|
|
1. {ಯೋಬನ ಪ್ರತ್ಯುತ್ತರದ ಮುಂದುವರಿಕೆ} PS “ಸರ್ವಶಕ್ತನಾದ ದೇವರು ಏಕೆ ದುಷ್ಟರಿಗೆ ದಂಡನೆಯ ಕಾಲಗಳನ್ನು ನೇಮಿಸಿ ಇಟ್ಟುಕೊಂಡಿಲ್ಲ? ಆತನನ್ನು ಅರಿತವರಿಗೆ ಆತನ ನ್ಯಾಯತೀರ್ಪಿನ ದಿನಗಳು ಏಕೆ ಗೋಚರವಾಗುವುದಿಲ್ಲ?
|
1. Why H4069 , seeing times H6256 are not H3808 hidden H6845 from the Almighty H4480 H7706 , do they that know H3045 him not H3808 see H2372 his days H3117 ?
|
2. ಮೇರೆಗಳನ್ನು ದಾಟಿ ಆಶ್ರಯಿಸಿಕೊಳ್ಳುವವರು ಇದ್ದಾರೆ. ದನಕುರಿಗಳನ್ನು ಅಪಹರಿಸಿ ಸಾಕಿಕೊಳ್ಳುವವರಿದ್ದಾರೆ.
|
2. Some remove H5381 the landmarks H1367 ; they violently take away H1497 flocks H5739 , and feed H7462 thereof .
|
3. ಅನಾಥರ ಕತ್ತೆಯನ್ನು ಹೊಡೆದುಕೊಂಡು ಹೋಗುತ್ತಾರೆ, ವಿಧವೆಯ ಎತ್ತನ್ನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ.
|
3. They drive away H5090 the ass H2543 of the fatherless H3490 , they take the widow's ox for a pledge H2254 H7794 H490 .
|
4. ದಿಕ್ಕಿಲ್ಲದವರನ್ನು ದಾರಿತಪ್ಪಿಸುತ್ತಾರೆ, ನಾಡಿನ ಬಡವರು ಒಟ್ಟಾಗಿ ಅಡಗಿಕೊಳ್ಳುತ್ತಾರೆ.
|
4. They turn H5186 the needy H34 out of the way H4480 H1870 : the poor H6041 of the earth H776 hide H2244 themselves together H3162 .
|
5. ಇಗೋ, ಅಡವಿಯಲ್ಲಿ ಕಾಡುಕತ್ತೆಗಳು ಹೇಗೋ ಹಾಗೆಯೇ, ಇವರು ತಮ್ಮ ಹೊಟ್ಟೇ ಪಾಡಿಗಾಗಿ ಹೊರಟು ಆಹಾರವನ್ನು ಆತುರವಾಗಿ ಹುಡುಕುವರು; ಅರಣ್ಯವೇ ಇವರ ಮಕ್ಕಳಿಗಾಗಿ ಆಹಾರವನ್ನು ಒದಗಿಸುವುದು.
|
5. Behold H2005 , as wild asses H6501 in the desert H4057 , go they forth H3318 to their work H6467 ; rising quickly H7836 for a prey H2964 : the wilderness H6160 yieldeth food H3899 for them and for their children H5288 .
|
6. ತಮ್ಮ ಹೊಟ್ಟೆಗಾಗಿ ಬಯಲಿನಲ್ಲಿ ಸೊಪ್ಪನ್ನು ಕೊಯ್ದುಕೊಳ್ಳುವರು, ದುಷ್ಟನ ದ್ರಾಕ್ಷಿತೋಟದಲ್ಲಿ ಹಕ್ಕಲಾಯುವರು.
|
6. They reap H7114 every one his corn H1098 in the field H7704 : and they gather H3953 the vintage H3754 of the wicked H7563 .
|
7. ಹೊದಿಕೆ ಇಲ್ಲದೆ ಬೆತ್ತಲೆಯಾಗಿ ರಾತ್ರಿಯನ್ನು ಕಳೆಯುವರು, ಚಳಿಗಾಲದಲ್ಲಿಯೂ ಅವರಿಗೆ ಬಟ್ಟೆಯಿಲ್ಲ.
|
7. They cause the naked H6174 to lodge H3885 without H4480 H1097 clothing H3830 , that they have no H369 covering H3682 in the cold H7135 .
|
8. ಮಲೆನಾಡಿನ ದೊಡ್ಡ ಮಳೆಯಿಂದ ನೆನೆದುಹೋಗಿ, ಆಶ್ರಯವಿಲ್ಲದೆ ಬಂಡೆಯನ್ನು ಅಪ್ಪಿಕೊಳ್ಳುವರು.
|
8. They are wet H7372 with the showers H4480 H2230 of the mountains H2022 , and embrace H2263 the rock H6697 for want H4480 H1097 of a shelter H4268 .
|
9. ತಂದೆಯಿಲ್ಲದ ಮಗುವನ್ನು ತಾಯಿಯ ಮೊಲೆಯಿಂದ ಕಿತ್ತು, ಬಡವರಿಂದ ಒತ್ತೆ ತೆಗೆದುಕೊಳ್ಳುವವರಿದ್ದಾರೆ.
|
9. They pluck H1497 the fatherless H3490 from the breast H4480 H7699 , and take a pledge H2254 of H5921 the poor H6041 .
|
10. ಬಟ್ಟೆಯಿಲ್ಲದೆ ಬೆತ್ತಲೆಯಾಗಿ ಅಲೆಯುವರು; ಹಸಿವಿನಿಂದಲೇ ಸಿವುಡುಗಳನ್ನು ಹೊರುವರು.
|
10. They cause him to go H1980 naked H6174 without H1097 clothing H3830 , and they take away H5375 the sheaf H6016 from the hungry H7457 ;
|
11. ಯಜಮಾನರ ಪೌಳಿಗೋಡೆಗಳೊಳಗೇ ಇದ್ದುಕೊಂಡು ಎಣ್ಣೆಗಾಣವನ್ನು ತಿರುಗಿಸುವರು; ದಾಹಗೊಂಡೇ ಅವರ ತೊಟ್ಟಿಗಳಲ್ಲಿ ದ್ರಾಕ್ಷಿಯನ್ನು ತುಳಿಯುವರು.
|
11. Which make oil H6671 within H996 their walls H7791 , and tread H1869 their winepresses H3342 , and suffer thirst H6770 .
|
12. ತುಂಬಿದ ಪಟ್ಟಣದೊಳಗಿಂದ ಜನರು ನರಳುವರು, ಗಾಯಪಟ್ಟವರು ಮೊರೆಯಿಡುವರು, * ಅಥವಾ ದೇವರು ದುಷ್ಟರಾದ ಧನಿಕರನ್ನು ಆರೋಪಿಸುವುದಿಲ್ಲ. ಆದರೆ ದೇವರಾದರೋ ಅವರ ಮೊರೆಗೆ ಕಿವಿಗೊಡನು.
|
12. Men H4962 groan H5008 from out of the city H4480 H5892 , and the soul H5315 of the wounded H2491 crieth out H7768 : yet God H433 layeth H7760 not H3808 folly H8604 to them .
|
13. ಬೆಳಕಿನ ವಿರುದ್ಧ ತಿರುಗಿ ಬಿದ್ದವರು ಇದ್ದಾರೆ; ಇವರು ಹಗಲಿನ ದಾರಿಗಳನ್ನು ತಿಳಿಯದವರಾಗಿ, ಅದರ ಹಾದಿಗಳಲ್ಲಿ ಇರುವುದಿಲ್ಲ.
|
13. They H1992 are H1961 of those that rebel H4775 against the light H216 ; they know H5234 not H3808 the ways H1870 thereof, nor H3808 abide H3427 in the paths H5410 thereof.
|
14. ಕೊಲೆಪಾತಕನು ಮುಂಜಾನೆ ಎದ್ದು, ದಿಕ್ಕಿಲ್ಲದ ಬಡವರನ್ನು ಕೊಂದು, ರಾತ್ರಿಯಲ್ಲಿ ಕಳ್ಳನಂತಿರುವನು.
|
14. The murderer H7523 rising H6965 with the light H216 killeth H6991 the poor H6041 and needy H34 , and in the night H3915 is H1961 as a thief H1590 .
|
15. ಜಾರನು ತಾನು, ಯಾರ ಕಣ್ಣಿಗೂ ಬೀಳಬಾರದು ಎಂದು, ಸಂಜೆಯನ್ನು ಎದುರು ನೋಡುತ್ತಿದ್ದು ಮುಖಕ್ಕೆ ಮುಸುಕು ಹಾಕಿಕೊಳ್ಳುವನು.
|
15. The eye H5869 also of the adulterer H5003 waiteth H8104 for the twilight H5399 , saying H559 , No H3808 eye H5869 shall see H7789 me : and disguiseth H5643 H7760 his face H6440 .
|
16. ಅವರು ಕತ್ತಲಲ್ಲಿ ಕನ್ನಕೊರೆದು ಮನೆಗಳೊಳಗೆ ನುಗ್ಗಿ; ಹಗಲಿನಲ್ಲಿ ಅಡಗಿಕೊಂಡಿದ್ದು; ಬೆಳಕನ್ನು ತಿಳಿಯದೆ ಇರುವರು.
|
16. In the dark H2822 they dig through H2864 houses H1004 , which they had marked H2856 for themselves in the daytime H3119 : they know H3045 not H3808 the light H216 .
|
17. ಅವರೆಲ್ಲರಿಗೂ ಬೆಳಕು ಕಾರ್ಗತ್ತಲಿನಂತಿರುವುದು, ಕಾರ್ಗತ್ತಲಿನ ಅಪಾಯಗಳನ್ನು ಅವರು ಬಲ್ಲರಷ್ಟೆ.
|
17. For H3588 the morning H1242 is to them even as H3162 the shadow of death H6757 : if H3588 one know H5234 them, they are in the terrors H1091 of the shadow of death H6757 .
|
18. (ನೀವು ಹೇಳುವುದೇನೆಂದರೆ) ದುಷ್ಟನು ಪ್ರವಾಹದಲ್ಲಿ ವೇಗವಾಗಿ ಕೊಚ್ಚಿಕೊಂಡು ಹೋಗುವನು, ಭೂಲೋಕದ ಅವನ ಆಸ್ತಿಯು ಶಾಪಗ್ರಸ್ತವಾಗಿರುವುದು. ದ್ರಾಕ್ಷಿತೋಟಗಳ ಕಡೆಗೆ ತಿರುಗಲಾರನು.
|
18. He H1931 is swift H7031 as H5921 H6440 the waters H4325 ; their portion H2513 is cursed H7043 in the earth H776 : he beholdeth H6437 not H3808 the way H1870 of the vineyards H3754 .
|
19. ಬರಗಾಲವೂ, ಬಿಸಿಲೂ ಹಿಮದ ನೀರನ್ನು ಹೀರುವ ಹಾಗೆ, ಪಾತಾಳವು ಪಾಪಿಗಳನ್ನು ಎಳೆದುಕೊಳ್ಳುವುದು.
|
19. Drought H6723 and H1571 heat H2527 consume H1497 the snow H7950 waters H4325 : so doth the grave H7585 those which have sinned H2398 .
|
20. ಹೆತ್ತ ಹೊಟ್ಟೆಯೇ ಅವನನ್ನು ಮರೆತುಬಿಡುವುದು; ಹುಳವು ಅವನ ಹೆಣವನ್ನು ಸವಿದು ತಿನ್ನುವುದು; ಇನ್ನು ಮೇಲೆ ಯಾರಿಗೂ ಅವನ ನೆನಪಿರದು; ಅನ್ಯಾಯವು ಮರದ ಹಾಗೆ ಮುರಿಯಲ್ಪಡುವುದು.
|
20. The womb H7358 shall forget H7911 him ; the worm H7415 shall feed sweetly H4988 on him ; he shall be no H3808 more H5750 remembered H2142 ; and wickedness H5766 shall be broken H7665 as a tree H6086 .
|
21. ಅವನು ಮಕ್ಕಳಿಲ್ಲದ ಬಂಜೆಯರನ್ನು ನುಂಗಿಬಿಟ್ಟು, ವಿಧವೆಯರನ್ನು ಉದ್ಧರಿಸದೆ ಹೋದನಷ್ಟೆ (ಎಂಬುದೇ).
|
21. He evil entreateth H7462 the barren H6135 that beareth H3205 not H3808 : and doeth not H3808 good H3190 to the widow H490 .
|
22. ದೇವರಂತು ತನ್ನ ಶಕ್ತಿಯಿಂದ ಬಲಿಷ್ಠರನ್ನು ಉಳಿಸುತ್ತಾನೆ, ಅವರು ತಮ್ಮ ಜೀವವು ಇನ್ನು ಉಳಿಯುವುದಿಲ್ಲವೆಂದು ನಂಬಿದ್ದರೂ ಉದ್ಧಾರವಾಗುವರು.
|
22. He draweth H4900 also the mighty H47 with his power H3581 : he riseth up H6965 , and no H3808 man is sure H539 of life H2416 .
|
23. ದೇವರು ಅವರಿಗೆ ಅಭಯವನ್ನು ಕೊಟ್ಟಿದ್ದರಿಂದ ಅವರು ಅದನ್ನು ಆಧಾರಮಾಡಿಕೊಳ್ಳುವರು; ಆತನ ಕಟಾಕ್ಷವು ಅವರ ಮಾರ್ಗಗಳ ಮೇಲಿರುವುದು.
|
23. Though it be given H5414 him to be in safety H983 , whereon he resteth H8172 ; yet his eyes H5869 are upon H5921 their ways H1870 .
|
24. ಅವರು ಉನ್ನತಿಗೆ ಬರುವರು; ಸ್ವಲ್ಪ ಕಾಲದ ಮೇಲೆ ಅವರು ಎಲ್ಲಿಯೋ? ಸರ್ವ ಮನುಷ್ಯರೊಂದಿಗೆ ಸುಗ್ಗಿಯ ತೆನೆಗಳಂತೆ ಕೊಯ್ಯಲ್ಪಟ್ಟು ಕೆಳಕ್ಕೆ ಬಿದ್ದು ಕೂಡಿಸಲ್ಪಡುವರು.
|
24. They are exalted H7426 for a little while H4592 , but are gone H369 and brought low H4355 ; they are taken out of the way H7092 as all H3605 other , and cut off H5243 as the tops H7218 of the ears of corn H7641 .
|
25. ಹೀಗಲ್ಲವೆಂದು ನೀವು ನಂಬಿದರೆ ನಾನು ಸುಳ್ಳುಗಾರನೆಂದೂ ನನ್ನ ಮಾತುಗಳು ನಿರರ್ಥಕವೆಂದೂ; ನಿಮ್ಮಲ್ಲಿ ಯಾರು ಸ್ಥಾಪಿಸಬಲ್ಲರು?.” PE
|
25. And if H518 it be not H3808 so now H645 , who H4310 will make me a liar H3576 , and make H7760 my speech H4405 nothing H408 worth?
|