|
|
1. {ಬಿಳಾಮನ ಮೊದಲನೆಯ ದೈವವಾಣಿ} PS ಆಗ ಬಿಳಾಮನು ಬಾಲಾಕನಿಗೆ, “ಇಲ್ಲಿ ಏಳು ಯಜ್ಞವೇದಿಗಳನ್ನು ಕಟ್ಟಿಸು ಮತ್ತು ಏಳು ಹೋರಿಗಳನ್ನು ಮತ್ತು ಏಳು ಟಗರುಗಳನ್ನು ಸಿದ್ಧಪಡಿಸಬೇಕು” ಎಂದು ಹೇಳಿದನು.
|
1. And Balaam H1109 said H559 unto H413 Balak H1111 , Build H1129 me here H2088 seven H7651 altars H4196 , and prepare H3559 me here H2088 seven H7651 oxen H6499 and seven H7651 rams H352 .
|
2. ಬಾಲಾಕನು ಹಾಗೆಯೇ ಮಾಡಿದನು. ಬಾಲಾಕನು ಮತ್ತು ಬಿಳಾಮನು ಪ್ರತಿ ಯಜ್ಞವೇದಿಯ ಮೇಲೆ ಒಂದು ಹೋರಿಯನ್ನು ಮತ್ತು ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದರು.
|
2. And Balak H1111 did H6213 as H834 Balaam H1109 had spoken H1696 ; and Balak H1111 and Balaam H1109 offered H5927 on every altar H4196 a bullock H6499 and a ram H352 .
|
3. ಬಿಳಾಮನು ಬಾಲಾಕನಿಗೆ, “ನೀನು ಸರ್ವಾಂಗಹೋಮದ ಸ್ಥಳದಲ್ಲೇ ಇರು. ನಾನು ಸ್ವಲ್ಪ ದೂರ ಹೋಗಿ ಬರುತ್ತೇನೆ. ಯೆಹೋವನು ನನಗೆ ಎದುರಾಗಿ ಬಂದು, ಆತನು ನನಗೆ ಏನನ್ನು ಸೂಚಿಸುವನೋ ಅದನ್ನು ನಿನಗೆ ತಿಳಿಸುವೆನು” ಎಂದು ಹೇಳಿ ಮರವಿಲ್ಲದ ಒಂದು ಎತ್ತರವಾದ ಸ್ಥಳಕ್ಕೆ ಹೋದನು. PEPS
|
3. And Balaam H1109 said H559 unto Balak H1111 , Stand H3320 by H5921 thy burnt offering H5930 , and I will go H1980 : peradventure H194 the LORD H3068 will come H7136 to meet H7125 me : and whatsoever H1697 H4100 he showeth H7200 me I will tell H5046 thee . And he went H1980 to a high place H8205 .
|
4. ದೇವರು ಬಿಳಾಮನಿಗೆ ಎದುರಾಗಿ ಬಂದಾಗ ಬಿಳಾಮನು ಆತನಿಗೆ, “ನಾನು ಆ ಏಳು ಯಜ್ಞವೇದಿಗಳನ್ನು ಕಟ್ಟಿಸಿ ಒಂದೊಂದು ಯಜ್ಞವೇದಿಯಲ್ಲಿ ಒಂದು ಹೋರಿಯನ್ನು, ಒಂದು ಟಗರನ್ನು ಸರ್ವಾಂಗಹೋಮವಾಗಿ ಸಮರ್ಪಿಸಿದ್ದೇನೆ” ಎಂದು ಹೇಳಿದನು.
|
4. And God H430 met H7136 H413 Balaam H1109 : and he said H559 unto H413 him , I have prepared H6186 H853 seven H7651 altars H4196 , and I have offered H5927 upon every altar H4196 a bullock H6499 and a ram H352 .
|
5. ಯೆಹೋವನು ಬಿಳಾಮನಿಗೆ ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟು, “ನೀನು ಬಾಲಾಕನ ಬಳಿಗೆ ಹಿಂತಿರುಗಿ ಹೋಗಿ ಹೀಗೆ ಹೇಳಬೇಕು” ಎಂದು ಆಜ್ಞಾಪಿಸಿದನು.
|
5. And the LORD H3068 put H7760 a word H1697 in Balaam H1109 's mouth H6310 , and said H559 , Return H7725 unto H413 Balak H1111 , and thus H3541 thou shalt speak H1696 .
|
6. ಬಿಳಾಮನು ಬಾಲಾಕನ ಬಳಿಗೆ ಹಿಂತಿರುಗಿ ಬಂದಾಗ ಬಾಲಾಕನು ತಾನು ಸರ್ವಾಂಗಹೋಮವನ್ನು ಸಮರ್ಪಿಸಿದ್ದ ಯಜ್ಞವೇದಿಯ ಹತ್ತಿರ ನಿಂತಿದ್ದನು. ಮೋವಾಬ್ಯರ ಪ್ರಧಾನರೆಲ್ಲರೂ ಅವನ ಬಳಿಯಲ್ಲಿದ್ದರು. PEPS
|
6. And he returned H7725 unto H413 him, and, lo H2009 , he stood H5324 by H5921 his burnt sacrifice H5930 , he H1931 , and all H3605 the princes H8269 of Moab H4124 .
|
7. ಆಗ ಬಿಳಾಮನು ಪದ್ಯರೂಪವಾಗಿ ಪ್ರವಾದಿಸಿದ್ದೇನೆಂದರೆ, “ಬಾಲಾಕನು ನನ್ನನ್ನು ಆರಾಮಿನಿಂದ ಕರೆಯಿಸಿದನು, ಮೋವಾಬ್ಯರ ಅರಸನು ಪೂರ್ವ ಪರ್ವತಗಳಿಂದ ನನ್ನನ್ನು ಬರಮಾಡಿದನು, ‘ನೀನು ಬಂದು ಯಾಕೋಬ ವಂಶದವರನ್ನು ನನಗಾಗಿ ಶಪಿಸಬೇಕು.’ ‘ಇಸ್ರಾಯೇಲರನ್ನು ಎದುರಿಸುವುದಕ್ಕೆ ಬಾ.’
|
7. And he took up H5375 his parable H4912 , and said H559 , Balak H1111 the king H4428 of Moab H4124 hath brought H5148 me from H4480 Aram H758 , out of the mountains H4480 H2042 of the east H6924 , saying , Come H1980 , curse H779 me Jacob H3290 , and come H1980 , defy H2194 Israel H3478 .
|
8. ದೇವರು ಶಪಿಸದವನನ್ನು ನಾನು ಹೇಗೆ ಶಪಿಸಲಿ? ಯೆಹೋವನು ಎದುರಿಸದವನನ್ನು ನಾನು ಹೇಗೆ ಎದುರಿಸಲಿ?
|
8. How H4100 shall I curse H6895 , whom God H410 hath not H3808 cursed H6895 ? or how H4100 shall I defy H2194 , whom the LORD H3068 hath not H3808 defied H2194 ?
|
9. ಬಂಡೆಗಳ ಶಿಖರದಿಂದ ನಾನು ಅವರನ್ನು ನೋಡುತ್ತೇನೆ; ಗುಡ್ಡದಿಂದ ಅವರನ್ನು ದೃಷ್ಟಿಸುತ್ತೇನೆ. ಆ ಜನಾಂಗವು ಪ್ರತ್ಯೇಕವಾಗಿ ವಾಸಿಸುವುದು. ಆ ಜನಾಂಗವು ಇತರ ಜನಾಂಗಗಳಂತೆ ಸಾಧಾರಣ ಜನರೆಂದು ಎಣಿಸಲ್ಪಡುವುದಿಲ್ಲ.
|
9. For H3588 from the top H4480 H7218 of the rocks H6697 I see H7200 him , and from the hills H4480 H1389 I behold H7789 him: lo H2005 , the people H5971 shall dwell H7931 alone H910 , and shall not H3808 be reckoned H2803 among the nations H1471 .
|
10. ಯಾಕೋಬನ ಧೂಳನ್ನು ಲೆಕ್ಕಿಸುವುದಕ್ಕೆ ಯಾರಿಂದಾದಿತು? ಇಸ್ರಾಯೇಲಿನ ನಾಲ್ಕನೆಯ ಒಂದು ಭಾಗವನ್ನಾದರೂ ಲೆಕ್ಕಿಸುವುದಕ್ಕೆ ಯಾರಿಂದಾದಿತು? ನೀತಿವಂತನು ಸಾಯುವಂತೆ ನಾನು ಸಾಯಬೇಕು. ಅವರಿಗುಂಟಾಗುವ ಅವಸಾನವು ನನಗೂ ಆಗಬೇಕು!” ಎಂದನು.
|
10. Who H4310 can count H4487 the dust H6083 of Jacob H3290 , and the number H4557 of H853 the fourth H7255 part of Israel H3478 ? Let me H5315 die H4191 the death H4194 of the righteous H3477 , and let my last end H319 be H1961 like his H3644 !
|
11. ಬಾಲಾಕನು ಬಿಳಾಮನಿಗೆ, “ನೀನು ನನಗೆ ಮಾಡಿದ್ದೇನು? ನನ್ನ ಶತ್ರುಗಳನ್ನು ಶಪಿಸುವುದಕ್ಕೆ ಕರೆಯಿಸಿದೆನು. ನೀನು ಅವರನ್ನು ಶಪಿಸದೆ ಆಶೀರ್ವಾದವನ್ನೇ ಮಾಡಿದೆ” ಎಂದು ಹೇಳಿದನು.
|
11. And Balak H1111 said H559 unto H413 Balaam H1109 , What H4100 hast thou done H6213 unto me? I took H3947 thee to curse H6895 mine enemies H341 , and, behold H2009 , thou hast blessed them altogether H1288 H1288 .
|
12. ಅದಕ್ಕೆ ಬಿಳಾಮನು, “ಯೆಹೋವನು ಹೇಳುವ ಮಾತನ್ನೇ ನಾನು ಹೇಳಬೇಕಾಗಿದೆಯಲ್ಲವೇ?” ಎಂದನು. PS
|
12. And he answered H6030 and said H559 , Must I not H3808 take heed H8104 to speak H1696 that H853 which H834 the LORD H3068 hath put H7760 in my mouth H6310 ?
|
13. {ಬಿಳಾಮನ ಎರಡನೆಯ ದೈವವಾಣಿ} PS ಆಗ ಬಾಲಾಕನು, “ದಯಮಾಡಿ ನನ್ನ ಕೂಡ ಇನ್ನೊಂದು ಸ್ಥಳಕ್ಕೆ ಬಾ. ಅಲ್ಲಿಂದ ಅವರನ್ನು ನೋಡಬಹುದು. ಆದರೆ ಅವರೆಲ್ಲರನ್ನು ನೋಡದೆ ಸಮೀಪದಲ್ಲಿ ಇರುವವರನ್ನು ಮಾತ್ರ ನೋಡುವಿ. ಅಲ್ಲಿ ನನಗಾಗಿ ಅವರನ್ನು ಶಪಿಸಬೇಕು” ಎಂದನು.
|
13. And Balak H1111 said H559 unto H413 him, Come H1980 , I pray thee H4994 , with H854 me unto H413 another H312 place H4725 , from whence H834 H4480 H8033 thou mayest see H7200 them : thou shalt see H7200 but H657 the utmost part H7097 of them , and shalt not H3808 see H7200 them all H3605 : and curse H6895 me them from thence H4480 H8033 .
|
14. ಹೀಗೆ ಬಾಲಾಕನು ಬಿಳಾಮನನ್ನು ಪಿಸ್ಗಾ ಬೆಟ್ಟದ ತುದಿಯಲ್ಲಿರುವ ಚೋಫೀಮ್ ಬಯಲು ಎಂಬ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿಯೂ ಏಳು ಯಜ್ಞವೇದಿಗಳನ್ನು ಕಟ್ಟಿಸಿ ಪ್ರತಿಯೊಂದು ಯಜ್ಞವೇದಿಯಲ್ಲಿ ಒಂದು ಹೋರಿಯನ್ನೂ, ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದನು.
|
14. And he brought H3947 him into the field H7704 of Zophim H6839 , to H413 the top H7218 of Pisgah H6449 , and built H1129 seven H7651 altars H4196 , and offered H5927 a bullock H6499 and a ram H352 on every altar H4196 .
|
15. ಬಿಳಾಮನು ಬಾಲಾಕನಿಗೆ, “ನೀನು ಇಲ್ಲೇ ಸರ್ವಾಂಗಹೋಮ ಮಾಡಿರುವ ಸ್ಥಳದಲ್ಲಿ ನಿಂತುಕೋ. ನಾನು ಆ ಕಡೆಗೆ ಹೋಗಿ ಯೆಹೋವನನ್ನು ಎದುರುಗೊಳ್ಳುವೆನು” ಎಂದು ಹೇಳಿದನು. PEPS
|
15. And he said H559 unto H413 Balak H1111 , Stand H3320 here H3541 by H5921 thy burnt offering H5930 , while I H595 meet H7136 the LORD yonder H3541 .
|
16. ಯೆಹೋವನು ಬಿಳಾಮನಿಗೆ ಎದುರಾಗಿ ಬಂದು ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟನು. ಆಗ ಅವನು ಹೇಳಿದ್ದೇನೆಂದರೆ, “ನೀನು ಬಾಲಾಕನ ಬಳಿಗೆ ತಿರುಗಿ ಹೋಗಿ ಹೀಗೆ ಹೇಳಬೇಕು” ಎಂದನು.
|
16. And the LORD H3068 met H7136 H413 Balaam H1109 , and put H7760 a word H1697 in his mouth H6310 , and said H559 , Go again H7725 unto H413 Balak H1111 , and say H1696 thus H3541 .
|
17. ಬಿಳಾಮನು ಬಾಲಾಕನ ಬಳಿಗೆ ಬಂದಾಗ ಬಾಲಾಕನು ತಾನು ಸರ್ವಾಂಗಹೋಮವನ್ನು ಸಮರ್ಪಿಸಿದ ವೇದಿಯ ಹತ್ತಿರ ನಿಂತಿದ್ದನು. ಮೋವಾಬ್ಯರ ಪ್ರಧಾನರು ಅವನ ಸಂಗಡ ಇದ್ದರು. ಬಾಲಾಕನು, “ಯೆಹೋವನು ಏನು ಹೇಳಿದ್ದಾನೆ?” ಎಂದನು.
|
17. And when he came H935 to H413 him, behold H2009 , he stood H5324 by H5921 his burnt offering H5930 , and the princes H8269 of Moab H4124 with H854 him . And Balak H1111 said H559 unto him, What H4100 hath the LORD H3068 spoken H1696 ?
|
18. ಬಿಳಾಮನು ಪದ್ಯರೂಪವಾಗಿ ಪ್ರವಾದಿಸಿದ್ದೇನೆಂದರೆ, “ಬಾಲಾಕನೇ, ಎದ್ದು ಕಿವಿಗೊಟ್ಟು ಕೇಳು. ಚಿಪ್ಪೋರನ ಮಗನೇ, ನನ್ನ ಮಾತನ್ನು ಲಾಲಿಸು.
|
18. And he took up H5375 his parable H4912 , and said H559 , Rise up H6965 , Balak H1111 , and hear H8085 ; hearken H238 unto H5704 me , thou son H1121 of Zippor H6834 :
|
19. ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ. ಮಾನವನಂತೆ ಮನಸ್ಸನ್ನು ಬದಲಾಯಿಸುವವನಲ್ಲ. ತಾನು ಹೇಳಿದ ಪ್ರಕಾರ ನಡೆಯದಿರುತ್ತಾನೆಯೇ? ಮಾತುಕೊಟ್ಟ ನಂತರ ನೆರವೇರಿಸುವುದಿಲ್ಲವೋ?
|
19. God H410 is not H3808 a man H376 , that he should lie H3576 ; neither the son H1121 of man H120 , that he should repent H5162 : hath he H1931 said H559 , and shall he not H3808 do H6213 it ? or hath he spoken H1696 , and shall he not H3808 make it good H6965 ?
|
20. ಅವರನ್ನು ಆಶೀರ್ವದಿಸುವುದಕ್ಕೆ ನನಗೆ ಅಪ್ಪಣೆಯಾಯಿತು. ಆತನು ಆಶೀರ್ವದಿಸಿದ ನಂತರ ನಾನು ಬದಲಾಯಿಸಲಾರೆನು.
|
20. Behold H2009 , I have received H3947 commandment to bless H1288 : and he hath blessed H1288 ; and I cannot H3808 reverse H7725 it.
|
21. ಈ ಯಾಕೋಬನಲ್ಲಿ ಯಾವ ಆಪತ್ತಿನ ಸೂಚನೆಯೂ ಕಾಣುವುದಿಲ್ಲ ಅಥವಾ ಇಸ್ರಾಯೇಲರಿಗೆ ಯಾವ ವಿಪತ್ತಿನ ಸೂಚನೆಯೂ ತೋರುವುದಿಲ್ಲ. ಅವರಿಗೆ ದೇವರಾಗಿರುವ ಯೆಹೋವನು ಅವರ ಸಂಗಡ ಇದ್ದಾನೆ, ಅವರು ತಮ್ಮ ಅರಸನಿಗಾಗಿ ಮಾಡುವ ಜಯ ಘೋಷವು ಕೇಳಿಸುತ್ತ ಇದೆ.
|
21. He hath not H3808 beheld H5027 iniquity H205 in Jacob H3290 , neither H3808 hath he seen H7200 perverseness H5999 in Israel H3478 : the LORD H3068 his God H430 is with H5973 him , and the shout H8643 of a king H4428 is among them.
|
22. ಅವರನ್ನು ಐಗುಪ್ತ ದೇಶದಿಂದ ಕರೆದುಕೊಂಡು ಬಂದವನು ದೇವರೇ, ಅವರು ಕಾಡುಕೋಣದಷ್ಟು ಬಲವುಳ್ಳವರು.
|
22. God H410 brought them out H3318 of Egypt H4480 H4714 ; he hath as it were the strength H8443 of a unicorn H7214 .
|
23. ಯಾಕೋಬರಿಗೆ ವಿರುದ್ಧವಾದ ಶಕುನವಿಲ್ಲ, ಇಸ್ರಾಯೇಲರಲ್ಲಿ ಕಣಿ ಕೇಳುವುದಿಲ್ಲ. ಬದಲಾಗಿ, ಯಾಕೋಬ ಮತ್ತು ಇಸ್ರಾಯೇಲರ ವಿಷಯದಲ್ಲಿ ಹೀಗೆ ಹೇಳುವರು. ‘ದೇವರು ಮಾಡುವ ಕೆಲಸವನ್ನು ನೋಡಿರಿ!’
|
23. Surely H3588 there is no H3808 enchantment H5173 against Jacob H3290 , neither H3808 is there any divination H7081 against Israel H3478 : according to this time H6256 it shall be said H559 of Jacob H3290 and of Israel H3478 , What H4100 hath God H410 wrought H6466 !
|
24. ಇಗೋ, ಜನಾಂಗದವರು ಎದ್ದು ಪ್ರಾಯದ ಸಿಂಹದಂತೆ ನಿಂತಿದ್ದಾರೆ; ಸಿಂಹವು ಮೃಗವನ್ನು ಕೊಂದು ಮಾಂಸವನ್ನು ತಿಂದು ತೃಪ್ತಿಹೊಂದದ ಹೊರತು ಮಲಗುವುದಿಲ್ಲ ತಾನು ಬೇಟೆಯಾಡಿದ ರಕ್ತವನ್ನು ಕುಡಿದು ಮಲಗುವುದು.”
|
24. Behold H2005 , the people H5971 shall rise up H6965 as a great lion H3833 , and lift up himself H5375 as a young lion H738 : he shall not H3808 lie down H7901 until H5704 he eat H398 of the prey H2964 , and drink H8354 the blood H1818 of the slain H2491 .
|
25. ಆಗ ಬಾಲಾಕನು ಬಿಳಾಮನಿಗೆ, “ನೀನು ಅವರನ್ನು ಶಪಿಸಲೂ ಬೇಡ; ಆಶೀರ್ವದಿಸಲೂ ಬೇಡ” ಎಂದು ಹೇಳಿದನು.
|
25. And Balak H1111 said H559 unto H413 Balaam H1109 , Neither H1571 H3808 curse them at all H6895 H6895 , nor H1571 H3808 bless them at all H1288 H1288 .
|
26. ಅದಕ್ಕೆ ಬಿಳಾಮನು ಬಾಲಾಕನಿಗೆ ಉತ್ತರವಾಗಿ, “ಯೆಹೋವನು ಆಜ್ಞಾಪಿಸುವುದನ್ನೆಲ್ಲಾ ನಾನು ಹೇಳಬೇಕೆಂದು ನಿನಗೆ ಹೇಳಲಿಲ್ಲವೇ?” ಎಂದನು. PS
|
26. But Balaam H1109 answered H6030 and said H559 unto H413 Balak H1111 , Told H1696 H413 not H3808 I thee, saying H559 , All H3605 that H834 the LORD H3068 speaketh H1696 , that I must do H6213 ?
|
27. {ಬಿಳಾಮನ ಮೂರನೆಯ ದೈವವಾಣಿ} PS ತರುವಾಯ ಬಾಲಾಕನು ಬಿಳಾಮನಿಗೆ, “ಬೇರೊಂದು ಸ್ಥಳಕ್ಕೆ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಬಾ; ಅಲ್ಲಿಯಾದರೂ ನೀನು ಅವರನ್ನು ಶಪಿಸುವುದಕ್ಕೆ ದೇವರು ಅನುಮತಿ ಕೊಡಬಹುದು” ಎಂದು ಹೇಳಿದನು. PEPS
|
27. And Balak H1111 said H559 unto H413 Balaam H1109 , Come H1980 , I pray thee H4994 , I will bring H3947 thee unto H413 another H312 place H4725 ; peradventure H194 it will please H3474 H5869 God H430 that thou mayest curse H6895 me them from thence H4480 H8033 .
|
28. ಆದಕಾರಣ ಬಾಲಾಕನು ಬಿಳಾಮನನ್ನು ಪೆಗೋರ್ ಎಂಬ ಬೆಟ್ಟದ ತುದಿಗೆ ಕರೆದುಕೊಂಡು ಹೋದನು. ಆ ಬೆಟ್ಟದ ಮೇಲಿನಿಂದ ಕೆಳಗಿರುವ ಯೆಷೀಮೋನ್ ಎಂಬ ಅರಣ್ಯಪ್ರದೇಶವು ಕಾಣಿಸುತ್ತದೆ.
|
28. And Balak H1111 brought H3947 H853 Balaam H1109 unto the top H7218 of Peor H6465 , that looketh H8259 toward H5921 H6440 Jeshimon H3452 .
|
29. ಆಗ ಬಿಳಾಮನು ಬಾಲಾಕನಿಗೆ, “ಇಲ್ಲಿಯೂ ಏಳು ಯಜ್ಞವೇದಿಗಳನ್ನು ಕಟ್ಟಿಸಿ ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ ಸಿದ್ಧಮಾಡು” ಎಂದು ಹೇಳಿದನು
|
29. And Balaam H1109 said H559 unto H413 Balak H1111 , Build H1129 me here H2088 seven H7651 altars H4196 , and prepare H3559 me here H2088 seven H7651 bullocks H6499 and seven H7651 rams H352 .
|
30. ಬಿಳಾಮನ ಅಪ್ಪಣೆಯ ಪ್ರಕಾರ ಬಾಲಾಕನು ಪ್ರತಿಯೊಂದು ಯಜ್ಞ ವೇದಿಯಲ್ಲಿ ಒಂದು ಹೋರಿಯನ್ನೂ. ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದನು. PE
|
30. And Balak H1111 did H6213 as H834 Balaam H1109 had said H559 , and offered H5927 a bullock H6499 and a ram H352 on every altar H4196 .
|