|
|
1. {ಊಟದಿಂದ ಮನುಷ್ಯನು ಕೆಡುವುದಿಲ್ಲವೆಂದು ಯೇಸು ಬೋಧಿಸಿದ್ದು} (ಮಾರ್ಕ 7:1-23) PS ತರುವಾಯ ಯೆರೂಸಲೇಮಿನಿಂದ ಫರಿಸಾಯರೂ, ಶಾಸ್ತ್ರಿಗಳೂ ಯೇಸುವಿನ ಬಳಿಗೆ ಬಂದು,
|
1. Then G5119 came G4334 to Jesus G2424 scribes G1122 and G2532 Pharisees G5330 , which G3588 were of G575 Jerusalem G2414 , saying G3004 ,
|
2. “ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯವನ್ನು ಏಕೆ ಉಲ್ಲಂಘಿಸುತ್ತಾರೆ? ಅವರು ತಿನ್ನುವಾಗ ತಮ್ಮ ಕೈ ತೊಳೆದುಕೊಳ್ಳುವುದಿಲ್ಲ” ಎಂದು ಕೇಳಿದರು.
|
2. Why G1302 do thy G4675 disciples G3101 transgress G3845 the G3588 tradition G3862 of the G3588 elders G4245 ? for G1063 they wash G3538 not G3756 their G848 hands G5495 when G3752 they eat G2068 bread G740 .
|
3. ಅದಕ್ಕೆ ಆತನು ಅವರಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನೆಂದರೆ, “ನೀವು ಸಹ ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ದೇವರ ಆಜ್ಞೆಯನ್ನು ಏಕೆ ಉಲ್ಲಂಘಿಸುತ್ತೀರಿ?
|
3. But G1161 he G3588 answered G611 and said G2036 unto them G846 , Why G1302 do ye G5210 also G2532 transgress G3845 the G3588 commandment G1785 of God G2316 by G1223 your G5216 tradition G3862 ?
|
4. ಹೇಗೆಂದರೆ * ವಿಮೋ 20:12: ‘ತಂದೆತಾಯಿಗಳನ್ನು ಸನ್ಮಾನಿಸಬೇಕೆಂತಲೂ † ವಿಮೋ 21:17: ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನು ಸಾಯಲೇಬೇಕೆಂತಲೂ’ ದೇವರು ಹೇಳಿದ್ದಾನೆ.
|
4. For G1063 God G2316 commanded G1781 , saying G3004 , Honor G5091 thy G4675 father G3962 and G2532 mother G3384 : and G2532 , He that curseth G2551 father G3962 or G2228 mother G3384 , let him die G5053 the death G2288 .
|
5. ನೀವೋ, ‘ಯಾವನಾದರೂ ತನ್ನ ತಂದೆಯನಾಗಲಿ, ತಾಯಿಯನ್ನಾಗಲಿ, ನೋಡಿ ನಾನು ನಿಮ್ಮ ಸಂರಕ್ಷಣೆಗಾಗಿ ಕೊಡತಕ್ಕದ್ದನ್ನು ದೇವರಿಗೆ ಮುಡಿಪುಮಾಡಿದ್ದೇನೆ’ ಎಂದು ಹೇಳಿದರೆ,
|
5. But G1161 ye G5210 say G3004 , Whosoever G3739 G302 shall say G2036 to his father G3962 or G2228 his mother G3384 , It is a gift G1435 , by whatsoever G3739 G1437 thou mightest be profited G5623 by G1537 me G1700 ;
|
6. ಅವನು ‘ತನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕಾಗಿಲ್ಲ’ ಅನ್ನುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ಸಲುವಾಗಿ ದೇವರ ವಾಕ್ಯವನ್ನು ನಿರರ್ಥಕ ಮಾಡಿದ್ದೀರಿ.
|
6. And G2532 honor G5091 not G3364 his G848 father G3962 or G2228 his G848 mother G3384 , he shall be free. Thus G2532 have ye made the commandment of God of none effect G208 G3588 G1785 G2316 by G1223 your G5216 tradition G3862 .
|
7. ಕಪಟಿಗಳೇ, ನಿಮ್ಮ ಕುರಿತು ಯೆಶಾಯನು ಸರಿಯಾಗಿ ಪ್ರವಾದಿಸಿ, ಅವನು ಹೇಳಿರುವುದೇನೆಂದರೆ,
|
7. Ye hypocrites G5273 , well G2573 did Isaiah G2268 prophesy G4395 of G4012 you G5216 , saying G3004 ,
|
8. ‡ ಯೆಶಾ 29:13: “ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ.
|
8. This G3778 people G2992 draweth nigh G1448 unto me G3427 with their G848 mouth G4750 , and G2532 honoreth G5091 me G3165 with their lips G5491 ; but G1161 their G846 heart G2588 is G568 far G4206 from G575 me G1700 .
|
9. ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರು ಉಪದೇಶವಾಗಿ ಬೋಧಿಸುತ್ತಿರುವುದರಿಂದ ನನ್ನನ್ನು ವ್ಯರ್ಥವಾಗಿ ಆರಾಧಿಸುವರು” ಎಂಬುದೇ.
|
9. But G1161 in vain G3155 they do worship G4576 me G3165 , teaching G1321 for doctrines G1319 the commandments G1778 of men G444 .
|
10. ಆ ಮೇಲೆ ಯೇಸು ಜನರ ಗುಂಪನ್ನು ಹತ್ತಿರಕ್ಕೆ ಕರೆದು ಅವರಿಗೆ, “ಕೇಳಿ ತಿಳಿದುಕೊಳ್ಳಿರಿ,
|
10. And G2532 he called G4341 the G3588 multitude G3793 , and said G2036 unto them G846 , Hear G191 , and G2532 understand G4920 :
|
11. ಬಾಯೊಳಕ್ಕೆ ಹೋಗುವಂಥದ್ದು ಮನುಷ್ಯನನ್ನು ಅಶುದ್ಧಿಗೊಳಿಸುವುದಿಲ್ಲ. ಬಾಯೊಳಗಿಂದ ಹೊರಗೆ ಬರುವಂಥ ಮಾತು ಮನುಷ್ಯನನ್ನು ಅಶುದ್ಧಗೊಳಿಸುವುದು” ಎಂದು ಹೇಳಿದನು. PEPS
|
11. Not G3756 that which goeth G1525 into G1519 the G3588 mouth G4750 defileth G2840 a man G444 ; but G235 that which cometh G1607 out G1537 of the G3588 mouth G4750 , this G5124 defileth G2840 a man G444 .
|
12. ಆಗ ಶಿಷ್ಯರು ಬಂದು ಆತನನ್ನು, “ಫರಿಸಾಯರು ಈ ಮಾತನ್ನು ಕೇಳಿ ಬೇಸರಗೊಂಡರೆಂದು ನಿನಗೆ ಗೊತ್ತಾಯಿತೋ” ಎಂದು ಕೇಳಿದರು.
|
12. Then G5119 came G4334 his G846 disciples G3101 , and said G2036 unto him G846 , Knowest G1492 thou that G3754 the G3588 Pharisees G5330 were offended G4624 , after they heard G191 this saying G3056 ?
|
13. ಅದಕ್ಕೆ ಆತನು “ಪರಲೋಕದ ನನ್ನ ತಂದೆಯು ನೆಡದೆ ಇರುವ ಗಿಡಗಳನ್ನೆಲ್ಲಾ ಬೇರುಸಹಿತ ಕಿತ್ತುಹಾಕಲಾಗುವುದು.
|
13. But G1161 he G3588 answered G611 and said G2036 , Every G3956 plant G5451 , which G3739 my G3450 heavenly G3770 Father G3962 hath not G3756 planted G5452 , shall be rooted up G1610 .
|
14. ಅವರನ್ನು ಬಿಡಿರಿ, ಅವರು § ಮತ್ತಾ 23:16, 24; ಲೂಕ 6:39. ಕುರುಡರಿಗೆ ದಾರಿ ತೋರಿಸುವವರು ಕುರುಡರ ಹಾಗಿದ್ದಾರೆ. ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಅವರಿಬ್ಬರೂ ಕುಣಿಯೊಳಗೆ ಬೀಳುವರು” ಅಂದನು.
|
14. Let them alone G863 G846 : they be G1526 blind G5185 leaders G3595 of the blind G5185 . And G1161 if G1437 the blind G5185 lead G3594 the blind G5185 , both G297 shall fall G4098 into G1519 the ditch G999 .
|
15. ಆಗ ಪೇತ್ರನು, “ಈ ಸಾಮ್ಯವನ್ನು ನಮಗೆ ವಿವರಿಸಿ ಹೇಳು” ಅಂದನು,
|
15. Then G1161 answered G611 Peter G4074 and said G2036 unto him G846 , Declare G5419 unto us G2254 this G5026 parable G3850 .
|
16. ಅದಕ್ಕೆ ಯೇಸು, “ನೀವೂ ಕೂಡಾ ಇನ್ನೂ ತಿಳಿವಳಿಕೆ ಇಲ್ಲದವರಾಗಿದ್ದೀರಾ?
|
16. And G1161 Jesus G2424 said G2036 , Are G2075 ye G5210 also G2532 yet G188 without understanding G801 ?
|
17. ಬಾಯೊಳಕ್ಕೆ ಹೋಗುವಂಥದ್ದು ಹೊಟ್ಟೆಯಲ್ಲಿ ಸೇರಿ ವಿಸರ್ಜಿತವಾಗುತ್ತದೆಂದು ನಿಮಗೆ ತಿಳಿಯಲಿಲ್ಲವೋ?
|
17. Do not ye yet G3768 understand G3539 , that G3754 whatsoever G3956 entereth G1531 in G1519 at the G3588 mouth G4750 goeth G5562 into G1519 the G3588 belly G2836 , and G2532 is cast out G1544 into G1519 the draught G856 ?
|
18. ಆದರೆ ಬಾಯೊಳಗಿಂದ ಹೊರ ಬರುವಂಥವುಗಳು ಹೃದಯದಿಂದ ಬರುತ್ತವೆ. ಇವೇ ಮನುಷ್ಯನನ್ನು ಅಶುದ್ಧಿಮಾಡುವವು.
|
18. But G1161 those things which proceed G1607 out of G1537 the G3588 mouth G4750 come forth G1831 from G1537 the G3588 heart G2588 ; and they G2548 defile G2840 the G3588 man G444 .
|
19. ಏಕೆಂದರೆ ಹೃದಯದಿಂದ ಕೆಟ್ಟ ಆಲೋಚನೆಗಳು, ಕೊಲೆ, ವ್ಯಭಿಚಾರ, ಜಾರತ್ವ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ದೂಷಣೆಗಳು ಹೊರಟು ಬರುತ್ತವೆ.
|
19. For G1063 out G1537 of the G3588 heart G2588 proceed G1831 evil G4190 thoughts G1261 , murders G5408 , adulteries G3430 , fornications G4202 , thefts G2829 , false witness G5577 , blasphemies G988 :
|
20. ಇಂಥವುಗಳೇ ಮನುಷ್ಯನನ್ನು ಅಶುದ್ಧಿಗೊಳಿಸುತ್ತವೆ. ಆದರೆ ಕೈ ತೊಳೆದುಕೊಳ್ಳದೆ ಊಟಮಾಡುವುದು ಮನುಷ್ಯನನ್ನು ಅಶುದ್ಧಿಗೊಳಿಸುವುದಿಲ್ಲ” ಅಂದನು. PS
|
20. These G5023 are G2076 the things which defile G2840 a man G444 : but G1161 to eat G5315 with unwashen G449 hands G5495 defileth G2840 not G3756 a man G444 .
|
21. {ಕಾನಾನ್ಯ ಸ್ತ್ರೀಯ ನಂಬಿಕೆ} (ಮಾರ್ಕ 7:24-30) PS ಅನಂತರ ಯೇಸು ಅಲ್ಲಿಂದ ಹೊರಟು ತೂರ್ ಸೀದೋನ್ ಪಟ್ಟಣಗಳ ಪ್ರಾಂತ್ಯಗಳಿಗೆ ಹೋದನು.
|
21. Then G2532 Jesus G2424 went G1831 thence G1564 , and departed G402 into G1519 the G3588 coasts G3313 of Tyre G5184 and G2532 Sidon G4605 .
|
22. ಆ ಸೀಮೆಯಿಂದ ಕಾನಾನ್ಯಳಾದ ಸ್ತ್ರೀಯೊಬ್ಬಳು ಹೊರಟು ಬಂದು, “ಕರ್ತನೇ, ದಾವೀದನ ಕುಮಾರನೇ, ನನ್ನ ಮೇಲೆ ಕರುಣೆಯಿಡು, ನನ್ನ ಮಗಳಿಗೆ ದೆವ್ವಹಿಡಿದು ಬಹಳ ಯಾತನೆಪಡುತ್ತಿದ್ದಾಳೆ” ಎಂದು ಕೂಗಿಕೊಂಡಳು.
|
22. And G2532 , behold G2400 , a woman G1135 of Canaan G5478 came G1831 out of G575 the G3588 same G1565 coasts G3725 , and cried G2905 unto him G846 , saying G3004 , Have mercy G1653 on me G3165 , O Lord G2962 , thou son G5207 of David G1138 ; my G3450 daughter G2364 is grievously G2560 vexed with a devil G1139 .
|
23. ಆದರೆ ಆತನು ಆಕೆಗೆ ಏನೂ ಉತ್ತರ ಕೊಡಲಿಲ್ಲ. ಆಗ ಆತನ ಶಿಷ್ಯರು ಬಂದು, “ಅವಳು ನಮ್ಮ ಹಿಂದೆ ಕೂಗಿಕೊಂಡು ಬರುತ್ತಿದ್ದಾಳೆ. ಆಕೆಯನ್ನು ಕಳುಹಿಸಿಬಿಡು” ಎಂದು ಆತನನ್ನು ಬೇಡಿಕೊಂಡರು.
|
23. But G1161 he G3588 answered G611 her G846 not G3756 a word G3056 . And G2532 his G846 disciples G3101 came G4334 and besought G2065 him G846 , saying G3004 , Send her away G630 G846 ; for G3754 she crieth G2896 after G3693 us G2257 .
|
24. ಆದರೆ ಯೇಸು ಹೇಳಿದ್ದೇನೆಂದರೆ * ಮತ್ತಾ 10:6: “ಕಳೆದುಹೋದ ಕುರಿಗಳಂತಿರುವ ಇಸ್ರಾಯೇಲ್ ಮನೆತನದವರ ಬಳಿಗೇ ಹೊರತು ಮತ್ತಾರ ಬಳಿಗೂ ನಾನು ಕಳುಹಿಸಲ್ಪಟ್ಟವನಲ್ಲ” ಅಂದನು.
|
24. But G1161 he G3588 answered G611 and said G2036 , I am not G3756 sent G649 but G1508 unto G1519 the lost G622 sheep G4263 of the house G3624 of Israel G2474 .
|
25. ಆಗ ಆಕೆ ಬಂದು ಆತನ ಮುಂದೆ ಅಡ್ಡ ಬಿದ್ದು, “ಕರ್ತನೇ ನನಗೆ ಸಹಾಯಮಾಡು” ಅಂದಳು.
|
25. Then G1161 came G2064 she G3588 and worshiped G4352 him G846 , saying G3004 , Lord G2962 , help G997 me G3427 .
|
26. ಅದಕ್ಕಾತನು, “ಮಕ್ಕಳ ರೊಟ್ಟಿಯನ್ನು ತೆಗೆದುಕೊಂಡು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ” ಎಂದು ಉತ್ತರಕೊಟ್ಟನು.
|
26. But G1161 he G3588 answered G611 and said G2036 , It is G2076 not G3756 meet G2570 to take G2983 the G3588 children G5043 's bread G740 , and G2532 to cast G906 it to dogs G2952 .
|
27. ಆಕೆಯು, “ಹೌದು, ಕರ್ತನೇ, ಆದರೆ ನಾಯಿಮರಿಗಳಂತೂ ತಮ್ಮ ಯಜಮಾನನ ಮೇಜಿನಿಂದ ಬೀಳುವ ರೊಟ್ಟಿಯ ತುಂಡುಗಳನ್ನು ತಿನ್ನುತ್ತವಲ್ಲಾ” ಅಂದಳು.
|
27. And G1161 she G3588 said G2036 , Truth G3483 , Lord G2962 : yet G1063 the G3588 dogs G2952 eat G2068 of G575 the G3588 crumbs G5589 which fall G4098 from G575 their G848 masters G2962 ' table G5132 .
|
28. ಆಗ ಯೇಸು ಆಕೆಗೆ, “ಸ್ತ್ರೀಯೇ ನಿನ್ನ ನಂಬಿಕೆ ದೊಡ್ಡದು. ನಿನ್ನ ಇಷ್ಟದಂತೆಯೇ ನಿನಗಾಗಲಿ” ಎಂದು ಉತ್ತರಕೊಟ್ಟನು. ಅದೇ ಗಳಿಗೆಯಲ್ಲಿ ಆಕೆಯ ಮಗಳು ಸ್ವಸ್ಥವಾದಳು. PS
|
28. Then G5119 Jesus G2424 answered G611 and said G2036 unto her G846 , O G5599 woman G1135 , great G3173 is thy G4675 faith G4102 : be G1096 it unto thee G4671 even as G5613 thou wilt. And G2532 G2309 G2532 her G846 daughter G2364 was made whole G2390 from G575 that very G1565 hour G5610 .
|
29. {ಯೇಸು ಅನೇಕರನ್ನು ಸ್ವಸ್ಥಮಾಡಿದ್ದು} PS ಯೇಸು ಅಲ್ಲಿಂದ ಹೊರಟು ಗಲಿಲಾಯ ಸಮುದ್ರದ ಬಳಿಗೆ ಬಂದನು. ಆಗ ಆತನು ಒಂದು ಬೆಟ್ಟವನ್ನು ಹತ್ತಿ ಕುಳಿತುಕೊಂಡನು.
|
29. And G2532 Jesus G2424 departed G3327 from thence G1564 , and came G2064 nigh unto G3844 the G3588 sea G2281 of Galilee G1056 ; and G2532 went up G305 into G1519 a mountain G3735 , and sat down G2521 there G1563 .
|
30. ಆಗ ಜನರು ದೊಡ್ಡ ಗುಂಪುಗಳಾಗಿ ಆತನ ಬಳಿಗೆ ಬಂದುದಲ್ಲದೆ ಕುಂಟರು, ಕುರುಡರು, ಮೂಕರು, ಕೈಕಾಲಿಲ್ಲದವರು ಈ ಮುಂತಾದ ಅನೇಕರನ್ನು ತಮ್ಮೊಂದಿಗೆ ಕರೆತಂದು ಅವರನ್ನು ಆತನ ಪಾದಗಳ ಬಳಿಯಲ್ಲಿ ಬಿಟ್ಟರು. ಆತನು ಅವರನ್ನು ಸ್ವಸ್ಥಮಾಡಿದನು.
|
30. And G2532 great G4183 multitudes G3793 came G4334 unto him G846 , having G2192 with G3326 them G1438 those that were lame G5560 , blind G5185 , dumb G2974 , maimed G2948 , and G2532 many G4183 others G2087 , and G2532 cast them down G4496 G846 at G3844 Jesus G2424 ' feet G4228 ; and G2532 he healed G2323 them G846 :
|
31. ಮೂಕರಾಗಿದ್ದವರು ಮಾತನಾಡುವುದನ್ನೂ ಕೈಕಾಲಿಲ್ಲದವರು ಸ್ವಸ್ಥವಾದದ್ದನ್ನೂ, ಕುಂಟರು ನಡೆದಾಡುವುದನ್ನೂ, ಕುರುಡರು ನೋಡುವುದನ್ನೂ ಜನರು ಕಂಡು ಆಶ್ಚರ್ಯಪಟ್ಟು ಇಸ್ರಾಯೇಲ್ಯರ ದೇವರನ್ನು ಕೊಂಡಾಡಿದರು. PS
|
31. Insomuch that G5620 the G3588 multitude G3793 wondered G2296 , when they saw G991 the dumb G2974 to speak G2980 , the maimed G2948 to be whole G5199 , the lame G5560 to walk G4043 , and G2532 the blind G5185 to see G991 : and G2532 they glorified G1392 the G3588 God G2316 of Israel G2474 .
|
32. {ನಾಲ್ಕು ಸಾವಿರ ಜನರಿಗೆ ಊಟಮಾಡಿಸಿದ್ದು} (ಮಾರ್ಕ 8:1-10) PS ಆಗ ಯೇಸು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ, “ನಾನು ಈ ಜನರನ್ನು ನೋಡಿ ಕನಿಕರಪಡುತ್ತೇನೆ. ಏಕೆಂದರೆ ಅವರು ಮೂರು ದಿನಗಳಿಂದಲೂ ನನ್ನ ಜೊತೆಯಲ್ಲಿದ್ದಾರೆ. ಅವರಿಗೆ ತಿನ್ನುವುದಕ್ಕೆ ಏನೂ ಇಲ್ಲ. ಅವರನ್ನು ಹಸಿವಿನಿಂದ ಕಳುಹಿಸಿಬಿಡುವುದಕ್ಕೆ ನನಗೆ ಇಷ್ಟವಿಲ್ಲ. ಅವರು ದಾರಿಯಲ್ಲಿ ಬಳಲಿ ಹೋದಾರು” ಎಂದು ಹೇಳಿದನು.
|
32. Then G1161 Jesus G2424 called G4341 his G848 disciples G3101 unto him, and said G2036 , I have compassion G4697 on G1909 the G3588 multitude G3793 , because G3754 they continue with G4357 me G3427 now G2235 three G5140 days G2250 , and G2532 have G2192 nothing G5101 G3756 to eat G5315 : and G2532 I will G2309 not G3756 send them away G630 G846 fasting G3523 , lest G3379 they faint G1590 in G1722 the G3588 way G3598 .
|
33. ಶಿಷ್ಯರು ಆತನಿಗೆ, “ಇಷ್ಟು ದೊಡ್ಡ ಜನರ ಗುಂಪನ್ನು ತೃಪ್ತಿಪಡಿಸಲಾಗುವಷ್ಟು ರೊಟ್ಟಿಯು ಈ ಅಡವಿಯಲ್ಲಿ ನಮಗೆ ಎಲ್ಲಿಂದ ಸಿಕ್ಕೀತು?” ಎಂದು ಹೇಳಿದರು.
|
33. And G2532 his G846 disciples G3101 say G3004 unto him G846 , Whence G4159 should we G2254 have so much G5118 bread G740 in G1722 the wilderness G2047 , as G5620 to fill G5526 so great G5118 a multitude G3793 ?
|
34. ಅದಕ್ಕೆ ಯೇಸು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದ್ದಕ್ಕೆ ಅವರು, “ಏಳು ರೊಟ್ಟಿಗಳಿವೆ ಮತ್ತು ಕೆಲವು ಸಣ್ಣ ಮೀನುಗಳು ಅವೆ” ಅಂದರು.
|
34. And G2532 Jesus G2424 saith G3004 unto them G846 , How many G4214 loaves G740 have G2192 ye? And G1161 they G3588 said G2036 , Seven G2033 , and G2532 a few G3641 little fishes G2485 .
|
35. ಆಗ ಆತನು ಜನರ ಗುಂಪಿಗೆ, ನೆಲದ ಮೇಲೆ ಕುಳಿತುಕೊಳ್ಳಿರಿ ಎಂದು ಅಪ್ಪಣೆ ಕೊಟ್ಟನು.
|
35. And G2532 he commanded G2753 the G3588 multitude G3793 to sit down G377 on G1909 the G3588 ground G1093 .
|
36. ಆತನು ಆ ಏಳು ರೊಟ್ಟಿಗಳನ್ನೂ ಆ ಮೀನುಗಳನ್ನೂ ತೆಗೆದುಕೊಂಡು ದೇವರಿಗೆ ಸ್ತೋತ್ರ ಮಾಡಿ ಅವುಗಳನ್ನು ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಜನರಿಗೆ ಹಂಚಿಕೊಟ್ಟರು.
|
36. And G2532 he took G2983 the G3588 seven G2033 loaves G740 and G2532 the G3588 fishes G2486 , and G2532 gave thanks G2168 , and broke G2806 them, and G2532 gave G1325 to his G848 disciples G3101 , and G1161 the G3588 disciples G3101 to the G3588 multitude G3793 .
|
37. ಆ ಜನರೆಲ್ಲರೂ ಊಟಮಾಡಿ ತೃಪ್ತರಾದರು. ಉಳಿದ ತುಂಡುಗಳನ್ನು ಕೂಡಿಸಲಾಗಿ ಏಳು ಪುಟ್ಟಿಗಳು ತುಂಬಿದವು.
|
37. And G2532 they did all G3956 eat G5315 , and G2532 were filled G5526 : and G2532 they took up G142 of the G3588 broken G2801 meat that was left G4052 seven G2033 baskets G4711 full G4134 .
|
38. ಊಟಮಾಡಿದವರು ಹೆಂಗಸರು ಮಕ್ಕಳು ಅಲ್ಲದೆ ಗಂಡಸರೇ ನಾಲ್ಕು ಸಾವಿರವಿದ್ದರು.
|
38. And G1161 they that did eat G2068 were G2258 four thousand G5070 men G435 , beside G5565 women G1135 and G2532 children G3813 .
|
39. ತರುವಾಯ ಆತನು ಆ ಜನರ ಗುಂಪುಗಳನ್ನು ಕಳುಹಿಸಿ ಬಿಟ್ಟು ದೋಣಿಯನ್ನು ಹತ್ತಿ ಮಗದಾನ್ ಸೀಮೆಗೆ ಹೋದನು. PE
|
39. And G2532 he sent away G630 the G3588 multitude G3793 , and took ship G1684 G1519 G4143 , and G2532 came G2064 into G1519 the G3588 coasts G3725 of Magdala G3093 .
|