|
|
1. {ಯೋನನ ವಿಧೇಯತೆಯೂ ನಿನೆವೆಯರ ಮನಃಪರಿವರ್ತನೆಯೂ} PS ಯೆಹೋವನ ವಾಕ್ಯವು ಯೋನನಿಗೆ ಎರಡನೆಯ ಸಾರಿ ಉಂಟಾಯಿತು.
|
1. And the word H1697 of the LORD H3068 came H1961 unto H413 Jonah H3124 the second time H8145 , saying H559 ,
|
2. ಅದೇನೆಂದರೆ “ನೀನು ಹೊರಟು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ನಾನು ನಿನಗೆ ಆಜ್ಞಾಪಿಸುವ ಸಂದೇಶವನ್ನು ಸಾರು” ಎಂದು ಹೇಳಿದನು.
|
2. Arise H6965 , go H1980 unto H413 Nineveh H5210 , that great H1419 city H5892 , and preach H7121 unto H413 it H853 the preaching H7150 that H834 I H595 bid H1696 H413 thee.
|
3. ಆಗ ಯೋನನು ಎದ್ದು ಯೆಹೋವನ ಅಪ್ಪಣೆಯಂತೆ ನಿನೆವೆಗೆ ಹೋದನು. ನಿನೆವೆಯು ಮೂರು ದಿನದ ಪ್ರಯಾಣದಷ್ಟು ಅತಿ ವಿಸ್ತಾರವಾದ ಮಹಾದೊಡ್ಡ ಪಟ್ಟಣವಾಗಿತ್ತು.
|
3. So Jonah H3124 arose H6965 , and went H1980 unto H413 Nineveh H5210 , according to the word H1697 of the LORD H3068 . Now Nineveh H5210 was H1961 an exceeding H430 great H1419 city H5892 of three H7969 days H3117 ' journey H4109 .
|
4. ಯೋನನು ಪಟ್ಟಣವನ್ನು ಪ್ರವೇಶಿಸಿ ಒಂದು ದಿನದಷ್ಟು ದೂರ ಪ್ರಯಾಣಮಾಡಿದ ನಂತರ “ನಲವತ್ತು ದಿನಗಳಾದ ಮೇಲೆ ನಿನೆವೆಯು ಕೆಡವಲ್ಪಡುವುದು” ಎಂದು ಸಾರತೊಡಗಿದನು.
|
4. And Jonah H3124 began H2490 to enter H935 into the city H5892 a H259 day H3117 's journey H4109 , and he cried H7121 , and said H559 , Yet H5750 forty H705 days H3117 , and Nineveh H5210 shall be overthrown H2015 .
|
5. ಇದನ್ನು ಕೇಳಿ ನಿನೆವೆಯವರು ದೇವರಲ್ಲಿ ನಂಬಿಕೆಯಿಟ್ಟು ಉಪವಾಸವನ್ನು ಮಾಡಬೇಕೆಂದು ಸಾರಿ ಹೇಳಿದರು; ದೊಡ್ಡವರು ಮೊದಲುಗೊಂಡು ಚಿಕ್ಕವರ ತನಕ ಎಲ್ಲರೂ ಗೋಣಿತಟ್ಟನ್ನು ಸುತ್ತಿಕೊಂಡರು. PEPS
|
5. So the people H376 of Nineveh H5210 believed H539 God H430 , and proclaimed H7121 a fast H6685 , and put on H3847 sackcloth H8242 , from the greatest H4480 H1419 of them even to H5704 the least H6996 of them.
|
6. ಆ ಸುದ್ದಿಯು ನಿನೆವೆಯ ಅರಸನಿಗೆ ತಿಳಿಯಲು ಅವನು ಸಿಂಹಾಸನದಿಂದ ಎದ್ದು, ತನ್ನ ನಿಲುವಂಗಿಯನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕುಳಿತುಕೊಂಡನು.
|
6. For word H1697 came H5060 unto H413 the king H4428 of Nineveh H5210 , and he arose H6965 from his throne H4480 H3678 , and he laid H5674 his robe H155 from H4480 H5921 him , and covered H3680 him with sackcloth H8242 , and sat H3427 in H5921 ashes H665 .
|
7. ಇದಲ್ಲದೆ ಅರಸನು ತನ್ನ ಮತ್ತು ರಾಜ್ಯಾಧಿಕಾರಿಗಳ ಆಜ್ಞೆಯನ್ನು ನಿನೆವೆಯಲ್ಲಿ ಹೊರಡಿಸಿ ಹೇಳಿದ್ದೇನೆಂದರೆ: “ಜನ, ಪಶು, ಮಂದೆ, ಹಿಂಡು ಇವುಗಳು ಸಹ ಏನೂ ರುಚಿ ನೋಡುವುದಾಗಲೀ, ತಿನ್ನುವುದಾಗಲೀ, ಕುಡಿಯುವುದಾಗಲೀ ಮಾಡಬಾರದು.
|
7. And he caused it to be proclaimed H2199 and published H559 through Nineveh H5210 by the decree H4480 H2940 of the king H4428 and his nobles H1419 , saying H559 , Let neither H408 man H120 nor beast H929 , herd H1241 nor flock H6629 , taste H2938 any thing H3972 : let them not H408 feed H7462 , nor H408 drink H8354 water H4325 :
|
8. ಜನರಿಗೂ ಪಶುಗಳಿಗೂ ಗೋಣಿತಟ್ಟು ಹೊದಿಕೆಯಾಗಲಿ; ಎಲ್ಲರೂ ದೇವರಿಗೆ ಬಲವಾಗಿ ಮೊರೆಯಿಡಲಿ; ಒಬ್ಬೊಬ್ಬನು ತನ್ನ ತನ್ನ ದುರ್ಮಾರ್ಗಗಳನ್ನೂ, ತಾನು ನಡಿಸುತ್ತಿದ್ದ ಹಿಂಸೆಯನ್ನೂ ತೊರೆದು ಬಿಡಲಿ.
|
8. But let man H120 and beast H929 be covered H3680 with sackcloth H8242 , and cry H7121 mightily H2394 unto H413 God H430 : yea , let them turn H7725 every one H376 from his evil H7451 way H4480 H1870 , and from H4480 the violence H2555 that H834 is in their hands H3709 .
|
9. ದೇವರು ಒಂದು ವೇಳೆ ಮನಮರುಗಿ, ಮನಸ್ಸನ್ನು ಬದಲಾಯಿಸಿಕೊಂಡು ತನ್ನ ಉಗ್ರಕೋಪವನ್ನು ತೊರೆದರೆ, ನಾವು ನಾಶವಾಗದೆ ಉಳಿದೇವು” ಎಂಬುದನ್ನು ನಿನೆವೆಯಲ್ಲೆಲ್ಲಾ ಸಾರಿಸಿದನು. PEPS
|
9. Who H4310 can tell H3045 if God H430 will turn H7725 and repent H5162 , and turn away H7725 from his fierce H4480 H2740 anger H639 , that we perish H6 not H3808 ?
|
10. ದೇವರು ನಿನೆವೆಯವರ ಕೃತ್ಯಗಳನ್ನು ನೋಡಿ, ಅವರು ತಮ್ಮ ದುರ್ಮಾರ್ಗತನದಿಂದ ತಿರುಗಿಕೊಂಡರೆಂದು ತಿಳಿದು ತನ್ನ ಮನಸ್ಸನ್ನು ಬದಲಾಯಿಸಿ, ತಾನು ಅವರಿಗೆ ಮಾಡುವೆನೆಂದು ಪ್ರಕಟಿಸಿದ್ದ ಕೇಡನ್ನು ಮಾಡದೆ ಬಿಟ್ಟನು. PE
|
10. And God H430 saw H7200 H853 their works H4639 , that H3588 they turned H7725 from their evil H7451 way H4480 H1870 ; and God H430 repented H5162 of H5921 the evil H7451 , that H834 he had said H1696 that he would do H6213 unto them ; and he did H6213 it not H3808 .
|