|
|
1. {ಎಲೀಫಜನು ಯೋಬನಿಗೆ ನೀಡಿದ ಮೂರನೆಯ ಪ್ರತ್ಯುತ್ತರ} PS ಆ ಮೇಲೆ ತೇಮಾನ್ಯನಾದ ಎಲೀಫಜನು ಮತ್ತೆ ಹೀಗೆಂದನು,
|
1. Then Eliphaz H464 the Temanite H8489 answered H6030 and said H559 ,
|
2. “ಮನುಷ್ಯ ಮಾತ್ರದವನಿಂದ ದೇವರಿಗೆ ಏನು ಪ್ರಯೋಜನವಾದೀತು? ಒಬ್ಬನು ವಿವೇಕಿಯಾಗಿ ನಡೆದುಕೊಂಡರೆ ಅವನಿಗೆ ಪ್ರಯೋಜನವಷ್ಟೆ.
|
2. Can a man H1397 be profitable H5532 unto God H410 , as he that H3588 is wise H7919 may be profitable H5532 unto H5921 himself?
|
3. ನೀನು ನೀತಿವಂತನಾಗಿರುವುದು ಸರ್ವಶಕ್ತನಾದ ದೇವರಿಗೆ ಸುಖವೋ? ನಿನ್ನ ನಡತೆಯನ್ನು ಸರಿಪಡಿಸಿಕೊಂಡರೆ ಆತನಿಗೇನು ಲಾಭ?
|
3. Is it any pleasure H2656 to the Almighty H7706 , that H3588 thou art righteous H6663 ? or H518 is it gain H1215 to him , that H3588 thou makest thy ways perfect H8552 H1870 ?
|
4. ನಿನ್ನ ಭಯಭಕ್ತಿಗಾಗಿಯೇ ಆತನು ನಿನ್ನನ್ನು ಶಿಕ್ಷಿಸಿ ನ್ಯಾಯತೀರ್ಪಿಗೆ ಗುರಿಮಾಡುತ್ತಾನೋ?
|
4. Will he reprove H3198 thee for fear H4480 H3374 of thee? will he enter H935 with H5973 thee into judgment H4941 ?
|
5. ನಿನ್ನ ಕೆಟ್ಟತನವು ಬಹಳವಲ್ಲವೇ? ನಿನ್ನ ಪಾಪಗಳಿಗೆ ಮಿತಿಯೇ ಇಲ್ಲವಲ್ಲಾ?
|
5. Is not H3808 thy wickedness H7451 great H7227 ? and thine iniquities H5771 infinite H369 H7093 ?
|
6. ನೋಡು, ನಿನ್ನ ಸಹೋದರನಿಂದ ಸುಮ್ಮನೆ ಒತ್ತೆಯಾಳುಗಳನ್ನು ತೆಗೆದುಕೊಂಡಿದ್ದಿ, ಬೆತ್ತಲೆಯವರ ಬಟ್ಟೆಯನ್ನೂ ಸೆಳಕೊಂಡಿದ್ದಿ.
|
6. For H3588 thou hast taken a pledge H2254 from thy brother H251 for naught H2600 , and stripped H6584 the naked H6174 of their clothing H899 .
|
7. ಬಳಲಿದವನಿಗೆ ನೀರು ಕೊಡದೆ, ಹಸಿದವನಿಗೆ ಅನ್ನಕೊಡದೆ ಹೋಗಿದ್ದಿ.
|
7. Thou hast not H3808 given water H4325 to the weary H5889 to drink H8248 , and thou hast withheld H4513 bread H3899 from the hungry H4480 H7457 .
|
8. ಬಲಿಷ್ಠನಾದರೆ ದೇಶವೇ ಅವನದು, ಅಲ್ಲಿ ಸನ್ಮಾನ ಯೋಗ್ಯನಾಗಿ ವಾಸಿಸತಕ್ಕವನು ಅವನೇ.
|
8. But as for the mighty H2220 man H376 , he had the earth H776 ; and the honorable man H5375 H6440 dwelt H3427 in it.
|
9. ನೀನು ವಿಧವೆಯರನ್ನು ಬರಿಗೈಯಾಗಿ ಕಳುಹಿಸಬಿಟ್ಟು, ಅನಾಥರ ಕೈಗಳನ್ನು ಮುರಿದಿದ್ದಿ.
|
9. Thou hast sent widows away H7971 H490 empty H7387 , and the arms H2220 of the fatherless H3490 have been broken H1792 .
|
10. ಆದಕಾರಣ ಬೋನುಗಳು ನಿನ್ನ ಸುತ್ತಲು ಕಾದಿವೆ, ಫಕ್ಕನೆ ಉಂಟಾದ ಭಯವು ನಿನ್ನನ್ನು ತಲ್ಲಣಗೊಳಿಸುತ್ತದೆ.
|
10. Therefore H5921 H3651 snares H6341 are round about H5439 thee , and sudden H6597 fear H6343 troubleth H926 thee;
|
11. ಇದಲ್ಲದೆ ದಾರಿಕಾಣದಂತೆ ಕತ್ತಲೂ, ಮುಸುಕಿ ಜಲಪ್ರವಾಹವೂ ನಿನ್ನನ್ನು ಆವರಿಸುತ್ತವೆ.
|
11. Or H176 darkness H2822 , that thou canst not H3808 see H7200 ; and abundance H8229 of waters H4325 cover H3680 thee.
|
12. ದೇವರು ಉನ್ನತ ಆಕಾಶದಲ್ಲಿಲ್ಲವೋ? ನಕ್ಷತ್ರಮಂಡಲದ ತುದಿಯು ಎಷ್ಟೋ ಎತ್ತರ, ನೋಡು!
|
12. Is not H3808 God H433 in the height H1363 of heaven H8064 ? and behold H7200 the height H7218 of the stars H3556 , how H3588 high they are H7311 !
|
13. ನೀನಾದರೋ, ‘ದೇವರಿಗೆ ಏನು ಗೊತ್ತು? ಕಾರ್ಗತ್ತಲಿನ ಆಚೆಯಿಂದ ನ್ಯಾಯತೀರಿಸಬಲ್ಲನೋ?
|
13. And thou sayest H559 , How H4100 doth God H410 know H3045 ? can he judge H8199 through H1157 the dark cloud H6205 ?
|
14. ದಟ್ಟವಾದ ಮೋಡಗಳು ಆತನಿಗೆ ಪರದೆಯ ಹಾಗಿರುವುದರಿಂದ ನೋಡಲಾರನು; ಆಕಾಶಮಂಡಲದ ಮೇಲೆ ನಡೆದಾಡುತ್ತಾನೆ’ ಎಂದು ಹೇಳಿಕೊಂಡೆಯಲ್ಲವೇ.
|
14. Thick clouds H5645 are a covering H5643 to him , that he seeth H7200 not H3808 ; and he walketh H1980 in the circuit H2329 of heaven H8064 .
|
15. ಕೆಟ್ಟವರು ಮೊದಲಿನಿಂದಲೂ, ನಡೆದ ದಾರಿಯನ್ನು ನೀನು ಹಿಡಿಯುವಿಯಾ?
|
15. Hast thou marked H8104 the old H5769 way H734 which H834 wicked H205 men H4962 have trodden H1869 ?
|
16. ಅಕಾಲ ಮರಣವು ಅವರನ್ನು ಅಪಹರಿಸಿತು, ಅವರಿಗೆ ಆಧಾರವಾಗಿದ್ದ ನೆಲವು ನೀರಾಗಿ ಹರಿಯಿತು.
|
16. Which H834 were cut down H7059 out of H3808 time H6256 , whose foundation H3247 was overflown H3332 with a flood H5104 :
|
17. ಅವರು ಆತನನ್ನು ಕುರಿತು, ‘ನಮ್ಮಿಂದ ತೊಲಗಿ ಹೋಗು, ಸರ್ವಶಕ್ತನಾದ ದೇವರು ನಮಗೇನು ಮಾಡಾನು’ ಎಂದು ಹೇಳಿಕೊಳ್ಳುತ್ತಿದ್ದರು.
|
17. Which said H559 unto God H410 , Depart H5493 from H4480 us : and what H4100 can the Almighty H7706 do H6466 for them?
|
18. ಆದರೂ ದೇವರು ಅವರ ಮನೆಗಳನ್ನು ಸಂಪತ್ತಿನಿಂದ ತುಂಬಿಸಿದನು. ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ!
|
18. Yet he H1931 filled H4390 their houses H1004 with good H2896 things : but the counsel H6098 of the wicked H7563 is far H7368 from H4480 me.
|
19. ನೀತಿವಂತರು ಇದನ್ನು ನೋಡಿ ಹಿಗ್ಗುವರು, ನಮ್ಮ ವಿರುದ್ಧವಾಗಿ ಎದ್ದವರು ಹಾಳಾಗಿಯೇ ಹೋದರು.
|
19. The righteous H6662 see H7200 it , and are glad H8055 : and the innocent H5355 laugh them to scorn H3932 .
|
20. ‘ಅವರ ಉಳಿದ ಸೊತ್ತನ್ನು ಬೆಂಕಿಯು ನಾಶಮಾಡಿತು’ ಎಂದು, ನಿರ್ದೋಷಿಗಳು ದುಷ್ಟರನ್ನು ಅಣಕಿಸುವರು.
|
20. Whereas H518 our substance H7009 is not H3808 cut down H3582 , but the remnant H3499 of them the fire H784 consumeth H398 .
|
21. ದೇವರ ಚಿತ್ತಕ್ಕೆ ಒಳಪಟ್ಟು ಸಮಾಧಾನ ಹೊಂದು, ಇದರಿಂದ ನಿನಗೆ ಶುಭವಾಗುವುದು.
|
21. Acquaint H5532 now H4994 thyself with H5973 him , and be at peace H7999 : thereby good H2896 shall come H935 unto thee.
|
22. ಆತನ ಬಾಯಿಂದಲೇ ಬೋಧನೆಯನ್ನು ಸ್ವೀಕರಿಸಿ, ಆತನ ಮಾತುಗಳನ್ನು ಹೃದಯದಲ್ಲಿ ಇಟ್ಟುಕೋ.
|
22. Receive H3947 , I pray thee H4994 , the law H8451 from his mouth H4480 H6310 , and lay up H7760 his words H561 in thine heart H3824 .
|
23. ನೀನು ಸರ್ವಶಕ್ತನಾದ ದೇವರ ಕಡೆಗೆ ತಿರುಗಿಕೊಂಡು, ನಿನ್ನ ಗುಡಾರಗಳಿಂದ ಅನ್ಯಾಯವನ್ನು ದೂರಮಾಡಿದರೆ ಉದ್ಧಾರವಾಗುವಿ.
|
23. If H518 thou return H7725 to H5704 the Almighty H7706 , thou shalt be built up H1129 , thou shalt put away iniquity H5766 far H7368 from thy tabernacles H4480 H168 .
|
24. ನಿನ್ನ ಚಿನ್ನವನ್ನು ಧೂಳಿನಲ್ಲಿ ಹಾಕು, ಓಫೀರ್ ದೇಶದ ಅಪರಂಜಿಯನ್ನು ಹೊಳೆಗಳ ಬಂಡೆಗಳಿಗೆ ಎಸೆದುಬಿಡು.
|
24. Then shalt thou lay up H7896 gold H1220 as H5921 dust H6083 , and the gold of Ophir H211 as the stones H6697 of the brooks H5158 .
|
25. ಸರ್ವಶಕ್ತನಾದ ದೇವರು ನಿನಗೆ ಚಿನ್ನವಾಗಿಯೂ, ಬೆಳ್ಳಿಯ ರಾಶಿಗಳಾಗಿಯೂ ಇರುವನು.
|
25. Yea , the Almighty H7706 shall be H1961 thy defense H1220 , and thou shalt have plenty H8443 of silver H3701 .
|
26. ಆಗ ನೀನು ಸರ್ವಶಕ್ತನಾದ ದೇವರಲ್ಲಿ ಆನಂದಪಟ್ಟು, ದೇವರ ಅಭಿಮುಖನಾಗಿರುವೆ.
|
26. For H3588 then H227 shalt thou have thy delight H6026 in H5921 the Almighty H7706 , and shalt lift up H5375 thy face H6440 unto H413 God H433 .
|
27. ನೀನು ಪ್ರಾರ್ಥಿಸುವಿ, ಆತನು ಲಾಲಿಸುವನು, ಆತನಿಗೆ ಹರಕೆಗಳನ್ನು ಒಪ್ಪಿಸುವಿ.
|
27. Thou shalt make thy prayer H6279 unto H413 him , and he shall hear H8085 thee , and thou shalt pay H7999 thy vows H5088 .
|
28. ಯಾವುದನ್ನು ಸಂಕಲ್ಪಿಸಿಕೊಳ್ಳುವಿಯೋ ಅದು ನಿನಗೆ ನೆರವೇರುವುದು, ಬೆಳಕು ನಿನ್ನ ಮಾರ್ಗಗಳಲ್ಲಿ ಪ್ರಕಾಶಿಸುವುದು.
|
28. Thou shalt also decree H1504 a thing H562 , and it shall be established H6965 unto thee : and the light H216 shall shine H5050 upon H5921 thy ways H1870 .
|
29. ಜನರು ನಿನ್ನನ್ನು ಕೆಳಕ್ಕೆ ಬೀಳಿಸುವಾಗ, ಮೇಲಕ್ಕೆ ಎತ್ತಲ್ಪಡುವೆನು ಅಂದುಕೊಳ್ಳುವಿ, ಆಗ ದೀನದೃಷ್ಟಿಯುಳ್ಳ ನಿನ್ನನ್ನು ಆತನು ರಕ್ಷಿಸುವನು.
|
29. When H3588 men are cast down H8213 , then thou shalt say H559 , There is lifting up H1466 ; and he shall save H3467 the humble person H7807 H5869 .
|
30. ನಿರ್ದೋಷಿಯನ್ನು ಆತನು ತಪ್ಪಿಸುವನು, ಹೌದು, ಆತನು ಇಂಥವನನ್ನು ತಪ್ಪಿಸುವುದಕ್ಕೆ ನಿನ್ನ ಕೈಗಳ ಪರಿಶುದ್ಧತೆಯೇ ಕಾರಣವಾಗಿರುವುದು.” PE
|
30. He shall deliver H4422 the island H336 of the innocent H5355 : and it is delivered H4422 by the pureness H1252 of thine hands H3709 .
|