|
|
1. {#1ಮಿರ್ಯಾಮಳ ಮರಣ } PSಮೊದಲನೆಯ ತಿಂಗಳಲ್ಲಿ ಇಡೀ ಇಸ್ರೇಲ್ ಸಮುದಾಯವು ಚಿನ್ ಮರುಭೂಮಿಗೆ ಬಂದಿತು. ಅವರು ಕಾದೇಶಿನಲ್ಲಿ ಇಳಿದುಕೊಂಡರು. ಅಲ್ಲಿ ಮಿರ್ಯಾಮಳು ಸತ್ತಳು. ಆಕೆಯ ಶವವನ್ನು ಅಲ್ಲಿ ಸಮಾಧಿ ಮಾಡಲಾಯಿತು. PE
|
1. Then came H935 the children H1121 of Israel H3478 , even the whole H3605 congregation H5712 , into the desert H4057 of Zin H6790 in the first H7223 month H2320 : and the people H5971 abode H3427 in Kadesh H6946 ; and Miriam H4813 died H4191 there H8033 , and was buried H6912 there H8033 .
|
2. {#1ಮೋಶೆಯ ತಪ್ಪು } PSಅಲ್ಲಿ ನೀರಿಲ್ಲದಿದ್ದ ಕಾರಣ ಅವರು ಮೋಶೆ ಆರೋನರ ವಿರುದ್ಧವಾಗಿ ಸೇರಿಬಂದರು.
|
2. And there was H1961 no H3808 water H4325 for the congregation H5712 : and they gathered themselves together H6950 against H5921 Moses H4872 and against H5921 Aaron H175 .
|
3. ಜನರು ಮೋಶೆಯ ಸಂಗಡ ವಾದಮಾಡಿ, “ನಮ್ಮ ಸಹೋದರರು ಯೆಹೋವನ ಸನ್ನಿಧಿಯಲ್ಲಿ ಸತ್ತಾಗ ನಾವೂ ಸತ್ತುಹೋಗಿದ್ದರೆ ಎಷ್ಟೋ ಮೇಲಾಗಿತ್ತು.
|
3. And the people H5971 chided H7378 with H5973 Moses H4872 , and spoke H559 , saying H559 , Would God H3863 that we had died H1478 when our brethren H251 died H1478 before H6440 the LORD H3068 !
|
4. ಯೆಹೋವನ ಜನರನ್ನು ಈ ಮರುಭೂಮಿಗೆ ಯಾಕೆ ಕರೆದುಕೊಂಡು ಬಂದೆ? ನಾವು ಮತ್ತು ನಮ್ಮ ಪ್ರಾಣಿಗಳು ಇಲ್ಲಿ ಸಾಯಬೇಕೆಂದು ನೀನು ಇಚ್ಛಿಸುತ್ತೀಯೋ?
|
4. And why H4100 have ye brought up H935 H853 the congregation H6951 of the Lord H3068 into H413 this H2088 wilderness H4057 , that we H587 and our cattle H1165 should die H4191 there H8033 ?
|
5. ಈಜಿಪ್ಟಿನಿಂದ ನಮ್ಮನ್ನು ಇಲ್ಲಿಗೆ ಯಾಕೆ ಕರೆತಂದೆ? ಈ ಕೆಟ್ಟ ಸ್ಥಳಕ್ಕೆ ನಮ್ಮನ್ನು ಯಾಕೆ ಕರೆದುಕೊಂಡು ಬಂದೆ? ಇಲ್ಲಿ ಧಾನ್ಯವಾಗಲಿ ಅಂಜೂರವಾಗಲಿ ದ್ರಾಕ್ಷಿಯಾಗಲಿ ದಾಳಿಂಬೆಯಾಗಲಿ ಇಲ್ಲ, ಕುಡಿಯುವುದಕ್ಕೆ ನೀರೂ ಇಲ್ಲ” ಎಂದು ಹೇಳಿದರು. PE
|
5. And wherefore H4100 have ye made us to come up H5927 out of Egypt H4480 H4714 , to bring us in H935 H853 unto H413 this H2088 evil H7451 place H4725 ? it is no H3808 place H4725 of seed H2233 , or of figs H8384 , or of vines H1612 , or of pomegranates H7416 ; neither H369 is there any water H4325 to drink H8354 .
|
6. PSಮೋಶೆ ಆರೋನರು ಜನಸಮೂಹದ ಎದುರಿನಿಂದ ದೇವದರ್ಶನಗುಡಾರದ ಪ್ರವೇಶದ್ವಾರಕ್ಕೆ ಹೋಗಿ ಅಡ್ಡಬಿದ್ದರು. ಆಗ ಯೆಹೋವನ ಮಹಿಮೆಯು ಅವರಿಗೆ ಪ್ರತ್ಯಕ್ಷವಾಯಿತು. PE
|
6. And Moses H4872 and Aaron H175 went H935 from the presence H4480 H6440 of the assembly H6951 unto H413 the door H6607 of the tabernacle H168 of the congregation H4150 , and they fell H5307 upon H5921 their faces H6440 : and the glory H3519 of the LORD H3068 appeared H7200 unto H413 them.
|
7. PSಯೆಹೋವನು ಮೋಶೆಯೊಡನೆ ಮಾತಾಡಿ,
|
7. And the LORD H3068 spoke H1696 unto H413 Moses H4872 , saying H559 ,
|
8. “ಬಳಿಕ ನೀನು ಮತ್ತು ನಿನ್ನ ಸಹೋದರನಾದ ಆರೋನನು ಜನರನ್ನು ಬಂಡೆಯ ಮುಂದೆ ಸಭೆಸೇರಿಸಿ, ಜನರ ಮುಂದೆ ಆ ಬಂಡೆಗೆ ಮಾತಾಡು. ಆಗ ನೀರು ಬಂಡೆಯಿಂದ ಹರಿಯುವುದು ಮತ್ತು ನೀರನ್ನು ಜನರಿಗೂ ಅವರ ಪಶುಗಳಿಗೂ ಕೊಡು” ಎಂದು ಹೇಳಿದನು. PE
|
8. Take H3947 H853 the rod H4294 , and gather thou the assembly together H6950 H853 H5712 , thou H859 , and Aaron H175 thy brother H251 , and speak H1696 ye unto H413 the rock H5553 before their eyes H5869 ; and it shall give forth H5414 his water H4325 , and thou shalt bring forth H3318 to them water H4325 out of H4480 the rock H5553 : so thou shalt give H853 the congregation H5712 and their beasts H1165 drink H8248 .
|
9. PSಕೋಲು ಪವಿತ್ರಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿತ್ತು. ಯೆಹೋವನು ಹೇಳಿದಂತೆ ಮೋಶೆ ಕೋಲನ್ನು ತೆಗೆದುಕೊಂಡನು.
|
9. And Moses H4872 took H3947 H853 the rod H4294 from before H4480 H6440 the LORD H3068 , as H834 he commanded H6680 him.
|
10. ಜನರು ಬಂಡೆಯ ಮುಂದೆ ಒಟ್ಟಾಗಿ ಸೇರಿಬರಬೇಕೆಂದು ಮೋಶೆ ಆರೋನರು ಹೇಳಿದರು. ಆಗ ಮೋಶೆ, “ದ್ರೋಹಿಗಳೇ, ಈಗ ನನಗೆ ಕಿವಿಗೊಡಿರಿ. ನಿಮಗೋಸ್ಕರವಾಗಿ ಈ ಬಂಡೆಯಿಂದ ನೀರು ಹರಿಯುವಂತೆ ನಾವು ಮಾಡಬೇಕೋ?” ಎಂದು ಹೇಳಿ,
|
10. And Moses H4872 and Aaron H175 gathered the congregation together H6950 H853 H6951 before H413 H6440 the rock H5553 , and he said H559 unto them, Hear H8085 now H4994 , ye rebels H4784 ; must we fetch H3318 you water H4325 out of H4480 this H2088 rock H5553 ?
|
11. ತನ್ನ ಕೈಯಲ್ಲಿದ್ದ ಕೋಲನ್ನು ಎತ್ತಿ ಎರಡು ಸಾರಿ ಬಂಡೆಯನ್ನು ಹೊಡೆದನು. ಬಂಡೆಯಿಂದ ನೀರು ಹರಿಯತೊಡಗಿತು. ಜನರಿಗೆ ಮತ್ತು ಪಶುಗಳಿಗೆ ಕುಡಿಯಲು ನೀರು ದೊರೆಯಿತು. PE
|
11. And Moses H4872 lifted up H7311 H853 his hand H3027 , and with his rod H4294 he smote H5221 H853 the rock H5553 twice H6471 : and the water H4325 came out H3318 abundantly H7227 , and the congregation H5712 drank H8354 , and their beasts H1165 also .
|
12. PSಆದರೆ ಯೆಹೋವನು ಮೋಶೆ ಆರೋನರಿಗೆ, “ನೀವು ನನ್ನನ್ನು ನಂಬದವರಾಗಿ ಇಸ್ರೇಲರ ಎದುರಿನಲ್ಲಿ ನನ್ನ ಪವಿತ್ರತೆಯನ್ನು ತೋರಿಸದೆ ಹೋದದ್ದರಿಂದ ಈ ಸಮುದಾಯದವರಿಗೆ ಕೊಡಲಿರುವ ದೇಶಕ್ಕೆ ನೀವು ಅವರನ್ನು ಕರೆದುಕೊಂಡು ಹೋಗುವುದಿಲ್ಲ.” ಎಂದು ಹೇಳಿದನು. PE
|
12. And the LORD H3068 spoke H559 unto H413 Moses H4872 and Aaron H175 , Because H3282 ye believed H539 me not H3808 , to sanctify H6942 me in the eyes H5869 of the children H1121 of Israel H3478 , therefore H3651 ye shall not H3808 bring H935 H853 this H2088 congregation H6951 into H413 the land H776 which H834 I have given H5414 them.
|
13. PSಇಸ್ರೇಲರು ಅಲ್ಲಿ ಯೆಹೋವನೊಡನೆ ವಾದ ಮಾಡಿದ್ದರಿಂದ ಆ ಸ್ಥಳವು “ಮೆರೀಬಾ ಬುಗ್ಗೆ” ಎಂದು ಕರೆಯಲ್ಪಟ್ಟಿತು. ಅದಲ್ಲದೆ ಯೆಹೋವನು ತಾನು ಪರಿಶುದ್ಧನು ಎಂಬುದನ್ನು ಅವರಿಗೆ ತೋರಿಸಿದ ಸ್ಥಳವು ಇದೇ. PE
|
13. This H1992 is the water H4325 of Meribah H4809 ; because H834 the children H1121 of Israel H3478 strove H7378 with H854 the LORD H3068 , and he was sanctified H6942 in them.
|
14. {#1ಎದೋಮ್ಯರು ಇಸ್ರೇಲರನ್ನು ದಾಟಿಹೋಗಲು ಬಿಡುವುದಿಲ್ಲ } PSಮೋಶೆಯು ಕಾದೇಶಿನಲ್ಲಿದ್ದಾಗ ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ, PEPBR PIS“ನಿಮ್ಮ ಸಂಬಂಧಿಕರವಾದ ಇಸ್ರೇಲರು ಕೇಳಿಕೊಳ್ಳುವುದೇನೆಂದರೆ: ನಮಗೆ ಸಂಭವಿಸಿದ ಎಲ್ಲಾ ಕಷ್ಟಗಳು ನಿಮಗೆ ಗೊತ್ತಿದೆ.
|
14. And Moses H4872 sent H7971 messengers H4397 from Kadesh H4480 H6946 unto H413 the king H4428 of Edom H123 , Thus H3541 saith H559 thy brother H251 Israel H3478 , Thou H859 knowest H3045 H853 all H3605 the travail H8513 that H834 hath befallen H4672 us:
|
15. ನಮ್ಮ ಪೂರ್ವಿಕರು ಈಜಿಪ್ಟ್ ದೇಶಕ್ಕೆ ಇಳಿದುಹೋದದ್ದೂ ನಾವು ಅಲ್ಲಿ ಬಹುಕಾಲ ವಾಸವಾಗಿದ್ದದ್ದೂ ಈಜಿಪ್ಟಿನವರು ನಮಗೂ ನಮ್ಮ ಪೂರ್ವಿಕರಿಗೂ ಕ್ರೂರರಾಗಿದ್ದದ್ದೂ ನಿಮಗೆ ತಿಳಿದದೆ.
|
15. How our fathers H1 went down H3381 into Egypt H4714 , and we have dwelt H3427 in Egypt H4714 a long H7227 time H3117 ; and the Egyptians H4714 vexed H7489 us , and our fathers H1 :
|
16. ನಾವು ಯೆಹೋವನಿಗೆ ಮೊರೆಯಿಡಲಾಗಿ ಆತನು ನಮ್ಮ ಪ್ರಾರ್ಥನೆಯನ್ನು ಕೇಳಿ ದೂತನನ್ನು ಕಳುಹಿಸಿ ನಮ್ಮನ್ನು ಈಜಿಪ್ಟಿನಿಂದ ಬಿಡಿಸಿದ್ದನ್ನು ನೀವು ಬಲ್ಲಿರಿ. PIEPIS“ಈಗ ನಾವು ನಿಮ್ಮ ಪ್ರದೇಶದ ಗಡಿಯಲ್ಲಿರುವ ಕಾದೇಶೆಂಬ ಊರಲ್ಲಿದ್ದೇವೆ.
|
16. And when we cried H6817 unto H413 the LORD H3068 , he heard H8085 our voice H6963 , and sent H7971 an angel H4397 , and hath brought us forth H3318 out of Egypt H4480 H4714 : and, behold H2009 , we H587 are in Kadesh H6946 , a city H5892 in the uttermost H7097 of thy border H1366 :
|
17. ನಿಮ್ಮ ದೇಶವನ್ನು ದಾಟಿಹೋಗುವುದಕ್ಕೆ ನಮಗೆ ಅಪ್ಪಣೆಯಾಗಬೇಕೆಂದು ಬೇಡಿಕೊಳ್ಳುತ್ತೇವೆ. ನಾವು ಹೊಲಗಳಲ್ಲಿಯಾಗಲಿ ದ್ರಾಕ್ಷಿತೋಟಗಳಲ್ಲಿಯಾಗಲಿ ಹಾದುಹೋಗುವುದಿಲ್ಲ. ಬಾವಿಗಳ ನೀರನ್ನು ಕುಡಿಯುವುದಿಲ್ಲ. ರಾಜಮಾರ್ಗದಲ್ಲಿಯೇ ನಡೆದು ತಮ್ಮ ದೇಶದ ಮೇರೆಗಳನ್ನು ದಾಟುವ ತನಕ ಎಡಕ್ಕಾಗಲಿ ಬಲಕ್ಕಾಗಲಿ ತಿರುಗುವುದಿಲ್ಲ” ಎಂದು ಹೇಳಿಸಿದನು. PIEPBR
|
17. Let us pass H5674 , I pray thee H4994 , through thy country H776 : we will not H3808 pass through H5674 the fields H7704 , or through the vineyards H3754 , neither H3808 will we drink H8354 of the water H4325 of the wells H875 : we will go H1980 by the king H4428 's high way H1870 , we will not H3808 turn H5186 to the right hand H3225 nor to the left H8040 , until H5704 H834 we have passed H5674 thy borders H1366 .
|
18. PSಆದರೆ ಎದೋಮಿನ ಅರಸನು, “ನಮ್ಮ ದೇಶವನ್ನು ನೀವು ದಾಟಿಹೋಗಕೂಡದು. ದಾಟುವುದಾದರೆ, ನಾವು ನಿಮ್ಮ ಮೇಲೆ ಯುದ್ಧಕ್ಕೆ ಬರುತ್ತೇವೆ” ಎಂದು ಉತ್ತರಕೊಟ್ಟನು. PE
|
18. And Edom H123 said H559 unto H413 him , Thou shalt not H3808 pass H5674 by me, lest H6435 I come out H3318 against H7125 thee with the sword H2719 .
|
19. PSಅದಕ್ಕೆ ಇಸ್ರೇಲರು, “ನಾವು ರಾಜಮಾರ್ಗದಲ್ಲಿಯೇ ಹೋಗುವೆವು. ನಾವೂ ನಮ್ಮ ಪಶುಗಳೂ ನಿಮ್ಮ ನೀರನ್ನು ಕುಡಿದರೆ ಅದಕ್ಕೆ ಬೆಲೆ ಕೊಡುವೆವು. ನಮಗೆ ಕೇವಲ ನಡೆದುಕೊಂಡು ಹೋಗಲು ಅನುಮತಿ ಕೊಡಿ. ಇದೊಂದೇ ನಮ್ಮ ಚಿಕ್ಕ ಬೇಡಿಕೆ” ಎಂದು ಹೇಳಿದರು. PE
|
19. And the children H1121 of Israel H3478 said H559 unto H413 him , We will go H5927 by the high way H4546 : and if H518 I H589 and my cattle H4735 drink H8354 of thy water H4325 , then I will pay H5414 H4377 for it : I will only H7535 , without H369 doing any thing H1697 else , go through H5674 on my feet H7272 .
|
20. PSಆದರೆ ಮತ್ತೆ ಎದೋಮ್ಯರು, “ನೀವು ನಮ್ಮ ದೇಶವನ್ನು ದಾಟಿಹೋಗುವುದಕ್ಕೆ ನಾವು ಬಿಡುವುದಿಲ್ಲ” ಎಂದು ಉತ್ತರಿಸಿದರು. PEPSಬಳಿಕ ಎದೋಮ್ಯರ ಅರಸನು ಬಲಿಷ್ಠವಾದ ದೊಡ್ಡ ಸೈನ್ಯವನ್ನು ಕೂಡಿಸಿಕೊಂಡು ಇಸ್ರೇಲರ ವಿರುದ್ಧ ಯುದ್ಧಮಾಡಲು ಹೊರಟನು.
|
20. And he said H559 , Thou shalt not H3808 go through H5674 . And Edom H123 came out H3318 against H7125 him with much H3515 people H5971 , and with a strong H2389 hand H3027 .
|
21. ಇಸ್ರೇಲರು ಅವನ ದೇಶವನ್ನು ಹಾದು ಹೋಗಲು ಎದೋಮ್ಯರ ಅರಸನು ಬಿಡಲಿಲ್ಲ. ಆಗ ಇಸ್ರೇಲರು ಬೇರೊಂದು ದಿಕ್ಕಿನಲ್ಲಿ ಹೋದರು. PE
|
21. Thus Edom H123 refused H3985 to give H5414 H853 Israel H3478 passage H5674 through his border H1366 : wherefore Israel H3478 turned away H5186 from H4480 H5921 him.
|
22. {#1ಆರೋನನ ಮರಣ } PSಇಸ್ರೇಲರೆಲ್ಲರೂ ಕಾದೇಶಿನಿಂದ ಹೊರಟು ಹೋರ್ ಬೆಟ್ಟಕ್ಕೆ ಹೋದರು.
|
22. And the children H1121 of Israel H3478 , even the whole H3605 congregation H5712 , journeyed H5265 from Kadesh H4480 H6946 , and came H935 unto mount H2022 Hor H2023 .
|
23. ಹೋರ್ ಬೆಟ್ಟವು ಎದೋಮ್ಯರ ಗಡಿಯ ಬಳಿಯಲ್ಲಿ ಇತ್ತು. ಯೆಹೋವನು ಮೋಶೆ ಆರೋನರಿಗೆ,
|
23. And the LORD H3068 spoke H559 unto H413 Moses H4872 and Aaron H175 in mount H2022 Hor H2023 , by H5921 the coast H1366 of the land H776 of Edom H123 , saying H559 ,
|
24. “ಆರೋನನು ಸತ್ತು ಪೂರ್ವಿಕರ ಬಳಿ ಸೇರುವ ಸಮಯ ಬಂದಿದೆ. ಇಸ್ರೇಲರಿಗೆ ನಾನು ವಾಗ್ದಾನ ಮಾಡಿದ ದೇಶದೊಳಗೆ ಆರೋನನು ಪ್ರವೇಶಿಸುವುದಿಲ್ಲ. ಯಾಕೆಂದರೆ ನೀವಿಬ್ಬರೂ ಮೆರೀಬಾ ಬುಗ್ಗೆಯ ಕುರಿತಾಗಿ ನಾನು ಕೊಟ್ಟ ಆಜ್ಞೆಗೆ ವಿಧೇಯರಾಗದಿದ್ದುದರಿಂದ ನಾನು ನಿಮಗೆ ಇದನ್ನು ಹೇಳುತ್ತಿದ್ದೇನೆ. PE
|
24. Aaron H175 shall be gathered H622 unto H413 his people H5971 : for H3588 he shall not H3808 enter H935 into H413 the land H776 which H834 I have given H5414 unto the children H1121 of Israel H3478 , because H5921 H834 ye rebelled against H4784 H853 my word H6310 at the water H4325 of Meribah H4809 .
|
25. PS“ಈಗ ನೀನು ಆರೋನನನ್ನೂ ಅವನ ಮಗನಾದ ಎಲ್ಲಾಜಾರನನ್ನೂ ಕರೆದುಕೊಂಡು ಹೋರ್ ಬೆಟ್ಟಕ್ಕೆ ಬಾ.
|
25. Take H3947 H853 Aaron H175 and Eleazar H499 his son H1121 , and bring them up H5927 H853 unto mount H2022 Hor H2023 :
|
26. ಆರೋನನ ಪ್ರತಿಷ್ಠಿತ ವಸ್ತ್ರಗಳನ್ನು ಅವನಿಂದ ತೆಗೆದು ಅವನ ಮಗನಾದ ಎಲ್ಲಾಜಾರನ ಮೇಲೆ ಹಾಕು. ಆರೋನನು ಅಲ್ಲಿ ಬೆಟ್ಟದ ಮೇಲೆ ಸತ್ತು ಪೂರ್ವಿಕರ ಬಳಿ ಸೇರುವನು” ಎಂದು ಹೇಳಿದನು. PE
|
26. And strip H6584 H853 Aaron H175 H853 of his garments H899 , and put them upon H3847 H853 Eleazar H499 his son H1121 : and Aaron H175 shall be gathered H622 unto his people , and shall die H4191 there H8033 .
|
27. PSಮೋಶೆಯು ಯೆಹೋವನ ಅಪ್ಪಣೆಗೆ ವಿಧೇಯನಾದನು. ಮೋಶೆ, ಆರೋನ ಮತ್ತು ಎಲ್ಲಾಜಾರ ಇವರು ಹೋರ್ ಬೆಟ್ಟವನ್ನು ಹತ್ತಿದರು. ಅವರು ಹೋಗುತ್ತಿರುವುದನ್ನು ಇಸ್ರೇಲರೆಲ್ಲರೂ ನೋಡಿದರು.
|
27. And Moses H4872 did H6213 as H834 the LORD H3068 commanded H6680 : and they went up H5927 into H413 mount H2022 Hor H2023 in the sight H5869 of all H3605 the congregation H5712 .
|
28. ಮೋಶೆಯು ಆರೋನನ ಪ್ರತಿಷ್ಠಿತಾ ವಸ್ತ್ರಗಳನ್ನು ಅವನಿಂದ ತೆಗೆದು ಅವನ ಮಗನಾದ ಎಲ್ಲಾಜಾರನ ಮೇಲೆ ಹಾಕಿದನು. ಬಳಿಕ ಆರೋನನು ಬೆಟ್ಟದ ಮೇಲೆ ಸತ್ತನು. ಮೋಶೆ ಮತ್ತು ಎಲ್ಲಾಜಾರನು ಬೆಟ್ಟದಿಂದ ಇಳಿದುಬಂದರು.
|
28. And Moses H4872 stripped H6584 H853 Aaron H175 H853 of his garments H899 , and put them upon H3847 H853 H853 Eleazar H499 his son H1121 ; and Aaron H175 died H4191 there H8033 in the top H7218 of the mount H2022 : and Moses H4872 and Eleazar H499 came down H3381 from H4480 the mount H2022 .
|
29. ಆರೋನನು ಸತ್ತನೆಂದು ಇಸ್ರೇಲರೆಲ್ಲರಿಗೆ ತಿಳಿಯಿತು. ಆದ್ದರಿಂದ ಇಸ್ರೇಲಿನಲ್ಲಿ ಪ್ರತಿಯೊಬ್ಬನೂ ಆರೋನನಿಗಾಗಿ ಮೂವತ್ತು ದಿನಗಳವರೆಗೆ ಶೋಕಿಸಿದನು. PE
|
29. And when all H3605 the congregation H5712 saw H7200 that H3588 Aaron H175 was dead H1478 , they mourned H1058 for H853 Aaron H175 thirty H7970 days H3117 , even all H3605 the house H1004 of Israel H3478 .
|