|
|
1. {ಯೆಹೋವನ ಸವಾಲಿನ ಮುಂದುವರಿಕೆ} PS * ದೈತ್ಯ ಮೊಸಳೆ. ಲಿವ್ಯಾತಾನ್ ಮೊಸಳೆಯನ್ನು ಮೀನು ಗಾಳದಿಂದ ಎಳೆಯುವಿಯೋ? ಹುರಿಯಿಂದ ಅದರ ನಾಲಿಗೆಯನ್ನು ಅದುಮಿ ಬಿಗಿಯುವಿಯೋ?
|
1. Canst thou draw out H4900 leviathan H3882 with a hook H2443 ? or his tongue H3956 with a cord H2256 which thou lettest down H8257 ?
|
2. ಅದರ ಮೂಗಿಗೆ ಗಾಳವನ್ನು ಇಡುವೆಯೋ? ಅದರ ದವಡೆಗೆ ಮುಳ್ಳನ್ನು ಚುಚ್ಚುವಿಯೋ?
|
2. Canst thou put H7760 a hook H100 into his nose H639 ? or bore H5344 his jaw H3895 through with a thorn H2336 ?
|
3. ಅದು ನಿನ್ನ ಬಳಿ ವಿಜ್ಞಾಪಿಸುವುದೋ? ನಿನ್ನ ಸಂಗಡ ಸವಿಮಾತನಾಡೀತೇ?
|
3. Will he make many H7235 supplications H8469 unto H413 thee? will he speak H1696 soft H7390 words unto H413 thee?
|
4. ಅದನ್ನು ನೀನು ಸದಾ ಆಳಾಗಿ ಸೇರಿಸಿಕೊಳ್ಳುವಂತೆ, ನಿನ್ನೊಂದಿಗೆ ಒಪ್ಪಂದ ಮಾಡಿಕೊಳ್ಳುವುದೋ?
|
4. Will he make H3772 a covenant H1285 with H5973 thee? wilt thou take H3947 him for a servant H5650 forever H5769 ?
|
5. ಅದನ್ನು ಪಕ್ಷಿಯಂತೆ ಆಡಿಸುವೆಯಾ? ನಿನ್ನ ಹುಡುಗಿಯರ ವಿನೋದಕ್ಕಾಗಿ ಅದನ್ನು ಕಟ್ಟುವೆಯಾ?
|
5. Wilt thou play H7832 with him as with a bird H6833 ? or wilt thou bind H7194 him for thy maidens H5291 ?
|
6. ಪಾಲುಗಾರರಾದ ಬೆಸ್ತರು ಅದನ್ನು ವ್ಯಾಪಾರಕ್ಕೆ ಇಡುವರೋ? ವರ್ತಕರಿಗೆ ಹಂಚಿ ಮಾರುವರೋ?
|
6. Shall the companions H2271 make a banquet H3738 of H5921 him? shall they part H2673 him among H996 the merchants H3669 ?
|
7. ಅದರ ಚರ್ಮವನ್ನೆಲ್ಲ ಕೊಂಡಿಗಳಿಂದಲೂ ಅಥವಾ ತಲೆಯನ್ನೆಲ್ಲ ಮೀನಿನ ಈಟಿಗಳಿಂದಲೂ ಚುಚ್ಚಬಲ್ಲೆಯಾ?
|
7. Canst thou fill H4390 his skin H5785 with barbed irons H7905 ? or his head H7218 with fish H1709 spears H6767 ?
|
8. ಅದರ ಮೇಲೆ ಕೈಹಾಕಿ ನೋಡು! ಆ ಜಗಳವನ್ನು ನೆನಸಿಕೊಂಡರೆ ನೀನು ಮತ್ತೆ ಅದನ್ನು ಮುಟ್ಟುವುದೇ ಇಲ್ಲ.
|
8. Lay H7760 thine hand H3709 upon H5921 him, remember H2142 the battle H4421 , do no H408 more H3254 .
|
9. ಆಹಾ, ಅದನ್ನು ಹಿಡಿಯಬೇಕೆಂಬ ನಿರೀಕ್ಷೆಯು ವ್ಯರ್ಥ! ಹಿಡಿಯಲು ಬಂದವನು ನೋಡಿದ ಮಾತ್ರಕ್ಕೆ ಬಿದ್ದು ಹೋಗುವನು.
|
9. Behold H2005 , the hope H8431 of him is in vain H3576 : shall not one be cast down H2904 even H1571 at H413 the sight H4758 of him?
|
10. ಅದನ್ನು ಕೆಣಕಲು ಧೈರ್ಯಗೊಳ್ಳುವಷ್ಟು ಉಗ್ರತೆ ಯಾರಲ್ಲಿಯೂ ಇಲ್ಲ; ಹೀಗಿರಲು ನನ್ನ ಮುಂದೆ ನಿಲ್ಲಬಲ್ಲವರು ಯಾರು?
|
10. None H3808 is so fierce H393 that H3588 dare stir him up H5782 : who H4310 then is able to stand H3320 before H6440 me?
|
11. ನಾನು ಸಾಲ ತೀರಿಸಬೇಕಾದರೆ ಮೊದಲು ಅದನ್ನು ನನಗೆ ಕೊಟ್ಟವರು ಯಾರು? ಆಕಾಶಮಂಡಲದ ಕೆಳಗಿರುವ ಸರ್ವಸ್ವವೂ ನನ್ನದೇ.
|
11. Who H4310 hath prevented H6923 me , that I should repay H7999 him? whatsoever is under H8478 the whole H3605 heaven H8064 is mine.
|
12. ನಾನು ಅದರ ಅಂಗಗಳನ್ನೂ ಶಕ್ತಿವಿಧಾನವನ್ನೂ ಸೊಗಸಾದ ಜೋಡಣೆಯನ್ನೂ ವರ್ಣಿಸದೆ ಸುಮ್ಮನಿರಲಾರೆನು.
|
12. I will not H3808 conceal H2790 his parts H905 , nor H1697 his power H1369 , nor his comely H2433 proportion H6187 .
|
13. ಅದರ ಹೊರಕವಚವನ್ನು ಯಾರು ತೆಗೆಯುವರು? ಜೋಡು ದವಡೆಗಳೊಳಗೆ ಪ್ರವೇಶಿಸುವವರು ಯಾರು?
|
13. Who H4310 can discover H1540 the face H6440 of his garment H3830 ? or who H4310 can come H935 to him with his double H3718 bridle H7448 ?
|
14. ಮುಖದ ಕದಗಳನ್ನು ಯಾರು ತೆರೆದಾರು? ಭಯವು ಅದರ ಹಲ್ಲುಗಳನ್ನು ಆವರಿಸಿಕೊಂಡಿದೆ.
|
14. Who H4310 can open H6605 the doors H1817 of his face H6440 ? his teeth H8127 are terrible H367 round about H5439 .
|
15. ಗುರಾಣಿಗಳ ಸಾಲುಗಳು ಅದರ ಹೆಚ್ಚಳಕ್ಕೆ ಆಸ್ಪದವಾಗಿದೆ. ಅವು ಬಿಗಿದು ಮುದ್ರಿಸಲ್ಪಟ್ಟಿವೆ.
|
15. His scales H650 H4043 are his pride H1346 , shut up together H5462 as with a close H6862 seal H2368 .
|
16. ಗಾಳಿಯು ಕೂಡ ನುಗ್ಗದಂತೆ ಅವು ಒಂದಕ್ಕೊಂದು ಹೊಂದಿಕೊಂಡಿವೆ.
|
16. One H259 is so near H5066 to another H259 , that no H3808 air H7307 can come H935 between H996 them.
|
17. ಪರಸ್ಪರ ಅಂಟಿಕೊಂಡು ವಿಂಗಡಿಸದ ಹಾಗೆ ಹಿಡಿದುಕೊಂಡಿವೆ.
|
17. They are joined H1692 one H376 to another H251 , they stick together H3920 , that they cannot H3808 be sundered H6504 .
|
18. ಅದರ ಸೀನಿನ ತುಂತುರುಗಳು ತಳತಳಿಸುವವು, ಕಣ್ಣು ಅರುಣನೇತ್ರಕ್ಕೆ ಸಮಾನವಾಗಿದೆ.
|
18. By his sneezes H5846 a light H216 doth shine H1984 , and his eyes H5869 are like the eyelids H6079 of the morning H7837 .
|
19. ಬಾಯೊಳಗಿಂದ ಕೊಳ್ಳಿಗಳು ಹೊರಡುವವು, ಬೆಂಕಿಕಿಡಿಗಳು ಹಾರುವವು.
|
19. Out of his mouth H4480 H6310 go H1980 burning lamps H3940 , and sparks H3590 of fire H784 leap out H4422 .
|
20. ಆಪುಹುಲ್ಲಿಗೆ ಬೆಂಕಿಯಿಟ್ಟು ಊದಿ ಕಾಯಿಸಿದ ಕೊಪ್ಪರಿಗೆಯಿಂದಲೋ ಎಂಬಂತೆ ಮೂಗಿನೊಳಗಿಂದ ಹೊಗೆ ಹಾಯುವುದು.
|
20. Out of his nostrils H4480 H5156 goeth H3318 smoke H6227 , as out of a seething H5301 pot H1731 or caldron H100 .
|
21. ಅದರ ಉಸಿರೇ ಇದ್ದಲನ್ನು ಹೊತ್ತಿಸುವುದು, ಜ್ವಾಲೆಯು ಬಾಯಿಂದೇಳುವುದು.
|
21. His breath H5315 kindleth H3857 coals H1513 , and a flame H3851 goeth out H3318 of his mouth H4480 H6310 .
|
22. ಬಲವು ಕುತ್ತಿಗೆಯಲ್ಲಿ ನೆಲೆಗೊಂಡಿದೆ, ಅದರ ಮುಂದೆ ಭಯವು ಕುಣಿದಾಡುವುದು.
|
22. In his neck H6677 remaineth H3885 strength H5797 , and sorrow H1670 is turned into joy H1750 before H6440 him.
|
23. ಅದರ ಮಾಂಸದ ಖಂಡಗಳು ಸಡಿಲವಿಲ್ಲದೆ ಅದಕ್ಕೆ ಗಟ್ಟಿಯಾಗಿ ಅಂಟಿಕೊಂಡಿವೆ.
|
23. The flakes H4651 of his flesh H1320 are joined together H1692 : they are firm H3332 in H5921 themselves ; they cannot H1077 be moved H4131 .
|
24. ಅದರ ಹೃದಯವು ಬಂಡೆಯ ಹಾಗೂ ಬೀಸುವ ಕೆಳಗಲ್ಲಿನಂತೆಯೂ ಗಟ್ಟಿಯಾಗಿದೆ.
|
24. His heart H3820 is as firm H3332 as H3644 a stone H68 ; yea , as hard H3332 as a piece H6400 of the nether H8482 millstone .
|
25. ಅದು ಎದ್ದರೆ ಶೂರರು ಕೂಡ ಅಂಜಿ ಹೊಡೆತಗಳಿಂದ ಭಯಭ್ರಾಂತರಾಗುವರು.
|
25. When he raiseth up H4480 H7613 himself , the mighty H410 are afraid H1481 : by reason of breakings H4480 H7667 they purify themselves H2398 .
|
26. ಒಬ್ಬನು ಕತ್ತಿಯೊಡನೆ ಮೇಲೆ ಬಿದ್ದರೂ ಅದಕ್ಕೇನೂ ಆಗಲಾರದು; ಬಾಣ ಭರ್ಜಿ ಈಟಿ ಇವುಗಳೂ ವ್ಯರ್ಥವೇ.
|
26. The sword H2719 of him that layeth H5381 at him cannot H1097 hold H6965 : the spear H2595 , the dart H4551 , nor the habergeon H8302 .
|
27. ಅದು ಕಬ್ಬಿಣವನ್ನು ಒಣಹುಲ್ಲನ್ನಾಗಿಯೂ ತಾಮ್ರವನ್ನು ಕೊಳೆತ ಮರವನ್ನಾಗಿಯೂ ಭಾವಿಸುವುದು.
|
27. He esteemeth H2803 iron H1270 as straw H8401 , and brass H5154 as rotten H7539 wood H6086 .
|
28. ಬಿಲ್ಲು ಅದನ್ನು ಓಡಿಸಲಾರದು, ಕವಣೆಯ ಕಲ್ಲುಗಳು ಅದಕ್ಕೆ ಹೊಟ್ಟಿನಂತಿರುವವು.
|
28. The arrow H1121 H7198 cannot H3808 make him flee H1272 : slingstones H68 H7050 are turned H2015 with him into stubble H7179 .
|
29. ಅದು ದೊಣ್ಣೆಗಳನ್ನು ಹುಲ್ಲುಕಡ್ಡಿಯಾಗಿ ಎಣಿಸುವುದು; ಬಿರ್ರನೆ ಬರುವ ಈಟಿಗೆ ನಗುವುದು.
|
29. Darts H8455 are counted H2803 as stubble H7179 : he laugheth H7832 at the shaking H7494 of a spear H3591 .
|
30. ಅದರ ಕೆಳಭಾಗವು ಚೂಪಾದ ಬೋಕಿಗಳಾಗಿದೆ, ಅದು ಕೆಸರಿನ ಮೇಲೆ ಹಲಗೆಯ ಹಾಗೆ ನೀಡಿಕೊಂಡಿರುವುದು.
|
30. Sharp H2303 stones H2789 are under H8478 him : he spreadeth H7502 sharp pointed things H2742 upon H5921 the mire H2916 .
|
31. ಜಲನಿಧಿಯನ್ನು ಹಂಡೆಯ ನೀರಿನ ಹಾಗೆ ಕುದಿಸುವುದು; ಸಮುದ್ರವನ್ನು ಕಲಕಿದ ತೈಲಪಾತ್ರೆಯಂತೆ ಮಾಡುವುದು.
|
31. He maketh the deep H4688 to boil H7570 like a pot H5518 : he maketh H7760 the sea H3220 like a pot of ointment H4841 .
|
32. ಸಾಗರಕ್ಕೆ ನರೆ ಬಂತೋ ಎಂಬಂತೆ ತಾನು ಬಂದ ದಾರಿಯನ್ನು ಶುಭ್ರಗೊಳಿಸುವುದು.
|
32. He maketh a path H5410 to shine H215 after H310 him; one would think H2803 the deep H8415 to be hoary H7872 .
|
33. ಇದಕ್ಕೆ ಸಮಾನವಾದದ್ದು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ, ಭಯವಿಲ್ಲದೆ ಇರುವುದಕ್ಕಾಗಿ ಸೃಷ್ಟಿಸಲ್ಪಟ್ಟಿದೆ.
|
33. Upon H5921 earth H6083 there is not H369 his like H4915 , who is made H6213 without H1097 fear H2844 .
|
34. ಇದು ಪ್ರತಿಯೊಂದು ದೊಡ್ಡ ಪ್ರಾಣಿಯನ್ನೂ ದಿಟ್ಟಿಸಿ ನೋಡುವುದು, ಸೊಕ್ಕಿದ ಮೃಗಗಳಿಗೆಲ್ಲಾ ರಾಜನಾಗಿರುವುದು. PE
|
34. He beholdeth H7200 H853 all H3605 high H1364 things : he H1931 is a king H4428 over H5921 all H3605 the children H1121 of pride H7830 .
|