Bible Versions
Bible Books

Romans 12 (KNV) Kannadam Old BSI Version

1 ಆದದರಿಂದ ಸಹೋದರರೇ, ನೀವು ನಿಮ್ಮ ದೇಹಗಳನ್ನು ಪರಿಶುದ್ಧವೂ ದೇವರಿಗೆ ಮೆಚ್ಚಿಕೆಯೂ ಆಗಿರುವ ಸಜೀವಯಜ್ಞವಾಗಿ ಸಮರ್ಪಿಸ ಬೇಕೆಂದು ದೇವರ ಕರುಣೆಯಿಂದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ; ಇದೇ ನಿಮ್ಮ ಯೋಗ್ಯವಾದ ಸೇವೆ ಯಾಗಿದೆ.
2 ಇಹಲೋಕವನ್ನು ಅನುಸರಿಸದೆ ಉತ್ತಮ ವಾದದ್ದೂ ಮೆಚ್ಚಿಕೆಯಾದದ್ದೂ ಪರಿಪೂರ್ಣ ವಾದದ್ದೂ ಆಗಿರುವ ದೇವರ ಚಿತ್ತವೇನೆಂದು ನೀವು ವಿವೇಚಿಸಿ ತಿಳಿದುಕೊಳ್ಳುವಂತೆ ನೂತನ ಮನಸ್ಸನ್ನು ಹೊಂದಿಕೊಂಡು ರೂಪಾಂತರಗೊಂಡವರಾಗಿರ್ರಿ.
3 ನಿಮ್ಮೊಳಗೆ ಪ್ರತಿಯೊಬ್ಬನು ತನ್ನ ಯೋಗ್ಯತೆಗೆ ವಿಾರಿ ಭಾವಿಸಿಕೊಳ್ಳದೆ ದೇವರು ಪ್ರತಿಯೊಬ್ಬನಿಗೆ ಅವನವನ ವಿಶ್ವಾಸದ ಪ್ರಮಾಣಕ್ಕನುಸಾರವಾಗಿ ಕೊಟ್ಟಂತೆ ತನ್ನನ್ನು ಮಿತವಾಗಿ ತಿಳಿದುಕೊಳ್ಳಬೇಕೆಂದು ನನಗೆ ಕೊಡಲ್ಪಟ್ಟ ಕೃಪೆಗನುಸಾರವಾಗಿ ನಾನು ಹೇಳುತ್ತೇನೆ.
4 ನಮಗೆ ಒಂದೇ ದೇಹದಲ್ಲಿ ಬಹಳ ಅಂಗಗಳಿರಲಾಗಿ ಎಲ್ಲಾ ಅಂಗಗಳಿಗೆ ಹೇಗೆ ಒಂದೇ ಕೆಲಸವಿರುವದಿಲ್ಲವೋ
5 ಹಾಗೆಯೇ ಅನೇಕರಾದ ನಾವು ಕ್ರಿಸ್ತನಲ್ಲಿ ಒಂದೇ ದೇಹವಾಗಿದ್ದು ಒಬ್ಬರಿ ಗೊಬ್ಬರು ಪರಸ್ಪರ ಅಂಗಗಳಾಗಿದ್ದೇವೆ.
6 ಹೀಗೆ ಕೃಪೆಗನುಸಾರವಾಗಿ ನಮಗೆ ವಿಧವಿಧವಾದ ವರಗಳು ಕೊಡಲ್ಪಟ್ಟಿರಲು ಅವುಗಳಲ್ಲಿ ಅದು ಪ್ರವಾದನೆ ಯಾಗಿದ್ದರೆ ನಂಬಿಕೆಯ ಪ್ರಮಾಣಕ್ಕೆ ತಕ್ಕಂತೆ ಪ್ರವಾದಿಸೋಣ.
7 ಇಲ್ಲವೆ ಸೇವೆಯಾಗಿದ್ದರೆ ನಮ್ಮ ಸೇವೆಯಲ್ಲಿ ನಿರತರಾಗಿರೋಣ. ಬೋಧಿಸುವವನು ಬೋಧಿಸುವದರಲ್ಲಿ ನಿರತನಾಗಿರಲಿ.
8 ಇಲ್ಲವೆ ಎಚ್ಚರಿಸುವವನು ಎಚ್ಚರಿಸುವದರಲ್ಲಿ ನಿರತನಾಗಿರಲಿ ಮತ್ತು ಕೊಡುವವನು ಯಥಾರ್ಥವಾಗಿ ಕೊಡಲಿ. ಆಳುವವನು ಶ್ರದ್ಧೆಯಿಂದ ಆಳಲಿ, ಕರುಣೆಯನ್ನು ತೋರಿಸುವವನು ಸಂತೋಷಪೂರ್ವಕವಾಗಿ ತೋರಿಸಲಿ.
9 ಪ್ರೀತಿಯು ನಿಷ್ಕಪಟವಾಗಿರಲಿ ಕೆಟ್ಟತನವನ್ನು ಹೇಸಿ ಕೊಂಡು ಒಳ್ಳೆಯದಕ್ಕೆ ಅಂಟಿಕೊಳ್ಳಿರಿ.
10 ಸಹೋದರ ಪ್ರೀತಿಯಿಂದ ಒಬ್ಬರಿಗೊಬ್ಬರು ಕರುಣಾ ವಾತ್ಸಲ್ಯವುಳ್ಳ ವರಾಗಿರ್ರಿ; ಸನ್ಮಾನಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರ್ರಿ.
11 ಸೇವೆಯಲ್ಲಿ ಅಲಸ್ಯವಾಗಿರಬೇಡಿರಿ, ಆತ್ಮದಲ್ಲಿ ಆಸಕ್ತರಾಗಿದ್ದು ಕರ್ತನನ್ನು ಸೇವಿಸುವವ ರಾಗಿರ್ರಿ.
12 ನಿರೀಕ್ಷೆಯಲ್ಲಿ ಸಂತೋಷಿಸುತ್ತಾ ಸಂಕಟದಲ್ಲಿ ತಾಳ್ಮೆಯುಳ್ಳವರಾಗಿದ್ದು ಆಸಕ್ತಿಯುಳ್ಳವರಾಗಿ ಪ್ರಾರ್ಥನೆ ಯಲ್ಲಿ ನಿರತರಾಗಿರ್ರಿ.
13 ಪರಿಶುದ್ಧರ ಕೊರತೆಯ ಪ್ರಕಾರ ಹಂಚಿರಿ; ಅತಿಥಿಸತ್ಕಾರವನ್ನು ಮಾಡಿರಿ.
14 ನಿಮ್ಮನ್ನು ಹಿಂಸಿಸುವವರನ್ನು ಆಶೀರ್ವದಿಸಿರಿ; ಶಪಿಸದೆ ಆಶೀ ರ್ವದಿಸಿರಿ.
15 ಸಂತೋಷಪಡುವವರ ಸಂಗಡ ಸಂತೋಷಪಡಿರಿ; ಅಳುವವರ ಸಂಗಡ ಅಳಿರಿ.
16 ಒಬ್ಬರಿಗೊಬ್ಬರು ಒಂದೇ ಮನಸ್ಸುಳ್ಳುವರಾಗಿರ್ರಿ; ದೊಡ್ಡಸ್ತಿಕೆಗಳ ಮೇಲೆ ಮನಸ್ಸಿಡದೆ ದೀನರ ಸಂಗಡ ಬಳಿಕೆಯಾಗಿರ್ರಿ. ನಿಮ್ಮನ್ನು ನೀವೇ ಬುದ್ಧಿವಂತರೆಂದು ಭಾವಿಸಿಕೊಳ್ಳಬೇಡಿರಿ.
17 ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವದು ಗೌರವ ವಾದದ್ದೋ ಅದನ್ನೇ ಮಾಡುವವರಾಗಿರ್ರಿ.
18 ಸಾಧ್ಯ ವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನವಾಗಿರ್ರಿ.
19 ಅತಿ ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ--ಮುಯ್ಯಿಗೆ ಮುಯ್ಯಿ ತೀರಿಸು ವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆ ಎಂಬದಾಗಿ ಬರೆದದೆ.
20 ಹಾಗಾದರೆ ನಿನ್ನ ವೈರಿಯು ಹಸಿದಿದ್ದರೆ ಅವನಿಗೆ ಊಟಕ್ಕೆ ಬಡಿಸು; ಬಾಯಾರಿದ್ದರೆ ಕುಡಿಯುವದಕ್ಕೆ ಕೊಡು. ಹೀಗೆ ಮಾಡುವದರಿಂದ ಅವನ ತಲೆಯ ಮೇಲೆ ಕೆಂಡಗಳನ್ನು ಕೂಡಿಸಿಟ್ಟಂತಾಗುವದು.ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು.
21 ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×