Bible Versions
Bible Books

Isaiah 22 (ERVKN) Easy to Read Version - Kannadam

1 ದಿವ್ಯದರ್ಶನದ ಕಣಿವೆಯ ವಿಷಯವಾಗಿ ದುಃಖದ ಸಂದೇಶ: ಜನಗಳೇ, ನಿಮಗೆ ಏನಾಯಿತು? ನಿಮ್ಮ ಮನೆ ಮಾಳಿಗೆಯ ಮೇಲೆ ಯಾಕೆ ಅಡಗಿರುತ್ತೀರಿ?
2 ಹಿಂದಿನ ಕಾಲದಲ್ಲಿ ನಗರವು ಅತ್ಯಂತ ಜನಸಂದಣಿಯಿಂದ ಕೂಡಿತ್ತು. ನಗರದಲ್ಲಿ ಗದ್ದಲವೂ ಜನರ ಸಂತಸದ ಧ್ವನಿಯೂ ತುಂಬಿತ್ತು. ಆದರೆ ಈಗ ಎಲ್ಲವೂ ಬದಲಾಯಿತು. ನಿಮ್ಮ ಜನರು ಸತ್ತದ್ದು ಖಡ್ಗದಿಂದಲ್ಲ. ಯುದ್ಧದಲ್ಲಿ ಸಾಯದೆ ಬೇರೆ ರೀತಿಯಲ್ಲಿ ಸತ್ತರು.
3 ಅಧಿಪತಿಗಳೆಲ್ಲಾ ಒಟ್ಟಾಗಿ ಪಲಾಯನಗೈದರು. ಆದರೆ ಅವರೆಲ್ಲಾ ಬಿಲ್ಲುಗಳಿಲ್ಲದೆ ಹಿಡಿಯಲ್ಪಟ್ಟರು. ನಿಮ್ಮ ಎಲ್ಲಾ ಅಧಿಕಾರಿಗಳು ಒಟ್ಟಾಗಿ ಬಹು ದೂರಪ್ರದೇಶಗಳಿಗೆ ಓಡಿದರು. ಆದರೆ ಅವರೆಲ್ಲಾ ಹಿಡಿಯಲ್ಪಟ್ಟರು.
4 ಆದುದರಿಂದ ನಾನು ಹೇಳುವುದೇನೆಂದರೆ: “ನೀವು ನನ್ನ ಕಡೆಗೆ ನೋಡಬೇಡಿ! ನನ್ನನ್ನು ಅಳಲು ಬಿಡಿರಿ! ಜೆರುಸಲೇಮಿನ ನಾಶನದ ಕುರಿತಾಗಿ ನನ್ನನ್ನು ಕೂಡಲೇ ಸಂತೈಸಬೇಡಿರಿ.”
5 ಯೆಹೋವನು ಒಂದು ವಿಶೇಷ ದಿನವನ್ನು ಆರಿಸಿರುತ್ತಾನೆ. ದಿನದಲ್ಲಿ ಗಲಭೆ ಮತ್ತು ಗಲಿಬಿಲಿಯು ಇರುವದು. ದಿವ್ಯದರ್ಶನದ ಕಣಿವೆಯಲ್ಲಿ ಜನರು ಒಬ್ಬರನ್ನೊಬ್ಬರು ತುಳಿದುಕೊಂಡು ಅವರ ಮೇಲೆಯೇ ನಡೆದುಕೊಂಡು ಹೋಗುವರು. ನಗರದ ಕೋಟೆಗೋಡೆಗಳು ಕೆಡವಲ್ಪಡುವವು. ಕಣಿವೆಯಲ್ಲಿ ವಾಸಿಸುವ ಜನರು ಬೆಟ್ಟದ ಮೇಲಿನ ನಗರದ ಜನರಿಗೆ ಚೀರಾಡುವರು.
6 ಏಲಾಮಿನ ಅಶ್ವಸೈನಿಕರು ತಮ್ಮ ಬತ್ತಳಿಕೆಯನ್ನು ತೆಗೆದುಕೊಂಡು ರಣರಂಗಕ್ಕೆ ಹೊರಡುವರು. ಕೀರ್ ಸ್ಥಳದ ಜನರು ತಮ್ಮ ಗುರಾಣಿಗಳಿಂದ ಶಬ್ದಮಾಡುವರು.
7 ಸೈನ್ಯಗಳು ನಿಮ್ಮ ವಿಶೇಷವಾದ ಕಣಿವೆಯಲ್ಲಿ ಎದುರುಬದುರಾಗಿ ಭೇಟಿಯಾಗುವರು. ಕಣಿವೆಯು ರಥಗಳಿಂದ ತುಂಬಿಹೋಗುವದು. ಅಶ್ವದಳದವರನ್ನು ದ್ವಾರದ ಮುಂದೆ ನಿಲ್ಲಿಸಲಾಗುವದು.
8 ಸಮಯದಲ್ಲಿ ಯೆಹೂದದ ಜನರು ತಾವು ಕಾಡಿನ ಅರಮನೆಯಲ್ಲಿಟ್ಟಿದ್ದ ಆಯುಧಗಳನ್ನು ಉಪಯೋಗಿಸುವುದಕ್ಕೆ ಮನಸ್ಸು ಮಾಡುವರು. ಯೆಹೂದವನ್ನು ರಕ್ಷಿಸುವ ಗೋಡೆಗಳನ್ನು ಶತ್ರುಗಳು ಕೆಡವಿ ಹಾಕುವರು.
9 This verse may not be a part of this translation
10 This verse may not be a part of this translation
11 This verse may not be a part of this translation
12 ನನ್ನ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನು ಜನರಿಗೆ, ಅವರ ಸತ್ತುಹೋದ ಸ್ನೇಹಿತರಿಗೋಸ್ಕರ ರೋಧಿಸಿ ದುಃಖಿಸಿರಿ ಎಂದು ಹೇಳುವನು. ಜನರು ತಮ್ಮ ತಲೆಗಳನ್ನು ಬೋಳಿಸಿ ಶೋಕವಸ್ತ್ರವನ್ನು ಧರಿಸುವರು.
13 ಇಗೋ, ಈಗ ಜನರು ಸಂತೋಷಪಡುತ್ತಿದ್ದಾರೆ. ಅವರು ಹರ್ಷಿಸುತ್ತಾ: “ದನಕುರಿಗಳನ್ನು ಕೊಯ್ಯಿರಿ, ನಾವು ಹಬ್ಬ ಆಚರಿಸೋಣ, ಊಟಮಾಡಿ ದ್ರಾಕ್ಷಾರಸ ಕುಡಿಯೋಣ, ತಿಂದು, ಕುಡಿದು ಸಂತೋಷವಾಗಿರೋಣ. ಯಾಕೆಂದರೆ ನಾಳೆ ನಾವು ಸಾಯುವೆವು” ಎಂದು ಹೇಳುವರು.
14 ಸರ್ವಶಕ್ತನಾದ ಯೆಹೋವನು ನನಗೆ ತಿಳಿಸಿದ ಮಾತುಗಳನ್ನು ಕಿವಿಯಾರೆ ಕೇಳಿದೆನು: “ನೀವು ಕೆಟ್ಟಕಾರ್ಯಗಳನ್ನು ನಡೆಸಿ ಅಪರಾಧಿಗಳಾಗಿರುವಿರಿ. ನಿಮ್ಮ ದುಷ್ಟತ್ವವು ಕ್ಷಮಿಸಲ್ಪಡುವ ಮುಂಚೆ ನೀವು ಸಾಯುವಿರಿ ಎಂದು ಖಂಡಿತವಾಗಿ ಹೇಳುತ್ತೇನೆ” ಇದು ನನ್ನ ಒಡೆಯನಾದ ಸರ್ವಶಕ್ತನ ನುಡಿಗಳು.
15 ನನ್ನ ಒಡೆಯನೂ ಸರ್ವಶಕ್ತನೂ ಆದ ಯೆಹೋವನು, “ಸೇವಕನಾದ ಶೆಬ್ನನ ಬಳಿಗೆ ಹೋಗು. ಅವನು ಅರಮನೆಯ ಮೇಲ್ವಿಚಾರಕನಾಗಿದ್ದಾನೆ.
16 ಸೇವಕನನ್ನು ‘ನೀನಿಲ್ಲಿ ಏನು ಮಾಡುತ್ತಿರುವೆ? ನಿನ್ನ ಕುಟುಂಬದವರಲ್ಲಿ ಯಾರನ್ನಾದರೂ ಇಲ್ಲಿ ಸಮಾಧಿ ಮಾಡಿರುವಿಯಾ? ಇಲ್ಲಿ ಸಮಾಧಿಯನ್ನು ಯಾಕೆ ನಿರ್ಮಿಸಿರುವೆ? ಎಂದು ಕೇಳು.’“ ಅದಕ್ಕೆ ಯೆಶಾಯನು, “ಈ ಮನುಷ್ಯನನ್ನು ನೋಡು. ಅವನು ತನ್ನ ಸಮಾಧಿಯನ್ನು ಎತ್ತರವಾದ ಸ್ಥಳದಲ್ಲಿ ಸಿದ್ಧಪಡಿಸುತ್ತಿದ್ದಾನೆ. ಅವನು ಸಮಾಧಿ ಸಿದ್ಧಪಡಿಸಲು ಬಂಡೆಯನ್ನು ಕೊರೆಯುತ್ತಿದ್ದಾನೆ.
17 This verse may not be a part of this translation
18 This verse may not be a part of this translation
19 ಇಲ್ಲಿ ನೀನಿರುವ ಮುಖ್ಯ ಹುದ್ದೆಯಿಂದ ನಿನ್ನನ್ನು ತಳ್ಳಿಬಿಡುವೆನು. ನಿನ್ನ ಹೊಸ ಅರಸನು ನಿನ್ನನ್ನು ಹುದ್ದೆಯಿಂದ ತೆಗೆದುಬಿಡುವನು.
20 ಸಮಯದಲ್ಲಿ ನನ್ನ ಸೇವಕನೂ ಹಿಲ್ಕೀಯನ ಮಗನೂ ಆದ ಎಲ್ಯಾಕೀಮನನ್ನು ನಾನು ಕರೆಯುವೆನು.
21 ನಿನ್ನ ಬಟ್ಟೆಯನ್ನು ತೆಗೆದು ಸೇವಕನಿಗೆ ಕೊಡುವೆನು. ನಿನ್ನ ರಾಜದಂಡವನ್ನು ಅವನಿಗೆ ಕೊಡುವೆನು. ನಿನ್ನ ವಿಶೇಷ ಹುದ್ದೆಯನ್ನು ಅವನಿಗೆ ಕೊಡುವೆನು. ಸೇವಕನು ಯೆಹೂದದ ಜನರಿಗೂ ಜೆರುಸಲೇಮಿನ ಜನರಿಗೂ ತಂದೆಯಂತಿರುವನು.
22 “ದಾವೀದನ ಮನೆಯ ಬೀಗದ ಕೈಯನ್ನು ಅವನ ಕುತ್ತಿಗೆಯಲ್ಲಿರಿಸುವೆನು. ಅವನು ಬಾಗಿಲನ್ನು ತೆರೆದರೆ ಅದು ತೆರೆದೇ ಇರುವದು. ಅದನ್ನು ಯಾರೂ ಮುಚ್ಚಲಾರರು. ಅವನು ಬಾಗಿಲನ್ನು ಮುಚ್ಚಿದರೆ ಅದು ಮುಚ್ಚಿಯೇ ಇರುವದು. ಅದನ್ನು ತೆರೆಯಲು ಯಾರಿಂದಲೂ ಆಗುವದಿಲ್ಲ.
23 ಒಂದು ಗಟ್ಟಿಯಾದ ಹಲಗೆಯಲ್ಲಿ ಮೊಳೆಯನ್ನು ಹೊಡೆದು ಗಟ್ಟಿಯಾಗಿರಿಸುವಂತೆ ಅವನನ್ನು ನಾನು ಬಲಪಡಿಸುವೆನು. ಸೇವಕನು ತನ್ನ ಕುಟುಂಬದವರಿಗೆ ಗೌರವ ಪೀಠದಂತಿರುವನು.
24 ಅವನ ತಂದೆಯ ಮನೆಯ ಎಲ್ಲಾ ವಿಶೇಷ ಸಂಗತಿಗಳನ್ನು, ವಸ್ತುಗಳನ್ನು ಅವನಿಗೆ ತೂಗುಹಾಕುವರು. ಎಲ್ಲಾ ಹಿರಿಕಿರಿಯರು ಅವನ ಮೇಲೆ ಆತುಕೊಂಡಿರುವರು. ಅವರು ಅವನಿಗೆ ತೂಗುಹಾಕಲ್ಪಟ್ಟ ಚಿಕ್ಕಚಿಕ್ಕ ಪಾತ್ರೆಗಳಂತೆಯೂ ನೀರಿನ ದೊಡ್ಡ ಸೀಸೆಗಳಂತೆಯೂ ಇರುವರು.”
25 ಸರ್ವಶಕ್ತನಾದ ಯೆಹೋವನು ಹೇಳುವುದೇನಂದರೆ, “ಆ ಸಮಯದಲ್ಲಿ ಹಲಗೆಗೆ ಬಲವಾಗಿ ಹೊಡೆಯಲ್ಪಟ್ಟ ಮೊಳೆಯು (ಶೆಬ್ನ) ಬಲಹೀನವಾಗಿ ತುಂಡಾಗುವದು. ಮೊಳೆಯು ನೆಲಕ್ಕೆ ಬಿದ್ದು ನಾಶವಾಗುವದು. ಆಗ ಮೊಳೆಗೆ ತೂಗುಹಾಕಿದ್ದೆಲ್ಲವೂ ಅದರೊಂದಿಗೆ ನೆಲಕ್ಕೆ ಬೀಳುವದು. ಆಗ ನಾನು ಸಂದೇಶದಲ್ಲಿ ಹೇಳಿದ್ದೆಲ್ಲವೂ ಸಂಭವಿಸುವದು. ಅವುಗಳು ನೆರವೇರುತ್ತವೆ ಯಾಕೆಂದರೆ ಅವುಗಳನ್ನು ಹೇಳಿದಾತನು ಯೆಹೋವನೇ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×