Bible Versions
Bible Books

1 Chronicles 7 (ERVKN) Easy to Read Version - Kannadam

1 ಇಸ್ಸಾಕಾರನಿಗೆ ನಾಲ್ಕು ಮಂದಿ ಗಂಡುಮಕ್ಕಳು: ತೋಲ, ಪೂವ, ಯಾಶೂಬ್ ಮತ್ತು ಶಿಮ್ರೋನ್.
2 ತೋಲನ ಗಂಡುಮಕ್ಕಳು: ಉಜ್ಜೀ, ರೆಫಾಯ, ಯೆರೀಯೇಲ್, ಯಹ್ಮೈ, ಇಬ್ಸಾಮ್ ಮತ್ತು ಸಮುವೇಲ್. ಇವರೆಲ್ಲಾ ಕುಲಪ್ರಧಾನರಾಗಿದ್ದರು. ಇವರೂ ಇವರ ಸಂತತಿಯವರೂ ರಣವೀರರಾಗಿದ್ದರು. ಅವರ ಸಂತತಿಯು ವೃದ್ಧಿಯಾದ ಕಾರಣ ಅರಸನಾದ ದಾವೀದನ ಸಮಯದಲ್ಲಿ ಅವರಲ್ಲಿ ಇಪ್ಪತ್ತೆರಡು ಸಾವಿರದ ಆರುನೂರು ಮಂದಿ ಕಾಲಾಳುಗಳು ಯುದ್ಧಕ್ಕೆ ತಯಾರಾಗಿದ್ದರು.
3 ಉಜ್ಜೀಯ ಮಗನು ಇಜ್ಯಹ್ಯಾಹ. ಇಜ್ಯಹ್ಯಾಹನ ಮಕ್ಕಳು: ಮೀಕಾಯೇಲ್, ಓಬದ್ಯ, ಯೋವೇಲ್ ಮತ್ತು ಇಷ್ಷೀಯ. ಐದು ಮಂದಿಯೂ ತಮ್ಮ ಗೋತ್ರಗಳ ನಾಯಕರುಗಳಾಗಿದ್ದರು.
4 ಇವರ ಚರಿತ್ರೆಯ ಪ್ರಕಾರ ಇವರಲ್ಲಿ ಮೂವತ್ತಾರು ಸಾವಿರ ಮಂದಿ ಯುದ್ಧಕ್ಕೆ ಹೋಗಲು ಸಮರ್ಥರಾಗಿದ್ದರು. ಇವರಿಗೆಲ್ಲಾ ಅನೇಕ ಹೆಂಡತಿಯರು ಮತ್ತು ಮಕ್ಕಳು ಇದ್ದದ್ದರಿಂದ ಇವರ ಕುಲವು ದೊಡ್ಡದಾಗಿತ್ತು.
5 ಸಂತಾನದ ಚರಿತ್ರೆಯ ಪ್ರಕಾರ ಇಸ್ಸಾಕಾರ್ ಕುಲದವರಲ್ಲಿದ್ದ ಯುದ್ಧವೀರರು ಎಂಭತ್ತೇಳು ಸಾವಿರ ಮಂದಿ.
6 ಬೆನ್ಯಾಮೀನನಿಗೆ ಮೂರು ಮಂದಿ ಗಂಡುಮಕ್ಕಳು: ಬೆಳ, ಬೆಕೆರ್ ಮತ್ತು ಯೆದೀಯಯೇಲ್.
7 ಬೆಳನಿಗೆ ಐದು ಮಂದಿ ಗಂಡುಮಕ್ಕಳು. ಅವರು ಯಾರೆಂದರೆ: ಎಚ್ಬೋನ್, ಉಜ್ಜೀ, ಉಜ್ಜೀಯೇಲ್, ಯೆರೀಮೋತ್ ಮತ್ತು ಈರೀ. ಇವರೆಲ್ಲಾ ತಮ್ಮ ಗೋತ್ರಗಳಿಗೆ ನಾಯಕರಾಗಿದ್ದರು. ಇವರಲ್ಲಿ ಸಿದ್ಧರಾಗಿದ್ದ ಯುದ್ಧವೀರರು ಇಪ್ಪತ್ತೆರಡು ಸಾವಿರದ ಮೂವತ್ನಾಲ್ಕು ಮಂದಿ.
8 ಬೆಕೆರನ ಮಕ್ಕಳು ಯಾರೆಂದರೆ: ಜೆಮೀರ, ಯೋವಾಷ್, ಎಲೀಯೆಜೆರ್, ಎಲ್ಯೋವೇನೈ, ಒಮ್ರಿ, ಯೆರೀಮೋತ್, ಅಬೀಯ, ಅನಾತೋತ್ ಮತ್ತು ಅಲೆಮೆತ್. ಇವರೆಲ್ಲಾ ಬೆಕೆರನ ಮಕ್ಕಳು.
9 ಅವರ ಕುಲಚರಿತ್ರೆಯಲ್ಲಿ ಅವರ ನಾಯಕರುಗಳು ಯಾರೆಂಬುದನ್ನು ಬರೆಯಲಾಗಿದೆ. ಅವರಲ್ಲಿ ಯುದ್ಧಕ್ಕೆ ಸಿದ್ಧರಾಗಿದ್ದ ಇಪ್ಪತ್ತು ಸಾವಿರದ ಇನ್ನೂರು ಮಂದಿ ಸೈನಿಕರಿದ್ದರು.
10 ಯೆದೀಯಯೇಲನ ಮಗನು ಬಿಲ್ಹಾನ್. ಇವನ ಮಕ್ಕಳು ಯಾರೆಂದರೆ: ಯೆಯೂಷ್, ಬೆನ್ಯಾಮೀನ್, ಏಹೂದ್, ಕೆನಾನ್, ಜೇತಾನ್, ತಾರ್ಷೀಷ್ ಮತ್ತು ಅಹೀಷೆಹರ್.
11 ಯೆದೀಯಯೇಲನ ಎಲ್ಲಾ ಗಂಡುಮಕ್ಕಳು ತಮ್ಮ ಗೋತ್ರಗಳಿಗೆ ಪ್ರಧಾನರಾಗಿದ್ದರು. ಅವರಲ್ಲಿ ಯುದ್ಧಕ್ಕೆ ಸಿದ್ಧರಾಗಿದ್ದ ಹದಿನೇಳು ಸಾವಿರದ ಇನ್ನೂರು ಮಂದಿ ಸೈನಿಕರಿದ್ದರು.
12 ಶುಪ್ಪೀಮರು ಮತ್ತು ಹುಪ್ಪೀಮರು ಈರನ ಸಂತತಿಯವರಾಗಿದ್ದರು. ಹುಶೀಮನು ಅಹೇರನ ಮಗ.
13 ನಫ್ತಾಲಿಯ ಗಂಡುಮಕ್ಕಳು: ಯಹಚಿಯೇಲ್, ಗೂನೀ, ಯೇಚೆರ್ ಮತ್ತು ಶಲ್ಲೂಮ್. ಇವರೆಲ್ಲಾ ಬಿಲ್ಹಳ ಸಂತತಿಯವರು.
14 ಮನಸ್ಸೆಯ ಸಂತತಿಯವರು ಯಾರೆಂದರೆ: ಮನಸ್ಸೆ ಮತ್ತು ಅವನ ಅರಾಮ್ಯದ ದಾಸಿಯಲ್ಲಿ ಹುಟ್ಟಿದ ಮಗ ಅಷ್ರೀಯೇಲ್; ಅವರಿಗೆ ಮಾಕೀರ್ ಎಂಬ ಇನ್ನೊಬ್ಬ ಮಗನಿದ್ದನು. ಇವನು ಗಿಲ್ಯಾದನ ತಂದೆ.
15 ಮಾಕೀರನು ಹುಪ್ಪೀಮನ ಮತ್ತು ಶುಪ್ಪೀಮನ ಸಹೋದರಿಯನ್ನು ಮದುವೆಯಾದನು. ಆಕೆಯ ಹೆಸರು ಮಾಕ. ಗಿಲ್ಯಾದನ ಮೊಮ್ಮಗನ ಹೆಸರು ಚೆಲೋಫಾದ್. ಇವನಿಗೆ ಹೆಣ್ಣುಮಕ್ಕಳೇ ಹುಟ್ಟಿದವು.
16 ಮಾಕೀರನ ಹೆಂಡತಿಯಾದ ಮಾಕಳು ಒಂದು ಗಂಡುಮಗುವನ್ನು ಹೆತ್ತು ಅವನಿಗೆ ಪೆರೆಷ್ ಎಂದು ಹೆಸರಿಟ್ಟಳು. ಇವನ ತಮ್ಮನ ಹೆಸರು ಶೆರೆಷ್. ಇವನ ಗಂಡುಮಕ್ಕಳು ಯಾರೆಂದರೆ: ಊಲಾಮ್ ಮತ್ತು ರೆಕೆಮ್.
17 ಊಲಾಮನ ಮಗನು ಬೆದಾನ್. ಇವರೆಲ್ಲಾ ಗಿಲ್ಯಾದನ ಸಂತತಿಯವರು; ಗಿಲ್ಯಾದನು ಮಾಕೀರನ ಮಗ. ಮಾಕೀರನು ಮನಸ್ಸೆಯ ಮಗ.
18 ಮಾಕೀರನ ತಂಗಿ ಹಮ್ಮೋಲೆಕೆತಳಿಗೆ ಈಜ್ಡೋದ್, ಅಬೀಯೆಜೆರ್ ಮತ್ತು ಮಹ್ಲ ಎಂಬ ಗಂಡುಮಕ್ಕಳಿದ್ದರು.
19 ಶೆಮೀದನ ಮಕ್ಕಳು ಯಾರೆಂದರೆ: ಅಹ್ಯಾನ್, ಶೆಕೆಮ್, ಲಕ್ಹೀ ಮತ್ತು ಅನೀಯಾಮ್.
20 ಎಫ್ರಾಯೀಮನ ಸಂತತಿಯವರು: ಎಫ್ರಾಯೀಮನ ಮಗನು ಶೂತೆಲಹ. ಶೂತೆಲಹನ ಮಗನು ಬೆರೆದ್; ಬೆರೆದನ ಮಗನು ತಹತ್. ತಹತನ ಮಗನು ಎಲ್ಲಾದ. ಎಲ್ಲಾದನ ಮಗನು ತಹತ್.
21 ತಹತನ ಮಗನು ಜಾಬಾದ್ ಮತ್ತು ಜಾಬಾದನ ಮಕ್ಕಳು ಶೂತೆಲಹ, ಎಜೆರ್, ಎಲ್ಲಾದ್ ಎಂಬುವರು. ಗತ್ ನಗರದ ಮೂಲನಿವಾಸಿಗಳು ಎಜೆರನನ್ನು ಮತ್ತು ಎಲ್ಲಾದನನ್ನು ಕೊಂದುಹಾಕಿದರು. ಯಾಕೆಂದರೆ ಎಜೆರನು ಮತ್ತು ಎಲ್ಲಾದನು ಗತ್ ಊರಿನವರ ದನಕುರಿಗಳನ್ನು ಕದ್ದುಕೊಳ್ಳಲು ಹೋಗಿದ್ದರು.
22 ಎಜೆರನು ಮತ್ತು ಎಲ್ಲಾದನ ತಂದೆ ಎಫ್ರಾಯೀಮನು. ತನ್ನ ಮಕ್ಕಳು ಸತ್ತದ್ದಕ್ಕಾಗಿ ಬಹಳ ದಿನಗಳ ತನಕ ಅವನು ಗೋಳಾಡಿದನು. ಅವನ ಕುಟುಂಬದವರೆಲ್ಲಾ ಬಂದು ಅವನನ್ನು ಸಂತೈಸಿದರು.
23 ಅನಂತರ ಎಫ್ರಾಯೀಮನ ಹೆಂಡತಿಯು ಇನ್ನೊಂದು ಗಂಡುಮಗುವನ್ನು ಹೆತ್ತಳು. ತಮ್ಮ ಕುಟುಂಬದಲ್ಲಿ ನಡೆದ ದುರ್ಘಟನೆಯ ನೆನಪಿಗಾಗಿ ಇವನಿಗೆ ‘ಬೆರೀಯ’ ಎಂದು ಹೆಸರಿಟ್ಟರು.
24 ಎಫ್ರಾಯೀಮನ ಮಗಳ ಹೆಸರು ಶೇರಾ. ಅವಳು ಕೆಳಗಿನ ಬೇತ್‌ಹೋರೋನ್ ಮತ್ತು ಮೇಲಿನ ಬೇತ್‌ಹೋರೋನ್ ಮತ್ತು ಕೆಳಗಿನ ಉಜ್ಜೇನ್‌ಶೇರ ಮತ್ತು ಮೇಲಿನ ಉಜ್ಜೇನ್‌ಶೇರ ಪಟ್ಟಣಗಳನ್ನು ಕಟ್ಟಿಸಿದಳು.
25 ರೆಫಹನು ಬೆರೀಯನ ಮಗನು. ರೆಫಹನ ಮಗನು ರೆಷೆಫ್. ರೆಷೆಫನ ಮಗನು ತೆಲಹ. ತೆಲಹನ ಮಗನು ತಹನ್.
26 ಲದ್ದಾನನು ತಹನನ ಮಗ. ಅಮ್ಮೀಹೂದನು ಲದ್ದಾನನ ಮಗ. ಎಲೀಷಾಮನು ಅಮ್ಮೀಹೂದನ ಮಗ.
27 ನೋನನು ಎಲೀಷಾಮನ ಮಗ. ಯೆಹೋಶುವನು ನೋನನ ಮಗ.
28 ಎಫ್ರಾಯೀಮನ ಸಂತತಿಯವರು ವಾಸಿಸಿದ ಪಟ್ಟಣಗಳು ಯಾವುವೆಂದರೆ: ಬೇತೇಲ್ ಮತ್ತು ಅದರ ಪಕ್ಕದಲ್ಲಿದ್ದ ಹಳ್ಳಿಗಳು; ಪೂರ್ವದಲ್ಲಿ ನಾರಾನ್; ಪಶ್ಚಿಮದಲ್ಲಿ ಗೆಜೆರ್ ಪಟ್ಟಣ ಮತ್ತು ಅದರ ಪಕ್ಕದಲ್ಲಿದ್ದ ಹಳ್ಳಿಗಳು; ಶೆಕೆಮ್ ಪಟ್ಟಣ ಮತ್ತು ಅದರ ಸಮೀಪದಲ್ಲಿದ್ದ ಹಳ್ಳಿಗಳು, ಅಯ್ಯಾ ಪಟ್ಟಣ ಮತ್ತು ಅದರ ಸಮೀಪದಲ್ಲಿದ್ದ ಹಳ್ಳಿಗಳು;
29 ಮನಸ್ಸೆಯ ಗಡಿಗೆ ಸಮೀಪದಲ್ಲಿದ್ದ ಊರುಗಳಾದ ಬೇತ್ಷಾನ್, ತಾನಾಕ್, ಮೆಗಿದ್ದೋ, ದೋರ್ ಮತ್ತು ಅದರ ಹತ್ತಿರದಲ್ಲಿದ್ದ ಸಣ್ಣ ಊರುಗಳು. ಯೋಸೇಫನ ಸಂತತಿಯವರು ಊರುಗಳಲ್ಲಿ ವಾಸವಾಗಿದ್ದರು. ಯೋಸೇಫನು ಇಸ್ರೇಲನ ಮಗನಾಗಿದ್ದನು.
30 ಆಶೇರನ ಗಂಡುಮಕ್ಕಳು ಯಾರೆಂದರೆ: ಇಮ್ನ, ಇಷ್ವ, ಇಷ್ವೀ ಮತ್ತು ಬೆರೀಯ. ಅವರ ತಂಗಿ ಸೆರಹ.
31 ಬೆರೀಯನ ಗಂಡುಮಕ್ಕಳು: ಹೆಬೆರ್ ಮತ್ತು ಮಲ್ಕೀಯೇಲ್. ಮಲ್ಕೀಯೇಲನು ಬಿರ್ಜೈತನ ತಂದೆ.
32 ಹೆಬೆರನ ಗಂಡುಮಕ್ಕಳು ಯಾರೆಂದರೆ: ಯಫ್ಲೇಟ್, ಶೋಮೇರ್, ಹೋತಾಮ್ ಮತ್ತು ಅವರ ತಂಗಿ ಶೂವ.
33 ಯಫ್ಲೇಟನ ಗಂಡುಮಕ್ಕಳು ಯಾರೆಂದರೆ: ಪಾಸಾಕ್, ಬಿಮ್ಹಾಲ್ ಮತ್ತು ಅಶ್ವಾತ್.
34 ಶೆಮೆರನ ಗಂಡುಮಕ್ಕಳು ಯಾರೆಂದರೆ: ಅಹೀ, ರೊಹ್ಗ, ಹುಬ್ಬ ಮತ್ತು ಅರಾಮ್.
35 ಶೆಮೆರನ ತಮ್ಮನ ಹೆಸರು ಹೆಲೆಮ್. ಇವನ ಗಂಡುಮಕ್ಕಳು ಯಾರೆಂದರೆ: ಚೋಫಹ, ಇಮ್ನ, ಶೇಲೆಷ್ ಮತ್ತು ಆಮಾಲ್.
36 ಚೋಫಹನ ಗಂಡುಮಕ್ಕಳು ಯಾರೆಂದರೆ: ಸೂಹ, ಹರ್ನೆಫೆರ್, ಶೂಗಾಲ್, ಬೇರೀ, ಇಮ್ರ,
37 ಬೆಚೆರ್, ಹೋದ್, ಶಮ್ಮ, ಶಿಲ್ಷ, ಇತ್ರಾನ್ ಮತ್ತು ಬೇರ.
38 ಯೆತೆರನ ಗಂಡುಮಕ್ಕಳು ಯಾರೆಂದರೆ: ಯೆಫುನ್ನೆ, ಪಿಸ್ಪ ಮತ್ತು ಅರಾ.
39 ಉಲ್ಲನ ಗಂಡುಮಕ್ಕಳು ಯಾರೆಂದರೆ: ಆರಹ, ಹನ್ನೀಯೇಲ್ ಮತ್ತು ರಿಚ್ಯ.
40 ಇವರೆಲ್ಲರೂ ಆಶೇರನ ಸಂತತಿಯವರು. ಇವರೆಲ್ಲರೂ ಕುಲಪ್ರಧಾನರಾಗಿದ್ದರು. ಅವರು ಸೈನಿಕರೂ ನಾಯಕರುಗಳೂ ಆಗಿದ್ದರು. ಅವರ ಕುಲದ ಇತಿಹಾಸದ ಪ್ರಕಾರ, ಒಟ್ಟು ಇಪ್ಪತ್ತಾರು ಸಾವಿರ ಮಂದಿ ಯುದ್ಧಕ್ಕೆ ಸಿದ್ಧರಾಗಿದ್ದ ಸೈನಿಕರಿದ್ದರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×