|
|
1. ಆಗ ಭೂಮಿಯಲ್ಲೆಲ್ಲಾ ಒಂದೇ ಭಾಷೆ, ಒಂದೇ ಮಾತು ಇತ್ತು.
|
1. And the whole H3605 earth H776 was H1961 of one H259 language H8193 , and of one H259 speech H1697 .
|
2. ಇದಾದ ಮೇಲೆ ಅವರು ಪೂರ್ವ ದಿಕ್ಕಿನಿಂದ ಹೊರಟು ಪ್ರಯಾಣ ಮಾಡುವಾಗ ಶಿನಾರ್ ದೇಶದ ಬೈಲನ್ನು ಕಂಡುಕೊಂಡು ಅಲ್ಲಿ ವಾಸಮಾಡಿದರು.
|
2. And it came to pass H1961 , as they journeyed H5265 from the east H4480 H6924 , that they found H4672 a plain H1237 in the land H776 of Shinar H8152 ; and they dwelt H3427 there H8033 .
|
3. ಅವರು--ಬನ್ನಿರಿ, ಇಟ್ಟಿಗೆ ಗಳನ್ನು ಮಾಡಿ ಚೆನ್ನಾಗಿ ಸುಡೋಣ ಎಂದು ಅವರು ಒಬ್ಬರಿಗೊಬ್ಬರು ಮಾತನಾಡಿಕೊಂಡರು. ಅವರಿಗೆ ಕಲ್ಲಿಗೆ ಬದಲಾಗಿ ಇಟ್ಟಿಗೆಯೂ ಸುಣ್ಣಕ್ಕೆ ಬದಲಾಗಿ ಜೇಡಿಮಣ್ಣೂ ಇದ್ದವು.
|
3. And they said H559 one H376 to H413 another H7453 , Go to H3051 , let us make H3835 brick H3843 , and burn H8313 them throughly H8316 . And they had H1961 brick H3843 for stone H68 , and slime H2564 had H1961 they for mortar H2563 .
|
4. ಅವರು--ಬನ್ನಿರಿ, ಭೂಮಿಯ ಮೇಲೆಲ್ಲಾ ನಾವು ಚದರಿಹೋಗದ ಹಾಗೆ ಆಕಾಶವನ್ನು ಮುಟ್ಟುವ ಒಂದು ಪಟ್ಟಣವನ್ನೂ ಗೋಪುರವನ್ನೂ ನಮಗಾಗಿ ಕಟ್ಟಿಕೊಂಡು ನಾವು ಹೆಸರನ್ನು ಪಡೆಯೋಣ ಅಂದರು;
|
4. And they said H559 , Go to H3051 , let us build H1129 us a city H5892 and a tower H4026 , whose top H7218 may reach unto heaven H8064 ; and let us make H6213 us a name H8034 , lest H6435 we be scattered abroad H6327 upon H5921 the face H6440 of the whole H3605 earth H776 .
|
5. ಆಗ ನರಪುತ್ರರು ಕಟ್ಟುವ ಪಟ್ಟಣವನ್ನೂ ಗೋಪುರವನ್ನೂ ನೋಡುವದಕ್ಕೆ ಕರ್ತನು ಇಳಿದು ಬಂದನು.
|
5. And the LORD H3068 came down H3381 to see H7200 H853 the city H5892 and the tower H4026 , which H834 the children H1121 of men H120 built H1129 .
|
6. ಕರ್ತನು--ಇಗೋ, ಜನವು ಒಂದೇ; ಅವರೆಲ್ಲರಿಗೆ ಭಾಷೆಯೂ ಒಂದೇ. ಈಗ ಅವರು ಇದನ್ನು ಮಾಡಲಾರಂಭಿಸಿದ್ದಾರೆ; ಇನ್ನು ಮುಂದೆ ಅವರು ಮಾಡುವದಕ್ಕೂ ಊಹಿಸುವದಕ್ಕೂ ಅಡ್ಡಿ ಯಾಗದು.
|
6. And the LORD H3068 said H559 , Behold H2005 , the people H5971 is one H259 , and they have all H3605 one H259 language H8193 ; and this H2088 they begin H2490 to do H6213 : and now H6258 nothing H3808 H3605 will be restrained H1219 from H4480 them, which H834 they have imagined H2161 to do H6213 .
|
7. ಆದದರಿಂದ ನಾವು ಇಳಿದು ಹೋಗಿ ಅವರು ಒಬ್ಬರ ಮಾತು ಒಬ್ಬರು ತಿಳಿಯದ ಹಾಗೆ ಅವರ ಭಾಷೆಯನ್ನು ಗಲಿಬಿಲಿ ಮಾಡೋಣ ಅಂದನು.
|
7. Go to H3051 , let us go down H3381 , and there H8033 confound H1101 their language H8193 , that H834 they may not H3808 understand H8085 one H376 another H7453 's speech H8193 .
|
8. ಹೀಗೆ ಕರ್ತನು ಅವರನ್ನು ಅಲ್ಲಿಂದ ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು. ಆಗ ಅವರು ಪಟ್ಟಣ ಕಟ್ಟುವದನ್ನು ನಿಲ್ಲಿಸಿ ಬಿಟ್ಟರು.
|
8. So the LORD H3068 scattered them abroad H6327 H853 from thence H4480 H8033 upon H5921 the face H6440 of all H3605 the earth H776 : and they left off H2308 to build H1129 the city H5892 .
|
9. ಆದದರಿಂದ ಅದಕ್ಕೆ ಬಾಬೆಲ್ ಎಂದು ಹೆಸರಾಯಿತು; ಯಾಕಂದರೆ ಅಲ್ಲಿ ಕರ್ತನು ಭೂಮಿಯ ಮೇಲೆಲ್ಲಾ ಭಾಷೆಗಳನ್ನು ಗಲಿಬಿಲಿ ಮಾಡಿದನು; ಅಲ್ಲಿಂದ ಕರ್ತನು ಅವರನ್ನು ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು.
|
9. Therefore H5921 H3651 is the name H8034 of it called H7121 Babel H894 ; because H3588 the LORD H3068 did there H8033 confound H1101 the language H8193 of all H3605 the earth H776 : and from thence H4480 H8033 did the LORD H3068 scatter them abroad H6327 upon H5921 the face H6440 of all H3605 the earth H776 .
|
10. ಶೇಮನ ವಂಶಾವಳಿಗಳು ಇವೇ; ಶೇಮನು ನೂರು ವರುಷದವನಾಗಿದ್ದಾಗ ಅಂದರೆ ಪ್ರಳಯವಾಗಿ ಎರಡು ವರುಷಗಳಾದ ಮೇಲೆ ಅವನಿಂದ ಅರ್ಪಕ್ಷದನು ಹುಟ್ಟಿದನು.
|
10. These H428 are the generations H8435 of Shem H8035 : Shem H8035 was a hundred H3967 years H8141 old H1121 , and begot H3205 H853 Arphaxad H775 two years H8141 after H310 the flood H3999 :
|
11. ಶೇಮನಿಂದ ಅರ್ಪಕ್ಷದನು ಹುಟ್ಟಿದ ಮೇಲೆ ಶೇಮನು ಐನೂರು ವರುಷ ಬದುಕಿದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
|
11. And Shem H8035 lived H2421 after H310 he begot H3205 H853 Arphaxad H775 five H2568 hundred H3967 years H8141 , and begot H3205 sons H1121 and daughters H1323 .
|
12. ಅರ್ಪಕ್ಷದನು ಮೂವತ್ತೈದು ವರುಷದವನಾ ಗಿದ್ದಾಗ ಅವನಿಂದ ಶೆಲಹನು ಹುಟ್ಟಿದನು.
|
12. And Arphaxad H775 lived H2425 five H2568 and thirty H7970 years H8141 , and begot H3205 H853 Salah H7974 :
|
13. ಅರ್ಪಕ್ಷದನಿಂದ ಶೆಲಹನು ಹುಟ್ಟಿದ ಮೇಲೆ ಅರ್ಪಕ್ಷದನು ನಾನೂರ ಮೂರು ವರುಷ ಬದುಕಿದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
|
13. And Arphaxad H775 lived H2421 after H310 he begot H3205 H853 Salah H7974 four H702 hundred H3967 and three H7969 years H8141 , and begot H3205 sons H1121 and daughters H1323 .
|
14. ಶೆಲಹನು ಮೂವತ್ತು ವರುಷದವನಾಗಿದ್ದಾಗ ಅವನಿಂದ ಎಬರನು ಹುಟ್ಟಿದನು.
|
14. And Salah H7974 lived H2425 thirty H7970 years H8141 , and begot H3205 H853 Eber H5677 :
|
15. ಶೆಲಹನಿಂದ ಎಬರನು ಹುಟ್ಟಿದ ಮೇಲೆ ಶೆಲಹನು ನಾನೂರ ಮೂರು ವರುಷ ಬದುಕಿದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
|
15. And Salah H7974 lived H2421 after H310 he begot H3205 H853 Eber H5677 four H702 hundred H3967 and three H7969 years H8141 , and begot H3205 sons H1121 and daughters H1323 .
|
16. ಎಬರನು ಮೂವತ್ತುನಾಲ್ಕು ವರುಷದವ ನಾಗಿದ್ದಾಗ ಅವನಿಂದ ಪೆಲೆಗನು ಹುಟ್ಟಿದನು.
|
16. And Eber H5677 lived H2421 four H702 and thirty H7970 years H8141 , and begot H3205 H853 Peleg H6389 :
|
17. ಎಬರನಿಂದ ಪೆಲೆಗನು ಹುಟ್ಟಿದ ಮೇಲೆ ಎಬರನು ನಾನೂರ ಮೂವತ್ತು ವರುಷ ಬದುಕಿದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
|
17. And Eber H5677 lived H2421 after H310 he begot H3205 H853 Peleg H6389 four H702 hundred H3967 and thirty H7970 years H8141 , and begot H3205 sons H1121 and daughters H1323 .
|
18. ಪೆಲೆಗನು ಮೂವತ್ತು ವರುಷದವನಾಗಿದ್ದಾಗ ಅವನಿಂದ ರೆಗೂವನು ಹುಟ್ಟಿದನು.
|
18. And Peleg H6389 lived H2421 thirty H7970 years H8141 , and begot H3205 H853 Reu H7466 :
|
19. ಪೆಲೆಗನಿಂದ ರೆಗೂವನು ಹುಟ್ಟಿದ ಮೇಲೆ ಪೆಲೆಗನು ಇನ್ನೂರ ಒಂಭತ್ತು ವರುಷ ಬದುಕಿದನು. ಅವನಿಂದ ಕುಮಾ ರರೂ ಕುಮಾರ್ತೆಯರೂ ಹುಟ್ಟಿದರು.
|
19. And Peleg H6389 lived H2421 after H310 he begot H3205 H853 Reu H7466 two hundred H3967 and nine H8672 years H8141 , and begot H3205 sons H1121 and daughters H1323 .
|
20. ರೆಗೂವನು ಮೂವತ್ತೆರಡು ವರುಷದವನಾಗಿದ್ದಾಗ ಅವನಿಂದ ಸೆರೂಗನು ಹುಟ್ಟಿದನು.
|
20. And Reu H7466 lived H2421 two H8147 and thirty H7970 years H8141 , and begot H3205 H853 Serug H8286 :
|
21. ರೆಗೂವ ನಿಂದ ಸೆರೂಗನು ಹುಟ್ಟಿದ ಮೇಲೆ ರೆಗೂವನು ಇನ್ನೂರ ಏಳು ವರುಷ ಬದುಕಿದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
|
21. And Reu H7466 lived H2421 after H310 he begot H3205 H853 Serug H8286 two hundred H3967 and seven H7651 years H8141 , and begot H3205 sons H1121 and daughters H1323 .
|
22. ಸೆರೂಗನು ಮೂವತ್ತು ವರುಷದವನಾಗಿದ್ದಾಗ ಅವನಿಂದ ನಾಹೋರನು ಹುಟ್ಟಿದನು.
|
22. And Serug H8286 lived H2421 thirty H7970 years H8141 , and begot H3205 H853 Nahor H5152 :
|
23. ಸೆರೂಗ ನಿಂದ ನಾಹೋರನು ಹುಟ್ಟಿದ ಮೇಲೆ ಸೆರೂಗನು ಇನ್ನೂರು ವರುಷ ಬದುಕಿದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
|
23. And Serug H8286 lived H2421 after H310 he begot H3205 H853 Nahor H5152 two hundred H3967 years H8141 , and begot H3205 sons H1121 and daughters H1323 .
|
24. ನಾಹೋರನು ಇಪ್ಪತ್ತೊಂಭತ್ತು ವರುಷದವನಾಗಿ ದ್ದಾಗ ಅವನಿಂದ ತೆರಹನು ಹುಟ್ಟಿದನು.
|
24. And Nahor H5152 lived H2421 nine H8672 and twenty H6242 years H8141 , and begot H3205 H853 Terah H8646 :
|
25. ನಾಹೋರ ನಿಂದ ತೆರಹನು ಹುಟ್ಟಿದ ಮೇಲೆ ನಾಹೋರನು ನೂರಹತ್ತೊಂಭತ್ತು ವರುಷ ಬದುಕಿದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
|
25. And Nahor H5152 lived H2421 after H310 he begot H3205 H853 Terah H8646 a hundred H3967 and nineteen H8672 H6240 years H8141 , and begot H3205 sons H1121 and daughters H1323 .
|
26. ತೆರಹನು ಎಪ್ಪತ್ತು ವರುಷದವನಾಗಿದ್ದಾಗ ಅವ ನಿಂದ ಅಬ್ರಾಮನೂ ನಾಹೋರನೂ ಹಾರಾನನೂ ಹುಟ್ಟಿದರು.
|
26. And Terah H8646 lived H2421 seventy H7657 years H8141 , and begot H3205 H853 Abram H87 , H853 Nahor H5152 , and Haran H2039 .
|
27. ತೆರಹನ ವಂಶಾವಳಿಗಳು ಇವೇ; ತೆರಹನಿಂದ ಅಬ್ರಾಮನೂ ನಾಹೋರನೂ ಹಾರಾನನೂ ಹುಟ್ಟಿದರು. ಹಾರಾನನಿಂದ ಲೋಟನು ಹುಟ್ಟಿದನು.
|
27. Now these H428 are the generations H8435 of Terah H8646 : Terah H8646 begot H3205 H853 Abram H87 , H853 Nahor H5152 , and Haran H2039 ; and Haran H2039 begot H3205 H853 Lot H3876 .
|
28. ಆದರೆ ಹಾರಾನನು ತಾನು ಹುಟ್ಟಿದ ಸೀಮೆಯಾದ ಕಲ್ದಿಯರ ಊರ್ನಲ್ಲಿ ತನ್ನ ತಂದೆಯಾದ ತೆರಹನ ಮುಂಚೆಯೇ ಸತ್ತನು.
|
28. And Haran H2039 died H4191 before H5921 H6440 his father H1 Terah H8646 in the land H776 of his nativity H4138 , in Ur H218 of the Chaldees H3778 .
|
29. ಅಬ್ರಾಮನೂ ನಾಹೋ ರನೂ ತಮಗೆ ಹೆಂಡತಿಯರನ್ನು ತೆಗೆದುಕೊಂಡರು. ಅಬ್ರಾಮನ ಹೆಂಡತಿಯ ಹೆಸರು ಸಾರಯಳು, ನಾಹೋರನ ಹೆಂಡತಿಯ ಹೆಸರು ಮಿಲ್ಕಾ; ಈಕೆಯು ಹಾರಾನನ ಮಗಳು; ಹಾರಾನನು ಮಿಲ್ಕಳಿಗೂ ಇಸ್ಕಳಿಗೂ ತಂದೆ.
|
29. And Abram H87 and Nahor H5152 took H3947 them wives H802 : the name H8034 of Abram H87 's wife H802 was Sarai H8297 ; and the name H8034 of Nahor H5152 's wife H802 , Milcah H4435 , the daughter H1323 of Haran H2039 , the father H1 of Milcah H4435 , and the father H1 of Iscah H3252 .
|
30. ಆದರೆ ಸಾರಯಳು ಬಂಜೆ ಯಾದದ್ದರಿಂದ ಮಕ್ಕಳಿಲ್ಲದೆ ಇದ್ದಳು.
|
30. But Sarai H8297 was H1961 barren H6135 ; she had no H369 child H2056 .
|
31. ತೆರಹನು ತನ್ನ ಮಗನಾದ ಅಬ್ರಾಮನನ್ನೂ ತನ್ನ ಮೊಮ್ಮಗನೂ ಹಾರಾನನ ಮಗನೂ ಆಗಿದ್ದ ಲೋಟನನ್ನೂ ತನ್ನ ಸೊಸೆಯಾದ ಅಬ್ರಾಮನ ಹೆಂಡತಿ ಸಾರಯಳನ್ನೂ ಕರಕೊಂಡು ಕಾನಾನ್ ದೇಶಕ್ಕೆ ಹೋಗು ವದಕ್ಕಾಗಿ ಕಲ್ದೀಯರ ಊರ್ ಅನ್ನು ಬಿಟ್ಟು ಅವರು ಹಾರಾನಿಗೆ ಬಂದು ಅಲ್ಲಿ ವಾಸವಾಗಿದ್ದರು.
|
31. And Terah H8646 took H3947 H853 Abram H87 his son H1121 , and Lot H3876 the son H1121 of Haran H2039 his son H1121 's son H1121 , and Sarai H8297 his daughter H3618 -in-law , his son H1121 Abram H87 's wife H802 ; and they went forth H3318 with H854 them from Ur H4480 H218 of the Chaldees H3778 , to go H1980 into the land H776 of Canaan H3667 ; and they came H935 unto H5704 Haran H2771 , and dwelt H3427 there H8033 .
|
32. ತೆರಹನ ದಿನಗಳು ಒಟ್ಟು ಇನ್ನೂರ ಐದು ವರುಷಗಳಾಗಿದ್ದವು. ತರುವಾಯ ತೆರಹನು ಹಾರಾನಿನಲ್ಲಿ ಸತ್ತನು.
|
32. And the days H3117 of Terah H8646 were H1961 two hundred H3967 and five H2568 years H8141 : and Terah H8646 died H4191 in Haran H2771 .
|