|
|
1. ಆ ಮೇಲೆ ಯೋಬನು ಪ್ರತ್ಯುತ್ತರವಾಗಿ ಹೀಗೆ ಹೇಳಿದನು,
|
1. And Job H347 answered H6030 and said H559 ,
|
2. “ಹೌದು, ನೀವೇ ಮನುಷ್ಯರು; ಜ್ಞಾನವು ನಿಮ್ಮೊಡನೆಯೇ ಸಾಯುವುದು, ನಿಜ.
|
2. No doubt H551 but H3588 ye H859 are the people H5971 , and wisdom H2451 shall die H4191 with H5973 you.
|
3. ನಿಮ್ಮ ಹಾಗೆ ನನಗೂ ಬುದ್ಧಿಯುಂಟು, ನಿಮಗಿಂತ ನಾನು ಕಡೆಯಲ್ಲ. ಇಂಥವು ಯಾರಿಗೆ ತಾನೇ ಗೊತ್ತಿಲ್ಲ.
|
3. But H1571 I have understanding H3824 as well as you H3644 ; I H595 am not H3808 inferior H5307 to H4480 you: yea H854 , who H4310 knoweth not H369 such things as these H3644 H428 ?
|
4. ನಾನು ಗೆಳೆಯನ ಗೇಲಿಗೆ ಗುರಿಯಾಗಿದ್ದೇನೆ! ದೇವರನ್ನು ಪ್ರಾರ್ಥಿಸಿದೆನಲ್ಲಾ, ಆತನು ಲಾಲಿಸಿದನಲ್ಲಾ, ನೀತಿವಂತನೂ, ನಿರ್ದೋಷಿಯೂ ಆದವನು ಹಾಸ್ಯಾಸ್ಪದನಾಗಿದ್ದೇನೆ.
|
4. I am H1961 as one mocked H7814 of his neighbor H7453 , who calleth H7121 upon God H433 , and he answereth H6030 him : the just H6662 upright H8549 man is laughed to scorn H7814 .
|
5. ಆಪತ್ತನ್ನು ಅನುಭವಿಸುವವರು ತಿರಸ್ಕಾರಕ್ಕೆ ಯೋಗ್ಯರೆಂಬುದು ನೆಮ್ಮದಿಯಿಂದಿರುವವನ ಯೋಚನೆ; ಜಾರಿ ಬಿದ್ದವರಿಗೆ ಅಪಮಾನವು ಕಾದಿರುತ್ತದೆ.
|
5. He that is ready H3559 to slip H4571 with his feet H7272 is as a lamp H3940 despised H937 in the thought H6248 of him that is at ease H7600 .
|
6. ಕಳ್ಳರ ಗುಡಾರಗಳಾದರೋ ಸಮೃದ್ಧವಾಗಿರುವವು, ಕೈಯಲ್ಲಿರುವುದನ್ನೇ ದೇವರನ್ನಾಗಿ ಮಾಡಿಕೊಂಡು, ದೇವರನ್ನು ಕೋಪಕ್ಕೆ ಗುರಿಮಾಡುವವರು ಸುರಕ್ಷಿತರಾಗಿದ್ದಾರೆ ಎಂದು ತಿಳಿದಿರುವರು.
|
6. The tabernacles H168 of robbers H7703 prosper H7951 , and they that provoke H7264 God H410 are secure H987 ; into whose H834 hand H3027 God H433 bringeth H935 abundantly .
|
7. ಆದರೆ ಮೃಗಗಳನ್ನು ವಿಚಾರಿಸು, ನಿನಗೆ ಉಪದೇಶ ಮಾಡುವವು; ಆಕಾಶದ ಪಕ್ಷಿಗಳನ್ನು ಕೇಳು, ನಿನಗೆ ತಿಳಿಸುವವು;
|
7. But H199 ask H7592 now H4994 the beasts H929 , and they shall teach H3384 thee ; and the fowls H5775 of the air H8064 , and they shall tell H5046 thee:
|
8. ಭೂಮಿಯನ್ನು ಮಾತನಾಡಿಸು, ನಿನಗೆ ಬೋಧಿಸುವುದು; ಸಮುದ್ರದ ಮೀನುಗಳು ನಿನಗೆ ಹೇಳುವವು.
|
8. Or H176 speak H7878 to the earth H776 , and it shall teach H3384 thee : and the fishes H1709 of the sea H3220 shall declare H5608 unto thee.
|
9. ಈ ಎಲ್ಲವುಗಳ ಸಾಕ್ಷಿಯಿಂದ ಯೆಹೋವನ ಕೈಯೇ ಸಕಲ ಕಾರ್ಯಗಳನ್ನು ಮಾಡುತ್ತದೆ ಎಂದು ಯಾರಿಗೆ ತಾನೇ ಗೊತ್ತಾಗುವುದಿಲ್ಲ?
|
9. Who H4310 knoweth H3045 not H3808 in all H3605 these H428 that H3588 the hand H3027 of the LORD H3068 hath wrought H6213 this H2063 ?
|
10. ಪ್ರತಿ ಪ್ರಾಣಿಯ ಪ್ರಾಣವು, ಸಮಸ್ತ ಮನುಷ್ಯರ ಆತ್ಮಗಳೂ ಯೆಹೋವನ ಕೈಯಲ್ಲಿರುವವು.
|
10. In whose H834 hand H3027 is the soul H5315 of every H3605 living thing H2416 , and the breath H7307 of all H3605 mankind H1320 H376 .
|
11. ಬಾಯಿಯು ಆಹಾರವನ್ನು ರುಚಿ ನೋಡುವ ಪ್ರಕಾರ ಕಿವಿಯು ಮಾತುಗಳನ್ನು ವಿವೇಚಿಸುತ್ತದಲ್ಲಾ.
|
11. Doth not H3808 the ear H241 try H974 words H4405 ? and the mouth H2441 taste H2938 his meat H400 ?
|
12. ಜ್ಞಾನವು ವೃದ್ಧರಲ್ಲೇ ಅಡಗಿದೆಯೋ? ದಿರ್ಘಾಷ್ಯರಲ್ಲಿ ವಿವೇಕವಿದೆ.
|
12. With the ancient H3453 is wisdom H2451 ; and in length H753 of days H3117 understanding H8394 .
|
13. ಆತನಲ್ಲಿ ಜ್ಞಾನವೂ ಶಕ್ತಿಯೂ ಉಂಟು, ಆಲೋಚನೆಯೂ, ವಿವೇಕವೂ ಆತನವೇ.
|
13. With H5973 him is wisdom H2451 and strength H1369 , he hath counsel H6098 and understanding H8394 .
|
14. ಇಗೋ, ಯಾರೂ ಕಟ್ಟದ ಹಾಗೆ ಕೆಡವಿಬಿಡುವನು, ಯಾರೂ ಬಿಡಿಸದಂತೆ ಸೆರೆಹಾಕುವನು.
|
14. Behold H2005 , he breaketh down H2040 , and it cannot H3808 be built again H1129 : he shutteth up H5462 H5921 a man H376 , and there can be no opening H6605 H3808 .
|
15. ನೋಡಿರಿ, ಆತನು ನೀರುಗಳನ್ನು ತಡೆದರೆ ಬೆಳೆಗಳು, ಭೂಮಿ ಒಣಗಿಹೋಗುತ್ತದೆ; ನೀರನ್ನು ಬಿಟ್ಟರೆ ಭೂಮಿಯನ್ನು ಆವರಿಸುತ್ತದೆ.
|
15. Behold H2005 , he withholdeth H6113 the waters H4325 , and they dry up H3001 : also he sendeth them out H7971 , and they overturn H2015 the earth H776 .
|
16. ಆತನಲ್ಲಿ ಬಲವೂ, ಸಾಮರ್ಥ್ಯವೂ ಉಂಟು; ತಪ್ಪಿದವನೂ, ತಪ್ಪಿಸಿದವನೂ ಆತನಿಗೆ ಅಧೀನರಾಗಿರುವರು.
|
16. With H5973 him is strength H5797 and wisdom H8454 : the deceived H7683 and the deceiver H7686 are his.
|
17. ಮಂತ್ರಿಗಳನ್ನು ಸುಲಿಗೆಮಾಡಿ ಸಾಗಿಸಿಕೊಂಡು ಹೋಗುವನು, ನ್ಯಾಯಾಧಿಪತಿಗಳನ್ನು ಹುಚ್ಚರನ್ನಾಗಿ ಮಾಡುವನು.
|
17. He leadeth H1980 counselors H3289 away spoiled H7758 , and maketh the judges H8199 fools H1984 .
|
18. ಅರಸರು ಹಾಕಿದ ಬಂಧನವನ್ನು ಬಿಚ್ಚಿಬಿಟ್ಟು ಅವರ ಸೊಂಟಕ್ಕೆ ನಡುಕಟ್ಟನ್ನು ಬಿಗಿಯುವನು.
|
18. He looseth H6605 the bond H4148 of kings H4428 , and girdeth H631 their loins H4975 with a girdle H232 .
|
19. ಯಾಜಕರನ್ನು ಸುಲಿಗೆಮಾಡಿ ಸಾಗಿಸಿಕೊಂಡು ಹೋಗುವನು, ಪ್ರಧಾನರನ್ನು ದೊಬ್ಬಿಬಿಡುವನು.
|
19. He leadeth H1980 princes H3548 away spoiled H7758 , and overthroweth H5557 the mighty H386 .
|
20. ಆಲೋಚನಾಕರ್ತರ ವಾಕ್ಚಾತುರ್ಯವನ್ನು ಕುಗ್ಗಿಸುತ್ತಾನೆ, ಹಿರಿಯರ ವಿವೇಕವನ್ನು ತೆಗೆದುಹಾಕುವನು.
|
20. He removeth away H5493 the speech H8193 of the trusty H539 , and taketh away H3947 the understanding H2940 of the aged H2205 .
|
21. ಪ್ರಭುಗಳಿಗೆ ಅವಮಾನವನ್ನು ಉಂಟುಮಾಡಿ ಬಲಿಷ್ಠರ ನಡುಕಟ್ಟನ್ನು ಸಡಿಲಿಸುವನು.
|
21. He poureth H8210 contempt H937 upon H5921 princes H5081 , and weakeneth H7503 the strength H4206 of the mighty H650 .
|
22. ಅಗಾಧ ವಿಷಯಗಳನ್ನು ಕತ್ತಲೊಳಗಿಂದ ಬಯಲಿಗೆ ತಂದು ಗಾಢಾಂಧಕಾರವನ್ನು ಪ್ರಕಾಶಗೊಳಿಸುವನು.
|
22. He discovereth H1540 deep things H6013 out of H4480 darkness H2822 , and bringeth out H3318 to light H216 the shadow of death H6757 .
|
23. ಜನಾಂಗಗಳನ್ನು ವೃದ್ಧಿಗೊಳಿಸಿ ನಾಶಪಡಿಸುವನು, ಅವುಗಳನ್ನು ವಿಸ್ತರಿಸಿ ಗಡೀಪಾರುಮಾಡುವನು.
|
23. He increaseth H7679 the nations H1471 , and destroyeth H6 them : he enlargeth H7849 the nations H1471 , and straiteneth H5148 them again .
|
24. ಪ್ರಜಾಪ್ರಮುಖರ ಬುದ್ಧಿಯನ್ನು ತೊಲಗಿಸಿ, ಅವರನ್ನು ದಾರಿಯಿಲ್ಲದ ಅರಣ್ಯದಲ್ಲಿ ಅಲೆದಾಡಿಸುವನು.
|
24. He taketh away H5493 the heart H3820 of the chief H7218 of the people H5971 of the earth H776 , and causeth them to wander H8582 in a wilderness H8414 where there is no H3808 way H1870 .
|
25. ಅವರು ಬೆಳಕಿಲ್ಲದ ಕತ್ತಲಲ್ಲಿ ತಡಕಾಡುವರು; ಅವರನ್ನು ಅಮಲೇರಿದವರಂತೆ ಓಲಾಡಿಸಿ ತಡವರಿಸುವಂತೆ ಮಾಡುವನು.” PE
|
25. They grope H4959 in the dark H2822 without H3808 light H216 , and he maketh them to stagger H8582 like a drunken H7910 man .
|