Bible Versions
Bible Books

Psalms 67 (IRVKN) Indian Revised Version - Kanana

1 ದೇವರು ನಮ್ಮನ್ನು ಕಟಾಕ್ಷಿಸಿ ಆಶೀರ್ವದಿಸಲಿ;
ಪ್ರಸನ್ನ ಮುಖದಿಂದ ನಮ್ಮನ್ನು ನೋಡಲಿ. ಸೆಲಾ
2 ಇದರಿಂದ ಭೂಲೋಕದಲ್ಲಿ ನಿನ್ನ ಪರಿಪಾಲನ ಮಾರ್ಗವೂ,
ಎಲ್ಲಾ ಜನಾಂಗಗಳಲ್ಲಿ ನಿನ್ನ ರಕ್ಷಣೆಯೂ ಪ್ರಸಿದ್ಧವಾಗುವವು.
3 ದೇವರೇ, ಸರ್ವಜನಾಂಗಗಳು ನಿನ್ನನ್ನು ಕೀರ್ತಿಸಲಿ;
ಸರ್ವಜನಾಂಗಗಳು ನಿನ್ನನ್ನು ಕೀರ್ತಿಸಲಿ.
4 ನೀನು ಸಮಸ್ತ ದೇಶಗಳವರನ್ನು ನೀತಿಯಿಂದ ಪಾಲಿಸಿ,
ಭೂಪ್ರಜೆಗಳನ್ನೆಲ್ಲಾ ನಡೆಸುವಾತನಾಗಿರುವುದರಿಂದ
ಜನಾಂಗಗಳು ಹರ್ಷಿಸಿ ಆನಂದಘೋಷ ಮಾಡಲಿ. ಸೆಲಾ
5 ದೇವರೇ, ಜನಾಂಗಗಳು ನಿನ್ನನ್ನು ಕೀರ್ತಿಸಲಿ;
ಸರ್ವಜನಾಂಗಗಳು ನಿನ್ನನ್ನು ಕೀರ್ತಿಸಲಿ.
6 ಭೂಮಿಯು ಒಳ್ಳೆಯ ಬೆಳೆಯನ್ನು ಕೊಟ್ಟಿರುತ್ತದೆ.
ದೇವರೇ, ನಮ್ಮ ದೇವರೇ ನಮ್ಮನ್ನು ಆಶೀರ್ವದಿಸಿದ್ದಾನೆ;
7 ಆತನು ನಮ್ಮನ್ನು ಆಶೀರ್ವದಿಸುವವನಾಗಿದ್ದಾನೆ.
ಭೂಮಂಡಲದವರೆಲ್ಲರೂ ಆತನಲ್ಲಿ ಭಯಭಕ್ತಿಯುಳ್ಳವರಾಗಿರುವರು. PE
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×