|
|
1. {ಬಾಬೆಲಿನ ಗೀತೆ} PS ಯುವತಿಯೇ, ಬಾಬೆಲ್ ಪುರಿಯೇ, ಕೆಳಕ್ಕಿಳಿದು ಧೂಳಿನಲ್ಲಿ ಕುಳಿತುಕೋ, ಕಸ್ದೀಯರ ಯುವತಿಯೇ, ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಳಿತುಕೋ! ನಿನ್ನನ್ನು ಇನ್ನು ಕೋಮಲೆ ಮತ್ತು ಸುಕುಮಾರಿ ಎಂದು ಕರೆಯುವುದಿಲ್ಲ.
|
1. Come down H3381 , and sit H3427 in H5921 the dust H6083 , O virgin H1330 daughter H1323 of Babylon H894 , sit H3427 on the ground H776 : there is no H369 throne H3678 , O daughter H1323 of the Chaldeans H3778 : for H3588 thou shalt no H3808 more H3254 be called H7121 tender H7390 and delicate H6028 .
|
2. ಬೀಸುವ ಕಲ್ಲನ್ನು ಹಿಡಿದು ಹಿಟ್ಟನ್ನು ಬೀಸು, ಮುಸುಕನ್ನು ತೆಗೆದುಹಾಕಿ, ಈಜಾಡುವ ಬಟ್ಟೆಯ ನೆರಿಗೆಯನ್ನು ಹರಿದುಬಿಟ್ಟು, ಬೆತ್ತಲಾಗಿ ನದಿಗಳನ್ನು ಹಾದುಹೋಗು.
|
2. Take H3947 the millstones H7347 , and grind H2912 meal H7058 : uncover H1540 thy locks H6777 , make bare H2834 the leg H7640 , uncover H1540 the thigh H7785 , pass over H5674 the rivers H5104 .
|
3. ನಿನ್ನ ಬೆತ್ತಲೆತನವು ಬಯಲಿಗೆ ಬಂದು, ನೀನು ನಾಚಿಕೆಗೀಡಾಗುವಿ, ನಾನು ಯಾರನ್ನೂ ಕರುಣಿಸದೆ ಮುಯ್ಯಿತೀರಿಸುವೆನು.
|
3. Thy nakedness H6172 shall be uncovered H1540 , yea H1571 , thy shame H2781 shall be seen H7200 : I will take H3947 vengeance H5359 , and I will not H3808 meet H6293 thee as a man H120 .
|
4. ನಮ್ಮ ವಿಮೋಚಕನಿಗೆ ಸೇನಾಧೀಶ್ವರನಾದ ಯೆಹೋವನೆಂಬ ನಾಮಧೇಯ, ಆತನೇ ಇಸ್ರಾಯೇಲಿನ ಪರಿಶುದ್ಧನು!
|
4. As for our redeemer H1350 , the LORD H3068 of hosts H6635 is his name H8034 , the Holy One H6918 of Israel H3478 .
|
5. ಕಸ್ದೀಯರ ಯುವತಿಯೇ (ನಗರವೇ), ಮೌನವಾಗಿ ಕುಳಿತುಕೋ, ಕತ್ತಲೊಳಗೆ ಹೋಗು. ಏಕೆಂದರೆ ನೀನು ಇನ್ನು ರಾಜ್ಯಗಳ ರಾಣಿ ಎಂದು ಕರೆಯಲ್ಪಡುವುದಿಲ್ಲ.
|
5. Sit H3427 thou silent H1748 , and get H935 thee into darkness H2822 , O daughter H1323 of the Chaldeans H3778 : for H3588 thou shalt no H3808 more H3254 be called H7121 , The lady H1404 of kingdoms H4467 .
|
6. ನಾನು ನನ್ನ ಜನರ ಮೇಲೆ ರೋಷಗೊಂಡು, ನನ್ನ ಸ್ವತ್ತನ್ನು ಹೊಲೆಗೆಡಿಸಿದೆನು. ಅವರನ್ನು ನಿನ್ನ ಕೈವಶ ಮಾಡಳು, ನೀನು ಅವರನ್ನು ಕರುಣಿಸದೆ ಬಹುಭಾರವಾದ ನೊಗವನ್ನು ಹೊರಿಸಿದಿ.
|
6. I was wroth H7107 with H5921 my people H5971 , I have polluted H2490 mine inheritance H5159 , and given H5414 them into thine hand H3027 : thou didst show H7760 them no H3808 mercy H7356 ; upon H5921 the ancient H2205 hast thou very H3966 heavily laid H3513 thy yoke H5923 .
|
7. “ನಾನು ಶಾಶ್ವತವಾದ ರಾಣಿ” ಎಂದು ನೀನು ಅಂದುಕೊಂಡು ಅವರ ಹಿಂಸೆಗಳನ್ನು ಮನಸ್ಸಿಗೆ ತಾರದೆ, ಅವುಗಳಿಂದ ನಿನಗಾಗುವ ಪರಿಣಾಮವನ್ನು ನೆನಸಿಕೊಳ್ಳಲಿಲ್ಲ.
|
7. And thou saidst H559 , I shall be H1961 a lady H1404 forever H5769 : so that H5704 thou didst not H3808 lay H7760 these H428 things to H5921 thy heart H3820 , neither H3808 didst remember H2142 the latter end H319 of it.
|
8. “ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ, ನಾನು ವಿಧವೆಯಾಗಿ ಕುಳಿತುಕೊಳ್ಳುವುದಿಲ್ಲ, ಪುತ್ರಶೋಕವನ್ನು ಅನುಭವಿಸುವುದಿಲ್ಲ” ಎಂದು ಅಂದುಕೊಳ್ಳುವವಳೇ, ಭೋಗಾಸಕ್ತಳೇ, ನೆಮ್ಮದಿಯಾಗಿ ನೆಲೆಗೊಂಡಿರುವವಳೇ, ಈಗ ಇದನ್ನು ಕೇಳು.
|
8. Therefore hear H8085 now H6258 this H2063 , thou that art given to pleasures H5719 , that dwellest H3427 carelessly H983 , that sayest H559 in thine heart H3824 , I H589 am , and none else beside H657 H5750 me ; I shall not H3808 sit H3427 as a widow H490 , neither H3808 shall I know H3045 the loss of children H7908 :
|
9. ಒಂದೇ ದಿನದೊಳಗೆ, ಒಂದು ಕ್ಷಣದಲ್ಲಿ, ಪುತ್ರಶೋಕ ಮತ್ತು ವಿಧವೆಯ ಸ್ಥಿತಿ ಇವೆರಡೂ ನಿನಗುಂಟಾಗುವವು. ನೀನು ಎಷ್ಟು ಮಾಟಮಾಡಿದರೂ, ಎಷ್ಟೇ ಮಂತ್ರತಂತ್ರಗಳನ್ನು ನಡೆಸಿದರೂ ಇವುಗಳನ್ನು ಸಂಪೂರ್ಣವಾಗಿ ಅನುಭವಿಸುವಿ.
|
9. But these H428 two H8147 things shall come H935 to thee in a moment H7281 in one H259 day H3117 , the loss of children H7908 , and widowhood H489 : they shall come H935 upon H5921 thee in their perfection H8537 for the multitude H7230 of thy sorceries H3785 , and for the great H3966 abundance H6109 of thine enchantments H2267 .
|
10. ನೀನು ನಿನ್ನ ಕೆಟ್ಟತನದಲ್ಲಿ ನಂಬಿಕೆಯಿಟ್ಟು, “ನನ್ನನ್ನು ಯಾರೂ ನೋಡರು?” ಎಂದುಕೊಂಡಿದ್ದಿ. ನನ್ನ ಜ್ಞಾನವಿವೇಕಗಳು ನಿನ್ನನ್ನು ಸೊಟ್ಟಗೆ ತಿರುಗಿಸಿದ್ದರಿಂದ, “ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ” ಎಂದು ಯೋಚಿಸಿಕೊಂಡಿದ್ದಿ.
|
10. For thou hast trusted H982 in thy wickedness H7451 : thou hast said H559 , None H369 seeth H7200 me . Thy wisdom H2451 and thy knowledge H1847 , it H1931 hath perverted H7725 thee ; and thou hast said H559 in thine heart H3820 , I H589 am , and none else beside H657 H5750 me.
|
11. ಹೀಗಿರಲು ನೀನು ಮಂತ್ರಿಸಿ ನಿವಾರಿಸಲಾರದ ಕೇಡು ನಿನಗೆ ಸಂಭವಿಸುವುದು, ನೀನು ಪರಿಹರಿಸಲಾಗದ ವಿಪತ್ತು ನಿನ್ನ ಮೇಲೆ ಬೀಳುವುದು. ನೀನು ತಪ್ಪಿಸಿಕೊಳ್ಳಲಾಗದ ನಾಶನವು ನಿನ್ನ ಮೇಲೆ ಪಕ್ಕನೆ ಬರುವುದು.
|
11. Therefore shall evil H7451 come H935 upon H5921 thee ; thou shalt not H3808 know H3045 from whence it riseth H7837 : and mischief H1943 shall fall H5307 upon H5921 thee ; thou shalt not H3808 be able H3201 to put it off H3722 : and desolation H7722 shall come H935 upon H5921 thee suddenly H6597 , which thou shalt not H3808 know H3045 .
|
12. ನೀನು ಬಾಲ್ಯಾರಭ್ಯ ಪ್ರಯಾಸಪಟ್ಟು ಅಭ್ಯಾಸಿಸಿರುವ ನಿನ್ನ ಮಂತ್ರತಂತ್ರಗಳನ್ನೂ, ಲೆಕ್ಕವಿಲ್ಲದ ನಿನ್ನ ಮಾಟಮಂತ್ರಗಳನ್ನೂ ಪ್ರಯೋಗಿಸಿ ಎದ್ದು ನಿಲ್ಲು. ಇದರಿಂದ ಒಂದು ವೇಳೆ ನಿನಗೆ ಪ್ರಯೋಜನವಾದೀತು. ಒಂದು ವೇಳೆ ನಿನ್ನ ಶತ್ರುವಿನಲ್ಲಿ ಭಯ ಹುಟ್ಟೀತು.
|
12. Stand H5975 now H4994 with thine enchantments H2267 , and with the multitude H7230 of thy sorceries H3785 , wherein H834 thou hast labored H3021 from thy youth H4480 H5271 ; if so be H194 thou shalt be able H3201 to profit H3276 , if so be H194 thou mayest prevail H6206 .
|
13. ಮಂತ್ರಾಲೋಚನೆಗಳನ್ನು ಕೇಳಿ ಕೇಳಿ ನಿನಗೆ ಸಾಕಾಯಿತಲ್ಲವೇ. ಖಗೋಳಜ್ಞರು, ಜೋಯಿಸರು, ಪಂಚಾಂಗದವರು ಇವರೆಲ್ಲರೂ, ನಿಂತು ನಿನಗೆ ಬರುವ ವಿಪತ್ತುಗಳಿಂದ ನಿನ್ನನ್ನು ಉದ್ಧರಿಸಲಿ.
|
13. Thou art wearied H3811 in the multitude H7230 of thy counsels H6098 . Let now H4994 the astrologers H1895 H8064 , the stargazers H2372 H3556 , the monthly H2320 prognosticators H3045 , stand up H5975 , and save H3467 thee from these things that H4480 H834 shall come H935 upon H5921 thee.
|
14. ಇಗೋ, ಇವರೆಲ್ಲಾ ಕೂಳೆಯಂತಿರುವರು, ಬೆಂಕಿಯು ಅವರನ್ನು ಸುಟ್ಟುಬಿಡುವುದು; ಜ್ಞಾಲೆಯ ರಭಸದಿಂದ ತಮ್ಮನ್ನು ರಕ್ಷಿಸಿಕೊಳ್ಳಲಾರರು; ಅದು ಕಾಯಿಸಿಕೊಳ್ಳುವ ಕೆಂಡವಲ್ಲ, ಮುಂದೆ ಕುಳಿತರೆ ಹಾಯಾಗಿರುವ ಬೆಂಕಿಯೂ ಅಲ್ಲ.
|
14. Behold H2009 , they shall be H1961 as stubble H7179 ; the fire H784 shall burn H8313 them ; they shall not H3808 deliver H5337 H853 themselves H5315 from the power H4480 H3027 of the flame H3852 : there shall not H369 be a coal H1513 to warm H2552 at, nor fire H217 to sit H3427 before H5048 it.
|
15. ನೀನು ಪ್ರಯಾಸಪಟ್ಟವುಗಳೆಲ್ಲಾ ನಿನಗೆ ಹೀಗಾಗುವವು. ನಿನ್ನ ಬಾಲ್ಯದಿಂದ ನಿನ್ನಲ್ಲಿ ವ್ಯಾಪಾರ ಮಾಡಿದವರೆಲ್ಲರೂ; ಚದರಿ ತಮ್ಮ ತಮ್ಮ ಪ್ರಾಂತ್ಯಕ್ಕೆ ಹೋಗಿಬಿಡುವರು. ನಿನ್ನನ್ನು ರಕ್ಷಿಸಲು ಒಬ್ಬನೂ ಇರುವುದಿಲ್ಲ. PE
|
15. Thus H3651 shall they be H1961 unto thee with whom H834 thou hast labored H3021 , even thy merchants H5503 , from thy youth H4480 H5271 : they shall wander H8582 every one H376 to his quarter H5676 ; none H369 shall save H3467 thee.
|