Bible Books

:

1. ಯೆಹೋವನೇ, ಘನಮಾನಗಳು ನಮ್ಮವಲ್ಲ!
ಅವು ನಿನ್ನವೇ.
ನಿನ್ನ ಪ್ರೀತಿಯ ನಿಮಿತ್ತವಾಗಿಯೂ ನಂಬಿಗಸ್ತಿಕೆಯ ನಿಮಿತ್ತವಾಗಿಯೂ ಘನಮಾನಗಳು ನಿನಗೇ ಸಲ್ಲತಕ್ಕದ್ದು.
1. Not H3808 unto us , O LORD H3068 , not H3808 unto us, but H3588 unto thy name H8034 give H5414 glory H3519 , for H5921 thy mercy H2617 , and for H5921 thy truth H571 's sake.
2. ಅವರ ದೇವರು ಎಲ್ಲಿದ್ದಾನೆಂದು ಜನಾಂಗಗಳು ಯಾಕೆ ಹೇಳಬೇಕು?
2. Wherefore H4100 should the heathen H1471 say H559 , Where H346 is now H4994 their God H430 ?
3. ನಮ್ಮ ದೇವರು ಪರಲೋಕದಲ್ಲಿದ್ದಾನೆ; ತಾನು ಬಯಸಿದ್ದನ್ನೆಲ್ಲಾ ಮಾಡುತ್ತಾನೆ.
3. But our God H430 is in the heavens H8064 : he hath done H6213 whatsoever H3605 H834 he hath pleased H2654 .
4. ಅನ್ಯಜನಾಂಗಗಳ “ದೇವರುಗಳು” ಬೆಳ್ಳಿಬಂಗಾರಗಳಿಂದ ಮಾಡಿದ ವಿಗ್ರಹಗಳಷ್ಟೇ.
ಅವುಗಳನ್ನು ಮಾಡಿದವರು ಮನುಷ್ಯರೇ.
4. Their idols H6091 are silver H3701 and gold H2091 , the work H4639 of men H120 's hands H3027 .
5. ವಿಗ್ರಹಗಳಿಗೆ ಬಾಯಿಗಳಿವೆ, ಆದರೆ ಮಾತಾಡಲಾರವು.
ಕಣ್ಣುಗಳಿವೆ, ಆದರೆ ನೋಡಲಾರವು.
5. They have mouths H6310 , but they speak H1696 not H3808 : eyes H5869 have they , but they see H7200 not H3808 :
6. ಕಿವಿಗಳಿವೆ, ಆದರೆ ಕೇಳಲಾರವು.
ಮೂಗುಗಳಿವೆ, ಆದರೆ ಮೂಸಲಾರವು.
6. They have ears H241 , but they hear H8085 not H3808 : noses H639 have they , but they smell H7306 not H3808 :
7. ಕೈಗಳಿವೆ, ಆದರೆ ಯಾವುದನ್ನೂ ಮುಟ್ಟಲಾರವು.
ಕಾಲುಗಳಿವೆ, ಆದರೆ ನಡೆಯಲಾರವು.
ಅವುಗಳ ಗಂಟಲುಗಳಿಂದ ಶಬ್ದವೇ ಹೊರಡದು.
7. They have hands H3027 , but they handle H4184 not H3808 : feet H7272 have they , but they walk H1980 not H3808 : neither H3808 speak H1897 they through their throat H1627 .
8. ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಟ್ಟಿರುವವರೂ ಅವುಗಳಂತೆಯೇ.
8. They that make H6213 them are H1961 like unto them H3644 ; so is every one H3605 that H834 trusteth H982 in them.
9. ಇಸ್ರೇಲರೇ, ಯೆಹೋವನಲ್ಲಿ ಭರವಸವಿಡಿರಿ.
ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
9. O Israel H3478 , trust H982 thou in the LORD H3068 : he H1931 is their help H5828 and their shield H4043 .
10. ಆರೋನನ ಮನೆತನದವರೇ, ಯೆಹೋವನಲ್ಲಿ ಭರವಸವಿಡಿರಿ.
ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
10. O house H1004 of Aaron H175 , trust H982 in the LORD H3068 : he H1931 is their help H5828 and their shield H4043 .
11. ಯೆಹೋವನ ಭಕ್ತರು ಆತನಲ್ಲಿ ಭರವಸವಿಡುವರು.
ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
11. Ye that fear H3373 the LORD H3068 , trust H982 in the LORD H3068 : he H1931 is their help H5828 and their shield H4043 .
12. ಯೆಹೋವನು ನಮ್ಮನ್ನು ಜ್ಞಾಪಕಮಾಡಿಕೊಂಡು ಆಶೀರ್ವದಿಸುವನು.
ಆತನು ಇಸ್ರೇಲನ್ನೂ ಆರೋನನ ಮನೆತನವನ್ನೂ ಆಶೀರ್ವದಿಸುವನು.
12. The LORD H3068 hath been mindful H2142 of us : he will bless H1288 us ; he will bless H1288 H853 the house H1004 of Israel H3478 ; he will bless H1288 H853 the house H1004 of Aaron H175 .
13. ಆತನು ದೊಡ್ಡವರೂ ಚಿಕ್ಕವರೂ ಎಂದೆನ್ನದೆ ತನ್ನ ಭಕ್ತರನ್ನೆಲ್ಲಾ ಆಶೀರ್ವದಿಸುವನು.
13. He will bless H1288 them that fear H3373 the LORD H3068 , both small H6996 and H5973 great H1419 .
14. ಯೆಹೋವನು ನಿಮ್ಮ ಕುಟುಂಬಗಳನ್ನೂ ನಿಮ್ಮ ಮಕ್ಕಳ ಕುಟುಂಬಗಳನ್ನೂ ಅಭಿವೃದ್ಧಿಪಡಿಸಲಿ.
14. The LORD H3068 shall increase you more and more H3254 H5921 , you and your children H1121 .
15. ಯೆಹೋವನಿಂದ ನಿಮಗೆ ಆಶೀರ್ವಾದವಾಗಲಿ.
ಪರಲೋಕವನ್ನೂ ಭೂಲೋಕವನ್ನೂ ಸೃಷ್ಟಿಮಾಡಿದಾತನು ಆತನೇ.
15. Ye H859 are blessed H1288 of the LORD H3068 which made H6213 heaven H8064 and earth H776 .
16. ಪರಲೋಕವು ಯೆಹೋವನದು.
ಆತನು ಭೂಲೋಕವನ್ನು ಮನುಷ್ಯರಿಗೆ ಕೊಟ್ಟನು.
16. The heaven H8064 , even the heavens H8064 , are the LORD H3068 's : but the earth H776 hath he given H5414 to the children H1121 of men H120 .
17. ಸತ್ತುಹೋದವರು ಯೆಹೋವನನ್ನು ಕೊಂಡಾಡುವುದಿಲ್ಲ.
ಸಮಾಧಿಯೊಳಗಿರುವವರು ಆತನನ್ನು ಸ್ತುತಿಸುವುದಿಲ್ಲ.
17. The dead H4191 praise H1984 not H3808 the LORD H3050 , neither H3808 any H3605 that go down H3381 into silence H1745 .
18. ನಾವಾದರೋ ಯೆಹೋವನನ್ನು ಈಗಲೂ ಯಾವಾಗಲೂ ಸ್ತುತಿಸುವೆವು! ಯೆಹೋವನಿಗೆ ಸ್ತೋತ್ರ! PE
18. But we H587 will bless H1288 the LORD H3050 from this time forth H4480 H6258 and forevermore H5704 H5769 . Praise H1984 the LORD H3050 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×