|
|
1. {ಎಫೆಸ ಪಟ್ಟಣದಲ್ಲಿ ಪೌಲನ ಸೇವೆ} PS ಅಪೊಲ್ಲೋಸನು ಕೊರಿಂಥದಲ್ಲಿದ್ದಾಗ ಪೌಲನು ಮಲೆನಾಡಿನಲ್ಲಿ ಸಂಚಾರಮಾಡಿ ಎಫೆಸಕ್ಕೆ ಬಂದು ಕೆಲವು ಮಂದಿ ಶಿಷ್ಯರನ್ನು ಕಂಡು;
|
1. And G1161 it came to pass G1096 , that , while Apollos G625 was G1511 at G1722 Corinth G2882 , Paul G3972 having passed through G1330 the G3588 upper G510 coasts G3313 came G2064 to G1519 Ephesus G2181 : and G2532 finding G2147 certain G5100 disciples G3101 ,
|
2. “ನೀವು ನಂಬಿದಾಗ ಪವಿತ್ರಾತ್ಮವರವನ್ನು ಹೊಂದಿದಿರೋ?” ಎಂದು ಅವರನ್ನು ಕೇಳಲು ಅವರು ಅವನಿಗೆ; “ಇಲ್ಲ, ಪವಿತ್ರಾತ್ಮವರವು ಉಂಟೆಂಬುದನ್ನೇ ನಾವು ಕೇಳಿಲ್ಲ” ಅಂದರು.
|
2. He said G2036 unto G4314 them G846 , Have G1487 ye received G2983 the Holy G40 Ghost G4151 since ye believed G4100 ? And G1161 they G3588 said G2036 unto G4314 him G846 , We have not so much as G235 G3761 heard G191 whether G1487 there be G2076 any Holy G40 Ghost G4151 .
|
3. ಅವನು; “ನೀವು ಏನನ್ನು ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡಿರಿ” ಎಂದು ಕೇಳಿದ್ದಕ್ಕೆ ಅವರು; “ಯೋಹಾನನ ಬೋಧನೆಯನ್ನು ನಂಬಿ ದೀಕ್ಷಾಸ್ನಾನಮಾಡಿಸಿಕೊಂಡೆವು” ಅಂದರು.
|
3. And G5037 he said G2036 unto G4314 them G846 , Unto G1519 what G5101 then G3767 were ye baptized G907 ? And G1161 they G3588 said G2036 , Unto G1519 John G2491 's baptism G908 .
|
4. ಅದಕ್ಕೆ ಪೌಲನು; “ಯೋಹಾನನು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡವರಿಗೆ ದೀಕ್ಷಾಸ್ನಾನ ಮಾಡಿಸಿ ತನ್ನ ಹಿಂದೆ ಬರುವ ಯೇಸುವಿನಲ್ಲಿ ನಂಬಿಕೆಯಿಡಬೇಕೆಂಬುದಾಗಿ ಜನರಿಗೆ ಹೇಳಿದನು” ಎಂದು ಹೇಳಲು,
|
4. Then G1161 said G2036 Paul G3972 , John G2491 verily G3303 baptized G907 with the baptism G908 of repentance G3341 , saying G3004 unto the G3588 people G2992 , that G2443 they should believe G4100 on G1519 him which should come G2064 after G3326 him G846 , that is G5123 , on G1519 Christ G5547 Jesus G2424 .
|
5. ಅವರು ಆ ಮಾತನ್ನು ಕೇಳಿ ಕರ್ತನಾದ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡರು.
|
5. When G1161 they heard G191 this, they were baptized G907 in G1519 the G3588 name G3686 of the G3588 Lord G2962 Jesus G2424 .
|
6. ಪೌಲನು ಅವರ ಮೇಲೆ ಕೈಗಳನ್ನಿಡಲು ಪವಿತ್ರಾತ್ಮನು ಅವರ ಮೇಲೆ ಇಳಿದುಬಂದನು; ಅವರು ನಾನಾ ಭಾಷೆಗಳನ್ನಾಡಿದರು, ಪ್ರವಾದಿಸಿದರು.
|
6. And G2532 when Paul G3972 had laid G2007 his hands G5495 upon them G846 , the G3588 Holy G40 Ghost G4151 came G2064 on G1909 them G846 ; and G5037 they spake G2980 with tongues G1100 , and G2532 prophesied G4395 .
|
7. ಅಲ್ಲಿ ಸುಮಾರು ಹನ್ನೆರಡು ಮಂದಿ ಗಂಡಸರಿದ್ದರು. PEPS
|
7. And G1161 all G3956 the men G435 were G2258 about G5616 twelve G1177 .
|
8. ಆ ಪಟ್ಟಣದಲ್ಲಿ ಪೌಲನು ಸಭಾಮಂದಿರದೊಳಗೆ ಹೋಗಿ, ಮೂರು ತಿಂಗಳು ಅಲ್ಲೇ ದೇವರ ರಾಜ್ಯದ ವಿಷಯಗಳನ್ನು ಕುರಿತು, ವಾದಿಸುತ್ತಾ ಜನರನ್ನು ಒಡಂಬಡಿಸುತ್ತಾ ಧೈರ್ಯದಿಂದ ಮಾತನಾಡಿದನು.
|
8. And G1161 he went G1525 into G1519 the G3588 synagogue G4864 , and spake boldly G3955 for the space of G1909 three G5140 months G3376 , disputing G1256 and G2532 persuading G3982 the things G3588 concerning G4012 the G3588 kingdom G932 of God G2316 .
|
9. ಕೆಲವರು ತಮ್ಮ ಮನಸ್ಸುಗಳನ್ನು ಕಠಿಣಮಾಡಿಕೊಂಡು ಒಡಂಬಡದೆ ಗುಂಪುಕೂಡಿದ ಜನರ ಮುಂದೆ ಈ ಮಾರ್ಗವು ಕೆಟ್ಟದ್ದೆಂದು ಹೇಳಲು ಅವನು ಅವರನ್ನು ಬಿಟ್ಟುಹೋಗಿ ಶಿಷ್ಯರನ್ನು ಬೇರೆಮಾಡಿ ತುರನ್ನ ಎಂಬುವನ ತರ್ಕಶಾಲೆಯಲ್ಲಿ ಪ್ರತಿದಿನವೂ ವಾದಿಸಿದನು.
|
9. But G1161 when G5613 divers G5100 were hardened G4645 , and G2532 believed not G544 , but spake evil G2551 of that way G3598 before G1799 the G3588 multitude G4128 , he departed G868 from G575 them G846 , and separated G873 the G3588 disciples G3101 , disputing G1256 daily G2596 G2250 in G1722 the G3588 school G4981 of one G5100 Tyrannus G5181 .
|
10. ಇದು ಎರಡು ವರ್ಷಗಳ ವರೆಗೂ ನಡೆದಿದ್ದರಿಂದ ಅಸ್ಯಸೀಮೆಯಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರೂ, ಗ್ರೀಕರೂ, ಕರ್ತನ ವಾಕ್ಯವನ್ನು ಕೇಳಿದರು. PEPS
|
10. And G1161 this G5124 continued G1096 by the space of G1909 two G1417 years G2094 ; so that G5620 all G3956 they which dwelt G2730 in Asia G773 heard G191 the G3588 word G3056 of the G3588 Lord G2962 Jesus G2424 , both G5037 Jews G2453 and G2532 Greeks G1672 .
|
11. ದೇವರು ಪೌಲನ ಕೈಯಿಂದ ವಿಶೇಷವಾದ ಮಹತ್ಕಾರ್ಯಗಳನ್ನು ನಡಿಸುತ್ತಾ ಇದ್ದುದರಿಂದ,
|
11. And G5037 God G2316 wrought G4160 special G3756 G5177 miracles G1411 by G1223 the G3588 hands G5495 of Paul G3972 :
|
12. ಜನರು ಅವನ ಮೈಮೇಲಿನಿಂದ ಕೈವಸ್ತ್ರಗಳನ್ನೂ, ರುಮಾಲುಗಳನ್ನೂ ತಂದು ರೋಗಿಗಳ ಮೇಲೆ ಹಾಕಲು ಅವರ ರೋಗಗಳು ವಾಸಿಯಾದವು, ದುರಾತ್ಮಗಳೂ ಬಿಟ್ಟುಹೋದವು.
|
12. So that G5620 G2532 from G575 his G846 body G5559 were brought G2018 unto G1909 the G3588 sick G770 handkerchiefs G4676 or G2228 aprons G4612 , and G2532 the G3588 diseases G3554 departed G525 from G575 them G846 , and G5037 the G3588 evil G4190 spirits G4151 went G1831 out of G575 them G846 .
|
13. ದುರಾತ್ಮಗಳನ್ನೂ ಬಿಡಿಸುವವರೆನಿಸಿಕೊಂಡು, ದೇಶಸಂಚಾರಿಗಳಾದ ಯೆಹೂದ್ಯರಿದ್ದರು. ಅವರಲ್ಲಿ ಕೆಲವರು ದುರಾತ್ಮ ಪೀಡಿತರ ಮೇಲೆ; “ಪೌಲನು ಸಾರುವ ಯೇಸುವಿನ ಆಣೆ” ಎಂದು ಹೇಳಿ ಕರ್ತನಾದ ಯೇಸುವಿನ ಹೆಸರನ್ನು ಪ್ರಯೋಗಮಾಡುವುದಕ್ಕೆ ತೊಡಗಿದರು.
|
13. Then G1161 certain G5100 of G575 the G3588 vagabond G4022 Jews G2453 , exorcists G1845 , took upon G2021 them to call G3687 over G1909 them which had G2192 evil G4190 spirits G4151 the G3588 name G3686 of the G3588 Lord G2962 Jesus G2424 , saying G3004 , We adjure G3726 you G5209 by Jesus G2424 whom G3739 Paul G3972 preacheth G2784 .
|
14. ಮುಖ್ಯಯಾಜಕ ಸ್ಕೇವನೆಂಬ ಒಬ್ಬ ಯೆಹೂದ್ಯನ ಏಳು ಮಂದಿ ಮಕ್ಕಳೂ ಹಾಗೆ ಮಾಡುತ್ತಿದ್ದರು.
|
14. And G1161 there were G2258 seven G2033 sons G5207 of one Sceva G4630 , a Jew G2453 , and chief of the priests G749 , which did G4160 so G5124 .
|
15. ಆದರೆ ದುರಾತ್ಮವು ಅವರಿಗೆ; “ಯೇಸುವಿನ ಗುರುತು ನನಗುಂಟು, ಪೌಲನನ್ನೂ ಬಲ್ಲೆನು, ಆದರೆ ನೀವು ಯಾರು?” ಎಂದು ಹೇಳಿತು;
|
15. And G1161 the G3588 evil G4190 spirit G4151 answered G611 and said G2036 , Jesus G2424 I know G1097 , and G2532 Paul G3972 I know G1987 ; but G1161 who G5101 are G2075 ye G5210 ?
|
16. ಮತ್ತು ದುರಾತ್ಮ ಹಿಡಿದಿದ್ದ ಆ ಮನುಷ್ಯನು ಅವರ ಮೇಲೆ ಹಾರಿ ಬಿದ್ದು, ಅವರನ್ನೂ ಸೋಲಿಸಿ ಸದೆಬಡಿದಿದ್ದರಿಂದ ಅವರು ಗಾಯಗೊಂಡು ಬೆತ್ತಲೆಯಾಗಿ ಆ ಮನೆಯೊಳಗಿಂದ ಓಡಿಹೋದರು.
|
16. And G2532 the G3588 man G444 in G1722 whom G3739 the G3588 evil G4190 spirit G4151 was G2258 leaped G2177 on G1909 them G846 , and G2532 overcame G2634 them G846 , and prevailed G2480 against G2596 them G846 , so that G5620 they fled G1628 out of G1537 that G1565 house G3624 naked G1131 and G2532 wounded G5135 .
|
17. ಈ ಸಂಗತಿಯು ಎಫೆಸದಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರಿಗೂ, ಗ್ರೀಕರಿಗೂ ತಿಳಿದುಬಂದಾಗ ಅವರೆಲ್ಲರೂ ಭಯಭೀತರಾದರು. ಮತ್ತು ಕರ್ತನಾದ ಯೇಸುವಿನ ಹೆಸರು ಪ್ರಖ್ಯಾತಿಗೆ ಬಂದಿತು.
|
17. And G1161 this G5124 was G1096 known G1110 to all G3956 the Jews G2453 and G2532 Greeks G1672 also G5037 dwelling G2730 at Ephesus G2181 ; and G2532 fear G5401 fell G1968 on G1909 them G846 all G3956 , and G2532 the G3588 name G3686 of the G3588 Lord G2962 Jesus G2424 was magnified G3170 .
|
18. ಆತನನ್ನು ನಂಬಿದವರಲ್ಲಿ ಅನೇಕರು ಪಶ್ಚಾತ್ತಾಪದಿಂದ ಬಂದು ತಮ್ಮ ತಮ್ಮ ಪಾಪಕೃತ್ಯಗಳನ್ನು ಒಪ್ಪಿಕೊಂಡರು.
|
18. And G5037 many G4183 that believed G4100 came G2064 , and confessed G1843 , and G2532 showed G312 their G848 deeds G4234 .
|
19. ಇದಲ್ಲದೆ ಮಾಟ ಮಂತ್ರಗಳನ್ನು ನಡಿಸಿದವರಲ್ಲಿ ಅನೇಕರು ತಮ್ಮ ಮಾಟಮಂತ್ರಗಳ ಪುಸ್ತಕಗಳನ್ನು ತಂದು, ಕೂಡಿಸಿ ಎಲ್ಲರ ಮುಂದೆ ಸುಟ್ಟುಬಿಟ್ಟರು. ಅವುಗಳ ಮೌಲ್ಯವನ್ನು ಲೆಕ್ಕಮಾಡಿ ಐವತ್ತು ಸಾವಿರ ಬೆಳ್ಳಿ ನಾಣ್ಯ ಆಯಿತೆಂದು ತಿಳಿದುಕೊಂಡರು.
|
19. G1161 Many G2425 of them also which used G4238 curious arts G4021 brought their books together G4851 G976 , and burned G2618 them before G1799 all G3956 men : and G2532 they counted G4860 the G3588 price G5092 of them G846 , and G2532 found G2147 it fifty thousand G4002 G3461 pieces of silver G694 .
|
20. ಈ ರೀತಿಯಾಗಿ ಕರ್ತನ ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಯಿತು. PEPS
|
20. So G3779 mightily G2596 G2904 grew G837 the G3588 word G3056 of God G2962 and G2532 prevailed G2480 .
|
21. ಈ ಸಂಗತಿಗಳು ಆದ ಮೇಲೆ ಪೌಲನು ತಾನು ಮಕೆದೋನ್ಯದಲ್ಲಿಯೂ, ಅಖಾಯದಲ್ಲಿಯೂ ಸಂಚಾರಮಾಡಿ ಯೆರೂಸಲೇಮಿಗೆ ಹೋಗಬೇಕೆಂದು ಮನಸ್ಸಿನಲ್ಲಿ ಯೋಚಿಸಿ; “ಅಲ್ಲಿಗೆ ಹೋದ ಮೇಲೆ ರೋಮಾಪುರವನ್ನು ಸಹ ನೋಡಬೇಕೆಂದು” ಹೇಳಿದನು.
|
21. G1161 After G5613 these things G5023 were ended G4137 , Paul G3972 purposed G5087 in G1722 the G3588 spirit G4151 , when he had passed through G1330 Macedonia G3109 and G2532 Achaia G882 , to go G4198 to G1519 Jerusalem G2419 , saying G2036 , After I G3165 have been G1096 there G1563 , I G3165 must G1163 also G2532 see G1492 Rome G4516 .
|
22. ಆದರೆ ಅವನು ತನಗೆ ಸೇವೆಮಾಡುವವರಲ್ಲಿ ಇಬ್ಬರಾದ ತಿಮೊಥೆಯನನ್ನೂ ಮತ್ತು ಎರಸ್ತನನ್ನೂ ಮಕೆದೋನ್ಯಕ್ಕೆ ಕಳುಹಿಸಿ ತಾನು ಆಸ್ಯಸೀಮೆಯಲ್ಲಿ ಕೆಲವು ಕಾಲ ತಂಗಿದನು. PS
|
22. So G1161 he sent G649 into G1519 Macedonia G3109 two G1417 of them that ministered G1247 unto him G846 , Timothy G5095 and G2532 Erastus G2037 ; but he G846 himself stayed G1907 in G1519 Asia G773 for a season G5550 .
|
23. {ಎಫೆಸ ಪಟ್ಟಣದಲ್ಲಿ ದಂಗೆ} PS ಆ ಕಾಲದಲ್ಲಿ ಈ ಮಾರ್ಗದ ವಿಷಯವಾಗಿ ಬಹಳ ಗಲಭೆ ಹುಟ್ಟಿತು.
|
23. And G1161 the same G2596 G1565 time G2540 there arose G1096 no G3756 small G3641 stir G5017 about G4012 that way G3598 .
|
24. ಹೇಗೆಂದರೆ, ದೇಮೇತ್ರಿಯನೆಂಬ ಒಬ್ಬ ಅಕ್ಕಸಾಲಿಗನು ಬೆಳ್ಳಿಯಿಂದ ಅರ್ತೆಮೀ ದೇವಿಯ ಗುಡಿಯಂತೆ ಸಣ್ಣಸಣ್ಣ ಗುಡಿಗಳನ್ನು ಮಾಡಿಸುವವನಾಗಿದ್ದು ಆ ಕಸುಬಿನವರಿಗೆ ಬಹಳ ಲಾಭವನ್ನು ಕೊಡುತ್ತಿದ್ದನು.
|
24. For G1063 a certain G5100 man named G3686 Demetrius G1216 , a silversmith G695 , which made G4160 silver G693 shrines G3485 for Diana G735 , brought G3930 no G3756 small G3641 gain G2039 unto the G3588 craftsmen G5079 ;
|
25. ಅವನು ಅವರನ್ನೂ ಮತ್ತು ಆ ಕಸುಬಿಗೆ ಸಂಬಂಧಪಟ್ಟ ಕೆಲಸದವರನ್ನೂ ಒಟ್ಟಿಗೆ ಕರೆಸಿ ಅವರಿಗೆ; “ಜನರೇ, ಈ ಕೆಲಸದಿಂದ ನಮಗೆ ಐಶ್ವರ್ಯ ಉಂಟಾಗುತ್ತದೆಂದು ನೀವು ಬಲ್ಲಿರಿ.
|
25. Whom G3739 he called together G4867 with G2532 the G3588 workmen G2040 of G4012 like occupation G5108 , and said G2036 , Sirs G435 , ye know G1987 that G3754 by G1537 this G5026 craft G2039 we have G2076 our G2257 wealth G2142 .
|
26. ಆದರೆ ಕೈಯಿಂದ ಮಾಡಿದ ಮೂರ್ತಿಗಳು ದೇವರುಗಳಲ್ಲವೆಂದು ಆ ಪೌಲನು ಹೇಳಿ ಎಫೆಸದಲ್ಲಿ ಮಾತ್ರವಲ್ಲದೆ ಹೆಚ್ಚುಕಡಿಮೆ ಆಸ್ಯಸೀಮೆಯಲ್ಲೆಲ್ಲಾ ಬಹಳ ಜನರನ್ನು ಒಡಂಬಡಿಸಿ ತಿರುಗಿಸಿಬಿಟ್ಟಿದ್ದಾನೆ ಎಂಬುದನ್ನು ನೀವು ನೋಡುತ್ತಿದ್ದೀರಿ, ಕೇಳುತ್ತಿದ್ದೀರಿ.
|
26. Moreover G2532 ye see G2334 and G2532 hear G191 , that G3754 not G3756 alone G3440 at Ephesus G2181 , but G235 almost G4975 throughout all G3956 Asia G773 , this G3778 Paul G3972 hath persuaded G3982 and turned away G3179 much G2425 people G3793 , saying G3004 that G3754 they be G1526 no G3756 gods G2316 , which G3588 are made G1096 with G1223 hands G5495 :
|
27. ಇದರಿಂದ ನಮ್ಮ ಉದ್ಯೋಗಕ್ಕೆ ಕುಂದು ಬರುವುದಲ್ಲದೆ ಅರ್ತೆಮೀ ಮಹಾದೇವಿಯ ದೇವಸ್ಥಾನವು ಗಣನೆಗೆ ಬಾರದೆಹೋಗುವ ಹಾಗೆಯೂ, ಎಲ್ಲಾ ಆಸ್ಯಸೀಮೆಯೂ, ಲೋಕವೆಲ್ಲಾ ಪೂಜಿಸುವ ಈ ದೇವಿಯ ವೈಭವಕ್ಕೆ ಹಾನಿಬರುವ ಹಾಗೆ ಗಂಡಾಂತರವುಂಟಾಗುತ್ತದೆಂದು” ಹೇಳಿದನು. PEPS
|
27. So that G1161 not G3756 only G3440 this G5124 our G2254 craft G3313 is in danger G2793 to be set at naught G2064 G1519 G557 ; but G235 also G2532 that the G3588 temple G2411 of the G3588 great G3173 goddess G2299 Diana G735 should be despised G1519 G3762 G3049 , and G1161 her G848 magnificence G3168 should G3195 be G2532 destroyed G2507 , whom G3739 all G3650 Asia G773 and G2532 the G3588 world G3625 worshippeth G4576 .
|
28. ಅವರು ಈ ಮಾತುಗಳನ್ನು ಕೇಳಿ ಕೋಪಗೊಂಡು; “ಎಫೆಸದವರ ಅರ್ತೆಮೀದೇವಿ ಮಹಾದೇವಿ” ಎಂದು ಅರ್ಭಟಿಸಿದರು.
|
28. And G1161 when they heard G191 these sayings, they were G1096 full G4134 of wrath G2372 , and G2532 cried out G2896 , saying G3004 , Great G3173 is Diana G735 of the Ephesians G2180 .
|
29. ಆಗ ಊರಿನಲ್ಲೆಲ್ಲಾ ಗಲಿಬಿಲಿಯಾಯಿತು. ಪ್ರಯಾಣದಲ್ಲಿ ಪೌಲನಿಗೆ ಜೊತೆಯವರಾಗಿದ್ದ ಮಕೆದೋನ್ಯದ ಗಾಯನನ್ನೂ, ಅರಿಸ್ತಾರ್ಕನನ್ನೂ ಜನರು ಹಿಡಿದುಕೊಂಡು ಒಟ್ಟಾಗಿ ನಾಟಕ ಶಾಲೆಯೊಳಗೆ ನುಗ್ಗಿದರು.
|
29. And G2532 the G3588 whole G3650 city G4172 was filled G4130 with confusion G4799 : and G5037 having caught G4884 Gaius G1050 and G2532 Aristarchus G708 , men of Macedonia G3110 , Paul G3972 's companions in travel G4898 , they rushed G3729 with one accord G3661 into G1519 the G3588 theater G2302 .
|
30. ಪೌಲನು ಜನರೊಳಗೆ ನುಗ್ಗಬೇಕೆಂದಿದ್ದಾಗ ಶಿಷ್ಯರು ಅವನನ್ನು ಬಿಡಲಿಲ್ಲ.
|
30. And G1161 when Paul G3972 would G1014 have entered in G1525 unto G1519 the G3588 people G1218 , the G3588 disciples G3101 suffered G1439 him G846 not G3756 .
|
31. ಇದಲ್ಲದೆ ಆಸ್ಯಸೀಮೆಯ ಅಧಿಕಾರಿಗಳಲ್ಲಿ ಕೆಲವರು ಪೌಲನ ಸ್ನೇಹಿತರಾಗಿದ್ದುದರಿಂದ ಅವನ ಬಳಿಗೆ ಜನರನ್ನು ಕಳುಹಿಸಿ; ನೀನು ನಾಟಕ ಶಾಲೆಯೊಳಗೆ ಹೋಗ ಬೇಡ ಎಂದು ಬೇಡಿಕೊಂಡರು. PEPS
|
31. And G1161 certain G5100 of G2532 the G3588 chief of Asia G775 , which were G5607 his G846 friends G5384 , sent G3992 unto G4314 him G846 , desiring G3870 him that he would not G3361 adventure G1325 himself G1438 into G1519 the G3588 theater G2302 .
|
32. ಜನಸಮೂಹದಲ್ಲಿ ಗೊಂದಲವೆದ್ದಿತು, ಕೆಲವರು ಒಂದು ವಿಧದಲ್ಲಿ ಕೂಗಾಡಿದರೆ ಮತ್ತೆ ಕೆಲವರು ಇನ್ನೊಂದು ವಿಧದಲ್ಲಿ ಕೂಗುತ್ತಿದ್ದರು. ಬಹುಜನರಿಗೆ ತಾವು ಅಲ್ಲಿ ಕೂಡಿ ಬಂದಿದ್ದ ಕಾರಣವು ಗೊತ್ತಿರಲಿಲ್ಲ.
|
32. Some therefore cried one thing G243 G3303 G3767 G2896 , and some G243 another G5100 : for G1063 the G3588 assembly G1577 was G2258 confused G4797 ; and G2532 the G3588 more part G4119 knew G1492 not G3756 wherefore G5101 G1752 they were come together G4905 .
|
33. ಯೆಹೂದ್ಯರು ಅಲೆಕ್ಸಾಂದ್ರನನ್ನು ಮುಂದಕ್ಕೆ ನೂಕಲು, ಗುಂಪಿನಲ್ಲಿ ಕೆಲವರು ಅವನಿಗೆ ಸೂಚನೆ ಕೊಟ್ಟರು. ಆಗ ಅಲೆಕ್ಸಾಂದ್ರನು ಕೈಸನ್ನೆ ಮಾಡಿ ಕೂಡಿದ್ದ ಜನರಿಗೆ ಪ್ರತಿವಾದ ಮಾಡಬೇಕೆಂದಿದ್ದನು.
|
33. And G1161 they drew G4264 Alexander G223 out of G1537 the G3588 multitude G3793 , the G3588 Jews G2453 putting him forward G4261 G846 . And G1161 Alexander G223 beckoned G2678 with the G3588 hand G5495 , and would G2309 have made his defense G626 unto the G3588 people G1218 .
|
34. ಆದರೆ ಅವನು ಯೆಹೂದ್ಯನೆಂದು ತಿಳಿದಾಗ ಎಲ್ಲರೂ ಒಂದೇ ಶಬ್ದದಿಂದ; “ಎಫೆಸದವರ ಅರ್ತೆಮೀದೇವಿ ಮಹಾದೇವಿ” ಎಂದು ಎರಡು ಘಂಟೆ ಹೊತ್ತು ಕೂಗಿದರು. PEPS
|
34. But G1161 when they knew G1921 that G3754 he was G2076 a Jew G2453 , all with one voice G1096 G5456 G3391 G1537 G3956 about the space of G5613 G1909 two G1417 hours G5610 cried out G2896 , Great G3173 is Diana G735 of the Ephesians G2180 .
|
35. ಕೊನೆಗೆ ಪಟ್ಟಣದ ಯಜಮಾನನು ಜನರ ಗುಂಪನ್ನು ಸಮಾಧಾನಪಡಿಸಿ; “ಎಫೆಸದವರೇ, ಎಫೆಸ ಪಟ್ಟಣದವರು ಅರ್ತೆಮೀ ಮಹಾದೇವಿಯ ದೇವಸ್ಥಾನಕ್ಕೂ, ಆಕಾಶದಿಂದ ಬಿದ್ದ ಆಕೆಯ ಮೂರ್ತಿಗೂ, ಪಾಲಕರಾಗಿದ್ದಾರೆಂಬುದನ್ನು ತಿಳಿಯದಿರುವ ಮನುಷ್ಯನು ಯಾವನಿದ್ದಾನೇ?
|
35. And G1161 when the G3588 town clerk G1122 had appeased G2687 the G3588 people G3793 , he said G5346 , Ye men G435 of Ephesus G2180 G1063 , what G5101 man G444 is G2076 there that G3739 knoweth G1097 not G3756 how that the G3588 city G4172 of the Ephesians G2180 is G5607 a worshiper G3511 of the G3588 great G3173 goddess G2299 Diana G735 , and G2532 of the image which fell down from Jupiter G1356 ?
|
36. ಈ ಸಂಗತಿ ಅಲ್ಲವೆನ್ನುವುದಕ್ಕೆ ಯಾರಿಂದಲೂ ಆಗದಿರುವುದರಿಂದ ನೀವು ಶಾಂತಿಯಿಂದಿರಬೇಕು; ದುಡುಕಿ ಏನೂ ಮಾಡಬಾರದು.
|
36. Seeing then G3767 that these things G5130 cannot be spoken against G5607 G368 , ye G5209 G2076 ought G1163 to be G5225 quiet G2687 , and G2532 to do G4238 nothing G3367 rashly G4312 .
|
37. ನೀವು ಹಿಡಿದುತಂದಿರುವ ಈ ಮನುಷ್ಯರು ದೇವಸ್ಥಾನದಲ್ಲಿ ಕಳ್ಳತನ ಮಾಡುವವರಲ್ಲ, ನಮ್ಮ ದೇವಿಯನ್ನು ದೂಷಿಸುವವರೂ ಅಲ್ಲ.
|
37. For G1063 ye have brought G71 hither these G5128 men G435 , which are neither G3777 robbers of churches G2417 , nor G3777 yet blasphemers G987 of your G5216 goddess G2299 .
|
38. ಹೀಗಿರುವುದರಿಂದ ದೇಮೇತ್ರಿಯನಿಗೂ ಅವನ ಪಕ್ಷವನ್ನು ಹಿಡಿದಿರುವ ಅಕ್ಕಸಾಲಿಗರಿಗೂ ಯಾವನ ಮೇಲಾದರೂ ದೂರುಗಳಿದ್ದರೆ ನ್ಯಾಯಸ್ಥಾನಗಳುಂಟು, ಅಧಿಪತಿಗಳಿದ್ದಾರೆ, ಒಬ್ಬರ ಮೇಲೊಬ್ಬರು ವ್ಯಾಜ್ಯವಾಡಿಕೊಳ್ಳಲಿ.
|
38. Wherefore G3767 if G1487 G3303 Demetrius G1216 , and G2532 the G3588 craftsmen G5079 which are with G4862 him G846 , have G2192 a matter G3056 against G4314 any man G5100 , the law is open G60 G71 , and G2532 there are G1526 deputies G446 : let them implead G1458 one another G240 .
|
39. ಏನಾದರೂ ಹೆಚ್ಚು ವಿಚಾರಣೆ ಬೇಕಾದರೆ ಅದು ನ್ಯಾಯವಾಗಿ ನೆರೆದ ಸಭೆಯಲ್ಲಿ ತೀರ್ಮಾನಿಸಲ್ಪಡಬೇಕು.
|
39. But G1161 if G1487 ye inquire G1934 any thing G5100 concerning G4012 other matters G2087 , it shall be determined G1956 in G1722 a lawful G1772 assembly G1577 .
|
40. ಈ ದಿನದಲ್ಲಿ ನ್ಯಾಯವಾದ ಕಾರಣವಿಲ್ಲದೆ ನೆರೆದ ಜನರ ವಿಷಯದಲ್ಲಿ ಇದು ಒಂದು ದಂಗೆ ಎಂಬುದಾಗಿ ನಮ್ಮ ಮೇಲೆ ತಪ್ಪುಹೊರಿಸುವುದಕ್ಕೆ ಆಸ್ಪದವಾಯಿತು. ಈ ದೊಂಬಿಯನ್ನು ಕುರಿತು ವಿಚಾರಣೆನಡೆಸಿದರೆ ನಮ್ಮಿಂದ ಉತ್ತರಕೊಡುವುದಕ್ಕೆ ಆಗುವುದೇ ಇಲ್ಲ” ಎಂದು ಹೇಳಿದನು.
|
40. For G1063 we are in danger G2793 to G2532 be called in question G1458 for G4012 this day G4594 's uproar G4714 , there being G5225 no G3367 cause G158 whereby G4012 G3739 we may G1410 give G591 an account G3056 of this G5026 concourse G4963 .
|
41. ಈ ಮಾತುಗಳನ್ನು ಹೇಳಿ ಜನರ ಗುಂಪನ್ನು ಕಳುಹಿಸಿಬಿಟ್ಟನು. PE
|
41. And G2532 when he had thus G5023 spoken G2036 , he dismissed G630 the G3588 assembly G1577 .
|