|
|
1. {ಹಾಮಾನನ ದುಷ್ಟ ಯೋಜನೆಯನ್ನು ಬಯಲುಪಡಿಸಿದ ಎಸ್ತೇರ್ ರಾಣಿ} PS ಅರಸನು ಹಾಮಾನನೊಡನೆ ಎಸ್ತೇರಳ ಮನೆಗೆ ಔತಣಕ್ಕಾಗಿ ಬಂದನು.
|
1. So the king H4428 and Haman H2001 came H935 to banquet H8354 with H5973 Esther H635 the queen H4436 .
|
2. ಅವನು ಈ ಎರಡನೆಯ ದಿನದಲ್ಲಿಯೂ ದ್ರಾಕ್ಷಾರಸ ಪಾನಮಾಡುತ್ತಿರುವಾಗ ಅರಸನು ಎಸ್ತೇರಳಿಗೆ, “ಎಸ್ತೇರ್ ರಾಣಿಯೇ, ನಿನ್ನ ವಿಜ್ಞಾಪನೆ ಯಾವುದು ಹೇಳು; ಅದನ್ನು ನೆರವೇರಿಸುವೆನು. ನೀನು ನನ್ನ ಅರ್ಧರಾಜ್ಯವನ್ನು ಕೇಳಿಕೊಂಡರೂ ಸರಿಯೇ, ಅದನ್ನು ನಿನಗೆ ಕೊಡುವೆನು” ಎಂದು ಹೇಳಿದನು.
|
2. And the king H4428 said H559 again H1571 unto Esther H635 on the second H8145 day H3117 at the banquet H4960 of wine H3196 , What H4100 is thy petition H7596 , queen H4436 Esther H635 ? and it shall be granted H5414 thee : and what H4100 is thy request H1246 ? and it shall be performed H6213 , even to H5704 the half H2677 of the kingdom H4438 .
|
3. ಆಗ ಎಸ್ತೇರ್ ರಾಣಿಯು, “ಅರಸನು ನನ್ನ ಮೇಲೆ ಕಟಾಕ್ಷವಿಟ್ಟು ಸಮ್ಮತಿಸುವುದಾದರೆ ನನ್ನ ವಿಜ್ಞಾಪನೆಯನ್ನೂ, ಪ್ರಾರ್ಥನೆಯನ್ನೂ ಲಾಲಿಸಿ ನನ್ನ ಜೀವವನ್ನೂ ಮತ್ತು ನನ್ನ ಜನಾಂಗವನ್ನೂ ಉಳಿಸಬೇಕು.
|
3. Then Esther H635 the queen H4436 answered H6030 and said H559 , If H518 I have found H4672 favor H2580 in thy sight H5869 , O king H4428 , and if H518 it please H2895 H5921 the king H4428 , let my life H5315 be given H5414 me at my petition H7596 , and my people H5971 at my request H1246 :
|
4. ಜನರು ನಮ್ಮನ್ನು ಕೊಂದು ಸಂಹರಿಸಿ, ನಮ್ಮನ್ನು ನಿರ್ನಾಮಗೊಳಿಸುವ ಹಾಗೆ ನಾವು ಮಾರಲ್ಪಟ್ಟೆವು. ನಾವು ಸೇವಕ ಸೇವಕಿಯರಾಗುವುದಕ್ಕೆ ಗುಲಾಮರಂತೆ ಮಾರಲ್ಪಟ್ಟಿದ್ದರೆ ಆ ಕಷ್ಟದ ವಿಷಯದಲ್ಲಿ ರಾಜನನ್ನು ತೊಂದರೆಪಡಿಸುವುದು ಯೋಗ್ಯವಲ್ಲವೆಂದು ಸುಮ್ಮನಿರುತ್ತಿದ್ದೆನು * ಆ ಕಷ್ಟದ ವಿಷಯದಲ್ಲಿ ರಾಜನನ್ನು ತೊಂದರೆಪಡಿಸುವುದು ಯೋಗ್ಯವಲ್ಲವೆಂದು ಸುಮ್ಮನಿರುತ್ತಿದ್ದೆನು ಅರಸನಿಗೆ ಉಂಟಾದ ನಷ್ಟವನ್ನು ಶತ್ರುವು ಸರಿಪಡಿಸಿಕೊಡಲಾರನು. ” ಎಂದು ಉತ್ತರಕೊಟ್ಟಳು.
|
4. For H3588 we are sold H4376 , I H589 and my people H5971 , to be destroyed H8045 , to be slain H2026 , and to perish H6 . But if H432 we had been sold H4376 for bondmen H5650 and bondwomen H8198 , I had held my tongue H2790 , although H3588 the enemy H6862 could not H369 countervail H7737 the king H4428 's damage H5143 .
|
5. ಅಹಷ್ವೇರೋಷ್ ರಾಜನು ಎಸ್ತೇರ್ ರಾಣಿಯನ್ನು, “ಇಂಥ ದುಷ್ಕೃತ್ಯದ ಮೇಲೆ ಮನಸ್ಸಿಟ್ಟವನು ಯಾವನು? ಅವನೆಲ್ಲಿ?” ಎಂದು ಕೇಳಿದನು.
|
5. Then the king H4428 Ahasuerus H325 answered H559 and said H559 unto Esther H635 the queen H4436 , Who H4310 is he H1931 H2088 , and where H335 is he H2088 H1931 , that H834 durst presume H4390 in his heart H3820 to do H6213 so H3651 ?
|
6. ಆಗ ಆಕೆಯು, “ನಮ್ಮನ್ನು ಬಾಧಿಸಬೇಕೆಂದಿರುವ ಹಗೆಗಾರನು ಮತ್ತು ಶತ್ರುವು ಈ ದುಷ್ಟ ಹಾಮಾನನೇ” ಎಂದಳು. ಇದನ್ನು ಕೇಳಿ ಹಾಮಾನನು ರಾಣಿಯ ಮುಂದೆ ಭಯಭೀತನಾದನು.
|
6. And Esther H635 said H559 , The adversary H376 H6862 and enemy H341 is this H2088 wicked H7451 Haman H2001 . Then Haman H2001 was afraid H1204 before H4480 H6440 the king H4428 and the queen H4436 .
|
7. ಅರಸನು ರೌದ್ರಾವೇಶನಾಗಿ ದ್ರಾಕ್ಷಾರಸ ಪಾನಮಾಡುವುದನ್ನು ಬಿಟ್ಟೆದ್ದು ಅರಮನೆಯ ತೋಟಕ್ಕೆ ಹೋದನು. ಹಾಮಾನನಾದರೋ ಅರಸನಿಂದ ತನಗೆ ಕೇಡು ಸಿದ್ಧವಾಯಿತೆಂದು ತಿಳಿದು ಎಸ್ತೇರಳ ಹತ್ತಿರ ತನ್ನ ಪ್ರಾಣರಕ್ಷಣೆಯ ನಿಮಿತ್ತವಾಗಿ ಬಿನ್ನಹಮಾಡಿಕೊಳ್ಳಲು ನಿಂತುಕೊಂಡಿದ್ದನು.
|
7. And the king H4428 arising H6965 from the banquet H4480 H4960 of wine H3196 in his wrath H2534 went into H413 the palace H1055 garden H1594 : and Haman H2001 stood up H5975 to make request H1245 for H5921 his life H5315 to Esther H4480 H635 the queen H4436 ; for H3588 he saw H7200 that H3588 there was evil H7451 determined H3615 against H413 him by H4480 H854 the king H4428 .
|
8. ಅರಸನು ಅರಮನೆಯ ತೋಟದಿಂದ ತಾನು ದ್ರಾಕ್ಷಾರಸ ಪಾನಮಾಡಿದ ಗೃಹಕ್ಕೆ ಹಿಂತಿರುಗಿ ಬಂದು ಎಸ್ತೇರಳು ಒರಗಿಕೊಳ್ಳುವ ಸುಖಾಸನದ ಮೇಲೆ ಹಾಮಾನನು ಬಿದ್ದುಕೊಂಡಿರುವುದನ್ನು ಕಂಡು, “ಇವನು ರಾಣಿಯನ್ನು ನನ್ನ ಮುಂದೆಯೇ ಅರಮನೆಯಲ್ಲಿ ಭಂಗಪಡಿಸಬೇಕೆಂದಿರುತ್ತಾನೋ?” ಅಂದನು. ಅರಸನ ಬಾಯಿಂದ ಈ ಮಾತು ಹೊರಬಂದ ಕೂಡಲೆ ಸೇವಕರು ಹಾಮಾನನ ಮುಖಕ್ಕೆ ಮುಸುಕು ಹಾಕಿ ಎಳೆದುಕೊಂಡು ಹೋದರು. PS
|
8. Then the king H4428 returned H7725 out of the palace garden H4480 H1594 H1055 into H413 the place H1004 of the banquet H4960 of wine H3196 ; and Haman H2001 was fallen H5307 upon H5921 the bed H4296 whereon H834 H5921 Esther H635 was . Then said H559 the king H4428 , Will he force H3533 H853 the queen H4436 also H1571 before H5973 me in the house H1004 ? As the word H1697 went out H3318 of the king's mouth H4480 H6310 H4428 , they covered H2645 Haman H2001 's face H6440 .
|
9. {ಹಾಮಾನನಿಗಾದ ಗಲ್ಲು ಶಿಕ್ಷೆ} PS ಆಗ ಅರಸನ ಸೇವೆಮಾಡುತ್ತಿದ್ದ ಕಂಚುಕಿಗಳಲ್ಲಿ ಒಬ್ಬನಾದ ಹರ್ಬೋನನು, “ಅರಸನ ಪ್ರಾಣರಕ್ಷಣೆಗಾಗಿ ಸಮಾಚಾರವನ್ನು ತಿಳಿಸಿದ ಮೊರ್ದೆಕೈಯನ್ನು ನೇತುಹಾಕಿಸುವುದಕ್ಕೆ ಇವನು ಐವತ್ತು ಮೊಳ ಎತ್ತರವಾದ ಗಲ್ಲು ಕಂಬವನ್ನು ಸಿದ್ಧಮಾಡಿಸಿದ್ದಾನೆ” ಎಂದನು. ಅದಕ್ಕೆ ಅರಸನು, “ಹಾಗಾದರೆ ಹಾಮಾನನ್ನು ಅದಕ್ಕೇ ನೇತುಹಾಕಿರಿ” ಎಂದು ಆಜ್ಞಾಪಿಸಿದನು.
|
9. And Harbonah H2726 , one H259 of H4480 the chamberlains H5631 , said H559 before H6440 the king H4428 , Behold H2009 also H1571 , the gallows H6086 fifty H2572 cubits H520 high H1364 , which H834 Haman H2001 had made H6213 for Mordecai H4782 , who H834 had spoken H1696 good H2896 for H5921 the king H4428 , standeth H5975 in the house H1004 of Haman H2001 . Then the king H4428 said H559 , Hang H8518 him thereon H5921 .
|
10. ಹಾಮಾನನನ್ನು ಮೊರ್ದೆಕೈಗಾಗಿ ಸಿದ್ಧಮಾಡಿಸಿದ್ದ ಗಲ್ಲುಗಂಬಕ್ಕೆ ಏರಿಸಿದರು. ಹೀಗೆ ಅರಸನ ಕೋಪವೂ ಶಮನವಾಯಿತು. PE
|
10. So they hanged H8518 H853 Haman H2001 on H5921 the gallows H6086 that H834 he had prepared H3559 for Mordecai H4782 . Then was the king H4428 's wrath H2534 pacified H7918 .
|