|
|
1. {ಇಸ್ರಾಯೇಲಿಗೆ ಸಂಭವಿಸಬೇಕಾದ ನಾಶನ} PS ಪೂರ್ವದಲ್ಲಿ ಎಫ್ರಾಯೀಮು ನುಡಿದ ಮಾತಿಗೆ ಎಲ್ಲರೂ ನಡುಗಿದರು, ಅದು ಇಸ್ರಾಯೇಲಿನಲ್ಲಿ ಉನ್ನತಸ್ಥಿತಿಗೆ ಬಂದಿತ್ತು; ಆದರೆ ಬಾಳ್ ದೇವತೆಯ ವಿಷಯದಲ್ಲಿ ದೋಷಿಯಾದಾಗ ನಾಶವಾಯಿತು.
|
1. When Ephraim H669 spoke H1696 trembling H7578 , he H1931 exalted H5375 himself in Israel H3478 ; but when he offended H816 in Baal H1168 , he died H4191 .
|
2. ಈಗ ಎಫ್ರಾಯೀಮ್ಯರು ಹೆಚ್ಚೆಚ್ಚಾಗಿ ಪಾಪಮಾಡುತ್ತಾರೆ, ತಮ್ಮ ಬೆಳ್ಳಿಯಿಂದ ಸ್ವಬುದ್ಧಿಗೆ ತಕ್ಕ ಎರಕದ ಬೊಂಬೆಗಳನ್ನು ರೂಪಿಸಿಕೊಂಡಿದ್ದಾರೆ; ಅವೆಲ್ಲಾ ಶಿಲ್ಪಿಗಳ ಕೈಕೆಲಸವೇ; ಇಂಥವುಗಳನ್ನು ಮಾತನಾಡಿಸುತ್ತಾರೆ, ಮನುಷ್ಯರಾದ ಪೂಜಾರಿಗಳು ಪಶುವಿನ ಮೂರ್ತಿಗಳನ್ನು ಮುದ್ದಿಸುತ್ತಾರೆ.
|
2. And now H6258 they sin H2398 more and more H3254 , and have made H6213 them molten images H4541 of their silver H4480 H3701 , and idols H6091 according to their own understanding H8394 , all H3605 of it the work H4639 of the craftsmen H2796 : they H1992 say H559 of them , Let the men H120 that sacrifice H2076 kiss H5401 the calves H5695 .
|
3. ಹೀಗಿರಲು ಅವರು ಪ್ರಾತಃಕಾಲದ ಮೋಡದ ಹಾಗೆ, ಬೇಗನೆ ಮಾಯವಾಗುವ ಇಬ್ಬನಿಯಂತೆಯೂ, ಬಿರುಗಾಳಿಯು ಕಣದಿಂದ ಬಡಿದುಕೊಂಡುಹೋಗುವ ಹೊಟ್ಟಿನ ಹಾಗೂ, ಚಿಮಿಣಿಯಿಂದ ಹೊರಡುವ ಹೊಗೆಯೋಪಾದಿಯಲ್ಲಿಯೂ ಇರುವರು.
|
3. Therefore H3651 they shall be H1961 as the morning H1242 cloud H6051 , and as the early H7925 dew H2919 that passeth away H1980 , as the chaff H4671 that is driven with the whirlwind H5590 out of the floor H4480 H1637 , and as the smoke H6227 out of the chimney H4480 H699 .
|
4. ನಾನಾದರೋ ನೀನು ಐಗುಪ್ತ ದೇಶದಲ್ಲಿದ್ದ ಕಾಲದಿಂದ ಯೆಹೋವನೆಂಬ ನಿನ್ನ ದೇವರಾಗಿದ್ದೇನೆ; ನನ್ನ ಹೊರತು ಯಾವ ದೇವರೂ ನಿನಗೆ ಗೊತ್ತಿಲ್ಲ, ನನ್ನ ಹೊರತು ಯಾವ ರಕ್ಷಕನೂ ಇಲ್ಲ.
|
4. Yet I H595 am the LORD H3068 thy God H430 from the land H4480 H776 of Egypt H4714 , and thou shalt know H3045 no H3808 god H430 but H2108 me : for there is no H369 savior H3467 beside H1115 me.
|
5. ಅರಣ್ಯದಲ್ಲಿ, ಘೋರ ಮರುಭೂಮಿಯಲ್ಲಿ ನಿನ್ನನ್ನು ಲಕ್ಷಿಸಿದವನು ನಾನೇ.
|
5. I H589 did know H3045 thee in the wilderness H4057 , in the land H776 of great drought H8514 .
|
6. ಆಹಾರವು ನಿನ್ನವರಿಗೆ ಸಿಕ್ಕಿದಾಗ ಹೊಟ್ಟೆತುಂಬಿಸಿಕೊಂಡರು; * ಆಹಾರವು ನಿನ್ನವರಿಗೆ ಸಿಕ್ಕಿದಾಗ ಹೊಟ್ಟೆತುಂಬಿಸಿಕೊಂಡರು; ನಾನು ಅವರನ್ನು ಪೋಷಿಸಿದಾಗ ಅವರು ತೃಪ್ತರಾದರು. ಹೊಟ್ಟೆ ತುಂಬಿದಾಗ ಅವರ ಮನಸ್ಸು ಉಬ್ಬಿಕೊಂಡಿತು; ಇದರಿಂದ ನನ್ನನ್ನು ಮರೆತುಬಿಟ್ಟರು.
|
6. According to their pasture H4830 , so were they filled H7646 ; they were filled H7646 , and their heart H3820 was exalted H7311 ; therefore H5921 H3651 have they forgotten H7911 me.
|
7. ಆದಕಾರಣ ನಾನು ಅವರ ಪಾಲಿಗೆ ಸಿಂಹ; ಚಿರತೆಯ ಹಾಗೆ ದಾರಿಯ ಮಗ್ಗುಲಲ್ಲಿ ಹೊಂಚುಹಾಕುವೆನು.
|
7. Therefore I will be H1961 unto them as H3644 a lion H7826 : as a leopard H5246 by H5921 the way H1870 will I observe H7789 them :
|
8. ಮರಿಗಳನ್ನು ಕಳಕೊಂಡ ಕರಡಿಯಂತೆ ಅವರಿಗೆ ಎದುರು ಬಿದ್ದು ಅವರ ಎದೆಯನ್ನು ಸೀಳಿಬಿಡುವೆನು; ಅಲ್ಲೇ ಮೃಗರಾಜನಂತೆ ಅವರನ್ನು ನುಂಗುವೆನು; ಭೂಜಂತುಗಳು ಅವರನ್ನು ಹರಿದುಬಿಡುವವು.
|
8. I will meet H6298 them as a bear H1677 that is bereaved H7909 of her whelps , and will rend H7167 the caul H5458 of their heart H3820 , and there H8033 will I devour H398 them like a lion H3833 : the wild H7704 beast H2416 shall tear H1234 them.
|
9. ಇಸ್ರಾಯೇಲೇ, ನಾನು ನಿನ್ನನ್ನು ನಾಶಮಾಡುವೆನು, ಯಾರು † ಯಾರು ನಿನ್ನ ಸಹಾಯವು ನನ್ನೊಂದಿಗೆ ಮಾತ್ರವಿದೆ. ನಿನ್ನನ್ನು ರಕ್ಷಿಸುವರು? ‡ ನೀನು ನಿನ್ನ ಬೆಂಬಲವಾದ ನನಗೆ ತಿರುಗಿಬಿದ್ದುದರಿಂದ ನಾಶವಾಗಿದ್ದಿ.
|
9. O Israel H3478 , thou hast destroyed H7843 thyself; but H3588 in me is thine help H5828 .
|
10. ಈಗ ನಿನ್ನ ಅರಸನು ಎಲ್ಲಿ? ನಿನ್ನ ಪಟ್ಟಣಗಳಲ್ಲೆಲ್ಲಾ ನಿನ್ನವರನ್ನು ಉದ್ಧರಿಸುವನೋ? ನನಗೆ ರಾಜನನ್ನೂ ರಾಜ್ಯಾಧಿಕಾರಿಗಳನ್ನೂ ದಯಪಾಲಿಸು ಎಂದು ನನ್ನನ್ನು ಕೇಳಿಕೊಂಡಿಯಷ್ಟೆ; ನಿನ್ನನ್ನು ರಕ್ಷಿಸಬಲ್ಲ ನಗರಪಾಲಕರು ಎಲ್ಲಿ?
|
10. I will be H165 thy king H4428 : where H645 is any other that may save H3467 thee in all H3605 thy cities H5892 ? and thy judges H8199 of whom H834 thou saidst H559 , Give H5414 me a king H4428 and princes H8269 ?
|
11. ನಾನು ಕೋಪಗೊಂಡು ರಾಜರನ್ನು ಕೊಟ್ಟಿದ್ದೇನೆ; ಕೋಪೋದ್ರೇಕನಾಗಿ ಅವರನ್ನು ತೆಗೆದು ಹಾಕಿದ್ದೇನೆ.
|
11. I gave H5414 thee a king H4428 in mine anger H639 , and took him away H3947 in my wrath H5678 .
|
12. ಎಫ್ರಾಯೀಮಿನ ಅಧರ್ಮವು ಗಂಟುಕಟ್ಟಿದೆ, ಅದರ ಪಾಪವು ಭದ್ರಪಡಿಸಿದೆ.
|
12. The iniquity H5771 of Ephraim H669 is bound up H6887 ; his sin H2403 is hid H6845 .
|
13. ಅದಕ್ಕೆ ಪ್ರಸವವೇದನೆಯಾಗುತ್ತಾ ಇದೆ; ಅದು ಮಂಕು ಮಗುವಿನಂತಿದೆ; ಈ ಸಮಯವು ಗರ್ಭದ್ವಾರದಲ್ಲಿ ನಿಲ್ಲತಕ್ಕ ಸಮಯವಲ್ಲ.
|
13. The sorrows H2256 of a travailing woman H3205 shall come H935 upon him: he H1931 is an unwise H3808 H2450 son H1121 ; for H3588 he should not H3808 stay H5975 long H6256 in the place of the breaking forth H4866 of children H1121 .
|
14. ನಾನು ಅದನ್ನು ಪಾತಾಳದ ಅಧಿಕಾರದಿಂದ ಬಿಡಿಸಲೋ? ಮರಣದಿಂದ ಉದ್ಧರಿಸಲೋ? ಮರಣವೇ, ನಿನ್ನ ಉಪದ್ರವಗಳಲ್ಲಿ? ಪಾತಾಳವೇ, ನೀನು ಮಾಡುವ ನಾಶನವೆಲ್ಲಿ? ಕನಿಕರವು ನನಗೆ ಕಾಣಿಸದು.
|
14. I will ransom H6299 them from the power H4480 H3027 of the grave H7585 ; I will redeem H1350 them from death H4480 H4194 : O death H4194 , I will be H165 thy plagues H1698 ; O grave H7585 , I will be H165 thy destruction H6987 : repentance H5164 shall be hid H5641 from mine eyes H4480 H5869 .
|
15. ಎಫ್ರಾಯೀಮು ತನ್ನ ಸಹೋದರರಲ್ಲಿ ಫಲಸಮೃದ್ಧವಾಗಿದ್ದರೂ, ಕಾಡಿನಿಂದ ಯೆಹೋವನು ಬೀಸಮಾಡುವ ಮೂಡಣ ಗಾಳಿಯು ಬರಲು ಅದರ ಬುಗ್ಗೆಯು ಬತ್ತುವುದು, ಅದರ ಒರತೆಯು ಒಣಗುವುದು. ಶತ್ರುವು ಅವರ ಪ್ರಿಯವಸ್ತುಗಳ ನಿಧಿಯನ್ನು ಸೂರೆಮಾಡುವನು.
|
15. Though H3588 he H1931 be fruitful H6500 among H996 his brethren H251 , an east wind H6921 shall come H935 , the wind H7307 of the LORD H3068 shall come up H5927 from the wilderness H4480 H4057 , and his spring H4726 shall become dry H954 , and his fountain H4599 shall be dried up H2717 : he H1931 shall spoil H8154 the treasure H214 of all H3605 pleasant H2532 vessels H3627 .
|
16. ಸಮಾರ್ಯವು ತನ್ನ ದೇವರಿಗೆ ತಿರುಗಿಬಿದ್ದುದರಿಂದ ತನ್ನ ದೋಷಫಲವನ್ನು ಅನುಭವಿಸಲೇ ಬೇಕು; ಅದರ ಜನರು ಖಡ್ಗದಿಂದ ಹತರಾಗುವರು; ವೈರಿಗಳು ಅಲ್ಲಿನ ಮಕ್ಕಳನ್ನು ಬಂಡೆಗೆ ಅಪ್ಪಳಿಸುವರು. ಗರ್ಭಿಣಿಯರ ಹೊಟ್ಟೆಯನ್ನು ಸೀಳುವರು. PE
|
16. Samaria H8111 shall become desolate H816 ; for H3588 she hath rebelled H4784 against her God H430 : they shall fall H5307 by the sword H2719 : their infants H5768 shall be dashed in pieces H7376 , and their women with child H2030 shall be ripped up H1234 .
|