|
|
1. {ಹೂಷೈಯು ಅಹೀತೋಫೆಲನ ಆಲೋಚನೆ ನಿರರ್ಥಕಪಡಿಸಿದ್ದು} PS ತರುವಾಯ ಅಹೀತೋಫೆಲನು ಅಬ್ಷಾಲೋಮನಿಗೆ, “ಅಪ್ಪಣೆಯಾಗಲಿ, ನಾನು ಹನ್ನೆರಡು ಸಾವಿರ ಜನರನ್ನು ಆರಿಸಿಕೊಂಡು ಈ ರಾತ್ರಿಯೇ ದಾವೀದನನ್ನು ಹಿಂದಟ್ಟುವೆನು.
|
1. Moreover Ahithophel H302 said H559 unto H413 Absalom H53 , Let me now H4994 choose out H977 twelve H8147 H6240 thousand H505 men H376 , and I will arise H6965 and pursue H7291 after H310 David H1732 this night H3915 :
|
2. ಅವನು ದಣಿದವನೂ, ಧೈರ್ಯಗುಂದಿದವನೂ ಆಗಿರುವಾಗಲೇ ಪಕ್ಕನೇ ಅವನ ಮೇಲೆ ಬಿದ್ದು ಅವನನ್ನು ಬೆದರಿಸುವೆನು. ಅವನ ಜನರೆಲ್ಲರೂ ಓಡಿಹೋಗುವರು.
|
2. And I will come H935 upon H5921 him while he H1931 is weary H3023 and weak H7504 handed H3027 , and will make him afraid H2729 H853 : and all H3605 the people H5971 that H834 are with H854 him shall flee H5127 ; and I will smite H5221 H853 the king H4428 only H905 :
|
3. ನಾನು ಅರಸನೊಬ್ಬನನ್ನೇ ಕೊಂದು, ನಿನ್ನ ಅಪೇಕ್ಷೆಯಂತೆ ಎಲ್ಲಾ ಜನರನ್ನು ನಿನ್ನ ಬಳಿಗೆ ತಿರುಗಿ ಬರಮಾಡುವೆನು. ನಿನ್ನ ದೇಶದಲ್ಲೆಲ್ಲಾ ಸಮಾಧಾನವುಂಟಾಗುವುದು” ಎಂದು ಹೇಳಿದನು. PEPS
|
3. And I will bring back H7725 all H3605 the people H5971 unto H413 thee : the man H376 whom H834 thou H859 seekest H1245 is as if all H3605 returned H7725 : so all H3605 the people H5971 shall be H1961 in peace H7965 .
|
4. ಈ ಮಾತು ಅಬ್ಷಾಲೋಮನಿಗೂ, ಇಸ್ರಾಯೇಲರ ಎಲ್ಲಾ ಹಿರಿಯರಿಗೂ ಸರಿಯಾಗಿ ಕಂಡಿತು.
|
4. And the saying H1697 pleased H3474 Absalom H53 well H5869 , and all H3605 the elders H2205 of Israel H3478 .
|
5. ಆಮೇಲೆ ಅಬ್ಷಾಲೋಮನು, “ಅರ್ಕೀಯನಾದ ಹೂಷೈಯನ್ನು ಕರೆದು ಅವನ ಅಭಿಪ್ರಾಯವನ್ನು ಕೇಳೋಣ” ಎಂದು ಹೇಳಿದನು.
|
5. Then said H559 Absalom H53 , Call H7121 now H4994 Hushai H2365 the Archite H757 also H1571 , and let us hear H8085 likewise H1571 what H4100 he H1931 saith H6310 .
|
6. ಹೂಷೈಯನು ಅಬ್ಷಾಲೋಮನ ಬಳಿಗೆ ಬಂದಾಗ ಅವನನ್ನು, “ಅಹೀತೋಫೆಲನು ಹೀಗೆ ಹೇಳುತ್ತಿದ್ದಾನೆ, ಇದರಂತೆ ಮಾಡಿದರೆ ಒಳ್ಳೆಯದಾಗುವುದೋ, ಇಲ್ಲವಾದರೆ ನಿನ್ನ ಅಭಿಪ್ರಾಯವೇನು?” ಎಂದು ಕೇಳಿದನು.
|
6. And when Hushai H2365 was come H935 to H413 Absalom H53 , Absalom H53 spoke H559 unto H413 him, saying H559 , Ahithophel H302 hath spoken H1696 after this H2088 manner H1697 : shall we do H6213 after H853 his saying H1697 ? if H518 not H369 ; speak H1696 thou H859 .
|
7. ಹೂಷೈಯು ಅಬ್ಷಾಲೋಮನಿಗೆ, “ಈ ಸಾರಿ ಅಹೀತೋಫೆಲನು ಹೇಳಿದ ಆಲೋಚನೆ ಒಳ್ಳೆಯದಲ್ಲ.
|
7. And Hushai H2365 said H559 unto H413 Absalom H53 , The counsel H6098 that H834 Ahithophel H302 hath given H3289 is not H3808 good H2896 at this H2063 time H6471 .
|
8. ನಿನ್ನ ತಂದೆಯೂ ಮತ್ತು ಅವನ ಜನರೂ ಶೂರರಾಗಿದ್ದಾರೆ, ಈಗ ಅವರು ಮರಿಯನ್ನು ಕಳೆದುಕೊಂಡ ಕರಡಿಯಂತೆ ರೋಷವುಳ್ಳವರಾಗಿದ್ದಾರೆಂದು ನಿನಗೆ ಗೊತ್ತಿದೆ. ಇದಲ್ಲದೆ ಅವನು ಯುದ್ಧದಲ್ಲಿ ನಿಪುಣನು, ಜನರ ಮಧ್ಯದಲ್ಲಿ ರಾತ್ರಿ ಕಳೆಯುವವನಲ್ಲ.
|
8. For, said H559 Hushai H2365 , thou H859 knowest H3045 H853 thy father H1 and his men H376 , that H3588 they H1992 be mighty men H1368 , and they H1992 be chafed H4751 in their minds H5315 , as a bear H1677 robbed of her whelps H7909 in the field H7704 : and thy father H1 is a man H376 of war H4421 , and will not H3808 lodge H3885 with H854 the people H5971 .
|
9. ಅವನು ಈಗ ಒಂದು ಗುಹೆಯಲ್ಲಾಗಲಿ, ಬೇರೆ ಯಾವುದಾದರೊಂದು ಸ್ಥಳದಲ್ಲಾಗಲಿ ಅಡಗಿಕೊಂಡಿರುವನು. ಮೊದಲು ನಮ್ಮವರಲ್ಲೇ ಕೆಲವರು ಸತ್ತರೆ, ಜನರು ಇದನ್ನು ಕೇಳಿ ಅಬ್ಷಾಲೋಮನ ಪಕ್ಷದವರಿಗೆ ಅಪಜಯವುಂಟಾಯಿತೆಂದು ಸುದ್ದಿ ಹಬ್ಬಿಸುವರು.
|
9. Behold H2009 , he H1931 is hid H2244 now H6258 in some H259 pit H6354 , or H176 in some H259 other place H4725 : and it will come to pass H1961 , when some of them be overthrown H5307 at the first H8462 , that whosoever heareth H8085 H8085 it will say H559 , There is H1961 a slaughter H4046 among the people H5971 that H834 follow H310 Absalom H53 .
|
10. ಆಗ ಸಿಂಹಹೃದಯಿಗಳಾದ ಶೂರರ ಎದೆಯು ಕರಗಿ ನೀರಾಗುವುದು. ನಿನ್ನ ತಂದೆಯು ರಣವೀರನೆಂದೂ, ಅವನ ಸಂಗಡ ಇದ್ದವರು ಪರಾಕ್ರಮಶಾಲಿಗಳೆಂದೂ ಎಲ್ಲಾ ಇಸ್ರಾಯೇಲರು ಬಲ್ಲರಷ್ಟೆ.
|
10. And he H1931 also H1571 that is valiant H1121 H2428 , whose H834 heart H3820 is as the heart H3820 of a lion H738 , shall utterly melt H4549 H4549 : for H3588 all H3605 Israel H3478 knoweth H3045 that H3588 thy father H1 is a mighty man H1368 , and they which H834 be with H854 him are valiant H2428 men H1121 .
|
11. ಹೀಗಿರುವುದರಿಂದ ನನ್ನ ಆಲೋಚನೆಯನ್ನು ಕೇಳು. ದಾನಿನಿಂದ ಬೇರ್ಷೆಬದ ವರೆಗೆ ವಾಸವಾಗಿರುವ ಇಸ್ರಾಯೇಲರೊಳಗಿನಿಂದ ಸಮುದ್ರದ ಮರಳಿನಷ್ಟು ಅಸಂಖ್ಯವಾದ ಸೈನ್ಯವನ್ನು ಕೂಡಿಸಿ, ನೀನೂ ಅವರ ಜೊತೆಯಲ್ಲಿ ಯುದ್ಧಕ್ಕೆ ಹೋಗಬೇಕು.
|
11. Therefore H3588 I counsel H3289 that all H3605 Israel H3478 be generally H622 gathered H622 unto H5921 thee , from Dan H4480 H1835 even to H5704 Beer H884 -sheba , as the sand H2344 that H834 is by H5921 the sea H3220 for multitude H7230 ; and that thou go H1980 to battle H7128 in thine own person H6440 .
|
12. ನಾವು ಅವನಿರುವ ಸ್ಥಳವನ್ನು ಗೊತ್ತುಮಾಡಿಕೊಂಡು ಹೋಗಿ, ಇಬ್ಬನಿಯು ನೆಲದ ಮೇಲೆ ಹೇಗೊ, ಹಾಗೆಯೇ ನಾವು ಅವರ ಮೇಲೆ ಬೀಳೋಣ. ಆಗ ಅವನೂ ಮತ್ತು ಅವನ ಜನರೂ ನಮ್ಮ ಕೈಗೆ ಸಿಕ್ಕುವರು. ಒಬ್ಬನೂ ತಪ್ಪಿಸಿಕೊಳ್ಳಲಾರನು.
|
12. So shall we come H935 upon H413 him in some H259 place H4725 where H834 H8033 he shall be found H4672 , and we will light H5117 upon H5921 him as H834 the dew H2919 falleth H5307 on H5921 the ground H127 : and of him and of all H3605 the men H376 that H834 are with H854 him there shall not H3808 be left H3498 so much H1571 as one H259 .
|
13. ಅವನು ಒಂದು ಪಟ್ಟಣವನ್ನು ಹೊಕ್ಕಿರುವುದಾದರೆ, ಇಸ್ರಾಯೇಲ್ಯರೆಲ್ಲರೂ ಹಗ್ಗಗಳನ್ನು ತೆಗೆದುಕೊಂಡು ಅಲ್ಲಿಗೆ ಬರಲಿ. ಆಗ ಆ ಊರನ್ನು ಒಂದು ಹರಳಾದರೂ ಉಳಿಯದಂತೆ ಹಗ್ಗಗಳಿಂದ ಎಳೆದುಕೊಂಡು ಹೋಗಿ ಹೊಳೆಯಲ್ಲಿ ಹಾಕಿ ಬಿಡೋಣ” ಎಂದನು.
|
13. Moreover, if H518 he be gotten H622 into H413 a city H5892 , then shall all H3605 Israel H3478 bring H5375 ropes H2256 to H413 that H1931 city H5892 , and we will draw H5498 it into H5704 the river H5158 , until H5704 H834 there be not H3808 one small H1571 stone H6872 found H4672 there H8033 .
|
14. ಇದನ್ನು ಕೇಳಿ ಅಬ್ಷಾಲೋಮನೂ, ಎಲ್ಲಾ ಇಸ್ರಾಯೇಲರೂ, “ಅರ್ಕೀಯನಾದ ಹೂಷೈಯ ಆಲೋಚನೆಯು ಅಹೀತೋಫೇಲನ ಆಲೋಚನೆಗಿಂತ ಒಳ್ಳೆಯದಾಗಿದೆ” ಎಂದರು. ಯೆಹೋವನು ಅಬ್ಷಾಲೋಮನಿಗೆ ಕೇಡನ್ನುಂಟುಮಾಡಬೇಕೆಂದು ಅಹೀತೋಫೇಲನ ಆಲೋಚನೆಯನ್ನು ನಿರರ್ಥಕಮಾಡಿದನು. PS
|
14. And Absalom H53 and all H3605 the men H376 of Israel H3478 said H559 , The counsel H6098 of Hushai H2365 the Archite H757 is better H2896 than the counsel H4480 H6098 of Ahithophel H302 . For the LORD H3068 had appointed H6680 to defeat H6565 H853 the good H2896 counsel H6098 of Ahithophel H302 , to the intent H5668 that the LORD H3068 might bring H935 evil H7451 upon H413 Absalom H53 .
|
15. {ಹೂಷೈಯು ದಾವೀದನನ್ನು ಎಚ್ಚರಿಸಿದ್ದು ಮತ್ತು ಅಹೀತೋಫೆಲನ ಮರಣ} PS ತರುವಾಯ ಹೂಷೈಯು ಯಾಜಕನಾದ ಚಾದೋಕ್ ಎಬ್ಯಾತಾರರಿಗೆ, “ಅಹೀತೋಫೆಲನು ಅಬ್ಷಾಲೋಮನಿಗೂ ಮತ್ತು ಇಸ್ರಾಯೇಲರ ಹಿರಿಯರಿಗೂ ಇಂಥಿಂಥ ಆಲೋಚನೆಯನ್ನು ಹೇಳಿದನು, ನಾನು ಹೀಗೆ ಹೇಳಿದ್ದೇನೆ.
|
15. Then said H559 Hushai H2365 unto H413 Zadok H6659 and to H413 Abiathar H54 the priests H3548 , Thus H2063 and thus H2063 did Ahithophel H302 counsel H3289 H853 Absalom H53 and the elders H2205 of Israel H3478 ; and thus H2063 and thus H2063 have I H589 counseled H3289 .
|
16. ಆದುದರಿಂದ ನೀವು ಬೇಗನೆ ಅರಸನಾದ ದಾವೀದನಿಗೆ, ‘ನೀನು ಈ ರಾತ್ರಿ ಅಡವಿಯಲ್ಲಿ ನದಿ ದಾಟುವ ಸ್ಥಳದ ಹತ್ತಿರ ಇಳಿದುಕೊಳ್ಳಬೇಡ. ಶೀಘ್ರವಾಗಿ ನದಿದಾಟಿ ಮುಂದೆ ಹೋಗಿಬಿಡಬೇಕು. ಇಲ್ಲವಾದರೆ ನೀನೂ ನಿನ್ನ ಜನರೂ ನಾಶವಾಗುವಿರಿ’ ಎಂದು ಹೇಳಿಕಳುಹಿಸಿರಿ” ಎಂದನು
|
16. Now H6258 therefore send H7971 quickly H4120 , and tell H5046 David H1732 , saying H559 , Lodge H3885 not H408 this night H3915 in the plains H6160 of the wilderness H4057 , but H1571 speedily H5674 pass over H5674 ; lest H6435 the king H4428 be swallowed up H1104 , and all H3605 the people H5971 that H834 are with H854 him.
|
17. ಯೋನಾತಾನ ಮತ್ತು ಅಹೀಮಾಚರು ರೋಗೆಲಿನ ಬುಗ್ಗೆಯ ಬಳಿಯಲ್ಲಿದ್ದರು. ಇವರ ಮನೆಯ ದಾಸಿಯು ಎಲ್ಲಾ ವರ್ತಮಾನಗಳನ್ನು ಇವರಿಗೂ ಮತ್ತು ಇವರ ಅರಸನಾದ ದಾವೀದನಿಗೂ ಮುಟ್ಟಿಸುವಂತೆ ಗೊತ್ತುಮಾಡಿಕೊಂಡಿದ್ದರು. ತಮ್ಮನ್ನು ಯಾರೂ ನೋಡಬಾರದೆಂದು ಇವರು ತಾವಾಗಿ ಊರೊಳಕ್ಕೆ ಬರಲಿಲ್ಲ.
|
17. Now Jonathan H3083 and Ahimaaz H290 stayed H5975 by En H5883 -rogel; for H3588 they might H3201 not H3808 be seen H7200 to come H935 into the city H5892 : and a wench H8198 went H1980 and told H5046 them ; and they H1992 went H1980 and told H5046 king H4428 David H1732 .
|
18. ಆದರೂ ಒಬ್ಬ ಯೌವನಸ್ಥನು ಅವರನ್ನು ನೋಡಿ ಅಬ್ಷಾಲೋಮನಿಗೆ ತಿಳಿಸಿದನು. ಅಷ್ಟರಲ್ಲಿ ಅವರಿಬ್ಬರೂ ಓಡಿಹೋಗಿ ಬಹುರೀಮಿನಲ್ಲಿ ಇದ್ದ ಒಬ್ಬನ ಮನೆಯನ್ನು ಹೊಕ್ಕರು. ಆ ಮನೆಯ ಅಂಗಳದಲ್ಲಿ ಒಂದು ಬಾವಿಯಿತ್ತು. ಅವರು ಅದರಲ್ಲಿ ಇಳಿದುಕೊಂಡರು.
|
18. Nevertheless a lad H5288 saw H7200 them , and told H5046 Absalom H53 : but they went H1980 both H8147 of them away quickly H4120 , and came H935 to H413 a man H376 's house H1004 in Bahurim H980 , which had a well H875 in his court H2691 ; whither H8033 they went down H3381 .
|
19. ಕೂಡಲೆ ಆ ಮನೆಯ ಹೆಂಗಸು ಅದರ ಮೇಲೆ ಒಂದು ಬಟ್ಟೆಯನ್ನು ಹಾಸಿ, ಅದರ ಮೇಲೆ ಗೋದಿಯ ನುಚ್ಚನ್ನು ಹರಡಿದಳು. ಇದರಿಂದ ಅವರು ಅಲ್ಲಿ ಅಡಗಿರುವ ವಿಷಯ ಯಾರಿಗೂ ಗೊತ್ತಾಗಲಿಲ್ಲ.
|
19. And the woman H802 took H3947 and spread H6566 H853 a covering H4539 over H5921 the well H875 's mouth H6440 , and spread H7849 ground corn H7383 thereon H5921 ; and the thing H1697 was not H3808 known H3045 .
|
20. ಅಬ್ಷಾಲೋಮನ ಸೇವಕರು ಆ ಸ್ತ್ರೀಯ ಮನೆಗೆ ಹೋಗಿ, “ಅಹೀಮಾಚ ಮತ್ತು ಯೋನಾತಾನರು ಎಲ್ಲಿದ್ದಾರೆ?” ಎಂದು ಆಕೆಯನ್ನು ಕೇಳಿದ್ದಕ್ಕೆ ಆಕೆಯು, “ಅವರು ಹಳ್ಳ ದಾಟಿ ಹೋಗಿಬಿಟ್ಟರು” ಎಂದು ಉತ್ತರ ಕೊಟ್ಟಳು. ಅವರು ಅಹೀಮಾಚ ಮತ್ತು ಯೋನಾತಾನರನ್ನು ಹುಡುಕುವುದಕ್ಕೆ ಹೋಗಿ, ಕಾಣದೆ ಯೆರೂಸಲೇಮಿಗೆ ಹಿಂತಿರುಗಿದರು.
|
20. And when Absalom H53 's servants H5650 came H935 to H413 the woman H802 to the house H1004 , they said H559 , Where H346 is Ahimaaz H290 and Jonathan H3083 ? And the woman H802 said H559 unto them , They be gone over H5674 the brook H4323 of water H4325 . And when they had sought H1245 and could not H3808 find H4672 them , they returned H7725 to Jerusalem H3389 .
|
21. ಅವರು ಹೋದ ಕೂಡಲೆ ಇವರಿಬ್ಬರೂ ಬಾವಿಯಿಂದ ಮೇಲಕ್ಕೆ ಬಂದು ಅರಸನಾದ ದಾವೀದನ ಬಳಿಗೆ ಹೋದರು. ಅವರು ದಾವೀದನಿಗೆ, “ಅಹೀತೋಫೆಲನು ನಿನಗೆ ವಿರೋಧವಾಗಿ ಇಂಥಿಂಥ ಆಲೋಚನೆಯನ್ನು ಹೇಳಿದ್ದಾನೆ. ಆದುದರಿಂದ ಬೇಗನೆ ಎದ್ದು ನದಿದಾಟಿ ಹೋಗು” ಎಂದು ಹೇಳಿದನು.
|
21. And it came to pass H1961 , after H310 they were departed H1980 , that they came up H5927 out of the well H4480 H875 , and went H1980 and told H5046 king H4428 David H1732 , and said H559 unto H413 David H1732 , Arise H6965 , and pass quickly over H5674 H4120 H853 the water H4325 : for H3588 thus H3602 hath Ahithophel H302 counseled H3289 against H5921 you.
|
22. ಆಗ ದಾವೀದನೂ ಮತ್ತು ಅವನ ಜೊತೆಯಲ್ಲಿದ್ದವರೆಲ್ಲರೂ ಯೊರ್ದನ್ ನದಿಯನ್ನು ದಾಟಿದರು. ಬೆಳಗಾದಾಗ ದಾಟಬೇಕಾದವನು ಒಬ್ಬನೂ ಇರಲಿಲ್ಲ.
|
22. Then David H1732 arose H6965 , and all H3605 the people H5971 that H834 were with H854 him , and they passed over H5674 H853 Jordan H3383 : by H5704 the morning H1242 light H216 there lacked H5737 not H3808 one H259 of them that H834 was not H3808 gone over H5674 H853 Jordan H3383 .
|
23. ಅಹೀತೋಫೆಲನು ತನ್ನ ಆಲೋಚನೆಯು ನಡೆಯಲಿಲ್ಲವೆಂದು ತಿಳಿದಾಗ ಅವನು ಕತ್ತೆಗೆ ತಡಿಹಾಕಿಸಿ, ಅದರ ಮೇಲೆ ತನ್ನ ಊರಿಗೆ ಹೋದನು. ತನ್ನ ಮನೆಯಲ್ಲಿ ವ್ಯವಸ್ಥೆಮಾಡಿದ ನಂತರ, ಉರ್ಲು ಹಾಕಿಕೊಂಡು ಸತ್ತನು. ಅವನ ಶವವನ್ನು ಅವನ ತಂದೆಯ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ದಾವೀದನ ಪ್ರಯಾಣ; ಅವನಿಗೆ ದೊರೆತ ಆದರಣೆ PEPS
|
23. And when Ahithophel H302 saw H7200 that H3588 his counsel H6098 was not H3808 followed H6213 , he saddled H2280 his H853 ass H2543 , and arose H6965 , and got H1980 him home to H413 his house H1004 , to H413 his city H5892 , and put H6680 H413 his household H1004 in order , and hanged himself H2614 , and died H4191 , and was buried H6912 in the sepulcher H6913 of his father H1 .
|
24. ದಾವೀದನು ಮಹನಯಿಮಿಗೆ ಹೋದನು. ಅಬ್ಷಾಲೋಮನು ಮತ್ತು ಇಸ್ರಾಯೇಲರೆಲ್ಲರೂ ಕೂಡಿಕೊಂಡು ಯೊರ್ದನ್ ನದಿಯನ್ನು ದಾಟಿದರು.
|
24. Then David H1732 came H935 to Mahanaim H4266 . And Absalom H53 passed over H5674 H853 Jordan H3383 , he H1931 and all H3605 the men H376 of Israel H3478 with H5973 him.
|
25. ಅವನು ಯೋವಾಬನಿಗೆ ಬದಲಾಗಿ ಅಮಾಸನನ್ನು ಸೇನಾಧಿಪತಿಯನ್ನಾಗಿ ನೇಮಿಸಿದನು. * ಅಥವಾ ಇಸ್ಮಾಯೇಲನಾದ. ಇಸ್ರಾಯೇಲನಾದ ಇತ್ರನು, ನಾಹಾಷನ ಮಗಳೂ ಯೋವಾಬನ ತಾಯಿಯಾದ ಚೆರೂಯಳ ತಂಗಿಯೂ ಆದ ಅಬೀಗೈಲ್ ಎಂಬುವಳನ್ನು ಸಂಗಮಿಸಿದ್ದರಿಂದ ಈ ಅಮಾಸನು ಹುಟ್ಟಿದನು.
|
25. And Absalom H53 made H7760 Amasa H6021 captain H5921 of the host H6635 instead H8478 of Joab H3097 : which Amasa H6021 was a man H376 's son H1121 , whose name H8034 was Ithra H3501 an Israelite H3481 , that H834 went H935 in to H413 Abigail H26 the daughter H1323 of Nahash H5176 , sister H269 to Zeruiah H6870 Joab H3097 's mother H517 .
|
26. ಇಸ್ರಾಯೇಲ್ಯರೂ ಅಬ್ಷಾಲೋಮನೂ ಗಿಲ್ಯಾದ್ ದೇಶದಲ್ಲಿ ಪಾಳೆಯಮಾಡಿಕೊಂಡರು. PEPS
|
26. So Israel H3478 and Absalom H53 pitched H2583 in the land H776 of Gilead H1568 .
|
27. ದಾವೀದನು ಮಹನಯಿಮಿಗೆ ಬಂದಾಗ ಅಮ್ಮೋನಿಯರ ರಬ್ಬಾ ಊರಿನವನಾದ ನಾಹಾಷನ ಮಗ ಶೋಬಿ, ಲೋದೆಬಾರಿನ ಅಮ್ಮೀಯೇಲನ ಮಗನಾದ ಮಾಕೀರ್, ರೋಗೆಲೀಮ್ ಊರಿನ ಗಿಲ್ಯಾದ್ಯನಾದ ಬರ್ಜಿಲ್ಲೈ ಎಂಬುವರು
|
27. And it came to pass H1961 , when David H1732 was come H935 to Mahanaim H4266 , that Shobi H7629 the son H1121 of Nahash H5176 of Rabbah H4480 H7237 of the children H1121 of Ammon H5983 , and Machir H4353 the son H1121 of Ammiel H5988 of Lo H4480 H3810 -debar , and Barzillai H1271 the Gileadite H1569 of Rogelim H4480 H7274 ,
|
28. ದಾವೀದನಿಗೂ ಅವನ ಜನರಿಗೂ ಹಾಸಿಗೆ, ಬಟ್ಟಲು, ಮಡಕೆ ಇವುಗಳೊಂದಿಗೆ, ಊಟಕ್ಕಾಗಿ ಗೋದಿ, ಜವೆಗೋದಿ, ಹಿಟ್ಟು, ಹುರಿಗಾಳು, ಅವರೆಕಾಳು, ಅಲಸಂದಿ, ಬೇಳೆ ಜೇನುತುಪ್ಪ,
|
28. Brought H5066 beds H4904 , and basins H5592 , and earthen H3335 vessels H3627 , and wheat H2406 , and barley H8184 , and flour H7058 , and parched H7039 corn , and beans H6321 , and lentils H5742 , and parched H7039 pulse ,
|
29. ಬೆಣ್ಣೆ, ಕುರಿ ಹಸುವಿನ ಗಿಣ್ಣು ಇವುಗಳನ್ನು ತಂದುಕೊಟ್ಟರು. ಜನರು ಅರಣ್ಯ ಪ್ರಯಾಣದಿಂದ ಹಸಿದವರೂ, ದಣಿದವರೂ ಮತ್ತು ಬಾಯಾರಿದವರೂ ಆಗಿದ್ದಾರೆ ಎಂದುಕೊಂಡು ಇವುಗಳನ್ನು ತಂದರು. PE
|
29. And honey H1706 , and butter H2529 , and sheep H6629 , and cheese H8194 of kine H1241 , for David H1732 , and for the people H5971 that H834 were with H854 him , to eat H398 : for H3588 they said H559 , The people H5971 is hungry H7457 , and weary H5889 , and thirsty H6771 , in the wilderness H4057 .
|