|
|
1. {ಹೋಶೇಯನು ಇಸ್ರಾಯೇಲರಿಗೆ ನೀಡಿದ ಎಚ್ಚರಿಕೆ} PS ಇಸ್ರಾಯೇಲ್ ಸೊಂಪಾಗಿ ಬೆಳೆದ ದ್ರಾಕ್ಷಾಲತೆಯಾಗಿದೆ; ಹಣ್ಣುಬಿಟ್ಟುಕೊಂಡಿದೆ; ಅದರ ಹಣ್ಣುಗಳು ಹೆಚ್ಚಿದಷ್ಟೂ ಯಜ್ಞವೇದಿಗಳನ್ನು ಹೆಚ್ಚಿಸಿಕೊಂಡಿದೆ; ಅದರ ಭೂಮಿಯು ಎಷ್ಟು ಒಳ್ಳೆಯದೋ, ಅಷ್ಟು ಒಳ್ಳೆಯ ವಿಗ್ರಹ ಸ್ತಂಭಗಳನ್ನು ನಿರ್ಮಾಣ ಮಾಡಿಕೊಂಡಿದೆ.
|
1. Israel H3478 is an empty H1238 vine H1612 , he bringeth forth H7737 fruit H6529 unto himself : according to the multitude H7230 of his fruit H6529 he hath increased H7235 the altars H4196 ; according to the goodness H2896 of his land H776 they have made goodly H3190 images H4676 .
|
2. ಇಸ್ರಾಯೇಲರ ಮನಸ್ಸು ನುಣುಚಿಕೊಳ್ಳುತ್ತದೆ; ಈಗ ದಂಡನೆಗೆ ಈಡಾಗಿದ್ದಾರೆ. ಯೆಹೋವನೇ ಅವರ ಯಜ್ಞವೇದಿಗಳನ್ನು ಮುರಿದುಬಿಡುವನು. ಅವರ ವಿಗ್ರಹ ಸ್ತಂಭಗಳನ್ನು ಹಾಳುಮಾಡುವನು.
|
2. Their heart H3820 is divided H2505 ; now H6258 shall they be found faulty H816 : he H1931 shall break down H6202 their altars H4196 , he shall spoil H7703 their images H4676 .
|
3. “ನಮಗೆ ರಾಜನೇ ಇಲ್ಲ; ನಾವು ಯೆಹೋವನಲ್ಲಿ ಭಯಭಕ್ತಿಯಿಟ್ಟವರಲ್ಲ. ರಾಜನಾದರೋ ನಮಗಾಗಿ ಏನು ಮಾಡಿಯಾನು?” ಎಂದು ಈಗ ಅವರು ಅಂದುಕೊಳ್ಳಬೇಕಾಯಿತು.
|
3. For H3588 now H6258 they shall say H559 , We have no H369 king H4428 , because H3588 we feared H3372 not H3808 H853 the LORD H3068 ; what H4100 then should a king H4428 do H6213 to us?
|
4. ಹರಟೆಹರಟುತ್ತಾರೆ, ಸುಳ್ಳಾಣೆಯಿಡುತ್ತಾರೆ, ಸಂಧಾನ ಮಾಡಿಕೊಳ್ಳುತ್ತಾರೆ; ಅಲ್ಲಿನ ನ್ಯಾಯವು ನೇಗಿಲಗೆರೆಗಳಲ್ಲಿ ಹುಟ್ಟುವ ವಿಷದ ಕಳೆಗಳಂತಿದೆ.
|
4. They have spoken H1696 words H1697 , swearing H422 falsely H7723 in making H3772 a covenant H1285 : thus judgment H4941 springeth up H6524 as hemlock H7219 in H5921 the furrows H8525 of the field H7704 .
|
5. ಸಮಾರ್ಯದ ನಿವಾಸಿಗಳು ಬೇತಾವೆನಿನ ಬಸವನ ವಿಷಯದಲ್ಲಿ ಭಯಪಡುವರು. ಅದರ ಭಕ್ತ ಜನರು ಅದಕ್ಕಾಗಿ ಎದೆಬಡಿದುಕೊಳ್ಳುವರು; ಅದರ ಮಹಿಮೆಯು ನಂದಿಹೋಯಿತು ಎಂದು ಪೂಜಾರಿಗಳು ಅದಕ್ಕಾಗಿ ನಡುಗುವರು.
|
5. The inhabitants H7934 of Samaria H8111 shall fear H1481 because of the calves H5697 of Beth H1007 -aven: for H3588 the people H5971 thereof shall mourn H56 over H5921 it , and the priests H3649 thereof that rejoiced H1523 on H5921 it, for H5921 the glory H3519 thereof, because H3588 it is departed H1540 from H4480 it.
|
6. ಅದು ಜಗಳಗಂಟ ಮಹಾರಾಜನಿಗೆ ಕಾಣಿಕೆಯಾಗಿ ಅಶ್ಶೂರಕ್ಕೆ ಒಯ್ಯಲ್ಪಡುವುದು. ಎಫ್ರಾಯೀಮಿಗೆ ಅವಮಾನವಾಗುವುದು, ಇಸ್ರಾಯೇಲ್ ತಾನು ಸಂಕಲ್ಪಿಸಿಕೊಂಡ ವಿಷಯಕ್ಕಾಗಿ * ಸಂಕಲ್ಪಿಸಿಕೊಂಡ ವಿಷಯಕ್ಕಾಗಿ ಮಾಡಿಕೊಂಡ ಮರದ ವಿಗ್ರಹಗಳಿಗಾಗಿ. ನಾಚಿಕೆಪಡುವುದು.
|
6. It shall be also H1571 carried H2986 unto Assyria H804 for a present H4503 to king H4428 Jareb H3377 : Ephraim H669 shall receive H3947 shame H1317 , and Israel H3478 shall be ashamed H954 of his own counsel H4480 H6098 .
|
7. ಸಮಾರ್ಯದ ರಾಜನು ಹಾಳಾಗಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ಮರದ ಚಕ್ಕೆಗೆ ಸಮಾನನಾಗಿದ್ದಾನೆ.
|
7. As for Samaria H8111 , her king H4428 is cut off H1820 as the foam H7110 upon H5921 H6440 the water H4325 .
|
8. ಇಸ್ರಾಯೇಲಿಗೆ ಪಾಪಾಸ್ಪದವಾದ ಆವೆನಿನ ಪೂಜಾಸ್ಥಾನಗಳು ನಾಶವಾಗುವವು. ಮುಳ್ಳುಗಿಡಗಳೂ, ಕಳೆಗಳೂ ಅಲ್ಲಿನ ಯಜ್ಞವೇದಿಗಳ ಮೇಲೆ ಹುಟ್ಟುವವು; ಅಲ್ಲಿನ ಜನರು, “ಬೆಟ್ಟಗಳೇ, ನಮ್ಮನ್ನು ಮುಚ್ಚಿಕೊಳ್ಳಿರಿ, ಗುಡ್ಡಗಳೇ, ನಮ್ಮ ಮೇಲೆ ಬೀಳಿರಿ” ಎಂದು ಕೂಗಿಕೊಳ್ಳುವರು.
|
8. The high places H1116 also of Aven H206 , the sin H2403 of Israel H3478 , shall be destroyed H8045 : the thorn H6975 and the thistle H1863 shall come up H5927 on H5921 their altars H4196 ; and they shall say H559 to the mountains H2022 , Cover H3680 us ; and to the hills H1389 , Fall H5307 on H5921 us.
|
9. ಇಸ್ರಾಯೇಲೇ, ಗಿಬ್ಯದಲ್ಲಿ ದುರಾಚಾರವು ನಡೆದಂದಿನಿಂದ ನೀನು ಪಾಪಮಾಡುತ್ತಾ ಬಂದಿದ್ದಿ; ಆಹಾ, ನಿನ್ನ ಜನರು ಅಲ್ಲಿ ನಿಂತಿದ್ದಾರೆ, ದುರಾಚಾರಿಗಳಿಗೆ ವಿರುದ್ಧವಾದ ಗಿಬ್ಯದಲ್ಲಿ ನಡೆದ ಯುದ್ಧಕ್ಕೆ ಅವರು ತುತ್ತಾಗುವುದಿಲ್ಲವೋ?.
|
9. O Israel H3478 , thou hast sinned H2398 from the days H4480 H3117 of Gibeah H1390 : there H8033 they stood H5975 : the battle H4421 in Gibeah H1390 against H5921 the children H1121 of iniquity H5932 did not H3808 overtake H5381 them.
|
10. ನನಗಿಷ್ಟವಾದಾಗ ನಾನು ಅವರನ್ನು ದಂಡಿಸುವೆನು; ಅವರ ಎರಡು ಅಪರಾಧಗಳ ದಂಡನೆಗೋಸ್ಕರ ಜನಾಂಗಗಳು ಅವರಿಗೆ ವಿರುದ್ಧವಾಗಿ ಒಟ್ಟುಗೂಡುವವು.
|
10. It is in my desire H185 that I should chastise H3256 them ; and the people H5971 shall be gathered H622 against H5921 them , when they shall bind H631 themselves in their two H8147 furrows H5869 .
|
11. ಎಫ್ರಾಯೀಮು ಹತೋಟಿಗೆ ಬಂದು ತೆನೆಹುಲ್ಲನ್ನು ತುಳಿಯುತ್ತಿರುವುದರಲ್ಲಿಯೇ ಇಷ್ಟಪಡುವ ಕಡಸಾಗಿದೆ; ಈಗಲಾದರೋ ಅದರ ಅಂದವಾದ ಹೆಗಲಿನ ಮೇಲೆ ಕೈಹಾಕಿದ್ದೇನೆ, ಎಫ್ರಾಯೀಮನ್ನು ನೊಗಕ್ಕೆ ಹೂಡುವೆನು, ಯೆಹೂದವು ಉಳಬೇಕು, ಯಾಕೋಬು ಕುಂಟೆ ಎಳೆಯಬೇಕು.
|
11. And Ephraim H669 is as a heifer H5697 that is taught H3925 , and loveth H157 to tread out H1758 the corn ; but I H589 passed over H5674 upon H5921 her fair H2898 neck H6677 : I will make Ephraim H669 to ride H7392 ; Judah H3063 shall plow H2790 , and Jacob H3290 shall break his clods H7702 .
|
12. ನೀತಿಯ ಬೀಜವನ್ನು ಬಿತ್ತಿರಿ, ಪ್ರೀತಿಯ ಫಲವನ್ನು ಕೊಯ್ಯಿರಿ, ಹಾಳಾದ ನಿಮ್ಮ ಭೂಮಿಯನ್ನು ಫಲವತ್ತಾಗಿಸಿ; ಯೆಹೋವನು ಬಂದು ನಮ್ಮ ಮೇಲೆ ನೀತಿಯನ್ನು ವರ್ಷಿಸಲೆಂದು ಆತನಿಗೆ ಶರಣುಹೋಗುವ ಸಮಯವು ಒದಗಿದೆ.
|
12. Sow H2232 to yourselves in righteousness H6666 , reap H7114 in H6310 mercy H2617 ; break up H5214 your fallow ground H5215 : for it is time H6256 to seek H1875 H853 the LORD H3068 , till H5704 he come H935 and rain H3384 righteousness H6664 upon you.
|
13. ನೀವು ಮಾಡಿದ ವ್ಯವಸಾಯವು ದುಷ್ಟತನ, ನಿಮಗಾದ ಬೆಳೆಯು ಅನ್ಯಾಯ ನೀವು ನಿಮ್ಮ ಕಟ್ಟುಪಾಡಿನಲ್ಲಿಯೂ, ನಿಮ್ಮ ಶೂರರ ರಥಗಳಲ್ಲಿಯೂ ಭರವಸವಿಟ್ಟಿದ್ದರಿಂದ ಮೋಸದ ಫಲವನ್ನು ಅನುಭವಿಸಿದ್ದೀರಿ.
|
13. Ye have plowed H2790 wickedness H7562 , ye have reaped H7114 iniquity H5766 ; ye have eaten H398 the fruit H6529 of lies H3585 : because H3588 thou didst trust H982 in thy way H1870 , in the multitude H7230 of thy mighty men H1368 .
|
14. ಹೀಗಿರಲು ನಿಮ್ಮ ಕುಲಗಳವರಿಗೆ ವಿರುದ್ಧವಾಗಿ ಯುದ್ಧಘೋಷವು ಮೊಳಗುವುದು. ಕಾಳಗದ ದಿನದಲ್ಲಿ ಶಲ್ಮಾನನು ತಾಯಿ ಮತ್ತು ಮಕ್ಕಳನ್ನು ಒಟ್ಟಿಗೆ ಬಂಡೆಗೆ ಅಪ್ಪಳಿಸಲ್ಪಡುವುದು. ಬೇತ್ ಅರ್ಬೇಲ್ ಪಟ್ಟಣವನ್ನು ಸೂರೆಮಾಡಿದಂತೆ ನಿಮ್ಮ ಎಲ್ಲಾ ಕೋಟೆಗಳು ಸೂರೆಮಾಡಲ್ಪಡುವವು.
|
14. Therefore shall a tumult H7588 arise H6965 among thy people H5971 , and all H3605 thy fortresses H4013 shall be spoiled H7703 , as Shalman H8020 spoiled H7701 Beth H1009 -arbel in the day H3117 of battle H4421 : the mother H517 was dashed in pieces H7376 upon H5921 her children H1121 .
|
15. ನಿಮ್ಮ ದುಷ್ಟತನವು ಬಹಳವಾಗಿರುವುದರಿಂದ ಬೇತೇಲು ಇಂಥ ದುರ್ಗತಿಯನ್ನು ನಿಮಗೆ ತರುವುದು; ಬೆಳಗಾಗುವುದರೊಳಗೆ ಇಸ್ರಾಯೇಲಿನ ರಾಜನು ತೀರಾ ಹಾಳಾಗುವನು. PE
|
15. So H3602 shall Bethel H1008 do H6213 unto you because H4480 H6440 of your great wickedness H7451 H7451 : in a morning H7837 shall the king H4428 of Israel H3478 utterly be cut off H1820 H1820 .
|