|
|
1. {ಯೆಹೋವನಿಗೆ ಪ್ರಾರ್ಥನೆ} PS ಯೆಹೋವನೇ, ನಮಗೆ ಸಂಭವಿಸಿದ್ದನ್ನು ಜ್ಞಾಪಿಸಿಕೊ. ನಮಗಾಗಿರುವ ಅವಮಾನವನ್ನು ನೋಡು.
|
1. Remember H2142 , O LORD H3068 , what H4100 is come H1961 upon us: consider H5027 , and behold H7200 H853 our reproach H2781 .
|
2. ನಮ್ಮ ದೇಶವು ಬೇರೆ ಜನಾಂಗಗಳವರ ಪಾಲಾಗಿದೆ. ನಮ್ಮ ಮನೆಗಳು ಪರದೇಶಿಗಳಿಗೆ ಕೊಡಲ್ಪಟ್ಟಿವೆ.
|
2. Our inheritance H5159 is turned H2015 to strangers H2114 , our houses H1004 to aliens H5237 .
|
3. ನಾವು ಅನಾಥರಾಗಿದ್ದೇವೆ. ನಮಗೆ ತಂದೆಯೇ ಇಲ್ಲ. ನಮ್ಮ ತಾಯಂದಿರು ವಿಧವೆಗಳಂತಾಗಿದ್ದಾರೆ.
|
3. We are H1961 orphans H3490 and fatherless H369 H1 , our mothers H517 are as widows H490 .
|
4. ನಾವು ಕುಡಿಯುವ ನೀರನ್ನೂ ನಾವು ಕೊಂಡುಕೊಳ್ಳಬೇಕಾಗಿದೆ. ನಮ್ಮ ಸೌದೆಗೂ ಸಹ ನಾವು ಹಣ ಕೊಡಬೇಕಾಗಿದೆ.
|
4. We have drunken H8354 our water H4325 for money H3701 ; our wood H6086 is sold H935 H4242 unto us.
|
5. ಮರಣದವರೆಗೂ ನಾವು ಹಿಂದಟ್ಟಲ್ಪಟ್ಟಿದ್ದೇವೆ. ನಾವು ಬಳಲಿಹೋಗಿದ್ದೇವೆ; ನಾವು ವಿಶ್ರಾಂತಿಯನ್ನೇ ಪಡೆದಿಲ್ಲ.
|
5. Our necks H6677 are under H5921 persecution H7291 : we labor H3021 , and have no rest H3808 H5117 .
|
6. ನಾವು ಈಜಿಪ್ಟಿನೊಡನೆ ಒಂದು ಒಪ್ಪಂದವನ್ನು ಮಾಡಿಕೊಂಡೆವು. ಸಾಕಷ್ಟು ಆಹಾರಕ್ಕಾಗಿ ನಾವು ಅಸ್ಸೀರಿಯಾದೊಡನೆ ಒಪ್ಪಂದ ಮಾಡಿಕೊಂಡೆವು.
|
6. We have given H5414 the hand H3027 to the Egyptians H4714 , and to the Assyrians H804 , to be satisfied H7646 with bread H3899 .
|
7. ನಮ್ಮ ಪೂರ್ವಿಕರು ನಿನಗೆ ವಿರೋಧವಾಗಿ ಪಾಪ ಮಾಡಿದರು. ಈಗ ಅವರು ಸತ್ತುಹೋಗಿದ್ದಾರೆ. ಆದರೆ ಅವರ ಪಾಪಗಳ ನಿಮಿತ್ತ ನಾವು ಈಗ ಸಂಕಟಪಡುತ್ತಿದ್ದೇವೆ.
|
7. Our fathers H1 have sinned H2398 , and are not H369 ; and we H587 have borne H5445 their iniquities H5771 .
|
8. ಗುಲಾಮರು ನಮ್ಮ ಅಧಿಪತಿಗಳಾಗಿದ್ದಾರೆ. ನಮ್ಮನ್ನು ಯಾರೂ ಅವರಿಂದ ರಕ್ಷಿಸಲಾರರು.
|
8. Servants H5650 have ruled over H4910 us: there is none H369 that doth deliver H6561 us out of their hand H4480 H3027 .
|
9. ಆಹಾರಕ್ಕಾಗಿ ನಾವು ನಮ್ಮ ಪ್ರಾಣಗಳನ್ನೇ ಆಪತ್ತಿಗೆ ಗುರಿ ಮಾಡಿಕೊಳ್ಳುತ್ತೇವೆ. ಊರ ಹೊರಗೆ ಖಡ್ಗಗಳನ್ನು ಹಿಡಿದುಕೊಂಡಿರುವ ಜನರಿದ್ದಾರೆ.
|
9. We got H935 our bread H3899 with the peril of our lives H5315 because of H4480 H6440 the sword H2719 of the wilderness H4057 .
|
10. ನಮ್ಮ ಚರ್ಮವು ಒಲೆಯಂತೆ ಬಿಸಿಯಾಗಿದೆ. ಹಸಿವೆಯಿಂದಾಗಿ ಜ್ವರವು ನಮ್ಮನ್ನು ಸುಡುತ್ತಿದೆ.
|
10. Our skin H5785 was black H3648 like an oven H8574 because of H4480 H6440 the terrible H2152 famine H7458 .
|
11. ಚೀಯೋನಿನ ಸ್ತ್ರೀಯರನ್ನು ವೈರಿಗಳು ಅತ್ಯಾಚಾರ ಮಾಡಿದ್ದಾರೆ. ಯೆಹೂದದ ಪಟ್ಟಣಗಳಲ್ಲಿ ಅವರು ಕನ್ನಿಕೆಯರನ್ನು ಅತ್ಯಾಚಾರ ಮಾಡಿದ್ದಾರೆ.
|
11. They ravished H6031 the women H802 in Zion H6726 , and the maids H1330 in the cities H5892 of Judah H3063 .
|
12. ವೈರಿಗಳು ನಮ್ಮ ರಾಜಕುಮಾರರನ್ನು ಗಲ್ಲಿಗೇರಿಸಿದ್ದಾರೆ. ಅವರು ನಮ್ಮ ಹಿರಿಯರಿಗೆ ಗೌರವ ಕೊಡಲಿಲ್ಲ.
|
12. Princes H8269 are hanged up H8518 by their hand H3027 : the faces H6440 of elders H2205 were not H3808 honored H1921 .
|
13. ನಮ್ಮ ಯುವಕರನ್ನು ಬೀಸುವ ಕಲ್ಲುಗಳಿಂದ ದವಸಧಾನ್ಯಗಳನ್ನು ಬೀಸುವವರನ್ನಾಗಿ ವೈರಿಗಳು ಮಾಡಿದರು. ನಮ್ಮ ಯುವಕರು ಶ್ರಮದ ಕೆಲಸದಿಂದ ಮುಗ್ಗರಿಸಿದ್ದಾರೆ.
|
13. They took H5375 the young men H970 to grind H2911 , and the children H5288 fell H3782 under the wood H6086 .
|
14. ಪಟ್ಟಣದ ದ್ವಾರಗಳ ಬಳಿಯಿಂದ ಹಿರಿಯರು ಹೊರಟುಹೋಗಿದ್ದಾರೆ. ಯುವಕರು ಸಂಗೀತ ನುಡಿಸುವುದನ್ನು ನಿಲ್ಲಿಸಿದ್ದಾರೆ.
|
14. The elders H2205 have ceased H7673 from the gate H4480 H8179 , the young men H970 from their music H4480 H5058 .
|
15. ನಮ್ಮ ಹೃದಯಗಳಲ್ಲಿ ಆನಂದವೇ ಉಳಿದಿಲ್ಲ. ನಮ್ಮ ನರ್ತನದ ಸ್ಥಾನವನ್ನು ಗೋಳಾಟವು ಆವರಿಸಿಕೊಂಡಿದೆ.
|
15. The joy H4885 of our heart H3820 is ceased H7673 ; our dance H4234 is turned H2015 into mourning H60 .
|
16. ನಮ್ಮ ತಲೆಯಿಂದ ಕಿರೀಟವು ಬಿದ್ದುಹೋಗಿದೆ. ನಾವು ಪಾಪ ಮಾಡಿದ್ದರಿಂದಲೇ ನಮಗೆ ಕೇಡುಗಳಾಗಿವೆ.
|
16. The crown H5850 is fallen H5307 from our head H7218 : woe H188 unto us, that H3588 we have sinned H2398 !
|
17. ಇವುಗಳ ದೆಸೆಯಿಂದಾಗಿ ನಮ್ಮ ಹೃದಯಗಳು ಎಡಬಿಡದೆ ನೋಯುತ್ತಿವೆ. ನಮ್ಮ ಕಣ್ಣುಗಳು ಸರಿಯಾಗಿ ಕಾಣದಂತಾಗಿವೆ.
|
17. For H5921 this H2088 our heart H3820 is H1961 faint H1739 ; for H5921 these H428 things our eyes H5869 are dim H2821 .
|
18. ಚೀಯೋನ್ ಪರ್ವತವು ನಿರ್ಜನ ಪ್ರದೇಶವಾಗಿದೆ. ಚೀಯೋನ್ ಪರ್ವತದ ಸುತ್ತಮುತ್ತಲೆಲ್ಲ ನರಿಗಳು ಓಡಾಡುತ್ತವೆ.
|
18. Because of H5921 the mountain H2022 of Zion H6726 , which H7945 is desolate H8074 , the foxes H7776 walk H1980 upon it.
|
19. ಯೆಹೋವನೇ, ನೀನಾದರೋ ಶಾಶ್ವತವಾಗಿ ಆಳುವೆ. ನಿನ್ನ ರಾಜಸಿಂಹಾಸನವು ಸದಾಕಾಲವಿರುವುದು.
|
19. Thou H859 , O LORD H3068 , remainest H3427 forever H5769 ; thy throne H3678 from generation H1755 to generation H1755 .
|
20. ಯೆಹೋವನೇ, ನೀನು ನಮ್ಮನ್ನು ಶಾಶ್ವತವಾಗಿ ಮರೆತಿರುವುದೇಕೆ? ನೀನು ನಮ್ಮನ್ನು ದೀರ್ಘಕಾಲದವರೆಗೆ ತೊರೆದುಬಿಟ್ಟಿರುವುದೇಕೆ?
|
20. Wherefore H4100 dost thou forget H7911 us forever H5331 , and forsake H5800 us so long H753 time H3117 ?
|
21. ಯೆಹೋವನೇ, ನಮ್ಮನ್ನು ನಿನ್ನ ಬಳಿಗೆ ಮತ್ತೆ ಬರಮಾಡಿಕೋ. ನಾವು ಸಂತೋಷದಿಂದ ನಿನ್ನ ಬಳಿಗೆ ಬರುತ್ತೇವೆ. ನಮ್ಮ ಜೀವಿತಗಳನ್ನು ಮೊದಲಿನ ಸ್ಥಿತಿಗೆ ಬರಮಾಡು.
|
21. Turn H7725 thou us unto H413 thee , O LORD H3068 , and we shall be turned H7725 ; renew H2318 our days H3117 as of old H6924 .
|
22. ನೀನು ನಮ್ಮನ್ನು ಸಂಪೂರ್ಣವಾಗಿ ತಿರಸ್ಕರಿಸಿರುವಿಯಾ? ನೀನು ನಮ್ಮ ಮೇಲೆ ಬಹಳವಾಗಿ ಕೋಪಗೊಂಡಿರುವೆ. PE
|
22. But H3588 H518 thou hast utterly rejected H3988 H3988 us ; thou art very wroth H7107 H5704 H3966 against H5921 us.
|