|
|
1. {ಪ್ರಥಮಫಲಗಳ ಸಮರ್ಪಣೆ} PS ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ದೇಶವನ್ನು ನೀವು ಸೇರಿ, ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಿಸುವಾಗ,
|
1. And it shall be H1961 , when H3588 thou art come in H935 unto H413 the land H776 which H834 the LORD H3068 thy God H430 giveth H5414 thee for an inheritance H5159 , and possessest H3423 it , and dwellest H3427 therein;
|
2. ನಿಮ್ಮಲಿರುವ ಪ್ರತಿಯೊಬ್ಬನೂ ಆತನು ದಯಪಾಲಿಸಿದ ಹೊಲದ ಎಲ್ಲಾ ಬೆಳೆಗಳಲ್ಲಿ ಪ್ರಥಮಫಲಗಳನ್ನು ಪುಟ್ಟಿಯಲ್ಲಿಟ್ಟು, ನಿಮ್ಮ ದೇವರಾದ ಯೆಹೋವನು ತನ್ನ ಹೆಸರನ್ನು ಸ್ಥಾಪಿಸುವುದಕ್ಕೆ ಆದುಕೊಳ್ಳುವ ಸ್ಥಳಕ್ಕೆ ತರಬೇಕು.
|
2. That thou shalt take H3947 of the first H4480 H7225 of all H3605 the fruit H6529 of the earth H127 , which H834 thou shalt bring H935 of thy land H4480 H776 that H834 the LORD H3068 thy God H430 giveth H5414 thee , and shalt put H7760 it in a basket H2935 , and shalt go H1980 unto H413 the place H4725 which H834 the LORD H3068 thy God H430 shall choose H977 to place H7931 his name H8034 there H8033 .
|
3. ನೀವು ಅದನ್ನು ತೆಗೆದುಕೊಂಡುಹೋಗಿ ಆ ಕಾಲದಲ್ಲಿ ಇರುವ ಮಹಾಯಾಜಕನಿಗೆ, “ಯೆಹೋವನು ನಮ್ಮ ಪೂರ್ವಿಕರಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನಾವು ಸೇರಿದ್ದಾಯಿತೆಂದು ನೀನು ಸೇವಿಸುವ ದೇವರಾದ ಯೆಹೋವನ ಸನ್ನಿಧಿಯಲ್ಲಿ ನಾವು ಈಗ ಒಪ್ಪಿಕೊಂಡಿದ್ದೇವೆ” ಎಂದು ಹೇಳಬೇಕು.
|
3. And thou shalt go H935 unto H413 the priest H3548 that H834 shall be H1961 in those H1992 days H3117 , and say H559 unto H413 him , I profess H5046 this day H3117 unto the LORD H3068 thy God H430 , that H3588 I am come H935 unto H413 the country H776 which H834 the LORD H3068 swore H7650 unto our fathers H1 for to give H5414 us.
|
4. ಯಾಜಕನು ಆ ಪುಟ್ಟಿಯನ್ನು ನಿಮ್ಮ ಕೈಯಿಂದ ತೆಗೆದುಕೊಂಡು ನಿಮ್ಮ ದೇವರಾದ ಯೆಹೋವನ ಯಜ್ಞವೇದಿಯ ಮುಂದೆ ಇಡುವನು.
|
4. And the priest H3548 shall take H3947 the basket H2935 out of thine hand H4480 H3027 , and set it down H5117 before H6440 the altar H4196 of the LORD H3068 thy God H430 .
|
5. ಆಗ ನೀವು ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ, “ಅರಾಮ್ಯನಾದ ನಮ್ಮ ಮೂಲಪಿತೃವು ಗತಿಯಿಲ್ಲದವನಾಗಿ * ಅಥವಾ ನಾಶಮಾಡುತ್ತಾ. ಅಲೆದಾಡುತ್ತಾ ಸ್ವಲ್ಪ ಜನರೊಡನೆ ಐಗುಪ್ತದೇಶಕ್ಕೆ ಹೋಗಿ ಅಲ್ಲಿ ಇಳಿದುಕೊಂಡನು. ಅಲ್ಲಿ ಅವನ ಸಂತಾನದವರು ಹೆಚ್ಚಿ ಅವರು ಮಹಾಬಲಿಷ್ಠ ಜನಾಂಗವಾದರು.
|
5. And thou shalt speak H6030 and say H559 before H6440 the LORD H3068 thy God H430 , A Syrian H761 ready to perish H6 was my father H1 , and he went down H3381 into Egypt H4714 , and sojourned H1481 there H8033 with a few H4692 H4592 , and became H1961 there H8033 a nation H1471 , great H1419 , mighty H6099 , and populous H7227 :
|
6. ಐಗುಪ್ತ್ಯರು ನಮ್ಮನ್ನು ಉಪದ್ರವಪಡಿಸಿ, ಬಾಧಿಸಿ, ನಮ್ಮಿಂದ ಕಠಿಣವಾಗಿ ದುಡಿಸಿಕೊಂಡರು.
|
6. And the Egyptians H4713 evil entreated H7489 us , and afflicted H6031 us , and laid H5414 upon H5921 us hard H7186 bondage H5656 :
|
7. ಆಗ ನಾವು ನಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಮೊರೆಯಿಡಲಾಗಿ ಆತನು ನಮ್ಮ ಸ್ವರವನ್ನು ಕೇಳಿ, ನಮ್ಮ ದುರವಸ್ಥೆಯನ್ನೂ, ಕಷ್ಟವನ್ನೂ ಮತ್ತು ಉಪದ್ರವವನ್ನೂ ನೋಡಿದನು.
|
7. And when we cried H6817 unto H413 the LORD H3068 God H430 of our fathers H1 , the LORD H3068 heard H8085 H853 our voice H6963 , and looked on H7200 H853 our affliction H6040 , and our labor H5999 , and our oppression H3906 :
|
8. ಆತನು ತನ್ನ ಭುಜಬಲವನ್ನೂ, ಶಿಕ್ಷಾಹಸ್ತವನ್ನೂ, ಮಹಾಭೀತಿಗಳನ್ನೂ, ಮಹತ್ಕಾರ್ಯಗಳನ್ನೂ ಮತ್ತು ಸೂಚಕಕಾರ್ಯಗಳನ್ನು ಪ್ರಯೋಗಿಸಿ ನಮ್ಮನ್ನು ಬಿಡಿಸಿದನು.
|
8. And the LORD H3068 brought us forth H3318 out of Egypt H4480 H4714 with a mighty H2389 hand H3027 , and with an outstretched H5186 arm H2220 , and with great H1419 terribleness H4172 , and with signs H226 , and with wonders H4159 :
|
9. ಅವನು ನಮ್ಮನ್ನು ಐಗುಪ್ತದೇಶದಿಂದ ಕರೆತಂದು ಹಾಲೂ ಮತ್ತು ಜೇನೂ ಹರಿಯುವ ಈ ದೇಶವನ್ನು ನಮಗೆ ಕೊಟ್ಟಿದ್ದಾನೆ.
|
9. And he hath brought H935 us into H413 this H2088 place H4725 , and hath given H5414 us H853 this H2063 land H776 , even a land H776 that floweth H2100 with milk H2461 and honey H1706 .
|
10. ಆದುದರಿಂದ ಯೆಹೋವನೇ, ನೀನು ಅನುಗ್ರಹಿಸಿರುವ ಭೂಮಿಯ ಬೆಳೆಯಲ್ಲಿ ಪ್ರಥಮಫಲಗಳನ್ನು ನಾವು ಕಾಣಿಕೆಯಾಗಿ ತಂದಿದ್ದೇವೆ, ಅದನ್ನು ಸ್ವೀಕರಿಸಬೇಕು” ಎಂದು ಹೇಳಿ ಆ ಪ್ರಥಮಫಲಗಳನ್ನು ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿಟ್ಟು ಆತನನ್ನು ಆರಾಧಿಸಬೇಕು.
|
10. And now H6258 , behold H2009 , I have brought H935 H853 the firstfruits H7225 H6529 of the land H127 , which H834 thou , O LORD H3068 , hast given H5414 me . And thou shalt set H5117 it before H6440 the LORD H3068 thy God H430 , and worship H7812 before H6440 the LORD H3068 thy God H430 :
|
11. ಆತನು ನಿಮಗೂ ಮತ್ತು ನಿಮ್ಮ ಮನೆಯವರಿಗೂ ಉಂಟುಮಾಡಿದ ಎಲ್ಲಾ ಸುಖಸಂತೋಷಗಳಿಗಾಗಿ ನೀವೂ, ಲೇವಿಯರೂ ಮತ್ತು ನಿಮ್ಮ ಮಧ್ಯದಲ್ಲಿರುವ ಪರದೇಶಿಗಳೂ ಸಂಭ್ರಮದಿಂದಿರಬೇಕು. PS
|
11. And thou shalt rejoice H8055 in every H3605 good H2896 thing which H834 the LORD H3068 thy God H430 hath given H5414 unto thee , and unto thine house H1004 , thou H859 , and the Levite H3881 , and the stranger H1616 that H834 is among H7130 you.
|
12. {ಪ್ರತಿ ಮೂರನೆ ವರ್ಷದಲ್ಲಿ ದಶಮಾಂಶವನ್ನು ಸಮರ್ಪಿಸುವ ಕ್ರಮ} PS ದಶಮಾಂಶವನ್ನು ಕೊಡಬೇಕಾದ ಮೂರನೆಯ ವರ್ಷದಲ್ಲಿ ನಿಮಗುಂಟಾದ ಆದಾಯದ ದಶಮ ಭಾಗವನ್ನು ನೀವು ಪ್ರತ್ಯೇಕಿಸಿದಾಗ, ನಿಮ್ಮ ನಿಮ್ಮ ಊರುಗಳಲ್ಲಿರುವ ಲೇವಿಯರೂ, ಪರದೇಶಿಗಳೂ, ಅನಾಥರು ಮತ್ತು ವಿಧವೆಯರೂ ಊಟಮಾಡಿ ಸಂತೋಷವಾಗಿರುವಂತೆ ಅದನ್ನು ಅವರಿಗೆ ಕೊಡಬೇಕಲ್ಲಾ.
|
12. When H3588 thou hast made an end H3615 of tithing H6237 H853 all H3605 the tithes H4643 of thine increase H8393 the third H7992 year H8141 , which is the year H8141 of tithing H4643 , and hast given H5414 it unto the Levite H3881 , the stranger H1616 , the fatherless H3490 , and the widow H490 , that they may eat H398 within thy gates H8179 , and be filled H7646 ;
|
13. ಆಗ ನೀವು ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ, “ನಾವು ಪ್ರತ್ಯೇಕಿಸಿದ ವಸ್ತುಗಳನ್ನು ಮನೆಯಿಂದ ತೆಗೆದುಕೊಂಡು ಬಂದಿದ್ದೇವೆ. ನೀನು ಆಜ್ಞಾಪಿಸಿದ ಮೇರೆಗೆ ಅವುಗಳನ್ನು ಲೇವಿಯರು, ಪರದೇಶಿಗಳು, ಅನಾಥರು, ವಿಧವೆಯರು ಇಂಥವರಿಗೆ ಕೊಟ್ಟಿದ್ದೇವೆ ನಿನ್ನ ಆಜ್ಞೆಗಳಲ್ಲಿ ಒಂದನ್ನೂ ಮೀರಲಿಲ್ಲ ಮತ್ತು ಮರೆಯಲೂ ಇಲ್ಲ.
|
13. Then thou shalt say H559 before H6440 the LORD H3068 thy God H430 , I have brought away H1197 the hallowed things H6944 out of H4480 mine house H1004 , and also H1571 have given H5414 them unto the Levite H3881 , and unto the stranger H1616 , to the fatherless H3490 , and to the widow H490 , according to all H3605 thy commandments H4687 which H834 thou hast commanded H6680 me : I have not H3808 transgressed H5674 thy commandments H4480 H4687 , neither H3808 have I forgotten H7911 them :
|
14. ನಾವು ಸತ್ತವರಿಗೋಸ್ಕರ ದುಃಖಿಸುವ ಕಾಲದಲ್ಲೆಲ್ಲಾ ಅದರಲ್ಲಿ ಏನೂ ತಿನ್ನಲಿಲ್ಲ; ಅಶುದ್ಧರಾಗಿ ಅದನ್ನು ತೆಗೆದುಹಾಕಲಿಲ್ಲ; ಸತ್ತವರಿಗೋಸ್ಕರ ಅದರಲ್ಲಿ ಏನೂ ಕೊಡಲಿಲ್ಲ; ನಮ್ಮ ದೇವರಾದ ಯೆಹೋವನ ಮಾತಿನಲ್ಲಿ ಲಕ್ಷ್ಯವಿಟ್ಟು ನೀನು ನೇಮಿಸಿದ್ದನ್ನೆಲ್ಲಾ ಅನುಸರಿಸಿದ್ದೇವೆ.
|
14. I have not H3808 eaten H398 thereof H4480 in my mourning H205 , neither H3808 have I taken away H1197 aught thereof H4480 for any unclean H2931 use , nor H3808 given H5414 aught thereof H4480 for the dead H4191 : but I have hearkened H8085 to the voice H6963 of the LORD H3068 my God H430 , and have done H6213 according to all H3605 that H834 thou hast commanded H6680 me.
|
15. ನೀನು ನಿನ್ನ ಪರಿಶುದ್ಧ ವಾಸಸ್ಥಾನವಾಗಿರುವ ಪರಲೋಕದಿಂದ ಕೆಳಗಿರುವ ನಮ್ಮನ್ನು ಕಟಾಕ್ಷಿಸಿ, ನಿನ್ನ ಜನರಾದ ಇಸ್ರಾಯೇಲರನ್ನೂ † ಬಹಳಷ್ಟು ಫಲವತ್ತಾದ ದೇಶ. ಹಾಲೂ ಮತ್ತು ಜೇನೂ ಹರಿಯುವ ದೇಶದಲ್ಲಿ ನೀನು ನಮ್ಮ ಪೂರ್ವಿಕರಿಗೆ ವಾಗ್ದಾನಮಾಡಿದಂತೆ ನಮ್ಮನ್ನು ನೆಲೆಸುವಂತೆ ಮಾಡಿ, ನಮ್ಮನ್ನು ಈ ಭೂಮಿಯನ್ನೂ ಆಶೀರ್ವದಿಸು ದೇವರೇ” ಎಂದು ಹೇಳಬೇಕು. PS
|
15. Look down H8259 from thy holy H6944 habitation H4480 H4583 , from H4480 heaven H8064 , and bless H1288 H853 thy people H5971 H853 Israel H3478 , and the land H127 which H834 thou hast given H5414 us, as H834 thou sworest H7650 unto our fathers H1 , a land H776 that floweth H2100 with milk H2461 and honey H1706 .
|
16. {ಯೆಹೋವನು ಇಸ್ರಾಯೇಲರೊಡನೆ ಮಾಡಿಕೊಂಡ ಒಡಂಬಡಿಕೆ} PS ಈ ಆಜ್ಞಾವಿಧಿಗಳನ್ನು ನೀವು ಅನುಸರಿಸಬೇಕೆಂದು ನಿಮ್ಮ ದೇವರಾದ ಯೆಹೋವನು ನಿಮಗೆ ಈಗ ಆಜ್ಞಾಪಿಸಿದ್ದಾನೆ. ಆದುದರಿಂದ ನೀವು ಸಂಪೂರ್ಣವಾದ ಹೃದಯದಿಂದಲೂ, ಮನಸ್ಸಿನಿಂದಲೂ ಇವುಗಳನ್ನು ಕೈಕೊಂಡು ನಡೆಯಬೇಕು.
|
16. This H2088 day H3117 the LORD H3068 thy God H430 hath commanded H6680 thee to do H6213 H853 these H428 statutes H2706 and judgments H4941 : thou shalt therefore keep H8104 and do H6213 them with all H3605 thine heart H3824 , and with all H3605 thy soul H5315 .
|
17. ನಮಗೆ ಯೆಹೋವನೇ ದೇವರಾಗಿರುವನೆಂದೂ, ಆತನು ಹೇಳಿದ ಮಾರ್ಗದಲ್ಲೇ ನಡೆದು ಆತನ ಆಜ್ಞಾವಿಧಿನಿಯಮಗಳನ್ನು ಕೈಕೊಂಡು, ಆತನ ಮಾತಿಗೆ ಲಕ್ಷ್ಯವಿಡುವೆವು ಎಂದು ನೀವು ಈಗ ಒಡಂಬಟ್ಟಿದ್ದೀರಿ.
|
17. Thou hast avouched H559 H853 the LORD H3068 this day H3117 to be H1961 thy God H430 , and to walk H1980 in his ways H1870 , and to keep H8104 his statutes H2706 , and his commandments H4687 , and his judgments H4941 , and to hearken H8085 unto his voice H6963 :
|
18. ಯೆಹೋವನೋ ನಿಮ್ಮ ವಿಷಯದಲ್ಲಿ, “ಇವರು ನನ್ನ ಆಜ್ಞೆಗಳನ್ನೆಲ್ಲಾ ಅನುಸರಿಸುವ ಪಕ್ಷಕ್ಕೆ ನನ್ನ ವಾಗ್ದಾನಕ್ಕೆ ಅನುಸಾರವಾಗಿ ನನಗೆ
|
18. And the LORD H3068 hath avouched H559 thee this day H3117 to be H1961 his peculiar H5459 people H5971 , as H834 he hath promised H1696 thee , and that thou shouldest keep H8104 all H3605 his commandments H4687 ;
|
19. ಸ್ವಕೀಯಜನರಾಗಿ ಇರುವರೆಂದೂ, ನಾನು ನಿರ್ಮಿಸಿದ ಬೇರೆ ಎಲ್ಲಾ ಜನಾಂಗಗಳಿಗಿಂತಲೂ ಇವರಿಗೆ ಹೆಚ್ಚಾದ ಕೀರ್ತಿ ಮತ್ತು ಘನಮಾನಗಳನ್ನು ಉಂಟುಮಾಡುವೆನೆಂದೂ ಇವರು ನನ್ನ ಮಾತಿನ ಮೇರೆಗೆ ತಮ್ಮ ದೇವರಾದ ಯೆಹೋವನಿಗೋಸ್ಕರ ಮೀಸಲಾದ ಜನರಾಗುವರು” ಎಂದು ಒಪ್ಪಿಕೊಂಡಿದ್ದಾನೆ. PE
|
19. And to make H5414 thee high H5945 above H5921 all H3605 nations H1471 which H834 he hath made H6213 , in praise H8416 , and in name H8034 , and in honor H8597 ; and that thou mayest be H1961 a holy H6918 people H5971 unto the LORD H3068 thy God H430 , as H834 he hath spoken H1696 .
|