕೋಪದಿಂದ ಜನರನ್ನು ಕೆಡವಿಹಾಕು.
8 ನನ್ನ ಅಲೆದಾಡುವಿಕೆಗಳನ್ನು ನೀನು ಲೆಕ್ಕಿಸಿದ್ದೀ; ನನ್ನ ಕಣ್ಣೀರನ್ನು ನಿನ್ನ ಬುದ್ದಲಿಯಲ್ಲಿ ಹಾಕು; ಅದು ನಿನ್ನ ಪುಸ್ತಕದಲ್ಲಿ ಇಲ್ಲವೋ?
9 ನಾನು ನಿನ್ನನ್ನು ಕೂಗಿ ಕೊಂಡಾಗ ನನ್ನ ಶತ್ರುಗಳು ಹಿಂದಿರುಗುವರು; ದೇವರು ನನಗಿದ್ದಾನೆ ಎಂಬದನ್ನು ಬಲ್ಲೆನು.
10 ದೇವ ರಲ್ಲಿ ಆತನ ವಾಕ್ಯವನ್ನು ನಾನು ಸ್ತುತಿಸುವೆನು; ಕರ್ತ ನಲ್ಲಿ ಆತನ ವಾಕ್ಯವನ್ನು ನಾನು ಸ್ತುತಿಸುವೆನು.
11 ದೇವರಲ್ಲಿ ನಾನು ಭರವಸವಿಟ್ಟಿದ್ದೇನೆ; ನಾನು ಭಯ ಪಡೆನು; ಮನುಷ್ಯನು ನನಗೆ ಏನು ಮಾಡಬಲ್ಲನು?
12 ದೇವರೇ, ನಿನ್ನ ಪ್ರಮಾಣಗಳು ನನ್ನ ಮೇಲೆ ಇವೆ; ನಾನು ಸ್ತೋತ್ರಗಳನ್ನು ನಿನಗೆ ಸಲ್ಲಿಸುವೆನು.ನನ್ನ ಪ್ರಾಣವನ್ನು ಮರಣದಿಂದ ಬಿಡಿಸಿದ್ದೀ, ಹಾಗೆ ನಾನು ಜೀವಿತರ ಬೆಳಕಿನಲ್ಲಿ ದೇವರ ಮುಂದೆ ನಡೆಯುವ ನನ್ನ ಪಾದಗಳನ್ನು ಬೀಳದಂತೆ ನೀನು ತಪ್ಪಿಸುವದಿಲ್ಲವೋ?
13 ನನ್ನ ಪ್ರಾಣವನ್ನು ಮರಣದಿಂದ ಬಿಡಿಸಿದ್ದೀ, ಹಾಗೆ ನಾನು ಜೀವಿತರ ಬೆಳಕಿನಲ್ಲಿ ದೇವರ ಮುಂದೆ ನಡೆಯುವ ನನ್ನ ಪಾದಗಳನ್ನು ಬೀಳದಂತೆ ನೀನು ತಪ್ಪಿಸುವದಿಲ್ಲವೋ?
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×