Bible Versions
Bible Books

Jeremiah 47 (KNV) Kannadam Old BSI Version

1 ಫರೋಹನು ಗಾಜಾವನ್ನು ಹೊಡೆಯುವದಕ್ಕಿಂತ ಮುಂಚೆ ಫಿಲಿಷ್ಟಿಯರಿಗೆ ವಿರೋಧವಾಗಿ ಪ್ರವಾದಿಯಾದ ಯೆರೆವಿಾಯನಿಗೆ ಬಂದ ಕರ್ತನ ವಾಕ್ಯವು.
2 ಕರ್ತನು ಹೀಗೆ ಹೇಳು ತ್ತಾನೆ--ಇಗೋ, ಪ್ರವಾಹಗಳು ಉತ್ತರದಿಂದ ಬರು ತ್ತವೆ, ಅವು ತುಂಬಿ ತುಳುಕುವ ಪ್ರಳಯವಾಗುವದು; ದೇಶವನ್ನೂ ಅದರಲ್ಲಿರುವ ಸಮಸ್ತವನ್ನೂ ಪಟ್ಟಣವನ್ನೂ ಅದರ ನಿವಾಸಿಗಳನ್ನೂ ಆಕ್ರಮಿಸುವವು, ಆಗ ಮನು ಷ್ಯರು ಕೂಗುವರು, ದೇಶದ ನಿವಾಸಿಗಳೆಲ್ಲರೂ ಗೋಳಾ ಡುವರು.
3 ಅವನ ಬಲವಾದ ಕುದುರೆಗಳ ಗೊರಸು ಗಳ ತುಳಿಯುವಿಕೆಯ ಶಬ್ದದಿಂದಲೂ ಅವನ ರಥಗಳ ಘೋಷದಿಂದಲೂ ಚಕ್ರಗಳ ಧ್ವನಿಯಿಂದಲೂ ತಂದೆ ಗಳ ಕೈ ಬಲಹೀನತೆಯಿಂದಾಗಿ ತಮ್ಮ ಮಕ್ಕಳ ಕಡೆಗೆ ಹಿಂತಿರುಗಿ ನೋಡರು.
4 ಫಿಲಿಷ್ಟಿಯರೆಲ್ಲರನ್ನು ಸೂರೆ ಮಾಡುವದಕ್ಕೂ ತೂರಿನಿಂದ ಚೀದೋನಿನಿಂದ ಉಳಿದ ಪ್ರತಿ ಸಹಾಯಕನನ್ನು ಕಡಿದು ಬಿಡುವದಕ್ಕೂ ದಿವಸ ಬಂತು. ಕರ್ತನು ಫಿಲಿಷ್ಟಿಯರನ್ನು ಕಫ್ತೋರಿನ ದೇಶದ ಉಳಿದವರನ್ನೂ ಸೂರೆ ಮಾಡುವನು.
5 ಗಾಜಾದ ಮೇಲೆ ಬೋಳುತನ ಬಂತು; ಅಷ್ಕೆ ಲೋನು ಅವರ ತಗ್ಗಿನ ಉಳಿದವುಗಳಿಂದ ತೆಗೆದು ಹಾಕಲ್ಪಟ್ಟಿತು; ಎಷ್ಟು ಕಾಲ ನಿನಗೆ ನೀನೇ ಗಾಯಮಾಡಿ ಕೊಳ್ಳುವಿ?
6 ಕರ್ತನ ಕತ್ತಿಯೇ, ಎಷ್ಟರ ವರೆಗೆ ವಿಶ್ರಮಿಸಿಕೊಳ್ಳದೆ ಇರುವಿ? ನಿನ್ನ ಒರೆಯಲ್ಲಿ ಅಡಗಿಕೋ! ವಿಶ್ರಮಿಸಿಕೋ, ಸುಮ್ಮನಿರು.
7 ಅದು ಹೇಗೆ ಸುಮ್ಮನಿರುವದು? ಅಷ್ಕೆಲೋನಿಗೆ ವಿರೋಧವಾಗಿಯೂ ಸಮುದ್ರತೀರಕ್ಕೆ ವಿರೋಧ ವಾಗಿಯೂ ಕರ್ತನು ಅದಕ್ಕೆ ಆಜ್ಞೆ ಕೊಟ್ಟಿದ್ದಾನಲ್ಲಾ; ಅಲ್ಲಿ ಅದನ್ನು ನೇಮಿಸಿದ್ದಾನೆ.
8 ಒಂದೊಂದು ಪಟ್ಟಣದ ಮೇಲೆ ಸೂರೆಗೊಳ್ಳುವವನು ಬರುವನು; ಕರ್ತನು ಹೇಳಿದ ಹಾಗೆಯೇ ಒಂದು ಪಟ್ಟಣವಾದರೂ ತಪ್ಪಿಸಿಕೊಳ್ಳ ಲಾರದು, ತಗ್ಗೂ ನಾಶವಾಗುವದು; ಬೈಲು ಹಾಳಾಗುವದು.
9 ಹಾರಿಹೋಗುವ ಹಾಗೆ ಮೋವಾಬಿಗೆ ರೆಕ್ಕೆಗಳನ್ನು ಕೊಡಿರಿ; ಅದರ ಪಟ್ಟಣಗಳು ಹಾಳಾಗು ವವು; ಅವುಗಳಲ್ಲಿ ನಿವಾಸಿಗಳಿರುವದಿಲ್ಲ.
10 ಕರ್ತನ ಕೆಲಸವನ್ನು ಮೋಸವಾಗಿ ನಡಿಸುವವನು ಶಾಪಗ್ರಸ್ತ ನಾಗಲಿ; ರಕ್ತದಿಂದ ತನ್ನ ಕತ್ತಿಯನ್ನು ಹಿಂತೆಗೆಯುವವನಿಗೆ ಶಾಪವಾಗಲಿ.
11 ಮೋವಾಬು ತನ್ನ ಚಿಕ್ಕಂದಿನಿಂದ ಸುಖವಾಗಿತ್ತು; ಅದು ತನ್ನ ಮಡ್ಡಿಯ ಮೇಲೆ ಸುಮ್ಮನೆ ಇತ್ತು; ಒಂದು ಪಾತ್ರೆಯೊಳಗಿಂದ ಮತ್ತೊಂದು ಪಾತ್ರೆಗೆ ಹೊಯ್ಯ ಲ್ಪಡಲಿಲ್ಲ; ಸೆರೆಗೆ ಹೋಗಲಿಲ್ಲ; ಆದದರಿಂದ ಅದರ ರುಚಿ ಅದರಲ್ಲಿ ಉಂಟು; ಅದರ ವಾಸನೆ ಬೇರೆ ಆಗಲಿಲ್ಲ.
12 ಆದದರಿಂದ ಇಗೋ, ದಿನಗಳು ಬರುವ ವೆಂದು ಕರ್ತನು ಅನ್ನುತ್ತಾನೆ; ಆಗ ನಾನು ಅದರ ಬಳಿಗೆ ಅಲೆದಾಡುವವರನ್ನು ಕಳುಹಿಸುವೆನು; ಅವರು ಅದು ಅಲೆದಾಡುವಂತೆ ಮಾಡುವರು, ಅದರ ಪಾತ್ರೆಗಳನ್ನು ಬರಿದುಮಾಡಿ ತಮ್ಮ ಬುದ್ದಲಿಗಳನ್ನು ಒಡೆಯುವರು.
13 ಆಗ ಇಸ್ರಾಯೇಲಿನ ಮನೆಯವರು ತಾವು ನಂಬಿಕೊಂಡಿದ್ದ ಬೇತೇಲಿನ ವಿಷಯ ಹೇಗೆ ನಾಚಿಕೆಪಟ್ಟರೋ ಹಾಗೆಯೇ ಮೋವಾಬು ಕೇಮೋ ಷನ ವಿಷಯ ನಾಚಿಕೆಪಡುವದು.
14 ನಾವು ಪರಾಕ್ರಮ ಶಾಲಿಗಳೂ ಯುದ್ಧಕ್ಕೆ ಬಲಿಷ್ಠರೂ ಎಂದು ನೀವು ಹೇಳುವದು ಹೇಗೆ?
15 ಮೋವಾಬು ಸೂರೆ ಯಾಯಿತು, ಅದರ ಪಟ್ಟಣಗಳು ಏರಿ ಹೋದವು, ಅದರ ಆಯಲ್ಪಟ್ಟ ಯೌವನಸ್ಥರು ಕೊಲೆಗೆ ಇಳಿದು ಹೋದರು ಎಂದು ಸೈನ್ಯಗಳ ಕರ್ತನೆಂಬ ಹೆಸರುಳ್ಳ ಅರಸನು ಅನ್ನುತ್ತಾನೆ.
16 ಮೋವಾಬಿನ ಆಪತ್ತು ಬರುವದಕ್ಕೆ ಸವಿಾಪವಾಯಿತು. ಅದರ ಕೇಡು ಬಹು ತ್ವರೆಪಡುತ್ತದೆ.
17 ಅದರ ಸುತ್ತಲಿರುವವರೆಲ್ಲರೇ, ಅದಕ್ಕೆ ಗೋಳಾಡಿರಿ; ಅದರ ಹೆಸರನ್ನು ಬಲ್ಲವರೆಲ್ಲರೇ-- ಬಲವಾದ ಕೋಲೂ ಸೌಂದರ್ಯವಾದ ಬೆತ್ತವೂ ಹೇಗೆ ಮುರಿದು ಹೋಯಿತು! ಎಂದು ಹೇಳಿರಿ.
18 ದೀಬೋನಿನ ನಿವಾಸಿಯಾದ ಮಗಳೇ, ನಿನ್ನ ವೈಭವದಿಂದ ಇಳಿದು ಬಾ; ದಾಹವಾಗಿ ಕೂತುಕೋ, ಮೋವಾಬನ್ನು ಸೂರೆ ಮಾಡುವವನು ನಿನ್ನ ಮೇಲೆ ಬರುವನು, ನಿನ್ನ ಬಲವಾದ ಕೋಟೆಗಳನ್ನು ಕೆಡಿಸಿ ಬಿಡುವನು.
19 ಅರೋಯೇರಿನ ನಿವಾಸಿಯೇ, ದಾರಿಯ ಬಳಿಯಲ್ಲಿ ನಿಂತು ದೃಷ್ಟಿಸು; ಓಡಿಹೋಗು ವವನನ್ನೂ ತಪ್ಪಿಸಿಕೊಳ್ಳುವವನನ್ನೂ ಕೇಳು, ಏನಾಯಿ ತೆಂದು ಹೇಳು.
20 ಮೋವಾಬು ನಾಚಿಕೆಪಡುತ್ತದೆ; ಮುರಿದು ಹೋಯಿತು; ಗೋಳಾಡಿರಿ, ಕೂಗಿರಿ; ಮೋವಾಬು ಸೂರೆಯಾಯಿತೆಂದು ಅರ್ನೋನಿನಲ್ಲಿ ಅದನ್ನು ತಿಳಿಸಿರಿ.
21 ಇದಲ್ಲದೆ ಬೈಲು ಸೀಮೆಯ ಮೇಲೆ ನ್ಯಾಯತೀರ್ವಿಕೆ ಬಂತು; ಹೋಲೋನಿನ ಮೇಲೆಯೂ ಯಾಚದ ಮೇಲೆಯೂ ಮೆಫಾತ್‌ನ ಮೇಲೆಯೂ
22 ದೀಬೋನಿನ ಮೇಲೆಯೂ ನೇಬೋನಿನ ಮೇಲೆಯೂ ಬೇತ್‌ದಿಬ್ಲಾತಯಿಮ್‌ನ ಮೇಲೆಯೂ
23 ಕಿರ್ಯಾತಯಾಮಿನ ಮೇಲೆಯೂ ಬೇತ್‌ಗಾಮುಲಿನ ಮೇಲೆಯೂ ಬೇತ್‌ಮೆಯೋನಿನ ಮೇಲೆಯೂ
24 ಕೆರೀಯೋತ್‌ನ ಮೇಲೆಯೂ ಬೊಚ್ರದ ಮೇಲೆಯೂ ಸವಿಾಪದಲ್ಲಾಗಲಿ ದೂರ ದಲ್ಲಾಗಲಿ ಇರುವ, ಮೋವಾಬಿನ ಸಮಸ್ತ ಪಟ್ಟಣಗಳ ಮೇಲೆಯೂ ಬಂತು.
25 ಮೋವಾಬಿನ ಕೊಂಬು ಕಡಿದು ಹಾಕಲ್ಪಟ್ಟಿದೆ; ಅದರ ತೋಳು ಮುರಿಯಲ್ಪಟ್ಟಿದೆ ಎಂದು ಕರ್ತನು ಅನ್ನುತ್ತಾನೆ.
26 ಅದನ್ನು ನೀವು ಅಮಲೇರಿಸಿರಿ; ಕರ್ತನಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡಿದೆ; ಮೋವಾಬು ಸಹ ತಾನೇ ಕಾರಿದ್ದ ರಲ್ಲಿ ಹೊರಳಾಡುವದು; ಅದೇ ಹಾಸ್ಯಕ್ಕಾಗಿರುವದು.
27 ನಿನ್ನೊಳಗೆ ಇಸ್ರಾಯೇಲೂ ಹಾಸ್ಯಕಾಗಿರಲಿಲ್ಲವೋ? ಅದು ಕಳ್ಳರೊಳಗೆ ಸಿಕ್ಕಿತೇನೋ, ನೀನು ಅವರ ವಿಷಯ ಯಾವಾಗ ಮಾತನಾಡಿದಂದಿನಿಂದ ಸಂತೋಷಕ್ಕಾಗಿ ತಲೆ ಅಲ್ಲಾಡಿಸಿದಿಯಲ್ಲಾ.
28 ಮೋವಾಬಿನಲ್ಲಿ ವಾಸ ವಾಗಿರುವವರೇ, ಪಟ್ಟಣಗಳನ್ನು ಬಿಟ್ಟು ಬಂಡೆಯಲ್ಲಿ ವಾಸವಾಗಿರ್ರಿ; ಸಂದುಗಳ ಬಾಯಿಯ ಪಕ್ಕಗಳಲ್ಲಿ ಗೂಡುಕಟ್ಟುವ ಪಾರಿವಾಳದ ಹಾಗಿರ್ರಿ.
29 ಮೋವಾ ಬಿನ ಹೆಮ್ಮೆಯನ್ನು ಕುರಿತು ಅದರ ಮಹಾಗರ್ವವನ್ನ್ನೂ ಡಂಬವನ್ನೂ ಅಹಂಕಾರವನ್ನೂ ಬಡಾಯಿಯನ್ನೂ ಸೊಕ್ಕಿನ ಹೃದಯವನ್ನೂ ಕುರಿತು ಕೇಳಿದ್ದೇವೆ.
30 ನಾನು ಅದರ ಕೋಪೋ ದ್ರೇಕವನ್ನು ಬಲ್ಲೆನೆಂದು ಕರ್ತನು ಅನ್ನುತ್ತಾನೆ; ಆದರೆ ಅದು ಹಾಗೆ ಆಗುವದಿಲ್ಲ; ಅವನ ಸುಳ್ಳುಗಳು ಸರಿ ಬೀಳುವದಿಲ್ಲ.
31 ಆದದರಿಂದ ನಾನು ಮೋವಾಬಿನ ನಿಮಿತ್ತ ಗೋಳಿಡುವೆನು; ಸಮಸ್ತ ಮೋವಾಬಿನ ನಿಮಿತ್ತ ಕೂಗುವೆನು; ಕೀರ್‌ ಹೆರೆಸಿನ ಮನುಷ್ಯರ ನಿಮಿತ್ತ ನನ್ನ ಹೃದಯವು ದುಃಖಿಸುವದು.
32 ಸಿಬ್ಮದ ದ್ರಾಕ್ಷೇಗಿಡವೇ, ಯಜ್ಜೇರಿನ ಅಳುವಿಕೆ ಯೊಂದಿಗೆ ನಿನ್ನ ನಿಮಿತ್ತ ಅಳುವೆನು; ನಿನ್ನ ಬಳ್ಳಿಗಳು ಸಮುದ್ರವನ್ನು ದಾಟಿದವು. ಯಜ್ಜೇರಿನ ಸಮುದ್ರಕ್ಕೆ ಮುಟ್ಟಿದವು; ನಿನ್ನ ಹಣ್ಣುಗಳ ಮೇಲೆಯೂ ನಿನ್ನ ದ್ರಾಕ್ಷೇ ಸುಗ್ಗಿಯ ಮೇಲೆಯೂ ಸೂರೆ ಮಾಡುವ ವನು ಬಿದ್ದಿದ್ದಾನೆ.
33 ಫಲವುಳ್ಳ ಹೊಲದಿಂದಲೂ ಮೋವಾಬಿನ ದೇಶದಿಂದಲೂ ಸಂತೋಷವೂ ಉಲ್ಲಾ ಸವೂ ತೆಗೆಯಲ್ಪಟ್ಟಿವೆ; ದ್ರಾಕ್ಷೇಯಾಲೆಗಳೊಳಗಿಂದ ದ್ರಾಕ್ಷಾರಸವನ್ನು ನಿಲ್ಲಿಸಿದ್ದೇನೆ; ಅವರ ಅರ್ಭಟದ ಸಂಗಡ ಅವರು ಯಾರೂ ತುಳಿಯುವದಿಲ್ಲ; ಆರ್ಭ ಟವೇ ಆರ್ಭಟವಾಗುವದಿಲ್ಲ.
34 ಹೆಷ್ಬೋನಿನ ಕೂಗಿನ ನಿಮಿತ್ತ ಎಲೆಯಾಳೆಯ ವರೆಗೂ ಯಹಚಿನ ವರೆಗೂ ಚೋಯರ್‌ ಮೊದಲ್ಗೊಂಡು ಹೊರೊನಯಿಮಿನ ವರೆಗೂ ಮೂರು ವರುಷದ ಕಡಸಿನಂತೆ ತಮ್ಮ ಶಬ್ದ ವನ್ನೆತ್ತಿದ್ದರು; ಯಾಕಂದರೆ ನಿವಿಾ್ರೇಮ್‌ನ ನೀರುಗಳು ಸಹ ಹಾಳಾದವು.
35 ಇದಲ್ಲದೆ ಎತ್ತರ ಸ್ಥಳಗಳಲ್ಲಿ ಅರ್ಪಿಸುವವನನ್ನೂ ತನ್ನ ದೇವರುಗಳಿಗೆ ಧೂಪ ಸುಡುವವನನ್ನೂ ಮೋವಾಬಿನಲ್ಲಿ ನಿಲ್ಲಿಸಿಬಿಡು ವೆನೆಂದು ಕರ್ತನು ಅನ್ನುತ್ತಾನೆ.
36 ಆದದರಿಂದ ನನ್ನ ಹೃದಯವು ಮೋವಾಬಿಗೋಸ್ಕರ ಕೊಳಲುಗಳ ಹಾಗೆ ಮೊರೆಯಿಡುವದು, ನನ್ನ ಹೃದಯವು ಕೀರ್‌ ಹೆರೆಸಿನ ಮನುಷ್ಯರಿಗೋಸ್ಕರ ಕೊಳಲುಗಳ ಹಾಗೆ ಮೊರೆಯಿಡು ವದು. ಅವನು ಮಾಡಿಕೊಂಡ ದ್ರವ್ಯನಾಶವಾಯಿತು.
37 ಎಲ್ಲಾ ತಲೆಗಳು ಬೋಳಾಗುವವು; ಎಲ್ಲಾ ಗಡ್ಡಗಳು ಕ್ಷೌರವಾಗುವವು; ಎಲ್ಲಾ ಕೈಗಳ ಮೇಲೆ ಗಾಯಗಳೂ ಸೊಂಟಗಳ ಮೇಲೆ ಗೋಣಿತಟ್ಟು ಇರುವವು.
38 ಮೋವಾಬಿನ ಎಲ್ಲಾ ಮಾಳಿಗೆಗಳ ಮೇಲೆಯೂ ಅದರ ಎಲ್ಲಾ ಬೀದಿಗಳಲ್ಲಿಯೂ ಗೋಳಾಟ ತುಂಬಿರು ವದು. ಮೆಚ್ಚದ ಪಾತ್ರೆಯ ಹಾಗೆ ಮೋವಾಬನ್ನು ನಾನು ಒಡೆದುಬಿಟ್ಟಿದ್ದೇನೆಂದು ಕರ್ತನು ಅನ್ನುತ್ತಾನೆ.
39 ಅದು ಹೇಗೆ ಮುರಿದು ಹೋಯಿತು! ಮೋವಾಬು ಹೇಗೆ ನಾಚಿಕೆಪಟ್ಟು ಬೆನ್ನು ತಿರುಗಿಸಿತು ಎಂದು ಗೋಳಿಡುವರು. ಹೀಗೆ ಮೋವಾಬು ಅದರ ಸುತ್ತಲಿರು ವವರೆಲ್ಲರಿಗೆ ಹಾಸ್ಯಕ್ಕೂ ಹೆದರಿಕೆಗೂ ಆಗುವದು.
40 ಕರ್ತನು ಹೀಗೆ ಹೇಳುತ್ತಾನೆ--ಇಗೋ, ಅವನು ಹದ್ದಿನ ಹಾಗೆ ಹಾರಿ ಮೋವಾಬಿನ ಮೇಲೆ ತನ್ನ ರೆಕ್ಕೆಗಳನ್ನು ಚಾಚುವೆನು.
41 ಕೆರೀಯೋತ್‌ ವಶ ವಾಯಿತು; ಬಲವಾದ ಕೋಟೆಗಳು ಹಿಡಿಯಲ್ಪಟ್ಟವು; ದಿವಸದಲ್ಲಿ ಮೋವಾಬಿನ ಪರಾಕ್ರಮಶಾಲಿಗಳ ಹೃದಯಗಳು ಹೆರುವ ಸ್ತ್ರೀಯ ಹೃದಯದಂತೆ ಇರುವವು.
42 ಮೋವಾಬು ಕರ್ತನಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡದ್ದರಿಂದ ಜನಾಂಗವಲ್ಲದ ಹಾಗೆ ನಾಶವಾಗುವದು.
43 ಮೋವಾಬಿನ ನಿವಾಸಿಯೇ, ಹೆದರಿಕೆಯೂ ಕುಣಿಯೂ ಬೋನೂ ನಿನ್ನ ಮೇಲೆ ಇರುವವೆಂದು ಕರ್ತನು ಅನ್ನುತ್ತಾನೆ.
44 ಹೆದರಿಕೆಗೆ ಓಡಿ ಹೋಗುವವನು ಕುಣಿಯಲ್ಲಿ ಬೀಳುವನು; ಕುಣಿ ಯೊಳಗಿಂದ ಏರಿಬರುವವನು ಬೋನಿನಲ್ಲಿ ಹಿಡಿಯ ಲ್ಪಡುವನು; ನಾನು ಅದರ ಮೇಲೆ ಅಂದರೆ ಮೋವಾ ಬಿನ ಮೇಲೆಯೇ ಅವರ ವಿಚಾರಣೆಯ ವರುಷವನ್ನು ತರುವೆನೆಂದು ಕರ್ತನು ಅನ್ನುತ್ತಾನೆ.
45 ಓಡಿ ಹೋದವರು ಹೆಷ್ಬೋನಿನ ನೆರಳಿನಲ್ಲಿ ಅದರ ಶಕ್ತಿಯ ನಿಮಿತ್ತ ನಿಂತುಕೊಂಡರು; ಆದರೆ ಹೆಷ್ಬೋನಿನೊಳಗಿಂದ ಬೆಂಕಿಯೂ ಸೀಹೋನಿನ ಮಧ್ಯದಿಂದ ಜ್ವಾಲೆಯೂ ಹೊರಟು ಮೋವಾಬಿನ ಮೂಲೆಯನ್ನೂ ಗದ್ದಲದ ಮಕ್ಕಳ ನಡುನೆತ್ತಿಯನ್ನೂ ದಹಿಸಿಬಿಡುವದು.
46 ಮೋವಾಬೇ ನಿನಗೆ ಅಯ್ಯೋ! ಕೆಮೋಷಿನ ಜನರು ನಾಶವಾದರು; ನಿನ್ನ ಕುಮಾರರು ಕುಮಾರ್ತೆಯರು ಸೆರೆಯಾಗಿಯೂ ಹಿಡಿಯಲ್ಪಟ್ಟರು.ಆದಾಗ್ಯೂ ನಾನು ಕಡೇ ದಿವಸಗಳಲ್ಲಿ ಮೋವಾಬಿನ ಸೆರೆಯನ್ನು ತಿರುಗಿ ತರುತ್ತೇನೆಂದು ಕರ್ತನು ಅನ್ನುತ್ತಾನೆ. ವರೆಗೆ ಮೋವಾಬಿನ ನ್ಯಾಯತೀರ್ವಿಕೆಯು ಇರುವದು.
47 ಆದಾಗ್ಯೂ ನಾನು ಕಡೇ ದಿವಸಗಳಲ್ಲಿ ಮೋವಾಬಿನ ಸೆರೆಯನ್ನು ತಿರುಗಿ ತರುತ್ತೇನೆಂದು ಕರ್ತನು ಅನ್ನುತ್ತಾನೆ. ವರೆಗೆ ಮೋವಾಬಿನ ನ್ಯಾಯತೀರ್ವಿಕೆಯು ಇರುವದು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×