|
|
1. ಇದರ ತರುವಾಯ ಏನಾಯಿತಂದರೆ, ಮೋವಾಬಿನ ಮಕ್ಕಳೂ ಅಮ್ಮೋನಿನ ಮಕ್ಕಳೂ ಅಮ್ಮೋನ್ಯರ ಕೊಡ ಇತರರೂ ಯೆಹೋ ಷಾಫಾಟನ ಮೇಲೆ ಯುದ್ಧಮಾಡಲು ಬಂದರು.
|
1. It came to pass H1961 after H310 this H3651 also, that the children H1121 of Moab H4124 , and the children H1121 of Ammon H5983 , and with H5973 them other beside H4480 the Ammonites H5984 , came H935 against H5921 Jehoshaphat H3092 to battle H4421 .
|
2. ಆಗ ಕೆಲವರು ಬಂದು ಯೆಹೋಷಾಫಾಟನಿಗೆ--ಸಮು ದ್ರದ ಆಚೆಯಿಂದ ನಿನಗೆ ವಿರೋಧವಾಗಿ ಅರಾಮಿನ ಬಹುಗುಂಪು ಈ ಕಡೆ ಬರುತ್ತದೆ; ಇಗೋ, ಅವರು ಏಂಗೆದಿ ಎಂಬ ಹಚೆಚೋನ್ ತಾಮಾರಿನಲ್ಲಿ ಇದ್ದಾ ರೆಂದು ತಿಳಿಸಿದರು.
|
2. Then there came H935 some that told H5046 Jehoshaphat H3092 , saying H559 , There cometh H935 a great H7227 multitude H1995 against H5921 thee from beyond H4480 H5676 the sea H3220 on this side Syria H4480 H758 ; and, behold H2009 , they be in Hazazon H2688 -tamar, which H1931 is En H5872 -gedi.
|
3. ಆಗ ಯೆಹೋಷಾಫಾಟನು ಭಯಪಟ್ಟು ಕರ್ತನನ್ನು ಹುಡುಕಲು ನಿರ್ಣಯಿಸಿ ಕೊಂಡು ಸಮಸ್ತ ಯೆಹೂದದಲ್ಲಿ ಉಪವಾಸಮಾಡ ಬೇಕೆಂದು ಸಾರಿಸಿದನು.
|
3. And Jehoshaphat H3092 feared H3372 , and set H5414 H853 himself H6440 to seek H1875 the LORD H3068 , and proclaimed H7121 a fast H6685 throughout H5921 all H3605 Judah H3063 .
|
4. ಆದದರಿಂದ ಯೆಹೂದ ದವರು ಕರ್ತನನ್ನು ಹುಡುಕಲು ಕೂಡಿಕೊಂಡರು. ನಿಶ್ಚಯವಾಗಿ ಸಮಸ್ತ ಯೆಹೂದದ ಪಟ್ಟಣಗಳಿಂದ ಕರ್ತನನ್ನು ಹುಡುಕಲು ಬಂದರು.
|
4. And Judah H3063 gathered themselves together H6908 , to ask H1245 help of H4480 the LORD H3068 : even H1571 out of all H4480 H3605 the cities H5892 of Judah H3063 they came H935 to seek H1245 H853 the LORD H3068 .
|
5. ಆಗ ಯೆಹೋಷಾ ಫಾಟನು ಹೊಸ ಅಂಗಳದ ಮುಂದೆ ಕರ್ತನ ಮಂದಿರ ದಲ್ಲಿರುವ ಯೆಹೂದದ ಯೆರೂಸಲೇಮಿನ ಸಭೆಯ ಮಧ್ಯದಲ್ಲಿ ನಿಂತು--ನಮ್ಮ ಪಿತೃಗಳ ದೇವರಾದ
|
5. And Jehoshaphat H3092 stood H5975 in the congregation H6951 of Judah H3063 and Jerusalem H3389 , in the house H1004 of the LORD H3068 , before H6440 the new H2319 court H2691 ,
|
6. ಓ ಕರ್ತನೇ, ಪರಲೋಕದಲ್ಲಿರುವ ದೇವರು ನೀನಲ್ಲವೋ? ನೀನು ಜನಾಂಗಗಳ ಸಕಲ ರಾಜ್ಯಗಳ ಮೇಲೆ ಆಳುತ್ತೀಯಲ್ಲವೋ? ಯಾವನೂ ನಿನ್ನನ್ನು ಎದುರಿಸಕೂಡದ ಹಾಗೆ ನಿನ್ನ ಕೈಯಲ್ಲಿ ಶಕ್ತಿಯೂ ಪರಾಕ್ರಮವೂ ಇಲ್ಲವೋ?
|
6. And said H559 , O LORD H3068 God H430 of our fathers H1 , art not H3808 thou H859 God H430 in heaven H8064 ? and rulest H4910 not thou H859 over all H3605 the kingdoms H4467 of the heathen H1471 ? and in thine hand H3027 is there not power H3581 and might H1369 , so that none H369 is able to withstand H3320 H5973 thee?
|
7. ನೀನು ನಿನ್ನ ಜನವಾದ ಇಸ್ರಾಯೇಲಿನ ಎದುರಿನಿಂದ ಈ ದೇಶದ ನಿವಾಸಿಗ ಳನ್ನು ಓಡಿಸಿಬಿಟ್ಟು ಅದನ್ನು ನಿನ್ನ ಸ್ನೇಹಿತನಾದ ಅಬ್ರ ಹಾಮನ ಸಂತತಿಗೆ ಎಂದೆಂದಿಗೂ ಕೊಟ್ಟ ನೀನು ನಮ್ಮ ದೇವರಲ್ಲವೋ?
|
7. Art not H3808 thou H859 our God H430 , who didst drive out H3423 H853 the inhabitants H3427 of this H2063 land H776 before H4480 H6440 thy people H5971 Israel H3478 , and gavest H5414 it to the seed H2233 of Abraham H85 thy friend H157 forever H5769 ?
|
8. ಅವರು ಅದರಲ್ಲಿ ನಿವಾಸ ಮಾಡಿ ನಿನ್ನ ಹೆಸರಿಗೆ ಪರಿಶುದ್ಧವಾದ ಸ್ಥಾನವನ್ನು ಕಟ್ಟಿಸಿ
|
8. And they dwelt H3427 therein , and have built H1129 thee a sanctuary H4720 therein for thy name H8034 , saying H559 ,
|
9. ನಿನ್ನ ಹೆಸರು ಈ ಆಲಯದಲ್ಲಿರುವದರಿಂದ ಕತ್ತಿಯೂ ನ್ಯಾಯತೀರಿಸುವ ಶಿಕ್ಷೆಯೂ ಜಾಡ್ಯವೂ ಬರವೂ ಏನಾದರೂ ನಮ್ಮ ಮೇಲೆ ಬಂದರೆ ನಾವು ಈ ಆಲಯದ ಮುಂದೆಯೂ ನಿನ್ನ ಸಮ್ಮುಖದಲ್ಲಿಯೂ ನಿಂತು ನಮ್ಮ ಇಕ್ಕಟ್ಟಿನಲ್ಲಿ ನಿನ್ನನ್ನು ಕೂಗುವಾಗ ನೀನು ಕೇಳಿ ರಕ್ಷಿಸುವವನಾಗಿದ್ದೀ ಎಂದು ಹೇಳಿದರು.
|
9. If H518 , when evil H7451 cometh H935 upon H5921 us, as the sword H2719 , judgment H8196 , or pestilence H1698 , or famine H7458 , we stand H5975 before H6440 this H2088 house H1004 , and in thy presence H6440 , ( for H3588 thy name H8034 is in this H2088 house H1004 ,) and cry H2199 unto H413 thee in our affliction H4480 H6869 , then thou wilt hear H8085 and help H3467 .
|
10. ಈಗ ಇಗೋ, ಅಮ್ಮೋನ್ ಮೋವಾಬ್, ಸೇಯಾರ್ ಬೆಟ್ಟದ ಮಕ್ಕಳನ್ನು ನೋಡು; ಇಸ್ರಾಯೇಲ್ಯರು ಐಗುಪ್ತದೇಶ ದೊಳಗಿಂದ ಹೊರಟು ಬರುವಾಗ ಅವರ ಕಡೆಗೆ ಹೋಗಲು ನೀನು ಇವರಿಗೆ ಅಪ್ಪಣೆಕೊಡದೆ ಇದ್ದದ ರಿಂದ ಇವರು ತೊಲಗಿ ಅವರನ್ನು ನಾಶಮಾಡದೆ ಹೋದರು.
|
10. And now H6258 , behold H2009 , the children H1121 of Ammon H5983 and Moab H4124 and mount H2022 Seir H8165 , whom H834 thou wouldest not H3808 let H5414 Israel H3478 invade H935 , when they came H935 out of the land H4480 H776 of Egypt H4714 , but H3588 they turned H5493 from H4480 H5921 them , and destroyed H8045 them not H3808 ;
|
11. ಇಗೋ, ನಮಗೆ ನೀನು ಸ್ವಾಧೀನ ಮಾಡಿಕೊಳ್ಳಲು ಕೊಟ್ಟ ನಿನ್ನ ಸ್ವಾಸ್ಥ್ಯದೊಳಗಿಂದ ಅವರು ಬಂದು ನಮ್ಮನ್ನು ಹೊರಡಿಸಬೇಕೆಂದು ನಮಗೆ ಪ್ರತೀಕಾರ ಮಾಡುತ್ತಾರೆ.
|
11. Behold H2009 , I say, how they H1992 reward H1580 H5921 us , to come H935 to cast us out H1644 of thy possession H4480 H3425 , which H834 thou hast given us to inherit H3423 .
|
12. ಓ ನಮ್ಮ ದೇವರೇ, ನೀನು ಅವರಿಗೆ ನ್ಯಾಯತೀರಿಸುವದಿಲ್ಲವೋ? ನಮಗೆ ವಿರೋಧವಾಗಿ ಬರುವ ಈ ಮಹಾಗುಂಪನ್ನು ಎದು ರಿಸಲು ನಮಗೆ ಶಕ್ತಿ ಇಲ್ಲ. ನಾವು ಏನು ಮಾಡಬೇಕೋ ತಿಳಿಯಲಿಲ್ಲ. ಆದರೆ ನಮ್ಮ ಕಣ್ಣುಗಳು ನಿನ್ನ ಮೇಲೆ ಅವೆ ಅಂದರು.
|
12. O our God H430 , wilt thou not H3808 judge H8199 them? for H3588 we have no H369 might H3581 against H6440 this H2088 great H7227 company H1995 that cometh H935 against H5921 us; neither H3808 know H3045 we H587 what H4100 to do H6213 : but H3588 our eyes H5869 are upon H5921 thee.
|
13. ಹೀಗೆಯೇ ಯೆಹೂದದವರೆಲ್ಲರು ತಮ್ಮ ಹೆಂಡತಿಯರು, ಮಕ್ಕಳು, ಚಿಕ್ಕವರು ಸಹಿತವಾಗಿ ಕರ್ತನ ಮುಂದೆ ನಿಂತರು.
|
13. And all H3605 Judah H3063 stood H5975 before H6440 the LORD H3068 , with H1571 their little ones H2945 , their wives H802 , and their children H1121 .
|
14. ಆಗ ಸಭೆಯ ಮಧ್ಯದಲ್ಲಿ ಆಸಾಫನ ಮಕ್ಕಳಲ್ಲಿ ಒಬ್ಬನಾದಂಥ, ಲೇವಿಯನಾದಂಥ, ಮತ್ತನ್ಯನ ಮಗ ನಾದ ಯೆಗೀಯೇಲನ ಮಗನಾದ ಬೆನಾಯನ ಮಗ ನಾದ ಜೆಕರೀಯನ ಮಗನಾದ ಯಹಜೀಯೇಲನ ಮೇಲೆ ಕರ್ತನ ಆತ್ಮನು ಬಂದನು.
|
14. Then upon H5921 Jahaziel H3166 the son H1121 of Zechariah H2148 , the son H1121 of Benaiah H1141 , the son H1121 of Jeiel H3273 , the son H1121 of Mattaniah H4983 , a Levite H3881 of H4480 the sons H1121 of Asaph H623 , came H1961 the Spirit H7307 of the LORD H3068 in the midst H8432 of the congregation H6951 ;
|
15. ಆಗ ಅವನುಯೆಹೂದದ ಸಮಸ್ತರೇ, ಯೆರೂಸಲೇಮಿನ ನಿವಾಸಿ ಗಳೇ, ಅರಸನಾದ ಯೆಹೋಷಾಫಾಟನೇ, ಕೇಳಿರಿ. ಕರ್ತನು ನಿಮಗೆ ಹೀಗೆ ಹೇಳುತ್ತಾನೆ--ಈ ಮಹಾಗುಂಪಿನ ನಿಮಿತ್ತ ನೀವು ಭಯಪಡಬೇಡಿರಿ, ಹೆದರ ಬೇಡಿರಿ. ಯಾಕಂದರೆ ಯುದ್ಧವು ನಿಮ್ಮದಲ್ಲ, ದೇವ ರದೇ.
|
15. And he said H559 , Hearken H7181 ye, all H3605 Judah H3063 , and ye inhabitants H3427 of Jerusalem H3389 , and thou king H4428 Jehoshaphat H3092 , Thus H3541 saith H559 the LORD H3068 unto you , Be not afraid H859 H3372 H408 nor H408 dismayed H2865 by reason of H4480 H6440 this H2088 great H7227 multitude H1995 ; for H3588 the battle H4421 is not H3808 yours, but H3588 God H430 's.
|
16. ಮಾರನೇ ದಿವಸ ನೀವು ಅವರಿಗೆ ಎದು ರಾಗಿ ಹೋಗಿರಿ. ಇಗೋ, ಅವರು ಹಚ್ಚೀಚು ಎಂಬ ಕಣಿವೆಯಿಂದ ಬರುತ್ತಾರೆ; ಯೆರೂವೇಲಿನ ಅರಣ್ಯದ ಮುಂಭಾಗದಲ್ಲಿರುವ ಹಳ್ಳದ ಅಂತ್ಯದಲ್ಲಿ ಅವರನ್ನು ಕಂಡುಕೊಳ್ಳುವಿರಿ.
|
16. Tomorrow H4279 go ye down H3381 against H5921 them: behold H2009 , they come up H5927 by the cliff H4608 of Ziz H6732 ; and ye shall find H4672 them at the end H5490 of the brook H5158 , before H6440 the wilderness H4057 of Jeruel H3385 .
|
17. ಇದರಲ್ಲಿ ನೀವು ಯುದ್ಧ ಮಾಡಲು ಅವಶ್ಯವಿಲ್ಲ; ನೀವು ನೆಲೆಯಾಗಿ ನಿಂತು ಕೊಂಡು ಕರ್ತನು ನಿಮಗೆ ಮಾಡುವ ರಕ್ಷಣೆಯನ್ನು ನೋಡಿರಿ; ಯೆಹೂದದವರೇ, ಯೆರೂಸಲೇಮಿನ ವರೇ, ಭಯಪಡಬೇಡಿರಿ, ಹೆದರಬೇಡಿರಿ; ಮಾರನೇ ದಿವಸ ಅವರೆದುರಿಗೆ ಹೊರಟು ಹೋಗಿರಿ; ಕರ್ತನು ನಿಮ್ಮ ಸಂಗಡ ಇದ್ದಾನೆ ಅಂದನು.
|
17. Ye shall not H3808 need to fight H3898 in this H2063 battle : set yourselves H3320 , stand H5975 ye still , and see H7200 H853 the salvation H3444 of the LORD H3068 with H5973 you , O Judah H3063 and Jerusalem H3389 : fear H3372 not H408 , nor H408 be dismayed H2865 ; tomorrow H4279 go out H3318 against H6440 them : for the LORD H3068 will be with H5973 you.
|
18. ಆಗ ಯೆಹೋ ಷಾಫಾಟನು ತನ್ನ ಮುಖವನ್ನು ನೆಲಕ್ಕೆ ಬಾಗಿಸಿದನು; ಯೆಹೂದದವರೆಲ್ಲರೂ ಯೆರೂಸಲೇಮಿನ ನಿವಾಸಿಗಳೆ ಲ್ಲರೂ ಕರ್ತನ ಮುಂದೆ ಅಡ್ಡಬಿದ್ದು ಕರ್ತನನ್ನು ಆರಾ ಧಿಸಿದರು.
|
18. And Jehoshaphat H3092 bowed his head H6915 with his face H639 to the ground H776 : and all H3605 Judah H3063 and the inhabitants H3427 of Jerusalem H3389 fell H5307 before H6440 the LORD H3068 , worshiping H7812 the LORD H3068 .
|
19. ಇದಲ್ಲದೆ ಕೆಹಾತ್ಯರ ಮಕ್ಕಳಲ್ಲಿಯೂ ಕೋರಹಿಯರ ಮಕ್ಕಳಲ್ಲಿಯೂ ಇರುವ ಲೇವಿಯರು ಗಟ್ಟಿಯಾಗಿ ದೊಡ್ಡ ಶಬ್ದದಿಂದ ಇಸ್ರಾಯೇಲಿನ ದೇವ ರಾದ ಕರ್ತನನ್ನು ಸ್ತುತಿಸಲು ಎದ್ದು ನಿಂತರು.
|
19. And the Levites H3881 , of the children H1121 of H4480 the Kohathites H6956 , and of H4480 the children H1121 of the Korhites H7145 , stood up H6965 to praise H1984 the LORD H3068 God H430 of Israel H3478 with a loud H1419 voice H6963 on high H4605 .
|
20. ಅವರು ಉದಯದಲ್ಲಿ ಎದ್ದು ತೆಕೋವದ ಅರ ಣ್ಯಕ್ಕೆ ಹೊರಟರು. ಅವರು ಹೊರಟು ಹೋಗುತ್ತಿ ರುವಾಗ ಯೆಹೋಷಾಫಾಟನು ನಿಂತುಕೊಂಡು--ಓ ಯೆಹೂದದವರೇ, ಯೆರೂಸಲೇಮಿನ ನಿವಾಸಿಗಳೇ, ನನ್ನ ಮಾತನ್ನು ಕೇಳಿರಿ. ನಿಮ್ಮ ದೇವರಾದ ಕರ್ತನನ್ನು ನಂಬಿಕೊಳ್ಳಿರಿ, ಸ್ಥಿರವಾಗಿರ್ರಿ; ಆತನ ಪ್ರವಾದಿಗಳನ್ನು ನಂಬಿಕೊಳ್ಳಿರಿ; ಆಗ ಜಯಹೊಂದುವಿರಿ ಅಂದನು.
|
20. And they rose early H7925 in the morning H1242 , and went forth H3318 into the wilderness H4057 of Tekoa H8620 : and as they went forth H3318 , Jehoshaphat H3092 stood H5975 and said H559 , Hear H8085 me , O Judah H3063 , and ye inhabitants H3427 of Jerusalem H3389 ; Believe H539 in the LORD H3068 your God H430 , so shall ye be established H539 ; believe H539 his prophets H5030 , so shall ye prosper H6743 .
|
21. ಅವನು ಜನರ ಸಂಗಡ ಆಲೋಚನೆ ಮಾಡಿದ ತರುವಾಯ ಸೈನ್ಯದ ಮುಂದೆ ಅವರು ಹೊರಡುವಾಗ ಪರಿಶುದ್ಧತ್ವದ ಪ್ರಭೆಯನ್ನು ಸ್ತುತಿಸುವದಕ್ಕೆ ಕರ್ತನನ್ನು ಕೊಂಡಾಡಿರಿ, ಯಾಕಂದರೆ ಆತನ ಕೃಪೆಯು ಯುಗ ಯುಗಕ್ಕೂ ಇರುವದೆಂದು ಹೇಳುವದಕ್ಕೆ ಕರ್ತ ನಿಗೆ ಸಂಗೀತಗಾರರನ್ನು ನೇಮಿಸಿದನು.
|
21. And when he had consulted H3289 with H413 the people H5971 , he appointed H5975 singers H7891 unto the LORD H3068 , and that should praise H1984 the beauty H1927 of holiness H6944 , as they went out H3318 before H6440 the army H2502 , and to say H559 , Praise H3034 the LORD H3068 ; for H3588 his mercy H2617 endureth forever H5769 .
|
22. ಅವರು ಹಾಡುವದಕ್ಕೂ ಸ್ತುತಿಸುವದಕ್ಕೂ ಆರಂಭಿಸಿದಾಗಲೇ ಕರ್ತನು ಯೆಹೂದದ ಮೇಲೆ ಬಂದ ಅಮ್ಮೋನ್, ಮೋವಾಬ್, ಸೇಯಾರ್ ಪರ್ವತಗಳ ಮಕ್ಕಳಿಗೆ ವಿರೋಧವಾಗಿ ಹೊಂಚಿಕೊಳ್ಳುವವರನ್ನು ಇಟ್ಟಿದ್ದ ರಿಂದ ಅವರು ಹೊಡೆಯಲ್ಪಟ್ಟಿದ್ದರು.
|
22. And when H6256 they began H2490 to sing H7440 and to praise H8416 , the LORD H3068 set H5414 ambushments H693 against H5921 the children H1121 of Ammon H5983 , Moab H4124 , and mount H2022 Seir H8165 , which were come H935 against Judah H3063 ; and they were smitten H5062 .
|
23. ಅಮ್ಮೋನ್, ಮೋವಾಬ್ಯರ ಮಕ್ಕಳು ಸೇಯಾರ್ ಪರ್ವತದ ನಿವಾಸಿ ಗಳನ್ನು ಸಂಪೂರ್ಣವಾಗಿ ನಾಶಮಾಡಲು ನಿಂತರು. ಅವರು ಸೇಯಾರಿನ ನಿವಾಸಿಗಳನ್ನು ಮುಗಿಸಿಬಿಟ್ಟ ತರುವಾಯ ತಾವೇ ಒಬ್ಬರನ್ನೊಬ್ಬರು ನಾಶಮಾಡಲು ಸಹಾಯ ಕೊಟ್ಟರು.
|
23. For the children H1121 of Ammon H5983 and Moab H4124 stood up H5975 against H5921 the inhabitants H3427 of mount H2022 Seir H8165 , utterly to slay H2763 and destroy H8045 them : and when they had made an end H3615 of the inhabitants H3427 of Seir H8165 , every one H376 helped H5826 to destroy H4889 another H7453 .
|
24. ಯೆಹೂದದವರು ಅರಣ್ಯದಲ್ಲಿ ರುವ ಬುರುಜಿನ ಸ್ಥಳಕ್ಕೆ ಬಂದಾಗ ಅವರು ಗುಂಪನ್ನು ದೃಷ್ಟಿಸಿದರು; ಇಗೋ, ಅವರಲ್ಲಿ ಒಬ್ಬನೂ ತಪ್ಪದ ಹಾಗೆ ಎಲ್ಲರೂ ನೆಲಕ್ಕೆ ಬಿದ್ದು ಹೆಣಗಳಾಗಿದ್ದರು.
|
24. And when Judah H3063 came H935 toward H5921 the watch tower H4707 in the wilderness H4057 , they looked H6437 unto H413 the multitude H1995 , and, behold H2009 , they were dead bodies H6297 fallen H5307 to the earth H776 , and none H369 escaped H6413 .
|
25. ಯೆಹೋಷಾಫಾಟನೂ ಅವನ ಜನರೂ ಅವರ ವಸ್ತುಗಳನ್ನು ಕೊಳ್ಳೆಮಾಡಲು ಬಂದಾಗ ಅವರು ಹೆಣ ಗಳ ಬಳಿಯಲ್ಲಿ ದ್ರವ್ಯವನ್ನೂ ಪ್ರಿಯವಾದ ಆಭರಣ ಗಳನ್ನೂ ಬಹಳವಾಗಿ ಕಂಡುಕೊಂಡು ತಾವು ಹೊರ ಲಾರದಷ್ಟು ಸುಲುಕೊಂಡರು. ಕೊಳ್ಳೆಯು ಅಷ್ಟು ಅಧಿಕವಾದದರಿಂದ ಅದನ್ನು ಮೂರು ದಿವಸಗಳ ವರೆಗೂ ಸುಲುಕೊಳ್ಳುತ್ತಾ ಇದ್ದರು.
|
25. And when Jehoshaphat H3092 and his people H5971 came H935 to take away H962 H853 the spoil H7998 of them , they found H4672 among them in abundance H7230 both riches H7399 with the dead bodies H6297 , and precious H2530 jewels H3627 , which they stripped off H5337 for themselves , more than H369 they could carry away H4853 : and they were H1961 three H7969 days H3117 in gathering H962 H853 of the spoil H7998 , it H1931 was so much H7227 .
|
26. ನಾಲ್ಕನೇ ದಿವಸ ದಲ್ಲಿ ಅವರು ಬೆರಾಕವೆಂಬ ತಗ್ಗಿನಲ್ಲಿ ಕೂಡಿಕೊಂಡು ಅಲ್ಲಿ ಕರ್ತನನ್ನು ಸ್ತುತಿಸಿದರು. ಆದಕಾರಣ ಇಂದಿನ ವರೆಗೂ ಆ ಸ್ಥಳಕ್ಕೆ ಬೆರಾಕ ತಗ್ಗು ಎಂದು ಕರೆಯುತ್ತಾರೆ.
|
26. And on the fourth H7243 day H3117 they assembled themselves H6950 in the valley H6010 of Berachah H1294 ; for H3588 there H8033 they blessed H1288 H853 the LORD H3068 : therefore H5921 H3651 H853 the name H8034 of the same H1931 place H4725 was called H7121 , The valley H6010 of Berachah H1294 , unto H5704 this day H3117 .
|
27. ಕರ್ತನು ಅವರ ಶತ್ರುಗಳ ಮೇಲೆ ಅವರನ್ನು ಸಂತೋ ಷಪಡುವಂತೆ ಮಾಡಿದ್ದರಿಂದ ಅವರು ಸಂತೋಷವಾಗಿ ಯೆರೂಸಲೇಮಿಗೆ ತಿರಿಗಿ ಹೋಗುವದಕ್ಕೆ ಯೆಹೂದ ಯೆರೂಸಲೇಮಿನವರೆಲ್ಲರೂ ಅವರ ಮುಂಭಾಗ ದಲ್ಲಿ ಯೆಹೋಷಾಫಾಟನೂ ಹೊರಟು
|
27. Then they returned H7725 , every H3605 man H376 of Judah H3063 and Jerusalem H3389 , and Jehoshaphat H3092 in the forefront H7218 of them , to go again H7725 to H413 Jerusalem H3389 with joy H8057 ; for H3588 the LORD H3068 had made them to rejoice H8055 over their enemies H4480 H341 .
|
28. ವೀಣೆಗ ಳಿಂದಲೂ ಕಿನ್ನರಿಗಳಿಂದಲೂ ತುತೂರಿಗಳಿಂದಲೂ ಯೆರೂಸಲೇಮಿನಲ್ಲಿ ಪ್ರವೇಶಿಸಿ ಕರ್ತನ ಆಲಯಕ್ಕೆ ಬಂದರು.
|
28. And they came H935 to Jerusalem H3389 with psalteries H5035 and harps H3658 and trumpets H2689 unto H413 the house H1004 of the LORD H3068 .
|
29. ಕರ್ತನು ಇಸ್ರಾಯೇಲಿನ ಶತ್ರುಗಳ ಮೇಲೆ ಯುದ್ಧಮಾಡಿದನೆಂದು ಅವರು ಕೇಳಿದಾಗ ದೇವರ ಭಯವು ಆ ದೇಶಗಳ ಸಕಲ ರಾಜ್ಯಗಳ ಮೇಲೆ ಬಿತ್ತು.
|
29. And the fear H6343 of God H430 was H1961 on H5921 all H3605 the kingdoms H4467 of those countries H776 , when they had heard H8085 that H3588 the LORD H3068 fought H3898 against H5973 the enemies H341 of Israel H3478 .
|
30. ಆದದರಿಂದ ಯೆಹೋಷಾಫಾಟನ ರಾಜ್ಯವು ಶಾಂತವಾಗಿತ್ತು; ಅವನ ದೇವರು ಸುತ್ತಲೂ ಅವನಿಗೆ ವಿಶ್ರಾಂತಿ ಕೊಟ್ಟನು.
|
30. So the realm H4438 of Jehoshaphat H3092 was quiet H8252 : for his God H430 gave him rest H5117 round about H4480 H5439 .
|
31. ಹೀಗೆ ಯೆಹೋಷಾಫಾಟನು ಯೆಹೂದದ ಮೇಲೆ ಆಳಿದನು. ಅವನು ಆಳಲು ಆರಂಭಿಸಿದಾಗ ಮೂವತ್ತೈದು ವರುಷದವನಾಗಿದ್ದು ಯೆರೂಸಲೇಮಿ ನಲ್ಲಿ ಇಪ್ಪತ್ತೈದು ವರುಷ ಆಳಿದನು. ಅವನ ತಾಯಿಯ ಹೆಸರು ಅಜೂಬಳು; ಆಕೆಯು ಶಿಲ್ಹಿಯ ಮಗಳಾ ಗಿದ್ದಳು.
|
31. And Jehoshaphat H3092 reigned H4427 over H5921 Judah H3063 : he was thirty H7970 and five H2568 years H8141 old H1121 when he began to reign H4427 , and he reigned H4427 twenty H6242 and five H2568 years H8141 in Jerusalem H3389 . And his mother H517 's name H8034 was Azubah H5806 the daughter H1323 of Shilhi H7977 .
|
32. ಅವನು ತನ್ನ ತಂದೆಯಾದ ಆಸನ ಮಾರ್ಗ ದಲ್ಲಿ ನಡೆದು ಅದನ್ನು ಬಿಟ್ಟುಬಿಡದೆ ಕರ್ತನ ಸಮ್ಮುಖ ದಲ್ಲಿ ಸರಿಯಾದದ್ದನ್ನು ಮಾಡಿದನು.
|
32. And he walked H1980 in the way H1870 of Asa H609 his father H1 , and departed H5493 not H3808 from H4480 it, doing H6213 that which was right H3477 in the sight H5869 of the LORD H3068 .
|
33. ಆದರೆ ಉನ್ನತ ಸ್ಥಳಗಳು ಇನ್ನೂ ತೆಗೆದುಹಾಕಲ್ಪಡಲಿಲ್ಲ. ಜನರು ತಮ್ಮ ಹೃದಯಗಳನ್ನು ತಮ್ಮ ಪಿತೃಗಳ ದೇವರ ಕಡೆಗೆ ಇನ್ನೂ ಸಿದ್ಧಮಾಡಿರಲಿಲ್ಲ;
|
33. Howbeit H389 the high places H1116 were not H3808 taken away H5493 : for as yet H5750 the people H5971 had not H3808 prepared H3559 their hearts H3824 unto the God H430 of their fathers H1 .
|
34. ಯೆಹೋಷಾಫಾಟನ ಇತರ ಕ್ರಿಯೆಗಳು, ಮೊದಲನೆಯವುಗಳೂ ಕಡೆಯವುಗಳೂ ಇಗೋ, ಇಸ್ರಾಯೇಲಿನ ಅರಸುಗಳ ಪುಸ್ತಕದಲ್ಲಿ ಹೇಳಲ್ಪಟ್ಟ ಹನಾನೀಯ ಮಗನಾದ ಯೇಹೂವಿನ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
|
34. Now the rest H3499 of the acts H1697 of Jehoshaphat H3092 , first H7223 and last H314 , behold H2009 , they are written H3789 in the book H1697 of Jehu H3058 the son H1121 of Hanani H2607 , who H834 is mentioned H5927 in H5921 the book H5612 of the kings H4428 of Israel H3478 .
|
35. ಇದರ ತರುವಾಯ ಯೆಹೂದದ ಅರಸನಾದ ಯೆಹೋಷಾಫಾಟನು ಇಸ್ರಾಯೇಲಿನ ಅರಸನೂ ಬಹು ದುಷ್ಟನಾಗಿ ನಡೆದವನೂ ಆದ ಅಹಜ್ಯನ ಸಂಗಡ ಸಹವಾಸಮಾಡಿದನು.
|
35. And after H310 this H3651 did Jehoshaphat H3092 king H4428 of Judah H3063 join himself H2266 with H5973 Ahaziah H274 king H4428 of Israel H3478 , who H1931 did very wickedly H7561 H6213 :
|
36. ಇದಲ್ಲದೆ ತಾರ್ಷಿ ಷಿಗೆ ಹೋಗುವ ನಿಮಿತ್ತ ಹಡಗುಗಳನ್ನು ಮಾಡಿಸಲು ಅವನ ಸಂಗಡ ಸೇರಿಕೊಂಡನು. ಅವರು ಎಚ್ಯೋನ್ಗೆಬೆ ರಿನಲ್ಲಿ ಹಡಗುಗಳನ್ನು ಮಾಡಿಸಿದನು.
|
36. And he joined H2266 himself with H5973 him to make H6213 ships H591 to go H1980 to Tarshish H8659 : and they made H6213 the ships H591 in Ezion H6100 -geber.
|
37. ಆಗ ಮಾರೇ ಷಾದವನಾಗಿರುವ ದೋದಾವಾಹುವಿನ ಮಗನಾದ ಎಲೀಯೆಜರನು ಯೆಹೋಷಾಫಾಟನಿಗೆ ವಿರೋಧ ವಾಗಿ ಪ್ರವಾದಿಸಿ--ನೀನು ಅಹಜ್ಯನ ಸಂಗಡ ಸೇರಿ ಕೊಂಡಿದ್ದರಿಂದ ಕರ್ತನು ನಿನ್ನ ಕ್ರಿಯೆಗಳನ್ನು ಹಾಳು ಮಾಡಿಬಿಟ್ಟನೆಂದು ಹೇಳಿದನು. ಹಡಗುಗಳು ತಾರ್ಷಿ ಷಿಗೆ ಹೋಗ ಕೂಡದ ಹಾಗೆ ಒಡೆಯಲ್ಪಟ್ಟವು.
|
37. Then Eliezer H461 the son H1121 of Dodavah H1735 of Mareshah H4480 H4762 prophesied H5012 against H5921 Jehoshaphat H3092 , saying H559 , Because thou hast joined thyself H2266 with H5973 Ahaziah H274 , the LORD H3068 hath broken H6555 H853 thy works H4639 . And the ships H591 were broken H7665 , that they were not able H6113 H3808 to go H1980 to H413 Tarshish H8659 .
|