|
|
1. {ಯೆಹೋವನ ಸೇವಕನ ಗುಣಲಕ್ಷಣಗಳೂ ಕರ್ತವ್ಯವೊ} PS ಇಗೋ, ನನ್ನ ಸೇವಕನು! ಇವನಿಗೆ ನಾನೇ ಆಧಾರ. ಇವನು ನನಗೆ ಇಷ್ಟನು, ನನ್ನ ಪ್ರಾಣಪ್ರಿಯನು. ಇವನಲ್ಲಿ ನನ್ನ ಆತ್ಮವನ್ನು ಇರಿಸಿದ್ದೇನೆ. ಇವನು ಅನ್ಯಜನಗಳಲ್ಲಿಯೂ ಸದ್ಧರ್ಮವನ್ನು ಪ್ರಚುರಪಡಿಸುವನು.
|
1. Behold H2005 my servant H5650 , whom I uphold H8551 ; mine elect H972 , in whom my soul H5315 delighteth H7521 ; I have put H5414 my spirit H7307 upon H5921 him : he shall bring forth H3318 judgment H4941 to the Gentiles H1471 .
|
2. ಇವನು ಕೂಗಾಡುವುದಿಲ್ಲ, ಆರ್ಭಟಿಸುವುದಿಲ್ಲ, ಬೀದಿಗಳಲ್ಲಿ ಇವನ ಧ್ವನಿಯೇ ಕೇಳಿಸುವುದಿಲ್ಲ.
|
2. He shall not H3808 cry H6817 , nor H3808 lift up H5375 , nor H3808 cause his voice H6963 to be heard H8085 in the street H2351 .
|
3. ಜಜ್ಜಿದ ದಂಟನ್ನು ಮುರಿದು ಹಾಕದೆ, ಕಳೆಗುಂದಿದ ದೀಪವನ್ನು ನಂದಿಸದೆ, ಸದ್ಧರ್ಮವನ್ನು ಪ್ರಚುರಪಡಿಸಿ ಸಿದ್ಧಿಗೆ ತರುವನು.
|
3. A bruised H7533 reed H7070 shall he not H3808 break H7665 , and the smoking H3544 flax H6594 shall he not H3808 quench H3518 : he shall bring forth H3318 judgment H4941 unto truth H571 .
|
4. ಲೋಕದಲ್ಲಿ ಸದ್ಧರ್ಮವನ್ನು ಸ್ಥಾಪಿಸುವ ತನಕ ಇವನು ಕಳೆಗುಂದದೆಯೂ, ಜಜ್ಜಿಹೋಗದೆಯೂ ತನ್ನ ಕಾರ್ಯದಲ್ಲಿ ನಿರತನಾಗಿರುವನು. ದ್ವೀಪಗಳು ಇವನ ಧರ್ಮಪ್ರಮಾಣಕ್ಕೆ ಕಾದಿರುವವು.
|
4. He shall not H3808 fail H3543 nor H3808 be discouraged H7533 , till H5704 he have set H7760 judgment H4941 in the earth H776 : and the isles H339 shall wait H3176 for his law H8451 .
|
5. ಆಕಾಶಮಂಡಲವನ್ನು ಉಂಟುಮಾಡಿ ಹರಡಿ ಭೂಮಂಡಲವನ್ನೂ, ಅದರಲ್ಲಿನ ಉತ್ಪತ್ತಿಯನ್ನೂ ವಿಸ್ತರಿಸಿ ಲೋಕದ ಜನರಿಗೆ ಪ್ರಾಣವನ್ನು, ಹೌದು, ಭೂಜನರಿಗೆ ಜೀವಾತ್ಮವನ್ನೂ ದಯಪಾಲಿಸುವ ಯೆಹೋವನೆಂಬ ದೇವರು ಹೀಗೆನ್ನುತ್ತಾನೆ,
|
5. Thus H3541 saith H559 God H410 the LORD H3068 , he that created H1254 the heavens H8064 , and stretched them out H5186 ; he that spread forth H7554 the earth H776 , and that which cometh out H6631 of it ; he that giveth H5414 breath H5397 unto the people H5971 upon H5921 it , and spirit H7307 to them that walk H1980 therein:
|
6. “ಯೆಹೋವನೆಂಬ ನಾನು ನನ್ನ ಧರ್ಮದ ಸಂಕಲ್ಪಾನುಸಾರವಾಗಿ ನಿನ್ನನ್ನು ಕೈಹಿಡಿದು, ಕಾಪಾಡಿ ನನ್ನ ಜನರಿಗೆ ಒಡಂಬಡಿಕೆಯ ಆಧಾರವನ್ನಾಗಿಯೂ, ಅನ್ಯಜನಗಳಿಗೆ ಬೆಳಕನ್ನಾಗಿಯೂ ನೇಮಿಸಿದ್ದೇನೆ.
|
6. I H589 the LORD H3068 have called H7121 thee in righteousness H6664 , and will hold H2388 thine hand H3027 , and will keep H5341 thee , and give H5414 thee for a covenant H1285 of the people H5971 , for a light H216 of the Gentiles H1471 ;
|
7. ನೀನು ಕುರುಡರಿಗೆ ಕಣ್ಣುಕೊಟ್ಟು, ಬಂದಿಗಳನ್ನು ಸೆರೆಯಿಂದಲೂ, ಕತ್ತಲಲ್ಲಿ ಬಿದ್ದವರನ್ನು ಕಾರಾಗೃಹದಿಂದಲೂ ಹೊರಗೆ ತರುವಿ.
|
7. To open H6491 the blind H5787 eyes H5869 , to bring out H3318 the prisoners H616 from the prison H4480 H4525 , and them that sit H3427 in darkness H2822 out of the prison H3608 house H4480 H1004 .
|
8. ನಾನೇ ಯೆಹೋವನು; ಇದೇ ನನ್ನ ನಾಮವು; ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು, ನನ್ನ ಸ್ತೋತ್ರವನ್ನು ವಿಗ್ರಹಗಳ ಪಾಲು ಮಾಡೆನು.
|
8. I H589 am the LORD H3068 : that H1931 is my name H8034 : and my glory H3519 will I not H3808 give H5414 to another H312 , neither my praise H8416 to graven images H6456 .
|
9. ಇಗೋ ಮೊದಲನೆಯ ಸಂಗತಿಗಳು ನೆರವೇರಿವೆ, ಹೊಸ ಸಂಗತಿಗಳನ್ನು ಪ್ರಕಟಿಸುತ್ತೇನೆ. ಅವು ತಲೆದೋರುವುದಕ್ಕೆ ಮೊದಲು ಅವುಗಳನ್ನು ನಿಮಗೆ ತಿಳಿಸುತ್ತೇನೆ.”
|
9. Behold H2009 , the former things H7223 are come to pass H935 , and new things H2319 do I H589 declare H5046 : before H2962 they spring forth H6779 I tell H8085 you of them.
|
10. {ಯೆಹೋವನ ರಕ್ಷಣಾಸಂಕಲ್ಪ} PS ಸಮುದ್ರಪ್ರಯಾಣಿಕರೇ, ಸಕಲಜಲಚರಗಳೇ, ದ್ವೀಪಾಂತರಗಳೇ, ದ್ವೀಪಾಂತರವಾಸಿಗಳೇ, ಯೆಹೋವನ ಘನತೆಗಾಗಿ ನೂತನ ಗೀತೆಯನ್ನು ಹಾಡಿ ದಿಗಂತಗಳಲ್ಲಿಯೂ ಆತನನ್ನು ಕೀರ್ತಿಸಿರಿ.
|
10. Sing H7891 unto the LORD H3068 a new H2319 song H7892 , and his praise H8416 from the end H4480 H7097 of the earth H776 , ye that go down H3381 to the sea H3220 , and all that is therein H4393 ; the isles H339 , and the inhabitants H3427 thereof.
|
11. ಅರಣ್ಯವೂ, ಅಲ್ಲಿನ ಊರುಗಳೂ, ಕೇದಾರಿನವರು ವಾಸಿಸುವ ಗ್ರಾಮಗಳೂ ಆರ್ಭಟಿಸಲಿ, ಸೆಲ ಪಟ್ಟಣದವರು ಹರ್ಷಧ್ವನಿಗೈದು ಪರ್ವತಾಗ್ರಗಳಲ್ಲಿ ಜಯಘೋಷ ಮಾಡಿರಿ.
|
11. Let the wilderness H4057 and the cities H5892 thereof lift up H5375 their voice , the villages H2691 that Kedar H6938 doth inhabit H3427 : let the inhabitants H3427 of the rock H5553 sing H7442 , let them shout H6681 from the top H4480 H7218 of the mountains H2022 .
|
12. ಯೆಹೋವನನ್ನು ಘನಪಡಿಸಿ ದ್ವೀಪಾಂತರಗಳಲ್ಲಿ ಆತನ ಸ್ತೋತ್ರವನ್ನು ಹಬ್ಬಿಸಲಿ.
|
12. Let them give H7760 glory H3519 unto the LORD H3068 , and declare H5046 his praise H8416 in the islands H339 .
|
13. ಯೆಹೋವನು ಶೂರನಂತೆ ಹೊರಟು, ಯುದ್ಧವೀರನ ಹಾಗೆ ತನ್ನ ರೌದ್ರವನ್ನು ಎಬ್ಬಿಸುವನು. ಆರ್ಭಟಿಸಿ ಗರ್ಜಿಸಿ ಶತ್ರುಗಳ ಮೇಲೆ ಬಿದ್ದು ತನ್ನ ಪರಾಕ್ರಮವನ್ನು ತೋರ್ಪಡಿಸುವನು.
|
13. The LORD H3068 shall go forth H3318 as a mighty man H1368 , he shall stir up H5782 jealousy H7068 like a man H376 of war H4421 : he shall cry H7321 , yea H637 , roar H6873 ; he shall prevail H1396 against H5921 his enemies H341 .
|
14. ನಾನು ಬಹುಕಾಲದಿಂದ ಸುಮ್ಮನೆ ಮೌನವಾಗಿ ನನ್ನನ್ನು ಬಿಗಿ ಹಿಡಿದಿದ್ದೆನು. ಈಗ ಹೆರುವವಳಂತೆ ಕೂಗುವೆನು. ನಿಟ್ಟುಸಿರಿನೊಡನೆ ಏದುವೆನು.
|
14. I have long time H4480 H5769 holden my peace H2814 ; I have been still H2790 , and refrained myself H662 : now will I cry H6463 like a travailing woman H3205 ; I will destroy H5395 and devour H7602 at once H3162 .
|
15. ಬೆಟ್ಟಗುಡ್ಡಗಳನ್ನು ನಾಶಪಡಿಸಿ ಅಲ್ಲಿಯ ಮೇವನ್ನೆಲ್ಲಾ ಒಣಗಿಸಿ, ನದಿಗಳನ್ನು ಒಣ ದಿಣ್ಣೆಮಾಡಿ ಕೆರೆಗಳನ್ನು ಬತ್ತಿಸುವೆನು.
|
15. I will make waste H2717 mountains H2022 and hills H1389 , and dry up H3001 all H3605 their herbs H6212 ; and I will make H7760 the rivers H5104 islands H339 , and I will dry up H3001 the pools H98 .
|
16. ಕುರುಡರನ್ನು ತಿಳಿಯದ ಮಾರ್ಗದಲ್ಲಿ ಬರಮಾಡುವೆನು, ಅವರಿಗೆ ಗೊತ್ತಿಲ್ಲದ ದಾರಿಗಳಲ್ಲಿ ಅವರನ್ನು ನಡೆಸುವೆನು, ಅವರೆದುರಿಗೆ ಕತ್ತಲನ್ನು ಬೆಳಕುಮಾಡಿ, ಡೊಂಕನ್ನು ಸರಿಪಡಿಸುವೆನು. ಈ ಕಾರ್ಯಗಳನ್ನು ಬಿಡದೆ ಮಾಡುವೆನು. ನಾನು ಅವರನ್ನು ಕೈ ಬಿಡುವುದಿಲ್ಲ.
|
16. And I will bring H1980 the blind H5787 by a way H1870 that they knew H3045 not H3808 ; I will lead them H1869 in paths H5410 that they have not H3808 known H3045 : I will make H7760 darkness H4285 light H216 before H6440 them , and crooked things H4625 straight H4334 . These H428 things H1697 will I do H6213 unto them , and not H3808 forsake H5800 them.
|
17. ಕೆತ್ತಿದ ವಿಗ್ರಹಗಳಲ್ಲಿ ಭರವಸವಿಟ್ಟು, “ನೀವೇ ನಮ್ಮ ದೇವರುಗಳು” ಎಂದು ಎರಕದ ಬೊಂಬೆಗಳಿಗೆ ಅರಿಕೆಮಾಡುವವರು ಹಿಂದೆ ಬಿದ್ದು ಕೇವಲ ಅವಮಾನಕ್ಕೆ ಈಡಾಗುವರು.
|
17. They shall be turned H5472 back H268 , they shall be greatly ashamed H954 H1322 , that trust H982 in graven images H6459 , that say H559 to the molten images H4541 , Ye H859 are our gods H430 .
|
18. {ಯೆಹೋವನ ಸೇವಕನ ಈಗಿನ ದುಸ್ಥಿತಿ ಹಾಗು ಮುಂದಿನ ಉದ್ಧಾರ} PS ಕಿವುಡರೇ, ಕೇಳಿರಿ! ಕುರುಡರೇ, ನೀವು ಕಣ್ಣಿಟ್ಟು ನೋಡಿರಿ!
|
18. Hear H8085 , ye deaf H2795 ; and look H5027 , ye blind H5787 , that ye may see H7200 .
|
19. ನನ್ನ ಸೇವಕನ ಹೊರತು ಯಾರು ಕುರುಡರು? ನಾನು ಕಳುಹಿಸುವ ದೂತನಂತೆ ಯಾರು ಕಿವುಡರು? ನನ್ನ ಭಕ್ತನ ಹಾಗೆ ಯಾರು ಕುರುಡರು? ಯೆಹೋವನ ಸೇವಕನ ಪ್ರಕಾರ ಅಂಧರು ಯಾರು?
|
19. Who H4310 is blind H5787 , but H3588 H518 my servant H5650 ? or deaf H2795 , as my messenger H4397 that I sent H7971 ? who H4310 is blind H5787 as he that is perfect H7999 , and blind H5787 as the LORD H3068 's servant H5650 ?
|
20. ನೀನು ಬಹು ವಿಷಯಗಳನ್ನು ಕಂಡಿದ್ದರೂ ನಿನಗೆ ಗಮನವಿಲ್ಲ, ಇವನ ಕಿವಿ ತೆರೆದಿದ್ದರೂ ಕೇಳನು.
|
20. Seeing H7200 many things H7227 , but thou observest H8104 not H3808 ; opening H6491 the ears H241 , but he heareth H8085 not H3808 .
|
21. ಯೆಹೋವನು ಧರ್ಮಸ್ವರೂಪನಾಗಿರುವುದರಿಂದ ಧರ್ಮೋಪದೇಶವನ್ನು ಘನಪಡಿಸಿ ಮಹತ್ತಿಗೆ ತರಬೇಕೆಂದು ಇಷ್ಟಪಟ್ಟನು.
|
21. The LORD H3068 is well pleased H2654 for his righteousness' sake H4616 H6664 ; he will magnify H1431 the law H8451 , and make it honorable H142 .
|
22. ಈ ಜನರೇ ಕೊಳ್ಳೆಗೆ ಈಡಾಗಿ ಸೂರೆಹೋಗಿದ್ದಾರೆ. ಎಲ್ಲರೂ ಹಳ್ಳಕೊಳ್ಳಗಳಿಗೆ ಸಿಕ್ಕಿಬಿದ್ದಿದ್ದಾರೆ, ಸೆರೆಮನೆಗಳಲ್ಲಿ ಮುಚ್ಚಲ್ಪಟ್ಟಿದ್ದಾರೆ. ಅವರು ಸುಲಿಗೆಯಾಗಿದ್ದರೂ ಯಾರೂ ಬಿಡಿಸರು, ಸೂರೆಯಾಗಿದ್ದರೂ ಯಾರೂ ಹಿಂದಕ್ಕೆ ಬಿಡು ಎನ್ನುವುದಿಲ್ಲ.
|
22. But this H1931 is a people H5971 robbed H962 and spoiled H8154 ; they are all H3605 of them snared H6351 in holes H2352 , and they are hid H2244 in prison H3608 houses H1004 : they are H1961 for a prey H957 , and none H369 delivereth H5337 ; for a spoil H4933 , and none H369 saith H559 , Restore H7725 .
|
23. ನಿಮ್ಮಲ್ಲಿ ಯಾರು ಈ ಮಾತಿಗೆ ಕಿವಿಗೊಡುವರು? ಯಾರು ಇನ್ನು ಮುಂದೆ ಆಲಿಸಿ ಕೇಳುವರು?
|
23. Who H4310 among you will give ear H238 to this H2063 ? who will hearken H7181 and hear H8085 for the time to come H268 ?
|
24. ಯಾಕೋಬನ್ನು ಸುಲಿಗೆಗೂ, ಇಸ್ರಾಯೇಲನ್ನು ಕೊಳ್ಳೆಗೂ ಕೊಟ್ಟವನು ಯಾರು? ಯಾರ ವಿರುದ್ಧವಾಗಿ ನಾವು ದ್ರೋಹಮಾಡಿದೆವೋ ಆ ಯೆಹೋವನಲ್ಲವೆ. ಅವರು ಆತನ ಮಾರ್ಗದಲ್ಲಿ ನಡೆಯಲಿಲ್ಲ. ಆತನ ಉಪದೇಶವನ್ನು ಕೇಳಲಿಲ್ಲ
|
24. Who H4310 gave H5414 Jacob H3290 for a spoil H4933 , and Israel H3478 to the robbers H962 ? did not H3808 the LORD H3068 , he against whom H2098 we have sinned H2398 ? for they would H14 not H3808 walk H1980 in his ways H1870 , neither H3808 were they obedient H8085 unto his law H8451 .
|
25. ಆದುದರಿಂದ ಆತನು ಅವರ ಮೇಲೆ ತನ್ನ ರೋಷಾಗ್ನಿಯನ್ನೂ, ಯುದ್ಧದ ರೌದ್ರವನ್ನೂ ಸುರಿಸಿದನು. ಎಲ್ಲಾ ಕಡೆಯಿಂದಲೂ ಅವರಿಗೆ ಉರಿಹೊತ್ತಿಕೊಂಡಿತು, ಆದರೆ ಅವರು ತಿಳಿಯಲಿಲ್ಲ. ದಹಿಸಿತು, ಆದರೆ ಅವರು ಲಕ್ಷ್ಯಕ್ಕೆ ತಂದುಕೊಳ್ಳಲಿಲ್ಲ. PE
|
25. Therefore he hath poured H8210 upon H5921 him the fury H2534 of his anger H639 , and the strength H5807 of battle H4421 : and it hath set him on fire H3857 round about H4480 H5439 , yet he knew H3045 not H3808 ; and it burned H1197 him , yet he laid H7760 it not H3808 to H5921 heart H3820 .
|