Bible Versions
Bible Books

Joshua 19 (KNV) Kannadam Old BSI Version

1 ಎರಡನೇ ಚೀಟು ಸಿಮೆಯೋನನಿಗೆ ಬಿತ್ತು. ಸಿಮೆಯೋನನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರವಾಯಿತು. ಅವರ ಬಾಧ್ಯತೆ ಯೂದನ ಮಕ್ಕಳ ಬಾಧ್ಯೆತೆಯ ಮಧ್ಯದಲ್ಲಿತ್ತು.
2 ಅವರ ಬಾಧ್ಯತೆಯಲ್ಲಿ ಸೇರಿದ ಪಟ್ಟಣಗಳು ಯಾವವಂದರೆ: ಬೇರ್ಷೆಬ, ಶೆಬ, ಮೋಲಾದಾ,
3 ಹಚರ್‌ಷೂವಾಲ್‌, ಬಾಲಾ, ಎಚೆಮ್‌,
4 ಎಲ್ತೋಲದ್‌, ಬೆತೂಲ್‌, ಹೋರ್ಮಾ,
5 ಚಿಕ್ಲಗ್‌, ಬೇರ್ತ್‌ಮ್‌ಕಾಬೋತ್‌, ಹಚರ್‌ಸೂಸಾ,
6 ಭೇತ್‌ಲೆ ಬಾವೋತ್‌, ಶಾರೂಹೆನ್‌ ಎಂಬ ಹದಿಮೂರು ಪಟ್ಟಣಗಳು ಅವುಗಳ ಗ್ರಾಮಗಳು
7 ಆಯಿನ್‌, ರಿಮ್ಮೋನ್‌, ಏತೆರ್‌, ಆಷಾನ್‌ ಎಂಬ ನಾಲ್ಕು ಪಟ್ಟಣಗಳು ಅವುಗಳ ಗ್ರಾಮಗಳು;
8 ಪಟ್ಟಣಗಳ ಸುತ್ತಲೂ ಬಾಲತ್‌ಬೇರಿನ ವರೆಗೂ ದಕ್ಷಿಣದಲ್ಲಿರುವ ರಾಮ ವರೆಗೂ ಇರುವ ಎಲ್ಲಾ ಗ್ರಾಮಗಳ ಸಹಿತವಾಗಿ ಸಿಮೆಯೋನನ ಗೋತ್ರದ ಮಕ್ಕಳಿಗೆ ಅವರ ಕುಟುಂಬ ಗಳ ಪ್ರಕಾರ ಸಿಕ್ಕ ಬಾಧ್ಯತೆಯಾಗಿತ್ತು.
9 ಸಿಮೆಯೋನನ ಮಕ್ಕಳ ಬಾಧ್ಯತೆ ಯೂದನ ಮಕ್ಕಳ ಭಾಗದಲ್ಲಿ ಇತ್ತು. ಯಾಕಂದರೆ ಯೂದನ ಮಕ್ಕಳ ಭಾಗವು ಅವರಿಗೆ ಹೆಚ್ಚಾಗಿದ್ದ ಕಾರಣ ಸಿಮೆಯೋನನ ಮಕ್ಕಳಿಗೆ ಅವರ ಭಾಗದಲ್ಲಿ ಬಾಧ್ಯತೆ ಉಂಟಾಯಿತು.
10 ಮೂರನೇ ಚೀಟು ಬಿದ್ದ ಭಾಗ ಜೆಬುಲೂನನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಅವರ ಬಾಧ್ಯತೆಯ ಮೇರೆ ಸಾರೀದಿನ ವರೆಗೂ ಆಯಿತು.
11 ಅಲ್ಲಿಂದ ಸಮುದ್ರದ ಕಡೆಗೆ ಹೋಗಿ ಮರ್ಗಲಾಕ್ಕೆ ಏರಿ ದಬ್ಬೆಷೆತಿಗೆ ಹೋಗಿ ಯೊಕ್ನೆಯಾಮಿಗೆ ಎದುರಾದ ನದಿಗೆ ಮುಗಿಯುವದು.
12 ಅದು ಸಾರೀದಿನಿಂದ ಮೂಡಣ ಸೂರ್ಯನು ಉದಯಿಸುವ ಕಡೆಯಿಂದ ಕಿಸ್ಲೋತ್‌ತ್ತಾಬೋರಿನ ಮೇರೆಗೆ ತಿರುಗಿ ಅಲ್ಲಿಂದ ದಾಬೆರತಿಗೆ ಹೊರಟು ಯಾಫೀಯಕ್ಕೆ ಹೋಗಿ
13 ಅಲ್ಲಿಂದ ಪೂರ್ವ ದಿಕ್ಕಿನಲ್ಲಿರುವ ಗತ್‌ಹೇಫೆರನ್ನು ಎತ್‌ಕಾಚೀನನ್ನು ದಾಟಿ, ರಿಮ್ಮೊಮೆತೋರದ ವರೆಗೂ ನೇಯಕ್ಕೂ ಹಾದು
14 ಅಲ್ಲಿಂದ ಮೇರೆ ಉತ್ತರ ದಿಕ್ಕಿನಲ್ಲಿರುವ ಹನ್ನಾತೋನಿಗೆ ಸುತ್ತಿಕೊಂಡು ಇಫ್ತಹೇಲಿನ ಹಳ್ಳದ ತಗ್ಗಿಗೆ ಮುಗಿಯುವದು.
15 ಮೇರೆಯಲ್ಲಿರುವ ಕಟ್ಟಾತ್‌, ನಹಲ್ಲಾಲ್‌, ಶಿಮ್ರೋನ್‌, ಇದಲಾ, ಬೇತ್ಲೆಹೇಮ್‌ ಮೊದಲಾದ ಹನ್ನೆರಡು ಪಟ್ಟಣ ಗಳು ಅವುಗಳ ಗ್ರಾಮಗಳ ಸಹಿತವಾಗಿ
16 ಜೆಬುಲೂ ನನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಪಟ್ಟಣಗಳೂ ಅವುಗಳ ಗ್ರಾಮಗಳೂ ಅವರ ಬಾಧ್ಯತೆಯಾಗಿದ್ದವು.
17 ನಾಲ್ಕನೇ ಚೀಟು ಇಸ್ಸಾಕಾರನಿಗೆ ಬಿತ್ತು. ಇಸ್ಸಾಕಾರನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ
18 ಅವರ ಮೇರೆಯು ಇಜ್ರೇಲಿಗೆ ಎದುರಾದ ಕೆಸುಲ್ಲೋತ್‌, ಶೂನೇಮ್‌,
19 ಹಫಾರಯಿಮ್‌, ಶೀಯೋನ್‌, ಅನಾಹರತ್‌,
20 ರಬ್ಬೀತ್‌, ಕಿಷ್ಯೋನ್‌, ಎಬೆಜ್‌,
21 ರೆಮೆತ್‌, ಏಂಗನ್ನೀಮ್‌, ಏನ್‌ಹದ್ದಾ, ಬೇತ್‌ಪಚ್ಚೇಚ್‌ ಎಂಬ ತೀರಗಳನ್ನು ಸುತ್ತಿ ಅಲ್ಲಿಂದ
22 ತಾಬೋಗೆರ್‌ ಹೊರಟು ಶಹಚೀಮಾ. ಬೇತ್ಷೆಮೆಷ್ಗೆ ಸೇರಿ ಯೊರ್ದನಿಗೆ ಮುಗಿಯುವದು; ಹದಿನಾರು ಪಟ್ಟಣಗಳೂ ಅವುಗಳ ಗ್ರಾಮಗಳು;
23 ಇಸ್ಸಾಕಾರನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಪಟ್ಟಣಗಳೂ ಅವುಗಳ ಗ್ರಾಮಗಳೂ ಅವರಿಗೆ ಉಂಟಾದ ಬಾಧ್ಯತೆಯು.
24 ಐದನೇ ಚೀಟು ಆಶೇರನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬದ ಪ್ರಕಾರಬಿತ್ತು.
25 ಅವರ ಮೇರೆ ಯಾವವಂದರೆ ಹೆಲ್ಕತ್‌, ಹಲೀ, ಬೆಟೆನ್‌, ಅಕ್ಷಾಫ್‌
26 ಅಲಮ್ಮೆಲೆಕ್‌, ಅಮಾದ್‌, ಮಿಷಾಲ್‌ ಎಂಬ ಪಟ್ಟಣ ಗಳನ್ನು ಸುತ್ತಿಕೊಂಡು ಅದು ಪಶ್ಚಿಮಕ್ಕೆ ಕರ್ಮೆಲಿಗೂ ಶೀಹೋರ್‌ಲಿಬ್ನತ್‌ಗೂ ಹೋಗಿ
27 ಅಲ್ಲಿಂದ ಸೂರ್ಯೋದಯದ ಕಡೆ ಬೇತ್‌ದಾಗೋನಿಗೆ ಉತ್ತರ ಜೆಬುಲೂನಿಗೂ ಬೇತ್‌ ಏಮೆಕ್‌ ಉತ್ತರ ದಿಕ್ಕಿನಲ್ಲಿ ಇರುವ ಇಫ್ತಹೇಲಿನ ತಗ್ಗಿಗೂ ವೆಗೀಯೇಲಿಗೂ ಹಾದು ಎಡಭಾಗದಲ್ಲಿರುವ ಕಾಬೂಲಿಗೂ
28 ಅಲ್ಲಿಂದ ಎಬ್ರೋನಿಗೂ ರೆಹೋಬಿನಿಗೂ ಹಮ್ಮೋನಿಗೂ ಕಾನಕ್ಕೂ ಮಹಾಚಿದೋನಿನ ವರೆಗೆ ಹಾದು
29 ರಾಮಕ್ಕೆ ಹೋಗಿ ತೂರ್‌ ಎಂಬ ಬಲವಾದ ಪಟ್ಟಣದ ವರೆಗೂ ತಿರುಗಿ ಅಲ್ಲಿಂದ ಹೋಸಾಕ್ಕೆ ಹೊರಟು ಸಮುದ್ರದ ಬಳಿಯ ಅಕ್ಜೀಬಿನ ಮೇರೆಯ ಅಂಚಿಗೆ ಮುಗಿಯುವದು.
30 ಅದಕ್ಕೆ ಉಮ್ಮಾ, ಅಫೇಕ್‌ ರೆಹೋಬ್‌ ಎಂಬ ಪಟ್ಟಣಗಳು ಸೇರಿದ್ದವು. ಇಪ್ಪತ್ತೆರಡು ಪಟ್ಟಣಗಳೂ ಅವುಗಳ ಗ್ರಾಮಗಳೂ.
31 ಇದೇ ಆಶೇರನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಪಟ್ಟಣಗಳೂ ಅವುಗಳ ಗ್ರಾಮಗಳೂ ಬಾಧ್ಯತೆಯಾಗಿದ್ದವು.
32 ಆರನೇ ಚೀಟು ನಫ್ತಾಲಿಯ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಬಿತ್ತು.
33 ಅವರ ಮೇರೆಯು ಹೆಲೇಫಿನಿಂದ ಅಲ್ಲೋನಿನಿಂದ ಚಾನನ್ನಿಮ್‌, ಅದಾಮಿ, ನೆಕೆಬ್‌, ಯಬ್ನೆಯೇಲ್‌, ಇವುಗಳ ಮೇಲೆ ಹಾದು ಲಕ್ಕೂಮಿನವರೆಗೂ ಹೋಗಿ ಯೊರ್ದನಿಗೆ ಮುಗಿಯು ವದು.
34 ಮೇರೆಯು ಪಶ್ಚಿಮಕ್ಕೆ ಅಜ್ನೊತ್‌ ತಾಬಾರಿಗೆ ತಿರುಗಿ ಅಲ್ಲಿಂದ ಹುಕ್ಕೋಕಿಗೆ ಹೊರಟು ದಕ್ಷಿಣಕ್ಕೆ ಜೆಬುಲೂನನನ್ನೂ ಪಶ್ಚಿಮಕ್ಕೆ ಆಶೇರನನ್ನೂ ಸೂರ್ಯೋದಯದ ದಿಕ್ಕಿನಲ್ಲಿ ಯೊರ್ದನಿನ ಬಳಿಯ ಲ್ಲಿರುವ ಯೂದವನ್ನೂ ಮುಟ್ಟಿ ಬರುವದು.
35 ಇದರಲ್ಲಿ ರುವ ಕೋಟೆಗಳುಳ್ಳ ಪಟ್ಟಣಗಳು ಯಾವವಂದರೆ, ಚಿದ್ದೀಮ್‌, ಚೇರ್‌, ಹಮ್ಮತ್‌, ರಕ್ಕತ್‌, ಕಿನ್ನೆರೆತ್‌
36 ಆದಾಮಾ, ರಾಮಾ, ಹಾಚೋರ್‌,
37 ಕೆದೆಷ್‌, ಎದ್ರೈ, ಎನ್‌ಹಾಚೊರ್‌,
38 ಇರೋನ್‌, ಮಿಗ್ದಲೇಲ್‌, ಹೊರೇಮ್‌, ಬೇತ್‌ಷೆಮೆಷೆ ಬೆತನಾತ್‌ ಮೊದಲಾದ ಹತ್ತೊಂಬತ್ತು ಪಟ್ಟಣಗಳೂ ಅವುಗಳ ಗ್ರಾಮಗಳೂ
39 ಇದೇ ನಫ್ತಾಲಿಯ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಪಟ್ಟಣಗಳೂ ಅವುಗಳ ಗ್ರಾಮಗಳೂ ದೊರೆತ ಬಾಧ್ಯತೆಯಾಗಿದೆ.
40 ಇದಲ್ಲದೆ ಏಳನೇ ಚೀಟು ದಾನನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಬಿತ್ತು.
41 ಅವರ ಬಾದ್ಯತೆಯ ಮೇರೆಯು ಚೋರಾ, ಎಷ್ಟಾವೋಲ್‌, ಈರ್ಷೆಮೆಷ್‌
42 ಶಾಲಬ್ಬೀನ್‌, ಅಯ್ಯಾಲೋನ್‌, ಇತ್ಲಾ,
43 ಏಲೋನ್‌, ತಿಮ್ನಾ, ಎಕ್ರೋನ್‌,
44 ಎಲ್ತೆಕೇ, ಗಿಬ್ಬೆತೋನ್‌, ಬಾಲತ್‌,
45 ಯೆಹುದ್‌, ಬೆನೇಬೆರಕ್‌, ಗತ್‌ಮ್ಮೋನ್‌,
46 ಮೇಯರ್ಕೋನ್‌, ರಕ್ಕೋನ್‌ ಎಂಬ ಪಟ್ಟಣಗಳು. ಯೊಪ್ಪಕ್ಕೆ ಎದುರಾದ ಮೇರೆಯು ಸಹ.
47 ಇದಲ್ಲದೆ ದಾನನ ಮಕ್ಕಳ ಮೇರೆಯು ಅವರಿಗೆ ಸಾಲದಿದ್ದರಿಂದ ಅವರು ಹೊರಟು ಹೋಗಿ ಲೆಷೆಮಿನ ಮೇಲೆ ಯುದ್ಧಮಾಡಿ ಅದನ್ನು ಹಿಡಿದು ಕತ್ತಿಯಿಂದ ಹೊಡೆದು ಸ್ವಾಧೀನ ಮಾಡಿಕೊಂಡು ಅದರಲ್ಲಿ ವಾಸವಾಗಿದ್ದು ಲೆಷೆಮಿಗೆ ತಮ್ಮ ತಂದೆಯಾದ ದಾನನ ಹೆಸರಿನ ಪ್ರಕಾರ ದಾನ್‌ ಎಂದು ಹೆಸರಿಟ್ಟರು.
48 ಪಟ್ಟಣಗಳೂ ಅವುಗಳ ಗ್ರಾಮಗಳೂ ದಾನನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ದೊರೆತ ಬಾಧ್ಯತೆಯು ಇದೇ.
49 ಅವರು ದೇಶವನ್ನು ಅದರ ಮೇರೆಗಳ ಪ್ರಕಾರ ಬಾಧ್ಯತೆಯಾಗಿ ಹಂಚಿಕೊಂಡು ತೀರಿಸಿದಾಗ ಇಸ್ರಾ ಯೇಲ್‌ ಮಕ್ಕಳು ನೂನನ ಮಗನಾದ ಯೆಹೋಶುವ ನಿಗೆ ತಮ್ಮ ಮಧ್ಯದಲ್ಲಿ ಬಾಧ್ಯತೆಯನ್ನು ಕೊಟ್ಟರು.
50 ಅವನು ಕೇಳಿದ ಎಫ್ರಾಯಾಮ್‌ ಬೆಟ್ಟದಲ್ಲಿರುವ ತಿಮ್ನತ್‌ಸೆರಹ ಎಂಬ ಪಟ್ಟಣವನ್ನು ಕರ್ತನ ಮಾತಿನ ಪ್ರಕಾರ ಕೊಟ್ಟರು. ಅವನು ಪಟ್ಟಣವನ್ನು ಕಟ್ಟಿಸಿ ಅದರಲ್ಲಿ ವಾಸವಾಗಿದ್ದನು.ಯಾಜಕನಾದ ಎಲಿಯಾ ಜರನೂ ನೂನನ ಮಗನಾದ ಯೆಹೋಶುವನೂ ಇಸ್ರಾಯೇಲಿನ ಮಕ್ಕಳ ಗೋತ್ರಗಳ ಪಿತೃಗಳ ಹಿರಿಯರೂ ಶೀಲೋವಿನಲ್ಲಿ ಸಭೆಯ ಗುಡಾರದ ಬಾಗಲ ಬಳಿಯಲ್ಲಿ ಕರ್ತನ ಸಮ್ಮುಖದಲ್ಲಿ ಚೀಟು ಹಾಕಿ ಹಂಚಿಕೊಟ್ಟ ಬಾಧ್ಯತೆಗಳು ಇವೇ. ಹೀಗೆ ಅವರು ದೇಶವನ್ನು ಭಾಗವಾಗಿ ಹಂಚಿಕೊಂಡು ಪೂರೈಸಿದರು.
51 ಯಾಜಕನಾದ ಎಲಿಯಾ ಜರನೂ ನೂನನ ಮಗನಾದ ಯೆಹೋಶುವನೂ ಇಸ್ರಾಯೇಲಿನ ಮಕ್ಕಳ ಗೋತ್ರಗಳ ಪಿತೃಗಳ ಹಿರಿಯರೂ ಶೀಲೋವಿನಲ್ಲಿ ಸಭೆಯ ಗುಡಾರದ ಬಾಗಲ ಬಳಿಯಲ್ಲಿ ಕರ್ತನ ಸಮ್ಮುಖದಲ್ಲಿ ಚೀಟು ಹಾಕಿ ಹಂಚಿಕೊಟ್ಟ ಬಾಧ್ಯತೆಗಳು ಇವೇ. ಹೀಗೆ ಅವರು ದೇಶವನ್ನು ಭಾಗವಾಗಿ ಹಂಚಿಕೊಂಡು ಪೂರೈಸಿದರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×