|
|
1. ಯೆಹೋಶುವನು ಸತ್ತ ತರುವಾಯ ಆದದ್ದೇನಂದರೆ, ಇಸ್ರಾಯೇಲ್ ಮಕ್ಕಳು ಕರ್ತನಿಗೆ--ಕಾನಾನ್ಯರ ಮೇಲೆ ಮೊದಲು ನಮಗಾಗಿ ಯುದ್ಧಕ್ಕೆ ಹೋಗುವವರು ಯಾರು ಎಂದು ಕೇಳಿದರು.
|
1. Now after H310 the death H4194 of Joshua H3091 it came to pass H1961 , that the children H1121 of Israel H3478 asked H7592 the LORD H3068 , saying H559 , Who H4310 shall go up H5927 for us against H413 the Canaanites H3669 first H8462 , to fight H3898 against them?
|
2. ಅದಕ್ಕೆ ಕರ್ತನು--ಯೂದನು ಹೋಗಲಿ; ಇಗೋ, ನಾನು ಆ ದೇಶವನ್ನು ಅವನ ಕೈಯಲ್ಲಿ ಒಪ್ಪಿಸಿಕೊಟ್ಟಿ ದ್ದೇನೆ ಅಂದನು.
|
2. And the LORD H3068 said H559 , Judah H3063 shall go up H5927 : behold H2009 , I have delivered H5414 H853 the land H776 into his hand H3027 .
|
3. ಯೂದನು ತನ್ನ ಸಹೋದರನಾದ ಸಿಮೆಯೋನನಿಗೆ--ನೀನು ನನ್ನ ಸಂಗಡ ನನ್ನ ಭಾಗಕ್ಕೆ ಬಾ, ಕಾನಾನ್ಯರ ಮೇಲೆ ಯುದ್ಧಮಾಡೋಣ; ನಾನು ಹಾಗೆಯೇ ನಿನ್ನ ಸಂಗಡ ನಿನ್ನ ಭಾಗಕ್ಕೆ ಬರುವೆನು ಅಂದನು. ಹೀಗೆ ಸಿಮೆಯೋನನು ಅವನ ಸಂಗಡ ಹೋದನು.
|
3. And Judah H3063 said H559 unto Simeon H8095 his brother H251 , Come up H5927 with H854 me into my lot H1486 , that we may fight H3898 against the Canaanites H3669 ; and I H589 likewise H1571 will go H1980 with H854 thee into thy lot H1486 . So Simeon H8095 went H1980 with H854 him.
|
4. ಯೂದನು ಹೋದಾಗ ಕರ್ತನು ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಅವರ ಕೈಯಲ್ಲಿ ಒಪ್ಪಿಸಿಕೊಟ್ಟನು. ಬೆಜೆಕಿನಲ್ಲಿ ಇವರು ಅವರಲ್ಲಿ ಹತ್ತು ಸಾವಿರ ಜನರನ್ನು ಕೊಂದರು.
|
4. And Judah H3063 went up H5927 ; and the LORD H3068 delivered H5414 H853 the Canaanites H3669 and the Perizzites H6522 into their hand H3027 : and they slew H5221 of them in Bezek H966 ten H6235 thousand H505 men H376 .
|
5. ಅವರು ಬೆಜೆಕಿನಲ್ಲಿ ಅದೋನೀಬೆಜೆಕನನ್ನು ಕಂಡು ಅವನಿಗೆ ವಿರೋಧವಾಗಿ ಯುದ್ಧಮಾಡಿ ಅಲ್ಲಿ ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಕೊಂದುಹಾಕಿದರು.
|
5. And they found H4672 H853 Adoni H137 -bezek in Bezek H966 : and they fought H3898 against him , and they slew H5221 H853 the Canaanites H3669 and the Perizzites H6522 .
|
6. ಆದರೆ ಅದೋನೀಬೆಜೆಕನು ಓಡಿಹೋದದರಿಂದ ಅವನನ್ನು ಹಿಂದಟ್ಟಿ ಹಿಡಿದು ಅವನ ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿ ಹಾಕಿ ದರು.
|
6. But Adoni H137 -bezek fled H5127 ; and they pursued H7291 after H310 him , and caught H270 him , and cut off H7112 H853 his thumbs H931 H3027 and his great toes H7272 .
|
7. ಆಗ ಅದೋನೀಬೆಜೆಕನು--ನಾನು ಕೈಕಾಲು ಗಳ ಹೆಬ್ಬೆರಳುಗಳನ್ನು ಕತ್ತರಿಸಿದ ಎಪ್ಪತ್ತು ಮಂದಿ ಅರಸುಗಳು ನನ್ನ ಮೇಜಿನ ಕೆಳಗೆ ತಮ್ಮ ಆಹಾರ ವನ್ನು ಕೂಡಿಸಿದರು; ನಾನು ಹೇಗೆ ಮಾಡಿದೆನೋ ಹಾಗಾಯೇ ದೇವರು ನನಗೆ ಮುಯ್ಯಿಗೆ ಮುಯ್ಯಿಮಾಡಿದ್ದಾನೆ ಅಂದನು. ಅವನನ್ನು ಯೆರೂಸಲೇಮಿಗೆ ತಕ್ಕೊಂಡು ಬಂದರು; ಅವನು ಅಲ್ಲಿ ಸತ್ತನು.
|
7. And Adoni H137 -bezek said H559 , Threescore and ten H7657 kings H4428 , having their thumbs H931 H3027 and their great toes H7272 cut off H7112 , gathered H3950 their meat under H8478 my table H7979 : as H834 I have done H6213 , so H3651 God H430 hath requited H7999 me . And they brought H935 him to Jerusalem H3389 , and there H8033 he died H4191 .
|
8. ಯೂದನ ಮಕ್ಕಳು ಯೆರೂಸಲೇಮಿನ ಮೇಲೆ ಯುದ್ಧಮಾಡಿ ಅದನ್ನು ಹಿಡಿದು ಕತ್ತಿಯಿಂದ ಹೊಡೆದು ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಟ್ಟರು.
|
8. Now the children H1121 of Judah H3063 had fought H3898 against Jerusalem H3389 , and had taken H3920 it , and smitten H5221 it with the edge H6310 of the sword H2719 , and set H7971 the city H5892 on fire H784 .
|
9. ತರುವಾಯ ಯೂದನ ಮಕ್ಕಳು ಬೆಟ್ಟದಲ್ಲಿಯೂ ದಕ್ಷಿಣದಲ್ಲಿಯೂ ತಗ್ಗಿನ ಲ್ಲಿಯೂ ವಾಸಿಸಿದ ಕಾನಾನ್ಯರಿಗೆ ವಿರೋಧವಾಗಿ ಯುದ್ಧಮಾಡುವದಕ್ಕೆ ಹೋದರು.
|
9. And afterward H310 the children H1121 of Judah H3063 went down H3381 to fight H3898 against the Canaanites H3669 , that dwelt H3427 in the mountain H2022 , and in the south H5045 , and in the valley H8219 .
|
10. ಯೂದನು ಪೂರ್ವದಲ್ಲಿ ಕಿರ್ಯತರ್ಬ ಎಂಬ ಹೆಸರಿದ್ದ ಹೆಬ್ರೋನಿನಲ್ಲಿ ವಾಸವಾಗಿದ್ದ ಕಾನಾನ್ಯರ ಮೇಲೆ ಹೋಗಿ ಶೇಷೈ, ಅಹೀಮನ್, ತಲ್ಮೈರನ್ನು ಕೊಂದುಹಾಕಿದನು.
|
10. And Judah H3063 went H1980 against H3413 the Canaanites H3669 that dwelt H3427 in Hebron H2275 : (now the name H8034 of Hebron H2275 before H6440 was Kirjath H7153 -arba:) and they slew H5221 H853 Sheshai H8344 , and Ahiman H289 , and Talmai H8526 .
|
11. ಅಲ್ಲಿಂದ ದೆಬೀರಿನಲ್ಲಿ ವಾಸ ವಾಗಿರುವವರಿಗೆ ವಿರೋಧವಾಗಿ ಹೋದರು; ದೆಬೀ ರಿಗೆ ಪೂರ್ವದಲ್ಲಿ ಕಿರ್ಯತ್ಸೇಫೆರ್ ಎಂಬ ಹೆಸ ರಿತ್ತು.
|
11. And from thence H4480 H8033 he went H1980 against H413 the inhabitants H3427 of Debir H1688 : and the name H8034 of Debir H1688 before H6440 was Kirjath H7158 -sepher:
|
12. ಕಾಲೇಬನು--ಕಿರ್ಯತೆಸೇಫೆರನ್ನು ಹೊಡೆದು ತೆಗೆದುಕೊಳ್ಳುವವನಿಗೆ ನನ್ನ ಕುಮಾರ್ತೆಯಾದ ಅಕ್ಷಾ ಳನ್ನು ಹೆಂಡತಿಯಾಗಿ ಕೊಡುವೆನು ಎಂದು ಹೇಳಿದ್ದನು.
|
12. And Caleb H3612 said H559 , He that H834 smiteth H5221 H853 Kirjath H7158 -sepher , and taketh H3920 it , to him will I give H5414 H853 Achsah H5919 my daughter H1323 to wife H802 .
|
13. ಆಗ ಕಾಲೇಬನ ತಮ್ಮನು ಕೆನಜನ ಮಗನಾದ ಒತ್ನೀಯೇಲನು ಅದನ್ನು ಹಿಡಿದನು. ಆಗ ಅವನು ತನ್ನ ಮಗಳಾದ ಅಕ್ಷಾಳನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು.
|
13. And Othniel H6274 the son H1121 of Kenaz H7073 , Caleb H3612 's younger H6996 brother H251 , took H3920 it : and he gave H5414 him H853 Achsah H5919 his daughter H1323 to wife H802 .
|
14. ಅವಳು ಅವನ ಬಳಿಗೆ ಹೋಗುವಾಗ ತನ್ನ ತಂದೆಯಿಂದ ಒಂದು ಹೊಲವನ್ನು ಕೇಳುವದಕ್ಕೆ ಅವನನ್ನು ಪ್ರೇರೇಪಿಸಿದವಳಾಗಿ ಕತ್ತೆಯಿಂದ ಇಳಿದಳು; ಕಾಲೇಬನು ಅವಳಿಗೆ--ನಿನಗೆ ಏನು ಬೇಕು ಅಂದನು.
|
14. And it came to pass H1961 , when she came H935 to him , that she moved H5496 him to ask H7592 of H4480 H854 her father H1 a field H7704 : and she lighted H6795 from off H4480 H5921 her ass H2543 ; and Caleb H3612 said H559 unto her, What H4100 wilt thou?
|
15. ಅವಳು ಅವನಿಗೆ--ನನಗೆ ಆಶೀರ್ವಾದಕೊಡು; ನೀನು ದಕ್ಷಿಣ ಭೂಮಿಯನ್ನು ನನಗೆ ಕೊಟ್ಟುಬಿಟ್ಟೆ ಯಲ್ಲಾ, ನೀರು ಬುಗ್ಗೆಗಳನ್ನು ಸಹ ಕೊಡು ಅಂದಳು. ಕಾಲೇಬನು ಮೇಲಿನ ಬುಗ್ಗೆಗಳನ್ನೂ ಕೆಳಗಿನ ಬುಗ್ಗೆಗಳನ್ನೂ ಅವಳಿಗೆ ಕೊಟ್ಟನು.
|
15. And she said H559 unto him, Give H3051 me a blessing H1293 : for H3588 thou hast given H5414 me a south H5045 land H776 ; give H5414 me also springs H1543 of water H4325 . And Caleb H3612 gave H5414 her H853 the upper H5942 springs H1543 and the nether H8482 springs H1543 .
|
16. ಮೋಶೆಯ ಮಾವನಾದ ಕೇನ್ಯನ ಮಕ್ಕಳು ಖರ್ಜೂರ ಗಿಡಗಳ ಪಟ್ಟಣದಿಂದ ಹೊರಟು ಯೂದನ ಮಕ್ಕಳ ಸಂಗಡ ಅರಾದಿಗೆ ದಕ್ಷಿಣಕ್ಕಿರುವ ಯೂದದ ಅರಣ್ಯಕ್ಕೆ ಬಂದು ಜನರ ಸಂಗಡ ವಾಸವಾಗಿದ್ದರು.
|
16. And the children H1121 of the Kenite H7017 , Moses H4872 ' father H2859 -in-law , went up H5927 out of the city H4480 H5892 of palm trees H8558 with H854 the children H1121 of Judah H3063 into the wilderness H4480 H4057 of Judah H3063 , which H834 lieth in the south H5045 of Arad H6166 ; and they went H1980 and dwelt H3427 among H854 the people H5971 .
|
17. ಯೆಹೂದ್ಯರು ತಮ್ಮ ಸಹೋದರರಾದ ಸಿಮೆ ಯೋನ್ಯರ ಸಂಗಡ ಹೊರಟು ಚೆಫತ್ನಲ್ಲಿ ವಾಸವಾಗಿ ರುವ ಕಾನಾನ್ಯರನ್ನು ಕೊಂದು ಆ ಪಟ್ಟಣವನ್ನು ನಿರ್ಮೂಲ ಮಾಡಿದರು. ಆ ಪಟ್ಟಣವು ಹೋರ್ಮಾ ಎಂದು ಕರೆಯಲ್ಪಟ್ಟಿತು.
|
17. And Judah H3063 went H1980 with H854 Simeon H8095 his brother H251 , and they slew H5221 H853 the Canaanites H3669 that inhabited H3427 Zephath H6857 , and utterly destroyed H2763 it . And H853 the name H8034 of the city H5892 was called H7121 Hormah H2767 .
|
18. ಇದಲ್ಲದೆ ಯೂದನು ಗಾಜಾವನ್ನೂ ಅದರ ಮೇರೆಯನ್ನೂ ಅಷ್ಕೆಲೋನನ್ನ್ನೂ ಅದರ ಮೇರೆಯನ್ನೂ ಎಕ್ರೋನನ್ನ್ನೂ ಅದರ ಮೇರೆ ಯನ್ನೂ ತೆಗೆದುಕೊಂಡನು.
|
18. Also Judah H3063 took H3920 H853 Gaza H5804 with H853 the coast H1366 thereof , and Askelon H831 with the coast H1366 thereof , and Ekron H6138 with the coast H1366 thereof.
|
19. ಕರ್ತನು ಯೂದನ ಸಂಗಡ ಇದ್ದದರಿಂದ ಅವನು ಬೆಟ್ಟದ ನಿವಾಸಿಗಳನ್ನು ಹೊರಡಿಸಿಬಿಟ್ಟನು; ಆದರೆ ತಗ್ಗಿನ ನಿವಾಸಿಗಳಿಗೆ ಕಬ್ಬಿ ಣದ ರಥಗಳಿದ್ದದರಿಂದ ಅವನು ಅವರನ್ನು ಹೊರ ಡಿಸಲಾರದೆ ಹೋದನು.
|
19. And the LORD H3068 was H1961 with H854 Judah H3063 ; and he drove out H3423 H853 the inhabitants of the mountain H2022 ; but H3588 could not H3808 drive out H3423 H853 the inhabitants H3427 of the valley H6010 , because H3588 they had chariots H7393 of iron H1270 .
|
20. ಮೋಶೆಯು ಹೇಳಿದ ಪ್ರಕಾರ ಅವರು ಹೆಬ್ರೋನನ್ನ್ನು ಕಾಲೇಬನಿಗೆ ಕೊಟ್ಟರು. ಅವನು ಅನಾಕನ ಮೂವರು ಮಕ್ಕಳನ್ನು ಅಲ್ಲಿಂದ ಹೊರಡಿಸಿಬಿಟ್ಟನು.
|
20. And they gave H5414 H853 Hebron H2275 unto Caleb H3612 , as H834 Moses H4872 said H1696 : and he expelled H3423 thence H4480 H8033 H853 the three H7969 sons H1121 of Anak H6061 .
|
21. ಬೆನ್ಯಾವಿಾನನ ಮಕ್ಕಳು ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಡಿಸಲಿಲ್ಲ. ಆದರೆ ಯೆಬೂಸಿಯರು ಈ ದಿನದ ವರೆಗೆ ಬೆನ್ಯಾವಿಾ ನನ ಮಕ್ಕಳ ಸಂಗಡ ವಾಸವಾಗಿದ್ದಾರೆ.
|
21. And the children H1121 of Benjamin H1144 did not H3808 drive out H3423 the Jebusites H2983 that inhabited H3427 Jerusalem H3389 ; but the Jebusites H2983 dwell H3427 with H854 the children H1121 of Benjamin H1144 in Jerusalem H3389 unto H5704 this H2088 day H3117 .
|
22. ಇದಲ್ಲದೆ ಯೋಸೇಫನ ಮನೆಯವರು ಬೇತೇಲಿಗೆ ಹೋದರು. ಕರ್ತನು ಅವರ ಸಂಗಡ ಇದ್ದನು.
|
22. And the house H1004 of Joseph H3130 , they H1992 also H1571 went up H5927 against Bethel H1008 : and the LORD H3068 was with H5973 them.
|
23. ಆದರೆ ಮೊದಲು ಲೂಜ್ ಎಂದು ಹೆಸರಿದ್ದ ಬೇತೇಲೆಂಬ ಪಟ್ಟಣವನ್ನು ಪಾಳತಿ ನೋಡಲು ಯೋಸೇಫನ ಮನೆಯವರು ಕಳುಹಿಸಿದರು.
|
23. And the house H1004 of Joseph H3130 sent to descry H8446 Bethel H1008 . (Now the name H8034 of the city H5892 before H6440 was Luz H3870 .)
|
24. ಪಾಳತಿಯವರು ಪಟ್ಟಣದೊಳಗಿಂದ ಬರುವ ಒಬ್ಬ ಮನುಷ್ಯನನ್ನು ಕಂಡು ಅವನಿಗೆ--ದಯಮಾಡಿ ಪಟ್ಟಣದಲ್ಲಿ ಪ್ರವೇಶಿಸುವ ಮಾರ್ಗವನ್ನು ನಮಗೆ ತೋರಿಸು; ನಾವು ನಿನಗೆ ಕರುಣೆ ತೋರಿಸುವೆವು ಅಂದರು.
|
24. And the spies H8104 saw H7200 a man H376 come forth H3318 out of H4480 the city H5892 , and they said H559 unto him, Show H7200 us , we pray thee H4994 , H853 the entrance H3996 into the city H5892 , and we will show H6213 H5973 thee mercy H2617 .
|
25. ಅವನು ಪಟ್ಟಣದಲ್ಲಿ ಪ್ರವೇಶಿಸುವ ಮಾರ್ಗವನ್ನು ಅವರಿಗೆ ತೋರಿಸಿದಾಗ ಅವರು ಬಂದು ಪಟ್ಟಣವನ್ನು ಕತ್ತಿಯಿಂದ ಹೊಡೆದು ಆ ಮನುಷ್ಯನನ್ನೂ ಅವನ ಸಮಸ್ತ ಕುಟುಂಬವನ್ನೂ ಕಳುಹಿಸಿಬಿಟ್ಟರು.
|
25. And when he showed H7200 them H853 the entrance H3996 into the city H5892 , they smote H5221 H853 the city H5892 with the edge H6310 of the sword H2719 ; but they let go H7971 the man H376 and all H3605 his family H4940 .
|
26. ಆ ಮನುಷ್ಯನು ಹಿತ್ತಿಯರ ದೇಶಕ್ಕೆ ಹೋಗಿ ಅಲ್ಲಿ ಒಂದು ಪಟ್ಟಣವನ್ನು ಕಟ್ಟಿ ಅದಕ್ಕೆ ಲೂಜ್ ಎಂದು ಹೆಸರಿಟ್ಟನು. ಈ ವರೆಗೂ ಅದಕ್ಕೆ ಅದೇ ಹೆಸರು.
|
26. And the man H376 went H1980 into the land H776 of the Hittites H2850 , and built H1129 a city H5892 , and called H7121 the name H8034 thereof Luz H3870 : which H1931 is the name H8034 thereof unto H5704 this H2088 day H3117 .
|
27. ಮನಸ್ಸೆಯವರು ಬೇತ್ಷೆಯಾನ್ ತಾನಾಕ್ ದೋರ್ ಇಬ್ಲೆಯಾಮ್ ಮೆಗಿದ್ದೋ ಎಂಬ ಪಟ್ಟಣ ಗಳನ್ನು ಅವುಗಳ ಗ್ರಾಮಗಳನ್ನು ಸ್ವಾಧೀನಮಾಡಿ ಕೊಳ್ಳಲಿಲ್ಲ. ಆದದರಿಂದ ಕಾನಾನ್ಯರು ಆ ಪ್ರಾಂತ ಗಳಲ್ಲೇ ವಾಸಿಸುವದಕ್ಕೆ ದೃಢಮಾಡಿದರು.
|
27. Neither H3808 did Manasseh H4519 drive out H3423 H853 the inhabitants of Beth H1052 -shean and her towns H1323 , nor Taanach H8590 and her towns H1323 , nor the inhabitants H3427 of Dor H1756 and her towns H1323 , nor the inhabitants H3427 of Ibleam H2991 and her towns H1323 , nor the inhabitants H3427 of Megiddo H4023 and her towns H1323 : but the Canaanites H3669 would H2974 dwell H3427 in that H2063 land H776 .
|
28. ಇಸ್ರಾ ಯೇಲ್ಯರು ಬಲಗೊಂಡಾಗ ಅವರನ್ನು ಪೂರ್ಣವಾಗಿ ಹೊರಡಿಸಿಬಿಡದೆ ಕಪ್ಪಕೊಡಲು ಕಾನಾನ್ಯರಿಗೆ ನೇಮಕ ಮಾಡಿದರು.
|
28. And it came to pass H1961 , when H3588 Israel H3478 was strong H2388 , that they put H7760 H853 the Canaanites H3669 to tribute H4522 , and did not H3808 utterly drive them out H3423 H3423 .
|
29. ಇದಲ್ಲದೆ ಎಫ್ರಾಯಾಮ್ ಗೆಜೆರಿನಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಕಾನಾ ನ್ಯರು ಗೆಜೆರಿನಲ್ಲಿ ಅವರ ಸಂಗಡ ವಾಸಿಸಿದ್ದರು.
|
29. Neither H3808 did Ephraim H669 drive out H3423 H853 the Canaanites H3669 that dwelt H3427 in Gezer H1507 ; but the Canaanites H3669 dwelt H3427 in Gezer H1507 among H7130 them.
|
30. ಜೆಬುಲೂನ್ಯರು ಕಿಟ್ರೋನಿನ ವಾಸಿಗಳನ್ನೂ ನಹಲೋಲಿನ ವಾಸಿಗಳನ್ನೂ ಹೊರಡಿಸಿಬಿಡಲಿಲ್ಲ. ಕಾನಾನ್ಯರಾದ ಇವರು ಅವರಲ್ಲಿ ವಾಸವಾಗಿದ್ದು ಕಪ್ಪ ವನ್ನು ಕೊಡುವವರಾದರು.
|
30. Neither H3808 did Zebulun H2074 drive out H3423 H853 the inhabitants H3427 of Kitron H7003 , nor the inhabitants H3427 of Nahalol H5096 ; but the Canaanites H3669 dwelt H3427 among H7130 them , and became H1961 tributaries H4522 .
|
31. ಆಶೇರ್ಯರು ಅಕ್ಕೋವಿನ ವಾಸಿಗಳನ್ನೂ ಚೀದೋನಿನ ವಾಸಿಗಳನ್ನೂ ಅಹ್ಲಾಬ್, ಅಕ್ಜೀಬ್, ಹೆಲ್ಬಾ, ಅಫೀಕ್, ರೆಹೋಬ್ ಪಟ್ಟಣ ಗಳ ವಾಸಿಗಳನ್ನೂ ಹೊರಡಿಸಿಬಿಡಲಿಲ್ಲ.
|
31. Neither H3808 did Asher H836 drive out H3423 H853 the inhabitants H3427 of Accho H5910 , nor the inhabitants H3427 of Zidon H6721 , nor of Ahlab H303 , nor of Achzib H392 , nor of Helbah H2462 , nor of Aphik H663 , nor of Rehob H7340 :
|
32. ಆದರೆ ಆಶೇರ್ಯರು ಅವರನ್ನು ಹೊರಡಿಸಿಬಿಡದೆ ಆ ದೇಶದ ವಾಸಿಗಳಾದ ಕಾನಾನ್ಯರ ಮಧ್ಯದಲ್ಲಿ ವಾಸವಾಗಿದ್ದರು.
|
32. But the Asherites H843 dwelt H3427 among H7130 the Canaanites H3669 , the inhabitants H3427 of the land H776 : for H3588 they did not H3808 drive them out H3423 .
|
33. ನಫ್ತಾಲ್ಯರು ಬೇತ್ಷೆಮೆಷಿನ ವಾಸಿಗಳನ್ನೂ ಬೇತ ನಾತಿನ ವಾಸಿಗಳನ್ನೂ ಹೊರಡಿಸಿಬಿಡದೆ ಆ ದೇಶ ವಾಸಿಗಳಾದ ಕಾನಾನ್ಯರ ಮಧ್ಯದಲ್ಲಿ ವಾಸಿಸಿದ್ದರು. ಆದರೆ ಬೇತ್ಷೆಮೆಷ್ ಬೇತನಾತನ ಪಟ್ಟಣವಾಸಿಗಳು ಅವರಿಗೆ ಕಪ್ಪಕೊಡುವವರಾದರು.
|
33. Neither H3808 did Naphtali H5321 drive out H3423 H853 the inhabitants H3427 of Beth H1053 -shemesh , nor the inhabitants H3427 of Beth H1043 -anath ; but he dwelt H3427 among H7130 the Canaanites H3669 , the inhabitants H3427 of the land H776 : nevertheless the inhabitants H3427 of Beth H1053 -shemesh and of Beth H1043 -anath became H1961 tributaries H4522 unto them.
|
34. ಇದಲ್ಲದೆ ಅಮೋರಿಯರು ದಾನನ ಮಕ್ಕಳನ್ನು ತಗ್ಗಿನಲ್ಲಿ ಇಳಿಯಗೊಡದೆ ಬೆಟ್ಟಗಳಿಗೆ ಓಡಿಸಿಬಿಟ್ಟು
|
34. And the Amorites H567 forced H3905 H853 the children H1121 of Dan H1835 into the mountain H2022 : for H3588 they would not H3808 suffer H5414 them to come down H3381 to the valley H6010 :
|
35. ತಾವು ಹರ್ಹೆರೆಸ್ ಬೆಟ್ಟದಲ್ಲಿಯೂ ಅಯ್ಯಾಲೋನಿ ನಲ್ಲಿಯೂ ಶಾಲ್ಬೀಮಿನಲ್ಲಿಯೂ ವಾಸಿಸಬೇಕೆಂದಿದ್ದರು. ಆದರೆ ಯೋಸೇಫನ ಮನೆಯವರ ಕೈ ಭಾರವಾದದ್ದ ರಿಂದ ಅವರಿಗೆ ಕಪ್ಪಕೊಡುವವರಾದರು.
|
35. But the Amorites H567 would H2974 dwell H3427 in mount H2022 Heres H2776 in Aijalon H357 , and in Shaalbim H8169 : yet the hand H3027 of the house H1004 of Joseph H3130 prevailed H3513 , so that they became H1961 tributaries H4522 .
|
36. ಹೀಗೆಯೇ ಅಮೋರಿಯರ ಮೇರೆಯು ಅಕ್ರಬ್ಬೀಮು ಹಿಡಿದು ಬಂಡೆಯಿಂದ ಮೇಲ್ಗಡೆಗೆ ಹಾದುಹೋಗುವದಾಗಿತ್ತು. 1 ಯೆಹೋಶುವನು ಸತ್ತ ತರುವಾಯ ಆದದ್ದೇನಂದರೆ, ಇಸ್ರಾಯೇಲ್ ಮಕ್ಕಳು ಕರ್ತನಿಗೆ--ಕಾನಾನ್ಯರ ಮೇಲೆ ಮೊದಲು ನಮಗಾಗಿ ಯುದ್ಧಕ್ಕೆ ಹೋಗುವವರು ಯಾರು ಎಂದು ಕೇಳಿದರು.
|
36. And the coast H1366 of the Amorites H567 was from the going up H4480 H4608 to Akrabbim H6137 , from the rock H4480 H5553 , and upward H4605 .
|