|
|
1. ನನ್ನ ದೇವರೇ, ನನ್ನ ದೇವರೇ! ಯಾಕೆ ನನ್ನನ್ನು ತೊರೆದಿರುವೆ? ನನ್ನನ್ನು ರಕ್ಷಿಸದೆ ಯಾಕೆ ಬಹುದೂರವಾಗಿರುವೆ! ಸಹಾಯಕ್ಕಾಗಿ ನಾನು ಗೋಳಾಡುತ್ತಿದ್ದರೂ ಕೇಳದೆ ಯಾಕೆ ಬಹದೂರವಾಗಿರುವೆ?
|
1. To the chief Musician H5329 upon H5921 Aijeleth H365 Shahar H7837 , A Psalm H4210 of David H1732 . My God H410 , my God H410 , why H4100 hast thou forsaken H5800 me? why art thou so far H7350 from helping H4480 H3444 me, and from the words H1697 of my roaring H7581 ?
|
2. ನನ್ನ ದೇವರೇ, ಹಗಲಿನಲ್ಲಿ ನಾನು ನಿನ್ನನ್ನು ಕೂಗಿಕೊಂಡೆನು, ಆದರೂ ನೀನು ನನಗೆ ಉತ್ತರಿಸಲಿಲ್ಲ. ರಾತ್ರಿಯಲ್ಲೂ ನಿನ್ನನ್ನು ಕೂಗಿಕೊಳ್ಳುತ್ತಲೇ ಇದ್ದೆನು.
|
2. O my God H430 , I cry H7121 in the daytime H3119 , but thou hearest H6030 not H3808 ; and in the night season H3915 , and am not H3808 silent H1747 .
|
3. ದೇವರೇ, ಪರಿಶುದ್ಧನು ನೀನೇ. ನೀನು ರಾಜನಂತೆ ಕುಳಿತಿರುವೆ. ಇಸ್ರೇಲರ ಸ್ತುತಿಗಳೇ ನಿನ್ನ ಸಿಂಹಾಸನ.
|
3. But thou H859 art holy H6918 , O thou that inhabitest H3427 the praises H8416 of Israel H3478 .
|
4. ನಮ್ಮ ಪೂರ್ವಿಕರು ನಿನ್ನಲ್ಲಿ ಭರವಸವಿಟ್ಟಿದ್ದರು. ಅವರು ನಿನ್ನಲ್ಲಿಯೇ ಭರವಸವಿಟ್ಟಿದ್ದರು, ನೀನು ಅವರನ್ನು ರಕ್ಷಿಸಿದೆ.
|
4. Our fathers H1 trusted H982 in thee : they trusted H982 , and thou didst deliver H6403 them.
|
5. ನಮ್ಮ ಪೂರ್ವಿಕರು ನಿನ್ನಲ್ಲಿ ಮೊರೆಯಿಟ್ಟಾಗ ಅವರನ್ನು ಶತ್ರುಗಳಿಂದ ಬಿಡಿಸಿದೆ. ನಿನ್ನಲ್ಲಿ ಭರವಸವಿಟ್ಟಿದ್ದ ಅವರಿಗೆ ನಿರಾಶೆಯಾಗಲಿಲ್ಲ.
|
5. They cried H2199 unto H413 thee , and were delivered H4422 : they trusted H982 in thee , and were not H3808 confounded H954 .
|
6. ಹೀಗಿರಲು, ನಾನು ಹುಳವೇ? ನಾನು ಮನುಷ್ಯನಲ್ಲವೇ? ನನ್ನ ವಿಷಯದಲ್ಲಿ ಜನರು ನಾಚಿಕೆಪಡುತ್ತಾರೆ; ಅವರು ನನ್ನನ್ನು ತಿರಸ್ಕರಿಸುತ್ತಾರೆ.
|
6. But I H595 am a worm H8438 , and no H3808 man H376 ; a reproach H2781 of men H120 , and despised H959 of the people H5971 .
|
7. ನನ್ನನ್ನು ನೋಡಿದವರೆಲ್ಲರೂ ಗೇಲಿಮಾಡುವರು. ಅವರು ಓರೆ ತುಟಿಮಾಡಿ ತಲೆಯಾಡಿಸುತ್ತಾ,
|
7. All H3605 they that see H7200 me laugh H3932 me to scorn : they shoot out H6362 the lip H8193 , they shake H5128 the head H7218 , saying ,
|
8. “ಯೆಹೋವನಿಗೆ ಮೊರೆಯಿಡು, ಆತನು ನಿನ್ನನ್ನು ರಕ್ಷಿಸಬಹುದು. ಆತನು ನಿನ್ನನ್ನು ಬಹಳವಾಗಿ ಇಷ್ಟಪಡುವುದಾದರೆ ನಿನ್ನನ್ನು ಖಂಡಿತವಾಗಿ ರಕ್ಷಿಸುವನು” ಅನ್ನುತ್ತಾರೆ.
|
8. He trusted H1556 on H413 the LORD H3068 that he would deliver H6403 him : let him deliver H5337 him, seeing H3588 he delighted H2654 in him.
|
9. ನಾನಂತೂ ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ. ಹುಟ್ಟಿದ ದಿನದಿಂದಲೂ ನನ್ನನ್ನು ಪರಿಪಾಲಿಸಿದವನು ನೀನೇ. ನಾನಿನ್ನೂ ತಾಯಿಯ ಗರ್ಭದಲ್ಲಿದ್ದಾಗ ನನಗೆ ಭರವಸೆ ನೀಡಿ ಸಂತೈಸಿದವನು ನೀನೇ.
|
9. But H3588 thou H859 art he that took H1518 me out of the womb H4480 H990 : thou didst make me hope H982 when I was upon H5921 my mother H517 's breasts H7699 .
|
10. ಹುಟ್ಟಿದ ದಿನದಿಂದಲೂ ನೀನೇ ನನ್ನ ದೇವರಾಗಿರುವೆ. ತಾಯಿಯ ಗರ್ಭದಿಂದ ಬಂದಂದಿನಿಂದಲೂ ನನ್ನನ್ನು ಪರಿಪಾಲಿಸಿದವನು ನೀನೇ.
|
10. I was cast H7993 upon H5921 thee from the womb H4480 H7358 : thou H859 art my God H410 from my mother H517 's belly H4480 H990 .
|
11. ಹೀಗಿರಲು, ನನ್ನನ್ನು ತೊರೆಯಬೇಡ! ಆಪತ್ತು ಸಮೀಪಿಸಿದೆ, ನನಗೆ ಸಹಾಯಮಾಡಲು ಯಾರೂ ಇಲ್ಲ.
|
11. Be not H408 far H7368 from H4480 me; for H3588 trouble H6869 is near H7138 ; for H3588 there is none H369 to help H5826 .
|
12. ಜನರು ನನ್ನನ್ನು ಸುತ್ತುಗಟ್ಟಿದ್ದಾರೆ; ಅವರು ಬಲಿಷ್ಠವಾದ ಹೋರಿಗಳಂತಿದ್ದಾರೆ.
|
12. Many H7227 bulls H6499 have compassed H5437 me: strong H47 bulls of Bashan H1316 have beset me round H3803 .
|
13. ಪ್ರಾಣಿಯೊಂದನ್ನು ಸೀಳಿಹಾಕುತ್ತಾ ಗರ್ಜಿಸುವ ಸಿಂಹದಂತೆ ಅವರ ಬಾಯಿಗಳು ಅಗಲವಾಗಿ ತೆರೆದಿವೆ.
|
13. They gaped H6475 upon H5921 me with their mouths H6310 , as a ravening H2963 and a roaring H7580 lion H738 .
|
14. ನೆಲದ ಮೇಲೆ ಸುರಿದ ನೀರಿನಂತೆ ನನ್ನ ಬಲವು ಇಲ್ಲವಾಗಿದೆ; ಮೂಳೆಗಳು ಸಡಿಲಗೊಂಡಿವೆ; ಹೃದಯವು ಮೇಣದಂತೆ ಕರಗಿಹೋಗಿದೆ.
|
14. I am poured out H8210 like water H4325 , and all H3605 my bones H6106 are out of joint H6504 : my heart H3820 is H1961 like wax H1749 ; it is melted H4549 in the midst H8432 of my bowels H4578 .
|
15. ನನ್ನ ಶಕ್ತಿಯು ಒಡೆದುಹೋದ ಮಡಿಕೆಯ ಒಣ ತುಂಡಿನಂತಿದೆ. ನನ್ನ ನಾಲಿಗೆಯು ಬಾಯಿ ಮೇಲ್ಭಾಗಕ್ಕೆ ಅಂಟಿಕೊಳ್ಳುತ್ತಿದೆ. ನೀನು ನನ್ನನ್ನು ಮಣ್ಣಿಗೆ ಸೇರಿಸಿರುವೆ.
|
15. My strength H3581 is dried up H3001 like a potsherd H2789 ; and my tongue H3956 cleaveth H1692 to my jaws H4455 ; and thou hast brought H8239 me into the dust H6083 of death H4194 .
|
16. ದುಷ್ಟರು ನಾಯಿಗಳಂತೆ ನನ್ನನ್ನು ಸುತ್ತಿಕೊಂಡಿದ್ದಾರೆ. ಅವರು ನನ್ನ ಕೈಗಳನ್ನೂ ಕಾಲುಗಳನ್ನೂ ತಿವಿದಿದ್ದಾರೆ. *ಅವರು … ತಿವಿದಿದ್ದಾರೆ ಪುರಾತನ ಕಾಲದ ಗ್ರೀಕ್ ಅನುವಾದದ ಪ್ರಕಾರ. “ಅವರು ನನ್ನ ಕೈಗಳನ್ನು ಮತ್ತು ಕಾಲುಗಳನ್ನು ತಿವಿದಿದ್ದಾರೆ.” ಹೀಬ್ರೂವಿನಲ್ಲಿ, “ತಿವಿದಿದ್ದಾರೆ” ಎಂಬ ಪದವೇ “ಸಿಂಹದಂತೆ” ಎಂಬರ್ಥವನ್ನು ಕೊಡುತ್ತದೆ.
|
16. For H3588 dogs H3611 have compassed H5437 me : the assembly H5712 of the wicked H7489 have enclosed H5362 me : they pierced H738 my hands H3027 and my feet H7272 .
|
17. ನನ್ನ ಮೂಳೆಗಳು ಎದ್ದುಕಾಣುತ್ತಿವೆ! ಜನರು ನನ್ನನ್ನು ದಿಟ್ಟಿಸಿ ನೋಡುತ್ತಿದ್ದಾರೆ! ಅವರು ನನ್ನನ್ನೇ ನೋಡುತ್ತಿದ್ದಾರೆ!
|
17. I may tell H5608 all H3605 my bones H6106 : they H1992 look H5027 and stare H7200 upon me.
|
18. ಅವರು ನನ್ನ ಮೇಲ್ಹೊದಿಕೆಯನ್ನು ಪಾಲು ಮಾಡಿಕೊಳ್ಳುವರು; ನನ್ನ ನಿಲುವಂಗಿಗಾಗಿ ಚೀಟುಹಾಕುವರು.
|
18. They part H2505 my garments H899 among them , and cast H5307 lots H1486 upon H5921 my vesture H3830 .
|
19. ಯೆಹೋವನೇ, ನನ್ನನ್ನು ತೊರೆಯಬೇಡ! ನೀನೇ ನನ್ನ ಬಲ! ಬೇಗನೆ ನನಗೆ ಸಹಾಯಮಾಡು!
|
19. But be not H408 thou H859 far H7368 from me , O LORD H3068 : O my strength H360 , haste H2363 thee to help H5833 me.
|
20. ಖಡ್ಗಕ್ಕೆ ಸಿಕ್ಕದಂತೆ ತನ್ನ ಜೀವವನ್ನು ರಕ್ಷಿಸು. ನನ್ನ ಅಮೂಲ್ಯವಾದ ಜೀವವು ನಾಯಿಗಳ ಪಾಲಾಗದಂತೆ ರಕ್ಷಿಸು.
|
20. Deliver H5337 my soul H5315 from the sword H4480 H2719 ; my darling H3173 from the power H4480 H3027 of the dog H3611 .
|
21. ನನ್ನನ್ನು ಸಿಂಹದ ಬಾಯಿಂದ ಬಿಡಿಸು; ಹೋರಿಯ ಕೊಂಬುಗಳಿಂದ ನನ್ನನ್ನು ಸಂರಕ್ಷಿಸು.
|
21. Save H3467 me from the lion H738 's mouth H4480 H6310 : for thou hast heard H6030 me from the horns H4480 H7161 of the unicorns H7214 .
|
22. ನಿನ್ನ ಕುರಿತು ನನ್ನ ಸಹೋದರರಿಗೆ ಹೇಳುವೆನು; ಮಹಾಸಭೆಯಲ್ಲಿ ನಿನ್ನನ್ನು ಸುತ್ತಿಸುವೆನು.
|
22. I will declare H5608 thy name H8034 unto my brethren H251 : in the midst H8432 of the congregation H6951 will I praise H1984 thee.
|
23. ಯೆಹೋವನನ್ನು ಆರಾಧಿಸುವವರೇ, ಆತನಿಗೆ ಸ್ತೋತ್ರಮಾಡಿರಿ. ಯಾಕೋಬನ ಸಂತತಿಗಳವರೇ, ಯೆಹೋವನಿಗೆ ಘನಮಾನವನ್ನು ಸಲ್ಲಿಸಿರಿ! ಇಸ್ರೇಲರೇ, ಆತನಲ್ಲಿ ಭಯಭಕ್ತಿಯಿಂದಿರಿ!
|
23. Ye that fear H3373 the LORD H3068 , praise H1984 him; all H3605 ye the seed H2233 of Jacob H3290 , glorify H3513 him ; and fear H1481 H4480 him, all H3605 ye the seed H2233 of Israel H3478 .
|
24. ಯಾಕೆಂದರೆ ಇಕ್ಕಟ್ಟಿನಲ್ಲಿರುವ ಬಡವರಿಗೆ ಆತನು ಸಹಾಯಮಾಡುತ್ತಾನೆ; ಅವರ ವಿಷಯದಲ್ಲಿ ಆತನು ನಾಚಿಕೊಳ್ಳುವುದಿಲ್ಲ; ಆತನು ಅವರನ್ನು ದ್ವೇಷಿಸುವುದಿಲ್ಲ. ಅವರು ಆತನನ್ನು ಕೂಗಿಕೊಳ್ಳುವಾಗ ಆತನು ಅವರಿಗೆ ಮರೆಯಾಗುವುದಿಲ್ಲ.
|
24. For H3588 he hath not H3808 despised H959 nor H3808 abhorred H8262 the affliction H6039 of the afflicted H6041 ; neither H3808 hath he hid H5641 his face H6440 from H4480 him ; but when he cried H7768 unto H413 him , he heard H8085 .
|
25. ಯೆಹೋವನೇ, ನಿನ್ನ ಕಾರ್ಯಗಳಿಗಾಗಿ ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು; ನನ್ನ ಯಜ್ಞಗಳನ್ನು ನಿನ್ನ ಭಕ್ತರ ಮುಂದೆ ಸಲ್ಲಿಸುವೆನು.
|
25. My praise H8416 shall be of H4480 H854 thee in the great H7227 congregation H6951 : I will pay H7999 my vows H5088 before H5048 them that fear H3373 him.
|
26. ಬಡವರು ತಿಂದು ತೃಪ್ತರಾಗುವರು. ಯೆಹೋವನಿಗಾಗಿ ಹುಡುಕುತ್ತಾ ಬಂದವರೇ, ಆತನಿಗೆ ಸ್ತೋತ್ರಮಾಡಿರಿ! ನಿಮ್ಮ ಹೃದಯಗಳು ಯಾವಾಗಲೂ ಸಂತೋಷವಾಗಿರಲಿ. †ಸಂತೋಷವಾಗಿರಲಿ ಅಕ್ಷರಶಃ, “ಜೀವಿಸಲಿ.”
|
26. The meek H6035 shall eat H398 and be satisfied H7646 : they shall praise H1984 the LORD H3068 that seek H1875 him : your heart H3824 shall live H2421 forever H5703 .
|
27. ದೂರದೇಶಗಳಲ್ಲಿರುವ ಜನರೆಲ್ಲರೂ ಯೆಹೋವನನ್ನು ಜ್ಞಾಪಿಸಿಕೊಂಡು ಆತನ ಬಳಿಗೆ ಹಿಂತಿರುಗಲಿ. ವಿದೇಶಗಳಿಲ್ಲಿರುವ ಜನರೆಲ್ಲರೂ ಆತನನ್ನು ಆರಾಧಿಸಲಿ.
|
27. All H3605 the ends H657 of the world H776 shall remember H2142 and turn H7725 unto H413 the LORD H3068 : and all H3605 the kindreds H4940 of the nations H1471 shall worship H7812 before H6440 thee.
|
28. ಯಾಕೆಂದರೆ ಯೆಹೋವನೇ ರಾಜನು! ಆತನು ಜನಾಂಗಗಳನ್ನೆಲ್ಲಾ ಆಳುವನು.
|
28. For H3588 the kingdom H4410 is the LORD H3068 's : and he is the governor H4910 among the nations H1471 .
|
29. ಬಲಿಷ್ಠರೂ ದೃಢಕಾಯರೂ ತಿಂದು ದೇವರಮುಂದೆ ಅಡ್ಡಬೀಳುವರು. ಸಾಯುವವರೂ ಸತ್ತುಹೋಗಿರುವವರೂ ಆತನ ಮುಂದೆ ಅಡ್ಡಬೀಳುವರು.
|
29. All H3605 they that be fat H1879 upon earth H776 shall eat H398 and worship H7812 : all H3605 they that go down H3381 to the dust H6083 shall bow H3766 before H6440 him : and none H3808 can keep alive H2421 his own soul H5315 .
|
30. ಮುಂದಿನ ಕಾಲದಲ್ಲಿ ನಮ್ಮ ಸಂತತಿಗಳವರು ಯೆಹೋವನ ಸೇವೆಮಾಡುವರು. ಆತನ ಕುರಿತಾಗಿ ಯಾವಾಗಲೂ ಹೇಳುತ್ತಿರುವರು.
|
30. A seed H2233 shall serve H5647 him ; it shall be accounted H5608 to the Lord H136 for a generation H1755 .
|
31. ಪ್ರತಿಯೊಂದು ತಲೆಮಾರಿನವರೂ ತಮ್ಮ ಮಕ್ಕಳಿಗೆ ಆತನ ಒಳ್ಳೆಯ ಕಾರ್ಯಗಳ ಬಗ್ಗೆ ಹೇಳುವರು. ‡ಈ ವಚನಗಳನ್ನು ಹೀಬ್ರೂ ಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಕಷ್ಟ. PE
|
31. They shall come H935 , and shall declare H5046 his righteousness H6666 unto a people H5971 that shall be born H3205 , that H3588 he hath done H6213 this .
|