|
|
1. {ಯೆರೂಸಲೇಮಿನ ದುರಾಲೋಚನೆಕಾರರ ಖಂಡನೆ} PS ಆ ಮೇಲೆ ದೇವರಾತ್ಮವು ನನ್ನನ್ನು ಎತ್ತಿ ಪೂರ್ವದಿಕ್ಕಿಗೆ ಅಭಿಮುಖವಾಗಿರುವ ಯೆಹೋವನ ಆಲಯದ ಮೂಡಣ ಬಾಗಿಲಿಗೆ ತಂದುಬಿಟ್ಟಿತು; ಇಗೋ, ಬಾಗಿಲ ಮುಂದೆ ಇಪ್ಪತ್ತೈದು ಜನರು ನಿಂತಿದ್ದರು; ಅವರ ಮಧ್ಯದಲ್ಲಿ ಅಜ್ಜೂರನ ಮಗನಾದ ಯಾಜನ್ಯ, ಬೆನಾಯನ ಮಗನಾದ ಪೆಲತ್ಯ ಎಂಬ ಜನನಾಯಕರನ್ನು ನಾನು ನೋಡಿದೆ. PEPS
|
1. Moreover the spirit H7307 lifted me up H5375 H853 , and brought H935 me unto H413 the east H6931 gate H8179 of the LORD H3068 's house H1004 , which looketh H6437 eastward H6921 : and behold H2009 at the door H6607 of the gate H8179 five H2568 and twenty H6242 men H376 ; among H8432 whom I saw H7200 H853 Jaazaniah H2970 the son H1121 of Azur H5809 , and Pelatiah H6410 the son H1121 of Benaiah H1141 , princes H8269 of the people H5971 .
|
2. ಅಲ್ಲಿ ದೇವರು ನನಗೆ, “ನರಪುತ್ರನೇ, ಪಟ್ಟಣದಲ್ಲಿ ಕುತಂತ್ರಗಳನ್ನು ಕಲ್ಪಿಸಿ ದುರಾಲೋಚನೆಯನ್ನು ಹೇಳಿಕೊಡುವವರು ಈ ಜನರೇ.
|
2. Then said H559 he unto H413 me, Son H1121 of man H120 , these H428 are the men H376 that devise H2803 mischief H205 , and give H3289 wicked H7451 counsel H6098 in this H2063 city H5892 :
|
3. ಇವರು, ‘ಮನೆಗಳನ್ನು ಕಟ್ಟಿಕೊಳ್ಳುವ ಕಾಲವು ಬಂದಿಲ್ಲ; ಈ ಪಟ್ಟಣವು ಒಂದು ಹಂಡೆ, ನಾವು ಅದರಲ್ಲಿನ ಮಾಂಸ’ ಎಂದು ಹೇಳುತ್ತಾರೆ.
|
3. Which say H559 , It is not H3808 near H7138 ; let us build H1129 houses H1004 : this H1931 city is the caldron H5518 , and we H587 be the flesh H1320 .
|
4. ಆದಕಾರಣ, ನರಪುತ್ರನೇ, ನೀನು ಇವರ ವಿಷಯವಾಗಿ ಅಹಿತವನ್ನು ನುಡಿ, ತಪ್ಪದೆ ನುಡಿ” ಎಂದು ಆಜ್ಞಾಪಿಸಿದನು. PEPS
|
4. Therefore H3651 prophesy H5012 against H5921 them, prophesy H5012 , O son H1121 of man H120 .
|
5. ಆಗ ಯೆಹೋವನ ಆತ್ಮವು ನನ್ನಲ್ಲಿ ಆವೇಶ ಉಂಟುಮಾಡಿ, ಹೀಗೆ ಸಾರಬೇಕೆಂದು ಅಪ್ಪಣೆಯಾಯಿತು. ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲ್ ವಂಶದವರೇ, ನೀವು ಹೀಗೆ ಮಾತನಾಡುತ್ತಿದ್ದೀರಿ, ಸರಿ; ನಿಮ್ಮ ಮನಸ್ಸಿನಲ್ಲಿ ಹುಟ್ಟಿರುವ ಆಲೋಚನೆಗಳು ನನಗೆ ಗೊತ್ತೇ ಇವೆ.
|
5. And the Spirit H7307 of the LORD H3068 fell H5307 upon H5921 me , and said H559 unto H413 me, Speak H559 ; Thus H3541 saith H559 the LORD H3068 ; Thus H3651 have ye said H559 , O house H1004 of Israel H3478 : for I H589 know H3045 the things that come H4609 into your mind H7307 , every one of them.
|
6. ನೀವು ಈ ಪಟ್ಟಣದಲ್ಲಿ ನರಹತ್ಯವನ್ನು ಹೆಚ್ಚೆಚ್ಚಾಗಿ ಮಾಡಿ, ಹತರಾದವರಿಂದ ಬೀದಿಗಳನ್ನು ತುಂಬಿಸಿದ್ದೀರಿ. PEPS
|
6. Ye have multiplied H7235 your slain H2491 in this H2063 city H5892 , and ye have filled H4390 the streets H2351 thereof with the slain H2491 .
|
7. “ಆದಕಾರಣ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನಿಮ್ಮ ದೋಷದಿಂದ ಹತರಾಗಿ ಪಟ್ಟಣದಲ್ಲಿ ಬಿದ್ದಿರುವ ನಿಮ್ಮವರ ಶವಗಳೇ ಹಂಡೆಯಲ್ಲಿನ ಮಾಂಸ, ಈ ಪಟ್ಟಣವೇ ಹಂಡೆ, ನಿಮ್ಮನ್ನಾದರೋ ನಾನು ಪಟ್ಟಣದೊಳಗಿಂದ ಕಿತ್ತುಹಾಕುವೆನು.
|
7. Therefore H3651 thus H3541 saith H559 the Lord H136 GOD H3069 ; Your slain H2491 whom H834 ye have laid H7760 in the midst H8432 of it, they H1992 are the flesh H1320 , and this H1931 city is the caldron H5518 : but I will bring you forth H3318 H853 out of the midst H4480 H8432 of it.
|
8. ಖಡ್ಗಕ್ಕೆ ಹೆದರಿದ ನಿಮ್ಮನ್ನೇ ಖಡ್ಗಕ್ಕೆ ಗುರಿಮಾಡುವೆನು’ ” ಇದು ಕರ್ತನಾದ ಯೆಹೋವನ ನುಡಿ.
|
8. Ye have feared H3372 the sword H2719 ; and I will bring H935 a sword H2719 upon H5921 you, saith H5002 the Lord H136 GOD H3069 .
|
9. “ನಾನು ಪಟ್ಟಣದೊಳಗಿಂದ ನಿಮ್ಮನ್ನು ಕಿತ್ತು ಅನ್ಯರ ಕೈಗೆ ಕೊಟ್ಟು ದಂಡಿಸುವೆನು.
|
9. And I will bring H3318 you out of the midst H4480 H8432 thereof , and deliver H5414 you into the hands H3027 of strangers H2114 , and will execute H6213 judgments H8201 among you.
|
10. ನೀವು ಖಡ್ಗಕ್ಕೆ ತುತ್ತಾಗುವಿರಿ. ಇಸ್ರಾಯೇಲಿನ ಮೇರೆಯಲ್ಲಿ ನಿಮಗೆ ದಂಡನೆಯನ್ನು ವಿಧಿಸುವೆನು, ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.
|
10. Ye shall fall H5307 by the sword H2719 ; I will judge H8199 you in H5921 the border H1366 of Israel H3478 ; and ye shall know H3045 that H3588 I H589 am the LORD H3068 .
|
11. ಈ ಪಟ್ಟಣವು ನಿಮಗೆ ಹಂಡೆಯಾಗುವುದಿಲ್ಲ; ನೀವು ಅದರಲ್ಲಿನ ಮಾಂಸವಾಗುವುದಿಲ್ಲ. ಇಸ್ರಾಯೇಲಿನ ಮೇರೆಯಲ್ಲಿ ನಿಮಗೆ ದಂಡನೆಯನ್ನು ವಿಧಿಸುವೆನು. PEPS
|
11. This H1931 city shall not H3808 be H1961 your caldron H5518 , neither shall ye H859 be H1961 the flesh H1320 in the midst H8432 thereof; but I will judge H8199 you in H413 the border H1366 of Israel H3478 :
|
12. “ ‘ನಾನೇ ಯೆಹೋವನು’ ಎಂದು ನಿಮಗೆ ಗೊತ್ತಾಗುವುದು; ನೀವು ನನ್ನ ವಿಧಿಗಳನ್ನು ಕೈಕೊಳ್ಳದೆ, ನನ್ನ ನಿಯಮಗಳನ್ನು ಅನುಸರಿಸದೆ, ನಿಮ್ಮ ಸುತ್ತಲಿನ ಜನಾಂಗಗಳ ಆಚಾರಗಳನ್ನೇ ಅನುಸರಿಸಿದ್ದರಿಂದ ಇದೆಲ್ಲಾ ಆಗುವುದು.” PEPS
|
12. And ye shall know H3045 that H3588 I H589 am the LORD H3068 : for H834 ye have not H3808 walked H1980 in my statutes H2706 , neither H3808 executed H6213 my judgments H4941 , but have done H6213 after the manners H4941 of the heathen H1471 that H834 are round about H5439 you.
|
13. ನಾನು ಈ ಮಾತನ್ನು ನುಡಿಯುತ್ತಿರುವಾಗಲೇ ಬೆನಾಯನ ಮಗನಾದ ಪೆಲತ್ಯನು ಸತ್ತುಹೋದನು. ಆಗ ನಾನು ಅಡ್ಡಬಿದ್ದು ಗಟ್ಟಿಯಾಗಿ ಕೂಗಿಕೊಂಡೆ, “ಅಯ್ಯೋ, ಕರ್ತನಾದ ಯೆಹೋವನೇ, ಇಸ್ರಾಯೇಲಿನಲ್ಲಿ ಉಳಿದವರನ್ನು ಸಂಪೂರ್ಣವಾಗಿ ನಿರ್ಮೂಲಮಾಡುವಿಯೋ?” ಎಂದು ಮೊರೆಯಿಟ್ಟೆನು. PS
|
13. And it came to pass H1961 , when I prophesied H5012 , that Pelatiah H6410 the son H1121 of Benaiah H1141 died H4191 . Then fell I down H5307 upon H5921 my face H6440 , and cried H2199 with a loud H1419 voice H6963 , and said H559 , Ah H162 Lord H136 GOD H3069 ! wilt thou H859 make H6213 a full end H3617 H853 of the remnant H7611 of Israel H3478 ?
|
14. {ಸೆರೆಯವರಿಗೆ ಕೊಟ್ಟ ವಾಗ್ದಾನ} PS ಆಗ ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು,
|
14. Again the word H1697 of the LORD H3068 came H1961 unto H413 me, saying H559 ,
|
15. “ನರಪುತ್ರನೇ, ನಿನ್ನ ಸಹೋದರರು, ನಿನ್ನ ಅಣ್ಣತಮ್ಮಂದಿರು, ನಿನ್ನ ನೆಂಟರು ಅಂತು ಯೆರೂಸಲೇಮಿನವರು ಮತ್ತು ಇಸ್ರಾಯೇಲ್ ವಂಶದವರಲ್ಲಿ ಉಳಿದಿರುವವರು, ‘ಯೆಹೋವನ ಬಳಿಯಿಂದ ದೂರವಾಗಿ ತೊಲಗಿರಿ, ಈ ದೇಶವು ನಮಗೇ ಸ್ವತ್ತಾಗಿ ಸಿಕ್ಕಿದೆ’ ಎಂದು ಹೀನೈಸಿದರೋ ಅವರೆಲ್ಲರು ಉಳಿದಿದ್ದಾರಲ್ಲಾ. PEPS
|
15. Son H1121 of man H120 , thy brethren H251 , even thy brethren H251 , the men H376 of thy kindred H1353 , and all H3605 the house H1004 of Israel H3478 wholly H3605 , are they unto whom H834 the inhabitants H3427 of Jerusalem H3389 have said H559 , Get you far H7368 from H4480 H5921 the LORD H3068 : unto us is this H1931 land H776 given H5414 in possession H4181 .
|
16. “ಆದಕಾರಣ ನೀನು ಹೀಗೆ ಸಾರು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನಾನು ಅವರನ್ನು ದೂರವಾಗಿ ತೊಲಗಿಸಿ, ಜನಾಂಗಗಳಲ್ಲಿ ಮತ್ತು ಅನ್ಯದೇಶದ ಜನಾಂಗಗಳಲ್ಲಿ ಚದರಿಸಿದರೂ ಅವರು ಸೇರಿರುವ ದೇಶಗಳಲ್ಲಿಯೇ ನಾನು ಸ್ವಲ್ಪ ಕಾಲದ ಮಟ್ಟಿಗೆ ಅವರಿಗೆ ಪವಿತ್ರಾಲಯವಾಗಿರುವೆನು.’ PEPS
|
16. Therefore H3651 say H559 , Thus H3541 saith H559 the Lord H136 GOD H3069 ; Although H3588 I have cast them far off H7368 among the heathen H1471 , and although H3588 I have scattered H6327 them among the countries H776 , yet will I be H1961 to them as a little H4592 sanctuary H4720 in the countries H776 where H834 H8033 they shall come H935 .
|
17. “ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಅವರನ್ನು ಜನಾಂಗಗಳೊಳಗಿಂದ ಕೂಡಿಸುವೆನು, ಚದರಿರುವ ದೇಶಗಳಿಂದ ಅವರನ್ನು ಒಟ್ಟಿಗೆ ಬರಮಾಡಿ ಇಸ್ರಾಯೇಲ್ ದೇಶವನ್ನು ಅವರಿಗೆ ದಯಪಾಲಿಸುವೆನು.’
|
17. Therefore H3651 say H559 , Thus H3541 saith H559 the Lord H136 GOD H3069 ; I will even gather H6908 you from H4480 the people H5971 , and assemble H622 you out of H4480 the countries H776 where H834 ye have been scattered H6327 , and I will give H5414 you H853 the land H127 of Israel H3478 .
|
18. ಅವರು ಅಲ್ಲಿಗೆ ಸೇರಿ ಎಲ್ಲಾ ಅಸಹ್ಯ ವಸ್ತುಗಳನ್ನೂ, ಸಮಸ್ತ ಅಸಹ್ಯ ವಿಗ್ರಹಗಳನ್ನೂ ಅಲ್ಲಿಂದ ತೆಗೆದುಹಾಕುವರು. PEPS
|
18. And they shall come H935 thither H8033 , and they shall take away H5493 H853 all H3605 the detestable things H8251 thereof and all H3605 the abominations H8441 thereof from H4480 thence.
|
19. “ಅವರು ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಕೊಂಡು ನೆರವೇರಿಸಲಿ ಎಂದು ನಾನು ಅವರಿಗೆ ಒಂದೇ ಮನಸ್ಸನ್ನು ದಯಪಾಲಿಸಿ ನೂತನ ಸ್ವಭಾವವನ್ನು ಅವರಲ್ಲಿ ಹುಟ್ಟಿಸುವೆನು.
|
19. And I will give H5414 them one H259 heart H3820 , and I will put H5414 a new H2319 spirit H7307 within H7130 you ; and I will take H5493 the stony H68 heart H3820 out of their flesh H4480 H1320 , and will give H5414 them a heart H3820 of flesh H1320 :
|
20. ಕಲ್ಲಾದ ಹೃದಯವನ್ನು ಅವರೊಳಗಿಂದ ತೆಗೆದು ಮೃದುವಾದ ಹೃದಯವನ್ನು ಅವರಿಗೆ ಅನುಗ್ರಹಿಸುವೆನು; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು.
|
20. That H4616 they may walk H1980 in my statutes H2708 , and keep H8104 mine ordinances H4941 , and do H6213 them H853 : and they shall be H1961 my people H5971 , and I H589 will be H1961 their God H430 .
|
21. ಆದರೆ ಯಾರ ಮನಸ್ಸು ತಮ್ಮ ಅಸಹ್ಯ ವಸ್ತುಗಳನ್ನೂ, ಅಸಹ್ಯ ವಿಗ್ರಹಗಳನ್ನೂ ಅನುಸರಿಸುತ್ತದೋ ಅವರ ದುರ್ನಡತೆಯನ್ನು ಅವರ ತಲೆಗೆ ಕಟ್ಟುವೆನು” ಇದು ಕರ್ತನಾದ ಯೆಹೋವನ ನುಡಿ. PS
|
21. But as for them whose heart H3820 walketh H1980 after H413 the heart H3820 of their detestable things H8251 and their abominations H8441 , I will recompense H5414 their way H1870 upon their own heads H7218 , saith H5002 the Lord H136 GOD H3069 .
|
22. {ಯೆಹೋವನ ಸಾನ್ನಿಧ್ಯವು ಪಟ್ಟಣಕ್ಕೆ ತಪ್ಪಿದ್ದು} PS ಬಳಿಕ ಚಕ್ರಗಳ ಪಕ್ಕದಲ್ಲಿದ್ದ ಕೆರೂಬಿಗಳು ರೆಕ್ಕೆಗಳನ್ನು ಹರಡಿಕೊಂಡವು, ಇಸ್ರಾಯೇಲಿನ ದೇವರ ತೇಜಸ್ಸು ಅವುಗಳ ಮೇಲ್ಗಡೆ ನೆಲೆಸಿತ್ತು.
|
22. Then did the cherubims H3742 lift up H5375 H853 their wings H3671 , and the wheels H212 beside H5980 them ; and the glory H3519 of the God H430 of Israel H3478 was over H5921 them above H4480 H4605 .
|
23. ಆಗ ಯೆಹೋವನ ತೇಜಸ್ಸು ಪಟ್ಟಣದ ಮಧ್ಯದೊಳಗಿಂದ ಏರಿ ಪಟ್ಟಣಕ್ಕೆ ಪೂರ್ವದಲ್ಲಿರುವ ಗುಡ್ಡದ ಮೇಲೆ ನಿಂತಿತು.
|
23. And the glory H3519 of the LORD H3068 went up H5927 from H4480 H5921 the midst H8432 of the city H5892 , and stood H5975 upon H5921 the mountain H2022 which H834 is on the east side H4480 H6924 of the city H5892 .
|
24. ಆಮೇಲೆ ದೇವರಾತ್ಮ ಪರವಶನಾದ ನನ್ನನ್ನು ಎತ್ತಿ, ದಿವ್ಯ ದರ್ಶನದ ಮುಖಾಂತರ ಕಸ್ದೀಯರ ದೇಶದಲ್ಲಿ ಸೆರೆಯಾದವರ ಬಳಿಗೆ ಕರೆತಂದಿತು. ನನಗಾದ ದಿವ್ಯದರ್ಶನವು ಆಗ ಮಾಯವಾಯಿತು.
|
24. Afterwards the spirit H7307 took me up H5375 , and brought H935 me in a vision H4758 by the Spirit H7307 of God H430 into Chaldea H3778 , to H413 them of the captivity H1473 . So the vision H4758 that H834 I had seen H7200 went up H5927 from H4480 H5921 me.
|
25. ಯೆಹೋವನು ತೋರಿಸಿದ ಎಲ್ಲವುಗಳನ್ನು ಕೂಡಲೆ ಸೆರೆಯವರಿಗೆ ತಿಳಿಸಿದೆನು. PE
|
25. Then I spoke H1696 unto H413 them of the captivity H1473 H853 all H3605 the things H1697 that H834 the LORD H3068 had showed H7200 me.
|