|
|
1. ಕರ್ತನು ಹೇಗೆ ತನ್ನ ಕೋಪದಲ್ಲಿ ಮೇಘದಿಂದ ಚೀಯೋನಿನ ಮಗಳನ್ನು ಮುಚ್ಚಿ, ಇಸ್ರಾಯೇಲಿನ ಸೌಂದರ್ಯವನ್ನು ಆಕಾಶದಿಂದ ಭೂಮಿಗೆ ಎಸೆದು ತನ್ನ ಕೋಪದ ದಿನದಲ್ಲಿ ತನ್ನ ಪಾದಪೀಠವನ್ನು ಜ್ಞಾಪಕಮಾಡಿಕೊಳ್ಳಲಿಲ್ಲಾ!
|
1. How H349 hath the Lord H136 covered H5743 H853 the daughter H1323 of Zion H6726 with a cloud in his anger H639 , and cast down H7993 from heaven H4480 H8064 unto the earth H776 the beauty H8597 of Israel H3478 , and remembered H2142 not H3808 his footstool H1916 H7272 in the day H3117 of his anger H639 !
|
2. ಕರ್ತನು ಯಾಕೋಬಿನ ಎಲ್ಲಾ ನಿವಾಸಿಗಳನ್ನು ಕನಿಕರಿಸದೆ ನುಂಗಿದ್ದಾನೆ; ಯೆಹೂದದ ಮಗಳ ಭದ್ರವಾದ ಸ್ಥಾನಗಳನ್ನು ತನ್ನ ರೋಷದಲ್ಲಿ ಕೆಡವಿಹಾಕಿ ದ್ದಾನೆ; ಆತನು ಅವುಗಳನ್ನು ನೆಲ ಸಮ ಮಾಡಿದ್ದಾನೆ; ಆತನು ರಾಜ್ಯವನ್ನೂ ಪ್ರಭುಗಳನ್ನೂ ಅಪವಿತ್ರ ಮಾಡಿದ್ದಾನೆ.
|
2. The Lord H136 hath swallowed up H1104 H853 all H3605 the habitations H4999 of Jacob H3290 , and hath not H3808 pitied H2550 : he hath thrown down H2040 in his wrath H5678 the strongholds H4013 of the daughter H1323 of Judah H3063 ; he hath brought them down H5060 to the ground H776 : he hath polluted H2490 the kingdom H4467 and the princes H8269 thereof.
|
3. ಆತನು ತನ್ನ ತೀಕ್ಷ್ಣ ಕೋಪದಲ್ಲಿ ಇಸ್ರಾಯೇಲಿನ ಕೊಂಬುಗಳನ್ನೆಲ್ಲಾ ಕಡಿದು ಹಾಕಿದ್ದಾನೆ. ಆತನು ಶತ್ರುವಿನ ಎದುರಿನಿಂದ ತನ್ನ ಬಲಗೈಯನ್ನು ಹಿಂತೆಗೆದುಕೊಂಡಿದ್ದಾನೆ. ಆತನು ಸುತ್ತಲೂ ಪ್ರಜ್ವಲಿಸಿ ದಹಿಸುವ ಬೆಂಕಿಯ ಹಾಗೆ ಯಾಕೋಬನಿಗೆ ವಿರುದ್ಧ ವಾಗಿ ದಹಿಸಿಬಿಟ್ಟಿದ್ದಾನೆ.
|
3. He hath cut off H1438 in his fierce H2750 anger H639 all H3605 the horn H7161 of Israel H3478 : he hath drawn H7725 back H268 his right hand H3225 from before H4480 H6440 the enemy H341 , and he burned H1197 against Jacob H3290 like a flaming H3852 fire H784 , which devoureth H398 round about H5439 .
|
4. ಆತನು ಶತ್ರುವಿನ ಹಾಗೆ ತನ್ನ ಬಿಲ್ಲನ್ನು ಬೊಗ್ಗಿಸಿದ್ದಾನೆ, ವೈರಿಯ ಹಾಗೆ ತನ್ನ ಬಲಗೈ ಎತ್ತಿ ನಿಂತುಕೊಂಡು ಕಣ್ಣಿಗೆ ರಮ್ಯವಾಗಿ ಕಾಣುವ ಎಲ್ಲವುಗಳನ್ನು ಕೊಂದುಹಾಕಿದ್ದಾನೆ. ಆತನು ತನ್ನ ರೋಷವೆಂಬ ಅಗ್ನಿಯನ್ನು ಚೀಯೋನ್ ಮಗಳ ಗುಡಾರದಲ್ಲಿ ಸುರಿದಿದ್ದಾನೆ.
|
4. He hath bent H1869 his bow H7198 like an enemy H341 : he stood H5324 with his right hand H3225 as an adversary H6862 , and slew H2026 all H3605 that were pleasant H4261 to the eye H5869 in the tabernacle H168 of the daughter H1323 of Zion H6726 : he poured out H8210 his fury H2534 like fire H784 .
|
5. ಕರ್ತನು ಶತ್ರುವಿನಂತೆ ಇಸ್ರಾಯೇಲನ್ನು ನುಂಗಿಬಿಟ್ಟಿದ್ದಾನೆ; ಆತನು ಅವನ ಅರಮನೆಗಳನ್ನೆಲ್ಲಾ ನುಂಗಿಬಿಟ್ಟಿದ್ದಾನೆ, ಆತನು ಅವನ ಭದ್ರವಾದ ಸ್ಥಾನಗಳನ್ನೆಲ್ಲಾ ನಾಶಮಾಡಿದ್ದಾನೆ; ಯೆಹೂದದ ಮಗಳ ದುಃಖವನ್ನೂ ಪ್ರಲಾಪವನ್ನೂ ಹೆಚ್ಚಿಸಿದ್ದಾನೆ.
|
5. The Lord H136 was H1961 as an enemy H341 : he hath swallowed up H1104 Israel H3478 , he hath swallowed up H1104 all H3605 her palaces H759 : he hath destroyed H7843 his strongholds H4013 , and hath increased H7235 in the daughter H1323 of Judah H3063 mourning H8386 and lamentation H592 .
|
6. ಆತನು ತನ್ನ ಗುಡಾರವನ್ನು ತೋಟದಂತೆ ಬಲಾತ್ಕಾರವಾಗಿ ತೆಗೆದುಹಾಕಿದ್ದಾನೆ. ಆತನು ತನ್ನ ಸಭಾಸ್ಥಾನಗಳನ್ನು ನಾಶಮಾಡಿದ್ದಾನೆ; ಕರ್ತನು ಚೀಯೋನಿನಲ್ಲಿ ಪವಿತ್ರ ಹಬ್ಬಗಳನ್ನೂ ಸಬ್ಬತ್ತನ್ನೂ ಮರೆತುಬಿಡುವಂತೆ ಮಾಡಿದ್ದಾನೆ, ತನ್ನ ಕೋಪದ ಉರಿಯಲ್ಲಿ ಅರಸನನ್ನೂ ಯಾಜಕನನ್ನೂ ತುಚ್ಛೀಕರಿ ಸಿದ್ದಾನೆ.
|
6. And he hath violently taken away H2554 his tabernacle H7900 , as if it were of a garden H1588 : he hath destroyed H7843 his places of the assembly H4150 : the LORD H3068 hath caused the solemn feasts H4150 and sabbaths H7676 to be forgotten H7911 in Zion H6726 , and hath despised H5006 in the indignation H2195 of his anger H639 the king H4428 and the priest H3548 .
|
7. ಕರ್ತನು ತನ್ನ ಯಜ್ಞವೇದಿಯನ್ನು ತಳ್ಳಿಬಿಟ್ಟಿ ದ್ದಾನೆ; ತನ್ನ ಪರಿಶುದ್ಧ ಸ್ಥಳವನ್ನು ಅಸಹ್ಯಪಡಿಸಿದ್ದಾನೆ; ಆತನು ಅವಳ ಅರಮನೆಗಳ ಗೋಡೆಗಳನ್ನು ಶತ್ರುವಿನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾನೆ; ಪರಿಶುದ್ಧ ಹಬ್ಬದ ದಿನದಲ್ಲಿ ಮಾಡಿದ ಹಾಗೆ ಅವರು ಕರ್ತನ ಆಲಯದಲ್ಲಿ ಶಬ್ದಮಾಡಿದ್ದಾರೆ.
|
7. The Lord H136 hath cast off H2186 his altar H4196 , he hath abhorred H5010 his sanctuary H4720 , he hath given up H5462 into the hand H3027 of the enemy H341 the walls H2346 of her palaces H759 ; they have made H5414 a noise H6963 in the house H1004 of the LORD H3068 , as in the day H3117 of a solemn feast H4150 .
|
8. ಕರ್ತನು ಚೀಯೋನಿನ ಮಗಳ ಗೋಡೆಯನ್ನು ನಾಶ ಮಾಡಬೇಕೆಂದು ಉದ್ದೇಶಿಸಿದ್ದಾನೆ; ಗೆರೆಯನ್ನು ಎಳೆದಿದ್ದಾನೆ. ತನ್ನ ಕೈಯನ್ನು ಕೆಡಿಸುವದರಿಂದ ಹಿಂತೆಗೆಯಲಿಲ್ಲ; ಕಲ್ಲಿನ ಪ್ರಾಕಾರವನ್ನೂ ಮತ್ತು ಗೋಡೆ ಯನ್ನೂ ಗೋಳಾಡುವಂತೆ ಆತನು ಮಾಡಿದ್ದಾನೆ, ಅವೆರಡೂ ಜೊತೆಯಾಗಿ ಕುಸಿದು ಹೋಗಿವೆ.
|
8. The LORD H3068 hath purposed H2803 to destroy H7843 the wall H2346 of the daughter H1323 of Zion H6726 : he hath stretched out H5186 a line H6957 , he hath not H3808 withdrawn H7725 his hand H3027 from destroying H4480 H1104 : therefore he made the rampart H2426 and the wall H2346 to lament H56 ; they languished H535 together H3162 .
|
9. ಅವಳ ಬಾಗಿಲುಗಳು ನೆಲದೊಳಗೆ ಹೂತುಕೊಂಡಿವೆ; ಆತನು ಆಕೆಯ ಅಗುಳಿಗಳನ್ನು ಮುರಿದು ಹಾಳು ಮಾಡಿದ್ದಾನೆ. ಅವಳ ಅರಸನು ಮತ್ತು ಪ್ರಭುಗಳು ಅನ್ಯಜನಾಂಗಗಳ ಮಧ್ಯೆ ಇರುವರು; ಇನ್ನು ನ್ಯಾಯ ಪ್ರಮಾಣವು ಇರುವದೇ ಇಲ್ಲ; ಆಕೆಯ ಪ್ರವಾದಿಗಳು ಸಹ ಕರ್ತನಿಂದ ದರ್ಶನವನ್ನು ಕಂಡು ಕೊಳ್ಳುವದಿಲ್ಲ.
|
9. Her gates H8179 are sunk H2883 into the ground H776 ; he hath destroyed H6 and broken H7665 her bars H1280 : her king H4428 and her princes H8269 are among the Gentiles H1471 : the law H8451 is no H369 more ; her prophets H5030 also H1571 find H4672 no H3808 vision H2377 from the LORD H4480 H3068 .
|
10. ಚೀಯೋನ್ ಮಗಳ ಹಿರಿಯರು ನೆಲದ ಮೇಲೆ ಕುಳಿತುಕೊಂಡು ನಿಶ್ಯಬ್ಧವಾಗಿದ್ದಾರೆ; ತಮ್ಮ ತಲೆಗಳ ಮೇಲೆ ದೂಳು ಹಾಕಿಕೊಂಡಿದ್ದಾರೆ; ಅವರು ಗೊಣೀತಟ್ಟನ್ನು ಸುತ್ತಿಕೊಂಡಿದ್ದಾರೆ; ಯೆರೂಸಲೇ ಮಿನ ಕನ್ಯೆಯರು ತಮ್ಮ ತಲೆಯನ್ನು ನೆಲದ ಕಡೆಗೆ ಬೊಗ್ಗಿಸಿಕೊಂಡಿದ್ದಾರೆ.
|
10. The elders H2205 of the daughter H1323 of Zion H6726 sit H3427 upon the ground H776 , and keep silence H1826 : they have cast up H5927 dust H6083 upon H5921 their heads H7218 ; they have girded H2296 themselves with sackcloth H8242 : the virgins H1330 of Jerusalem H3389 hang down H3381 their heads H7218 to the ground H776 .
|
11. ನನ್ನ ಕಣ್ಣುಗಳು ಕಣ್ಣೀರನ್ನು ಸುರಿಸುತ್ತಲೇ ಇವೆ. ನನ್ನ ಕರುಳುಗಳು ಕುದಿಯುತ್ತವೆ, ನನ್ನ ಪಿತ್ತಕೋಶವು ನೆಲದ ಮೇಲೆ ಸುರಿಯಲ್ಪಟ್ಟಿದೆ, ಯಾಕಂದರೆ ನನ್ನ ಜನರ ಮಗಳು ನಾಶವಾಗಿದ್ದಾಳೆ. ಮಕ್ಕಳೂ ಮೊಲೆಕೂಸುಗಳೂ ನಗರದ ಬೀದಿಗಳಲ್ಲಿ ಮೂರ್ಛೆ ಹೋಗಿದ್ದಾರೆ.
|
11. Mine eyes H5869 do fail H3615 with tears H1832 , my bowels H4578 are troubled H2560 , my liver H3516 is poured H8210 upon the earth H776 , for H5921 the destruction H7667 of the daughter H1323 of my people H5971 ; because the children H5768 and the sucklings H3243 swoon H5848 in the streets H7339 of the city H7151 .
|
12. ಅವರು ನಗರದ ಬೀದಿ ಗಳಲ್ಲಿ ಗಾಯ ಪಟ್ಟವರ ಹಾಗೆ ಮೂರ್ಛೆ ಹೋಗಿ, ತಮ್ಮ ತಾಯಂದಿರ ಎದೆಯಲ್ಲಿ ಬೀಳುತ್ತಾ--ರೊಟ್ಟಿಯೂ ದ್ರಾಕ್ಷಾರಸವೂ ಎಲ್ಲಿ ಎಂದು ತಮ ತಾಯಂದಿರಿಗೆ ಹೇಳುತ್ತಾರೆ.
|
12. They say H559 to their mothers H517 , Where H346 is corn H1715 and wine H3196 ? when they swooned H5848 as the wounded H2491 in the streets H7339 of the city H5892 , when their soul H5315 was poured out H8210 into H413 their mothers H517 ' bosom H2436 .
|
13. ಯೆರೂಸಲೇಮಿನ ಕುಮಾರ್ತೆಯೇ, ನಾನು ಯಾವದನ್ನು ನಿನಗೆ ಸಾಕ್ಷಿಯ ನ್ನಾಗಿಡಲಿ? ಯಾವದನ್ನು ನಿನಗೆ ಸಮಾನ ಮಾಡಲಿ? ಚೀಯೋನಿನ ಮಗಳಾದ ಕನ್ಯೆಯೇ, ನಿನ್ನನ್ನು ಆದರಿಸುವ ಹಾಗೆ ನಾನು ಯಾವದನ್ನು ನಿನಗೆ ಸಮಾನಮಾಡಲಿ? ನಿನ್ನ ಮುರಿಯುವಿಕೆಯು ಸಮುದ್ರದ ಹಾಗೆ ದೊಡ್ಡ ದಾಗಿದೆ, ನಿನ್ನನ್ನು ಗುಣಪಡಿಸುವವರು ಯಾರು?
|
13. What thing H4100 shall I take to witness H5749 for thee? what thing H4100 shall I liken H1819 to thee , O daughter H1323 of Jerusalem H3389 ? what H4100 shall I equal H7737 to thee , that I may comfort H5162 thee , O virgin H1330 daughter H1323 of Zion H6726 ? for H3588 thy breach H7667 is great H1419 like the sea H3220 : who H4310 can heal H7495 thee?
|
14. ನಿನ್ನ ಪ್ರವಾದಿಗಳು ನಿನಗಾಗಿ ವ್ಯರ್ಥವಾದ ಮೂರ್ಖತನದ ವಿಷಯಗಳನ್ನು ನೋಡಿದ್ದಾರೆ. ಅವರು ನಿನ್ನ ದುರವಸ್ಥೆಯನ್ನು ನೀಗಿಸುವದಕ್ಕಾಗಿ ನಿನ್ನ ದುಷ್ಟತನ ವನ್ನು ಬಯಲಿಗೆ ತರಲಿಲ್ಲ; ಆದರೆ ನಿನಗಾಗಿ ಸುಳ್ಳಿನ ಭಾರಗಳನ್ನು ಮತ್ತು ಗಡೀಪಾರು ಮಾಡುವ ಕಾರಣ ಗಳನ್ನು ನೋಡಿದ್ದಾರೆ.
|
14. Thy prophets H5030 have seen H2372 vain H7723 and foolish things H8602 for thee : and they have not H3808 discovered H1540 H5921 thine iniquity H5771 , to turn away H7725 thy captivity H7622 ; but have seen H2372 for thee false H7723 burdens H4864 and causes of banishment H4065 .
|
15. ದಾರಿಯಲ್ಲಿ ಹೋಗುವವ ರೆಲ್ಲರೂ ನಿನ್ನ ವಿಷಯದಲ್ಲಿ ತಮ್ಮ ಕೈಗಳನ್ನು ತಟ್ಟುತ್ತಾರೆ; ಅವರು ಯೆರೂಸಲೇಮಿನ ಕುಮಾರ್ತೆಯ ವಿಷಯದಲ್ಲಿ ಸಿಳ್ಳು ಹಾಕಿ ತಲೆಯಾಡಿಸಿ--ಆ ಮನುಷ್ಯರು ಕರೆಯು ತ್ತಿದ್ದ ಸೌಂದರ್ಯದ ಸಂಪೂರ್ಣತೆಯೂ ಸರ್ವ ಭೂಮಿಯ ಸಂತೋಷವೂ ಆಗಿರುವ ನಗರಿಯು ಇದೇಯೋ?
|
15. All H3605 that pass by H5674 H1870 clap H5606 their hands H3709 at H5921 thee ; they hiss H8319 and wag H5128 their head H7218 at H5921 the daughter H1323 of Jerusalem H3389 , saying, Is this H2063 the city H5892 that men call H7945 H559 The perfection H3632 of beauty H3308 , The joy H4885 of the whole H3605 earth H776 ?
|
16. ನಿನ್ನ ಎಲ್ಲಾ ಶತ್ರುಗಳು ನಿನಗೆ ವಿರೋಧವಾಗಿ ತಮ್ಮ ಬಾಯಿ ತೆರೆದಿದ್ದಾರೆ; ಅವರು ಸಿಳ್ಳು ಹಾಕಿ ಹಲ್ಲು ಕಡಿಯುತ್ತಾ--ನಾವು ಅವಳನ್ನು ನುಂಗಿ ಬಿಟ್ಟಿದ್ದೇವೆ; ನಿಶ್ಚಯವಾಗಿ ನಾವು ನಿರೀಕ್ಷಿಸಿದ ದಿನವು ಇದೇ; ಅದನ್ನು ನಾವು ಕಂಡಿದ್ದೇವೆ; ನೋಡಿ ದ್ದೇವೆ ಎಂದು ಅವರು ಹೇಳುತ್ತಾರೆ.
|
16. All H3605 thine enemies H341 have opened H6475 their mouth H6310 against H5921 thee : they hiss H8319 and gnash H2786 the teeth H8127 : they say H559 , We have swallowed her up H1104 : certainly H389 this H2088 is the day H3117 that we looked for H7945 H6960 ; we have found H4672 , we have seen H7200 it .
|
17. ಕರ್ತನು ತಾನು ಸಂಕಲ್ಪಿಸಿದ್ದನ್ನು ಮಾಡಿದ್ದಾನೆ; ಆತನು ಪುರಾತನ ಕಾಲದ ದಿನಗಳಲ್ಲಿ ಆಜ್ಞಾಪಿಸಿದ ತನ್ನ ವಾಕ್ಯವನ್ನು ಪೂರೈಸಿದ್ದಾನೆ. ಆತನು ಕೆಡವಿ ಕನಿಕರಿಸಲಿಲ್ಲ; ಆತನು ನಿನ್ನ ಶತ್ರುವನ್ನು ನಿನ್ನ ವಿಷಯವಾಗಿ ಸಂತೋಷಪಡುವ ಹಾಗೆ ಮಾಡಿ ಅವನ ಕೊಂಬನ್ನು ಎತ್ತಿದ್ದಾನೆ.
|
17. The LORD H3068 hath done H6213 that which H834 he had devised H2161 ; he hath fulfilled H1214 his word H565 that H834 he had commanded H6680 in the days H4480 H3117 of old H6924 : he hath thrown down H2040 , and hath not H3808 pitied H2550 : and he hath caused thine enemy H341 to rejoice H8055 over H5921 thee , he hath set up H7311 the horn H7161 of thine adversaries H6862 .
|
18. ಅವರ ಹೃದಯವು ಕರ್ತನ ಕಡೆಗೆ ಕೂಗಿ--ಓ ಚೀಯೋನಿನ ಮಗಳ ಗೋಡೆಯೇ, ರಾತ್ರಿ ಹಗಲೂ ನಿನ್ನ ಕಣ್ಣೀರು ನದಿಯಂತೆ ಹರಿದು ಹೋಗಲಿ, ನೀನು ವಿಶ್ರಾಂತಿ ತಕ್ಕೊಳ್ಳಬೇಡ; ನಿನ್ನ ಕಣ್ಣು ರೆಪ್ಪೆಯನ್ನು ಮುಚ್ಚಬೇಡ.
|
18. Their heart H3820 cried H6817 unto H413 the Lord H136 , O wall H2346 of the daughter H1323 of Zion H6726 , let tears H1832 run down H3381 like a river H5158 day H3119 and night H3915 : give H5414 thyself no H408 rest H6314 ; let not H408 the apple H1323 of thine eye H5869 cease H1826 .
|
19. ಎದ್ದೇಳು, ರಾತ್ರಿಯಲ್ಲಿ ಕೂಗು; ನಿನ್ನ ಹೃದಯವನ್ನು ಕರ್ತನ ಸಮ್ಮುಖದಲ್ಲಿ ಆರಂಭದ ಜಾವಗಳಲ್ಲಿ (ನೀರಿನಂತೆ) ಹೊಯ್ಯಿ; ನಿನ್ನ ಕೈಗಳನ್ನು ಆತನ ಕಡೆಗೆ ಎತ್ತು, ಯಾಕಂದರೆ ನಿನ್ನ ಚಿಕ್ಕ ಮಕ್ಕಳ ಪ್ರಾಣವು ಪ್ರತಿಯೊಂದು ಬೀದಿಯ ಬದಿಯಲ್ಲಿ ಹಸಿವೆಯಿಂದ ದುರ್ಬಲವಾಗಿದೆ.
|
19. Arise H6965 , cry out H7442 in the night H3915 : in the beginning H7218 of the watches H821 pour out H8210 thine heart H3820 like water H4325 before H5227 the face H6440 of the Lord H136 : lift up H5375 thy hands H3709 toward H413 him for H5921 the life H5315 of thy young children H5768 , that faint H5848 for hunger H7458 in the top H7218 of every H3605 street H2351 .
|
20. ಓ ಕರ್ತನೇ, ನೋಡು, ನೀನು ಇದನ್ನು ಯಾರಿಗೆ ಮಾಡಿದಿಯೋ ಯೋಚಿಸು. ಸ್ತ್ರೀಯರು ತಮ್ಮ ಫಲವಾದ ಗೇಣುದ್ದದ ಕೂಸುಗಳನ್ನು ತಿನ್ನಬೇಕೇ? ಯಾಜಕನು ಪ್ರವಾದಿಯು ಕರ್ತನ ಪರಿಶುದ್ಧ ಸ್ಥಳದಲ್ಲಿ ಕೊಲ್ಲಲ್ಪಡಬೇಕೋ?
|
20. Behold H7200 , O LORD H3068 , and consider H5027 to whom H4310 thou hast done H5953 this H3541 . Shall the women H802 eat H398 their fruit H6529 , and children H5768 of a span long H2949 ? shall the priest H3548 and the prophet H5030 be slain H2026 in the sanctuary H4720 of the Lord H136 ?
|
21. ಎಳೇ ಪ್ರಾಯದವರೂ ಮುದುಕರೂ ಬೀದಿಗಳಲ್ಲಿ ಬಿದ್ದಿದ್ದಾರೆ; ನನ್ನ ಕನ್ಯೆಯರೂ ಯೌವನಸ್ಥರೂ ಕತ್ತಿಯಿಂದ ಹತರಾಗಿದ್ದಾರೆ; ನಿನ್ನ ಕೋಪದ ದಿನದಲ್ಲಿ ನೀನು ಅವರನ್ನು ಸಾಯಿಸಿರುವಿ; ಕನಿಕರಿಸದೆ ಕೊಂದುಹಾಕಿ ಬಿಟ್ಟಿದ್ದೀ.
|
21. The young H5288 and the old H2205 lie H7901 on the ground H776 in the streets H2351 : my virgins H1330 and my young men H970 are fallen H5307 by the sword H2719 ; thou hast slain H2026 them in the day H3117 of thine anger H639 ; thou hast killed H2873 , and not H3808 pitied H2550 .
|
22. ಪರಿಶುದ್ಧ ದಿನದಲ್ಲಿ ಆದ ಹಾಗೆ ಸುತ್ತಲೂ ನನ್ನ ಭಯಾನಕಗಳನ್ನು ನೀನು ಕರೆದಿರುವಿ, ಆದರೆ ಕರ್ತನ ಕೋಪದ ದಿನದಲ್ಲಿ ತಪ್ಪಿಸಿಕೊಂಡು ಉಳಿದವನು ಒಬ್ಬನೂ ಇಲ್ಲ; ನಾನು ಸಾಕಿ ಬೆಳೆಸಿದವರನ್ನು ನನ್ನ ಶತ್ರುವು ನಿರ್ಮೂಲ ಮಾಡಿದ್ದಾನೆ.
|
22. Thou hast called H7121 as in a solemn H4150 day H3117 my terrors H4032 round about H4480 H5439 , so that in the day H3117 of the LORD H3068 's anger H639 none H3808 escaped H1961 H6412 nor remained H8300 : those that H834 I have swaddled H2946 and brought up H7235 hath mine enemy H341 consumed H3615 .
|