|
|
1. ಆಮೇಲೆ ಯೇಸು ಜನರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಇಲ್ಲಿ ನಿಂತಿರುವ ನಿಮ್ಮಲ್ಲಿ ಕೆಲವು ಜನರು ತಾವು ಸಾಯುವುದಕ್ಕೆ ಮುಂಚೆ ದೇವರ ರಾಜ್ಯವು ಅಧಿಕಾರದೊಡನೆ ಬರುವುದನ್ನು ನೋಡುತ್ತಾರೆ” ಎಂದು ಹೇಳಿದನು. PEPS
|
1. And G2532 he said G3004 unto them G846 , Verily G281 I say G3004 unto you G5213 , That G3754 there be G1526 some G5100 of them that stand G2476 here G5602 , which G3748 shall not G3364 taste G1089 of death G2288 , till G2193 G302 they have seen G1492 the G3588 kingdom G932 of God G2316 come G2064 with G1722 power G1411 .
|
2. {ಮೋಶೆ ಮತ್ತು ಎಲೀಯರೊಡನೆ ಯೇಸು} (ಮತ್ತಾಯ 17:1-13; ಲೂಕ 9:28-36) PS ಆರು ದಿನಗಳ ನಂತರ ಪೇತ್ರ, ಯಾಕೋಬ ಮತ್ತು ಯೋಹಾನರನ್ನು ಕರೆದುಕೊಂಡು ಯೇಸು ಎತ್ತರವಾದ ಬೆಟ್ಟದ ಮೇಲೆ ಹೋದನು. ಅಲ್ಲಿ ಅವರು ಮಾತ್ರ ಇದ್ದರು. ಈ ಶಿಷ್ಯರು ಯೇಸುವನ್ನು ನೋಡುತ್ತಿರಲು, ಇದ್ದಕ್ಕಿದ್ದಂತೆ ಆತನು ರೂಪಾಂತರ ಹೊಂದಿದನು.
|
2. And G2532 after G3326 six G1803 days G2250 Jesus G2424 taketh G3880 with him Peter G4074 , and G2532 James G2385 , and G2532 John G2491 , and G2532 leadeth them up G399 G846 into G1519 a high G5308 mountain G3735 apart by themselves G2596 G2398 G3441 : and G2532 he was transfigured G3339 before G1715 them G846 .
|
3. ಯೇಸುವಿನ ಬಟ್ಟೆಗಳು ಬಿಳುಪಾಗಿ ಹೊಳೆಯುತ್ತಿದ್ದವು. ಅಷ್ಟು ಬಿಳುಪಾದ ಬಟ್ಟೆಗಳನ್ನು ತಯಾರಿಸಲು ಸಾಧ್ಯವಿರಲಿಲ್ಲ.
|
3. And G2532 his G846 raiment G2440 became G1096 shining G4744 , exceeding G3029 white G3022 as G5613 snow G5510 ; so as G3634 no G3756 fuller G1102 on G1909 earth G1093 can G1410 white G3021 them.
|
4. ಆಗ ಮೋಶೆ ಮತ್ತು ಎಲೀಯ ಅಲ್ಲಿ ಪ್ರತ್ಯಕ್ಷರಾಗಿ ಯೇಸುವಿನೊಂದಿಗೆ ಮಾತಾಡುತ್ತಿದ್ದರು. PEPS
|
4. And G2532 there appeared G3700 unto them G846 Elijah G2243 with G4862 Moses G3475 : and G2532 they were G2258 talking with G4814 Jesus G2424 .
|
5. ಪೇತ್ರನು ಯೇಸುವಿಗೆ, “ಗುರುವೇ, ನಾವು ಇಲ್ಲೇ ಇರುವುದು ಒಳ್ಳೆಯದು. ನಾವು ಇಲ್ಲಿ ಮೂರು ಗುಡಾರಗಳನ್ನು ಹಾಕುತ್ತೇವೆ. ಒಂದು ನಿನಗೆ, ಒಂದು ಮೋಶೆಗೆ ಮತ್ತೊಂದು ಎಲೀಯನಿಗೆ” ಎಂದು ಹೇಳಿದನು.
|
5. And G2532 Peter G4074 answered G611 and said G3004 to Jesus G2424 , Master G4461 , it is G2076 good G2570 for us G2248 to be G1511 here G5602 : and G2532 let us make G4160 three G5140 tabernacles G4633 ; one G3391 for thee G4671 , and G2532 one G3391 for Moses G3475 , and G2532 one G3391 for Elijah G2243 .
|
6. ಪೇತ್ರನಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಏಕೆಂದರೆ ಅವನು ಮತ್ತು ಉಳಿದ ಇನ್ನಿಬ್ಬರು ಶಿಷ್ಯರು ಬಹಳ ಭಯಗೊಂಡಿದ್ದರು. PEPS
|
6. For G1063 he wist G1492 not G3756 what G5101 to say G2980 ; for G1063 they were G2258 sore afraid G1630 .
|
7. ಆಗ ಮೋಡವು ಬಂದು, ಅವರನ್ನು ಮುಸುಕಿತು. ಆ ಮೋಡದ ಒಳಗಿಂದ ಒಂದು ಧ್ವನಿಯು, “ಈತನು ನನ್ನ ಪ್ರಿಯ ಮಗನು. ಈತನಿಗೆ ವಿಧೇಯರಾಗಿ” ಎಂದು ಹೇಳಿತು. PEPS
|
7. And G2532 there was G1096 a cloud G3507 that overshadowed G1982 them G846 : and G2532 a voice G5456 came G2064 out of G1537 the G3588 cloud G3507 , saying G3004 , This G3778 is G2076 my G3450 beloved G27 Son G5207 : hear G191 him G846 .
|
8. ಆಗ ಪೇತ್ರ, ಯಾಕೋಬ ಮತ್ತು ಯೋಹಾನರು ಕಣ್ಣೆತ್ತಿ ನೋಡಿದಾಗ ಯೇಸು ಒಬ್ಬನೇ ಅಲ್ಲಿದ್ದನು. PEPS
|
8. And G2532 suddenly G1819 , when they had looked round about G4017 , they saw G1492 no man G3762 any more G3765 , save G235 Jesus G2424 only G3440 with G3326 themselves G1438 .
|
9. ಯೇಸು ಮತ್ತು ಆ ಶಿಷ್ಯರು ಹಿಂತಿರುಗಿ ಬೆಟ್ಟದಿಂದ ಕೆಳಗಿಳಿದು ಬರುತ್ತಿರುವಾಗ, ಆತನು ಅವರಿಗೆ, “ನೀವು ಬೆಟ್ಟದ ಮೇಲೆ ನೋಡಿದ ಸಂಗತಿಗಳ ಬಗ್ಗೆ ಯಾರಿಗೂ ಹೇಳಬೇಡಿ. ಮನುಷ್ಯಕುಮಾರನು ಸತ್ತು ಜೀವಂತವಾಗಿ ಎದ್ದುಬರುವವರೆಗೆ ಕಾದುಕೊಂಡಿರಿ” ಎಂದು ಆಜ್ಞಾಪಿಸಿದನು. PEPS
|
9. And G1161 as they G846 came down G2597 from G575 the G3588 mountain G3735 , he charged G1291 them G846 that G2443 they should tell G1334 no man G3367 what things G3739 they had seen G1492 , till G1508 G3752 the G3588 Son G5207 of man G444 were risen G450 from G1537 the dead G3498 .
|
10. ಆದ್ದರಿಂದ ಆ ಶಿಷ್ಯರು ಈ ಸಂಗತಿಗಳನ್ನು ಯಾರಿಗೂ ತಿಳಿಸಲಿಲ್ಲ. ಆದರೆ “ಸತ್ತು ಜೀವಂತವಾಗಿ ಎದ್ದುಬರುವುದು” ಎಂದರೇನು? ಎಂದು ತಮ್ಮತಮ್ಮಲ್ಲಿಯೇ ಚರ್ಚಿಸಿದರು.
|
10. And G2532 they kept G2902 that saying G3056 with G4314 themselves G1438 , questioning one with another G4802 what G5101 the G3588 rising G450 from G1537 the dead G3498 should mean G2076 .
|
11. ಶಿಷ್ಯರು ಯೇಸುವಿಗೆ, “ಎಲೀಯನೇ ಮೊದಲು ಬರಬೇಕೆಂದು ಧರ್ಮೋಪದೇಶಕರು ಹೇಳಲು ಕಾರಣವೇನು?” ಎಂದು ಕೇಳಿದರು. PEPS
|
11. And G2532 they asked G1905 him G846 , saying G3004 , Why say G3004 the G3588 scribes G1122 that G3754 Elijah G2243 must G1163 first G4412 come G2064 ?
|
12. ಯೇಸು ಅವರಿಗೆ, “ಎಲೀಯನೇ ಮೊದಲು ಬರಬೇಕೆಂದು ಅವರು ಹೇಳುವುದು ಸರಿ. ಎಲೀಯನು ಎಲ್ಲವನ್ನು ಸರಿಪಡಿಸುತ್ತಾನೆ. ಆದರೆ ಮನುಷ್ಯಕುಮಾರನು ಬಹಳ ಸಂಕಟವನ್ನು ಅನುಭವಿಸುವನೆಂತಲೂ ಜನರು ಆತನನ್ನು ಹೀನೈಸುವರೆಂತಲೂ ಪವಿತ್ರಗ್ರಂಥವು ಏಕೆ ಹೇಳುತ್ತದೆ?
|
12. And G1161 he G3588 answered G611 and told G2036 them G846 , Elijah G2243 verily G3303 cometh G2064 first G4412 , and restoreth G600 all things G3956 ; and G2532 how G4459 it is written G1125 of G1909 the G3588 Son G5207 of man G444 , that G2443 he must suffer G3958 many things G4183 , and G2532 be set at naught G1847 .
|
13. ಎಲೀಯನು ಈಗಾಗಲೇ ಬಂದಿದ್ದಾನೆಂದು ನಾನು ನಿಮಗೆ ಹೇಳುತ್ತೇನೆ ಮತ್ತು ಜನರು ತಮ್ಮ ಮನಸ್ಸಿಗೆ ಬಂದಂತೆ ಅವನಿಗೆ ಕೇಡನ್ನು ಮಾಡಿದರು. ಅವನಿಗೆ ಹೀಗಾಗುವುದೆಂದು ಪವಿತ್ರಗ್ರಂಥದಲ್ಲಿ ಮೊದಲೇ ಬರೆದಿತ್ತು” ಎಂದು ಉತ್ತರಿಸಿದನು. PEPS
|
13. But G235 I say G3004 unto you G5213 , That G3754 Elijah G2243 is indeed G2532 come G2064 , and G2532 they have done G4160 unto him G846 whatsoever G3745 they listed G2309 , as G2531 it is written G1125 of G1909 him G846 .
|
14. {ಯೇಸುವಿನಿಂದ ಕಾಯಿಲೆ ಹುಡುಗನಿಗೆ ಸ್ವಸ್ಥತೆ} (ಮತ್ತಾಯ 17:14-20; ಲೂಕ 9:37-43) PS ನಂತರ ಯೇಸು, ಪೇತ್ರ, ಯಾಕೋಬ ಮತ್ತು ಯೋಹಾನ ಇತರ ಶಿಷ್ಯರ ಬಳಿಗೆ ಹೋದರು. ಆ ಶಿಷ್ಯರ ಸುತ್ತಲೂ ಅನೇಕ ಜನರು ನೆರೆದಿದ್ದರು. ಧರ್ಮೋಪದೇಶಕರು ಅವರೊಡನೆ ವಾದ ಮಾಡುತ್ತಾ ಇದ್ದರು.
|
14. And G2532 when he came G2064 to G4314 his disciples G3101 , he saw G1492 a great G4183 multitude G3793 about G4012 them G846 , and G2532 the G3588 scribes G1122 questioning G4802 with them G846 .
|
15. ಆ ಜನರು ಯೇಸುವನ್ನು ನೋಡಿದಾಗ ಬಹಳ ಆಶ್ಚರ್ಯಪಟ್ಟು ಆತನನ್ನು ಸ್ವಾಗತಿಸಲು ಆತನ ಬಳಿಗೆ ಬಂದರು. PEPS
|
15. And G2532 straightway G2112 all G3956 the G3588 people G3793 , when they beheld G1492 him G846 , were greatly amazed G1568 , and G2532 running to him G4370 saluted G782 him G846 .
|
16. ಯೇಸು, “ನೀವು ಯಾವುದರ ಬಗ್ಗೆ ವಾದಿಸುತ್ತಿದ್ದೀರಿ?” ಎಂದು ಕೇಳಿದನು. PEPS
|
16. And G2532 he asked G1905 the G3588 scribes G1122 , What G5101 question G4802 ye with G4314 them G846 ?
|
17. ಒಬ್ಬನು, “ಗುರುವೇ, ನನ್ನ ಮಗನಿಗೆ ದೆವ್ವ ಹಿಡಿದಿದ್ದ ಕಾರಣ ನಾನು ಅವನನ್ನು ನಿನ್ನ ಶಿಷ್ಯರ ಬಳಿಗೆ ತಂದೆನು. ಅವನು ಮಾತಾಡಲಾರ.
|
17. And G2532 one G1520 of G1537 the G3588 multitude G3793 answered G611 and said G2036 , Master G1320 , I have brought G5342 unto G4314 thee G4571 my G3450 son G5207 , which hath G2192 a dumb G216 spirit G4151 ;
|
18. ಆ ದೆವ್ವವು ಅವನ ಮೇಲೆ ಆಕ್ರಮಣ ಮಾಡಿದಾಗಲೆಲ್ಲಾ ಅವನನ್ನು ನೆಲಕ್ಕೆ ಕೆಡವುತ್ತದೆ. ನನ್ನ ಮಗನು ಬಾಯಿಂದ ನೊರೆ ಸುರಿಸುತ್ತಾ ಹಲ್ಲುಗಳನ್ನು ಕಟಕಟನೆ ಕಡಿಯುತ್ತಾನೆ ಮತ್ತು ಬಹಳ ಬಿರುಸಾಗುತ್ತಾನೆ. ಅವನನ್ನು ಆ ದೆವ್ವದಿಂದ ಬಿಡಿಸುವಂತೆ ನಾನು ನಿನ್ನ ಶಿಷ್ಯರನ್ನು ಕೇಳಿಕೊಂಡೆನು. ಆದರೆ ಅವರಿಗೆ ಸಾಧ್ಯವಾಗಲಿಲ್ಲ” ಎಂದು ಹೇಳಿದನು. PEPS
|
18. And G2532 wheresoever G3699 G302 he taketh G2638 him G846 , he teareth G4486 him G846 : and G2532 he foameth G875 , and G2532 gnasheth G5149 with his G848 teeth G3599 , and G2532 pineth away G3583 : and G2532 I spake G2036 to thy G4675 disciples G3101 that G2443 they should cast him out G1544 G846 ; and G2532 they could G2480 not G3756 .
|
19. ಯೇಸು, “ವಿಶ್ವಾಸವಿಲ್ಲದ ಸಂತಾನವೇ, ನಾನು ನಿಮ್ಮೊಡನೆ ಇನ್ನೆಷ್ಟು ಕಾಲ ಇರಲಿ? ಇನ್ನೆಷ್ಟು ಕಾಲ ಸಹಿಸಿಕೊಳ್ಳಲಿ? ಆ ಹುಡುಗನನ್ನು ನನ್ನ ಬಳಿಗೆ ತನ್ನಿರಿ!” ಎಂದು ಉತ್ತರಿಸಿದನು. PEPS
|
19. G1161 He G3588 answereth G611 him G846 , and saith G3004 , O G5599 faithless G571 generation G1074 , how long G2193 G4219 shall I be G2071 with G4314 you G5209 ? how long G2193 G4219 shall I suffer G430 you G5216 ? bring G5342 him G846 unto G4314 me G3165 .
|
20. ಆಗ ಶಿಷ್ಯರು ಆ ಹುಡುಗನನ್ನು ಯೇಸುವಿನ ಬಳಿಗೆ ತಂದರು. ಆ ದೆವ್ವವು ಯೇಸುವನ್ನು ನೋಡಿದ ಕೂಡಲೇ ಆ ಹುಡುಗನ ಮೇಲೆ ಆಕ್ರಮಣ ಮಾಡಿತು. ಆ ಹುಡುಗನು ಕೆಳಗೆ ಬಿದ್ದು, ಬಾಯಿಂದ ನೊರೆಯನ್ನು ಸುರಿಸುತ್ತಾ ಒದ್ದಾಡತೊಡಗಿದನು. PEPS
|
20. And G2532 they brought G5342 him G846 unto G4314 him G846 : and G2532 when he saw G1492 him G846 , straightway G2112 the G3588 spirit G4151 tore G4682 him G846 ; and he fell G4098 on G1909 the G3588 ground G1093 , and G2532 wallowed G2947 foaming G875 .
|
21. ಯೇಸು, “ಎಷ್ಟು ಕಾಲದಿಂದ ಹೀಗಾಗುತ್ತಿದೆ?” ಎಂದು ಆ ಹುಡುಗನ ತಂದೆಯನ್ನು ಕೇಳಿದನು. PEPS ಅದಕ್ಕೆ ತಂದೆಯು, “ಬಾಲ್ಯದಿಂದಲೇ ಹೀಗಾಗುತ್ತಿದೆ.
|
21. And G2532 he asked G1905 his G846 father G3962 , How long is it ago G4214 G5550 G2076 since G5613 this G5124 came G1096 unto him G846 ? And G1161 he G3588 said G2036 , Of a child G3812 .
|
22. ಆಗಿಂದಾಗ್ಗೆ ದೆವ್ವವು ಅವನನ್ನು ಕೊಲ್ಲಲು ಬೆಂಕಿಯೊಳಗೆ ಅಥವಾ ನೀರಿನೊಳಗೆ ಎಸೆಯುತ್ತದೆ. ನಿನಗೆ ಸಾಧ್ಯವಿರುವುದಾದರೆ, ದಯವಿಟ್ಟು ನಮ್ಮ ಮೇಲೆ ಕರುಣೆಯಿಟ್ಟು ಸಹಾಯಮಾಡು” ಎಂದು ಉತ್ತರಿಸಿದನು. PEPS
|
22. And G2532 ofttimes G4178 it hath cast G906 him G846 G2532 into G1519 the fire G4442 , and G2532 into G1519 the waters G5204 , to G2443 destroy G622 him G846 : but G235 if thou canst do any thing G1536 G1410 , have compassion G4697 on G1909 us G2248 , and help G997 us G2254 .
|
23. ಅದಕ್ಕೆ ಯೇಸು, “ ‘ನಿನಗೆ ಸಾಧ್ಯವಿರುವುದಾದರೆ’ ಎಂದು ನೀನು ಹೇಳುವುದೇಕೆ? ನಂಬಿಕೆಯಿಡುವ ವ್ಯಕ್ತಿಗೆ ಎಲ್ಲವೂ ಸಾಧ್ಯ” ಎಂದು ಹೇಳಿದನು. PEPS
|
23. G1161 Jesus G2424 said G2036 unto him G846 , If G1487 thou canst G1410 believe G4100 , all things G3956 are possible G1415 to him that believeth G4100 .
|
24. ಆ ಹುಡುಗನ ತಂದೆಯು ಸಂತೋಷದಿಂದ, “ನಾನು ನಂಬುತ್ತೇನೆ. ಇನ್ನೂ ಹೆಚ್ಚಾಗಿ ನಂಬಲು ನನಗೆ ಸಹಾಯ ಮಾಡು” ಎಂದನು. PEPS
|
24. And G2532 straightway G2112 the G3588 father G3962 of the G3588 child G3813 cried out G2896 , and said G3004 with G3326 tears G1144 , Lord G2962 , I believe G4100 ; help G997 thou mine G3450 unbelief G570 .
|
25. ಅಲ್ಲಿ ನಡೆಯುತ್ತಿರುವುದನ್ನು ನೋಡಲು ಜನರೆಲ್ಲರೂ ಓಡಿಬರುತ್ತಿರುವುದನ್ನು ಕಂಡ ಯೇಸು, ಆ ದೆವ್ವಕ್ಕೆ, “ಎಲೈ ಕಿವುಡು ಮೂಕ ದೆವ್ವವೇ, ಈ ಹುಡುಗನಿಂದ ಹೊರಗೆ ಬರುವಂತೆಯೂ ಇವನೊಳಗೆ ಇನ್ನೆಂದಿಗೂ ಪ್ರವೇಶಿಸದಂತೆಯೂ ನಾನು ನಿನಗೆ ಆಜ್ಞಾಪಿಸುತ್ತೇನೆ!” ಎಂದನು. PEPS
|
25. When G1161 Jesus G2424 saw G1492 that G3754 the people G3793 came running together G1998 , he rebuked G2008 the G3588 foul G169 spirit G4151 , saying G3004 unto him G846 , Thou dumb G216 and G2532 deaf G2974 spirit G4151 , I G1473 charge G2004 thee G4671 , come G1831 out of G1537 him G846 , and G2532 enter G1525 no more G3371 into G1519 him G846 .
|
26. ಆ ದೆವ್ವವು ಅರಚಿತು. ಅದು ಆ ಹುಡುಗನನ್ನು ಮತ್ತೆ ನೆಲದ ಮೇಲೆ ಬೀಳಿಸಿ, ಒದ್ದಾಡಿಸಿ ಹೊರಬಂದಿತು. ಆ ಹುಡುಗನು ಸತ್ತವನಂತೆ ಬಿದ್ದಿದ್ದನು. ಅನೇಕ ಜನರು, “ಅವನು ಸತ್ತುಹೋದನು” ಎಂದರು.
|
26. And G2532 the spirit cried G2896 , and G2532 rent G4682 him G846 sore G4183 , and came out G1831 of him: and G2532 he was G1096 as G5616 one dead G3498 ; insomuch that G5620 many G4183 said G3004 , He is dead G599 .
|
27. ಆದರೆ ಯೇಸು ಆ ಹುಡುಗನ ಕೈ ಹಿಡಿದೆತ್ತಿ, ಎದ್ದುನಿಲ್ಲಲು ಅವನಿಗೆ ಸಹಾಯಮಾಡಿದನು. PEPS
|
27. But G1161 Jesus G2424 took G2902 him G846 by the G3588 hand G5495 , and lifted him up G1453 G846 ; and G2532 he arose G450 .
|
28. ಯೇಸು ಮನೆಯೊಳಗೆ ಹೋದ ಮೇಲೆ ಆತನ ಶಿಷ್ಯರು ಪ್ರತ್ಯೇಕವಾದ ಸ್ಥಳದಲ್ಲಿ ಆತನಿಗೆ, “ಆ ದೆವ್ವವನ್ನು ಬಿಡಿಸಲು ನಮಗೆ ಏಕೆ ಸಾಧ್ಯವಾಗಲಿಲ್ಲ?” ಎಂದು ಕೇಳಿದರು. PEPS
|
28. And G2532 when he G846 was come G1525 into G1519 the house G3624 , his G846 disciples G3101 asked G1905 him G846 privately G2596 G2398 , Why G3754 could G1410 not G3756 we G2249 cast him out G1544 G846 ?
|
29. ಯೇಸು, “ಈ ಬಗೆಯ ದೆವ್ವವನ್ನು ಪ್ರಾರ್ಥನೆಯಿಂದ ಮಾತ್ರ ಬಿಡಿಸಲು ಸಾಧ್ಯ” ಎಂದು ಉತ್ತರಿಸಿದನು. PEPS
|
29. And G2532 he said G2036 unto them G846 , This G5124 kind G1085 can G1410 come forth G1831 by G1722 nothing G3762 , but G1508 by G1722 prayer G4335 and G2532 fasting G3521 .
|
30. {ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟನೆ} (ಮತ್ತಾಯ 17:22-23; ಲೂಕ 9:43-45) PS ನಂತರ ಯೇಸು ಮತ್ತು ಆತನ ಶಿಷ್ಯರು ಆ ಸ್ಥಳದಿಂದ ಹೊರಟು ಗಲಿಲಾಯದ ಮೂಲಕ ಪ್ರಯಾಣ ಮಾಡಿದರು. ತಾವು ಎಲ್ಲಿದ್ದೇವೆಂಬುದು ಜನರಿಗೆ ತಿಳಿಯಬಾರದೆಂಬುದು ಯೇಸುವಿನ ಉದ್ದೇಶವಾಗಿತ್ತು.
|
30. And G2532 they departed G1831 thence G1564 , and passed G3899 through G1223 Galilee G1056 ; and G2532 he would G2309 not G3756 that G2443 any man G5100 should know G1097 it.
|
31. ಏಕೆಂದರೆ ಆತನು ತನ್ನ ಶಿಷ್ಯರಿಗೆ ಏಕಾಂತವಾಗಿ ಉಪದೇಶಿಸಬೇಕೆಂದಿದ್ದನು. ಯೇಸು ಅವರಿಗೆ, “ಮನುಷ್ಯಕುಮಾರನನ್ನು ಜನರ ವಶಕ್ಕೆ ಕೊಡುವರು. ಜನರು ಆತನನ್ನು ಕೊಲ್ಲುವರು. ಕೊಲ್ಲಲ್ಪಟ್ಟ ಮೂರನೆಯ ದಿನದಲ್ಲಿ ಆತನು ಜೀವಂತವಾಗಿ ಎದ್ದುಬರುವನು” ಎಂದು ಹೇಳಿದನು.
|
31. For G1063 he taught G1321 his G848 disciples G3101 , and G2532 said G3004 unto them G846 , The G3588 Son G5207 of man G444 is delivered G3860 into G1519 the hands G5495 of men G444 , and G2532 they shall kill G615 him G846 ; and G2532 after that he is killed G615 , he shall rise G450 the G3588 third G5154 day G2250 .
|
32. ಆದರೆ ಯೇಸು ಹೇಳಿದ್ದು ಶಿಷ್ಯರಿಗೆ ಅರ್ಥವಾಗಲಿಲ್ಲ. ಮತ್ತು ಅದರ ಅರ್ಥವನ್ನು ಕೇಳುವುದಕ್ಕೂ ಅವರು ಭಯಪಟ್ಟರು. ಯಾರು ಅತ್ಯಂತ ದೊಡ್ಡವರು? (ಮತ್ತಾಯ 18:1-5; ಲೂಕ 9:46-48) PEPS
|
32. But G1161 they G3588 understood G50 not that saying G4487 , and G2532 were afraid G5399 to ask G1905 him G846 .
|
33. ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮಿಗೆ ಹೋದರು. ಅವರು ಒಂದು ಮನೆಯೊಳಗಿದ್ದಾಗ ಆತನು ತನ್ನ ಶಿಷ್ಯರಿಗೆ, “ಈ ದಿನ ನೀವು ದಾರಿಯಲ್ಲಿ ವಾದಮಾಡುತ್ತಿದ್ದುದ್ದನ್ನು ಕೇಳಿಸಿಕೊಂಡೆ. ನೀವು ಯಾವುದರ ಬಗ್ಗೆ ವಾದಮಾಡುತ್ತಿದ್ದಿರಿ?” ಎಂದನು.
|
33. And G2532 he came G2064 to G1519 Capernaum G2584 : and G2532 being G1096 in G1722 the G3588 house G3614 he asked G1905 them G846 , What G5101 was it that ye disputed G1260 among G4314 yourselves G1438 by G1722 the G3588 way G3598 ?
|
34. ಆದರೆ ಶಿಷ್ಯರು ಉತ್ತರಿಸಲಿಲ್ಲ. ಏಕೆಂದರೆ ತಮ್ಮಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರೆಂಬುದರ ಕುರಿತು ಅವರು ವಾಗ್ವಾದ ಮಾಡಿದ್ದರು. PEPS
|
34. But G1161 they G3588 held their peace G4623 : for G1063 by G1722 the G3588 way G3598 they had disputed G1256 among G4314 themselves G240 , who G5101 should be the greatest G3187 .
|
35. ಯೇಸು ಕುಳಿತುಕೊಂಡು, ಹನ್ನೆರಡು ಜನ ಅಪೊಸ್ತಲರನ್ನು ತನ್ನ ಬಳಿಗೆ ಕರೆದು ಅವರಿಗೆ, “ನಿಮ್ಮಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಬೇಕೆಂದು ಬಯಸುವವನು ಉಳಿದ ಎಲ್ಲರನ್ನು ತನಗಿಂತಲೂ ಹೆಚ್ಚು ಪ್ರಮುಖರೆಂದು ಭಾವಿಸಿಕೊಂಡು ಎಲ್ಲರ ಸೇವೆಮಾಡಬೇಕು” ಎಂದು ಹೇಳಿದನು. PEPS
|
35. And G2532 he sat down G2523 , and called G5455 the G3588 twelve G1427 , and G2532 saith G3004 unto them G846 , If any man G1536 desire G2309 to be G1511 first G4413 , the same shall be G2071 last G2078 of all G3956 , and G2532 servant G1249 of all G3956 .
|
36. ನಂತರ ಯೇಸು ಒಂದು ಚಿಕ್ಕ ಮಗುವನ್ನು ಕರೆದು, ಆ ಮಗುವನ್ನು ಶಿಷ್ಯರ ಮುಂದೆ ನಿಲ್ಲಿಸಿ, ಅದನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ಅವರಿಗೆ,
|
36. And G2532 he took G2983 a child G3813 , and set G2476 him G846 in G1722 the G3588 midst G3319 of them G846 : and G2532 when he had taken him in his arms G1723 G846 , he said G2036 unto them G846 ,
|
37. “ನನ್ನ ಹೆಸರಿನಲ್ಲಿ ಇಂಥ ಮಕ್ಕಳನ್ನು ಸ್ವೀಕರಿಸಿಕೊಳ್ಳುವವನು ನನ್ನನ್ನೇ ಸ್ವೀಕರಿಸಿಕೊಂಡಂತಾಯಿತು. ನನ್ನನ್ನು ಸ್ವೀಕರಿಸಿಕೊಳ್ಳುವವನು, ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸಿಕೊಂಡಂತಾಯಿತು” ಎಂದು ಹೇಳಿದನು. PEPS
|
37. Whosoever G3739 G1437 shall receive G1209 one G1520 of such G5108 children G3813 in G1909 my G3450 name G3686 , receiveth G1209 me G1691 : and G2532 whosoever G3739 G1437 shall receive G1209 me G1691 , receiveth G1209 not G3756 me G1691 , but G235 him that sent G649 me G3165 .
|
38. {ನಮ್ಮ ವೈರಿಯಲ್ಲದವನು ನಮ್ಮ ಮಿತ್ರನೇ} (ಲೂಕ 9:49-50) PS ಆಗ ಯೋಹಾನನು, “ಗುರುವೇ, ಯಾರೋ ಒಬ್ಬನು ನಿನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸುತ್ತಿರುವುದನ್ನು ನಾವು ನೋಡಿದೆವು. ಅವನು ನಮ್ಮವನಲ್ಲ. ಆದ್ದರಿಂದ ನಿನ್ನ ಹೆಸರನ್ನು ಹೇಳಕೂಡದೆಂದು ಅವನಿಗೆ ಹೇಳಿದೆವು” ಎಂದನು. PEPS
|
38. And G1161 John G2491 answered G611 him G846 , saying G3004 , Master G1320 , we saw G1492 one G5100 casting out G1544 devils G1140 in G1722 thy G4675 name G3686 , and he G3739 followeth G190 not G3756 us G2254 : and G2532 we forbade G2967 him G846 , because G3754 he followeth G190 not G3756 us G2254 .
|
39. ಯೇಸು ಅವರಿಗೆ, “ಅವನನ್ನು ತಡೆಯಬೇಡಿ. ನನ್ನ ಹೆಸರಿನ ಮೂಲಕ ಅದ್ಭುತಕಾರ್ಯಗಳನ್ನು ಮಾಡುವವನು ಆ ಕೂಡಲೇ ನನ್ನ ಬಗ್ಗೆ ಕೆಟ್ಟ ಸಂಗತಿಗಳನ್ನು ಹೇಳಲು ಸಾಧ್ಯವಿಲ್ಲ.
|
39. But G1161 Jesus G2424 said G2036 , Forbid G2967 him G846 not G3361 : for G1063 there is G2076 no man G3762 which G3739 shall do G4160 a miracle G1411 in G1909 my G3450 name G3686 , that G2532 can G1410 lightly G5035 speak evil G2551 of me G3165 .
|
40. ನಮ್ಮ ವೈರಿಯಲ್ಲದವನು ನಮ್ಮ ಮಿತ್ರನೇ ಸರಿ.
|
40. For G1063 he G3739 that is G2076 not G3756 against G2596 us G5216 is G2076 on our part G5228 G5216 .
|
41. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಕ್ರಿಸ್ತನವರೆಂದು ಯಾವನಾದರೂ ನಿಮಗೆ ಕುಡಿಯಲು ನೀರು ಕೊಟ್ಟರೂ ಅವನಿಗೆ ಅದರ ಪ್ರತಿಫಲ ಖಂಡಿತವಾಗಿ ಸಿಕ್ಕುವುದು. PEPS
|
41. For G1063 whosoever G3739 G302 shall give you a cup of water to drink G4222 G5209 G4221 G5204 in G1722 my G3450 name G3686 , because G3754 ye belong to G2075 Christ G5547 , verily G281 I say G3004 unto you G5213 , he shall not G3364 lose G622 his G848 reward G3408 .
|
42. {ಇತರರನ್ನು ಪಾಪಕ್ಕೆ ನಡೆಸುವುದರ ಬಗ್ಗೆ ಯೇಸುವಿನ ಎಚ್ಚರಿಕೆ} (ಮತ್ತಾಯ 18:6-9; ಲೂಕ 17:1-2) PS “ನನ್ನಲ್ಲಿ ನಂಬಿಕೆಯಿಟ್ಟಿರುವ ಈ ಚಿಕ್ಕ ಮಕ್ಕಳಲ್ಲಿ ಒಬ್ಬನನ್ನು ಪಾಪಕ್ಕೆ ನಡೆಸುವ ವ್ಯಕ್ತಿಯು ತನ್ನ ಕುತ್ತಿಗೆಗೆ ಬೀಸುವ ಕಲ್ಲನ್ನು ಕಟ್ಟಿಕೊಂಡು, ಸಮುದ್ರದಲ್ಲಿ ಮುಳುಗುವುದೇ ಒಳ್ಳೆಯದು.
|
42. And G2532 whosoever G3739 G302 shall offend G4624 one G1520 of these little ones G3398 that believe G4100 in G1519 me G1691 , it is G2076 better G2570 G3123 for him G846 that G1487 a millstone G3037 G3457 were hanged G4029 about G4012 his G846 neck G5137 , and G2532 he were cast G906 into G1519 the G3588 sea G2281 .
|
43. ನಿನ್ನ ಕೈ ನಿನ್ನನ್ನು ಪಾಪದಲ್ಲಿ ಸಿಲುಕಿಸುವುದಾದರೆ ಅದನ್ನು ಕತ್ತರಿಸಿಬಿಡು. ಎರಡು ಕೈಗಳನ್ನು ಇಟ್ಟುಕೊಂಡು, ನಂದಿಹೋಗದ ಬೆಂಕಿಯಿರುವ ನರಕಕ್ಕೆ ಹೋಗುವುದಕ್ಕಿಂತ ಅಂಗವಿಕಲನಾಗಿದ್ದು ನಿತ್ಯಜೀವವನ್ನು ಪಡೆಯುವುದೇ ಮೇಲು. ಆ ಸ್ಥಳದಲ್ಲಿ ಬೆಂಕಿ ಆರಿಹೋಗುವುದೇ ಇಲ್ಲ.
|
43. And G2532 if G1437 thy G4675 hand G5495 offend G4624 thee G4571 , cut it off G609 G846 : it is G2076 better G2570 for thee G4671 to enter G1525 into G1519 life G2222 maimed G2948 , than G2228 having G2192 two G1417 hands G5495 to go G565 into G1519 hell G1067 , into G1519 the G3588 fire G4442 that never shall be quenched G762 :
|
44. *ಕೆಲವು ಗ್ರೀಕ್ ಪ್ರತಿಗಳು 44ನೇ ವಚನವನ್ನು ಹೊಂದಿವೆ. ಈ ವಚನವು 48ನೇ ವಚನವೇ ಆಗಿದೆ.
|
44. Where G3699 their G846 worm G4663 dieth G5053 not G3756 , and G2532 the G3588 fire G4442 is not G3756 quenched G4570 .
|
45. ನಿನ್ನ ಕಾಲು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ, ಅದನ್ನು ಕತ್ತರಿಸಿಬಿಡು. ಎರಡು ಕಾಲುಗಳನ್ನು ಇಟ್ಟುಕೊಂಡು ನರಕದೊಳಗೆ ಎಸೆಯಲ್ಪಡುವುದಕ್ಕಿಂತ ಕುಂಟನಾಗಿರುವುದೇ ಮೇಲು.
|
45. And G2532 if G1437 thy G4675 foot G4228 offend G4624 thee G4571 , cut it off G609 G846 : it is G2076 better G2570 for thee G4671 to enter G1525 halt G5560 into G1519 life G2222 , than G2228 having G2192 two G1417 feet G4228 to be cast G906 into G1519 hell G1067 , into G1519 the G3588 fire G4442 that never shall be quenched G762 :
|
46. †ಕೆಲವು ಗ್ರೀಕ್ ಪ್ರತಿಗಳು 46ನೇ ವಚನವನ್ನು ಹೊಂದಿವೆ. ಈ ವಚನವು 48ನೇ ವಚನವೇ ಆಗಿದೆ.
|
46. Where G3699 their G846 worm G4663 dieth G5053 not G3756 , and G2532 the G3588 fire G4442 is not G3756 quenched G4570 .
|
47. ನಿನ್ನ ಕಣ್ಣು ನಿನ್ನನ್ನು ಪಾಪದಲ್ಲಿ ಸಿಲುಕಿಸುವುದಾದರೆ, ಅದನ್ನು ಕಿತ್ತುಬಿಡು. ಎರಡು ಕಣ್ಣುಗಳನ್ನಿಟ್ಟುಕೊಂಡು ನರಕದೊಳಗೆ ಎಸೆಯಲ್ಪಡುವುದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ನಿತ್ಯಜೀವವನ್ನು ಹೊಂದಿಕೊಳ್ಳುವುದೇ ಮೇಲು.
|
47. And G2532 if G1437 thine G4675 eye G3788 offend G4624 thee G4571 , pluck it out G1544 G846 : it is G2076 better G2570 for thee G4671 to enter G1525 into G1519 the G3588 kingdom G932 of God G2316 with one eye G3442 , than G2228 having G2192 two G1417 eyes G3788 to be cast G906 into G1519 hell G1067 fire G4442 :
|
48. ನರಕದಲ್ಲಿ ಮನುಷ್ಯರನ್ನು ತಿನ್ನುವ ಹುಳಗಳು ಸಾಯುವುದೇ ಇಲ್ಲ ಮತ್ತು ಬೆಂಕಿಯು ಆರುವುದೇ ಇಲ್ಲ. PEPS
|
48. Where G3699 their G846 worm G4663 dieth G5053 not G3756 , and G2532 the G3588 fire G4442 is not G3756 quenched G4570 .
|
49. “ಪ್ರತಿಯೊಬ್ಬನನ್ನೂ ಬೆಂಕಿಯಿಂದ ಶಿಕ್ಷಿಸಲಾಗುತ್ತದೆ. PEPS
|
49. For G1063 every one G3956 shall be salted G233 with fire G4442 , and G2532 every G3956 sacrifice G2378 shall be salted G233 with salt G251 .
|
50. “ಉಪ್ಪು ಒಳ್ಳೆಯದು. ಆದರೆ ಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ, ಅದನ್ನು ಮತ್ತೆ ನೀವು ಉಪ್ಪನ್ನಾಗಿ ಮಾಡಲಾರಿರಿ. ಆದ್ದರಿಂದ ಒಳ್ಳೆಯತನದಿಂದ ‡ಒಳ್ಳೆಯತನ ಅಕ್ಷರಶಃ, “ನಿಮ್ಮಲ್ಲಿ ಉಪ್ಪನ್ನು ಹೊಂದಿರಿ.” ತುಂಬಿದವರಾಗಿರಿ ಮತ್ತು ಒಬ್ಬರೊಡನೊಬ್ಬರು ಸಮಾಧಾನದಿಂದಿರಿ” ಎಂದು ಹೇಳಿದನು. PE
|
50. Salt G217 is good G2570 : but G1161 if G1437 the G3588 salt G217 have lost his saltness G1096 G358 , wherewith G1722 G5101 will ye season G741 it G846 ? Have G2192 salt G217 in G1722 yourselves G1438 , and G2532 have peace G1514 one with another G240 G1722 .
|