|
|
1. {ಯೋಬನು ಜ್ಞಾನ ಮತ್ತು ತಿಳಿವಳಿಕೆ ಕುರಿತು ಮಾತನಾಡಿದ್ದು} PS “ಬೆಳ್ಳಿ ಸಿಕ್ಕುವ ಗಣಿಯೂ, ಚಿನ್ನದ ಅದುರು ದೊರಕುವ ಸ್ಥಳವೂ ಉಂಟಷ್ಟೆ.
|
1. Surely H3588 there is H3426 a vein H4161 for the silver H3701 , and a place H4725 for gold H2091 where they fine H2212 it .
|
2. ಮಣ್ಣಿನೊಳಗಿಂದ ಕಬ್ಬಿಣವನ್ನು ತೆಗೆಯುವರು, ಕಲ್ಲನ್ನು ಕರಗಿಸಿ ತಾಮ್ರವನ್ನು ಪಡೆಯುವರು.
|
2. Iron H1270 is taken H3947 out of the earth H4480 H6083 , and brass H5154 is molten H6694 out of the stone H68 .
|
3. ಮನುಷ್ಯರು ಕತ್ತಲನ್ನು ನಿವಾರಿಸಿ ಕಾರ್ಗತ್ತಲಲ್ಲಿಯೂ, ಘೋರಾಂಧಕಾರದಲ್ಲಿಯೂ ಮರೆಯಾಗಿರುವ ಕಲ್ಲುಗಳನ್ನು ಕಟ್ಟಕಡೆಯ ವರೆಗೆ ಹುಡುಕುವರು.
|
3. He setteth H7760 an end H7093 to darkness H2822 , and searcheth out H2713 H1931 all H3605 perfection H8503 : the stones H68 of darkness H652 , and the shadow of death H6757 .
|
4. ಗಣಿಯನ್ನು ತೋಡಿ ತೋಡಿ ಭೂಮಿಯೊಳಗೆ ಬಹುದೂರ ಜನರು ವಾಸಸ್ಥಳಗಳಿಂದ ದೂರವಾಗುವರು, ಭೂಮಿಯ ಮೇಲೆ ನಡೆದಾಡುವವರಿಗೆ ಕಾಣದೆ, ನರಲೋಕಕ್ಕೆ ಅನ್ಯರಾಗಿ ಅತ್ತಿತ್ತ ಅಲೆದಾಡುವರು.
|
4. The flood H5158 breaketh out H6555 from H4480 H5973 the inhabitant H1481 ; even the waters forgotten H7911 of H4480 the foot H7272 : they are dried up H1809 , they are gone away H5128 from men H4480 H582 .
|
5. ಭೂಮಿಯು ಅನ್ನವನ್ನು ಕೊಡುವುದು, ಅದರ ಕೆಳಭಾಗವು ಬೆಂಕಿ ಬಿದ್ದಂತೆ ಹಾಳಾಗಿರುವುದು.
|
5. As for the earth H776 , out of H4480 it cometh H3318 bread H3899 : and under H8478 it is turned up H2015 as it were H3644 fire H784 .
|
6. ಅದರ ಕಲ್ಲುಗಳಲ್ಲಿ ಇಂದ್ರನೀಲ ಮಣಿಗಳು ಸಿಕ್ಕುವವು, ಅದರಲ್ಲಿ ಚಿನ್ನದ ಪುಡಿಯೂ ಇರುವುದು.
|
6. The stones H68 of it are the place H4725 of sapphires H5601 : and it hath dust H6083 of gold H2091 .
|
7. ಆ ದಾರಿಯು ಯಾವ ಹದ್ದಿಗೂ ತಿಳಿಯದು, ಗಿಡಗದ ಕಣ್ಣಿಗೂ ಬಿದ್ದಿಲ್ಲ.
|
7. There is a path H5410 which no H3808 fowl H5861 knoweth H3045 , and which the vulture H344 's eye H5869 hath not H3808 seen H7805 :
|
8. ಸೊಕ್ಕಿದ ಮೃಗಗಳು ಅದನ್ನು ತುಳಿದಿಲ್ಲ, ಸಿಂಹವು ಆ ಮಾರ್ಗವನ್ನು ತುಳಿದಿಲ್ಲ.
|
8. The lion H7830 's whelps H1121 have not H3808 trodden H1869 it, nor H3808 the fierce lion H7826 passed H5710 by H5921 it.
|
9. ಮನುಷ್ಯನು ಕಗ್ಗಲ್ಲಿನ ಮೇಲೆ ಕೈಮಾಡಿ ಬೆಟ್ಟಗಳನ್ನು ಬುಡದ ತನಕ ಕೆಡವಿಬಿಡುವನು.
|
9. He putteth forth H7971 his hand H3027 upon the rock H2496 ; he overturneth H2015 the mountains H2022 by the roots H4480 H8328 .
|
10. ಬಂಡೆಗಳಲ್ಲಿ ಸುರಂಗಗಳನ್ನು ಕೊರೆಯುವನು; ಅವನ ಕಣ್ಣು ಅಮೂಲ್ಯ ಪದಾರ್ಥಗಳನ್ನೆಲ್ಲಾ ಕಾಣುವುದು.
|
10. He cutteth out H1234 rivers H2975 among the rocks H6697 ; and his eye H5869 seeth H7200 every H3605 precious thing H3366 .
|
11. ನೀರಿನ ಒರತೆಗಳನ್ನು ಹುಡುಕಿ ಹೊರತರುತ್ತಾನೆ, ಮರೆಯಾಗಿದ್ದ ವಸ್ತುವನ್ನು ಬೆಳಕಿಗೆ ತರುವನು.
|
11. He bindeth H2280 the floods H5104 from overflowing H4480 H1065 ; and the thing that is hid H8587 bringeth he forth H3318 to light H216 .
|
12. ಜ್ಞಾನವಾದರೋ ಎಲ್ಲಿ ಸಿಕ್ಕೀತು? ವಿವೇಕವು ದೊರೆಯುವ ಸ್ಥಳವೆಲ್ಲಿ?
|
12. But where H4480 H370 shall wisdom H2451 be found H4672 ? and where H335 H2088 is the place H4725 of understanding H998 ?
|
13. ಅದರ ಕ್ರಯವು ಯಾರಿಗೂ ಗೊತ್ತಿಲ್ಲ, ಭೂಲೋಕದಲ್ಲಿ ಅದನ್ನು ಯಾರೂ ಕಂಡುಕೊಳ್ಳಲಾರರು.
|
13. Man H582 knoweth H3045 not H3808 the price H6187 thereof; neither H3808 is it found H4672 in the land H776 of the living H2416 .
|
14. ಭೂಮಿಯ ಕೆಳಗಣ ಸಾಗರವು ನನ್ನಲ್ಲಿ ಇಲ್ಲ ಎನ್ನುವುದು, ಸಮುದ್ರವು, ತನ್ನ ಹತ್ತಿರ ಇಲ್ಲ ಎಂದು ಹೇಳುವುದು.
|
14. The depth H8415 saith H559 , It H1931 is not H3808 in me : and the sea H3220 saith H559 , It is not H369 with H5978 me.
|
15. ಚೊಕ್ಕ ಬಂಗಾರವನ್ನು ಕೊಟ್ಟು ಅದನ್ನು ಕೊಂಡುಕೊಳ್ಳುವುದು ಅಸಾಧ್ಯ, ಅದರ ಬೆಲೆಗೆ ಬೆಳ್ಳಿಯನ್ನು ತೂಗುವುದು ಅಶಕ್ಯ.
|
15. It cannot H3808 be gotten H5414 for gold H2091 H5462 H8478 , neither H3808 shall silver H3701 be weighed H8254 for the price H4242 thereof.
|
16. ಓಫೀರ್ ದೇಶದ ಅಪರಂಜಿ, ಅಮೂಲ್ಯ ಗೋಮೇಧಿಕ, ಇಂದ್ರನೀಲ, ಇವುಗಳಿಂದ ಜ್ಞಾನದ ಬೆಲೆ ಇಷ್ಟೆಂದು ಗೊತ್ತು ಮಾಡುವುದಕ್ಕೆ ಆಗದು.
|
16. It cannot H3808 be valued H5541 with the gold H3800 of Ophir H211 , with the precious H3368 onyx H7718 , or the sapphire H5601 .
|
17. ಬಂಗಾರವಾಗಲಿ, ಸ್ಫಟಿಕವಾಗಲಿ ಅದಕ್ಕೆ ಸಮವಾದೀತೇ? ಚಿನ್ನದ ಆಭರಣಗಳನ್ನು ಅದಕ್ಕೆ ಬದಲಾಗಿಕೊಡುವುದು ಸಾಧ್ಯವೋ?
|
17. The gold H2091 and the crystal H2137 cannot H3808 equal H6186 it : and the exchange H8545 of it shall not be for jewels H3627 of fine gold H6337 .
|
18. ಜ್ಞಾನವಿರುವಲ್ಲಿ ಹವಳವೂ, ಸ್ಫಟಿಕವೂ ನೆನಪಿಗೆ ಬರುವುದಿಲ್ಲ. ಮುತ್ತುಗಳನ್ನು ಸಂಪಾದಿಸುವುದಕ್ಕಿಂತಲೂ ಜ್ಞಾನವನ್ನು ಸಂಪಾದಿಸುವುದು ಕಷ್ಟ!
|
18. No H3808 mention shall be made H2142 of coral H7215 , or of pearls H1378 : for the price H4901 of wisdom H2451 is above rubies H4480 H6443 .
|
19. ಕೂಷ್ ದೇಶದ ಪುಷ್ಯರಾಗವು ಅದಕ್ಕೆ ಸಾಟಿಯಿಲ್ಲ, ಶುದ್ಧ ಕನಕದೊಡನೆ ಅದನ್ನು ತೂಗಲಾಗದು.
|
19. The topaz H6357 of Ethiopia H3568 shall not H3808 equal H6186 it, neither H3808 shall it be valued H5541 with pure H2889 gold H3800 .
|
20. ಹೀಗಿರಲು ಜ್ಞಾನವು ಎಲ್ಲಿಂದ ಬರುವುದು? ವಿವೇಕವು ಯಾವ ಸ್ಥಳದಲ್ಲಿ ದೊರಕೀತು?
|
20. Whence H4480 H370 then cometh H935 wisdom H2451 ? and where H335 H2088 is the place H4725 of understanding H998 ?
|
21. ಅದು ಎಲ್ಲಾ ಜೀವಿಗಳ ದೃಷ್ಟಿಗೆ ಅಗೋಚರವಾಗಿದೆ, ಆಕಾಶದ ಪಕ್ಷಿಗಳಿಗೆ ಮರೆಯಾಗಿದೆ.
|
21. Seeing it is hid H5956 from the eyes H4480 H5869 of all H3605 living H2416 , and kept close H5641 from the fowls H4480 H5775 of the air H8064 .
|
22. ನಾಶನವೂ * ನಾಶನವೂ ಅಥವಾ ಅಬ್ಬದೋನ್ ಅಂದರೆ ಅಧೋಲೋಕ. , ಮೃತ್ಯುವೂ, ‘ಅದರ ಸುದ್ದಿ ಮಾತ್ರ ನಮ್ಮ ಕಿವಿಗೆ ಬಿದ್ದಿದೆ’ ಎಂದು ಹೇಳುವವು.
|
22. Destruction H11 and death H4194 say H559 , We have heard H8085 the fame H8088 thereof with our ears H241 .
|
23. ಅದರ ಮಾರ್ಗವನ್ನು ಬಲ್ಲವನು ದೇವರೇ; ಅದರ ಸ್ಥಳವು ಆತನೊಬ್ಬನಿಗೇ ಗೊತ್ತು.
|
23. God H430 understandeth H995 the way H1870 thereof , and he H1931 knoweth H3045 H853 the place H4725 thereof.
|
24. ಆತನೊಬ್ಬನೇ ಭೂಮಿಯ ಕಟ್ಟಕಡೆಯ ತನಕ ದೃಷ್ಟಿಸಿ ಆಕಾಶದ ಕೆಳಗಿನ ಸಮಸ್ತವನ್ನೂ ನೋಡುವವನಾಗಿದ್ದಾನೆ.
|
24. For H3588 he H1931 looketh H5027 to the ends H7098 of the earth H776 , and seeth H7200 under H8478 the whole H3605 heaven H8064 ;
|
25. ಆತನು ಗಾಳಿಗೆ ತಕ್ಕಷ್ಟು ತೂಕವನ್ನು ನೇಮಿಸಿ ನೀರುಗಳನ್ನು ತಕ್ಕ ಪರಿಮಾಣಗಳಿಂದ ಅಳತೆಮಾಡಿದನು.
|
25. To make H6213 the weight H4948 for the winds H7307 ; and he weigheth H8505 the waters H4325 by measure H4060 .
|
26. ಮಳೆಗೆ ಕಟ್ಟಳೆಯನ್ನೂ, ಗರ್ಜಿಸುವ ಸಿಡಿಲಿಗೆ ದಾರಿಯನ್ನೂ ಏರ್ಪಡಿಸಿದಾಗಲೇ,
|
26. When he made H6213 a decree H2706 for the rain H4306 , and a way H1870 for the lightning H2385 of the thunder H6963 :
|
27. ಜ್ಞಾನವನ್ನು ಕಂಡು ಲಕ್ಷಿಸಿದನು, ಅದನ್ನು ಸ್ಥಾಪಿಸಿದ್ದಲ್ಲದೆ ವಿಮರ್ಶೆಮಾಡಿದನು.
|
27. Then H227 did he see H7200 it , and declare H5608 it ; he prepared H3559 it, yea H1571 , and searched it out H2713 .
|
28. ಆಮೇಲೆ ಮನುಷ್ಯರಿಗೆ, ‘ಇಗೋ, ಕರ್ತನ ಭಯವೇ ಜ್ಞಾನ; ದುಷ್ಟತನವನ್ನು ತ್ಯಜಿಸುವುದೇ ವಿವೇಕ’ ” ಎಂದು ಹೇಳಿದನು. PE
|
28. And unto man H120 he said H559 , Behold H2005 , the fear H3374 of the Lord H136 , that H1931 is wisdom H2451 ; and to depart H5493 from evil H4480 H7451 is understanding H998 .
|