|
|
1. “ಈಗಲಾದರೋ, ನನಗಿಂತ ಚಿಕ್ಕವರೂ ನನ್ನನ್ನು ಗೇಲಿ ಮಾಡುತ್ತಾರೆ. ಅವರ ತಂದೆಗಳನ್ನು ನನ್ನ ಕುರಿಕಾಯುವ ನಾಯಿಗಳಿಗೂ ಯೋಗ್ಯರಲ್ಲವೆಂದು ತಳ್ಳಿಬಿಟ್ಟಿದ್ದೆನು.
|
1. But now H6258 they that are younger H6810 H3117 than H4480 I have me in derision H7832 H5921 , whose H834 fathers H1 I would have disdained H3988 to have set H7896 with H5973 the dogs H3611 of my flock H6629 .
|
2. ಆ ಯೌವನಸ್ಥರ ತಂದೆಗಳಿಗೆ ನನ್ನಲ್ಲಿ ಕೆಲಸ ಮಾಡುವಷ್ಟು ಬಲವಿರಲಿಲ್ಲ. ಅವರು ಮುದುಕರಾಗಿದ್ದರು; ತ್ರಾಣವಿಲ್ಲದವರಾಗಿದ್ದರು.
|
2. Yea H1571 , whereto H4100 might the strength H3581 of their hands H3027 profit me , in whom H5921 old age H3624 was perished H6 ?
|
3. ಆ ಮನುಷ್ಯರು ಬಡಕಲಾಗಿದ್ದರು; ತಿನ್ನಲಿಕ್ಕಿಲ್ಲದೆ ಹಸಿವೆಯಿಂದಿದ್ದರು; ಅಡವಿಯ ಒಣಧೂಳನ್ನು ತಿನ್ನುತ್ತಿದ್ದರು.
|
3. For want H2639 and famine H3720 they were solitary H1565 ; fleeing H6207 into the wilderness H6723 in former time H570 desolate H7722 and waste H4875 .
|
4. ಅವರು ಮರುಭೂಮಿಯಲ್ಲಿ ಉಪ್ಪುಸಸಿಗಳನ್ನು ಕೀಳುತ್ತಿದ್ದರು; ಕುರುಚಲು ಮರದ ಬೇರುಗಳನ್ನು ತಿನ್ನುತ್ತಿದ್ದರು.
|
4. Who cut up H6998 mallows H4408 by H5921 the bushes H7880 , and juniper H7574 roots H8328 for their meat H3899 .
|
5. ಅವರನ್ನು ಬೇರೆಯವರು ಬಲವಂತದಿಂದ ಹೊರಗಟ್ಟುತ್ತಿದ್ದರು. ಕಳ್ಳರನ್ನೋ ಎಂಬಂತೆ ಜನರು ಅವರನ್ನು ಕಂಡು ಕೂಗಿಕೊಳ್ಳುತ್ತಿದ್ದರು.
|
5. They were driven forth H1644 from H4480 among H1460 men , (they cried H7321 after H5921 them as after a thief H1590 ;)
|
6. ಆ ಮುದುಕರು ನದಿಯ ದಂಡೆಗಳಲ್ಲಿಯೂ ನೆಲದ ಕುಳಿಗಳಲ್ಲಿಯೂ ಗುಹೆಗಳಲ್ಲಿಯೂ ವಾಸಿಸುತ್ತಿದ್ದರು.
|
6. To dwell H7931 in the clefts H6178 of the valleys H5158 , in caves H2356 of the earth H6083 , and in the rocks H3710 .
|
7. ಅವರು ಪೊದೆಗಳಲ್ಲಿ ಕಾಡುಕತ್ತೆಗಳಂತೆ ಅರಚುತ್ತಿದ್ದರು; ಮುಳ್ಳುಗಿಡಗಳ ಕೆಳಗೆ ಕೂಡಿಕೊಳ್ಳುತ್ತಿದ್ದರು.
|
7. Among H996 the bushes H7880 they brayed H5101 ; under H8478 the nettles H2738 they were gathered together H5596 .
|
8. ಅಯೋಗ್ಯರಾಗಿದ್ದ ಈ ಗುಂಪಿನವರು ದೇಶಭ್ರಷ್ಟರಾಗಿದ್ದರು.
|
8. They were children H1121 of fools H5036 , yea H1571 , children H1121 of base men H1097 H8034 : they were viler H5217 than H4480 the earth H776 .
|
9. “ಈಗಲಾದರೋ ಅವರ ಗಂಡುಮಕ್ಕಳು ನನ್ನ ಮೇಲೆ ಗೇಲಿ ಹಾಡುಗಳನ್ನು ಕಟ್ಟುವರು; ನನ್ನ ಹೆಸರು ಅವರಿಗೆ ಹಾಸ್ಯವಾಯಿತು.
|
9. And now H6258 am H1961 I their song H5058 , yea , I am H1961 their byword H4405 .
|
10. ಆ ಯೌವನಸ್ಥರು ನನ್ನನ್ನು ಕಂಡು ಅಸಹ್ಯಪಡುತ್ತಾರೆ; ನನ್ನಿಂದ ದೂರ ನಿಲ್ಲುತ್ತಾರೆ. ನನ್ನ ಮುಖದ ಮೇಲೆ ಉಗುಳುವುದಕ್ಕೂ ಅವರು ಹಿಂದೆಗೆಯರು!
|
10. They abhor H8581 me , they flee far H7368 from H4480 me , and spare H2820 not H3808 to spit H7536 in my face H4480 H6440 .
|
11. ದೇವರು ನನ್ನ ಬಿಲ್ಲಿನ ತಂತಿಯನ್ನು ಕಿತ್ತು ನನ್ನನ್ನು ಬಲಹೀನಗೊಳಿಸಿದ್ದಾನೆ. ಆ ಯೌವನಸ್ಥರು ಕಡಿವಾಣವಿಲ್ಲದವರಾಗಿ ಕೋಪದಿಂದ ನನಗೆ ವಿರೋಧವಾಗಿ ಎದ್ದಿದ್ದಾರೆ.
|
11. Because H3588 he hath loosed H6605 my cord H3499 , and afflicted H6031 me , they have also let loose H7971 the bridle H7448 before H4480 H6440 me.
|
12. ಅವರು ನನ್ನ ಬಲಗಡೆಯಲ್ಲಿ ಎದ್ದು ನನ್ನ ಕಾಲುಗಳನ್ನು ಹಿಂದಕ್ಕೆ ನೂಕಿ ನನ್ನನ್ನು ನಾಶಮಾಡಲು ದಿಬ್ಬಹಾಕಿದ್ದಾರೆ.
|
12. Upon H5921 my right H3225 hand rise H6965 the youth H6526 ; they push away H7971 my feet H7272 , and they raise up H5549 against H5921 me the ways H734 of their destruction H343 .
|
13. ನಾನು ತಪ್ಪಿಸಿಕೊಂಡು ಹೋಗುವ ದಾರಿಯನ್ನು ಆ ಯೌವನಸ್ಥರು ಕಾಯುತ್ತಿದ್ದಾರೆ. ನನ್ನನ್ನು ನಾಶಮಾಡುವುದರಲ್ಲಿ ಅವರು ಯಶಸ್ವಿಯಾಗುವರು. ಅವರಿಗೆ ವಿರುದ್ಧವಾಗಿ ನನಗೆ ಸಹಾಯಮಾಡಲು ಯಾರೂ ಇಲ್ಲ.
|
13. They mar H5420 my path H5410 , they set forward H3276 my calamity H1942 , they have no H3808 helper H5826 .
|
14. ಅವರು ಗೋಡೆಯನ್ನು ಒಡೆದು ನುಗ್ಗಿಬರಲು ಕಲ್ಲುಗಳು ನನ್ನ ಮೇಲೆ ಬೀಳುವವು.
|
14. They came H857 upon me as a wide H7342 breaking in H6556 of waters : in H8478 the desolation H7722 they rolled themselves H1556 upon me .
|
15. ನಾನು ಭಯದಿಂದ ನಡುಗುತ್ತಿರುವೆ. ಗಾಳಿಯು ವಸ್ತುಗಳನ್ನು ಕೊಚ್ಚಿಕೊಂಡು ಹೋಗುವಂತೆ ಆ ಯೌವನಸ್ಥರು ನನ್ನ ಮಾನವನ್ನು ಅಟ್ಟಿಬಿಡುವರು. ನನ್ನ ಸುರಕ್ಷತೆಯು ಮೋಡದಂತೆ ಕಾಣದೆಹೋಗುವುದು.
|
15. Terrors H1091 are turned H2015 upon H5921 me : they pursue H7291 my soul H5082 as the wind H7307 : and my welfare H3444 passeth away H5674 as a cloud H5645 .
|
16. “ಈಗ ನನ್ನ ಜೀವಿತವು ಕೊನೆಗೊಂಡಿದೆ; ಸಾವು ಸಮೀಪವಾಗಿದೆ. ಸಂಕಟದ ದಿನಗಳು ನನ್ನನ್ನು ಹಿಡಿದುಕೊಂಡಿವೆ.
|
16. And now H6258 my soul H5315 is poured out H8210 upon H5921 me ; the days H3117 of affliction H6040 have taken hold upon H270 me.
|
17. ರಾತ್ರಿಯಲ್ಲಿ ನನ್ನ ಎಲುಬುಗಳೆಲ್ಲಾ ನೋಯುತ್ತವೆ. ನನ್ನನ್ನು ಕಚ್ಚುತ್ತಿರುವ ನೋವು ನಿಲ್ಲುವುದೇ ಇಲ್ಲ.
|
17. My bones H6106 are pierced H5365 in H4480 H5921 me in the night season H3915 : and my sinews H6207 take no rest H7901 H3808 .
|
18. ದೇವರು ನನ್ನ ಮೇಲಂಗಿಯ ಕೊರಳಪಟ್ಟಿಯನ್ನು ಹಿಡಿದು ನನ್ನ ಬಟ್ಟೆಯನ್ನು ತಿರುವಿಬಿಟ್ಟಿದ್ದಾನೆ.
|
18. By the great H7230 force H3581 of my disease is my garment H3830 changed H2664 : it bindeth me about H247 as the collar H6310 of my coat H3801 .
|
19. ದೇವರು ನನ್ನನ್ನು ಮಣ್ಣಿಗೆ ಎಸೆದುಬಿಟ್ಟಿದ್ದಾನೆ, ನಾನು ಧೂಳಿನಂತೆಯೂ ಬೂದಿಯಂತೆಯೂ ಆಗಿದ್ದೇನೆ.
|
19. He hath cast H3384 me into the mire H2563 , and I am become H4911 like dust H6083 and ashes H665 .
|
20. “ದೇವರೇ, ನಾನು ಸಹಾಯಕ್ಕಾಗಿ ನಿನಗೆ ಮೊರೆಯಿಡುವೆನು, ಆದರೆ ನೀನು ಉತ್ತರಿಸುವುದಿಲ್ಲ. ನಾನು ಎದ್ದುನಿಂತು ಪ್ರಾರ್ಥಿಸಿದರೂ ನೀನು ನನಗೆ ಗಮನ ಕೊಡುವುದಿಲ್ಲ.
|
20. I cry H7768 unto H413 thee , and thou dost not H3808 hear H6030 me : I stand up H5975 , and thou regardest H995 me not .
|
21. ದೇವರೇ, ನೀನು ನನ್ನ ಪಾಲಿಗೆ ಕ್ರೂರನಾಗಿಬಿಟ್ಟೆ. ನಿನ್ನ ಶಕ್ತಿಯಿಂದ ನನ್ನನ್ನು ನೋಯಿಸುತ್ತಿರುವೆ.
|
21. Thou art become H2015 cruel H393 to me : with thy strong H6108 hand H3027 thou opposest thyself against H7852 me.
|
22. ದೇವರೆ, ನನ್ನನ್ನು ಎತ್ತಿಕೊಂಡು ಹೋಗಲು ನೀನು ಬಿರುಗಾಳಿಗೆ ಅವಕಾಶಕೊಟ್ಟೆ; ನೀನು ನನ್ನನ್ನು ಎತ್ತಿ ಬಿರುಗಾಳಿಗೆ ಎಸೆದುಬಿಟ್ಟೆ.
|
22. Thou liftest me up H5375 to H413 the wind H7307 ; thou causest me to ride H7392 upon it , and dissolvest H4127 my substance H7738 .
|
23. ನೀನು ನನ್ನನ್ನು ಮರಣಕ್ಕೀಡು ಮಾಡಿರುವುದು ನನಗೆ ಗೊತ್ತಿದೆ. ಜೀವಿಸಿರುವ ಪ್ರತಿಯೊಬ್ಬನೂ ಸಾಯಲೇಬೇಕು.
|
23. For H3588 I know H3045 that thou wilt bring H7725 me to death H4194 , and to the house H1004 appointed H4150 for all H3605 living H2416 .
|
24. “ಆದರೆ ಈಗಾಗಲೇ ನಾಶವಾಗಿ ಸಹಾಯಕ್ಕಾಗಿ ಕೂಗಿಕೊಳ್ಳುವವನಿಗೆ ಯಾರೂ ಕೇಡುಮಾಡುವುದಿಲ್ಲ.
|
24. Howbeit H389 he will not H3808 stretch out H7971 his hand H3027 to the grave H1164 , though H518 they cry H7769 in his destruction H6365 .
|
25. ದೇವರೇ, ಕಷ್ಟದಲ್ಲಿರುವವರಿಗಾಗಿ ನಾನು ಅತ್ತದ್ದು ನಿನಗೆ ಗೊತ್ತಿದೆ. ಬಡವರಿಗೋಸ್ಕರ ನನ್ನ ಹೃದಯವು ಬಹು ದುಃಖಗೊಂಡದ್ದು ನಿನಗೆ ತಿಳಿದಿದೆ.
|
25. Did not H3808 I weep H1058 for him that was in trouble H7186 H3117 ? was not my soul H5315 grieved H5701 for the poor H34 ?
|
26. ಆದರೆ ನಾನು ಒಳ್ಳೆಯವುಗಳನ್ನು ನಿರೀಕ್ಷಿಸುತ್ತಿದ್ದಾಗ ನನಗೆ ಕೇಡುಗಳೇ ಆದವು. ನಾನು ಬೆಳಕಿಗಾಗಿ ಎದುರುನೋಡುತ್ತಿದ್ದಾಗ ನನಗೆ ಕತ್ತಲಾಯಿತು.
|
26. When H3588 I looked for H6960 good H2896 , then evil H7451 came H935 unto me : and when I waited H3176 for light H216 , there came H935 darkness H652 .
|
27. ನನ್ನ ಅಂತರಂಗವು ಕುದಿಯುತ್ತಿದೆ; ಸಂಕಟವು ನಿಲ್ಲುತ್ತಲೇ ಇಲ್ಲ. ಸಂಕಟವು ಈಗ ತಾನೆ ಆರಂಭಗೊಂಡಿದೆ.
|
27. My bowels H4578 boiled H7570 , and rested H1826 not H3808 : the days H3117 of affliction H6040 prevented H6923 me.
|
28. ನಾನು ದುಃಖಿತನೂ ಕುಂದಿಹೋದವನೂ ಆಗಿರುವೆ; ನನಗೆ ಉಪಶಮನವೇ ಇಲ್ಲ. ನಾನು ಸಭೆಯಲ್ಲಿ ನಿಂತುಕೊಂಡು ಸಹಾಯಕ್ಕಾಗಿ ಕೂಗುತ್ತಿರುವೆ.
|
28. I went H1980 mourning H6937 without H3808 the sun H2535 : I stood up H6965 , and I cried H7768 in the congregation H6951 .
|
29. ನಾನು ನರಿಗಳಂತೆಯೂ ಉಷ್ಟ್ರಪಕ್ಷಿಗಳಂತೆಯೂ ಒಬ್ಬಂಟಿಗನಾಗಿರುವೆ.
|
29. I am H1961 a brother H251 to dragons H8577 , and a companion H7453 to owls H1323 H3284 .
|
30. ನನ್ನ ಚರ್ಮವು ಕಡುಕಪ್ಪಾಗಿದೆ. ನನ್ನ ದೇಹವು ಜ್ವರದಿಂದ ಬಿಸಿಯಾಗಿದೆ.
|
30. My skin H5785 is black H7835 upon H4480 H5921 me , and my bones H6106 are burned H2787 with H4480 heat H2721 .
|
31. ಶೋಕಗೀತೆಗಳನ್ನು ನುಡಿಸಲು ನನ್ನ ಹಾರ್ಪ್ ವಾದ್ಯವನ್ನು ಶೃತಿ ಮಾಡಲಾಗಿದೆ. ನನ್ನ ಕೊಳಲು ಅಳುವವರಿಗೆ ತಕ್ಕಂತೆ ನುಡಿಯುತ್ತದೆ. PE
|
31. My harp H3658 also is H1961 turned to mourning H60 , and my organ H5748 into the voice H6963 of them that weep H1058 .
|