|
|
1. ದೇವರೇ, ಸುಮ್ಮನಿರಬೇಡ! ನಿಶ್ಚಿಂತನಾಗಿ ಮೌನದಿಂದಿರಬೇಡ ಸ್ವಾಮೀ.
|
1. A Song H7892 or Psalm H4210 of Asaph H623 . Keep not thou silence H408 H1824 , O God H430 : hold not thy peace H2790 H408 , and be not H408 still H8252 , O God H410 .
|
2. ನೋಡು, ನಿನ್ನ ಶತ್ರುಗಳು ಘೋಷಿಸುತ್ತಿದ್ದಾರೆ; ನಿನ್ನ ದ್ವೇಷಿಗಳು ತಲೆಯೆತ್ತಿದ್ದಾರೆ.
|
2. For H3588 , lo H2009 , thine enemies H341 make a tumult H1993 : and they that hate H8130 thee have lifted up H5375 the head H7218 .
|
3. ಅವರು ನಿನ್ನ ಪ್ರಜೆಗಳಿಗೆ ವಿರುದ್ಧವಾಗಿ ಒಳಸಂಚುಮಾಡಿ, ನಿನ್ನ ಮರೆಹೊಕ್ಕವರನ್ನು ಕೆಡಿಸಬೇಕೆಂದು ಆಲೋಚಿಸಿ,
|
3. They have taken crafty H6191 counsel H5475 against H5921 thy people H5971 , and consulted H3289 against H5921 thy hidden ones H6845 .
|
4. “ಬನ್ನಿರಿ; ಅವರು ಜನಾಂಗವಾಗಿ ಉಳಿಯದಂತೆಯೂ, ಇಸ್ರಾಯೇಲೆಂಬ ಹೆಸರು ಅಳಿದುಹೋಗುವಂತೆ, ಅವರನ್ನು ಸಂಹರಿಸೋಣ” ಅಂದುಕೊಳ್ಳುತ್ತಾರೆ.
|
4. They have said H559 , Come H1980 , and let us cut them off H3582 from being a nation H4480 H1471 ; that the name H8034 of Israel H3478 may be no H3808 more H5750 in remembrance H2142 .
|
5. ಎದೋಮ್ಯರ ಮತ್ತು ಇಷ್ಮಾಯೇಲರ ಪಾಳೆಯಗಳವರು, ಮೋವಾಬ್ಯರು, ಹಗ್ರೀಯರು,
|
5. For H3588 they have consulted together H3289 with one consent H3820 H3162 : they are confederate H1285 H3772 against H5921 thee:
|
6. ಗೆಬಾಲ್ಯರು, ಅಮ್ಮೋನಿಯರು, ಅಮಾಲೇಕ್ಯರು, ಫಿಲಿಷ್ಟಿಯರು, ತೂರ್ ಸಂಸ್ಥಾನದವರು,
|
6. The tabernacles H168 of Edom H123 , and the Ishmaelites H3459 ; of Moab H4124 , and the Hagarenes H1905 ;
|
7. ಇವರೆಲ್ಲಾ ಏಕಮನಸ್ಸಿನಿಂದ ಕೂಡಿ, ನಿನಗೆ ವಿರುದ್ಧವಾಗಿ ಒಳಸಂಚು ಮಾಡುತ್ತಾರಲ್ಲಾ;
|
7. Gebal H1381 , and Ammon H5983 , and Amalek H6002 ; the Philistines H6429 with H5973 the inhabitants H3427 of Tyre H6865 ;
|
8. ಅಶ್ಯೂರ್ಯರೂ ಇವರೊಡನೆ ಕೂಡಿಕೊಂಡು, ಲೋಟನ ವಂಶದವರಿಗೆ ಭುಜಬಲವಾಗಿದ್ದಾರೆ. ಸೆಲಾ
|
8. Assur H804 also H1571 is joined H3867 with H5973 them : they have H1961 helped H2220 the children H1121 of Lot H3876 . Selah H5542 .
|
9. ನೀನು ಮಿದ್ಯಾನ್ಯರನ್ನು ಸಂಹರಿಸಿದಂತೆ ಇವರನ್ನೂ ಸಂಹರಿಸು. ಕೀಷೋನ್ ಹಳ್ಳದ ಬಳಿಯಲ್ಲಿ ಸೀಸೆರ್, ಯಾಬೀನ್ ಎಂಬುವವರಿಗೆ ಮಾಡಿದಂತೆ, ಇವರಿಗೂ ಮಾಡು.
|
9. Do H6213 unto them as unto the Midianites H4080 ; as to Sisera H5516 , as to Jabin H2985 , at the brook H5158 of Kison H7028 :
|
10. ಅವರು ಎಂದೋರಿನಲ್ಲಿ ವಧಿಸಲ್ಪಟ್ಟು, ಹೊಲದ ಗೊಬ್ಬರವಾಗಿ ಹೋದರಲ್ಲಾ.
|
10. Which perished H8045 at Endor H5874 : they became H1961 as dung H1828 for the earth H127 .
|
11. ಓರೇಬ್ ಮತ್ತು ಜೇಬ್ ಎಂಬವರ ಗತಿಯು, ಇವರ ಶ್ರೀಮಂತರಿಗೂ ಸಂಭವಿಸಲಿ; ಜೇಬಹ ಮತ್ತು ಚಲ್ಮುನ್ನ ಎಂಬವರ ಹಾಗೆ ಇವರ ಪ್ರಭುಗಳಿಗೂ ಆಗಲಿ.
|
11. Make H7896 their nobles H5081 like Oreb H6159 , and like Zeeb H2062 : yea, all H3605 their princes H5257 as Zebah H2078 , and as Zalmunna H6759 :
|
12. ಅವರು “ದೇವರು ಅವರಿಗೆ ಕೊಟ್ಟ ದೇಶವನ್ನು ಸ್ವಾಧೀನಮಾಡಿಕೊಳ್ಳುತ್ತೇವೆ” ಅಂದುಕೊಳ್ಳುತ್ತಾರಲ್ಲಾ.
|
12. Who H834 said H559 , Let us take H3423 to ourselves H853 the houses H4999 of God H430 in possession.
|
13. ನನ್ನ ದೇವರೇ, ಅವರನ್ನು ಸುಂಟರ ಗಾಳಿಯಲ್ಲಿ ಸುತ್ತಾಡುವ ಧೂಳಿನಂತೆಯೂ, ಹಾರಿಹೋಗುವ ಹೊಟ್ಟಿನಂತೆಯೂ ಮಾಡು.
|
13. O my God H430 , make H7896 them like a wheel H1534 ; as the stubble H7179 before H6440 the wind H7307 .
|
14. ನೀನು ಕಾಡನ್ನು ಸುಟ್ಟುಬಿಡುವ ಬೆಂಕಿಯಂತೆಯೂ, ಪರ್ವತಗಳನ್ನು ದಹಿಸಿಬಿಡುವ ಜ್ವಾಲೆಯಂತೆಯೂ ಇದ್ದು,
|
14. As the fire H784 burneth H1197 a wood H3293 , and as the flame H3852 setteth the mountains on fire H2022 H3857 ;
|
15. ನಿನ್ನ ಸುಂಟರಗಾಳಿಯಿಂದ ಅವರನ್ನು ಬೆನ್ನಟ್ಟು; ತುಫಾನಿನಿಂದ ಅವರನ್ನು ಕಳವಳಗೊಳಿಸು.
|
15. So H3651 persecute H7291 them with thy tempest H5591 , and make them afraid H926 with thy storm H5492 .
|
16. ನಾಚಿಕೆಯು ಅವರ ಮುಖವನ್ನು ಕವಿಯಲಿ. ಯೆಹೋವನೇ, ಆಗ ಅವರು ನಿನ್ನ ಹೆಸರನ್ನು ಕೇಳಿಕೊಂಡು ಬಂದಾರು.
|
16. Fill H4390 their faces H6440 with shame H7036 ; that they may seek H1245 thy name H8034 , O LORD H3068 .
|
17. ಅವರು ನಿರಂತರವೂ ಆಶಾಭಂಗದಿಂದ ಕಳವಳಗೊಳ್ಳಲಿ; ಅಪಮಾನದಿಂದ ನಾಶವಾಗಲಿ.
|
17. Let them be confounded H954 and troubled H926 forever H5704 H5703 ; yea , let them be put to shame H2659 , and perish H6 :
|
18. ಆಗ ಯೆಹೋವನ ನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು. PE
|
18. That men may know H3045 that H3588 thou H859 , whose name H8034 alone H905 is JEHOVAH H3068 , art the most high H5945 over H5921 all H3605 the earth H776 .
|