|
|
1. {ಯೋಬನು ತನ್ನ ನಿರ್ದೋಷದ ಬಗ್ಗೆ ಮಾತನಾಡಿದ್ದು} PS “ಕನ್ಯೆಯನ್ನು ಕೆಟ್ಟದೃಷ್ಟಿಯಿಂದ ನೋಡುವುದಿಲ್ಲ ಎಂದು ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ,
|
1. I made H3772 a covenant H1285 with mine eyes H5869 ; why H4100 then should I think H995 upon H5921 a maid H1330 ?
|
2. ದೇವರು ಮೇಲಣ ಲೋಕದಿಂದ ಯಾವ ಪಾಲನ್ನು ವಿಧಿಸುವನು, ಸರ್ವಶಕ್ತನಾದ ದೇವರು ಉನ್ನತಾಕಾಶದಿಂದ ಕೊಡುವ ಬಾಧ್ಯತೆ ಯಾವುದು?
|
2. For what H4100 portion H2506 of God H433 is there from above H4480 H4605 ? and what inheritance H5159 of the Almighty H7706 from on high H4480 H4791 ?
|
3. ಆತನು ಅನ್ಯಾಯಗಾರರಿಗೆ ವಿಪತ್ತನ್ನೂ, ಕೆಡುಕರಿಗೆ ಉಪದ್ರವವನ್ನೂ ಕೊಡುತ್ತಾನಲ್ಲವೆ?
|
3. Is not H3808 destruction H343 to the wicked H5767 ? and a strange H5235 punishment to the workers H6466 of iniquity H205 ?
|
4. ಆತನೇ ನನ್ನ ನಡತೆಯನ್ನು ನೋಡಿ ನನ್ನ ಹೆಜ್ಜೆಗಳನ್ನೆಲ್ಲಾ ಎಣಿಸುತ್ತಿದ್ದಾನೆ ಎಂದುಕೊಳ್ಳುತ್ತಿದ್ದೆನು.
|
4. Doth not H3808 he H1931 see H7200 my ways H1870 , and count H5608 all H3605 my steps H6806 ?
|
5. ಒಂದು ವೇಳೆ ನಾನು ಕಪಟತನದ ಜೊತೆಯಲ್ಲಿ ನಡೆದು ಮೋಸವನ್ನು ಹಿಂಬಾಲಿಸಿ ಓಡಿದರೆ,
|
5. If H518 I have walked H1980 with H5973 vanity H7723 , or if my foot H7272 hath hasted H2363 to H5921 deceit H4820 ;
|
6. ದೇವರು ನನ್ನನ್ನು ನ್ಯಾಯವಾದ ತ್ರಾಸಿನಲ್ಲಿ ತೂಗಿ, ನನ್ನ ಯಥಾರ್ಥತ್ವವನ್ನು ತಿಳಿದುಕೊಳ್ಳಲಿ!
|
6. Let me be weighed H8254 in an even H6664 balance H3976 , that God H433 may know H3045 mine integrity H8538 .
|
7. ನನ್ನ ನಡತೆಯಲ್ಲಿ ದಾರಿತಪ್ಪಿದ್ದರೆ, ನನ್ನ ಹೃದಯವು ಕಂಡಕಂಡದ್ದನ್ನು ಹಿಂಬಾಲಿಸಿದ್ದರೆ, ನನ್ನ ಕೈಗಳಲ್ಲಿ ಕಲ್ಮಷವು ಅಂಟಿಕೊಂಡಿದ್ದರೆ,
|
7. If H518 my step H838 hath turned H5186 out of H4480 the way H1870 , and mine heart H3820 walked H1980 after H310 mine eyes H5869 , and if any blot H3971 hath cleaved H1692 to mine hands H3709 ;
|
8. ನಾನು ಬಿತ್ತಿದ್ದನ್ನು ಮತ್ತೊಬ್ಬನು ಉಣ್ಣಲಿ, ನನ್ನ ಬೆಳೆಯು ನಿರ್ಮೂಲವಾಗಲಿ!
|
8. Then let me sow H2232 , and let another H312 eat H398 ; yea , let my offspring H6631 be rooted out H8327 .
|
9. ಒಂದು ವೇಳೆ ನನ್ನ ಹೃದಯವು ಪರಸ್ತ್ರೀಯಲ್ಲಿ ಮೋಹಗೊಂಡು, ನಾನು ನೆರೆಯವನ ಬಾಗಿಲಲ್ಲಿ ಹೊಂಚು ಹಾಕಿದ್ದರೆ,
|
9. If H518 mine heart H3820 have been deceived H6601 by H5921 a woman H802 , or if I have laid wait H693 at H5921 my neighbor H7453 's door H6607 ;
|
10. ನನ್ನ ಹೆಂಡತಿಯು ಮತ್ತೊಬ್ಬನಿಗೆ ಧಾನ್ಯ ಬೀಸುವ ದಾಸಿಯಾಗಲಿ, ಇತರರು ಆಕೆಯನ್ನು ಸಂಗಮಿಸಲಿ!
|
10. Then let my wife H802 grind H2912 unto another H312 , and let others H312 bow down H3766 upon H5921 her.
|
11. ನಾನು ಹೀಗೆ ಮಾಡಿದ್ದರೆ ಅದು ದುಷ್ಕಾರ್ಯವೇ ಸರಿ, ಆ ಅಪರಾಧವು ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾದದ್ದು.
|
11. For H3588 this H1931 is a heinous crime H2154 ; yea, it H1931 is an iniquity H5771 to be punished by the judges H6414 .
|
12. ಅದು ನಾಶ ಲೋಕದವರೆಗೂ ನುಂಗುವ ಬೆಂಕಿಯಾಗಿದ್ದು, ನನ್ನ ಆದಾಯವನ್ನೆಲ್ಲಾ ನಿರ್ಮೂಲಮಾಡುತ್ತಿತ್ತು.
|
12. For H3588 it H1931 is a fire H784 that consumeth H398 to H5704 destruction H11 , and would root out H8327 all H3605 mine increase H8393 .
|
13. ಒಂದು ವೇಳೆ ನನಗೂ, ನನ್ನ ದಾಸನಿಗೂ, ಇಲ್ಲವೆ ದಾಸಿಗೂ ವ್ಯಾಜ್ಯವಾದಾಗ, ನಾನು ಅವರ ನ್ಯಾಯವನ್ನು ಅಲಕ್ಷ್ಯಮಾಡಿದ್ದರೆ
|
13. If H518 I did despise H3988 the cause H4941 of my manservant H5650 or of my maidservant H519 , when they contended H7378 with H5978 me;
|
14. ದೇವರು ನ್ಯಾಯಸ್ಥಾಪನೆಗೆ ಏಳುವಾಗ ನಾನು ಏನು ಮಾಡೆನು? ಆತನು ವಿಚಾರಿಸುವಾಗ ಯಾವ ಉತ್ತರಕೊಟ್ಟೇನು?
|
14. What H4100 then shall I do H6213 when H3588 God H410 riseth up H6965 ? and when H3588 he visiteth H6485 , what H4100 shall I answer H7725 him?
|
15. ನನ್ನನ್ನು ಗರ್ಭದಲ್ಲಿ ನಿರ್ಮಿಸಿದಾತನೇ ಅವನನ್ನೂ ನಿರ್ಮಿಸಲಿಲ್ಲವೋ? ಆತನೊಬ್ಬನೇ ನಮ್ಮಿಬ್ಬರನ್ನೂ ಗರ್ಭದಲ್ಲಿ ರೂಪಿಸಿದನಲ್ಲವೇ.
|
15. Did not H3808 he that made H6213 me in the womb H990 make H6213 him? and did not one H259 fashion H3559 us in the womb H7358 ?
|
16. ನಾನು ಬಡವರ ಇಷ್ಟವನ್ನು ಭಂಗಪಡಿಸಿದೆನೋ? ಅಥವಾ ವಿಧವೆಯ ಕಣ್ಣುಗಳನ್ನು ಮಂಕಾಗಿಸಿದೆನೋ?
|
16. If H518 I have withheld H4513 the poor H1800 from their desire H4480 H2656 , or have caused the eyes H5869 of the widow H490 to fail H3615 ;
|
17. ಅಥವಾ ನನಗಿರುವ ತುತ್ತು ಅನ್ನದಲ್ಲಿ ಅನಾಥರಿಗೆ ಏನೂ ಕೊಡದೆ, ನಾನೊಬ್ಬನೇ ತಿಂದೆನೋ?
|
17. Or have eaten H398 my morsel H6595 myself alone H905 , and the fatherless H3490 hath not H3808 eaten H398 thereof H4480 ;
|
18. ಹಾಗಲ್ಲ, ನಾನು ಬಾಲ್ಯದಿಂದಲೂ ತಂದೆಯ ರೀತಿಯಲ್ಲಿ ಅನಾಥನನ್ನು ಸಾಕುತ್ತಾ, ನಾನು ಹುಟ್ಟಿದಂದಿನಿಂದಲು ಅನಾಥಳಿಗೆ ದಾರಿತೋರಿಸುತ್ತಾ ಇದ್ದೇನಷ್ಟೆ.
|
18. ( For H3588 from my youth H4480 H5271 he was brought up H1431 with me , as with a father H1 , and I have guided H5148 her from my mother H517 's womb H4480 H990 ;)
|
19. ಬಟ್ಟೆಯಿಲ್ಲದೆ ಅಳಿದುಹೋಗುವವನನ್ನೂ, ಹೊದಿಕೆಯಿಲ್ಲದ ಬಡವನನ್ನೂ ನಾನು ಕಂಡಾಗೆಲ್ಲಾ,
|
19. If H518 I have seen H7200 any perish H6 for want H4480 H1097 of clothing H3830 , or any poor H34 without H369 covering H3682 ;
|
20. ಅವರ ಸೊಂಟವು ನನ್ನ ಕುರಿಗಳ ಉಣ್ಣೆಯಿಂದ ಬೆಚ್ಚಗಾಗಿ, ನಾನು ಅವರಿಂದ ಹರಸಲ್ಪಡಲಿಲ್ಲವೋ?
|
20. If H518 his loins H2504 have not H3808 blessed H1288 me , and if he were not warmed H2552 with the fleece H4480 H1488 of my sheep H3532 ;
|
21. ನ್ಯಾಯಸ್ಥಾನದಲ್ಲಿ ನನಗೆ ಸಹಾಯ ಉಂಟೆಂದು, ಅನಾಥನ ಮೇಲೆ ಕೈಮಾಡಿದೆನೋ?
|
21. If H518 I have lifted up H5130 my hand H3027 against H5921 the fatherless H3490 , when H3588 I saw H7200 my help H5833 in the gate H8179 :
|
22. ಹೀಗಿದ್ದರೆ ನನ್ನ ಹೆಗಲಿನ ಕೀಲು ತಪ್ಪಲಿ, ತೋಳು ಸಂದಿನಿಂದ ಮುರಿದು ಬೀಳಲಿ.
|
22. Then let mine arm H3802 fall H5307 from my shoulder blade H4480 H7929 , and mine arm H248 be broken H7665 from the bone H4480 H7070 .
|
23. ದೇವರಿಂದ ಬರುವ ವಿಪತ್ತಿಗೆ ಹೆದರಿಕೊಂಡಿದ್ದೆನಷ್ಟೆ, ಆತನ ಪ್ರಭಾವದ ದೆಸೆಯಿಂದ ನಾನು ಇಂಥ ಕೃತ್ಯವನ್ನು ಮಾಡುವುದಕ್ಕಾಗಲಿಲ್ಲ.
|
23. For H3588 destruction H343 from God H410 was a terror H6343 to H413 me , and by reason of his highness H4480 H7613 I could H3201 not H3808 endure.
|
24. ಒಂದು ವೇಳೆ ನಾನು ಬಂಗಾರದಲ್ಲಿ ಭರವಸವಿಟ್ಟು, ಅಪರಂಜಿಗೆ, ‘ನಿನ್ನನ್ನೇ ನಂಬಿದ್ದೇನೆ’ ಎಂದು ಹೇಳಿದ್ದರೆ,
|
24. If H518 I have made H7760 gold H2091 my hope H3689 , or have said H559 to the fine gold H3800 , Thou art my confidence H4009 ;
|
25. ನನ್ನ ಆಸ್ತಿ ದೊಡ್ಡದೆಂದೂ, ನನ್ನ ಕೈಯೇ ಬಹು ಸಂಪತ್ತನ್ನು ಪಡೆಯಿತೆಂದೂ ಹೆಚ್ಚಳಪಟ್ಟಿದ್ದರೆ,
|
25. If H518 I rejoiced H8055 because H3588 my wealth H2428 was great H7227 , and because H3588 mine hand H3027 had gotten H4672 much H3524 ;
|
26. ಸೂರ್ಯನು ಪ್ರಕಾಶಿಸುವುದನ್ನಾಗಲಿ, ಚಂದ್ರನು ಕಳೆತುಂಬಿದವನಾಗಿ ಚಲಿಸುವುದನ್ನಾಗಲಿ ನಾನು ನೋಡಿದಾಗ,
|
26. If H518 I beheld H7200 the sun H216 when H3588 it shined H1984 , or the moon H3394 walking H1980 in brightness H3368 ;
|
27. ಹೃದಯವು ಮರುಳುಗೊಂಡು, ಕೈಯನ್ನು ಬಾಯಿ ಮುದ್ದಾಡಿದ್ದರೆ,
|
27. And my heart H3820 hath been secretly H5643 enticed H6601 , or my mouth H6310 hath kissed H5401 my hand H3027 :
|
28. ಇದು ಸಹ ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾದದ್ದು, ಮೇಲಣ ಲೋಕದ ದೇವರಿಗೆ ದ್ರೋಹಿಯಾದಂತಾಯಿತು.
|
28. This H1931 also H1571 were an iniquity H5771 to be punished by the judge H6416 : for H3588 I should have denied H3584 the God H410 that is above H4480 H4605 .
|
29. ನನ್ನನ್ನು ದ್ವೇಷಿಸುವವನಿಗೆ ಕೇಡು ಬಂದಾಗ ಉಬ್ಬಿಕೊಂಡು, ಅವನ ನಾಶನಕ್ಕೆ ಹಿಗ್ಗಿದೆನೋ?
|
29. If H518 I rejoiced H8055 at the destruction H6365 of him that hated H8130 me , or lifted up myself H5782 when H3588 evil H7451 found H4672 him:
|
30. ಇಲ್ಲವೇ ಇಲ್ಲ, ನನ್ನ ಬಾಯಿ ಅವನನ್ನು ಶಪಿಸಿ ಅವನ ಪ್ರಾಣ ಹೋಗಲಿ ಎಂದು ಬೇಡಿಕೊಂಡು ಪಾಪವಶವಾಗುವುದಕ್ಕೆ ನಾನು ಒಪ್ಪಲೇ ಇಲ್ಲ.
|
30. Neither H3808 have I suffered H5414 my mouth H2441 to sin H2398 by wishing H7592 a curse H423 to his soul H5315 .
|
31. ನನ್ನ ಗುಡಾರದ ಆಳುಗಳು, ‘ನಮ್ಮ ಯಜಮಾನ ಬಡಿಸಿದ ಮಾಂಸದಿಂದ ತೃಪ್ತರಾಗದವರು ಎಲ್ಲಿಯೂ ಸಿಕ್ಕಲಾರರು’ ಎಂದು ಹೇಳಿಕೊಳ್ಳುತ್ತಿರಲಿಲ್ಲವೋ?
|
31. If H518 the men H4962 of my tabernacle H168 said H559 not H3808 , Oh that H4310 we had H5414 of his flesh H4480 H1320 ! we cannot H3808 be satisfied H7646 .
|
32. ಪರಸ್ಥಳದವನು ಬಯಲಿನಲ್ಲಿ ಇಳಿದುಕೊಳ್ಳಲಿಲ್ಲವಲ್ಲಾ, ದಾರಿಗೆ ನನ್ನ ಮನೆಯ ಬಾಗಿಲುಗಳನ್ನು ತೆರೆದಿದ್ದೆನಷ್ಟೆ.
|
32. The stranger H1616 did not H3808 lodge H3885 in the street H2351 : but I opened H6605 my doors H1817 to the traveler H734 .
|
33. ಮನುಷ್ಯನು ಜನ ಸಮುದಾಯಕ್ಕೆ ಹೆದರಿದ್ದರಿಂದಾಗಲಿ, ಕುಲೀನರ ತಿರಸ್ಕಾರವು ನನಗೆ ಭಯ ಹುಟ್ಟಿಸಿದ್ದರಿಂದಾಗಲಿ,
|
33. If H518 I covered H3680 my transgressions H6588 as Adam H121 , by hiding H2934 mine iniquity H5771 in my bosom H2243 :
|
34. ನಾನು ಬಾಗಿಲು ದಾಟದೆ ಮೌನವಾಗಿದ್ದು, ಸಾಮಾನ್ಯ ಜನರ ಹಾಗೆ ನನ್ನ ದ್ರೋಹಗಳನ್ನು ಮರೆಮಾಡಿ, ಎದೆಯಲ್ಲಿ ನನ್ನ ಪಾಪವನ್ನು ಬಚ್ಚಿಟ್ಟುಕೊಂಡಿದ್ದರೆ,
|
34. Did I fear H6206 a great H7227 multitude H1995 , or did the contempt H937 of families H4940 terrify H2865 me , that I kept silence H1826 , and went not out H3318 H3808 of the door H6607 ?
|
35. ಅಯ್ಯೋ, ನನ್ನ ಕಡೆಗೆ ಕಿವಿಗೊಡತಕ್ಕವನು ಇದ್ದರೆ ಎಷ್ಟೋ ಲೇಸು! ಇದೇ ನನ್ನ ಕೈಗುರುತು ನೋಡಿರಿ, ಸರ್ವಶಕ್ತನಾದ ದೇವರು ನನಗೆ ಉತ್ತರಕೊಡಲಿ! ನನ್ನ ವಿರೋಧಿಯು ಬರೆದುಕೊಂಡ ಅಪಾದನೆಯ ಪತ್ರವು ನನಗೆ ಸಿಕ್ಕಿದರೆ ಎಷ್ಟೋ ಸಂತೋಷ!
|
35. Oh that H4310 one would H5414 hear H8085 me! behold H2005 , my desire H8420 is, that the Almighty H7706 would answer H6030 me , and that mine adversary H376 H7379 had written H3789 a book H5612 .
|
36. ಅದನ್ನು ಹೆಗಲ ಮೇಲೆ ಇಟ್ಟುಕೊಳ್ಳುತ್ತಿದ್ದೆನು, ಕಿರೀಟವನ್ನಾಗಿ ಧರಿಸುತ್ತಿದ್ದೆನು.
|
36. Surely H518 I would take H5375 it upon H5921 my shoulder H7926 , and bind H6029 it as a crown H5850 to me.
|
37. ಪ್ರಭುವಿನಂತೆ ಆತನ ಸಾನ್ನಿಧ್ಯದಲ್ಲಿ ಪ್ರವೇಶಿಸಿ ನನ್ನ ಹೆಜ್ಜೆಗಳ ಲೆಕ್ಕವನ್ನು, ಆತನಿಗೆ ಅರಿಕೆಮಾಡಿಕೊಳ್ಳುತ್ತಿದ್ದೆನು.
|
37. I would declare H5046 unto him the number H4557 of my steps H6806 ; as H3644 a prince H5057 would I go near unto H7126 him.
|
38. ನನ್ನ ಭೂಮಿಯು ನನ್ನ ಮೇಲೆ ಕೂಗಿಕೊಂಡರೆ ಅದರ ನೇಗಿಲ ಗೆರೆಗಳೆಲ್ಲಾ ಅತ್ತರೆ,
|
38. If H518 my land H127 cry H2199 against H5921 me , or that the furrows H8525 likewise H3162 thereof complain H1058 ;
|
39. ನಾನು ಹಣಕೊಡದೆ ಅದರ ಸಾರವನ್ನು ಅನುಭವಿಸಿ, ಅದರ ದಣಿಗಳ ಪ್ರಾಣ ಹಾನಿಗೆ ಕಾರಣನಾಗಿದ್ದರೆ,
|
39. If H518 I have eaten H398 the fruits H3581 thereof without H1097 money H3701 , or have caused the owners H1167 thereof to lose H5301 their life H5315 :
|
40. ಗೋದಿಗೆ ಬದಲಾಗಿ ಮುಳ್ಳುಗಳೂ, ಜವೆಗೋದಿಗೆ ಪ್ರತಿಯಾಗಿ ಕೆಟ್ಟ ಕಳೆಗಳೂ ಬೆಳೆಯಲಿ.” ಎಂದನು. ಹೀಗೆ ಯೋಬನ ಮಾತುಗಳು ಮುಗಿದವು. PE
|
40. Let thistles H2336 grow H3318 instead H8478 of wheat H2406 , and cockle H890 instead H8478 of barley H8184 . The words H1697 of Job H347 are ended H8552 .
|