Bible Language Cross References for the verse John 12:0 in KNV
- 1 ಹದ್ರಾಕಿನ ದೇಶದ ವಿಷಯವಾದ ಕರ್ತನ ವಾಕ್ಯದ ಭಾರವು; ಅದು ದಮಸ್ಕದಲ್ಲಿ ತಂಗುವದು; ಮನುಷ್ಯನ ಕಣ್ಣುಗಳು ಇಸ್ರಾಯೇಲಿನ ಎಲ್ಲಾ ಗೋತ್ರಗಳಂತೆ ಕರ್ತನ ಕಡೆಗೆ ಇರುವವು.
- 2 ಹಮಾತು ಬಹಳ ಜ್ಞಾನವಿರುವ ತೂರ್ ಚೀದೋನ್ ಸಹ ಅದರ ಮೇರೆಯಾಗಿದೆ.
- 3 ತೂರ್ ತನಗಾಗಿ ಬಲವಾದ ಕೋಟೆಯನ್ನು ಕಟ್ಟಿಕೊಂಡು ಬೆಳ್ಳಿಯನ್ನು ಧೂಳಿನಂತೆಯೂ ಚೊಕ್ಕ ಬಂಗಾರವನ್ನು ಬೀದಿಗಳ ಕೆಸರಿನಂತೆಯೂ ಕೂಡಿಸಿಕೊಂಡಿತು.
- 4 ಇಗೋ, ಕರ್ತನು ಅದನ್ನು ಹೊರಗೆ ಹಾಕುವನು; ಸಮುದ್ರದಲ್ಲಿ ಅದರ ಬಲವನ್ನು ಹೊಡೆಯುವನು; ಅದು ಬೆಂಕಿ ಯಿಂದ ದಹಿಸಲ್ಪಡುವದು.
- 5 ಅಷ್ಕಲೋನು ನೋಡಿ ಭಯಪಡುವದು; ಗಾಜ ಸಹ ಅದನ್ನು ನೋಡಿ ಬಹಳವಾಗಿ ವೇದನೆಪಡುವದು, ಎಕ್ರೋನು ಸಹ; ಅದರ ನಿರೀಕ್ಷೆಯು ಅದನ್ನು ನಾಚಿಕೆ ಪಡಿಸಿತು; ಗಾಜ ದೊಳಗಿಂದ ಅರಸನು ನಾಶವಾಗುವನು; ಅಷ್ಕೆಲೋನು ನಿವಾಸವಿಲ್ಲದೆ ಇರುವದು.
- 6 ಅಷ್ಡೋದಿನಲ್ಲಿ ಜಾರತ್ವ ದಿಂದ ಹುಟ್ಟಿದವನು ವಾಸವಾಗುತ್ತಾನೆ; ಫಿಲಿಷ್ಟಿಯರ ಗರ್ವವನ್ನು ನಾನು ತೆಗೆದುಬಿಡುವೆನು.
- 7 ಅವನ ರಕ್ತ ವನ್ನು ಅವನ ಬಾಯೊಳಗಿಂದಲೂ ಅವನ ಅಸಹ್ಯ ಗಳನ್ನು ಅವನ ಹಲ್ಲುಗಳ ನಡುವೆಯಿಂದಲೂ ನಾನು ತೆಗೆದುಹಾಕುವೆನು; ಅವನು ಸಹ ನಮ್ಮ ದೇವರಿಗಾಗಿ ಉಳಿಯುವನು; ಯೆಹೂದದಲ್ಲಿ ಪ್ರಭುವಿನ ಹಾಗೆ ಇರುವನು; ಎಕ್ರೋನು ಯೆಬೂಸಿಯನ ಹಾಗೆ ಇರು ವನು.
- 8 ಇದಲ್ಲದೆ ಹೋಗುತ್ತಾ ಬರುತ್ತಾ ಇರುವವನ ನಿಮಿತ್ತವೂ ಸೈನ್ಯದ ನಿಮಿತ್ತವೂ ನನ್ನ ಮನೆಯ ಹತ್ತಿರ ಪಾಳೆಯಮಾಡುತ್ತೇನೆ; ಇನ್ನು ಮೇಲೆ ಉಪದ್ರ ಕೊಡುವವನು ಅವರ ಮೇಲೆ ಹಾದು ಹೋಗುವದಿಲ್ಲ; ಯಾಕಂದರೆ ಈಗ ನನ್ನ ಕಣ್ಣುಗಳಿಂದ ನೋಡಿದ್ದೇನೆ.
- 9 ಚೀಯೋನ್ ಕುಮಾರ್ತೆಯೇ, ಬಹಳವಾಗಿ ಉಲ್ಲಾಸಪಡು; ಯೆರೂಸಲೇಮಿನ ಕುಮಾರ್ತೆಯೇ, ಆರ್ಭಟಿಸು; ಇಗೋ, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಾನೆ; ಆತನು ನೀತಿವಂತನಾಗಿಯೂ ರಕ್ಷಿಸುವಾತ ನಾಗಿಯೂ ದೀನನಾಗಿಯೂ ಕತ್ತೆಯ ಮೇಲೆ ಹೌದು, ಕತ್ತೆಯ ಮರಿಯ ಮೇಲೆ ಹತ್ತಿದವನಾಗಿಯೂ ಬರು ತ್ತಾನೆ.
- 10 ಇದಲ್ಲದೆ ಎಫ್ರಾಯಾಮಿನೊಳಗಿಂದ ರಥ ಗಳನ್ನೂ ಯೆರೂಸಲೇಮಿನೊಳಗಿಂದ ಕುದುರೆಗಳನ್ನೂ ತೆಗೆದುಬಿಡುವೆನು; ಯುದ್ಧದ ಬಿಲ್ಲು ಸಹ ತೆಗೆದು ಹಾಕಲ್ಪಡುವದು; ಆತನು ಅನ್ಯ ಜನಾಂಗಗಳಿಗೆ ಸಮಾ ಧಾನವನ್ನು ಹೇಳುವನು; ಆತನ ದೊರೆತನವು ಸಮುದ್ರ ದಿಂದ ಸಮುದ್ರಕ್ಕೂ ನದಿಯಿಂದ ಭೂಮಿಯ ಅಂತ್ಯಗಳ ವರೆಗೂ ಇರುವದು.
- 11 ನಿನ್ನ ವಿಷಯವಾಗಿ ಸಹ ನಿನ್ನ ಒಡಂಬಡಿಕೆಯ ರಕ್ತದಿಂದ, ನಿನ್ನ ಸೆರೆಯವರನ್ನು ನೀರಿಲ್ಲದ ಕುಣಿಯೊ ಳಗಿಂದ ಕಳುಹಿಸಿಬಿಡುತ್ತೇನೆ.
- 12 ನಿರೀಕ್ಷೆಯ ಸೆರೆಯವರೇ, ಬಲವಾದ ದುರ್ಗಸ್ಥಾನಕ್ಕೆ ತಿರಿಗಿರಿ, ಎರಡ ರಷ್ಟು ನಿಮಗೆ ಕೊಡುವೆನೆಂದು ಈ ಹೊತ್ತೇ ಪ್ರಕಟಿ ಸುತ್ತೇನೆ.
- 13 ಯೆಹೂದವನ್ನು ನನಗಾಗಿ ಬೊಗ್ಗಿಸಿದಾಗ ಎಫ್ರಾಯಾಮನ್ನು ಬಿಲ್ಲುಗಳಿಂದ ತುಂಬಿಸಿದ್ದೇನೆ; ಚೀಯೋನೇ, ನಿನ್ನ ಕುಮಾರರನ್ನು ಗ್ರೀಕ್ ಕುಮಾರರಿಗೆ ವಿರೋಧವಾಗಿ ಎಬ್ಬಿಸಿ ನಿನ್ನನ್ನು ಶೂರನ ಕತ್ತಿಯಂತೆ ಮಾಡಿದ್ದೇನೆ.
- 14 ಇದಲ್ಲದೆ ಕರ್ತನು ಅವರ ಮೇಲೆ ಕಾಣಿಸಿಕೊಳ್ಳುವನು; ಆತನ ಬಾಣಗಳು ಮಿಂಚಿನ ಹಾಗೆ ಹೊರಡುವವು; ಕರ್ತನಾದ ದೇವರು ತುತೂರಿ ಯನ್ನು ಊದಿ, ದಕ್ಷಿಣದ ಸುಳಿಗಾಳಿಯಲ್ಲಿ ಹೋಗು ವನು.
- 15 ಸೈನ್ಯಗಳ ಕರ್ತನು ಅವರನ್ನು ಕಾಪಾಡುವನು; ಅವರು ನುಂಗಿ ಕವಣೆ ಕಲ್ಲುಗಳನ್ನು ಸ್ವಾಧೀನಮಾಡಿ ಕೊಳ್ಳುವರು; ಕುಡಿದು ದ್ರಾಕ್ಷಾರಸದಿಂದಾದ ಹಾಗೆ ಓಲಾಡುವರು, ಪಾತ್ರೆಯ ಹಾಗೆಯೂ ಬಲಿಪೀಠದ ಮೂಲೆಗಳ ಹಾಗೆಯೂ ತುಂಬಿರುವರು.
- 16 ಇದಲ್ಲದೆ ಅವರ ದೇವರಾದ ಕರ್ತನು ಆ ದಿವಸದಲ್ಲಿ ಅವರನ್ನು ತನ್ನ ಜನರ ಮಂದೆಯ ಹಾಗೆ ರಕ್ಷಿಸುವನು; ಅವರು ಕಿರೀಟದ ಕಲ್ಲುಗಳಂತೆ ಆತನ ದೇಶದ ಮೇಲೆ ಧ್ವಜವಾಗಿ ಎತ್ತಲ್ಪಡುವರು.
- 17 ಆತನ ಒಳ್ಳೇತನವು ಎಷ್ಟೋ ದೊಡ್ಡದು; ಆತನ ಸೌಂದರ್ಯವು ಎಷ್ಟು ಮಹತ್ತಾ ದದ್ದು! ಧಾನ್ಯವು ಯೌವನಸ್ಥರನ್ನೂ ದ್ರಾಕ್ಷಾರಸವು ಯುವತಿಯರನ್ನೂ ಹರ್ಷಗೊಳಿಸುವವು.
- 1 ಸಹೋದರರೇ, ಈ ಕಾಲಗಳನ್ನೂ ಗಳಿಗೆಗಳನ್ನೂ ಕುರಿತು ನಿಮಗೆ ಬರೆಯು ವದು ಅವಶ್ಯವಿಲ್ಲ.
- 2 ರಾತ್ರಿ ಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವ ದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ.
- 3 ಆದರೆ--ಸಮಾಧಾನವಾಗಿಯೂ ಸುರಕ್ಷಿತವಾಗಿಯೂ ಇರುತ್ತೇ ವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು.
- 4 ಆದರೆ ಸಹೋದರರೇ, ಆ ದಿನವು ಕಳ್ಳನಂತೆ ನಿಮ್ಮ ಮೇಲೆ ಬರತಕ್ಕದ್ದಲ್ಲ; ನೀವು ಕತ್ತಲೆಯಲ್ಲಿರುವವರಲ್ಲ.
- 5 ನೀವೆಲ್ಲರೂ ಬೆಳಕಿನ ಮಕ್ಕಳೂ ಹಗಲಿನ ಮಕ್ಕಳೂ ಆಗಿದ್ದೀರಷ್ಟೆ; ನಾವು ರಾತ್ರಿಯವರೂ ಅಲ್ಲ, ಕತ್ತಲೆ ಯವರೂ ಅಲ್ಲ.
- 6 ಆದಕಾರಣ ನಾವು ಇತರರಂತೆ ನಿದ್ರೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿ ರೋಣ.
- 7 ನಿದ್ರೆ ಮಾಡುವವರು ರಾತ್ರಿಯಲ್ಲಿ ನಿದ್ರೆ ಮಾಡುತ್ತಾರೆ. ಅಮಲೇರುವವರು ರಾತ್ರಿಯಲ್ಲಿ ಅಮ ಲೇರುತ್ತಾರೆ.
- 8 ನಾವಾದರೋ ಹಗಲಿನವರಾಗಿರಲಾಗಿ ವಿಶ್ವಾಸ ಪ್ರೀತಿಗಳೆಂಬ ಎದೆಕವಚವನ್ನೂ ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣವನ್ನೂ ಧರಿಸಿಕೊಂಡು ಸ್ವಸ್ಥ ಚಿತ್ತರಾಗಿರೋಣ.
- 9 ಯಾಕಂದರೆ ದೇವರು ನಮ್ಮನ್ನು ಕೋಪಕ್ಕೆ ಗುರಿಯಾಗುವಂತೆ ನೇಮಿಸದೆ ನಾವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕವಾಗಿ ರಕ್ಷಣೆಯನ್ನು ಹೊಂದುವಂತೆ ನೇಮಿಸಿದನು.
- 10 ನಾವು ಎಚ್ಚರವಾಗಿ ದ್ದರೂ ಸರಿಯೇ, ನಿದ್ರೆಯಲ್ಲಿದ್ದರೂ ಸರಿಯೇ, ತನ್ನ ಜೊತೆಯಲ್ಲಿಯೇ ನಾವು ಜೀವಿಸಬೇಕೆಂದು ಆತನು ನಮಗೋಸ್ಕರ ಸತ್ತನು.
- 11 ಆದದರಿಂದ ನೀವು ಈಗ ಮಾಡುತ್ತಿರುವ ಪ್ರಕಾರವೇ ಒಬ್ಬರನ್ನೊಬ್ಬರು ಸಂತೈಸಿ ಕೊಳ್ಳುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರ್ರಿ.
- 12 ಸಹೋದರರೇ, ಯಾರು ನಿಮ್ಮಲ್ಲಿ ಪ್ರಯಾಸಪಟ್ಟು ಕರ್ತನ ಕಾರ್ಯಗಳಲ್ಲಿ ನಿಮ್ಮ ಮೇಲೆ ಮುಖ್ಯಸ್ಥರಾಗಿದ್ದು ನಿಮಗೆ ಬುದ್ಧಿಹೇಳುತ್ತಾರೋ ಅವರನ್ನು ಲಕ್ಷಿಸಿರಿ.
- 13 ಇದಲ್ಲದೆ ಅವರ ಕೆಲಸದ ನಿಮಿತ್ತ ಅವರನ್ನು ಪ್ರೀತಿ ಯಿಂದ ಬಹಳವಾಗಿ ಸನ್ಮಾನ ಮಾಡಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇವೆ; ನಿಮ್ಮ ನಿಮ್ಮೊಳಗೆ ಸಮಾಧಾನವಾಗಿರ್ರಿ.
- 14 ಸಹೋದರರೇ, ಅಕ್ರಮವಾಗಿ ನಡೆಯುವವ ರನ್ನು ಎಚ್ಚರಿಸಿರಿ, ಮನಗುಂದಿದವರನ್ನಾದರಿಸಿರಿ. ಬಲ ಹೀನರಿಗೆ ಆಧಾರವಾಗಿರ್ರಿ. ಎಲ್ಲರಲ್ಲಿಯೂ ತಾಳ್ಮೆಯುಳ್ಳ ವರಾಗಿರ್ರಿ ಎಂದು ನಿಮ್ಮನ್ನು ಪ್ರಬೋಧಿಸುತ್ತೇವೆ.
- 15 ಯಾರೂ ಅಪಕಾರಕ್ಕೆ ಅಪಕಾರ ಮಾಡದಂತೆ ನೋಡಿ ಕೊಳ್ಳಿರಿ; ಯಾವಾಗಲೂ ನೀವು ಒಬ್ಬರಿಗೊಬ್ಬರು ಹಿತವನ್ನು ಮಾಡಿಕೊಂಡಿರುವದಲ್ಲದೆ ಎಲ್ಲರಿಗೂ ಹಿತ ವನ್ನು ಮಾಡುವವರಾಗಿರ್ರಿ.
- 16 ಯಾವಾಗಲೂ ಸಂತೋಷಿಸಿರಿ;
- 17 ಎಡೆಬಿಡದೆ ಪ್ರಾರ್ಥನೆ ಮಾಡಿರಿ.
- 18 ಎಲ್ಲಾದರಲ್ಲಿಯೂ ಕೃತಜ್ಞತಾ ಸ್ತುತಿ ಮಾಡಿರಿ; ಯಾಕಂದರೆ ಇದೇ ನಿಮ್ಮ ವಿಷಯ ವಾಗಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಚಿತ್ತವಾಗಿದೆ.
- 19 ಆತ್ಮನನ್ನು ನಂದಿಸಬೇಡಿರಿ;
- 20 ಪ್ರವಾದನೆಗಳನ್ನು ಹೀನೈಸಬೇಡಿರಿ;
- 21 ಆದರೆ ಎಲ್ಲವನ್ನು ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ.
- 22 ಸಕಲ ವಿಧವಾದ ಕೆಟ್ಟತನದ ತೋರಿಕೆಗೆ ದೂರವಾಗಿರ್ರಿ.
- 23 ಶಾಂತಿದಾಯಕನಾದ ದೇವರು ತಾನೇ ನಿಮ್ಮನ್ನು ಪರಿಪೂರ್ಣವಾಗಿ ಪವಿತ್ರ ಮಾಡಲಿ; ಇದಲ್ಲದೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಬರೋಣದಲ್ಲಿ ನಿಮ್ಮ ಆತ್ಮ ಪ್ರಾಣ ಶರೀರಗಳು ದೋಷವಿಲ್ಲದೆ ಸಂಪೂರ್ಣ ವಾಗಿ ಕಾಣಿಸುವಂತೆ ಮಾಡಲಿ.
- 24 ನಿಮ್ಮನ್ನು ಕರೆಯು ವಾತನು ನಂಬಿಗಸ್ತನು. ಆತನು ತನ್ನ ಕಾರ್ಯವನ್ನು ಸಾಧಿಸುವನು.
- 25 ಸಹೋದರರೇ, ನಮಗೋಸ್ಕರ ಪ್ರಾರ್ಥನೆ ಮಾಡಿರಿ.
- 26 ಪವಿತ್ರವಾದ ಮುದ್ದಿಟ್ಟು ಸಹೋದರ ರೆಲ್ಲರನ್ನೂ ವಂದಿಸಿರಿ.
- 27 ಈ ಪತ್ರಿಕೆಯನ್ನು ಪರಿಶುದ್ಧ ಸಹೋದರರೆಲ್ಲರಿಗೂ ಓದಿ ಹೇಳಬೇಕೆಂದು ನಿಮಗೆ ಕರ್ತನಿಂದ ಆಜ್ಞಾಪಿಸುತ್ತೇನೆ.
- 28 ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ. ಆಮೆನ್.