|
|
1. {ಯೇಸು ಸಬ್ಬತ್ ದಿನದಲ್ಲಿ ಹುಟ್ಟುಕುರುಡನಿಗೆ ಕಣ್ಣುಕೊಟ್ಟಿದ್ದು} PS ಯೇಸು ಹಾದು ಹೋಗುತ್ತಿದ್ದಾಗ, ಹುಟ್ಟು ಕುರುಡನಾಗಿದ್ದ ಒಬ್ಬ ಮನುಷ್ಯನನ್ನು ಕಂಡನು.
|
1. And G2532 as Jesus passed by G3855 , he saw G1492 a man G444 which was blind G5185 from G1537 his birth G1079 .
|
2. ಆತನ ಶಿಷ್ಯರು, “ಗುರುವೇ, ಇವನು ಕುರುಡನಾಗಿ ಹುಟ್ಟಿರುವುದಕ್ಕೆ ಯಾರು ಪಾಪಮಾಡಿದರು? ಇವನೋ ಅಥವಾ ಇವನ ತಂದೆತಾಯಿಗಳೋ?” ಎಂದು ಆತನನ್ನು ಕೇಳಿದರು.
|
2. And G2532 his G846 disciples G3101 asked G2065 him G846 , saying G3004 , Master G4461 , who G5101 did sin G264 , this man G3778 , or G2228 his G846 parents G1118 , that G2443 he was born G1080 blind G5185
|
3. ಯೇಸು, “ಇವನಾಗಲಿ ಇವನ ತಂದೆತಾಯಿಗಳಾಗಲಿ ಪಾಪ ಮಾಡಲಿಲ್ಲ. ಆದರೆ ದೇವರ ಕ್ರಿಯೆಗಳು ಇವನಲ್ಲಿ ತೋರಿಬರುವುದಕ್ಕಾಗಿ ಹೀಗಾಯಿತು.
|
3. Jesus G2424 answered G611 , Neither G3777 hath this man G3778 sinned G264 , nor G3777 his G846 parents G1118 : but G235 that G2443 the G3588 works G2041 of God G2316 should be made manifest G5319 in G1722 him G846 .
|
4. * ಯೋಹಾ 4:34; 11:9; 12:35; ರೋಮಾ. 13:12: ನನ್ನನ್ನು ಕಳುಹಿಸಿದಾತನ ಕ್ರಿಯೆಗಳನ್ನು ನಾವು ಹಗಲಿರುವಾಗಲೇ ಮಾಡಬೇಕು. ರಾತ್ರಿ ಬರುತ್ತದೆ, ಅದು ಬಂದಾಗ ಯಾರೂ ಕೆಲಸ ಮಾಡಲಾರರು.
|
4. I G1691 must G1163 work G2038 the G3588 works G2041 of him that sent G3992 me G3165 , while G2193 it is G2076 day G2250 : the night G3571 cometh G2064 , when G3753 no man G3762 can G1410 work G2038 .
|
5. ನಾನು ಲೋಕದಲ್ಲಿರುವಾಗ ಲೋಕಕ್ಕೆ ಬೆಳಕಾಗಿದ್ದೇನೆ” ಎಂದನು.
|
5. As long as G3752 I am G5600 in G1722 the G3588 world G2889 , I am G1510 the light G5457 of the G3588 world G2889 .
|
6. ಆತನು ಹೀಗೆ ಹೇಳಿ ನೆಲದ ಮೇಲೆ ಉಗುಳಿ ಆ ಉಗುಳಿನಿಂದ ಕೆಸರು ಮಾಡಿ, ಆ ಕೆಸರನ್ನು ಕುರುಡನ ಕಣ್ಣುಗಳಿಗೆ ಹಚ್ಚಿದನು.
|
6. When he had thus G5023 spoken G2036 , he spat G4429 on the ground G5476 , and G2532 made G4160 clay G4081 of G1537 the G3588 spittle G4427 , and G2532 he anointed G2025 the G3588 eyes G3788 of the G3588 blind man G5185 with the G3588 clay G4081 ,
|
7. ಆತನು ಅವನಿಗೆ, “ನೀನು ಹೋಗಿ ಸಿಲೋವ (ಸಿಲೋವ ಎಂದರೆ ‘ಕಳುಹಿಸಲ್ಪಟ್ಟವನು’ ಎಂದರ್ಥ) ಕೊಳದಲ್ಲಿ ತೊಳೆದುಕೋ” ಎಂದನು. ಅವನು ಹೋಗಿ ತೊಳೆದುಕೊಂಡು ದೃಷ್ಟಿಯುಳ್ಳವನಾಗಿ ಬಂದನು.
|
7. And G2532 said G2036 unto him G846 , Go G5217 , wash G3538 in G1519 the G3588 pool G2861 of Siloam G4611 , ( which G3739 is by interpretation G2059 , Sent G649 .) He went his way G565 therefore G3767 , and G2532 washed G3538 , and G2532 came G2064 seeing G991 .
|
8. ಆಗ ನೆರೆಹೊರೆಯವರು ಅವನು ಮೊದಲು ಭಿಕ್ಷುಕನಾಗಿದ್ದಾಗ ಅವನನ್ನು ನೋಡಿದ್ದವರೂ, “ಭಿಕ್ಷೆಬೇಡುತ್ತಾ ಕುಳಿತುಕೊಂಡಿದ್ದವನು ಇವನೇ ಅಲ್ಲವೇ?” ಎಂದು ವಿಚಾರಿಸಿದರು.
|
8. The G3588 neighbors G1069 therefore G3767 , and G2532 they which before G4386 had seen G2334 him G846 that G3754 he was G2258 blind G5185 , said G3004 , Is G2076 not G3756 this G3778 he that sat G2521 and G2532 begged G4319 ?
|
9. ಕೆಲವರು, “ಹೌದು ಇವನೇ” ಎಂದರು. ಇನ್ನೂ ಕೆಲವರು, “ಅವನಲ್ಲ ಆದರೆ ಅವನ ಹಾಗೆ ಇದ್ದಾನೆ” ಎಂದರು. ಆದರೆ ಅವನಾದರೋ, “ನಾನೇ ಅವನು” ಎಂದು ಹೇಳಿದನು.
|
9. Some G243 said G3004 , This G3778 is G2076 he G1161 : others G243 said, He is G2076 like G3664 him G846 : but he G1565 said G3004 , I G1473 am G1510 he.
|
10. ಆಗ ಅವರು “ಹಾಗಾದರೆ ನಿನ್ನ ಕಣ್ಣು ಹೇಗೆ ತೆರೆದವು?” ಎಂದು ಅವನನ್ನು ಕೇಳಿದ್ದಕ್ಕೆ,
|
10. Therefore G3767 said G3004 they unto him G846 , How G4459 were thine G4675 eyes G3788 opened G455 ?
|
11. ಅವನು, “ಯೇಸು ಎಂಬ ಹೆಸರುಳ್ಳ ಮನುಷ್ಯನು ಮಣ್ಣಿನಲ್ಲಿ ಕೆಸರು ಮಾಡಿ ನನ್ನ ಕಣ್ಣಿಗೆ ಹಚ್ಚಿ ನನಗೆ, ‘ಸಿಲೋವ ಕೊಳಕ್ಕೆ ಹೋಗಿ ತೊಳೆದುಕೋ’ ಎಂದು ಹೇಳಿದನು. ಅದರಂತೆ ನಾನು ಹೋಗಿ ತೊಳೆದುಕೊಂಡೆನು. ಆಗ ನನಗೆ ದೃಷ್ಟಿ ಬಂತು” ಎಂದನು.
|
11. He G1565 answered G611 and G2532 said G2036 , A man G444 that is called G3004 Jesus G2424 made G4160 clay G4081 , and G2532 anointed G2025 mine G3450 eyes G3788 , and G2532 said G2036 unto me G3427 , Go G5217 to G1519 the G3588 pool G2861 of Siloam G4611 , and G2532 wash G3538 : and G1161 I went G565 and G2532 washed G3538 , and G2532 I received sight G308 .
|
12. ಅವರು, “ಆತನು ಎಲ್ಲಿದ್ದಾನೆ?” ಎಂದು ಅವನನ್ನು ಕೇಳಿದ್ದಕ್ಕೆ, ಅವನು “ನನಗೆ ಗೊತ್ತಿಲ್ಲ” ಎಂದನು. PS
|
12. Then G3767 said G2036 they unto him G846 , Where G4226 is G2076 he G1565 ? He said G3004 , I know G1492 not G3756 .
|
13. {ಫರಿಸಾಯರು ಆ ಕುರುಡನನ್ನು ಬಹಿಷ್ಕರಿಸಿದ್ದು} PS ಜನರು ಮೊದಲು ಆ ಕುರುಡನಾಗಿದ್ದವನನ್ನು ಫರಿಸಾಯರ ಬಳಿಗೆ ಕರೆದುಕೊಂಡು ಬಂದರು.
|
13. They brought G71 to G4314 the G3588 Pharisees G5330 him G846 that aforetime G4218 was blind G5185 .
|
14. ಯೇಸು ಕೆಸರು ಮಾಡಿ ಅವನಿಗೆ ದೃಷ್ಟಿ ಕೊಟ್ಟ ದಿನವು ಸಬ್ಬತ್ ದಿನವಾಗಿತ್ತು.
|
14. And G1161 it was G2258 the sabbath day G4521 when G3753 Jesus G2424 made G4160 the G3588 clay G4081 , and G2532 opened G455 his G846 eyes G3788 .
|
15. ಆದಕಾರಣ ಆ ಫರಿಸಾಯರು ಸಹ ಅವನನ್ನು ವಿಚಾರಿಸಿ ನಿನಗೆ ಹೇಗೆ ದೃಷ್ಟಿ ಬಂದಿತು ಎಂದು ಪುನಃ ಕೇಳಿದರು. ಅವನು ಅವರಿಗೆ, “ಅವನು ಕೆಸರನ್ನು ನನ್ನ ಕಣ್ಣಿನ ಮೇಲೆ ಇಟ್ಟನು, ನಾನು ತೊಳೆದುಕೊಂಡೆನು, ನನಗೆ ದೃಷ್ಟಿ ಬಂದಿತು” ಎಂದು ಉತ್ತರಕೊಟ್ಟನು.
|
15. Then G3767 again G3825 the G3588 Pharisees G5330 also G2532 asked G2065 him G846 how G4459 he had received his sight G308 G1161 . He G3588 said G2036 unto them G846 , He put G2007 clay G4081 upon G1909 mine G3450 eyes G3788 , and G2532 I washed G3538 , and G2532 do see G991 .
|
16. ಫರಿಸಾಯರಲ್ಲಿ ಕೆಲವರು, “ಈ ಮನುಷ್ಯನು ದೇವರಿಂದ ಬಂದವನಲ್ಲ, ಏಕೆಂದರೆ ಆತನು ಸಬ್ಬತ್ ದಿನವನ್ನು ಆಚರಿಸುವುದಿಲ್ಲ” ಎಂದರು. ಇನ್ನು ಕೆಲವರು, “ಇಂಥಾ ಮಹತ್ಕಾರ್ಯಗಳನ್ನು ಮಾಡುವುದು ಪಾಪಿಯಾದ ಮನುಷ್ಯನಿಂದ ಹೇಗಾದೀತು?” ಎಂದರು. ಹೀಗೆ ಅವರಲ್ಲಿ ಭೇದವುಂಟಾಯಿತು.
|
16. Therefore G3767 said G3004 some G5100 of G1537 the G3588 Pharisees G5330 , This G3778 man G444 is G2076 not G3756 of G3844 God G2316 , because G3754 he keepeth G5083 not G3756 the G3588 sabbath day G4521 . Others G243 said G3004 , How G4459 can G1410 a man G444 that is a sinner G268 do G4160 such G5108 miracles G4592 ? And G2532 there was G2258 a division G4978 among G1722 them G846 .
|
17. ಹೀಗಿರಲಾಗಿ ಅವರು ಪುನಃ ಆ ಕುರುಡನನ್ನು, “ಆತನು ನಿನಗೆ ದೃಷ್ಟಿ ಕೊಟ್ಟದ್ದರಿಂದ ನೀನು ಆತನ ವಿಷಯವಾಗಿ ಏನು ಹೇಳುತ್ತೀ?” ಎಂದು ಕೇಳಿದಾಗ, ಅವನು “ಆತನು ಒಬ್ಬ ಪ್ರವಾದಿ” ಎಂದು ಉತ್ತರಕೊಟ್ಟನು. PEPS
|
17. They say G3004 unto the G3588 blind man G5185 again G3825 , What G5101 sayest G3004 thou G4771 of G4012 him G846 , that G3754 he hath opened G455 thine G4675 eyes G3788 G1161 ? He G3588 said G2036 , He is G2076 a prophet G4396 .
|
18. ಆದರೆ ದೃಷ್ಟಿ ಹೊಂದಿದವನ ವಿಷಯವಾಗಿ ಆ ಯೆಹೂದ್ಯರು; ಅವನ ತಂದೆತಾಯಿಗಳನ್ನು ಕರೆದು ವಿಚಾರಿಸುವವರೆಗೂ, ಅವನು ಹುಟ್ಟು ಕುರುಡನಾಗಿದ್ದು, ಈಗ ದೃಷ್ಟಿ ಹೊಂದಿದ್ದಾನೆಂಬುದನ್ನು ನಂಬಲಿಲ್ಲ.
|
18. But G3767 the G3588 Jews G2453 did not G3756 believe G4100 concerning G4012 him G846 , that G3754 he had been G2258 blind G5185 , and G2532 received his sight G308 , until G2193 G3755 they called G5455 the G3588 parents G1118 of him G846 that had received his sight G308 .
|
19. ಅವರು “ಕುರುಡನಾಗಿ ಹುಟ್ಟಿದನೆಂದು ನೀವು ಹೇಳುವ ನಿಮ್ಮ ಮಗನು ಇವನೋ? ಹಾಗಾದರೆ ಈಗ ಇವನಿಗೆ ಹೇಗೆ ದೃಷ್ಟಿ ಬಂದಿತು?” ಎಂದು ಅವರನ್ನು ಕೇಳಿದರು.
|
19. And G2532 they asked G2065 them G846 , saying G3004 , Is G2076 this G3778 your G5216 son G5207 , who G3739 ye G5210 say G3004 was G3754 born G1080 blind G5185 ? how G4459 then G3767 doth he now G737 see G991 ?
|
20. ಅವನ ತಂದೆ ತಾಯಿಗಳು, “ಇವನು ನಮ್ಮ ಮಗನೆಂದೂ ಕುರುಡನಾಗಿ ಹುಟ್ಟಿದನೆಂದೂ ಬಲ್ಲೆವು.
|
20. His G846 parents G1118 answered G611 them G846 and G2532 said G2036 , We know G1492 that G3754 this G3778 is G2076 our G2257 son G5207 , and G2532 that G3754 he was born G1080 blind G5185 :
|
21. ಈಗ ಇವನು ನೋಡುವುದು ಹೇಗೆಂದು ನಮಗೆ ಗೊತ್ತಿಲ್ಲ. ಯಾರು ಇವನ ಕಣ್ಣುಗಳನ್ನು ತೆರೆದರೋ ನಮಗೆ ಗೊತ್ತಿಲ್ಲ, ಇವನನ್ನೇ ಕೇಳಿರಿ. ಇವನು ಪ್ರಾಯದವನಾಗಿದ್ದಾನಲ್ಲಾ, ಇವನೇ ತನ್ನ ವಿಷಯವಾಗಿ ಹೇಳುವನು” ಎಂದು ಉತ್ತರಕೊಟ್ಟರು.
|
21. But G1161 by what means G4459 he now G3568 seeth G991 , we know G1492 not G3756 ; or G2228 who G5101 hath opened G455 his G846 eyes G3788 , we G2249 know G1492 not G3756 : he G846 is of age G2192 G2244 ; ask G2065 him G846 : he G846 shall speak G2980 for G4012 himself G848 .
|
22. ಅವನ ತಂದೆ ತಾಯಿಗಳು ಯೆಹೂದ್ಯರಿಗೆ ಭಯಪಟ್ಟದ್ದರಿಂದ ಹೀಗೆ ಹೇಳಿದರು. ಏಕೆಂದರೆ † ಯೋಹಾ 12:42; 16:2: ಯಾರಾದರೂ ಯೇಸುವನ್ನು ಕ್ರಿಸ್ತನೆಂದು ಒಪ್ಪಿಕೊಂಡರೆ ಅವನನ್ನು ಸಭಾಮಂದಿರದಿಂದ ಬಹಿಷ್ಕರಿಸಬೇಕೆಂದು ಯೆಹೂದ್ಯರು ಆಗಲೇ ತೀರ್ಮಾನಿಸಿಕೊಂಡಿದ್ದರು.
|
22. These G5023 words spake G2036 his G846 parents G1118 , because G3754 they feared G5399 the G3588 Jews G2453 : for G1063 the G3588 Jews G2453 had agreed G4934 already G2235 , that G2443 if G1437 any man G5100 did confess G3670 that he G846 was Christ G5547 , he should be G1096 put out of the synagogue G656 .
|
23. “ಇವನು ಪ್ರಾಯದವನು ಇವನನ್ನೇ ಕೇಳಿರಿ” ಎಂದು ಅವನ ತಂದೆತಾಯಿಗಳು ಹೇಳಿದ್ದಕ್ಕೆ ಇದೇ ಕಾರಣ.
|
23. Therefore G1223 G5124 said G2036 his G846 parents G1118 , He is of age G2192 G2244 ; ask G2065 him G846 .
|
24. ಆದಕಾರಣ ಅವರು ಕುರುಡನಾಗಿದ್ದ ಆ ಮನುಷ್ಯನನ್ನು ಎರಡನೆಯ ಸಾರಿ ಕರೆದು, “ನೀನು ದೇವರಿಗೆ ಗೌರವವನ್ನು ಸಲ್ಲಿಸು; ಈ ಮನುಷ್ಯನು ಪಾಪಿಷ್ಠನೆಂದು ನಾವು ಬಲ್ಲೆವು” ಎಂದರು.
|
24. Then G3767 again G1537 G1208 called G5455 they the G3588 man G444 that G3739 was G2258 blind G5185 , and G2532 said G2036 unto him G846 , Give G1325 God G2316 the praise G1391 : we G2249 know G1492 that G3754 this G3778 man G444 is G2076 a sinner G268 .
|
25. ಅದಕ್ಕೆ ಅವನು, “ಆತನು ಪಾಪಿಷ್ಠನೋ ಏನೋ ನನಗೆ ಗೊತ್ತಿಲ್ಲ, ಒಂದು ಮಾತ್ರ ಬಲ್ಲೆನು ನಾನು ಕುರುಡನಾಗಿದ್ದೆನು; ಈಗ ನಾನು ನೋಡುತ್ತಿದ್ದೇನೆ” ಎಂದನು.
|
25. He G1565 answered G611 G3767 and G2532 said G2036 , Whether G1487 he be G2076 a sinner G268 or no, I know G1492 not G3756 : one thing G1520 I know G1492 , that G3754 , whereas I was G5607 blind G5185 , now G737 I see G991 .
|
26. ಅವರು ಅವನನ್ನು, “ಆತನು ನಿನಗೆ ಏನು ಮಾಡಿದನು? ನಿನ್ನ ಕಣ್ಣುಗಳನ್ನು ಹೇಗೆ ತೆರೆದನು?” ಎಂದು ಕೇಳಿದ್ದಕ್ಕೆ,
|
26. Then G1161 said G2036 they to him G846 again G3825 , What G5101 did G4160 he to thee G4671 ? how G4459 opened G455 he thine G4675 eyes G3788 ?
|
27. ಅವನು, “ನಿಮಗೆ ಆಗಲೇ ಹೇಳಿದೆನಲ್ಲಾ, ನೀವು ಕೇಳಲಿಲ್ಲ! ನೀವು ಯಾಕೆ ಪುನಃ ಪುನಃ ಕೇಳುತ್ತಿದ್ದೀರಿ? ನೀವು ಸಹ ಆತನ ಶಿಷ್ಯರಾಗುವುದಕ್ಕೆ ಬಯಸುತ್ತಿದ್ದೀರೋ?” ಎಂದನು.
|
27. He answered G611 them G846 , I have told G2036 you G5213 already G2235 , and G2532 ye did not G3756 hear G191 : wherefore G5101 would G2309 ye hear G191 it again G3825 ? will G2309 G3361 ye G5210 also G2532 be G1096 his G846 disciples G3101 ?
|
28. ಅದಕ್ಕೆ ಅವರು ಅವನನ್ನು ನಿಂದಿಸಿ, “ನೀನು ಆತನ ಶಿಷ್ಯನು. ಆದರೆ ನಾವು ಮೋಶೆಯ ಶಿಷ್ಯರು.
|
28. Then G3767 they reviled G3058 him G846 , and G2532 said G2036 , Thou G4771 art G1488 his G1565 disciple G3101 ; but G1161 we G2249 are G2070 Moses G3475 ' disciples G3101 .
|
29. ಮೋಶೆಯ ಸಂಗಡ ದೇವರು ಮಾತನಾಡಿದನೆಂದು ನಾವು ಬಲ್ಲೆವು, ಆದರೆ ಈತನು ಎಲ್ಲಿಯವನೋ ನಮಗೆ ತಿಳಿಯದು” ಎಂದರು.
|
29. We G2249 know G1492 that G3754 God G2316 spake G2980 unto Moses G3475 : as for G1161 this G5126 fellow, we know G1492 not G3756 from whence G4159 he is G2076 .
|
30. ಅದಕ್ಕೆ ಆ ಮನುಷ್ಯನು, “ಆತನು ನನ್ನ ಕಣ್ಣುಗಳನ್ನು ತೆರೆದರೂ ಆತನು ಎಲ್ಲಿಯವನೆಂದು ನಿಮಗೆ ತಿಳಿಯದೆ ಇರುವುದು ಆಶ್ಚರ್ಯವಲ್ಲವೇ!
|
30. The G3588 man G444 answered G611 and G2532 said G2036 unto them G846 , Why G1063 herein G1722 G5129 is G2076 a marvelous thing G2298 , that G3754 ye G5210 know G1492 not G3756 from whence G4159 he is G2076 , and G2532 yet he hath opened G455 mine G3450 eyes G3788 .
|
31. ಪಾಪಿಷ್ಠರ ಪ್ರಾರ್ಥನೆಯನ್ನು ದೇವರು ಕೇಳುವುದಿಲ್ಲ, ಆದರೆ ಯಾರು ಭಕ್ತರಾಗಿದ್ದು ಆತನ ಚಿತ್ತದಂತೆ ನಡೆಯುತ್ತಾರೋ ಅವರ ಪ್ರಾರ್ಥನೆಯನ್ನು ಕೇಳುತ್ತಾನೆಂದು ಬಲ್ಲೆವು.
|
31. Now G1161 we know G1492 that G3754 God G2316 heareth G191 not G3756 sinners G268 : but G235 if G1437 any man G5100 be G5600 a worshiper of God G2318 , and G2532 doeth G4160 his G846 will G2307 , him G5127 he heareth G191 .
|
32. ಹುಟ್ಟು ಕುರುಡನಾಗಿದ್ದ ಒಬ್ಬ ಮನುಷ್ಯನ ಕಣ್ಣುಗಳನ್ನು ಯಾವನಾದರೂ ತೆರೆದಿದ್ದನ್ನು ಲೋಕಾದಿಯಿಂದ ಒಬ್ಬನಾದರೂ ಕೇಳಲಿಲ್ಲ.
|
32. Since the world began G1537 G165 was it not G3756 heard G191 that G3754 any man G5100 opened G455 the eyes G3788 of one that was born G1080 blind G5185 .
|
33. ಈತನು ದೇವರಿಂದ ಬಂದವನಲ್ಲದಿದ್ದರೆ ಏನೂ ಮಾಡಲಾರದೆ ಇರುತ್ತಿದ್ದನು” ಎಂದನು.
|
33. If G1508 this man G3778 were G2258 not G3756 of G3844 God G2316 , he could G1410 do G4160 nothing G3762 .
|
34. ಈ ಮಾತಿಗೆ ಅವರು, “ನೀನು ಕೇವಲ ಪಾಪದಲ್ಲಿ ಹುಟ್ಟಿದವನು, ನೀನು ನಮಗೆ ಉಪದೇಶಮಾಡುತ್ತಿಯೋ?” ಎಂದು ಹೇಳಿ ಅವನನ್ನು ಹೊರಗೆ ಹಾಕಿದರು. PS
|
34. They answered G611 and G2532 said G2036 unto him G846 , Thou G4771 wast altogether G3650 born G1080 in G1722 sins G266 , and G2532 dost thou G4771 teach G1321 us G2248 ? And G2532 they cast G1544 him G846 out G1854 .
|
35. {ಆತ್ಮೀಕ ಕುರುಡುತನ} PS ಅವನನ್ನು ಹೊರಗೆ ಹಾಕಿದರೆಂದು ಯೇಸು ಕೇಳಿ ಅವನನ್ನು ಕಂಡುಕೊಂಡು, “ನೀನು ‡ ಕೆಲವು ಪ್ರತಿಗಳಲ್ಲಿ, ದೇವಕುಮಾರನೆಂದು ಬರೆದದೆ. ಯೋಹಾ 10:36; ಮತ್ತಾ 14:33: ಮನುಷ್ಯಕುಮಾರನನ್ನು ನಂಬುತ್ತೀಯೋ?” ಎಂದು ಕೇಳಿದನು.
|
35. Jesus G2424 heard G191 that G3754 they had cast G1544 him G846 out G1854 ; and G2532 when he had found G2147 him G846 , he said G2036 unto him G846 , Dost thou G4771 believe G4100 on G1519 the G3588 Son G5207 of God G2316 ?
|
36. ಅದಕ್ಕೆ ಅವನು, “ಕರ್ತನೇ ಆ ಮನುಷ್ಯಕುಮಾರನು ಯಾರು? ನನಗೆ ತಿಳಿಸು, ನಾನು ಆತನಲ್ಲಿ ನಂಬಿಕೆ ಇಡುತ್ತೇನೆ” ಎಂದಾಗ,
|
36. He G1565 answered G611 and G2532 said G2036 , Who G5101 is G2076 he, Lord G2962 , that G2443 I might believe G4100 on G1519 him G846 ?
|
37. ಯೇಸು, “ನೀನು ಅವನನ್ನು ನೋಡಿದ್ದೀ ಮತ್ತು ನಿನ್ನ ಸಂಗಡ ಮಾತನಾಡುತ್ತಿರುವ ನಾನೇ ಆತನು” ಎಂದು ಹೇಳಿದಾಗ,
|
37. And G1161 Jesus G2424 said G2036 unto him G846 , Thou hast both G2532 seen G3708 him G846 , and G2532 it is G2076 he G1565 that talketh G2980 with G3326 thee G4675 .
|
38. ಅವನು, “ಕರ್ತನೇ, ನಾನು ನಂಬುತ್ತೇನೆ” ಎಂದು ಹೇಳಿ ಆತನಿಗೆ ಅಡ್ಡಬಿದ್ದನು. PEPS
|
38. And G1161 he G3588 said G5346 , Lord G2962 , I believe G4100 . And G2532 he worshiped G4352 him G846 .
|
39. ಆಗ ಯೇಸುವು, “ನಾನು ನ್ಯಾಯತೀರ್ಪಿಗಾಗಿ ಈ ಲೋಕಕ್ಕೆ ಬಂದಿದ್ದೇನೆ. ಆ ತೀರ್ಪು ಏನೆಂದರೆ ಕುರುಡರು ನೋಡುವರು, ದೃಷ್ಟಿ ಇರುವವರು ಕುರುಡರಾಗುವರು” ಎಂದನು.
|
39. And G2532 Jesus G2424 said G2036 , For G1519 judgment G2917 I G1473 am come G2064 into G1519 this G5126 world G2889 , that G2443 they which see G991 not G3361 might see G991 ; and G2532 that they which see G991 might be made G1096 blind G5185 .
|
40. ಇದನ್ನು ಆತನೊಂದಿಗಿದ್ದ ಫರಿಸಾಯರಲ್ಲಿ ಕೆಲವರು ಕೇಳಿ, “ನಾವು ಸಹ ಕುರುಡರೇನು?” ಎಂದು ಕೇಳಿದಾಗ,
|
40. And G2532 some of G1537 the G3588 Pharisees G5330 which were G5607 with G3326 him G846 heard G191 these words G5023 and G2532 said G2036 unto him G846 , Are G2070 we G2249 G3361 blind G5185 also G2532 ?
|
41. ಯೇಸು ಅವರಿಗೆ, “ನೀವು ಕುರುಡರಾಗಿದ್ದರೆ ನಿಮಗೆ ಪಾಪವು ಇರುತ್ತಿರಲಿಲ್ಲ. ಆದರೆ ‘ನಿಮಗೆ ಕಣ್ಣುಕಾಣುತ್ತವೆ’ ಎಂದು ನೀವು ಹೇಳುವುದರಿಂದ ನಿಮ್ಮ ಪಾಪ ನಿಮಗೆ ಉಳಿದಿದೆ” ಎಂದನು. PE
|
41. Jesus G2424 said G2036 unto them G846 , If G1487 ye were G2258 blind G5185 , ye should have G2192 G302 no G3756 sin G266 : but G1161 now G3568 ye say G3004 , We see G991 ; therefore G3767 your G5216 sin G266 remaineth G3306 .
|