|
|
1. ಯೆಹೋವನೇ, ನಿತ್ಯವೂ ನಿನ್ನ ಕೃಪಾತಿಶಯವನ್ನು ಹಾಡಿಹರಸುವೆನು; ನನ್ನ ಬಾಯಿ ನಿನ್ನ ಸತ್ಯವನ್ನು, ಮುಂದಣ ಸಂತಾನದವರೆಲ್ಲರಿಗೂ ತಿಳಿಯಮಾಡುವುದು.
|
1. Maschil H4905 of Ethan H387 the Ezrahite H250 . I will sing H7891 of the mercies H2617 of the LORD H3068 forever H5769 : with my mouth H6310 will I make known H3045 thy faithfulness H530 to all generations H1755 H1755 .
|
2. ನಿನ್ನ ಪ್ರೀತಿಸಂಕಲ್ಪವು ನಿತ್ಯವು ಸಿದ್ಧಿಗೆ ಬರುತ್ತಲೇ ಇರುವುದು; ಆಕಾಶದಲ್ಲಿ ನಿನ್ನ ಸತ್ಯತೆಯನ್ನು ಸ್ಥಾಪಿಸುವಿ ಎಂದು ತಿಳಿದುಕೊಂಡಿದ್ದೇನೆ.
|
2. For H3588 I have said H559 , Mercy H2617 shall be built up H1129 forever H5769 : thy faithfulness H530 shalt thou establish H3559 in the very heavens H8064 .
|
3. ನೀನು ನುಡಿದದ್ದೇನೆಂದರೆ, “ನಾನು ಆರಿಸಿಕೊಂಡ ಸೇವಕನಾದ ದಾವೀದನ ಸಂಗಡ ಒಡಂಬಡಿಕೆ ಮಾಡಿಕೊಂಡು ಆಣೆಯಿಟ್ಟು,
|
3. I have made H3772 a covenant H1285 with my chosen H972 , I have sworn H7650 unto David H1732 my servant H5650 ,
|
4. ‘ಶಾಶ್ವತವಾಗಿ ನಿನ್ನ ಸಂತತಿಯನ್ನು ಸ್ಥಾಪಿಸುವೆನು, ತಲತಲಾಂತರಗಳಿಗೂ ನಿನ್ನ ಸಿಂಹಾಸನವನ್ನು ಸ್ಥಿರಪಡಿಸುವೆನು ಎಂದು ಹೇಳಿದ್ದೇನೆ’ ” ಎಂಬುವುದೇ. ಸೆಲಾ
|
4. Thy seed H2233 will I establish H3559 forever H5704 H5769 , and build up H1129 thy throne H3678 to all generations H1755 H1755 . Selah H5542 .
|
5. ಯೆಹೋವನೇ, ಗಗನವು ನಿನ್ನ ಮಹತ್ತನ್ನು ಪ್ರಸಿದ್ಧಪಡಿಸುವುದು; ನಿನ್ನ ಸತ್ಯವನ್ನು ಪರಿಶುದ್ಧರ ಸಭೆಯಲ್ಲಿ ಕೀರ್ತಿಸುವೆನು.
|
5. And the heavens H8064 shall praise H3034 thy wonders H6382 , O LORD H3068 : thy faithfulness H530 also H637 in the congregation H6951 of the saints H6918 .
|
6. ಮೇಘಮಂಡಲದಲ್ಲಿ ಯೆಹೋವನಿಗೆ ಸಮಾನರು ಯಾರು? ದೇವದೂತರಲ್ಲಿ ಯೆಹೋವನಿಗೆ ಸರಿಯಾದವರು ಯಾರು?
|
6. For H3588 who H4310 in the heaven H7834 can be compared H6186 unto the LORD H3068 ? who among the sons H1121 of the mighty H410 can be likened H1819 unto the LORD H3068 ?
|
7. ಆತನು ಪರಿಶುದ್ಧರ ಸಭೆಯಲ್ಲಿ ಘನ ಹೊಂದುವ ದೇವರು; ತನ್ನ ಎಲ್ಲಾ ಪರಿವಾರದವರಿಗಿಂತ ಭಯಂಕರನು.
|
7. God H410 is greatly H7227 to be feared H6206 in the assembly H5475 of the saints H6918 , and to be had in reverence H3372 of H5921 all H3605 them that are about H5439 him.
|
8. ಯೆಹೋವನೇ, ಸೇನಾಧೀಶ್ವರನಾದ ದೇವರೇ, ನಿನಗೆ ಸಮಾನರು ಯಾರು? ಯಾಹುವೇ, ನೀನು ಶಕ್ತನು, ಸತ್ಯತೆಯಿಂದ ಆವರಿಸಲ್ಪಟ್ಟವನು.
|
8. O LORD H3068 God H430 of hosts H6635 , who H4310 is a strong H2626 LORD H3050 like unto thee H3644 ? or to thy faithfulness H530 round about H5439 thee?
|
9. ಸಮುದ್ರದ ಅಲ್ಲಕಲ್ಲೋಲಗಳನ್ನು ಅಧೀನದಲ್ಲಿ ಇಟ್ಟುಕೊಂಡಿರುವವನು ನೀನು; ತೆರೆಗಳು ಏಳುವಾಗ ಅವುಗಳನ್ನು ತಡೆಯುವವನು ನೀನು.
|
9. Thou H859 rulest H4910 the raging H1348 of the sea H3220 : when the waves H1530 thereof arise H7721 , thou H859 stillest H7623 them.
|
10. ರಹಬನ್ನು * ರಹಬನ್ನು ಪೌರಾಣಿಕ ಸಮುದ್ರ ದೈತ್ಯ ರಹಬನು ಯೋಬ. 9:13; 26:2; ಯೆಶಾ 51:9 ರಲ್ಲಿ ಕೂಡ ಉಲ್ಲೇಖಿಸಲಾಗಿದೆ; 87:4 ರಲ್ಲಿ ಅದರ ಬಳಕೆಯು ಭಿನ್ನವಾಗಿದೆ, ಇಲ್ಲಿ ರಹಬ ಕಡಲ ಪೌರಾಣಿಕ ಸರ್ಪವನ್ನು ಸೂಚಿಸುತ್ತದೆ. ಛೇದಿಸಿ ಸಾಯಿಸಿದವನು ನೀನು; ನಿನ್ನ ಭುಜಬಲದಿಂದ ಶತ್ರುಗಳನ್ನು ಚದರಿಸಿಬಿಟ್ಟಿದ್ದಿ.
|
10. Thou H859 hast broken H1792 Rahab H7294 in pieces , as one that is slain H2491 ; thou hast scattered H6340 thine enemies H341 with thy strong H5797 arm H2220 .
|
11. ಆಕಾಶವೂ ನಿನ್ನದು, ಭೂಮಿಯೂ ನಿನ್ನದೇ; ಲೋಕವನ್ನೂ ಅದರಲ್ಲಿರುವುದೆಲ್ಲವನ್ನೂ ನಿರ್ಮಿಸಿದವನು ನೀನು.
|
11. The heavens H8064 are thine , the earth H776 also H637 is thine: as for the world H8398 and the fullness H4393 thereof, thou H859 hast founded H3245 them.
|
12. ದಕ್ಷಿಣೋತ್ತರ ದಿಕ್ಕುಗಳನ್ನು ಉಂಟುಮಾಡಿದವನು ನೀನು. ತಾಬೋರ್ † ತಾಬೋರ್ ತಾಬೋರ್ ಗಲಿಲಾಯ ಸರೋವರದ ದಕ್ಷಿಣದ ತುದಿಯಲ್ಲಿರುವ ಪರ್ವತವಾಗಿದೆ, 555 ಮೀಟರ್ ಎತ್ತರವಿದೆ. , ಹೆರ್ಮೋನ್ ‡ ಹೆರ್ಮೋನ್ ಹೆರ್ಮೋನ್ ಪರ್ವತವು ಗಲಿಲಾಯ ಸರೋವರದಿಂದ 75 ಕಿಲೋಮೀಟರ್ (45 ಮೈಲುಗಳು) ಈಶಾನ್ಯ ಭಾಗದಲ್ಲಿದೆ, ಸುಮಾರು 2,750 ಮೀಟರ್ (8,940 ಅಡಿ) ಎತ್ತರವಿದೆ. ಪರ್ವತಗಳು ನಿನ್ನ ನಾಮದಲ್ಲಿ ಆನಂದಧ್ವನಿ ಮಾಡುತ್ತವೆ.
|
12. The north H6828 and the south H3225 thou H859 hast created H1254 them: Tabor H8396 and Hermon H2768 shall rejoice H7442 in thy name H8034 .
|
13. ನಿನ್ನ ಭುಜಬಲವು ಮಹಾಬಲವುಳ್ಳದ್ದು. ನಿನ್ನ ಹಸ್ತವು ಶಕ್ತಿಯುಳ್ಳದ್ದು; ನಿನ್ನ ಬಲಗೈ ಮಹತ್ತುಗಳನ್ನು ನಡೆಸುತ್ತದೆ.
|
13. Thou hast a mighty H1369 arm H2220 : strong H5810 is thy hand H3027 , and high H7311 is thy right hand H3225 .
|
14. ನೀತಿ ಮತ್ತು ನ್ಯಾಯಗಳು ನಿನ್ನ ಸಿಂಹಾಸನದ ಅಸ್ತಿವಾರವು; ನಿನ್ನ ಸಾನ್ನಿಧ್ಯದೂತರು ಪ್ರೀತಿ ಮತ್ತು ಸತ್ಯತೆಗಳೇ.
|
14. Justice H6664 and judgment H4941 are the habitation H4349 of thy throne H3678 : mercy H2617 and truth H571 shall go H6923 before thy face H6440 .
|
15. ಉತ್ಸಾಹಧ್ವನಿಯನ್ನು § ಉತ್ಸಾಹಧ್ವನಿಯನ್ನು ಅಂದರೆ ದೇವರನ್ನು ಆರಾಧಿಸುವಾಗ ಮಾಡುವ ಶಬ್ದ. ತಿಳಿದಿರುವ ಜನರು ಧನ್ಯರು; ಯೆಹೋವನೇ, ಅವರು ನಿನ್ನ ಮುಖಪ್ರಕಾಶದಲ್ಲಿ ಸಂಚರಿಸುತ್ತಾರೆ.
|
15. Blessed H835 is the people H5971 that know H3045 the joyful sound H8643 : they shall walk H1980 , O LORD H3068 , in the light H216 of thy countenance H6440 .
|
16. ಯಾವಾಗಲೂ ನಿನ್ನ ನಾಮದಲ್ಲಿ ಆನಂದಿಸುತ್ತಾರೆ; ನಿನ್ನ ನೀತಿಯಿಂದ ಏಳಿಗೆ ಹೊಂದುತ್ತಾರೆ.
|
16. In thy name H8034 shall they rejoice H1523 all H3605 the day H3117 : and in thy righteousness H6666 shall they be exalted H7311 .
|
17. ಅವರು ಹಿಗ್ಗುವ ಬಲವು ನೀನೇ. ನಿನ್ನ ಕರುಣೆಯ ಕಟಾಕ್ಷದಿಂದ ನಮ್ಮ ಕೊಂಬು * ಕೊಂಬು ಅಂದರೆ ಬಲ. ಎತ್ತಲ್ಪಟ್ಟಿರುವುದು.
|
17. For H3588 thou H859 art the glory H8597 of their strength H5797 : and in thy favor H7522 our horn H7161 shall be exalted H7311 .
|
18. ನಮಗೆ ಗುರಾಣಿಯಂತಿರುವ ನಮ್ಮ ಅರಸನು ಯೆಹೋವನೇ; ಅವನು ಇಸ್ರಾಯೇಲರ ಸದಮಲಸ್ವಾಮಿಯ, ಸ್ವಕೀಯನು.
|
18. For H3588 the LORD H3068 is our defense H4043 ; and the Holy One H6918 of Israel H3478 is our king H4428 .
|
19. ಆ ಕಾಲದಲ್ಲಿ ನೀನು ದರ್ಶನದಲ್ಲಿ ನಿನ್ನ ಭಕ್ತರಿಗೆ ಹೇಳಿದ್ದೇನೆಂದರೆ, “ಒಬ್ಬ ಶೂರನಿಗೆ ರಕ್ಷಾಬಲವನ್ನು ಅನುಗ್ರಹಿಸಿದ್ದೇನೆ; ಪ್ರಜೆಗಳಲ್ಲಿ ಒಬ್ಬ ಯೌವನಸ್ಥನನ್ನು ಆರಿಸಿ ಉನ್ನತಸ್ಥಾನದಲ್ಲಿಟ್ಟಿದ್ದೇನೆ.
|
19. Then H227 thou spakest H1696 in vision H2377 to thy holy one H2623 , and saidst H559 , I have laid H7737 help H5828 upon H5921 one that is mighty H1368 ; I have exalted H7311 one chosen H970 out of the people H4480 H5971 .
|
20. ನನ್ನ ಸೇವಕನಾದ ದಾವೀದನನ್ನು ಕಂಡು, ಪರಿಶುದ್ಧ ತೈಲದಿಂದ ಅವನನ್ನು ಅಭಿಷೇಕಿಸಿದ್ದೇನೆ.
|
20. I have found H4672 David H1732 my servant H5650 ; with my holy H6944 oil H8081 have I anointed H4886 him:
|
21. ನನ್ನ ಹಸ್ತವು ಅವನ ಮೇಲೆ ಸ್ಥಿರವಾಗಿರುವುದು; ನನ್ನ ಭುಜವು ಅವನನ್ನು ಬಲಪಡಿಸುವುದು.
|
21. With H5973 whom H834 my hand H3027 shall be established H3559 : mine arm H2220 also H637 shall strengthen H553 him.
|
22. ವೈರಿಯ ಕುತಂತ್ರವು ಅವನಲ್ಲಿ ಸಾಗದು; ಯಾವ ಕೆಡುಕನೂ ಅವನನ್ನು ಕುಗ್ಗಿಸಲಾರನು.
|
22. The enemy H341 shall not H3808 exact H5378 upon him; nor H3808 the son H1121 of wickedness H5766 afflict H6031 him.
|
23. ಅವನ ವಿರೋಧಿಗಳನ್ನು ಅವನ ಮುಂದೆಯೇ ಜಜ್ಜಿ ಹಾಕುವೆನು; ಅವನ ದ್ವೇಷಿಗಳನ್ನು ಹತಮಾಡಿಬಿಡುವೆನು.
|
23. And I will beat down H3807 his foes H6862 before his face H4480 H6440 , and plague H5062 them that hate H8130 him.
|
24. ಆದರೆ ನನ್ನ ಪ್ರೀತಿ ಮತ್ತು ಸತ್ಯತೆಗಳು ಅವನೊಡನೆ ಇರುವವು; ನನ್ನ ಹೆಸರಿನಿಂದ ಅವನ ಕೊಂಬು ಎತ್ತಲ್ಪಡುವುದು.
|
24. But my faithfulness H530 and my mercy H2617 shall be with H5973 him : and in my name H8034 shall his horn H7161 be exalted H7311 .
|
25. ಸಮುದ್ರದಿಂದ ನದಿಗಳವರೆಗೂ ಅವನ ಹಸ್ತಕ್ಕೆ ಅಧಿಕಾರವನ್ನು ಕೊಡುವೆನು.
|
25. I will set H7760 his hand H3027 also in the sea H3220 , and his right hand H3225 in the rivers H5104 .
|
26. ಅವನು ನನಗೆ, ‘ನನ್ನ ತಂದೆಯೂ, ದೇವರೂ, ಆಶ್ರಯದುರ್ಗವೂ ನೀನೇ’ ಎಂದು ಹೇಳುವನು.
|
26. He H1931 shall cry H7121 unto me, Thou H859 art my father H1 , my God H410 , and the rock H6697 of my salvation H3444 .
|
27. ನಾನಾದರೋ ಅವನನ್ನು ಜ್ಯೇಷ್ಠಪುತ್ರನನ್ನಾಗಿಯೂ, ಭೂರಾಜರಲ್ಲಿ ಉನ್ನತನನ್ನಾಗಿಯೂ ಮಾಡಿಕೊಳ್ಳುವೆನು.
|
27. Also H637 I H589 will make H5414 him my firstborn H1060 , higher H5945 than the kings H4428 of the earth H776 .
|
28. ನನ್ನ ಕೃಪೆಯು ಅವನಲ್ಲಿ ಶಾಶ್ವತವಾಗಿ ಇರುವುದು; ನನ್ನ ಒಡಂಬಡಿಕೆಯು ಅವನಲ್ಲಿ ಸ್ಥಿರವಾಗಿರುವುದು.
|
28. My mercy H2617 will I keep H8104 for him forevermore H5769 , and my covenant H1285 shall stand fast H539 with him.
|
29. ಅವನ ಸಂತಾನವನ್ನು ಯಾವಾಗಲೂ ಉಳಿಸುವೆನು. ಅವನ ಸಿಂಹಾಸನವು ಆಕಾಶವಿರುವವರೆಗೂ ಇರುವುದು.
|
29. His seed H2233 also will I make H7760 to endure forever H5703 , and his throne H3678 as the days H3117 of heaven H8064 .
|
30. ಅವನ ಸಂತಾನದವರು ನನ್ನ ಧರ್ಮಶಾಸ್ತ್ರವನ್ನು ಬಿಟ್ಟು, ನನ್ನ ಆಜ್ಞೆಗಳಲ್ಲಿ ನಡೆಯದೆ,
|
30. If H518 his children H1121 forsake H5800 my law H8451 , and walk H1980 not H3808 in my judgments H4941 ;
|
31. ನನ್ನ ವಿಧಿಗಳನ್ನು ಮೀರಿ, ನನ್ನ ನೇಮಗಳನ್ನು ಪಾಲಿಸದೆ ಹೋದರೆ,
|
31. If H518 they break H2490 my statutes H2708 , and keep H8104 not H3808 my commandments H4687 ;
|
32. ಆಗ ನಾನು ಅವರ ದ್ರೋಹಕ್ಕಾಗಿ ಅವರನ್ನು ಬೆತ್ತದಿಂದ ಹೊಡೆಯುವೆನು; ಅವರ ಅಪರಾಧಕ್ಕಾಗಿ ಪೆಟ್ಟುಕೊಡುವೆನು.
|
32. Then will I visit H6485 their transgression H6588 with the rod H7626 , and their iniquity H5771 with stripes H5061 .
|
33. ಆದರೂ ನಾನು ಅವನಲ್ಲಿಟ್ಟಿರುವ ಕೃಪೆಯನ್ನು ತಪ್ಪಿಸುವುದಿಲ್ಲ; ನನ್ನ ನಂಬಿಗಸ್ತಿಕೆಯಿಂದ ಜಾರುವುದಿಲ್ಲ.
|
33. Nevertheless my lovingkindness H2617 will I not H3808 utterly take H6331 from H4480 H5973 him, nor H3808 suffer my faithfulness to fail H8266 H530 .
|
34. ನನ್ನ ಒಡಂಬಡಿಕೆಯನ್ನು ಭಂಗಪಡಿಸುವುದಿಲ್ಲ; ನನ್ನ ಮಾತನ್ನು ಬದಲಿಸುವುದಿಲ್ಲ.
|
34. My covenant H1285 will I not H3808 break H2490 , nor H3808 alter H8138 the thing that is gone out H4161 of my lips H8193 .
|
35. ನನ್ನ ಪವಿತ್ರತ್ವದಲ್ಲಿ ಆಣೆಯಿಟ್ಟು ಒಂದು ಸಂಗತಿಯನ್ನು ಹೇಳಿದ್ದೇನೆ; ಅದರ ವಿಷಯದಲ್ಲಿ ನಾನು ದಾವೀದನಿಗೆ ಸುಳ್ಳುಗಾರನಾಗುವುದಿಲ್ಲ.
|
35. Once H259 have I sworn H7650 by my holiness H6944 that I will not H518 lie H3576 unto David H1732 .
|
36. ಅದೇನೆಂದರೆ, ಅವನ ಸಂತತಿಯು ಶಾಶ್ವತವಾಗಿ ಇರುವುದು; ಅವನ ಸಿಂಹಾಸನವು ಸೂರ್ಯನಂತೆ ನನ್ನ ಎದುರಿನಲ್ಲಿದ್ದು,
|
36. His seed H2233 shall endure H1961 forever H5769 , and his throne H3678 as the sun H8121 before H5048 me.
|
37. ಚಂದ್ರನಂತೆ ನಿತ್ಯಕ್ಕೂ ಸ್ಥಿರವಾಗಿರುವುದು. ಪರಲೋಕದ ಸಾಕ್ಷಿ ಸತ್ಯವೇ ಸರಿ.” ಸೆಲಾ.
|
37. It shall be established H3559 forever H5769 as the moon H3394 , and as a faithful H539 witness H5707 in heaven H7834 . Selah H5542 .
|
38. ಹೀಗೆ ಹೇಳಿದ ನೀನು ನಿನ್ನ ಅಭಿಷಿಕ್ತನ ಮೇಲೆ ಕೋಪಗೊಂಡವನಾಗಿ, ಅವನನ್ನು ಅಸಹ್ಯಿಸಿ ತಳ್ಳಿಬಿಟ್ಟಿದ್ದೀ.
|
38. But thou H859 hast cast off H2186 and abhorred H3988 , thou hast been wroth H5674 with H5973 thine anointed H4899 .
|
39. ನೀನು ನಿನ್ನ ಸೇವಕನ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಭಂಗಪಡಿಸಿ, ಅವನ ಕಿರೀಟವನ್ನು ನೆಲಕ್ಕೆ ಹಾಕಿ ಅಪವಿತ್ರಮಾಡಿದ್ದೀ.
|
39. Thou hast made void H5010 the covenant H1285 of thy servant H5650 : thou hast profaned H2490 his crown H5145 by casting it to the ground H776 .
|
40. ಅವನ ದೇಶದ ಮೇರೆಗಳನ್ನು ಕೆಡವಿ, ಕೋಟೆಗಳನ್ನು ಹಾಳುಮಾಡಿದ್ದೀ.
|
40. Thou hast broken down H6555 all H3605 his hedges H1448 ; thou hast brought H7760 his strongholds H4013 to ruin H4288 .
|
41. ದಾರಿಗರೆಲ್ಲರೂ ಅವನನ್ನು ಸುಲಿಗೆ ಮಾಡುತ್ತಾರೆ; ಅವನು ನೆರೆಹೊರೆಯವರ ಪರಿಹಾಸ್ಯಕ್ಕೆ ಗುರಿಯಾಗಿದ್ದಾನೆ.
|
41. All H3605 that pass by H5674 the way H1870 spoil H8155 him : he is H1961 a reproach H2781 to his neighbors H7934 .
|
42. ಅವನ ವಿರೋಧಿಗಳ ಹಸ್ತವನ್ನು ಉನ್ನತಪಡಿಸಿದ್ದೀ; ಅವನ ವೈರಿಗಳಿಗೆಲ್ಲಾ ಆನಂದವಾಗುವಂತೆ ಮಾಡಿದ್ದೀ.
|
42. Thou hast set up H7311 the right hand H3225 of his adversaries H6862 ; thou hast made all H3605 his enemies H341 to rejoice H8055 .
|
43. ಇದಲ್ಲದೆ ಅವನ ಕತ್ತಿಯನ್ನು ತಿರುಗಿಸಿಬಿಟ್ಟಿದ್ದೀ; ಅವನನ್ನು ಯುದ್ಧದಲ್ಲಿ ನಿಲ್ಲದಂತೆ ಮಾಡಿದ್ದೀ.
|
43. Thou hast also H637 turned H7725 the edge H6697 of his sword H2719 , and hast not H3808 made him to stand H6965 in the battle H4421 .
|
44. ಅವನ ವೈಭವವನ್ನು † ವೈಭವವನ್ನು ಅಂದರೆ ರಾಜದಂಡ. ತಡೆದುಬಿಟ್ಟಿದ್ದೀ; ಅವನ ಸಿಂಹಾಸನವನ್ನು ನೆಲಕ್ಕುರುಳಿಸಿದ್ದೀ.
|
44. Thou hast made his glory H4480 H2892 to cease H7673 , and cast H4048 his throne H3678 down to the ground H776 .
|
45. ಅವನ ಯೌವನದ ದಿನಗಳನ್ನು ಬೇಗ ಮುಗಿಸಿ, ನಾಚಿಕೆಯು ಅವನನ್ನು ಕವಿಯುವಂತೆ ಮಾಡಿದ್ದಿ. ಸೆಲಾ
|
45. The days H3117 of his youth H5934 hast thou shortened H7114 : thou hast covered H5844 H5921 him with shame H955 . Selah H5542 .
|
46. ಯೆಹೋವನೇ, ಇನ್ನೆಷ್ಟರವರೆಗೆ ಮರೆಯಾಗಿರುವಿ? ನಿನ್ನ ಕೋಪಾಗ್ನಿಯು ನಮ್ಮ ಮೇಲೆ ಸದಾ ಉರಿಯುತ್ತಿರಬೇಕೋ?
|
46. How long H5704 H4100 , LORD H3068 ? wilt thou hide thyself H5641 forever H5331 ? shall thy wrath H2534 burn H1197 like H3644 fire H784 ?
|
47. ನನ್ನ ಆಯುಷ್ಯವು ಎಷ್ಟು ಅಲ್ಪವೆಂದೂ, ಎಂಥಾ ವ್ಯರ್ಥ ಜೀವಿತಕ್ಕಾಗಿ ಮನುಷ್ಯರನ್ನು ನಿರ್ಮಿಸಿದ್ದಿ ಎಂದೂ ಜ್ಞಾಪಿಸಿಕೋ.
|
47. Remember H2142 how H4100 short H2465 my H589 time is: wherefore H5921 H4100 hast thou made H1254 all H3605 men H1121 H120 in vain H7723 ?
|
48. ತಮ್ಮನ್ನು ಪಾತಾಳಕ್ಕೆ ತಪ್ಪಿಸಿಕೊಂಡು, ಮರಣಹೊಂದದೆ ಚಿರಂಜೀವಿಯಾಗಿರುವವರು ಯಾರು? ಸೆಲಾ
|
48. What H4310 man H1397 is he that liveth H2421 , and shall not H3808 see H7200 death H4194 ? shall he deliver H4422 his soul H5315 from the hand H4480 H3027 of the grave H7585 ? Selah H5542 .
|
49. ಕರ್ತನೇ, ನೀನು ನಿನ್ನ ಸತ್ಯತೆಯಲ್ಲಿ ಆಣೆಯಿಟ್ಟು, ದಾವೀದನಿಗೆ ವಾಗ್ದಾನಮಾಡಿ ನಡೆಸುತ್ತಿದ್ದ ಹಿಂದಿನ ಕೃಪಾಕಾರ್ಯಗಳು ಎಲ್ಲಿ?
|
49. Lord H136 , where H346 are thy former H7223 lovingkindnesses H2617 , which thou swarest H7650 unto David H1732 in thy truth H530 ?
|
50. ಯೆಹೋವನೇ, ನಿನ್ನ ವೈರಿಗಳು ನಿಂದಿಸುತ್ತಾರೆ; ನಿನ್ನ ಅಭಿಷಿಕ್ತನನ್ನು ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡುತ್ತಾರೆ.
|
50. Remember H2142 , Lord H136 , the reproach H2781 of thy servants H5650 ; how I do bear H5375 in my bosom H2436 the reproach of all H3605 the mighty H7227 people H5971 ;
|
51. ಕರ್ತನೇ, ನಿನ್ನ ಸೇವಕರಿಗಾಗುವ ಅಪವಾದವನ್ನೂ, ನಾನು ಎಲ್ಲಾ ಜನಾಂಗಗಳ ನಿಂದಾಭಾರವನ್ನು ಉಡಿಲಲ್ಲಿ ಕಟ್ಟಿರುವುದನ್ನೂ ಜ್ಞಾಪಿಸಿಕೋ.
|
51. Wherewith H834 thine enemies H341 have reproached H2778 , O LORD H3068 ; wherewith H834 they have reproached H2778 the footsteps H6119 of thine anointed H4899 .
|
52. ಯೆಹೋವನಿಗೆ ಸದಾಕಾಲವೂ ಕೊಂಡಾಟವಾಗಲಿ. ಆಮೆನ್, ಆಮೆನ್. PE
|
52. Blessed H1288 be the LORD H3068 forevermore H5769 . Amen H543 , and Amen H543 .
|